ಜಗತ್ತಿಗೆ ಸವಾಲಾಗಿರೋ ಮಾರ್ಜಾಲ

ಆರಭಿ ಭಟ್ಟಾಚಾರ್ಯ

0

ಐದು ವರ್ಷದ ಈಕೆ ಅವಳದ್ದೇ ಓನ್ ಪೇಸ್ ಬುಕ್ ಪೇಜ್ ಹೊಂದಿದ್ದಾಳೆ .ಅಷ್ಟೇ ಅಲ್ಲ ಈಕೆಯ ವಿಡಿಯೋಸ್ ಗಳು ಯೂಟ್ಯೂಬ್ ನಲ್ಲಿ ಬಿಲಿಯನ್ ಲೈಕ್‍ ಜೊತೆಗೆ ವೀವರ್ ಪಡೆದುಕೊಂಡಿದೆ. ಇಷ್ಟೆಲ್ಲಾ ಫೇಮಸ್‍ ಆಗಿರೋದು ವೀನಸ್‍ ಅನ್ನೋ ಬೆಕ್ಕು. ಹೌದು ಈ ಬೆಕ್ಕು ಇರೋ ರೀತಿಯನ್ನ ನೋಡೊದ್ರೆ ಎಂಥವ್ರಿಗೂ ಆಶ್ಚರ್ಯ ಮೂಡಿಸುತ್ತೆ. ಬೆಕ್ಕುಗಳು ಅಂದ್ರೆ ಒಬ್ಬಬ್ಬರ ಮನಸ್ಸಿನಲ್ಲಿ ಒಂದೊಂದು ನಂಬಿಕೆ ಇರುತ್ತೆ. ಕೆಲವರಿಗೆ ಬೆಕ್ಕು ಶನಿ ಅಂತಾದ್ರೆ ಇನ್ನ ಕೆಲವ್ರಿಗೆ ಬೆಕ್ಕು ಅದೃಷ್ಠ ಅನ್ನೋ ನಂಬಿಕೆ ಇದೆ. ಇನ್ನು ಮಾರ್ಜಾಲದಲ್ಲಿ ಸಾಕಷ್ಟು ಬಣ್ಣಗಳಿದ್ದು ಅದರಲ್ಲೂ ಸಾಕಷ್ಟು ತಳಿಗಳನ್ನ ನೋಡಬಹುದಾಗಿದೆ. ಆದ್ರೆ ಇಲ್ಲಿ ಹೇಳಲು ಹೋರಟಿರೋ ವೀನಸ್ ಮಾತ್ರ ಪ್ರಪಂಚಕ್ಕೆ ಸವಾಲಾಗಿದೆ. ವೀನಸ್‍ ಅರ್ಧ ಮುಖ ಕಪ್ಪಾಗಿದ್ದು ಹಸಿರು ಬಣ್ಣದ ಕಣ್ಣುನ್ನ ಹೊಂದಿದ್ರೆ ಇನ್ನರ್ಧ ಮುಖ ಕಂದು ಬಣ್ಣದಾಗಿದ್ದು ನೀಲಿ ಬಣ್ಣದ ಕಣ್ಣನ್ನ ಹೊಂದಿದೆ. ಇದೇ ಕಾರಣಕ್ಕಾಗಿ ವೀನಸ್ ಪ್ರಪಂಚದಲ್ಲೇ ಪ್ರಸಿದ್ದಿ ಪಡೆದುಕೊಂಡಿದೆ.

ವೀನಸ್ ಬಗ್ಗೆ ನಡೆದಿದೆ ಸಂಶೋಧನೆ

ವೀನಸ್ ಪೋಟೋ ನೋಡಿದ್ರೆ ಇದನ್ನ ಫೋಟೋ ಶಾಪ್ ಮಾಡಲಾಗಿದೆ ಅಥವಾ ಫೋಟೋ ಎಡಿಟಿಂಗ್ ನಲ್ಲಿ ಏನೂ ಜಾದೂ ಮಾಡಿದ್ದಾರೆ ಅಂಥ ಅನ್ನಿಸುತ್ತೆ. ಆದ್ರೆ ವೀನಸ್ ಫೋಟೋನಲ್ಲಿ ಯಾವುದೇ ಗಿಮಿಕ್‍ ಇಲ್ಲ. ಕಾರಣ ವೀನಸ್ ಹುಟ್ಟಿರೋದೆ ಇದೇ ರೀತಿ. ಇದೇ ಕಾರಣಕ್ಕಾಗಿ ಪ್ರಪಂಚದ ಪ್ರತಿಷ್ಠಿತ ಯ್ಯೂನಿವರ್ಸಿಟಿಯಲ್ಲಿಯೂ ವೀನಸ್ ಬಗ್ಗೆ ಸಾಕಷ್ಟು ಸಂಶೋದನೆ ನಡೆದಿದೆ. ಆದ್ರೆ ವೀನಸ್ ಈ ರೀತಿಯ ಹುಟ್ಟಿಗೆ ಕಾರಣ ಏನು ಅನ್ನೋದು ಮಾತ್ರ ಸೂಕ್ತವಾಗಿ ಗೋತ್ತಾಗದೆ ಇದ್ದರೂ ಕೂಡ ಸಾಕಷ್ಟು ಕಾರಣಗಳಿಂದ ವೀನಸ್‍ ಕ್ಯಾಟ್ ಈ ರೀತಿಯಲ್ಲಿ ಹುಟ್ಟಿರಬಹುದೆಂದು ತಿಳಿಸಿದ್ದಾರೆ ಸಂಶೋಧಕರು.

ಫೇಸ್ ಬುಕ್ ,ಯೂಟ್ಯೂಬ್‍ ಅಕೌಂಟ್‍ ಇರೋ ಏಕೈಕ ಮಾರ್ಜಾಲ

ಹೌದು ವೀನಸ್ ಪ್ರಪಂಚದಲ್ಲಿ ತನ್ನದೇಯಾದ ಫೇಸ್ ಬುಕ್ ಹಾಗೂ ಯೂಟ್ಯೂಬ್‍ ಅಕೌಂಟ್ ಹೊಂದಿರೋ ಏಕೈಕ ಕ್ಯಾಟ್. ಇನ್ನು ವೀನಸ್‍ ತನ್ನ ಪೇಸ್ಬುಕ್ ಪೇಜ್ ಗೆ ಪಡೆದಿರೋ ಲೈಕ್ ಬಗ್ಗೆ ಕೇಳಿದ್ರೆ ಎಂಥವ್ರು ಕೂಡ ಬೆಚ್ಚಿ ಬೀಳುತ್ತಾರೆ. ವೀನಸ್‍ಗೆ ಫೇಸ್ ಬುಕ್ ನಲ್ಲಿ 913 ಸಾವಿರ ಫ್ಯಾನ್ಸ್ ಫಾಲೋಹರ್ಸ್‍ ಇದ್ದಾರೆ. ಅಷ್ಟೇ ಅಲ್ಲದೆ ಫೇಸ್ ಬುಕ್ ನಲ್ಲಿ ವೀನಸ್ ಫೋಟೋ ಅಪ್ಲೌಡ್ ಮಾಡಿ ಐ ಯಾಮ್‍ ಅಂಡ್ರೆಡ್ ಪರ್ಸೆಂಟ್ ನ್ಯಾಚುರಲ್ ನಾಟ್‍ ಈವನ್ ಹೈಲೈನರ್‍ ಆಲ್ ಸೋ ಅನ್ನೋ ಸ್ಟೇಟಸ್ ಪ್ರಪಂಚದ ಜನರಿಗೆ ವೀನಸ್ ಬಗ್ಗೆ ಮತ್ತಷ್ಟುಕುತೂಹಲ ಉಂಟುಮಾಡಿದೆ. ಇದಷ್ಟೆ ಅಲ್ಲದೇ ವೀನಸ್‍ ತನ್ನದೇ ಆದ ವೆಬ್ ಸೈಟ್‍ ಅನ್ನ ಹೊಂದಿದೆ. ಇದ್ರಲ್ಲಿ ವೀನಸ್ ಬಗ್ಗೆ ಎಲ್ಲಾ ರೀತಿ ಡೀಟೇಲ್ಸ್​ ಇದ್ದು ವೀನಸ್ ಪ್ರತಿನಿತ್ಯದ ಆಕ್ಟಿವಿಟಿಸ್ ಬಗ್ಗೆ ಮಾಹಿತಿಯನ್ನೂ ನೀಡಲಾಗಿದೆ. ವೀನಸ್‍ ಯೂಟ್ಯೂಬ್ ನಲ್ಲೂ ಸಾಕಷ್ಟು ವಿಡಿಯೋಗಳನ್ನ ಹೊಂದಿದ್ದು ಫೋಟೋದಲ್ಲಿರುವಂತೆಯೇ ಎಷ್ಟು ನ್ಯಾಚುರಲ್‍ ಅನ್ನೋದನ್ನ ಈ ವಿಡಿಯೋ ನೋಡಿದ್ರೆ ತಿಳಿಯುತ್ತೆ.

ಲಗ್ಜೂರಿಯಾಗಿ ವಾಸಿಸೋ ವೀನಸ್

ನಾರ್ಥ್‍ಕ್ರೋಲೈನ್ ಕ್ರೀಸ್ಟೀನ್ ಅನ್ನೋರ ಒಡೆತನದಲ್ಲಿರೋ ವೀನಸ್ ಈಗ ಪ್ರಪಂಚಕ್ಕೆಆಶ್ಚರ್ಯ ಚಿಹ್ನೆ ಆಗಿದ್ದು ಅದರ ಜೊತೆಗೆ ಇಂಟರ್‍ನೆಟ್ ಸ್ಟಾರ್‍ ಅನ್ನೋ ಪಟ್ಟವನ್ನು ಗಿಟ್ಟಿಸಿಕೊಂಡಿದೆ. ಇದನ್ನ ಪ್ರತ್ಯಕ್ಷವಾಗಿ ನೋಡಲು ಸಾಕಷ್ಟು ಜನರು ಕಾತುರರಾಗಿದ್ದು ವೀನಸ್ ಗೆ ಮಾಲೀಕರ ಮನೆಯಲ್ಲಿ ಲಗ್ಜುರಿ ಲೈಫ್ ಸಿಕ್ಕಿದೆ. ಇದ್ರ ಜೊತೆಗೆ ಸಾಕಷ್ಟು ಟಿ ವಿ ಷೋಗಳ್ಲೂ ವೀನಸ್ ಬಾಗವಹಿಸಿದ್ದು ನ್ಯಾಷನಲ್ ಮ್ಯಾಗಜೀನ್ನಲ್ಲೂ ವೀನಸ್ ಬಗ್ಗೆ ಸ್ಟೋರಿಗಳು ಪ್ರಕಟವಾಗಿದೆ. ಶನಿ ಅಂತ ಹೆಸರಿಟ್ಟುಕೊಂಡಿರೋ ವೀನಸ್‍ ಜನರಿಗೆ ಆಶ್ಚರ್ಯ ಹುಟ್ಟಿಸಿರೋದ್ರ ಜೊತೆಗೆ ಪ್ರಪಂಚದಲ್ಲೆಲ್ಲಾ ಫೇಮಸ್‍ ಆಗಿದೆ.