ಶ್ವಾನಗಳಿಗಾಗಿ ಬೆಸ್ಟ್ ಬೇಕರಿ- ನಿಮ್ಮ ಮುದ್ದುಮರಿ ಬರ್ತಡೇಗೂ ಕೇಕ್‍ಕಟ್ ಮಾಡಿ

ಪೂರ್ವಿಕಾ

ಶ್ವಾನಗಳಿಗಾಗಿ ಬೆಸ್ಟ್ ಬೇಕರಿ- ನಿಮ್ಮ ಮುದ್ದುಮರಿ ಬರ್ತಡೇಗೂ ಕೇಕ್‍ಕಟ್ ಮಾಡಿ

Saturday January 02, 2016,

2 min Read

ಎಲ್ಲರ ಜೀವನದಲ್ಲೂ ಹುಟ್ಟುಹಬ್ಬಅಂದ್ರೆ ಅದೇನೋ ಸ್ಪೆಷಲ್. ವರ್ಷಪೂರ್ತಿ ಹೇಗೆ ಇದ್ದರೂ ಕೂಡ ಹುಟ್ಟಿದ ದಿನ ಮಾತ್ರ ಸ್ಪೆಷಲ್‍ ಆಗಿರಬೇಕು ಅನ್ನೋದು ಪ್ರತಿಯೊಬ್ಬರಿಗೂ ಆಸೆ ಆಗಿರುತ್ತೆ. ಅದೇರೀತಿ ನಾವು ಪ್ರೀತಿಸೋ ಹಾಗೂ ಪ್ರೀತಿ ಮಾಡೋ ಪ್ರತಿಯೊಬ್ಬರ ಹುಟ್ಟುಹಬ್ಬವೂ ವಿಶೇಷವಾಗಿ ಆಚರಿಸಬೇಕು ಅನ್ನೋದು ಎಲ್ಲರಿಗೂ ಇದ್ದೇ ಇರುತ್ತೆ. ಇನ್ನೂ ಈಗಿನ ದಿನಗಳಲ್ಲಿ ಪ್ರತಿಕುಟುಂಬದಲ್ಲಿ ಅಪ್ಪ, ಅಮ್ಮ ,ಅಣ್ಣ, ತಮ್ಮಇವ್ರಲ್ಲರ ಜೊತೆಯಲ್ಲಿ ಒಂದು ನಾಯಿ ಮರಿ ಇಲ್ಲ ಅಂದ್ರೆ ಅದು ಫ್ಯಾಮಿಲಿ ಅಂತ ಅನ್ನಿಸಿಕೊಳ್ಳದೇ ಇಲ್ಲ. ಇನ್ನೂ ಮನೆಯಲ್ಲಿ ಎಲ್ಲರ ಹುಟ್ಟು ಹಬ್ಬವನ್ನ ಸೆಲೆಬ್ರೇಟ್ ಮಾಡೋತರ ಮುದ್ದು ನಾಯಿ ಮರಿಯ ಬರ್ತಡೇಯನ್ನೂ ಆಚರಣೆ ಮಡಲೇಬೇಕು. ಆದ್ರೆ ನಾಯಿಗಳಿಗೆನಾವು ತಿನ್ನೋ ಕೇಕ್ ಪೇಸ್ಟ್ರೀಗಳನ್ನ ತಿನ್ನಿಸಿದ್ರೆ ಅವುಗಳ ಆರೋಗ್ಯದಲ್ಲಿ ಹೆಚ್ಚು ಕಡಿಮೆ ಆಗುತ್ತೆ ಅನ್ನೋ ಆತಂಕ ಎಲ್ಲಾ ಶ್ವಾನಗಳ ಮಾಲೀಕರಿಗೆ ಇರುತ್ತೆ. ಆದ್ರೆಇನ್ನು ಮುಂದೆ ಇಂತಹ ಚಿಂತೆಗಳನ್ನ ಮಾಡಬೇಕಿಲ್ಲ. ಕಾರಣ ನಿಮ್ಮ ಪ್ರೀತಿಯ ಶ್ವಾನಗಳಿಗಾಗಿ ಬೆಂಗಳೂರಿನಲ್ಲಿ ಡಾಗ್ಸ್ ಬೆಸ್ಟ್ ಬೇಕರಿಗಳು ಹುಟ್ಟುಕೊಂಡಿವೆ.

image


ಇಲ್ಲಿವೆ ವೆರೈಟಿ ಆಫ್‍ ಡಾಗ್ಸ್​ಕೇಕ್‍ ಅಂಡ್‍ ಕುಕ್ಕಿಸ್..!

ಪಾವ್‍ ಡಿಲೈಟ್ಸ್, ಪಪ್‍ ಕೇಕ್, ಬೋನ್‍ಅಪಿಟೈಟ್ ಇವು ನಿಮ್ಮ ಪ್ರೀತಿಒಯ ಶ್ವಾನಗಳಿಗಾಗಿ ಹುಟ್ಟಿಕೊಂಡಿರೋ ಡಾಗ್ಸ್​​ ಬೇಕರಿಗಳು, ಈ ಬೇಕರಿಗಳಲ್ಲಿ ಮಾಡೋ ಫುಡ್ಸ್​​ ತುಂಬಾ ಟೇಸ್ಟೀಯಾಗಿರುತ್ತೆ. ಶ್ವಾನದ ಆರೋಗ್ಯಕ್ಕೆ ಬೇಕಿರೋ ನ್ಯೂಟ್ರೀಷಿಯನ್‍ಯುಕ್ತ ಆಹಾರವನ್ನ ಇಲ್ಲಿ ಸೇರಿಸಲಾಗುತ್ತೆ. ಇಲ್ಲಿ ಸಿಗೋ ಪ್ರತಿ ಫುಡ್ ಮನೆಯಲ್ಲೇ ತಯಾರಿಸಲಾಗುತ್ತೆ ಹಾಗೂ ಸ್ವತಃ ಶ್ವಾನ ಪ್ರಿಯರೇ ಈ ಆಹಾರವನ್ನ ತಯಾರು ಮಾಡುತ್ತಾರೆ. ಈ ಮೂರು ಬೇಕರಿಗಳು ಆನ್​ಲೈನ್ ಸ್ಟೋರ್ ಗಳನ್ನ ಹೊಂದಿದ್ದಾರೆ. ಇಂಟರ್ನೆಟ್ ನಲ್ಲಿ ಲಾಗಿನ್ ಆಗಿ ಪಾವ್‍ಡಿಲೈಟ್ಸ್, ಪಪ್‍ ಕೇಕ್‍ ಅಥವಾ ಬೋನ್‍ ಅಪಿಟೈಟ್ಸ್​​ ಅಂತ ಸರ್ಚ್ ಮಾಡಿದ್ರೆ ಆಯ್ತು ಅಲ್ಲಿ ನಿಮಗೆ ಬೇಕಾದ ಸಾಕಷ್ಟು ಆಯ್ಕೆಗಳು ಸಿಗುತ್ತೆ. ಕೇವಲ ಬರ್ತ್​ ಡೇ ಕೇಕ್​ಗಳು ಮಾತ್ರ ಅಲ್ಲದೇ ಇಲ್ಲಿ ಡಾಗ್ ಫುಡ್ಸ್​​ಅನ್ನ ಬಳಸಿ ಕೇಕ್ ಮಾಡಲಾಗುತ್ತೆ ಸ್ಪೆಷಲ್‍ ಕುಕ್ಕಿಸ್ ಲಭ್ಯವಿರುತ್ತೆ. ಇನ್ನೂ ನಿಮ್ಮರೀತಿಯಲ್ಲೇ ಸಂಜೆಯಾದ್ರೆ ಸಾಕು ಸ್ನಾಕ್ಸ್​​ತಿನ್ನೋ ಟೈಂನಲ್ಲಿ ನಿಮ್ಮ ಮುದ್ದು ಮರಿಗೂ ಸ್ನಾಕ್ಸ್​​​ ತಿನ್ನೋದಕ್ಕೆ ಅಂತ ಈ ಸ್ಪೆಷಲ್ ಬಿಸ್ಕೆಟ್​ಗಳನ್ನ ಮಾರಾಟಕ್ಕಿಡಲಾಗಿದೆ. ಡೊಡ್ಡ ಕೇಕ್​​ಗಳು ಹೆಚ್ಚಾಗುತ್ತೆ ಅಂತ ನಿಮಗೆ ಅನ್ಸುದ್ರೆ ಇಲ್ಲಿ ಕಪ್ ಕೇಕ್​​ಗಳು ಲಭ್ಯವಿದೆ. ಕಪ್‍ಕೇಕ್ ಮತ್ತು ಬರ್ತ್​ ಡೇ ಕೇಕ್ ಮಾತ್ರವಲ್ಲದೆ ಡಾಗ್ ಬೇಕರಿಯಲ್ಲಿ ಬನಾನ ಬಿಸ್ಕೆಟ್‍ ಆಪಲ್‍ಕುಕ್ಕಿಸ್, ರೆಡ್ ವೆಲ್ವೆಟ್‍ ಕುಕ್ಕೀಸ್ ಹೀಗೆ ಇನ್ನೂ ಅನೇಕ ವಿಧವಾದ ಕೇಕ್​​ಗಳು ನಿಮ್ಮ ನಾಯಿ ಮರಿಗಳಿಗಾಗಿ ಲಭ್ಯವಿದೆ.

image


ಶ್ವಾನ ಪ್ರಿಯರಿಂದಲೇ ಶುರುವಾಯ್ತುಡಾಗ್ ಬೇಕರಿ

ಈ ಶ್ವಾನ ಬೇಕರಿಯನ್ನ ಪ್ರಾರಂಭ ಮಾಡಿರೋ ಮಾಲೀಕರು ಶ್ವಾನ ಪ್ರಿಯರೇ ಆಗಿರೋದ್ರಿಂದ ನಾಯಿಗಳಿಗೆ ಏನು ಇಷ್ಟ ಏನು ಇಷ್ಟ ಆಗೋಲ್ಲ ಅನ್ನೋದನ್ನ ತಿಳಿದುಕೊಂಡು ಈ ಬೇಕರಿಯನ್ನ ಪ್ರಾರಂಭ ಮಾಡಿದ್ದಾರೆ. ಅಷ್ಟೇ ಅಲ್ಲದೆ ಕ್ಯಾಪಾ ಅವ್ರನ್ನ ಬೇಟಿ ಮಾಡಿ ಯಾವ ರೀತಿಯ ಪದಾರ್ಥಗಳನ್ನ ಬಳಸಿದ್ರೆ ಶ್ವಾನಗಳ ಆರೋಗ್ಯಕ್ಕೆ ಒಳ್ಳೆಯದಾಗುತ್ತೆ, ಅವುಗಳಿಗೆ ಏನನ್ನ ನೀಡಿದ್ರೆ ಆರೋಗ್ಯ ವೃದ್ದಿಸುತ್ತೆ ಅನ್ನೋದನ್ನ ತಿಳಿದುಕೊಂಡು ಈ ಫುಡ್​​ಗಳನ್ನ ತಯಾರು ಮಾಡುತ್ತಾರೆ. ಆರಂಭದಲ್ಲಿ ಮನೆಯ ಮಟ್ಟದಲ್ಲಿ ಪ್ರಾರಂಭವಾದ ಈ ಡಾಗ್ ಬೇಕರಿ ಈಗ ದೇಶದ ಮಟ್ಟದಲ್ಲಿ ಫೇಮಸ್‍ ಆಗಿದೆ. ಇನ್ನು ನಿಮ್ಮ ಮುದ್ದು ಮರಿಗಳಿಗೆ ಕೇಕ್ ಬುಕ್ ಮಾಡಬೇಕು ಅಂದ್ರೆ ನಿಮಗೆ ಬೇಕಾದ ದಿನದಕ್ಕಿಂತ ಮೂರು ದಿನಗಳ ಮುಂಚೆಯೇ ಬುಕ್ ಮಾಡಬೇಕು. ಇನ್ನು ಡಾಗ್‍ಕೇಕ್ ಗಳು ಹೋಂ ಡೆಲವರಿಯಲ್ಲೂ ಕೊಡಲಾಗುತ್ತೆ. ಅದ್ರ ಪೇಮೆಂಟ್‍ ಅನ್ನ ಆನ್​ಲೈನ್​​ ಮೂಲಕ ಪೇ ಮಾಡಬಹುದು. ಇನ್ನು ಬೆಂಗಳೂರಿನಲ್ಲಿ ಮಾತ್ರವಲ್ಲದೇ ದೇಶದ ಪ್ರತಿ ಮೂಲೆಗೂ ಪೆಟ್ ಫುಡ್ ಗಳನ್ನ ಕಳಸಲಾಗುತ್ತದೆ. ನಿಮಗೂ ನಿಮ್ಮ ಪೆಟ್ ಬರ್ತ್​ ಡೇಯನ್ನ ಸ್ಪೆಷಲ್ ಆಗಿ ಕೇಕ್‍ಕಟ್ ಮಾಡಿ ಸೆಲೆಬ್ರೇಟ್ ಮಾಡಬೇಕು ಅಂದ್ರೆ ಒಮ್ಮೆ ಲಾಗಿ ಇನ್ ಆಗಿ.