ಆನ್​​ಲೈನ್ ಪ್ರಕಾಶನಗಳಿಗೇಕಿಲ್ಲ..?

ಟೀಮ್​​ ವೈ.ಎಸ್​​.

ಆನ್​​ಲೈನ್ ಪ್ರಕಾಶನಗಳಿಗೇಕಿಲ್ಲ..?

Wednesday November 04, 2015,

6 min Read

4 ವರ್ಷಗಳ ಹಿಂದೆ ಯಾವುದೇ ಉದ್ಯಮಗಳಿಗಿಂತ ಆನ್​​ಲೈನ್ ಪ್ರಕಾಶನ ಸಂಸ್ಥೆ ಹಿಂದಿತ್ತು. ಇದಕ್ಕೆ ಕಾರಣ ಹುಡುಕುವ ಜೊತೆಗೆ ಆನ್​​ಲೈನ್ ಪ್ರಕಾಶನಗಳಿಗೆ ಉತ್ತೇಜನ ನೀಡುವ ಕೆಲಸವೂ ಆಗಿತ್ತು. ಏಷಿಯನ್ ಪ್ರಕಾಶಕರು ಈ ನಿಟ್ಟಿನಲ್ಲಿ ಮಾಪನ ಹಾಗೂ ವ್ಯಾಪ್ತಿಯನ್ನು ಗುರುತಿಸಿದ ನಂತರ ನಾಲ್ಕು ವರ್ಷಗಳ ನಂತರ ಯಾವುದೇ ಉದ್ಯಮಗಳಿಗಿಂತ ಆನ್​ಲೈನ್ ಪ್ರಕಾಶನ ಅತ್ಯಂತ ಕಷ್ಟಕರ ಅನ್ನುವ ಸ್ಥಿತಿ ಒದಗಿದೆ.

image


ಬಝ್​ಸ್ಪೀಡ್ ಅಥವಾ ಸ್ಕೂಫ್​​ಪೂಫ್ ನಂತಹ ಸಂಸ್ಥೆಗಳೇ ಆನ್​ಲೈನ್ ಪ್ರಕಾಶನಕ್ಕಾಗಿ 10 ಬಾರಿ ಯೋಚಿಸಬೇಕಾದ ಸ್ಥಿತಿಯಿದೆ. ಈ ಸಂದರ್ಭದಲ್ಲಿ ಭಾರತೀಯ ಪ್ರಕಾಶಕರಿಗೆ ಆನ್​ಲೈನ್ ಪ್ರಕಾಶನದ ಕುರಿತಾದ ಸವಾಲುಗಳ ಬಗ್ಗೆ ಬೆಳಕು ಚೆಲ್ಲುತ್ತದೆ ಈ ಲೇಖನ

ಲೈಟ್​​ಹೌಸ್ ಇನ್​ಸೈಟ್ಸ್ ಸಧ್ಯದಲ್ಲೇ ಅರ್ಧ ದಶಕಗಳನ್ನು ಪೂರ್ತಿಗೊಳಿಸಲಿದೆ. ಈ 5 ವರ್ಷಗಳಲ್ಲಿ ಯಾವುದೇ ಉದ್ಯಮಗಳು ಅನುಭವಿಸದಷ್ಟು ಸಂಕಷ್ಟಗಳನ್ನು ಈ ಸಂಸ್ಥೆ ಎದುರಿಸಿದೆ. ಕಠಿಣ ಪರಿಶ್ರಮ, ನಿರಂತರ ಗಮನ ಹಾಗೂ ಬದ್ಧತೆಯ ಕಾರಣದಿಂದ ಇನ್ನೂ ಈ ಸಂಸ್ಥೆ ಅಸ್ಥಿತ್ವ ಉಳಿಸಿಕೊಂಡಿದೆ.

image


ಬಹುತೇಕ ಆನ್​​ಲೈನ್ ಪ್ರಕಾಶಕರಿಗೆ ಸವಾಲು ಒಡ್ಡುವಂತಹ ಚಾಲೆಂಜ್​​ಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ. ಇಲ್ಲಿ ವ್ಯಾಪ್ತಿ ಹಾಗೂ ಮಾಪನಕ್ಕೆ ಸಂಬಂಧಿಸಿದ ಕೆಲವು ಸವಾಲುಗಳು ನಿಜಕ್ಕೂ ಆಸಕ್ತಿಕರವಾಗಿದೆ.

1. ಆ್ಯಡ್ ಬ್ಲೈಂಡ್​​​ನೆಸ್ ಹಾಗೂ ಆ್ಯಡ್ ಬ್ಲಾಕಿಂಗ್

ಬಹಳಷ್ಟು ಓದುಗರು ತಲೆನೋವು ತರಿಸುವ ಕೆಲವು ಜಾಹಿರಾತುಗಳನ್ನು ಕ್ಲಿಕ್ ಮಾಡಲು ಹೋಗುವುದಿಲ್ಲ ಇದೇ ಆ್ಯಡ್ ಬ್ಲೈಂಡ್​​ನೆಸ್​​ಗೆ ಅತ್ಯುತ್ತಮ ಉದಾಹರಣೆ. ಸಾಕಷ್ಟು ಭಾರತೀಯ ಪ್ರಕಾಶಕರು ತಮ್ಮ ಸಂಶೋಧನಾತ್ಮಕ ಹಾಗೂ ಕ್ರಿಯಾಶೀಲ ಜಾಹಿರಾತುಗಳನ್ನು ಪ್ರಕಟಿಸಿದರೂ ಅದನ್ನು ಕ್ಲಿಕ್ ಮಾಡುವ ಗ್ರಾಹಕರು ಕಡಿಮೆ. ಸಣ್ಣ ಹಾಗೂ ದೊಡ್ಡ ಪ್ರಕಾಶಕರೂ ಈ ವಿಷಯದಲ್ಲಿ ಗ್ರಾಹಕರಿಂದ ನೀರಸ ಪ್ರತಿಕ್ರಿಯೆ ಬರುತ್ತಿರುವುದನ್ನು ಒಪ್ಪಿಕೊಂಡಿದ್ದಾರೆ. ಗೂಗಲ್ ಆ್ಯಡ್ಸ್​​ನಂತಹ ಡಾಲರ್ ಸಂಪಾದಿಸುವ ಜಾಹಿರಾತುಗಳಿಗೂ ಓದುಗರ ಪ್ರತಿಕ್ರಿಯೆ ಅಷ್ಟಕಷ್ಟೆ ಅನ್ನುವಂತಾಗಿದೆ.

ಕೆಲವು ಪ್ರಕಾಶಕರು ಜಾಹಿರಾತುಗಳನ್ನು ಕ್ಲಿಕ್ ಮಾಡುವ ಗ್ರಾಹಕರಿಗೆ ಹಣ ಸಂಪಾದಿಸುವ ಅವಕಾಶ ನೀಡಿದ್ದಾರಾದರೂ, ಇದೊಂದು ರೀತಿಯ ಪೇಜ್ ಕ್ಲಿಕ್ ಮಾಡಿ ಮುಂದೆ ಹೋಗುವ ಗೇಮ್​​ನಂತಾಗಿದೆಯಷ್ಟೆ. ಆ ಪ್ರಕಾಶಕರು ಹೇಳುವಂತೆ4 ಗ್ರಾಹಕರು, ಓದುಗರು ಅಥವಾ ಬಳಕೆದಾರರು ಜಾಹಿರಾತುಗಳನ್ನು ಓದುವ ಕಡೆಗೆ ಗಮನಕೊಡುತ್ತಿಲ್ಲ. ಈ ಆ್ಯಡ್ಸ್ ಅವರ ಆಸಕ್ತಿಯನ್ನು ಉತ್ತೇಜಿಸುವ ಬದಲಿಗೆ ಅವರ ಅಸಮಧಾನಕ್ಕೆ ಕಾರಣವಾಗುತ್ತಿದೆ. ಹಾಗಾಗಿ ಬಳಕೆದಾರರ ಅನುಭವ ಇದರಿಂದ ಲಭ್ಯವಾಗುತ್ತಿಲ್ಲ.

image


ಈ ತೊಡಕು ಎಲ್ಲಾ ಪ್ರಕಾಶಕರಿಗೆ ಅತೀ ದೊಡ್ಡ ಸವಾಲು ಮುಂದಿಟ್ಟಿದೆ

ಆ್ಯಡ್ ಬ್ಲಾಕಿಂಗ್-ಈ ವರ್ಷ ಆ್ಯಡ್ ಬ್ಲಾಕಿಂಗ್ ಸುಮಾರು 22 ಬಿಲಿಯನ್ ಅಮೆರಿಕನ್ ಡಾಲರ್ ಆದಾಯದ ವಹಿವಾಟು ಹೊಂದಿದೆ. ಅಡೋಬ್ ಹಾಗೂ ಡಬ್ಲಿನ್ ಮೂಲದ ಸಂಸ್ಥೆ ಪೇಜ್​ಫೈರ್ ನೀಡಿರುವ ವರದಿಯ ಪ್ರಕಾರ ಈ ವರ್ಷ ಬಹಳಷ್ಟು ಜಾಹೀರಾತು ಸಂಸ್ಥೆಗಳು ತಮ್ಮ ಆದಾಯವನ್ನು ಕಳೆದುಕೊಂಡಿವೆ. ಆ್ಯಡ್ ಬ್ಲಾಕಿಂಗ್ ಈ ವರದಿಯ ಪ್ರಕಾರ ಕಳೆದ 12 ತಿಂಗಳಿನಲ್ಲಿ ಶೇ.41 ರಷ್ಟು ಮಾತ್ರ ಏರಿಕೆ ಕಂಡಿದೆ. ಮುಖ್ಯವಾಗಿ ಯುರೋಪ್ ರಾಷ್ಟ್ರಗಳ ಇಂಟರ್​​ನೆಟ್ ಬಳಕೆದಾರರು ಆ್ಯಡ್ ಬುಕಿಂಗ್​​ನಲ್ಲಿ ಮೂರರಲ್ಲಿ ಒಬ್ಬರು ಮಾತ್ರ ಆ್ಯಡ್ ಬ್ಲಾಕಿಂಗ್ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ.

ಹೊಸ ವಿದ್ಯಮಾನದ ಪ್ರಕಾರ ಆ್ಯಪಲ್ ಹಾಗೂ ಐಒಎಸ್9 ಆ್ಯಡ್ ಬ್ಲಾಕಿಂಗ್ ವಿಷಯವನ್ನು ತನ್ನ ಮೊಬೈಲ್ ಸಫಾರಿ ಬ್ರೌಸರ್​​ನಲ್ಲಿ ಅಳವಡಿಸಲು ಯೋಚಿಸುತ್ತಿದೆ. ಮಾರ್ಕೆಟಿಂಗ್​​​ ಗೈಡ್​​ ಹೇಳುವಂತೆ ಬ್ಲಾಕಿಂಗ್ ತಂತ್ರಜ್ಞಾನವನ್ನು ಮೊಬೈಲ್​​ನಲ್ಲಿ ಅಳವಡಿಸುವುದು ಸಧ್ಯದ ಮಟ್ಟಿಗೆ ರಕ್ಷಣಾತ್ಮಕ ಹಾಗೂ ಲಾಭದಾಯಕ ಪ್ರಗತಿ.

ಜೆನಿಸಿಸ್ ಮೀಡಿಯಾ ಅವಲೋಕಿಸಿರುವಂತೆ ಶೇ.24 ಪ್ರತಿಶತ ಗ್ರಾಹಕರು ಆ್ಯಡ್ ಬ್ಲಾಕಿಂಗ್ ಸಾಫ್ಟ್​​ವೇರ್ ಅನ್ನು ತಮ್ಮ ಮನೆಯ ಹಾಗೂ ಕೆಲಸ ಮಾಡುವ ಕಂಪ್ಯೂಟರ್​​ಗಳಲ್ಲಿ ಬಳಸುತ್ತಿದ್ದಾರೆ. ಅದರಲ್ಲಿ ಕೇವಲ 3% ಗ್ರಾಹಕರು ಮಾತ್ರ ಆ್ಯಡ್ ಬ್ಲಾಕಿಂಗ್ ತಂತ್ರಜ್ಞಾನವನ್ನು ತಮ್ಮ ಮೊಬೈಲ್ ಡಿವೈಸ್​​ನಲ್ಲಿ ಇನ್ಸ್​ಸ್ಟಾಲ್ ಮಾಡಿಕೊಂಡಿದ್ದಾರೆ. ಹಾಗಾಗಿ ಐಒಎಸ್ ಬಹಳಷ್ಟು ಸಂಸ್ಥೆಗಳಿಗೆ ಮೊಬೈಲ್ ಮಾಧ್ಯಮ ಹಾಗೂ ತಂತ್ರಜ್ಞಾನಗಳ ಅಭಿವೃದ್ಧಿಗೆ ಅವಕಾಶ ನೀಡಲು ಮುಂದಾಗಿದೆ.

ಆ್ಯಡ್​​​​​​ ಬ್ಲಾಕಿಂಗ್​​ನ ಈ ಸಮಸ್ಯೆಗಳನ್ನು ನಿವಾರಿಸುವುದಕ್ಕಾಗಿ ಮೈಕ್​ನಂತಹ ಪ್ರಕಾಶನ ಸಂಸ್ಥೆಗಳು ಕೆಲವು ಸಂಸ್ಥೆಗಳೊಂದಿಗೆ ವ್ಯವಹಾರ ಕಡಿತಗೊಳಿಸಿವೆ. ವೋಕ್ಸ್ ಮೀಡಿಯಾ ಹಾಗೂ ಕ್ವಾರ್ಟ್ಸ್ ಗ್ರಾಹಕರಿಗೆ ಸುಲಭವಾಗಿ ಅರ್ಥವಾಗುವ ನಿಟ್ಟಿನಲ್ಲಿ ಇನ್ನಷ್ಟು ಸರಳ-ಸುಲಭವಾದ ಆ್ಯಡ್ ಫಾರ್ಮೆಟ್​​ಗಳ ಅನ್ವೇಷಣೆಗೆ ಮುಂದಾಗಿವೆ. ಇನ್ನೊಂದೆಡೆ ವಾಷಿಂಗ್ಟನ್ ಪೋಸ್ಟ್​​ನಂತಹ ಸಂಸ್ಥೆ ಸಹ ಇಂಟರ್​​ಆ್ಯಕ್ಟಿಂಗ್ ಅಡ್ವರ್ಟೈಸಿಂಗ್ ಬ್ಯೂರೋ (ಐಎಬಿ) ಮೂಲಕ ಹೊಸ ಪ್ರಯೋಗಕ್ಕೆ ಮುಂದಾಗಿದೆ. ಈ ಮೂಲಕ ಸಾಫ್ಟ್​​ವೇರ್ ಸಂಸ್ಥೆಗಳು ಆ್ಯಡ್​​ಬ್ಲಾಕಿಂಗ್ ಸೇವೆಗಳನ್ನು ಒದಗಿಸುವ ಯೋಜನೆಯನ್ನು ಇದು ಹಾಕಿಕೊಂಡಿದೆ.

ಇಷ್ಟೆಲ್ಲಾ ಆದರೂ ಆ್ಯಡ್ ಬ್ಲಾಕಿಂಗ್ ತನ್ನ ವಿಭಾಗಗಳನ್ನು ವಿಸ್ತರಿಸಿ ಪ್ರಕಾಶಕರಿಗೆ ಸರಳಗೊಳಿಸುವ ನಿಟ್ಟಿನಲ್ಲಿ ಸೇವಾ ಸೌಕರ್ಯ ನೀಡುವ ಕಡೆಗೆ ಚಿಂತನೆ ನಡೆಸಲಾಗುತ್ತಿದೆ.

1. ಸಂಘರ್ಷದಲ್ಲಿದೆ ಮೊಬೈಲ್ ಆದಾಯ:

ಮನೋರಂಜನೆಯಿಂದ ಮಾಹಿತಿ ಪಡೆಯುವವರೆಗೂ ಮೊಬೈಲ್ ಇಂದು ಅತ್ಯುತ್ತಮ ಸಾಧನವಾಗಿದೆ. ಈ ವರ್ಷಾರಂಭದಲ್ಲಿ ಮೇರಿ ಮೂಕರ್ ನೀಡಿರುವ ವರದಿ ಪ್ರಕಾರ ಭಾರತದ ಒಟ್ಟು ಶೇ 65ರಷ್ಟು ಇಂಟರ್​​ನೆಟ್ ಟ್ರಾಫಿಕ್ ಮೊಬೈಲ್ ಮೂಲಕ ಬ್ರೌಸಿಂಗ್ ಆಗುತ್ತಿದೆ.

ಭಾರತದ ಎರಡನೇ ಹಾಗೂ ಮೂರನೆಯ ದರ್ಜೆಯ ಪಟ್ಟಣಗಳಲ್ಲಿ ಮೊಬೈಲ್ ಅನ್ನುವುದು ಅಂತರ್ಜಾಲ ಬಳಕೆಯ ಸಾಧನವೇ ಆಗುತ್ತಿದೆ. ಮೊಬೈಲ್ ಮೊದಲ ಬಾರಿ ಬಳಸುವವರಿಗೆ ಅಂತರ್ಜಾಲ ಕಲಿಕೆಯ ಮಾಧ್ಯಮವೂ ಆಗುತ್ತಿದೆ. ಆದರೆ ವೆಬ್ ಈಗಲೂ ಭಾರತದಲ್ಲಿ ಸಾಮಾಜಿಕವಾಗಿ ಡಿಜಿಟಲ್ ಮಾಧ್ಯಮವೆಂದೇ ಗುರುತಿಸಿಕೊಳ್ಳುತ್ತಿದೆ. ಡೆಸ್ಕ್​​ಟಾಪ್ ಹಾಗೂ ಲ್ಯಾಪ್​​ಟಾಪ್ ಬಳಸಿ ಇಂಟರ್ನೆಟ್​​ನಲ್ಲಿ ಕೆಲಸ ಮಾಡುವ ಶೇ. 66 ರಷ್ಟು ಜನರಿದ್ದರೇ, ಮೊಬೈಲ್ ಬಳಸಿ ಕೆಲಸ ಮಾಡುವ ಶೇ.33 ರಷ್ಟು ಜನರಿದ್ದಾರೆ. ಇದು ಈಗಲೂ ಗ್ರಾಕರಲ್ಲಿ ವೆಬ್ ಬಳಕೆ ಅತಿಮುಖ್ಯವಾಗಿ ಕಂಡುಬರುತ್ತಿರುವುದನ್ನು ತೋರಿಸುತ್ತಿದೆ. ವೆಬ್ ಬಳಕೆ ವರ್ಷದಿಂದ ವರ್ಷಕ್ಕೆ ಶೇ. 6ರಷ್ಟು ಇಳೆಕೆ ಕಾಣುತ್ತಿದೆ. ಇನ್ನೊಂದೆಡೆ ಮೊಬೈಲ್ ಅಭಿವೃದ್ಧಿ ವರ್ಷದಿಂದ ವರ್ಷಕ್ಕೆ ಶೇ.17ರಷ್ಟು ಹೆಚ್ಚುತ್ತಿದೆ.

image


ಗೂಗಲ್​​ನಂತಹ ಸಂಸ್ಥೆಗಳು ಮೊಬೈಲ್ ಸ್ನೇಹಿ ಉತ್ಪನ್ನಗಳ ಅಭಿವೃದ್ಧಿಗೆ ಮುಂದಾಗುತ್ತಿವೆ. ಕಳೆದ ಏಪ್ರಿಲ್​​ನಲ್ಲಿ ಗೂಗಲ್ ಮೊಬೈಲ್​​ಗೆ ಡೌನ್​​ಲೋಡ್​​​ ಯೋಜನೆ ಲಾಂಚ್ ಮಾಡಿದೆ. ತನ್ನ ಬಹುತೇಕ ವೆಬ್​ಸೈಟ್​​​ಗಳನ್ನು ಅದು ಮೊಬೈಲ್ ಸ್ನೇಹಿಗೊಳಿಸುತ್ತಿದೆ. ಇಲ್ಲಿ ಸಂದೇಶ ಸರಳವಾಗಿದೆ. ಒಂದು ವೇಳೆ ನೀವು ಕಂಟೆಂಟ್ ಸೃಷ್ಟಿಕರ್ತರಾಗಿದ್ದರೇ ಮತ್ತು ನಿಮ್ಮ ಸೃಜನಾತ್ಮಕ ಕೆಲಸ ಮೊಬೈಲ್ ಫ್ರೆಂಡ್ಲೀ ಅಲ್ಲದಿದ್ದರೇ ನೀವು ಈ ಕ್ಷೇತ್ರದಲ್ಲಿ ಉಳಿಯಲಾರಿರಿ.

ಮೊಬೈಲ್ ಅನ್ನುವುದು ನಿಜಕ್ಕೂ ನಿರ್ವಹಿಸಲೇಬೇಕಾದ ತಾಂತ್ರಿಕ ಮಾಧ್ಯಮವಾದರೂ ಇದು ಹುಟ್ಟುಹಾಕುತ್ತಿರುವ ಸಮಸ್ಯೆಗಳಿಗೇನೂ ಕಡಿಮೆ ಇಲ್ಲ. ಪ್ರಕಾಶಕರಿಗೆ ವೆಬ್ ಮಾಧ್ಯಮಗಳಿಗಿಂತ ಮೊಬೈಲ್ ಮಾಧ್ಯಮಗಳು ಹೆಚ್ಚಿನ ತೊಂದರೆ ನೀಡುತ್ತಿವೆ. ಮೊಬೈಲ್​​ನ 5 ಇಂಚಿನ ಸ್ಕ್ರೀನ್​​ನಿಂದ ಸಾಕಷ್ಟು ಇಂಟರ್​ನೆಟ್ ಟ್ರಾಫಿಕ್ ಸಂಭವಿಸುತ್ತಿದೆ. ಶೇ.50ರಷ್ಟು ಇಂಟರ್​ನೆಟ್ ಟ್ರಾಫಿಕ್ ಕಾರಣವಾಗುತ್ತಿರುವ ಮೊಬೈಲ್​​ಗಳು ತರುತ್ತಿರುವ ಆದಾಯ ಕೇವ 5ರಿಂದ 10 ಪ್ರತಿಶತ ಮಾತ್ರ.

ನ್ಯೂಯಾರ್ಕ್ ಟೈಮ್ಸ್. ಕೋ ನಲ್ಲಿ ಆರ್ಧಕ್ಕಿಂತ ಹೆಚ್ಚು ಗ್ರಾಹಕರ ಭೇಟಿ ಸಂಸ್ಥೆಯ ಡಿಜಿಟಲ್ ಆ್ಯಪ್​ನ ಸ್ಮಾರ್ಟ್​ಫೋನ್ ಹಾಗೂ ಟ್ಯಾಬ್ಲೆಟ್​​​ಗಳ ಮೂಲಕವೇ ಆಗುತ್ತಿದೆ. ಆದರೂ ವರ್ಷದ ಉತ್ತರಾರ್ಧದಲ್ಲಿ ಸಂಸ್ಥೆಯ ಡಿಜಿಟಲ್ ಆ್ಯಡ್ ಗಳಿಸಿದ ಮೊಬೈಲ್ ಮೂಲದ ಆದಾಯ ಕೇವಲ 15 ಪ್ರತಿಶತ ಮಾತ್ರ. ಆದರೆ ಈ ಮೊಬೈಲ್ ಭೇಟಿಗಳಿಂದ ಗ್ರಾಹಕರ ಸಂಪರ್ಕ ಹೆಚ್ಚಾಗುತ್ತಿದೆ ಅನ್ನುವುದನ್ನು ಸ್ವತಃ ಸಂಸ್ಥೆಯ ಮುಖ್ಯ ಆದಾಯಾಧಿಕಾರಿ ಮೆರಿಡಿತ್ ಕೊಪಿತ್ ಲೆವಿನ್ ಯುವರ್​ಸ್ಟೋರೊ ಜೊತೆಗಿನ ಮಾತುಕಥೆಯಲ್ಲಿ ಒಪ್ಪಿಕೊಂಡಿದ್ದಾರೆ.

ವಾಲ್​​ಸ್ಟ್ರೀಟ್ ಜರ್ನಲ್ಸ್​​ನ ಪ್ರಕಾಶನ ಸಂಸ್ಥೆ ನ್ಯೂಸ್ ಕಾರ್ಪ್ಸ್​​ ಡಾ. ಜೋನ್ಸ್ & ಕೋನ ಕಥೆಯೂ ಇದಕ್ಕಿಂತ ಭಿನ್ನವೇನಿಲ್ಲ. ವಾಲ್​​ಸ್ಟ್ರೀಟ್​​ ಜರ್ನಲ್ ಸಂಸ್ಥೆಯ ಮಾರ್ಕೆಟ್ ವಾಚ್, ಜರ್ನಲ್, ಮುಂತಾದ ಪ್ರಕಾಶನಗಳ ಬಗ್ಗೆ ಅರ್ಧಕ್ಕಿಂತ ಹೆಚ್ಚು ಗ್ರಾಹಕ ಭೇಟಿಗಳು ನಡೆದಿದ್ದು ಮೊಬೈಲ್ ಮಾಧ್ಯಮದಲ್ಲೇ. ಆದರೆ ಬಂದ ಆದಾಯ ಮಾತ್ರ ಶೇ.20. ಇಲ್ಲಿ ಮತ್ತೆ ಮತ್ತೆ ಕಂಡುಬರುತ್ತಿರುವ ತೊಡಕೆಂದರೇ, ಬಹುತೇಕ ಪ್ರಕಾಶಕರು ಏಕರೂಪ ಆ್ಯಡ್ ನೀತಿಯನ್ನೇ ಅನುಸರಿಸುತ್ತಿರುವುದು ಪ್ರಕಾಶನ ಸಂಸ್ಥೆಯ ತಲೆನೋವಿಗೆ ಕಾರಣವಾಗಿದೆ.

2. ಪೇಯ್ಡ್ ಕಂಟೆಂಟ್​​ಗಳೂ ತೊಂದರೆಯಲ್ಲಿವೆ

2009ರಲ್ಲಿ ವಾಲ್​​ಸ್ಟ್ರೀಟ್ ಜರ್ನಲ್​ನ ಜಿಎಫ್​​ಕೆ ರಿಸರ್ಚ್ ಸಂಸ್ಥೆ ಜಗತ್ತಿನಾದ್ಯಂತ ಆನ್​ಲೈನ್ ಪ್ರಕಾಶನ ಸಂಸ್ಥೆಗಳಿಗೆ ಈ ಬಗ್ಗೆ ಮಾಹಿತಿ ನೀಡಿತ್ತು. ಇದು ನಡೆಸಿದ ಸಮೀಕ್ಷೆಯಂತೆ ಎಲ್ಲಾ ಇಂಟರ್​​ನೆಟ್ ಕಂಟೆಂಟ್​​ಗಳು ಉಚಿತ ಹಾಗೂ ಜಾಹೀರಾತು ಮುಕ್ತವಾಗಿರಬೇಕು ಅಥವಾ ಎಲ್ಲಾ ಇಂಟರ್​ನೆಟ್ ಕಂಟೆಂಟ್​​ಗಳು ಉಚಿತವಾಗಿ ದೊರಕುವಂತಿರಬೇಕು ಎಂದು ಗ್ರಾಹಕರು ಇಚ್ಛಿಸಿದ್ದರು. ಕೇವಲ ಶೇ. 12ರಷ್ಟು ಅಂತರ್ಜಾಲ ಬಳಕೆದಾರರು ಮಾತ್ರ ಆನ್​ಲೈನ್ ಕಂಟೆಂಟ್​​ಗಳಿಗೆ ಪಾವತಿಸಲು ಸಿದ್ಧರಾಗಿರುವ ಸಂಗತಿ ಈ ಸಮೀಕ್ಷೆಯಿಂದ ಹೊರಬಿದ್ದಿತ್ತು.

ಯೂಟರ್ಸ್ ನೀಡಿರುವ ಹೊಸ ವರದಿಯ ಅನ್ವಯ ಅಮೇರಿಕಾದಲ್ಲಿ ಶೇ.11ರಷ್ಟು ಗ್ರಾಹಕರು ಮಾತ್ರ ಆನ್​ಲೈನ್ ನ್ಯೂಸ್​​ಗಳಿಗೆ ಪಾವತಿ ಮಾಡಲು ಸಿದ್ಧರಿದ್ದಾರೆ. 2013ರಿಂದ ಈ ಕ್ಷೇತ್ರದಲ್ಲಿ ಯಾವುದೇ ಪ್ರಗತಿ ಇಲ್ಲ ಅನ್ನುವ ಸಂಗತಿಯನ್ನೂ ಇದರ ವರದಿ ಬಹಿರಂಗಗೊಳಿಸಿದೆ. ವಿಶ್ವದಾದ್ಯಂತ ಇದರ ಪ್ರಮಾಣ ಶೇ.10ಕ್ಕಿಂತ ಕಡಿಮೆ ಇದೆ.

ವಿಶ್ವದ ಇತರೆ ಮಾರುಕಟ್ಟೆಯಂತೆ ಭಾರತವೂ ಈ ವಿಷಯದಲ್ಲಿ ಸಾಕಷ್ಟು ಹಿಂದಿದೆ. ಭಾರತದಲ್ಲಿ ಇದರ ಪ್ರಮಾಣ ಶೇ.27 ಅಂದರೆ, 1285 ಮಿಲಿಯನ್ ಒಟ್ಟು ಜನಸಂಖ್ಯೆಯಲ್ಲಿ 350 ಮಿಲಿಯನ್. ಇಂಟರ್​​ನೆಟ್ ಯಾವುದೇ ಕಂಟೆಂಟ್ ಉಚಿತವಾಗಿ ಸಿಕ್ಕರೇ ಮಾತ್ರ ಬಳಸಲು ಸಿದ್ಧ ಅನ್ನುವ ಮನಸ್ಥಿತಿ ಭಾರತೀಯ ಗ್ರಾಹಕರದ್ದಾಗಿದೆ. ಪಾವತಿ ಆಧಾರದಲ್ಲಿ ಕಂಟೆಂಟ್​​ಗಳ ಒದಗಿಸಲು ಪ್ರಕಾಶಕರು ಸಾಕಷ್ಟು ಕಸರತ್ತು ನಡೆಸುತ್ತಿದ್ದಾರಾದರೂ ಯಾವುದೇ ಪ್ರಯೋಜನ ಕಾಣುತ್ತಿಲ್ಲ.

3. ಸ್ಥಳೀಯ ಜಾಹಿರಾತುಗಳ ಸವಾಲುಗಳು

ಡಿಜಿಟಲ್ ಮೀಡಿಯಾ ಹಾಗೂ ಜಾಹೀರಾತು ಕ್ಷೇತ್ರದಲ್ಲಿ ನೇಟಿವ್ ಅಥವಾ ಸ್ಥಳೀಯತೆ ಅತೀ ಮುಖ್ಯ ಆಯಾಮ. ಒಂದೇ ಮಾನದಂಡ ಬಳಸಿ ಜಾಹಿರಾತು ಸೃಷ್ಟಿಸುವುದು ಪ್ರಕಾಶಕರ ಪಾಲಿಗೆ ಹಾಗೂ ಜಾಹೀರಾತುದಾರರ ಪಾಲಿಗೆ ಅತ್ಯಂತ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಸ್ಥಳೀಯ ಜಾಹೀರಾತುಗಳ ವ್ಯಾಪ್ತಿಯ ಬಗ್ಗೆ ಸಮೀಕ್ಷೆ ನಡೆಸಿರುವ ಬಿಐ ಇಂಟೆಲಿಜೆನ್ಸ್, 2013ರಲ್ಲಿ 4.7 ಬಿಲಿಯನ್ ಇದ್ದ ವಹಿವಾಟು ಈ ವರ್ಷಾಂತ್ಯದಲ್ಲಿ ಇದು 7.9 ಬಿಲಿಯನ್ ಡಾಲರ್ ವಹಿವಾಟು ನಡೆಸುವ ಹಾಗೂ 2018ರ ಸುಮಾರಿಗೆ 21 ಬಿಲಿಯನ್ ಡಾಲರ್ ವಹಿವಾಟಿನಷ್ಟು ಏರಿಕೆಯಾಗುವ ಸಾಧ್ಯತೆ ಗುರುತಿಸಿದ್ದಾರೆ. 2014ರಲ್ಲಿ ಟೈಮ್ಸ್ 18 ಮಿಲಿಯನ್ ಮೌಲ್ಯದ ನೇಟಿವ್ ಆ್ಯಡ್ಸ್ ಮಾರಾಟ ಮಾಡಿತ್ತು. ಫಲಿತಾಂಶವಾಗಿ 182.2 ಮಿಲಿಯನ್ ಡಿಜಿಟಲ್ ಆ್ಯಡ್ ಆದಾಯ ಗಳಿಸಿಕೊಂಡಿದೆ.

ಪ್ರಸಿದ್ಧ ಬಝ್​ಸ್ಪೀಡ್ 2014ರಲ್ಲಿ 100 ಮಿಲಿಯನ್ ಆದಾಯ ಬಾಚಿಕೊಂಡಿದೆ. ಆದರೂ ಯಾವ ಪ್ರಮಾಣದಲ್ಲಿ ನೇಟಿವ್ ಆ್ಯಡ್​​​ ಕಾರ್ಯಾಚರಣೆ ನಡೆಸಬೇಕು ಅನ್ನುವುದರ ಬಗ್ಗೆ ಸ್ಪಷ್ಟತೆ ಸಿಕ್ಕಿಲ್ಲ. ಆದರೆ ನೇಟೀವ್ ಆ್ಯಡ್ ಹಾಗೂ ವೀಡಿಯೋ ಹೊಸ ಪ್ರಕಾಶಕರ ಪಾಲಿಗೆ ಲಾಭದಾಯಕ ಅನ್ನುವ ಸಂಗತಿಯ ಚರ್ಚೆ ಸಧ್ಯ ಮಾರುಕಟ್ಟೆಯಲ್ಲಿದೆ.

ಸ್ಕೂಫ್​​ಫೂಫ್, ದಿ ಹಫಿಂಗ್ಟನ್ ಪೋಸ್ಟ್, ದಿ ಕ್ವಿಂಟ್ ಮುಂತಾದ ನೇಟಿವ್ ಆ್ಯಡ್ ಮುಂತಾದ ಭಾರತೀಯ ಸಂಸ್ಥೆಗಳು, ಸ್ಥಳೀಯ ಜಾಹೀರಾತಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡುತ್ತಿವೆ.

ಆದರೆ ಇಲ್ಲೂ ನೇಟೀವ್ ಆ್ಯಡ್​​ಗೆ ಅದರದ್ದೇ ಆದ ಸಾಕಷ್ಟು ಸವಾಲುಗಳಿವೆ. ಸ್ಥಳೀಯ ಜಾಹಿರಾತಿನ ವ್ಯಾಪ್ತಿ ಹಾಗೂ ಮಾಪನಕ್ಕೆ ಸಂಬಂಧಿಸಿದಂತೆ ಅನೇಕ ತೊಡಕುಗಳಿವೆ. ಜಾಹೀರಾತು ಬರವಣಿಗೆಯ ಬಧ್ಧಿಕ ಸಾಮರ್ಥ್ಯ ಹಾಗೂ ಬಳಕೆದಾರ ಅನುಭವಗಳ ಕುರಿತಾಗಿ ಸಾಕಷ್ಟು ಸಂಶೋಧನೆ ಹಾಗೂ ಅಧ್ಯಯನ ನಡೆಸಿ ಅಭಿವೃದ್ಧಿಪಡಿಸಬೇಕಾದ ಅಗತ್ಯವಿದೆ.

image


ನೇಟೀವ್ ಆ್ಯಡ್​​​ಗಳು ಬಳಕೆದಾರರನ್ನು ದಾರಿ ತಪ್ಪಿಸದಂತೆ ನೋಡಿಕೊಳ್ಳಬೇಕಿದೆ. ಸಾಮಾನ್ಯ ಲೇಖನಕ್ಕಿಂತ ಇವು ವಿಭಿನ್ನ ರೀತಿಯಲ್ಲಿ ಪ್ರಚುರಪಡಿಸಬೇಕಿದೆ. ನೇಟೀವ್ ಆ್ಯಡ್ ಕುರಿತಾಗಿ ಓದುಗರು ಅಥವಾ ಗ್ರಾಹಕರು ಗೊಂದಲಪಟ್ಟುಕೊಂಡಿದ್ದರ ಬಗ್ಗೆ ಇತ್ತೀಚೆಗಷ್ಟೆ ವರದಿಯೊಂದು ಪ್ರಕಟವಾಗಿತ್ತು.

ನೇಟಿವ್ ಆ್ಯಡ್ ಬಗ್ಗೆ ಟಬೂಲಾ ಸಂಸ್ಥೆಯ ಸಿಇಓ ಆ್ಯಡಂ ಸಿಂಗೋಲ್ಡಾ ಹೇಳುವಂತೆ, ಇದೊಂದು ಸಣ್ಣ ಮಾರುಕಟ್ಟೆ ಹೊಂದಿದ್ದರೂ, ಮಾರ್ಕೇಟರ್​​ಗಳು ಹಾಗೂ ಪ್ರಕಾಶಕರಿಗೆ ದೊಡ್ಡ ಅವಕಾಶ ಕಲ್ಪಿಸಿದೆ. ಈ ಕ್ಷೇತ್ರದಲ್ಲಿ ನಿರಂತರ ಸಂಶೋಧನೆ ಅಗತ್ಯವಿದೆ. ನೇಟಿವ್ ಆ್ಯಡ್​​ನ 60 ಬಿಲಿಯನ್ ಡಾಲರ್​​ನ ಡಿಸ್​​ಪ್ಲೇ ಬೋರ್ಡ್ ಜಾಹೀರಾತು, ಯಾವುದೇ ಹೂಡಿಕೆದಾರರ ಆಸಕ್ತಿ ಕೆರಳಿಸುವ ಸಂಗತಿಯಾಗಿದೆ.

4. ಸಾಮಾಜಿಕ ಜಾಲತಾಣಗಳು ಈಗ ಹೊಸ ಪ್ರಕಾಶಕರು

ಸುಮಾರು ಶೇ.41ರಷ್ಟು ಜನ ಫೇಪ್​​ಬುಕ್ ಮಾಹಿತಿಯನ್ನು ಅನುಸರಿಸುತ್ತಿದ್ದಾರೆ. ಇದೇ ಸಾಲಿಗೆ ಶೇ.11 ರಷ್ಟು ಟ್ವಿಟರ್ ಬಳಕೆದಾರರೂ ಸೇರಿಕೊಂಡಿದ್ದಾರೆ. ಯೂಟರ್ಸ್ ಡಿಜಿಟಲ್ ನ್ಯೂಸ್ 2015ರಲ್ಲಿ ನೀಡಿರುವ ವರದಿಯನ್ವಯ, ಸ್ಪೇನ್ ಹಾಗೂ ಬ್ರೆಜಿಲ್​​ನಂತಹ ರಾಷ್ಟ್ರಗಳಲ್ಲೂ ಫೇಸ್​​ಬುಕ್ ಹಾಗೂ ವಾಟ್ಸ್ಆ್ಯಪ್​​ನಂತಹ ಸಾಮಾಜಿಕ ಜಾಲತಾಣಗಳೂ ಹೊಸ ಪ್ರಕಾಶನ ಸಂಸ್ಥೆಗಳಂತೆ ಕಾರ್ಯನಿರ್ವಹಿಸುತ್ತಿವೆ. ಆದರೆ ಇಟಲಿ, ಸ್ಪೇನ್ ಹಾಗೂ ಜರ್ಮನಿಗಳಲ್ಲಿ ಶೇ. 50ಕ್ಕಿಂತ ಹೆಚ್ಚು ಜನರು ನ್ಯೂಸ್ ಹಾಗೂ ಹೊಸ ಮಾಹಿತಿಗಳನ್ನು ಸರ್ಚ್ ಎಂಜಿನ್​​ಗಳ ಮೂಲಕ ಅನ್ವೇಷಿಸುತ್ತಿದ್ದಾರೆ. 2015ರಿಂದ ಪ್ರಸಿದ್ಧ ಸಾಮಾಜಿಕ ಜಾಲತಾಣಗಳಾದ ಲಿಂಕ್ದಿನ್, ಫೇಸ್​​ಬುಕ್, ಗೂಗಲ್, ಟ್ವಿಟರ್​​ಗಳು ಹೊಸ ಪ್ರಕಾಶಕರಂತೆ ಗುರುತಿಸಿಕೊಳ್ಳುತ್ತಿವೆ.

ಸಾಮಾಜಿಕ ಜಾಲತಾಣ ಫೇಸ್​​ಬುಕ್ ತನ್ನಲ್ಲಿ ಇನ್ಸ್​ಸ್ಟಂಟ್ ಲೇಖನಗಳನ್ನು ಪ್ರಕಟಗೊಳಿಸುವ ಸೌಕರ್ಯ ಹೊಂದಿದೆ. ಈ ಲೇಖನಗಳನ್ನು ನ್ಯೂಯಾರ್ಕ್ ಟೈಮ್ಸ್, ಬಝ್​ಸ್ಪೀಡ್, ನ್ಯಾಷನಲ್ ಜಿಯೋಗ್ರಾಫಿಕ್, ಮುಂತಾದ ಜಾಗತಿಕ ತಾಣಗಳೊಂದಿಗೆ ಶೇರ್ ಮಾಡಬಹುದಾದ ಸೌಲಭ್ಯವೂ ಐಫೋನ್​​ನ ಆ್ಯಪ್​​ನಲ್ಲಿ ಫೇಸ್​​ಬುಕ್ ಹೊಂದಿದೆ.

ಇತ್ತೀಚೆಗಷ್ಟೇ ಫೇಸ್​​ಬುಕ್ ಪ್ರತೀದಿನವೂ 1 ಬಿಲಿಯನ್ ಬಳಕೆದಾರರ ಗುರು ತಲುಪಿದೆ. ಅದರಲ್ಲಿ ಶೇ.30ರಷ್ಟು ಆ್ಯಡ್ ಹಾಗೂ ಮಾರಾಟ ಫೇಸ್​ಬುಕ್ ವೇದಿಕೆಯಿಂದ ಸಾಧ್ಯವಾಗುತ್ತಿದೆ ಅನ್ನೋದು ಗಮನಿಸಬೇಕಾದ ಸಂಗತಿ.

ಗೂಗಲ್ ಬ್ಲಾಕಿಂಗ್​​ನಲ್ಲಿ ಫೇಸ್​​ಬುಕ್ ಹಾಗೂ ಟ್ವಿಟರ್​ನಂತಹ ಸಾಮಾಜಿಕ ಜಾಲತಾಣ ಮುಂಚೂಣಿ ಸ್ಥಾನ ಗಿಟ್ಟಿಸಿಕೊಂಡಿವೆ. ಸೆಪ್ಟೆಂಬರ್ 2013ರಲ್ಲಿ 16.4ರಷ್ಟು ಸಾಮಾಜಿಕ ಪ್ರಕಾಶನ ಸಂಸ್ಥೆಗಳು 200 ಬೇರೆ ಬೇರೆ ವೆಬ್​ಸೈಟ್ ಜಾಹೀರಾತುಗಳಿಗೆ ವೇದಿಕೆ ಒದಗಿಸಿವೆ. ಈ ಪ್ರಮಾಣ ಈಗ 29.5 ರಷ್ಟಾಗಿದೆ.

ನ್ಯೂಸ್ವಿಪ್ ಅವಲೋಕನದ ಪ್ರಕಾರ ಟ್ವಿಟರ್ ಸಹ ಬಳಕೆದಾರರ ಮೆಚ್ಚಿನ ಪ್ರಕಾಶನ ಸಂಸ್ಥೆಯಾಗಿದೆ. ಕಳೆದ ಡಿಸೆಂಬರ್ ವರೆಗೆ ಬಿಬಿಸಿ ಸುಮಾರು 3.8 ಮಿಲಿಯನ್ ಟ್ವೀಟ್​​ಗಳ ಮೂಲಕ ಟ್ವಿಟರ್​ನೊಂದಿಗೆ ಗುರುತಿಸಿಕೊಂಡಿದೆ.

ಯಾವುದೇ ಆನ್​ಲೈನ್ ಪ್ರಕಾಶಕರಿಗಾದರೂ ಈ ಲೇಖನ ಗಮನದಲ್ಲಿಟ್ಟುಕೊಂಡು ಮುಂದುವರೆಯಬೇಕಾದ ಅತ್ಯವಶ್ಯಕ ನೀತಿ ಪಾಠವಾಗಿದೆ.