ಕೈಗೆಟಕುವ ಬೆಲೆಯಲ್ಲಿ ಅಪ್ಪಟ ಲೆದರ್ ಉತ್ಪನ್ನಗಳು..!

ಆರಾಧ್ಯ

ಕೈಗೆಟಕುವ ಬೆಲೆಯಲ್ಲಿ ಅಪ್ಪಟ ಲೆದರ್ ಉತ್ಪನ್ನಗಳು..!

Tuesday January 26, 2016,

2 min Read

ದಿನಕಳೆದಂತೆ ಇ- ಕಾಮರ್ಸ್ ಉದ್ಯಮ, ಭಾರತದ ಎಲ್ಲಾ ಕ್ಷೇತ್ರಗಳನ್ನು ಆವರಿಸಿಕೊಳ್ಳುತ್ತಿದೆ. ಅಲ್ಲದೆ, ಇ ಕಾಮರ್ಸ್ ವ್ಯವಹಾರ, ಉತ್ಪನ್ನ ಹಾಗೂ ಸೇವೆಗಳ ಆಧಾರದ ಮೇಲೆವಿಂಗಡಣೆಯಾಗುತ್ತಿದೆ. ಇದಕ್ಕೆ ಹೊಸ ಸೆರ್ಪಡೆ ಲೆದರ್ ಉತ್ಪನ್ನಗಳ ಎಕ್ಸ್​ಕ್ಲೂಸಿವ್ ಆನ್​ಲೈನ್ ಸ್ಟೋರ್ pakkaleather.com. ಹೆಸರೇ ಸೂಚಿಸುವಂತೆ ಪಕ್ಕಾಲೆದರ್ ಡಾಟ್ ಕಾಮ್​​ ಗುಣಮಟ್ಟದ ಗ್ಯಾರಂಟಿಯನ್ನು ನೀಡುತ್ತದೆ. ಈ ವರ್ಷದ ಜನವರಿ 1 ರಿಂದ ಆನ್​ಲೈನ್​ನಲ್ಲಿ ಪಕ್ಕಾಲೆದರ್ ಡಾಟ್ ಕಾಮ್ ಗ್ರಾಹಕರಿಗೆ ಉತ್ಪನ್ನಗಳನ್ನು ಪೂರೈಸಲು ಪ್ರಾರಂಭಿಸಿದೆ.

image


ಭಾರತದಲ್ಲಿ ಉತ್ಪಾದನೆಯಾಗುವ ಫುಟ್​ವೇರ್​ಗಳ ಪೈಕಿ ಶೇ.80ರಷ್ಟು ಸಿಂಥೆಟಿಕ್ ಲೆದರ್ ಉತ್ಪನ್ನಗಳಾಗಿವೆ. ಶೇಕಡಾ 20ರಷ್ಟು ಮಾತ್ರ ಅಪ್ಪಟ ಲೆದರ್ ಉತ್ಪನ್ನಗಳಾಗಿದ್ದು, ಸಿಂಥೆಟಿಕ್ ಲೆದರ್​​ ಭರಾಟೆಯಲ್ಲಿ ಅಪ್ಪಟ ಲೆದರ್ ಉತ್ಪನ್ನಗಳನ್ನು ಗುರುತಿಸುವುದು ಗ್ರಾಹಕರಿಗೆ ಕಠಿಣವಾಗಿದೆ. ಈ ಹಿನ್ನಲೆ ಪಕ್ಕಾಲೆದರ್ ಡಾಟ್ ಕಾಮ್, ಅಂತರಾಷ್ಟ್ರೀಯ ವಿನ್ಯಾಸದ ಅಪ್ಪಟ ಲೆದರ್​ ಉತ್ಪನ್ನಗಳನ್ನು ಕೈಗೆಟಕುವ ಬೆಲೆಯಲ್ಲಿ ಗ್ರಾಹಕರಿಗೆ ತಲುಪಿಸುವ ಗುರಿಯನ್ನು ಹೊಂದಿದೆ.

ಭಾರತೀಯ ಲೆದರ್ ಉತ್ಪನ್ನಗಳ ಮಾರುಕಟ್ಟೆ ಅತ್ಯಂತ ದೊಡ್ಡ ಅಸಂಘಟಿತ ವಲಯವಾಗಿದ್ದು, ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೋತ್ಪನ್ನಗಳು ಒಂದೇ ಸೂರಿನಡಿಯಲ್ಲಿ ಲಭ್ಯವಾಗುವಂತೆಮಾಡಲು ಮೆಟಾಮಾರ್ಪೋಸಿಸ್ ವೆಂಚರ್ಸ್ ಸಂಸ್ಥೆ, pakkaleather.comಎಂಬ ಇ- ಕಾಮರ್ಸ್ ಅನ್ನು ಪರಿಚಯಿಸುತ್ತಿದೆ.

pakkaleather.comಇ- ಕಾಮರ್ಸ್ ನಲ್ಲಿ ಲಭ್ಯವಾಗುವ ಉತ್ಪನ್ನಗಳು ಉತ್ಕೃಷ್ಟ ಗುಣಮಟ್ಟದ್ದಾಗಿದ್ದು, ಚರ್ಮದ ಉತ್ಪನ್ನಗಳ ಸಂಗ್ರಹದ ಹವ್ಯಾಸ ಮತ್ತು ದಿನನಿತ್ಯ ಬಳಸುವ ಕ್ರೇಜ್​ ಹೊಂದಿರುವ ಯುವ ಜನತೆ ಹಾಗೂ ಕೆಳ ಮತ್ತು ಮಧ್ಯಮ ವರ್ಗದ ಜನರನ್ನು ಸೆಳೆಯುವಂತಹ ಉತ್ಪನ್ನಗಳಾಗಿವೆ. ಆರಂಭಿಕ ಕೊಡುಗೆಯಾಗಿ pakkaleather.com, ತನ್ನ ರಪ್ತುಗುಣಮಟ್ಟದ ಉತ್ಪನ್ನಗಳ ಮೇಲೆ ಶೇ 70ರವರೆಗಿನ ವಿಶೇಷ ರಿಯಾಯಿತಿಯನ್ನು ನೀಡುತ್ತಿದೆ.

image


ಭಾರತದಲ್ಲಿ ಉತ್ಪಾದನೆಯಾಗುವ ಲೆದರ್ ಉತ್ಪನ್ನಗಳ ಪೈಕಿ ಶೇ 70ರಷ್ಟು ರಪ್ತಾಗುತ್ತವೆ. ರಪ್ತಾಗಿರುವ ಬ್ರಾಂಡ್​ನ ಉತ್ಪನ್ನಗಳು ಪುನಃ ಭಾರತೀಯ ಮಾರುಕಟ್ಟೆ ಪ್ರವೇಶಿಸಿದಾಗ ಅವುಗಳ ಬೆಲೆ ಹತ್ತರಷ್ಟು ಹೆಚ್ಚಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಪಕ್ಕಾಲೆದರ್ ಡಾಟ್ ಕಾಮ್, ಅಂತರಾಷ್ಟ್ರೀಯ ಗುಣಮಟ್ಟದ ಅಪ್ಪಟ ಲೆದರ್​ನ ಉತ್ಪನ್ನಗಳನ್ನು ಸ್ಪರ್ಧಾತ್ಮಕ ಮತ್ತು ಕೈಗೆಟಕುವ ಬೆಲೆಯಲ್ಲಿ ಗ್ರಾಹಕರಿಗೆ ನೀಡುತ್ತಿದೆ.

ಈ ಅಂತರ್ಜಾಲ ವೇದಿಕೆಯ ಮೂಲಕ ಎಲ್ಲ ದೇಸಿ ಬ್ರಾಂಡ್ ಮತ್ತು ಚಿಲ್ಲರೆ ವ್ಯಾಪಾರಿಗಳಿಗೆ ಮಾರುಕಟ್ಟೆ ನೀಡಲಾಗುತ್ತದೆ. ಭಾರತದ ಸಂಸ್ಕೃತಿಯ ಪ್ರತೀಕವಾಗಿರುವ ಚರ್ಮದ ವಿವಿಧವೈವಿಧ್ಯಮಯ ಉತ್ಪನ್ನಗಳಾದ ಕೊಲ್ಹಾಪುರಿ ಚಪ್ಪಲಿಗಳು, ರಾಜಸ್ಥಾನಿ ಸಾಂಪ್ರದಾಯಿಕ ಶೈಲಿಯ ಶೂಗಳು, ಈಶಾನ್ಯ ರಾಜ್ಯಗಳಲ್ಲಿಯ ಸಂಸ್ಕೃತಿ ಬಿಂಬಿಸುವ ಉತ್ಪನ್ನಗಳು,ಚರ್ಮವಾದ್ಯಗಳು ಮೊದಲಾದವುಗಳಿಗೆ ವಿಶ್ವ ಮಾರುಕಟ್ಟೆ ಒದಗಿಸಿಕೊಡುವುದು ಪಕ್ಕಾಲೆದರ್ ಡಾಟ್ ಕಾಮ್ ನ ಉದ್ದೇಶ. ಇಂತಹ ಉತ್ಪನ್ನಗಳ ಸಣ್ಣ ಉದ್ಯಮಿಗಳು ಮತ್ತು ಚಿಲ್ಲರೆವ್ಯಾಪಾರಿಗಳು ಪಕ್ಕಾಲೆದರ್ ಡಾಟ್ ಕಾಮ್​​ನಲ್ಲಿ ನೋಂದಣಿ ಮಾಡಿಕೊಂಡು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಬಹುದು ಎಂದು ಸಂಸ್ಥಾಪಕ ನಿರ್ದೇಶಕರಾದ ದಿನೇಶ್ ಮಡಗಾಂವ್​ಕಾರ್​ ಹೇಳುತ್ತಾರೆ.

ಇಷ್ಟೇ ಅಲ್ಲದೆ, ಪಕ್ಕಾಲೆದರ್ ಡಾಟ್ ಕಾಮ್ 'ವಾಕಿ ಡಾ.' ಎಂಬ ವಿಶಿಷ್ಟವಾದ ಆರ್ಥೊಪೆಡಿಕ್ ಶೂಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಮೂಳೆ ತಜ್ಞರಿಂದ ಸತತ ಸಂಶೋಧನೆಯ ಫಲಿತಾಂಶವಾಗಿ ತಯಾರಾಗಿರುವ ಈ ಉತ್ಪನ್ನವು ನಾವು ಈವರೆಗೆ ಬಳಸುತ್ತಿದ್ದ ನಡಿಗೆಯ ಶೂಗಳಿಗಿಂತ ಭಿನ್ನವಾಗಿದ್ದು. ಇದನ್ನು ಬಳಸುವುದರಿಂದ ಕಾಲಿನ ಸ್ನಾಯುಗಳು ಬಲಿಷ್ಠವಾಗುವುದು ಮಾತ್ರವಲ್ಲದೆ ದೇಹದ ಅನೇಕ ಖಾಯಿಲೆಗಳನ್ನು ಕಡಿಮೆ ಮಾಡಲು ಸಹಾಯಕವಾಗಿದೆ ಎಂದು ಅವರು ಹೇಳುತ್ತಾ ಮಾತು ಮುಗಿಸುತ್ತಾರೆ.