ಆ್ಯಂಟಿಪೋಡ್ ಯೋಜನೆಯಲ್ಲಿ ಭಾರತೀಯ ಅಭಿಷೇಕ್..

ಎನ್​ಎಸ್​​ಆರ್​

ಆ್ಯಂಟಿಪೋಡ್ ಯೋಜನೆಯಲ್ಲಿ ಭಾರತೀಯ ಅಭಿಷೇಕ್..

Sunday March 20, 2016,

2 min Read

ಜಗತ್ತಿನಲ್ಲಿ ಎಂತಹದೇ ಯೋಜನೆಯಿರಲಿ, ಯಾವುದೇ ತಂತ್ರಜ್ಞಾನ ಅಭಿವೃದ್ಧಿಯಾಗುತ್ತಿರಲಿ. ಅಲ್ಲಿ ಭಾರತೀಯರ ಪಾಲು ಇದ್ದೇ ಇರುತ್ತದೆ. ಹೌದು ಭಾರತ, ಭಾರತೀಯರು ಇಂದು ವಿಶ್ವದ ಎಲ್ಲ ಮೂಲೆಯಲ್ಲು ಕಾಣಸಿಗುತ್ತಾರೆ. ಪ್ರತಿಯೊಂದು ಮಹತ್ವದ ಅನ್ವೇಷಣೆಯಲ್ಲಿ ಭಾರತೀಯರು ಅಳಿಲು ಸೇವೆ ನಾವು ಕಾಣಬಹುದು. ಈಗ ಅಂತಹದೆ ಒಂದು ಮಹತ್ವದ ಯೋಜನೆಯಲ್ಲಿ ಭಾರತೀಯನು ಕಾಣಿಸಿಕೊಳ್ಳುವ ಮೂಲಕ, ಸದ್ಯ ಟ್ರೆಂಡಿಂಗ್​​ನಲ್ಲಿದ್ದಾರೆ.

ಪ್ರಪಂಚದ ಅತ್ಯಂತ ವೇಗದ ವಿಮಾನ ಯೋಜನೆ ಬಾಂಬಾರ್ಡಿಯರ್ ವಿಮಾನ ಸಂಸ್ಥೆಯ ಕಾಂಕರ್ಡ್ ವಿಮಾನ ಯೋಜನೆ. ಕೆಲವೇ ನಿಮಿಷಗಳಲ್ಲಿ ಸಾವಿರಾರು ಕಿ.ಮೀ ದೂರವನ್ನು ಕ್ರಮಿಸಬಲ್ಲ ವಿಶ್ವದ ಅತ್ಯಂತ ವೇಗದ ವಿಮಾನ ತಯಾರಿಕೆಗೆ ಬಾಂಬಾರ್ಡಿಯರ್ ವಿಮಾನ ಸಂಸ್ಥೆ ಮುಂದಾಗಿದ್ದು, ವಿಶ್ವಪ್ರಸಿದ್ಧ ಬಾಂಬಾರ್ಡಿಯರ್ ವಿಮಾನಗಳ ತಯಾರಕ ಚಾರ್ಲ್ಸ್ ಬಾಂಬಾರ್ಡಿಯರ್ ವಿನೂತನ ಮಾದರಿ ಕಾಂಕರ್ಡ್ ವಿಮಾನಗಳನ್ನು ಪರಿಚಯಿಸಿದ್ದಾರೆ. ಇದಕ್ಕೆ ಭಾರತೀಯ ಅಭಿಷೇಕ್ ರಾಯ್ ನೇತೃತ್ವದ ಲುನಾಟಿಕ್ ಕಾನ್ಸೆಪ್ಟ್ಸ್ ಕೈಜೋಡಿಸಿದ್ದು, ವಿನೂತನ ಕಾಂಕರ್ಡ್ ವಿಮಾನವು ಗಾಳಿಯಲ್ಲಿ ಧ್ವನಿಯ ವೇಗಕ್ಕಿಂತ 24 ಪಟ್ಟು ಹೆಚ್ಚು ವೇಗದಲ್ಲಿ ಸಂಚರಿಸಲಿದೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ಪರಿಚಯಿಸಲಾಗಿದ್ದ ಸೂಪರ್​ಸಾನಿಕ್ ವಿಮಾನಗಳಿಗಿಂತ ಇದು ಹೆಚ್ಚು ವೇಗವಾಗಿ ಹಾರಬಲ್ಲದು.

image


ದೇಶದ ಉತ್ಸಾಹಿ ವಿನ್ಯಾಸಗಾರ ಅಭಿಷೇಕ್ ರಾಯ್, ಅತಿ ನೂತನ ಪೈಲಟ್ ರಹಿತ ದೂರಗಾಮಿ ವಿಮಾನದ ಕಾನ್ಸೆಪ್ಸ್​ಒಂದನ್ನು ಅಭಿವೃದ್ಧಿಪಡಿಸಿದ ಚತುರ. ಈ ವಿಮಾನಗಳಿಂದ ಕಣ್ಗಾವಲು ಹಾಗೂ ಯುದ್ಧದ ವೇಳೆ ಕಾರ್ಯಾಚರಣೆಯನ್ನು ಮಾಡಬಹುದಾಗಿದೆ. ಅತ್ಯಂತ ಆಧುನಿಕ ತಂತ್ರಜ್ಞಾನವುಳ್ಳ ವಿಮಾನಗಳ ಯೋಜನೆಗಳು ಇವರಲ್ಲಿವೆ. ಮುಂಬೈ ಮೂಲದ ಲುನಾಟಿಕ್ ಕಾನ್ಸೆಪ್ಟ್ (Lunatic Koncepts) ಸ್ಥಾಪಕ ಅಭಿಷೇಕ್ ರಾಯ್, ಎಂಬವರೇ ಈ ಅತಿ ನೂತನ ವಿನ್ಯಾಸಕ್ಕೆ ಕೈ ಹಾಕಿದ್ದಾರೆ. ಈಗಾಗಲೇ ಅಲರ್ಟ್ ವಾಯುವಿಮಾನ ಹಾಗೂ ಅರ್ಬನ್ ಬಸ್ ಕಾನ್ಸೆಪ್ಟ್ ರಚಿಸಿರುವ ಅಭಿಷೇಕ್, ಕಾಂಕರ್ಡ್ ವಿಮಾನ ಯೋಜನೆಯಲ್ಲು ಸಕ್ರೀಯರಾಗಿದ್ದಾರೆ.

ಇದನ್ನು ಓದಿ: ಕೆಲಸಕ್ಕೆ ಗುಡ್‍ಬೈ, ಸ್ಟಾರ್ಟ್‍ಅಪ್‍ಗೆ ಜೈ - ಕಲೆಯನ್ನೇ ನಂಬಿ ಉದ್ಯಮ ಆರಂಭಿಸಿದ ಸಾಹಸಿ

ಆ್ಯಂಟಿಪೋಡ್ ವಿಮಾನದ ಯೋಜನೆ ನಾವು ಊಹಿಸಲು ಆಗದಂತಹ ಅತ್ಯಂತ ವೇಗದ ವಿಮಾನ ಇದಾಗಲಿದೆ. ಇದರಿಂದ ಹೊರಡುವ ಶಬ್ದ ಮತ್ತು ಉಷ್ಣತೆಯನ್ನು ನಿಯಂತ್ರಿಸಲು ವಿನೂತನ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲಾಗಿದೆ. ಸೂಪರ್​ಸಾನಿಕ್ ವಿಮಾನಗಳು ಅತೀವ ಶಬ್ದ ಮಾಡುತ್ತಿದ್ದುದರಿಂದ ಇವುಗಳ ಸಂಚಾರಕ್ಕೆ ನಿಷೇಧ ಹೇರಲಾಗಿತ್ತು. ಆದರೆ ಈ ವಿಮಾನ ಹಾರಾಡುವಾಗ 980 ಡಿಗ್ರಿ ಸೆಲ್ಸಿಯಸ್ ಉಷ್ಣತೆ ಉತ್ಪತ್ತಿ ಮಾಡಿದರೂ, ಏರೋಡೈನಾಮಿಕ್ ತಂತ್ರಜ್ಞಾನವನ್ನು ಇದರಲ್ಲಿ ಬಳಸಿರುವುದರಿಂದ ಉಷ್ಣತೆ ನಿಯಂತ್ರಿಸಬಹುದಾಗಿದೆ. ಈ ವಿನೂತನ ಕಲ್ಪನೆಗೆ ಆ್ಯಂಟಿಪೋಡ್ ಎಂದು ಹೆಸರಿಸಲಾಗಿದ್ದು, ಈ ವಿಮಾನ 10 ಪ್ರಯಾಣಿಕರನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ.

image


ಒಂದು ಗಂಟೆಯಲ್ಲಿ 12 ಸಾವಿರ ಮೈಲುಗಳನ್ನು ಇದು ಕ್ರಮಿಸಲಿದೆ. ಲಂಡನ್​​ನಿಂದ ನ್ಯೂಯಾರ್ಕ್ ನಡುವಿನ ಸುಮಾರು 5 ಸಾವಿರ ಕಿ.ಮೀ ದೂರವನ್ನು ಕೇವಲ 11 ನಿಮಿಷಗಳಲ್ಲಿ ಕ್ರಮಿಸ ಬಲ್ಲದು ಎಂದು ಹೇಳಲಾಗುತ್ತಿದೆ. ಲುನಾಟಿಕ್ ಸಂಸ್ಥೆ ಈ ವಿಮಾನದ ವಿನ್ಯಾಸ ರೂಪಿಸಿದೆ. ಈ ವಿಮಾನದ ರೆಕ್ಕೆಗೆ ರಾಕೆಟ್​​ಗಳನ್ನು ಅಳವಡಿಸಲಾಗುತ್ತದೆ. ಈ ರಾಕೆಟ್​​ಗಳು ಒಮ್ಮಿಂದೊಮ್ಮೇಲೆ 40 ಸಾವಿರ ಅಡಿ ಎತ್ತರಕ್ಕೆ ವಿಮಾನವನ್ನು ಕೊಂಡೊಯ್ಯಲು ನೆರವಾಗುತ್ತವೆ. ವಿಮಾನ 40 ಸಾವಿರ ಅಡಿ ತಲುಪುತ್ತಿದ್ದಂತೆ ರಾಕೆಟ್ಗಳು ವಾಪಸ್ ಭೂಮಿಗೆ ಬರುತ್ತವೆ. ಅತ್ಯಂತ ಉತ್ಕೃಷ್ಟ ತಂತ್ರಜ್ಞಾನವನ್ನು ಇದರಲ್ಲಿ ಅಳವಡಿಸಲಾಗಿದೆ. ವಿಮಾನದಲ್ಲಿ ಅಳವಡಿಸಲಾಗಿರುವ ಸ್ಕ್ರಾಮ್ಜೆಟ್ ಇಂಜಿನ್ ವೇಗ ಹೆಚ್ಚಿಸಿಕೊಳ್ಳುತ್ತದೆ. ಈ ಇಂಜಿನ್ಗಳು ಇಂಧನ ಹೊತ್ತೊಯ್ಯುವುದರ ಬದಲಿಗೆ ವಾತಾವರಣದಲ್ಲಿರುವ ಆಮ್ಲಜನಕವನ್ನೇ ಬಳಸಿಕೊಳ್ಳುತ್ತದೆ.

ಆ್ಯಂಟಿಪೋಡ್ ವಿಮಾನದ ವೆಚ್ಚ ಸುಮಾರು 1 ಸಾವಿರ ಕೋಟಿ ರೂ. ಆಗಲಿದೆ ಎಂದು ಹೇಳಲಾಗಿದೆ. ಅಲ್ಲದೆ ಇದರ ವಿನ್ಯಾಸದಿಂದಾಗಿ ಶಬ್ದವೂ ಕಡಿಮೆ ಇರಲಿದೆ. ಆದರೆ ಈ ತಂತ್ರಜ್ಞಾನಗಳು ಇನ್ನೂ ಶೈಶವಾವಸ್ಥೆಯಲ್ಲೇ ಇವೆ ಎಂದು ಹೇಳಲಾಗುತ್ತಿದೆ. ಏರೋಡೈನಾಮಿಕ್ ತಂತ್ರಜ್ಞಾನವನ್ನು ನಾಸಾ ಇನ್ನೂ ಅಭಿವೃದ್ಧಿಪಡಿಸುತ್ತಿದೆ. ಆದರೆ ಬಹುಬೇಗ ಆ್ಯಂಟಿಪೋಡ್ ವಿಮಾನ ಪ್ರಯಾಣಿರ ಸೇವೆಗೆ ಲಭ್ಯವಾಗಲಿದೆಯೆಂಬುದು. ಅಭಿಷೇಕ್ ರಾಯ್ ಅವರ ವಿಶ್ವಾಸವಾಗಿದೆ.

ಇದನ್ನು ಓದಿ

1. ಹೊಸ ಉದ್ಯಮಕ್ಕೆ ನಾಂದಿ ಹಾಡಿತು ಆಫೀಸ್ ಗೆಳೆತನ....

2. ರಾಜಸ್ಥಾನಿ ಪುಲ್ಕಾಸ್​​ ಟೇಸ್ಟ್​​ ನೋಡಿ.. ಅಮ್ಮ ಮಗಳ ಕಥೆ ಕೇಳಿ..!

3. ಡಾಮಿನೋಸ್ ಸ್ಟೈಲ್ ನಲ್ಲಿ ದೇಸೀ ಫುಡ್ : ಕ್ವಿಕ್ ಸರ್ವೀಸ್ ರೆಸ್ಟೋರೆಂಟ್ ಬ್ಯುಸಿನೆಸ್ ನಲ್ಲಿ ನಲ್ಲಿ ಡಮ್ಮಾ ಡಮ್ ಹೊಸ ಹೆಜ್ಜೆ..