ಕ್ವಿಕರ್​​​​​​​ ಯಶಸ್ಸಿನ ಕಥೆ...

ಟೀಮ್​​ ವೈ.ಎಸ್​​.

ಕ್ವಿಕರ್​​​​​​​ ಯಶಸ್ಸಿನ ಕಥೆ...

Monday November 02, 2015,

4 min Read

“ಕ್ವಿಕರ್​​ನ ನಿಜವಾದ ಆದಾಯ ನನ್ನ ದೃಷ್ಟಿಯಲ್ಲಿದೆ. ನನ್ನ ಪ್ರಕಾರ ಕ್ವಿಕರ್​​ನ ಆದಾಯವನ್ನು ಇನ್ನೂ ಗಳಿಸಿಕೊಂಡಿಲ್ಲ. ನಾವು ಯೋಜಿಸಿರುವ ಪ್ರಕಾರ ನಿಜವಾದ ಗಳಿಕೆ ಆರಂಭವಾಗಬೇಕಿದ್ದರೇ ಇನ್ನೂ ಒಂದೂವರೆಯಿಂದ ಎರಡು ವರ್ಷ ಸಮಯಾವಕಾಶ ಬೇಕು. ಇಂತಹ ಯೋಜನೆಗಳಿಗೆ ನಿಗದಿತ ಸಮಯವನ್ನು ಹೊಂದಿಸಿಕೊಳ್ಳಲು ಸಾಧ್ಯವಿಲ್ಲ” ಎನ್ನುತ್ತಾ ಮಾತನ್ನಾರಂಭಿಸಿದವರು ಕ್ವಿಕರ್ ಸಂಸ್ಥೆಯ ಯಶಸ್ಸಿಗೆ ಕಾರಣರಾದ ಪ್ರಣಯ್ ಚುಲೆಟ್.

ಹಾಗಿದ್ದರೇ ಇದು ಹೂಡಿಕೆಯೇ?

ಈ ಪ್ರಶ್ನೆಗೆ ಉತ್ತರಿಸಿದ ಪ್ರಣಯ್, “ದೇವರ ದಯೆಯಿಂದ ನಮ್ಮ ಸಂಸ್ಥೆಗೆ ಹೂಡಿಕೆ ಮಾಡಬೇಕಿರುವಷ್ಟು ಹಣ ನಮ್ಮ ಬಳಿಯಿದೆ. ಆದರೆ ನಾವು ಈಗ ಆದಾಯಕ್ಕಿಂತ ನಮ್ಮ ಸಂಸ್ಥೆಯ ಹಂತಗಳನ್ನು ವಿಸ್ಕೃತಗೊಳಿಸುವ ಕಡೆಗೆ ಹೆಚ್ಚಿನ ಗಮನಹರಿಸಿದ್ದೇವೆ” ಅನ್ನುತ್ತಾರೆ ಪ್ರಣಯ್. ಸಧ್ಯ ಕ್ವಿಕರ್ 1 ಬಿಲಿಯನ್ ಯುಎಸ್ ಡಾಲರ್ ಮೌಲ್ಯ ಹೊಂದಿದೆ. ಇತ್ತೀಚೆಗಷ್ಟೇ ಕ್ವಿಕರ್ ಮುಂಬೈನಿಂದ ಬೆಂಗಳೂರಿಗೆ ವರ್ಗಾವಣೆಗೊಂಡಿದೆ. ಇದರ ಮುಖ್ಯ ಉದ್ದೇಶ ಅತ್ಯುತ್ತಮ ಪ್ರತಿಭೆಗಳನ್ನು ಸಂಸ್ಥೆಗೆ ನೇಮಿಸಿಕೊಳ್ಳುವುದು ಅನ್ನುವುದು ಪ್ರಣಯ್​​​ ಸಮರ್ಥನೆ.

image


ಮಿಷನ್ ಪಾಸಿಬಲ್

ಕ್ಯಾಲಿಫೋರ್ನಿಯಾ ಮೂಲದ ಕರೈಗ್ಸ್ಲಿಸ್ಟ್ ಅನ್ನುವ ಜಾಹಿರಾತು ಸಂಸ್ಥೆಯಿಂದ ಪ್ರೇರಣೆ ಪಡೆದುಕೊಂಡು ನಿರ್ಮಾಣವಾದ ಸಂಸ್ಥೆಯೇ ಕ್ವಿಕರ್. ಒಂದು ಮುಂಜಾನೆ ಮಲಗಿದ್ದ ಪ್ರಣಯ್ ಎದ್ದವರೇ ತಾವು ಭಾರತದ ಕರೈಗ್ಸ್ಲಿಸ್ಟ್ ಸ್ಥಾಪಿಸಬೇಕು ಎಂದು ನಿರ್ಧರಿಸಿದ್ದರು. ಅವರು ಹಾಗೆ ನಿರ್ಧರಿಸುವ ಹಿನ್ನೆಲೆಯಲ್ಲಿ ಅವರಿಗೆ ಯಾವುದೇ ನಿಖರ ಸ್ಪಷ್ಟತೆಗಳಿರಲಿಲ್ಲ.

ಉದ್ಯಮ ಕ್ಷೇತ್ರವನ್ನು ನಾನು ಹೃದಯದಿಂದ ಬಯಸಿದ್ದೇನೆ. ಆದರೆ ಸೃಜನಶೀಲತೆ ನನ್ನ ಅಚ್ಚುಮೆಚ್ಚಿನ ವಿಷಯ ಅಂತಾರೆ ಪ್ರಣಯ್. ಅಮೇರಿಕಾದ ಮೀಡಿಯಾ ಸಂಸ್ಥೆಯೊಂದರಲ್ಲಿ ಮ್ಯಾನೇಜ್​​ಮೆಂಟ್ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದಾಗಲೆ ಪ್ರಣಯ್​​ಗೆ ಈ ಮಹತ್ವಾಕಾಂಕ್ಷೆಯ ಯೋಜನೆ ಮೂಡಿತ್ತು. 2005ರ ಸುಮಾರಿಗೆ ಮಾಧ್ಯಮ ಸಂಸ್ಥೆಗಳು ಅಂತರ್ಜಾಲ ಸಂಪರ್ಕದ ಕಾರಣ ಸಂಘರ್ಷಪಡುತ್ತಿದ್ದ ಸಂದರ್ಭದಲ್ಲಿ ಒಬ್ಬರು ಗ್ರಾಹಕರು ಗೇಮಿಂಗ್ ಸ್ಟೂಡಿಯೋ ಆರಂಭಿಸುವ ಮಾತಾಡಿದ್ದರು. ಸಿನಿಮಾ ತಯಾರಿಕೆಯ ಸ್ಟೂಡಿಯೋದಲ್ಲೇ ಗೇಮಿಂಗ್ ಸಹ ನಿರ್ಮಿಸುವುಸುವುದು ಸರಳ ಸಂಗತಿಯಾಗಿರಲಿಲ್ಲ. ಆದರೆ ಈ ತೊಡಕನ್ನೇ ಸವಾಲಾಗಿ ತೆಗೆದುಕೊಂಡ ಪ್ರಣಯ್​ಗೆ ಫಿಲಂ ಮೇಕಿಂಗ್ ಬಗ್ಗೆ ತಕ್ಕಮಟ್ಟಿನ ಜ್ಞಾನವಿತ್ತು.

ಮಾರ್ಟಿನ್ ಸ್ಕೋರ್ಸಸ್ (ಗಾಡ್ಫೆಲ್ಲಾಸ್) ಹಾಗೂ ರಾಬರ್ಟ್ ಡಿ ನಿರೋ ಅನಿಮೇಶನ್ ರಹಿತ ಹಾಗೂ ವಾಸ್ತವದಂತೆ ಚಿಂತಿಸಲ್ಪಡುವ ಗೇಮಿಂಗ್ ನಿರ್ಮಿಸುವ ಇಚ್ಛೆ ಹೊಂದಿದ್ದರು. ಅಲ್ಲಿಯವರೆಗೆ ಫಿಲಂ ಮೇಕಿಂಗ್ ಬಗ್ಗೆ ಏನೊಂದು ಅರಿಯದ ಹಾಗೂ ಆ ಕ್ಷೇತ್ರಕ್ಕೆ ಹೊಸಬರಾಗಿದ್ದ ಪ್ರಣಯ್ ಆಗ ಫಿಲಂ ಮೇಕಿಂಗ್ ವಿಷಯವನ್ನು ಮನದಟ್ಟು ಮಾಡಿಕೊಳ್ಳತೊಡಗಿದ್ದರು. ಬದುಕಿನಲ್ಲಿ ಉತ್ತಮ ವಿಚಾರ ಅರ್ಥವಾಗಲು ಸಾಕಷ್ಟು ಸಮಯ ಹಿಡಿಯುತ್ತದೆ ಹಾಗೂ ಸಾಕಷ್ಟು ಹಣವೂ ಖರ್ಚಾಗುತ್ತದೆ. ಆದರೆ ಅಂತಿಮವಾಗಿ ಇದೊಂದು ಮೌಲ್ಯಯುತ ಪಾಠ ನಿಮಗೆ ಸಿಗುತ್ತದೆ ಅನ್ನುವುದು ಪ್ರಣಯ್ರ ಅನುಭವ.

ಸುಮಾರು 30 ರಾಷ್ಟ್ರಗಳ ಫೈಟರ್ಸ್​ಗಳನ್ನು ಹೊಂದಿರುವ ಜಗತ್ತಿನ ರಹಸ್ಯ ಭಯೋತ್ಪಾದಕ ದಳ ಶಿನಾನಿಯನ್ಸ್ ಕಾರ್ಯಾಚರಣೆಯೇ ಪ್ರಣಯ್​​ಗೆ ಕ್ವಿಕರ್ ಸಂಸ್ಥೆ ಸ್ಥಾಪಿಸಲು ಹೊಸ ಸುಳಿಹು ನೀಡಿತು.

ಪ್ರಣಯ್ ತಮ್ಮ ಮಹತ್ವಾಕಾಂಕ್ಷೆಯ ಕಥೆಯೊಂದನ್ನು ಹಣೆದು ಸ್ವತಃ ಸ್ಕ್ರಿಪ್ಟ್ ರಚಿಸಿದ್ದರು. ಆ ಚಿತ್ರವನ್ನು ಅವರೇ ನಿರ್ದೇಶಿಸುತ್ತಿದ್ದರು. ಆದರೆ ಚಿತ್ರೀಕರಣ ಆರಂಭಕ್ಕೆ ಮುಖ್ಯ ತೊಡಕೊಂದಿತ್ತು. ಆ ಚಿತ್ರದ 30 ಪಾತ್ರಗಳಿಗೆ 30 ಬೇರೆ ಬೇರೆ ರಾಷ್ಟ್ರಗಳ ಕಲಾವಿದರ ಅಗತ್ಯವಿತ್ತು. ಕೂಡಲೆ ಪ್ರಣಯ್, ಈ ಕುರಿತಾಗಿ ಕ್ರೈಗ್ಸ್ಲಿಸ್ಟ್ ಸಂಸ್ಥೆಯಲ್ಲಿ ಜಾಹಿರಾತು ನೀಡಿದರು. ಫಲವಾಗಿ ಮುಂದಿನ ವಾರದಲ್ಲೇ ಅವರ ಆಡಿಷನ್​​​ 200 ಜನರು ಬಂದರು. ಆಗ ಅವರಿಗೆ ಈ ಪ್ಲಾಟ್​​ಫಾರಂನ ಮಹತ್ವ ಅರಿವಾಯಿತು.

ಪ್ರಣಯ್​​ರ ಚಿತ್ರ ದೆಹಲಿಯಲ್ಲೂ ಚಿತ್ರೀಕರಣಗೊಂಡಿತು. ಅವರ ಕಥೆಯಂತೆ ಅದೊಂದು ಅಂತರ್​​ ಸಂವಾದಿತ ಗೇಮಿಂಗ್. ಚಿತ್ರದಲ್ಲಿ ಅವರ 30 ತಂಡದ ಸದಸ್ಯರಲ್ಲಿ ಒಬ್ಬರು ಆ್ಯಂಟಿ ಟೆರರಿಸ್ಟ್ ಸ್ಕ್ವಾಡ್ ಪಾತ್ರದಲ್ಲಿದ್ದರು. ಪ್ರಣಯ್​​ರ ಈ ಚಿತ್ರದ ಚಿತ್ರೀಕರಣ ಅವರ ಬದುಕಿನ ಅಮೂಲ್ಯ 6 ತಿಂಗಳ ಕಾಲ ತೆಗೆದುಕೊಂಡಿತು, ಆದರೆ ಪ್ರಣಯ್ ಎಂದಿಗೂ ಇದನ್ನು ದೊಡ್ಡ ಮಟ್ಟಕ್ಕೆ ಪ್ರಚಾರ ಮಾಡಲು ಹೋಗಲೇ ಇಲ್ಲ.

ಬದುಕಿನ ವೃತ್ತ ಪೂರ್ಣಗೊಳಿಸುವತ್ತ ದಾಪುಗಾಲು

ಮುಂದಿನ ಕೆಲವೇ ವಾರಗಳಲ್ಲಿ ತಾವೊಂದು ಮೀಡಿಯಾ ಮನೋರಂಜನೆಯ ಚಾನೆಲ್ ಒಂದನ್ನು ಕೊಳ್ಳುವುದಾಗಿ ಯುವರ್​​ಸ್ಟೋರಿ ಜೊತೆಗೆ ಮಾತಾಡುತ್ತಾ ಪ್ರಣಯ್ ಹೇಳಿದ್ದಾರೆ. ಕ್ವಿಕರ್ ಆಲೋಚನೆ ಸಂಬಂಧಪಡದೇ ಇದ್ದ ಕ್ಷೇತ್ರವಾಗಿತ್ತು. ಮನೋರಂಜನೆಯ ಉದ್ದಿಮೆ ಕ್ಷೇತ್ರದಲ್ಲಿ ಹೂಡಿಕೆ ಮಾಡುವ ಮೂಲಕ ತಾವು ತಮ್ಮ ಮಹತ್ವಾಕಾಂಕ್ಷೆಯ ವೃತ್ತವನ್ನು ಪೂರ್ಣಗೊಳಿಸೋದಾಗಿ ಅವರು ಘೋಷಿಸಿದ್ದಾರೆ.

ಕಾಮನ್​ಫ್ಲೋರ್ ಖರೀದಿಯ ವಿಚಾರದಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರಣಯ್ ಅತ್ಯಂತ ಜಾಣ್ಮೆಯಿಂದ ಉತ್ತರಿಸಿದ್ದಾರೆ. ನಾವು ಸಣ್ಣ ಪ್ರಮಾಣದ ಹೂಡಿಕೆ ಮಾಡಿ ಕೆಲವು ಸಣ್ಣ ಸಂಸ್ಥೆಗಳನ್ನು ಖರೀದಿಸಿದ್ದೇವೆ. ನಾವೀಗ ಕಾಮನ್​ಫ್ಲೋರ್​​ಗೆ ಗಮನ ಕೊಡುವುದಕ್ಕಿಂತ ಬೇರೆ ಕ್ಷೇತ್ರದ ಹೂಡಿಕೆಯತ್ತ ಹೆಚ್ಚಿನ ಆದ್ಯತೆ ನೀಡುತ್ತಿದ್ದೇವೆ ಅನ್ನುವುದು ಪ್ರಣಯ್​​ರ ಸ್ಪಷ್ಟನೆ.

ಅವರ ಪ್ರಕಾರ ಸಂಸ್ಥೆಯನ್ನು ಬೆಳೆಸಲು ಎರಡು ಮಾರ್ಗಗಳಿವೆ. ಸಂಸ್ಥೆಯನ್ನು ಕಟ್ಟುತ್ತಾ, ಅಭಿವೃದ್ಧಿ ಪಡಿಸುತ್ತಾ ಸಾಗುವುದು ಅತ್ಯುತ್ತಮ ಆಯ್ಕೆ. ನಮ್ಮಲ್ಲಿ 5 ಪ್ರತ್ಯೇಕ ವಿಸ್ತಾರಗಳಿವೆ. ಕ್ವಿಕರ್ ಕಸ್ಟಮರ್ ಟು ಕಸ್ಟಮರ್ ಟು ಕಸ್ಟಮರ್ ಪಾವತಿ ಸೌಕರ್ಯ ಹಾಗೂ ಶೇಖರಣಾ ಘಟಕ, ಕ್ವಿಕರ್ ಉದ್ಯೋಗಾವಕಾಶಗಳು, ಕ್ವಿಕರ್ ಸೇವೆಗಳು, ಕ್ವಿಕರ್ ಸಿನಿಮಾ, ಹಾಗೂ ಕ್ವಿಕರ್ ಕಾರ್. ನಾವು ಈ 5 ವಿಭಾಗಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತೇವೆ. ಈ ವಿಭಾಗಗಳ ಬೆಳವಣಿಗೆಗೆ ಸಂಬಂಧಪಟ್ಟ ಸಣ್ಣ ಪುಟ್ಟ ಹೂಡಿಕೆಗಳನ್ನು ಹಾಗೂ ಖರೀದಿ ಮಾಡಬೇಕಾದರೆ ಅದಕ್ಕೂ ಸಿದ್ಧ. ಅದರ ಹೊರತಾಗಿ ನಮಗೆ ಪರಿಚಯವೇ ಇಲ್ಲದ ಹಾಗೂ ಈ ವಿಭಾಗಗಳಿಗೆ ಸಂಬಂಧಪಡದ ದೊಡ್ಡ ಹೂಡಿಕೆ ಮಾಡಬೇಕಾಗಿ ಬಂದರೆ ಅದು ಅನಗತ್ಯ ಅಷ್ಟೆ. ನಮ್ಮ ಗಮನವೇನಿದ್ದರೂ ನಮ್ಮ ಈಗಿನ ವಿಸ್ತಾರವನ್ನು ಮತ್ತಷ್ಟು ವಿಸ್ತಾರಪಡಿಸುವುದಷ್ಟೇ ಅಂತಾರೆ ಪ್ರಣಯ್.

ಉದ್ಯಮ ಕ್ಷೇತ್ರದ ದಂತಕಥೆ ವಾರನ್ ಬಫೆಟ್ ಹೇಳುವಂತೆ ಅತ್ಯುತ್ತಮ ಆಸ್ತಿ ಅತ್ಯುತ್ತಮ ಮೌಲ್ಯ ಹೊಂದಿದ್ದರೇ, ಕಳಪೆ ಗುಣಮಟ್ಟದ ಆಸ್ತಿ ಕಳಪೆ ಮೌಲ್ಯ ಹೊಂದಿರುವುದಿಲ್ಲ. ಬದಲಿಗೆ ಅತ್ಯುತ್ತಮ ಆಸ್ತಿಯ ಜೊತೆ ಅದು ಪೈಪೋಟಿ ಮಾಡಲಾರದು. ಇದು ಪ್ರಣಯ್​​ರ ವ್ಯಾವಹಾರಿಕ ದೃಷ್ಟಿಕೋನವೂ ಹೌದು. ಕ್ವಿಕರ್ ಹೋಂ ಸೇವೆಗಾಗಿ ಸಧ್ಯದಲ್ಲಿಯೇ ಪ್ರಣಯ್ ಟಿವಿ ಅಭಿಯಾನ ಆರಂಭಿಸಲಿದ್ದಾರೆ ಅನ್ನುವ ಆಸಕ್ತಿಕರ ಸಂಗತಿಯೂ ಇದೀಗ ಬಹಿರಂಗವಾಗಿದೆ.

ನಿಧಾನವಾಗಿ ಚಲಿಸಿದರೂ ಗಮ್ಯದತ್ತ ಗುರಿಯಿಟ್ಟು ಸಾಗಿ ರೇಸ್ ಗೆದ್ದ ಕ್ವಿಕರ್

ಆದಾಯದ ಪರಿಮಾಣದಲ್ಲಿ ಹೇಳುವುದಾದರೆ ಕ್ವಿಕರ್ ಹೋಂ ಹಾಗೂ ಸೇವೆಗಳು ಕೊಂಚ ದೊಡ್ಡ ಯೋಜನೆ. ಕ್ವಿಕರ್ ಜಾಬ್ಸ್ ಈಗಾಗಲೇ ತನ್ನ ವೇಗವನ್ನು ಹೆಚ್ಚಿಸಿದೆ. ಕ್ವಿಕರ್ ಕಾರ್ಸ್ ಸಾಮಾನ್ಯವಾಗಿ ಸಣ್ಣ ಆದಾಯದ ವಿಭಾಗ. ತನ್ನ ಅಳತೆಗಿಂತ ಹೆಚ್ಚಿನ ಹಣವನ್ನು ಅದು ಗಳಿಸುವುದಿಲ್ಲ. ಆದರೂ ಇದರ ಅಭಿವೃದ್ಧಿಗೆ ಸಮಯಾವಕಾಶ ಬೇಕು. ಲಿಸ್ಟಿಂಗ್​​ನಲ್ಲಿ ಹೇಳುವುದಾದರೇ, ಕ್ವಿಕರ್ ಕಾರ್ ಹಾಗೂ ಕ್ವಿಕರ್ ಹೋಂಗಳು ಗ್ರಾಹಕರಿಂದ ಅತ್ಯುತ್ತಮ ಪ್ರತಿಕ್ರಿಯೆ ತಂದುಕೊಡುತ್ತದೆ. ಇದೇ ಮುಂದೆ ಆದಾಯವನ್ನು ತಂದುಕೊಡುವ ಮಾಧ್ಯಮ.

ಇ-ಕಾಮರ್ಸ್ ಕ್ಷೇತ್ರದಲ್ಲಿ ಹೊಸ ಹೊಸ ಪ್ರಯೋಗಗಳನ್ನು ನಡೆಸುವ ಮೂಲಕ ಅವರು ವ್ಯಾವಹಾರಿಕ ಮೋಜಿಗೆ ತೊಡಗಿಕೊಂಡಿದ್ದಾರೆ. ಪ್ರಣಯ್ ಹೇಳುವಂತೆ ಅವರು ಉದ್ಯಮ ಕ್ಷೇತ್ರದಲ್ಲಿ ಬೇರೆಯ ಕ್ಷೇತ್ರಗಳಿಗಿಂತ ವಿಭಿನ್ನವಾಗಿ ಕಾಯಾಚರಣೆ ನಡೆಸುತ್ತಿದ್ದಾರೆ. ಮೊಬೈಲ್ ಹಾಗೂ ಇಂಟರ್ನೆಟ್ ಮೇಲೆ ಅವಲಂಭಿತವಾಗಿರುವ ಕ್ವಿಕರ್ ಉದ್ಯಮ, ದೇಶದಲ್ಲಿ ಹೊಸ ಕ್ರಾಂತಿ ನಡೆಸುವತ್ತ ಸಾಗಿದೆ. ಸಕಾರಾತ್ಮಕ ದೃಷ್ಟಿಕೋನ ಹಾಗೂ ಹೊಸ ಪ್ರಯೋಗಗಳ ಮೂಲಕ ಗ್ರಾಹಕರು ಕಲ್ಪಿಸಿಕೊಳ್ಳಲಾಗದ ಹೊಸ ಉತ್ಪನ್ನವನ್ನು ಮುಂಬರುವ ದಿನಗಳಲ್ಲಿ ಸಂಸ್ಥೆ ಬಿಡುಗಡೆಗೊಳಿಸಲಿದೆ ಅಂತ ವಿಶ್ವಾಸದಿಂದ ಹೇಳಿಕೊಂಡಿದ್ದಾರೆ ಪ್ರಣಯ್.

ತಮ್ಮ ಕ್ಷೇತ್ರದ ಪೈಪೋಟಿಯ ಬಗ್ಗೆ ಮಾತಾಡುತ್ತಾ ಪ್ರಣಯ್, ನಾವು ನಮ್ಮ ಮಿತಿಯನ್ನು ಅರಿತುಕೊಂಡೇ ವ್ಯವಹರಿಸುತ್ತಿದ್ದೇವೆ. ನಮ್ಮ ಉದ್ಯಮದ ಮಿತಿಗಿಂತ ಕೆಳಗೆ ಹೋಗುವ ಪ್ರಯತ್ನ ಮಾಡುತ್ತಿಲ್ಲ. ಕಳೆದ ಒಂದು ವರ್ಷದಲ್ಲಿ 50 ಕಂಪೆನಿಗಳು ಈ ಕ್ಷೇತ್ರಕ್ಕೆ ಕಾಲಿಟ್ಟಿವೆ. ಬೇರೆ ಬೇರೆ ಗುಣಮಟ್ಟದ ಸೇವೆಗಳು ಹಾಗೂ ದರಗಳು ಮಾರುಕಟ್ಟೆಯಲ್ಲಿ ಪೈಪೋಟಿಯಲ್ಲಿವೆ. ಆದರೂ ಕಳೆದ ಒಂದು ವರ್ಷದಲ್ಲಿ ನಾವು ಹೂಡಿಕೆ ಮಾಡುತ್ತಿರುವುದು ಸಮಂಜಸವಾಗಿದೆ. ಹಾಗಂತ ನಾವು ಈ ಕ್ಷೇತ್ರವನ್ನು ಲಘುವಾಗಿ ಪರಿಗಣಿಸಿಲ್ಲ ಅಂದಿದ್ದಾರೆ.

ಕಡಿಮೆ ಉದ್ಯೋಗಿಗಳಿರುವ ಸಣ್ಣ ಸಂಸ್ಥೆಯನ್ನು ಹೊಂದಿರುವ ಉದ್ಯಮಿಗೆ ತನ್ನ ಸಂಸ್ಥೆ ಬೆಳೆಯುತ್ತಾ ಹೋದಂತೆಲ್ಲಾ ಮೂಲ ಮಾದರಿಯ ಗುಣಮಟ್ಟ ಹಾಗೂ ಸೇವೆಗಳನ್ನು ಕಾಪಾಡಿಕೊಳ್ಳುವುದು ಸುಲಭವಲ್ಲ. ಅನೇಕ ಉದ್ಯಮಿಗಳು ತಮ್ಮ ಹೆಚ್ಚುತ್ತಿರುವ ಉತ್ಪಾದನೆ ಹಾಗೂ ಮಾರುಕಟ್ಟೆಯ ಅಭಿವೃದ್ಧಿಯನ್ನು ಮಾತ್ರ ಗಮನಿಸುತ್ತಾರೆ. ಆದರೆ ಎಲ್ಲದಕ್ಕಿಂತ ಮುಖ್ಯ ಗ್ರಾಹಕರ ಅನುಭವಗಳಿಗೆ ತೊಡಕಾಗದಂತೆ ಸಂಸ್ಥೆಯ ಸೇವಾ ಗುಣಮಟ್ಟ ಕಾಪಾಡಿಕೊಳ್ಳುವುದು, ಕ್ವಿಕರ್ ಪಾಲಿಗೆ ಇದೇ ಯಶಸ್ಸಿನ ಸೂತ್ರ ಅಂತಾರೆ ಪ್ರಣಯ್.