`ಗೂಗಲ್' ಹೇಗೆ ಹಣ ಕಬಳಿಸುತ್ತೆ ಗೊತ್ತಾ..?

ಟೀಮ್​​ ವೈ.ಎಸ್​​. ಕನ್ನಡ

0

ಇದು `ಝಿಂಬರ್' ಸಂಸ್ಥೆಯ ಸಹ ಸಂಸ್ಥಾಪಕ ಅಮಿತ್ ಕುಮಾರ್ ಅವರಿಗಾದ ಅನುಭವ. ಗೂಗಲ್‍ನಿಂದ ಅವರಿಗಾದ ಪ್ರಯೋಜನವೇನು? ನಷ್ಟವೇನು? ಗೂಗಲ್ ಸೌಲಭ್ಯ ಬಳಸುವ ಮುನ್ನ ಏನೆಲ್ಲಾ ಎಚ್ಚರಿಕೆ ತೆಗೆದುಕೊಳ್ಳಬೇಕು ಅನ್ನೋದನ್ನು ಅಮಿತ್ ಕುಮಾರ್ ಹಂಚಿಕೊಂಡಿದ್ದಾರೆ. ಇದು ಕೇವಲ ತಮಗಾದ ಅನುಭವವಲ್ಲ, ನಿಮ್ಮಲ್ಲೂ ಕೆಲವರು ಉದ್ಯಮ ಪಯಣದಲ್ಲಿ ಇದನ್ನೆಲ್ಲ ನೋಡಿರುತ್ತೀರಾ ಎನ್ನುತ್ತಾರೆ ಅವರು.

ಗೂಗಲ್ ಸಂಸ್ಥೆ `ಗೂಗಲ್ ಎನಾಲಿಟಿಕ್ಸ್'ಗೆ ಉಚಿತ ಪ್ರವೇಶ ಕಲ್ಪಿಸಿದೆ. ನಿಮ್ಮ `ಆ್ಯಡ್ ವರ್ಡ್ಸ್​​​​ ' ಅನ್ನು ಅತ್ಯುತ್ತಮವಾಗಿಸಲು ಈ ಟ್ರಾಫಿಕ್ ವರದಿ ನೆರವಾಗುತ್ತದೆ. ನಿಮ್ಮ `ಸರ್ಚ್ ಇಂಜಿನ್ ಆಪ್ಟಿಮೈಸೈಶನ್' (ಎಸ್‍ಇಓ) ನಿರ್ವಹಣೆಗೂ ಇದು ನೆರವಾಗಲಿದೆ. ಆದ್ರೆ ಈ ಸಂದರ್ಭದಲ್ಲಿ ಶೇ.99ರಷ್ಟು ಮಂದಿ ಹಳ್ಳಕ್ಕೆ ಬೀಳ್ತಾರೆ. ಇದನ್ನು ಬಳಕೆ ಮಾಡಿಕೊಳ್ಳುವಲ್ಲಿ ಎಡವುತ್ತಾರೆ. ಹಾಗಾಗಿ `ಗೂಗಲ್ ಎನಾಲಿಟಿಕ್ಸ್' ಬಳಕೆಗೂ ಮುನ್ನ ಕೆಲವು ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ಕೆಲ ವಿಚಾರಗಳನ್ನು ಗಮನದಲ್ಲಿರಿಸಿಕೊಳ್ಳಬೇಕು.

*ಗೂಗಲ್ ಇಷ್ಟೊಂದು ಉದಾರತೆ ಮೆರೆಯುತ್ತಿರುವುದೇಕೆ? ನಿಮಗೆ ಉಚಿತ ಪ್ರವೇಶ ಕಲ್ಪಿಸಿರುವುದರ ಹಿಂದಿರುವ ಉದ್ದೇಶವೇನು?

*ಉತ್ತಮ ಯುಐ/ಯುಎಕ್ಸ್ ಆಫರ್ ಅನ್ನು ಗೂಗಲ್ ಏಕೆ ನೀಡುತ್ತಿಲ್ಲ?

*ಅದನ್ನು ಬಳಸುವ ಮುನ್ನ ನೀವು ವಿಚಾರವಂತರಾಗಬೇಕೆಂದು ಗೂಗಲ್ ಬಯಸುತ್ತಿರುವುದೇಕೆ?

*ಇದು ಸಂಪೂರ್ಣವಾಗಿ ಸರಳ ಎನಿಸಿದರೂ ಎಲ್ಲವನ್ನು ಕಳೆದುಕೊಳ್ಳುವುದು ಏಕೆ?

ನಿಮ್ಮ ಬದುಕನ್ನು ಸರಳಗೊಳಿಸಲು ಗೂಗಲ್ ಶೇ.0.1ರಷ್ಟು ಪ್ರತಿಭೆಗಳನ್ನು ನೇಮಕ ಮಾಡಿಕೊಳ್ಳುತ್ತಿಲ್ಲ. ನಿಜಕ್ಕೂ ಅದು ಉಚಿತ ಸೇವೆ ಹೌದೋ ಅಲ್ವೋ ಅನ್ನೋ ಅನುಮಾನ ಕೂಡ ಕಾಡುತ್ತದೆ. ಅಥವಾ ಇದೊಂದು ಪ್ರೀಮಿಯಮ್ ಸರ್ವೀಸ್ ಇರಬಹುದಾ? ಅಸಮರ್ಥತೆಯಿಂದಾಗಿ ನೀವು ಇನ್ನಷ್ಟು ಹಣ ಹೂಡಬೇಕಾಗಿ ಬರಬಹುದು. ಗೂಗಲ್‍ನಲ್ಲಿ ಕುಳಿತಿರುವ ವಿಶ್ವದ 0.1ರಷ್ಟು ಟಾಪ್ ವೃತ್ತಿಪರರು ದೊಡ್ಡ ವರದಿಗಳನ್ನು ಸೃಷ್ಟಿಸಲು ದೊಡ್ಡ ಅಂಕಿಅಂಶಗಳನ್ನು ಭೇದಿಸ್ತಾರೆ. ಇದನ್ನು ವಿಸ್ತ್ರತವಾಗಿ ವಿವರಿಸಬೇಕೆಂದ್ರೆ ನಾವು ಮೊದಲು `ಬಿಗ್ ಡಾಟಾ' ಎಂದರೇನು ಅನ್ನೋದನ್ನು ಅರ್ಥಮಾಡಿಕೊಳ್ಳಬೇಕು. ಬಿಗ್ ಡಾಟಾ ಅಂದ್ರೆ ಅಂಕಿ ಅಂಶಗಳ ದೊಡ್ಡ ಮೂಟೆಯಿದ್ದಂತೆ. ಅಷ್ಟೇ ಅಲ್ಲ, ಒಂದೇ ಜಾಗದಲ್ಲಿ ಅಂದ್ರೆ `ಗೂಗಲ್ ಎನಾಲಿಟಿಕ್ಸ್'ನಲ್ಲಿ ಟನ್‍ಗಟ್ಟಲೆ ಸರಳವಾದ ವರದಿಗಳು ಎಂದರ್ಥ. ಆದ್ರೆ ವಿರೋಧಾಭಾಸದ ಅಂಶಗಳನ್ನು ಕೇಳಿ ಜಿಎಯನ್ನು ಪ್ರೀತಿಸುವವರು ಕುಪಿತರಾಗಬಹುದು.

`ಗೂಗಲ್ ಎನಾಲಿಟಿಕ್ಸ್' - ಬಿಗ್ ಡಾಟಾದಿಂದ ಬಿಗ್ ರಿಪೋರ್ಟ್ ವರೆಗೆ...

ಎಲ್ಲವೂ ಸರಳ ವರದಿಗಳೇ, ಆದ್ರೆ ಬಳಕೆದಾರರಿಗೆ ಅದು ಕಠಿಣ ಎನಿಸುತ್ತಿದೆ. ಗೂಗಲ್‍ನಿಂದ ಇದನ್ನು ಬಗೆಹರಿಸಲು ಸಾಧ್ಯವಾಗುತ್ತಿಲ್ಲವೇ? ಅಥವಾ ಉದ್ದೇಶಪೂರ್ವಕವಾಗಿ ಇದನ್ನು ಮಾಡುತ್ತಿಲ್ಲವೇ? ಇದು ಸಾವಯವ ರೀತಿಯಲ್ಲಿ ಹೊರಹೊಮ್ಮಿದೆ, ಹಾಗಾಗಿ ಯುಐ/ಯುಎಕ್ಸ್ ಸ್ನೇಹಿ ಅಲ್ಲ ಎಂದೇ ಕೆಲವರು ಭಾವಿಸಿದ್ದಾರೆ. ಆದ್ರೆ ಅದನ್ನು ಉದ್ದೇಶಪೂರ್ವಕವಾಗಿಯೇ ಈ ರೀತಿ ವಿನ್ಯಾಸಗೊಳಿಸಲಾಗಿದೆ. ಹುಲ್ಲು ಕುದುರೆ ಜೊತೆ ಸ್ನೇಹ ಮಾಡಿದ್ರೆ, ಕುದುರೆ ಅದನ್ನು ತಿಂದು ಹಾಕುತ್ತೆ ಅನ್ನೋ ಮಾತಿನಂತಿದೆ ಗೂಗಲ್ ವರ್ತನೆ.

ಜಿಎಯನ್ನು ಗೂಗಲ್ ಸರಳೀಕರಣಗೊಳಿಸಿದ್ರೆ ಎಲ್ಲಾ ವೃತ್ತಿಪರರು ಅದನ್ನು ತಮ್ಮ ಡಿಜಿಟಲ್ ಮಾರ್ಕೆಟಿಂಗ್‍ಗೆ ಲಾಭದಾಯಕವಾಗಿ ಬಳಸಿಕೊಳ್ಳಬಹುದು. ಗೂಗಲ್‍ಗೆ ಹೆಚ್ಚಿನ ಹಣ ಪಾವತಿಸಬೇಕಾದ ಅವಶ್ಯಕತೆಯೂ ಇರುವುದಿಲ್ಲ. ಆದ್ರೆ ತನ್ನ ಆದಾಯ ಕಡಿಮೆ ಮಾಡಿಕೊಳ್ಳಲು ಗೂಗಲ್ ಹೂಡಿಕೆ ಮಾಡುವುದು ಸಾಧ್ಯವೇ ಎಂಬ ಪ್ರಶ್ನೆ ಕೂಡ ಉದ್ಭವಿಸುತ್ತೆ. ಇದೊಂದು ಬ್ಯುಸಿನೆಸ್ ತಂತ್ರ. ಸರಳ ಎನಿಸಿದ್ರೂ ಪ್ರತಿಯೊಬ್ಬರ ಅಗತ್ಯಗಳನ್ನು ನಿರ್ವಹಿಸಲು ಸಾಕಷ್ಟು ದೊಡ್ಡದು. ಜಗತ್ತಿನುದ್ದಕ್ಕೂ ಗೂಗಲ್ ಎನಾಲಿಟಿಕ್ಸ್ ಅನ್ನು ಎಲ್ಲ ಬಗೆಯ ಉದ್ಯಮಗಳಿಗೆ ಬಳಸಲು ಆರಂಭಿಸಿದಾಗಿನಿಂದ ಅದು ಬಹಳ ಸಾಮಾನ್ಯ ಎನಿಸಿಕೊಂಡಿದೆ. ಪ್ರತಿಯೊಬ್ಬರ ಬಗೆಗೂ ಕಾಳಜಿ ವಹಿಸುತ್ತಿದೆ. ಇದು ಪ್ರಜಾಪ್ರಭುತ್ವ ಮತ್ತು ಪರೋಪಕಾರಿ ನೀತಿಯಂತೆ ಭಾಸವಾಗುತ್ತಿದೆ.

ಎಲ್ಲಾ ರೀತಿಗೂ ನಾನು...

ಇದಕ್ಕೆಲ್ಲ ಪರಿಹಾರವಿಲ್ಲವೇ ಅನ್ನೋ ಪ್ರಶ್ನೆ ಮೂಡುವುದು ಸಹಜ. ಪರಿಹಾರ ಇದೆ. ಗೂಗಲ್ ಎನಾಲಿಟಿಕ್ಸ್ ವರದಿಯನ್ನು ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳಬಹುದು, ಈ ಜಟಿಲತೆಯನ್ನು ಪರಿಹರಿಸಿಕೊಳ್ಳಬಹುದು. ಆದ್ರೆ ಅದಾದ ಬಳಿಕ ಅಗತ್ಯ ಕೌಶಲ್ಯ ನಿಮ್ಮಲ್ಲರಬೇಕು, ನಿಮಗೇನು ಬೇಕು ಅನ್ನೋದನ್ನು ಅರ್ಥಮಾಡಿಕೊಳ್ಳಿ, ನೀವದನ್ನು ಹೇಗೆ ಪ್ರಸ್ತುತಪಡಿಸುತ್ತೀರೆಂದು ನಿರ್ಧರಿಸಿಕೊಳ್ಳಿ. ಅದಕ್ಕೆ ಪರ್ಯಾಯವಾಗಿ ನೀವು ಕನ್ಸಲ್ಟಂಟ್‍ಗಳನ್ನು ನೇಮಕ ಮಾಡಿಕೊಳ್ಳಬಹುದು, ಉಳಿದ ಎನಾಲಿಟಿಕ್ಸ್‍ಗೆ ಚಂದಾದಾರರಾಗಬಹುದು, ಅಂದ್ರೆ ಮತ್ತೆ ಶೇ. 0.1ರಷ್ಟು ಟಾಪ್ ವೃತ್ತಿಪರರನ್ನೇ ಅವಲಂಬಿಸಬೇಕಾಗುತ್ತದೆ.

ಎಲ್ಲ ಉದ್ಯಮ ಮಿತ್ರರಿಗೆ ಅಮಿತ್ ಕುಮಾರ್ ಅವರು ಕೆಲ ಸಂದೇಶಗಳನ್ನು ನೀಡಿದ್ದಾರೆ. ಆರಂಭದಿಂದ್ಲೇ ಎಲ್ಲವನ್ನೂ ಅರ್ಥಮಾಡಿಕೊಳ್ಳಬೇಕು. ಸ್ವಾಧೀನವನ್ನು ಗುರುತಿಸಿ, ನಿಮ್ಮ ವ್ಯವಹಾರ ಮಾದರಿಗೆ ತಕ್ಕಂತೆ ವರ್ತನೆಯಿರಲಿ. ನಿಮ್ಮ ಡಿಜಿಟಲ್ ಮಾರ್ಕೆಟಿಂಗ್ ಬಜೆಟ್‍ನಲ್ಲೇ ಎಲ್ಲವನ್ನೂ ಸಾಧಿಸಲು ಪ್ರಯತ್ನಿಸಿ. ವ್ಯಾನಿಟಿ ಮ್ಯಾಟ್ರಿಕ್ಸ್‍ನಿಂದ ಆದಷ್ಟು ದೂರವಿರಿ. ವ್ಯಾಪಾರ ಉದ್ದೇಶಿತ ಮ್ಯಾಟ್ರಿಕ್ಸ್ ಬಗ್ಗೆ ಮಾತ್ರ ಗಮನವಿಡಿ.

ಹೆಚ್ಚು ಗ್ರಾಹಕರನ್ನು ಹೊಂದಲು, ಇನ್ನಷ್ಟು ಹಣ ವೆಚ್ಚ ಮಾಡುವಂತೆ ಕೆಲವರು ನಿಮ್ಮನ್ನು ಉತ್ತೇಜಿಸಬಹುದು. ಎಚ್ಚರದಿಂದಿರಿ, ಗೂಗಲ್ ಕೂಡ ಅದನ್ನೇ ಬಯಸುತ್ತೆ, ಆದ್ರೆ ನಿಮ್ಮ ಉದ್ಯಮಕ್ಕೆ ಅದರ ಅಗತ್ಯವಿಲ್ಲ. ಸಣ್ಣ ಅವಧಿಗೆ ಚಿಕ್ಕ ಪುಟ್ಟ ಪ್ರಯೋಗಗಳನ್ನು ಮಾಡುತ್ತಿರಿ, ಕಡಿಮೆ ಬಜೆಟ್‍ನಲ್ಲೇ ಎಲ್ಲವನ್ನೂ ತೂಗಿಸಿಕೊಂಡು ಹೋಗಲು ಪ್ರಯತ್ನಿಸಿ. ಈ ಸಾಹಸಗಳಲ್ಲಿ ವಿಳಂಬ ಮಾಡಿದಷ್ಟೂ ಅಭಿವೃದ್ಧಿ ನಮ್ಮಿಂದ ದೂರ ಸರಿಯುತ್ತೆ ಅನ್ನೋದು ಅಮಿತ್ ಕುಮಾರ್ ಅವರ ಅನುಭವದ ಮಾತು.

ಲೇಖಕರು: ಅಮಿತ್​​ ಕುಮಾರ್​​​
ಅನುವಾದಕರು: ಭಾರತಿ ಭಟ್​​​

Related Stories