ಕಥೆ ಹೇಳುವುದರ ಮಹತ್ವದ ಕುರಿತು ಲೇಖಕಿ ಆ್ಯನೆಟ್ಟೆ ಸೈಮನ್ಸ್ ಅವರ ಅಭಿಪ್ರಾಯ

ಟೀಮ್​​ ವೈ.ಎಸ್​​.

ಕಥೆ ಹೇಳುವುದರ ಮಹತ್ವದ ಕುರಿತು ಲೇಖಕಿ ಆ್ಯನೆಟ್ಟೆ ಸೈಮನ್ಸ್ ಅವರ ಅಭಿಪ್ರಾಯ

Tuesday November 10, 2015,

5 min Read

ಆ್ಯನೆಟ್ಟೆ ಸೈಮನ್ಸ್ ಅವರು ಹೂ ಎವರ್ ಟೆಲ್ಸ್ ದ ಬೆಸ್ಟ್ ಸ್ಟೋರಿ ವಿನ್ಸ್ ಎಂಬ ಪುಸ್ತಕದ ಲೇಖಕರು. ಅವರ ಇತರ ಮೂರು ಪುಸ್ತಕಗಳೆಂದರೆ ದ ಸ್ಟೋರಿ ಫ್ಯಾಕ್ಟರ್, ಎ ಸೇಫ್ ಪ್ಲೇಸ್ ಫಾರ್ ಡೇಂಜರಸ್ ಟ್ರೂತ್ ಮತ್ತು ಟೆರಿಟೋರಿಯಲ್ ಗೇಮ್ಸ್: ಅಂಡರ್‌ಸ್ಟ್ಯಾಂಡಿಂಗ್ ಎಂಡ್ ಎಂಡಿಂಗ್ ಟರ್ಫ್ ವಾರ್ಸ್ ಎಟ್ ವರ್ಕ್. ಆ್ಯನೆಟ್ಟೆ ಸೈಮನ್ಸ್ ಅವರು ಗ್ರೂಪ್ ಪ್ರೋಸೆಸ್ ಕನ್ಸಲ್ಟಿಂಗ್‌ನ ಅಧ್ಯಕ್ಷರೂ ಸಹ ಹೌದು. ಇವರ ಪುಸ್ತಕಗಳು 11 ಭಾಷೆಗಳಿಗೆ ಅನುವಾದಗೊಳ್ಳುತ್ತಿದೆ. ಆ್ಯನೆಟ್ಟೆ ಅವರು ಮಾರ್ಕೆಟಿಂಗ್ ವಿಚಾರದಲ್ಲಿ ಲೂಸಿಯಾನಾ ಸ್ಟೇಟ್ ಯೂನಿವರ್ಸಿಟಿಯಿಂದ ಪದವಿ ಪಡೆದಿದ್ದಾರೆ ಮತ್ತು ಎರಿಕ್ಸಮ್ ಎಂಡ್ ಜೆ.ವಾಲ್ಟರ್ ಥಾಂಪ್ಸನ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿದ್ದಾರೆ.

ಆ್ಯನೆಟ್ಟೆ ಅವರು ಯುವರ್‌ಸ್ಟೋರಿಗೆ ಕಥೆ ಹೇಳುವ ವಿಧಾನ, ಅದು ವೀಕ್ಷಕರ ಮೇಲೆ ಪರಿಣಾಮ ಮತ್ತು ಪುನರಾವರ್ತಿತ ವಿನ್ಯಾಸಗಳ ಕುರಿತು ತಮ್ಮ ಸಂದರ್ಶನ ನೀಡಿದ್ದಾರೆ.

ಯು.ಸ್ಟೋ(ಯುವರ್ ಸ್ಟೋರಿ): ಉದ್ಯಮಯಾನದ ವಿವಿಧ ಹಂತಗಳಲ್ಲಿ ಕಥೆ ಹೇಳುವ ವಿಧಾನ ಹೇಗೆ ಸಹಾಯಕವಾಗಿರುತ್ತದೆ?

ಆ್ಯ.ಸೈ(ಆ್ಯನೆಟ್ಟೆ ಸೈಮನ್ಸ್): ಉದ್ಯಮಿಗಳು ಮತ್ತು ಸಂಸ್ಥೆಯ ಸಂಸ್ಥಾಪಕರು ನಾನು ಯಾರು, ನಾನೇಕೆ ಇಲ್ಲಿದ್ದೇನೆ, ಶಿಕ್ಷಣ, ಕ್ರಿಯೆಯ ಮಹತ್ವ, ದೃಷ್ಟಿಕೋನ ಮತ್ತು ನೀವೇನು ಚಿಂತಿಸುತ್ತಿದ್ದೀರಿ ಎಂದು ನನಗೆ ಗೊತ್ತು ಎಂಬ ವಿಚಾರಗಳನ್ನು ಆಧರಿಸಿ ಕಥೆಯನ್ನು ವಿಂಗಡಿಸಬಹುದು.

ಪ್ರತಿಯೊಬ್ಬ ಉದ್ಯಮಿಯೂ ಉದ್ಯಮವನ್ನು ಆರಂಭಿಸುವ ಮೊದಲು ಈ ಎಲ್ಲಾ ಅಂಶಗಳನ್ನು ತಿಳಿದಿರುವುದು ಅತ್ಯವಶ್ಯಕ. ಇನ್ನೊಬ್ಬರು ತಮ್ಮ ಕಥೆಯಿಂದ ಸ್ಫೂರ್ತಿ ಪಡೆಯುವವರೆಗೂ ಅವರು ತಮ್ಮ ಕಥೆಯನ್ನು ಪರೀಕ್ಷೆಗೊಳಪಡಿಸುತ್ತಲೇ ಇರಬೇಕು. ಕಥೆಯ ಭಾಷೆ ಅಧಿಕೃತವಾಗಿಯೂ, ಖಡಾಖಂಡಿತವಾಗಿಯೂ ಸತ್ಯವಾಗಿರಬೇಕು. ಸಂಸ್ಥಾಪಕರು ಮತ್ತು ಸಂಭಾವ್ಯ ಗ್ರಾಹಕರು ಇದನ್ನು ಪರೀಕ್ಷಿಸಬಹುದು, ತನಿಖೆ ನಡೆಸಬಹುದು ಮತ್ತು ನೀವು ನಿಮ್ಮದೇ ಆದ ಕಥೆಯೊಂದನ್ನು ಹುಟ್ಟುಹಾಕಬಲ್ಲಿರಾದರೆ ನೀವು ಏನನ್ನು ಬೇಕಾದರೂ ಹುಟ್ಟುಹಾಕಬಹುದೆಂಬ ಸಾಮಾನ್ಯ ತೀರ್ಮಾನಕ್ಕೆ ಅವರು ಬರಬಹುದು.

image


ಯು.ಸ್ಟೋ: ದೃಷ್ಟಿಕೋನವನ್ನು ದೃಢವಾಗಿರಿಸಿಕೊಳ್ಳುವುದು ಮತ್ತು ಬದಲಾದ ಪ್ರಪಂಚವನ್ನು ಅಳವಡಿಸಿಕೊಳ್ಳುವುದು ಎಂಬ ಎರಡೂ ವಿಚಾರಗಳಲ್ಲಿ ಅನ್ವೇಷಕರು ಹೇಗೆ ಸೂಕ್ಷ್ಮ ಸಮತೋಲನವನ್ನು ಸಾಧಿಸಬೇಕು?

ಆ್ಯ.ಸೈ: ದೃಷ್ಟಿಕೋನ ಎಂಬುದು ಮೌಲ್ಯಾಧಾರಿತವಾಗಿದೆ ಮತ್ತು ಯಾವುದೇ ಸಂದರ್ಭದಲ್ಲಿ ಏನೇ ಆದರೂ ದೃಷ್ಟಿಕೋನ ಮಾತ್ರ ಬದಲಾಗಬೇಕಾದ ಅಗತ್ಯವಿಲ್ಲ. ಮಾನವೀಯತೆ ಕಳೆದುಹೋಗಿರುವ ಪ್ರದೇಶಗಳಲ್ಲಿ, ಕ್ಷೇತ್ರಗಳಲ್ಲಿ ಮಾನವೀಯತೆಯನ್ನು ಮತ್ತೆ ಪುನರ್‌ಸ್ಥಾಪಿಸುವುದು ನನ್ನ ದೃಷ್ಟಿಕೋನ. ನಾನು ನಾಸಾ, ಮೈಕ್ರೋಸಾಫ್ಟ್ ಸಂಸ್ಥೆಗಳಲ್ಲೇ ಕೆಲಸ ಮಾಡಬಹುದು ಅಥವಾ ಒಂದು ಲೇಖನವನ್ನು ಬರೆಯಲು ಮನೆಯಲ್ಲಿ ಕಷ್ಟಪಡುವ ವ್ಯಕ್ತಿಯಾಗಿರಬಹುದು. ನನ್ನ ದೃಷ್ಟಿಕೋನ ಮಾನವೀಯತೆಯನ್ನು ಪುನರ್‌ಸ್ಥಾಪಿಸುವುದು ಮಾತ್ರವೇ ಆಗಿರುತ್ತದೆ. ನೀವೇನು ಸೃಷ್ಟಿಸಬೇಕೆಂದಿದ್ದೀರಿ ಮತ್ತು ನಿಮ್ಮನ್ನು ಏನು ತಡೆಯುತ್ತಿದೆ ಎಂಬುದರ ನಡುವಿನ ಪ್ರಾಥಮಿಕ ಸಂಘರ್ಷವೇ ದೃಷ್ಟಿಕೋನ. ಇವುಗಳ ಮಧ್ಯೆ ನೀವು ಹೇಗೆ ಸಮತೋಲನ ಸಾಧಿಸುತ್ತೀರಿ ಎಂಬುದಷ್ಟೇ ಮುಖ್ಯ.

ಯು.ಸ್ಟೋ: ನಿಮ್ಮ ಪುಸ್ತಕಗಳು ಹೇಗೆ ಸ್ವೀಕರಿಸಲ್ಪಡುತ್ತಿವೆ ಮತ್ತು ವಿಭಿನ್ನ ವರ್ಗದ ವೀಕ್ಷಕರನ್ನು ಕಥೆ ಹೇಳುವ ವಿಧಾನ ಸಂಪರ್ಕಕ್ಕೆ ತರುತ್ತಿರುವ ರೀತಿಯನ್ನು ನೀವು ಹೇಗೆ ಗಮನಿಸುತ್ತಿದ್ದೀರಿ?

ಆ್ಯ.ಸೈ: ಬಹುತೇಕ ಮಾರ್ಕೆಟಿಂಗ್ ಮತ್ತು ಸಾರ್ವಜನಿಕ ಉಪನ್ಯಾಸಗಳನ್ನು ನೀಡುವ ಪ್ರೊಫೆಸರ್‌ಗಳು ಹೂ ಎವರ್ ಟೆಲ್ಸ್​​ ದಿ ಬೆಸ್ಟ್ ಸ್ಟೋರಿ ವಿನ್ಸ್ ಪುಸ್ತಕವನ್ನು ಪಠ್ಯಪುಸ್ತಕವಾಗಿ ಬಳಸುತ್ತಿದ್ದಾರೆ. ಈ ಪುಸ್ತಕಕ್ಕೆ ಪ್ರೊಫೆಸರ್ ಒಬ್ಬರಿಂದ ಅಸಾಮಾನ್ಯ ಪ್ರತಿಕ್ರಿಯೆ ದೊರಕಿದೆ ಮತ್ತು ಅವರು ಈ ಪುಸ್ತಕದ ಹಳೆಯ ಆವೃತ್ತಿಯನ್ನೇ ಸದಾ ಬಳಸುವುದಾಗಿ ತಿಳಿಸಿದ್ದಾರೆ. ಬಹುಶಃ ಪ್ರೊಫೆಸರ್ ಮತ್ತು ಅವರ ವಿದ್ಯಾರ್ಥಿಗಳು ಎನ್‌ಜಿಓಗಳ ಕಾರ್ಯನಿರ್ವಾಹಕರಿರಬಹುದು ಮತ್ತು ಸಾರ್ವಜನಿಕ ಆರೋಗ್ಯ ಕ್ಷೇತ್ರಗಳ ಕಾರ್ಯಕರ್ತರಿರಬಹುದು. ಅವರಿಗೆ ಪುಸ್ತಕ ದ್ವಿತೀಯ ಮುದ್ರಣದಲ್ಲಿ ಹಲವು ಕಾರ್ಪೋರೇಟ್ ವಲಯದ ಕಥೆಗಳೇ ಇರುವುದರಿಂದ ಪುಸ್ತಕ ಅವರಿಗೆ ಇಷ್ಟವಾಗಿರಲಿಲ್ಲ.

ನ್ಯೂಟ್ರಿಷಿಯನಿಸ್ಟ್‌ ಗಳ ಕಾನ್ಫರೆನ್ಸ್‌ ವೊಂದರಲ್ಲಿ ಇದೇ ಕಾರಣದಿಂದಾಗಿ ಕೋಕಾ ಕೋಲಾ ಕುರಿತ ಉದಾಹರಣೆಯನ್ನು(ನ್ಯೂಟ್ರಿಷಿಯನ್‌ಗಳು ಕೋಕಾಕೋಲಾವನ್ನು ರಾಸಾಯನಿಕ ಸಕ್ಕರೆ ನೀರು ಎನ್ನುತ್ತಾರೆ) ತೆಗೆದುಹಾಕಲು ಕೇಳಿಕೊಂಡಿದ್ದರು. ಸಿದ್ಧಾಂತಗಳ ಬಗ್ಗೆ ಜನರು ವಹಿಸುವ ಕಾಳಜಿ ನೋಡಿ ನನಗೆ ಸಂತೋಷವಾಗುತ್ತದೆ. ಹಗರಣಗಳು ಹಾಗೂ ವಂಚನೆಯ ಕುರಿತಾದ ವಿಚಾರಗಳಿಗಾಗಿ ಕಥೆಗಳು ಬಳಕೆಯಾಗುವುದು ನನಗೂ ಇಷ್ಟವಿಲ್ಲ. ಆದರೆ ಕಥೆ ಹೇಳುವ ಕೌಶಲ್ಯಗಳು ಮತ್ತು ಟೂಲ್‌ಗಳು ತಟಸ್ಥ ಮೌಲ್ಯವನ್ನು ಹೊಂದಿವೆ. ಅನುಭಾವಿ ಭಾವನಾತ್ಮಕ ಪರಿಣಾಮವನ್ನು ಸೃಷ್ಟಿಸಲು ನಾನು ಸಾಧ್ಯವಾದಷ್ಟು ತಿಳಿದುಕೊಳ್ಳಲು ಇಚ್ಛಿಸುತ್ತೇನೆ. ಅದು ಕೆಲಸ ಮಾಡುತ್ತದೋ ಇಲ್ಲವೋ ಎಂಬುದರ ಬಗ್ಗೆ ನಾನು ಚಿಂತಿಸಲು ಹೋಗುವುದಿಲ್ಲ. ಹೀಗಾಗಿ ನಾನು ನನ್ನ ಪುಸ್ತಕದಲ್ಲಿ ಕೋಕಾ ಕೋಲಾದ ಉದಾಹರಣೆ ನೀಡಿದೆ ಮತ್ತು ನ್ಯೂಟ್ರಿಷಿಯನ್‌ಗಳಿಗೆ ಕೋಕ್ ನಿಂದ ಕೋಕಾ ಕೋಲಾ ಸಂಸ್ಥೆ ಹೊಂದಿರುವ ಸಂತೋಷದಂತೆ, ವ್ಯಾಯಾಮದೊಂದಿಗೆ ಸಂತೋಷವನ್ನು ಹೇಗೆ ಪಡೆಯಬೇಕೆಂಬುದನ್ನು ಕಲಿಯುವ ಸವಾಲು ಹಾಕಿದೆ.

ಯು.ಸ್ಟೋ: ಪರಿಣಾಮಕಾರಿ ಕಥೆಗಳ ಹೊಸ ಉದಾಹರಣೆಗಳ ಗಮನಾರ್ಹ ಅಂಶಗಳು ಯಾವುವು?

ಆ್ಯ.ಸೈ: ಮಾರ್ಶಲ್ ಗಂಜ್‌ ರ ಜನಸಾಮಾನ್ಯರನ್ನು ಸಂಘಟಿಸುವ ವಿಧಾನವನ್ನು ನಾನು ಇಷ್ಟಪಡುತ್ತೇನೆ. ಅದನ್ನು ಅವರು ಸಾರ್ವಜನಿಕ ನಿರೂಪಣೆ ಎಂದು ಕರೆಯುತ್ತಾರೆ ಮತ್ತು 2008ರಲ್ಲಿ ಒಬಾಮಾರ ಗೆಲುವಿಗೆ ಕಾರಣವಾದ ಅಂಶವೂ ಸಾರ್ವಜನಿಕ ವಿಧಾನವೇ ಆಗಿತ್ತು. ಅವರು ಕಥೆ ‘ನಾನು’ ಎಂಬುದರಿಂದ ಆರಂಭಿಸಿ ನಂತರ ‘ನಾವು’ ನಂತರ ‘ಈಗ’ ಎಂಬ ಮಾದರಿಯಲ್ಲಿ ಮುಂದುವರೆಯುತ್ತದೆ. ಆದರೆ ನಿಜವಾದ ಮಾಂತ್ರಿಕತೆಯೆಂದರೆ ಜನರು ಬಂದು ಅವರ ವೈಯಕ್ತಿಕ ಕಥೆಗಳನ್ನು ಹಂಚಿಕೊಳ್ಳುತ್ತಾರೆ. ಇಲ್ಲಿ ಕಥೆಯೇನು ಎಂಬುದು ಮುಖ್ಯವಲ್ಲ. ಬಾಂಧವ್ಯ ಮಾತ್ರ ಮುಖ್ಯ.

ನಾನಿದನ್ನು ಮೇಲ್ಮೈವೊಂದರ ಮೇಲಿರುವ ಗುಳ್ಳೆಯಂತಹ ಸೂಕ್ಷ್ಮಪರಿಸ್ಥಿತಿಯಿದ್ದ ನನ್ನ ಊರಿನಲ್ಲಿ ಬಳಸಿದ್ದೆ. ಕೇಳುಗರು ಮತ್ತು ವೀಕ್ಷಕರಿಗಾಗಿ ನಾನು ಎರಡು ಪ್ರದರ್ಶನಗಳನ್ನು ನೀಡಿದ್ದೆ. ಅದರಲ್ಲಿ ಈ ಕೇಳುಗ ಮತ್ತು ವೀಕ್ಷಕರ ಮಿಶ್ರ ಜನಾಂಗಕ್ಕಾಗಿ ತಮ್ಮ ವೈಯಕ್ತಿಕ ಕಥೆಗಳನ್ನು ಹೇಳಲು ಕೆಲವರನ್ನು ಕರೆತಂದಿದ್ದೆ. ಆದರೆ ಅವರು ತಮ್ಮ ಕಥೆಯನ್ನು ಹೇಳಿದಾಗ ಅವರನ್ನು ಹೊರಗಿಡಲಾಯಿತು. ಕಪ್ಪು ಬಣ್ಣವಿರಲಿ ಅಥವಾ ಬಿಳಿಯ ಬಣ್ಣವಿರಲಿ, ಅದು ವಿಷಯವಾಗುವುದಿಲ್ಲ.

ವೈಯಕ್ತಿಕ ಕಥೆಗಳನ್ನು ಹಂಚಿಕೊಳ್ಳುವುದರಿಂದ ಜನರ ನಡುವೆ ಬಾಂಧವ್ಯ ಬೆಳೆಯುತ್ತದೆ. ಆ ಕಥೆಗಳನ್ನು ಸಾಮಾನ್ಯ ಮಾನವೀಯತೆಯ ನೆಲೆಗಟ್ಟಿನಲ್ಲೇ ನಿರೂಪಿಸಬಹುದಾಗಿರುತ್ತದೆ. ಇಂತಹ ಸಂದರ್ಭಗಳಲ್ಲಿ ನಾವು ವೈರುಧ್ಯಗಳ ನಿಂತಿರಬೇಕಾದ ಪರಿಸ್ಥಿತಿ ಇರುವುದಿಲ್ಲ. ನಾವೆಲ್ಲಾ ಒಂದೇ ಎಂಬ ಭಾವ ಮೂಡುತ್ತದೆ. ಹೊಂದಾಣಿಕೆಯ ಸಮಸ್ಯೆ ಇರುವ ಕೆಲಸಗಾರರ ಸಮೂಹದಲ್ಲಿ ನಾನಿದನ್ನು ಬಳಸುತ್ತೇನೆ. ಅವರನ್ನೆಲ್ಲಾ ಒಗ್ಗೂಡಿಸಿ ನಾನು ಯಾರು ಎಂಬ ಕಥೆಯನ್ನು ಹೇಳುವಂತೆ ಪ್ರೇರೇಪಿಸುತ್ತೇನೆ. ಆಗ ಅವರಿಗೆ ತಮ್ಮ ತಂಡದ ಎಲ್ಲಾ ಸದಸ್ಯರೂ ಸಹ ಒಳ್ಳೆಯ ಜನರೇ, ನಾವೆಲ್ಲರೂ ಒಂದೇ ವಿಚಾರದ ಸಲುವಾಗಿ ಶ್ರಮಿಸುತ್ತಿದ್ದೇವೆ ಎಂಬ ಅರಿವಾಗುತ್ತದೆ. ಈ ಮೂಲಕ ಎಲ್ಲಾ ಹೊಂದಾಣಿಕೆಯ ಸಮಸ್ಯೆಗಳ ಪ್ರಮಾಣ ಕಡಿಮೆಯಾಗುತ್ತದೆ.

ಯು.ಸ್ಟೋ: ಕಥೆ ಹೇಳುವ ಮಾದರಿಯನ್ನು ಅಳವಡಿಸಿಕೊಂಡಿರುವ ಯಾವ ಸರ್ಕಾರಗಳ ಮೂಲಕ ನೀವು ಸ್ಫೂರ್ತಿ ಪಡೆದಿದ್ದೀರಿ?

ಆ್ಯ.ಸೈ: ಪಾರದರ್ಶಕತೆ ಮತ್ತು ಸ್ಪಷ್ಟವಾಗಿ ಕತೆ ಹೇಳುವ ವಿಧಾನವನ್ನು ಅಳವಡಿಸಿಕೊಂಡಿರುವ ದೇಶಕ್ಕೆ ಸಿಂಗಪೂರ್ ಒಂದು ಉತ್ತಮ ಉದಾಹರಣೆ. ಆದರೆ ಪ್ರತಿ ಸರ್ಕಾರವೂ ಶಾಲೆಗಳ ಕ್ರಿಯಾಶೀಲ ಚಟುವಟಿಕೆಗಳಿಗಾಗಿ, ವರದಿಗಳ ಅಂಕಿಅಂಶಗಳ ನಿರ್ಧಾರಕ್ಕಾಗಿ ಮತ್ತು ಸೇನೆಯ ಉಡುಪಿನ ಆಯ್ಕೆಗಾಗಿಯೂ ಕಥೆಗಳನ್ನು ಆಯ್ದುಕೊಳ್ಳುತ್ತದೆ.

ಚಿನ್ನವನ್ನು ಧರಿಸುವುದು ಬಿಟ್ಟುಬಿಟ್ಟಾಗ ಪೋಪ್ ಫ್ರಾನ್ಸಿಸ್ ಕೂಡ ಕಥೆಹೇಳುವ ಪಾತ್ರವನ್ನು ವಹಿಸಿಕೊಂಡಿದ್ದರು ಮತ್ತು ದುಬಾರಿ ಉಡುಪುಗಳ ಬದಲಿಗೆ ಸರಳವಾಗಿರುವ ಉಡುಪನ್ನು ಧರಿಸುವ ನಿರ್ಧಾರ ಕೈಗೊಂಡಾಗಲೂ ಅವರು ಕಥೆಯ ಮೊರೆ ಹೋಗಿದ್ದರು. ಅವರ ಪ್ರವಾಸ ಯೋಜನೆಯೂ ಸಹ ಕಥೆ ಹೇಳುತ್ತದೆ. ಅವರು ಅಮೆರಿಕಾ ತಲುಪುವ ಮೊದಲು ಅವರು ಅಮೆರಿಕಾಕ್ಕೆ ಹೋಲಿಸಿದರೆ ಸಣ್ಣ ಹಾಗೂ ಬಡ ದೇಶವಾದ ಕ್ಯೂಬಾಗೆ ಭೇಟಿ ನೀಡಿದ್ದರು. ಕಥೆ ಹೇಳುವಿಕೆ ಮಾನವನ ಇತಿಹಾಸದುದ್ದಕ್ಕೂ ಶೀರ್ಷಿಕೆಯಿಲ್ಲದ ಅಥವಾ ಶೀರ್ಷಿಕೆಯಿದ್ದೋ ನಡೆದುಬಂದಿದೆ.

ಯು.ಸ್ಟೋ: ಕಥೆ ಹೇಳುವಿಕೆಯ ವಿಚಾರದಲ್ಲಿ ಪ್ರಸ್ತುತ ನಿಮ್ಮ ಸಂಶೋಧನೆಯ ಕ್ಷೇತ್ರ ಯಾವುದು?

ಆ್ಯ.ಸೈ: ನನಗೆ ಕಥೆಗಳಲ್ಲಿ ಆಸಕ್ತಿ ಇದೆ ಮತ್ತು ಕಥೆ ಹೇಳುವಿಕೆ ಸಮಾಜವನ್ನು ಸುಧಾರಿಸುವ ಸಾಧ್ಯತೆಯೂ ಇದೆ. ಉದಾಹರಣೆಗೆ ಅನಾರೋಗ್ಯಕರ ವರ್ತನೆಗಳಿಂದ ಬಿಡುಗಡೆ ಹೊಂದಲು ಸಾರ್ವಜನಿಕ ಆರೋಗ್ಯ ವಲಯವೂ ಸಹ ಕಥೆ ಹೇಳುವಿಕೆ ಮೊರೆ ಹೋಗಬಹುದು. ಬೋಧನೆ ಅಥವಾ ಮಾಹಿತಿ ಶಿಬಿರಗಳಿಗಿಂತಲೂ ಕಥೆ ಹೇಳುವಿಕೆ ಪರಿಣಾಮಕಾರಿಯಾಗಿದೆ ಮತ್ತು ಕಡಿಮೆ ವೆಚ್ಚದಲ್ಲಿ ದೊರಕಬಹುದಾದ ವಿಧಾನವಾಗಿದೆ. ಸಮಸ್ಯೆಯೆಂದರೆ ಸಾರ್ವಜನಿಕ ಆರೋಗ್ಯ ಅಧಿಕಾರಿಗಳು ಪಾರ್ಶ್ವಚಿಂತನೆಯನ್ನು ಮತ್ತು ಸಾಕ್ಷಿ ಆಧಾರಿತ ಅಧ್ಯಯನಗಳಿಂದಷ್ಟೇ ರೋಗಿಗಳನ್ನು ಪರಿಶೀಲಿಸುತ್ತಾರೆ. ಇದರ ಬದಲಿಗೆ ಕಥೆ ಹೇಳುವ ವಿಧಾನವನ್ನು ಸಮರ್ಪಕವಾಗಿ ಉಪಯೋಗಿಸಿಕೊಳ್ಳಬಹುದು.

ಪ್ರಕ್ರಿಯೆ ಮತ್ತು ವಿನ್ಯಾಸ ಅಭಿವೃದ್ಧಿ ಚಿಂತನೆಯ ಬಗ್ಗೆ ಬಳಕೆದಾರರ ಅನುಭವದಿಂದ ದೊರೆತಿರುವ ಜನಪ್ರಿಯತೆಯ ಬಗ್ಗೆ ನನಗೆ ಹರ್ಷವಿದೆ. ಏಕೆಂದರೆ ಈ ಎರಡು ಮಾದರಿಗಳು ಊಹಿಸಲು ಸಾಧ್ಯವಿರುವ ಕಥೆ ಹೇಳುವಿಕೆಯನ್ನು ಕೊಲ್ಲುವಂತಹ ಕೆಟ್ಟ ಪ್ರಕ್ರಿಯೆಯ ಹವ್ಯಾಸಗಳನ್ನು ಜನರಿಂದ ದೂರಮಾಡಲು ಸಹಾಯಕವಾಗಿವೆ. ಸಾಮಾನ್ಯ ಕಾರ್ಯವಿಧಾನಗಳು ಹೆಚ್ಚು ವೈಜ್ಞಾನಿಕವಾಗಿರುವ ವಿಧಾನಗಳನ್ನು ಸಮಸ್ಯೆಯನ್ನು ಕಂಡುಹಿಡಿಯಲು, ಕಾರಣೀಕೃತ ಅಂಶಗಳನ್ನು ಹುಡುಕಲು ಅನುಸರಿಸುತ್ತವೆ.

ಕಥೆ ಹೇಳುವಲ್ಲಿ ಪರಿಣಿತಿ ಹೊಂದಿರುವವರು ಸದಾ ಹೊಸ ಕಲ್ಪನೆಗಳೊಂದಿಗೆ ಪ್ರಯೋಗ ಮಾಡುತ್ತಲೇ ಇರುತ್ತಾರೆ. ನಿರಂತರ ಹುಡುಕಾಟ, ಸ್ವೀಕಾರ ಅಥವಾ ವಿಚಾರಗಳನ್ನು ಬದಲಾಯಿಸುತ್ತಲೇ ಇರುತ್ತಾರೆ. ಇದರ ಮೂಲಕ ಕಥೆ ನಿಜಕ್ಕೆ ಹತ್ತಿರವಾಗಿರುವಂತೆ ಮಾಡಲು ಯತ್ನಿಸುತ್ತಿರುತ್ತಾರೆ. ಬಳಕೆದಾರರ ಅನುಭವದಿಂದ ಕಲಿಯುವುದಕ್ಕೂ ಮೊದಲು ನಾನು ನನ್ನದೇ ಆದ ಮಾದರಿಯನ್ನು ಅನುಸರಿಸಿದೆ. ವಾಸ್ತವ ಮತ್ತು ಆಂತರಿಕತೆ ಮಧ್ಯೆ ಅಂತರವನ್ನು ತೋರಬಲ್ಲ ಚಿಂತನೆಯನ್ನು ಅಳವಡಿಸಿಕೊಂಡಿದ್ದೆ. ಬಹಳಷ್ಟು ವ್ಯತ್ಯಾಸವುಳ್ಳ, ಅನಿರೀಕ್ಷಿತ ಮತ್ತು ಅಸ್ಪಷ್ಟ ಅಭಿಪ್ರಾಯ ಹೊಂದಿರುವ ಪ್ರಪಂಚದ ಮುಂದೆ ನಾನು ಇದನ್ನು ಪ್ರದರ್ಶಿಸಬೇಕಾಗಿತ್ತು. ನಾವು ನಿರಂತರವಾಗಿ ಅನೇಕ ಸವಾಲುಗಳನ್ನು ಎದುರಿಸಬೇಕಾಯಿತು, ಪ್ರಯೋಗಗಳನ್ನು ಮಾಡಬೇಕಾಯಿತು ಮತ್ತು ಹೊಸ ವಿಚಾರಗಳನ್ನು ಸ್ವೀಕರಿಸುತ್ತಲೇ ಇರಬೇಕಾಯಿತು.

ಹಿಂದೆ ಪ್ರತಿಯೊಬ್ಬರೂ ಕಾರ್ಯವಿಧಾನವನ್ನು ಕಲಿಯಲು ಇಚ್ಛಿಸುತ್ತಿದ್ದರು. ಏಕೆಂದರೆ ಅವರಿಗೆ ಸರಿಯಾದದ್ದನ್ನೇ ಮಾಡಬೇಕಾಗಿತ್ತು. ಅದನ್ನು ಸಮರ್ಪಕ ಫಲಿತಾಂಶವನ್ನು ಪಡೆಯಬೇಕಾಗಿತ್ತು. ಗ್ಯಾರೆಂಟಿಯಾಗಿ ಕೆಲಸ ಮಾಡಬಲ್ಲ ಕಥೆಗಳನ್ನೇ ಹೇಳಬೇಕಾಗಿತ್ತು. ಅದು ಕೇವಲ ಮಾನವನ ನಿರ್ವಹಣೆಗೆ ಬಿಟ್ಟ ಅಂಶವಲ್ಲ. ಯಾವುದೋ ಒಂದು ವಿಧಾನ ನಿರ್ದಿಷ್ಟ ಪರಿಸ್ಥಿತಿಯಲ್ಲಿ ಒಮ್ಮೆ ಕೆಲಸ ಮಾಡಿದಂತೆ ಮತ್ತೊಮ್ಮೆ ಕೆಲಸ ಮಾಡಬೇಕೆಂದಿಲ್ಲ. ನೀವು ಬಾಂಧವ್ಯದಲ್ಲಿರಬೇಕು, ಕೇಳುತ್ತಲೇ ಇರಬೇಕು ಮತ್ತು ಸ್ವೀಕರಿಸುತ್ತಲೇ ಇರಬೇಕು.

ಹೀಗೆ ಕಥೆ ಹೇಳುವುದರ ಮಹತ್ವವನ್ನು ತಿಳಿಸಿ ತಮ್ಮ ಮಾತು ಮುಗಿಸಿದರು ಆ್ಯನೆಟ್ಟೆ ಸೈಮನ್ಸ್.