ಒತ್ತಡವಿಲ್ಲದ ಕೆಲಸ- ಕೈ ತುಂಬಾ ಸಂಬಳ- ನೆಮ್ಮದಿಯಾಗಿ ಸಮಯ ಕಳೆಯುವ ಬಗ್ಗೆ ಯೋಚನೆ ಮಾಡಿ

ಟೀಮ್​ ವೈ.ಎಸ್​. ಕನ್ನಡ

0

ಇವತ್ತಿನ ಜಮಾನಾದಲ್ಲಿ ಕೆಲಸ ಎಲ್ಲರಿಗೂ ಬೇಕು. ಕೈತುಂಬಾ ಸಂಭಾವನೆ ಕೂಡ ಬೇಕು. ಅರ್ಹತೆ ಮತ್ತು ಕೊಂಚ ಅನುಭವ ಇದ್ರೆ ಸಾಕು ಕೆಲಸ ಸಿಕ್ಕೇ ಸಿಗುತ್ತದೆ. ಮನಸ್ಸಿಗೆ ನೆಮ್ಮದಿ ತರುವಷ್ಟು ಸಂಬಳವೂ ಸಿಗುತ್ತದೆ. ಆದ್ರೆ ಕೆಲಸದ ಒತ್ತಡ ಸಾಕಷ್ಟು ತೊಂದರೆ ಕೊಡುತ್ತಿದೆ.

 ಕೆಲಸದ ಗಡಿಬಿಡಿಯಲ್ಲಿ ಊಟ ಮಾಡೋದು ಮರೆತು ಹೋಗುತ್ತಿದೆಯಾ..?.

 ಬಿಡುವಿನ ವೇಳೆಯಲ್ಲೂ ನೀವು ಕೆಲಸದ ಬಗ್ಗೆ ಯೋಚನೆ ಮಾಡುತ್ತಿರುವಿರಾ..?

 ಕೆಲಸದ ಒತ್ತಡ ನಿಮ್ಮ ಹವ್ಯಾಸಕ್ಕೆ ಕಡಿವಾಣ ಹಾಕಿದೆಯಾ..?

 ಆರೋಗ್ಯ ಕೈ ಕೊಟ್ಟಾಗಲೂ ಕೆಲಸ ಮಾಡಬೇಕಾದ ಸ್ಥಿತಿ ಇದೆಯಾ..?

 ಕೆಲಸದ ಒತ್ತಡದಲ್ಲಿ ಗೆಳೆಯರು ಮತ್ತು ಕುಟುಂಬದ ಬಗ್ಗೆ ಪ್ರೀತಿ ಕಡಿಮೆ ಆಗಿದೆಯಾ..?

ಮೇಲಿನ ಎಲ್ಲಾ ಪ್ರಶ್ನೆಗಳಿಗೂ ಬಹುತೇಕರ ಉತ್ತರ "ಹೌದು" ಅನ್ನೋದು ಮಾತ್ರ ಆಗಿರುತ್ತದೆ. ಇಷ್ಟಾದ್ರೂ ಕೆಲವರಿಗೆ ಉತ್ತಮ ಸಂಭಾವನೆ ಸಿಗುವುದು ಕಡಿಮೆ . ನೀವು ಮಾಡುವ ಕೆಲಸದ ಬಗ್ಗೆ ನಿಮಗೆ ಐಡಿಯಾ ಕೂಡ ಕಡಿಮೆ ಇರಬಹದು. ಆದ್ರೆ ನಿಮ್ಮ ಕೆಲಸದ ಒತ್ತಡವನ್ನು ಕಡಿಮೆ ಮಾಡಲು ಇಲ್ಲಿ ಕೆಲವೊಂದು ಐಡಿಯಾಗಳಿವೆ. ಕಡಿಮೆ ಕೆಲಸ ಮಾಡಿ ನೆಮ್ಮದಿಯಾಗಿ ಹೆಚ್ಚು ಸಂಬಳ ಪಡೆಯುವ ಐಡಿಯಾ ನಿಮಗಿದ್ರೆ, ಜೊತೆಗೆ ಅರ್ಹತೆಯೂ ನಿಮ್ಮಲ್ಲಿದ್ದರೆ, ಈ ಕೆಲಸಗಳಿಗೆ ಇವತ್ತೇ ಟ್ರೈ ಮಾಡಿ.

ಇದನ್ನು ಓದಿ: ನನಸಾಯ್ತು ಉದ್ಯಮದ 'ಹೂ' ಕನಸು : ಕಾಶ್ಮೀರದ ಸಾಹಸಿ ಮಹಿಳೆಯ ಯಶೋಗಾಥೆ

ವೈದ್ಯರು ಮತ್ತು ಸರ್ಜನ್​ಗಳು

ಕಾಯಿಲೆಗಳಿಗೆ ಔಷಧವನ್ನು ನೀಡುವುದು ಮತ್ತು ರೋಗಿ ಬಳಲುತ್ತಿರುವ ಕಾಯಿಲೆಯನ್ನು ಮತ್ತೆ ಹಚ್ಚುವುದು ಇವರ ಮೊದಲ ಕೆಲಸ. ಸಂದರ್ಭಕ್ಕೆ ತಕ್ಕಂತೆ ಕೆಲಸ ಮಾಡುವುದು ಇವರಿಗೆ ಬೇಕಾದ ಮುಖ್ಯ ಅರ್ಹತೆ. ನಾಲ್ಕು ಅಥವಾ ಐದು ವರ್ಷಗಳ ಪದವಿ ಜೊತೆಗೆ 3 ರಿಂದ 7 ವರ್ಷಗಳ ಸೇವಾ ಅನುಭವ ಇದ್ರೆ ಸಂಭಾವನೆ ಬಗ್ಗೆ ಚಿಂತೆಯೇ ಬೇಡ.

 ಸರಾಸರಿ ಕೆಲಸದ ಸಮಯ (ವಾರಕ್ಕೆ): 51.2 ಗಂಟೆಗಳು

 ಸರಾಸರಿ ಸಂಭಾವನೆ (ವಾರ್ಷಿಕ): 958,964 ರೂಪಾಯಿ

ಲಾಯರ್​ಗಳು

ನ್ಯಾಯಾಂಗದಲ್ಲಿ ಕಾರ್ಯ ಮಾಡುವವು ಕೂಡ ಇವತ್ತು ಹೆಚ್ಚು ಸಂಪಾದನೆಯನ್ನು ಮಾಡಬಹುದು. ಕಾನೂನಿನಲ್ಲಿ ಪದವಿ ಮತ್ತು ರಾಜ್ಯ ಬಾರ್ ಕೌನ್ಸಿಲ್​ಗಳಿಂದ ಅರ್ಹತೆ ಪಡೆದ್ರೆ ಸಾಕು ನಿಮ್ಮ ಕೆಲಸವನ್ನು ಆರಂಭಿಸಬಹುದು. ನ್ಯಾಯಮೂರ್ತಿಗಳು ಆಗಬೇಕಾದ್ರೆ, ಕೆಲ ವರ್ಷಗಳ ಕಾಲ ಅಟಾರ್ನಿಯಾಗಿಯೂ ಕೆಲಸ ಮಾಡಿದ ಅನುಭವ ಇದ್ದರೆ ಒಳ್ಳೆಯದು.

 ಸರಾಸರಿ ಕೆಲಸದ ಸಮಯ (ವಾರಕ್ಕೆ): 45.5 ಗಂಟೆಗಳು

 ಸರಾಸರಿ ಸಂಭಾವನೆ (ವಾರ್ಷಿಕ): 726,490 ರೂಪಾಯಿ

ಎಂಜಿನಿಯರ್​ಗಳು ಮತ್ತು ವಾಸ್ತು ತಜ್ಞರು

ಹೆಸರೇ ಹೇಳುವಂತೆ ಈ ಕೆಲಸಕ್ಕೆ ಬೇಡಿಕೆ ತುಂಬಾ ಹೆಚ್ಚಿದೆ. ಅದ್ಭುತ ಐಡಿಯಾಗಳನ್ನು ತುಂಬಿರುವ ಎಂಜಿನಿಯರ್​ಗಳಿಗೆ ಬೇಡಿಕೆ ವಿಶ್ವದೆಲ್ಲೆಡೆ ಇದ್ದೇ ಇದೆ. ಎಂಜಿನಿಯರಿಂಗ್ ಪದವಿ ಮತ್ತು ಸ್ವಲ್ಪ ಅನುಭವ ಇದ್ದರೆ ಸಾಕು ಕೆಲಸಕ್ಕೇನು ತೊಂದರೆ ಬರುವುದಿಲ್ಲ. ಇನ್ನು ವಾಸ್ತು ತಜ್ಞರಿಗಂತೂ ಈಗ ಎಲ್ಲಿಲ್ಲದ ಬೇಡಿಕೆ ಇದ್ದೇ ಇದೆ.

 ಸರಾಸರಿ ಕೆಲಸದ ಸಮಯ (ವಾರಕ್ಕೆ): 46.7 ಗಂಟೆಗಳು

 ಸರಾಸರಿ ಸಂಭಾವನೆ (ವಾರ್ಷಿಕ): 696,965 ರೂಪಾಯಿ

ವೈಯಕ್ತಿಕ ಆರ್ಥಿಕ ತಜ್ಞ

ವ್ಯಕ್ತಿಯ, ಹೂಡಿಕೆದಾರನ ಏಳಿಗೆಯನ್ನು ಮತ್ತು ಅವರ ಭವಿಷ್ಯವನ್ನು ಕಟ್ಟಬಲ್ಲ ಶಕ್ತಿ ಆರ್ಥಿಕ ತಜ್ಞರಿಗಿದೆ. ಹೂಡಿಕೆ ಬಗ್ಗೆ ಜ್ಞಾನ ಮತ್ತು ಅದನ್ನು ತಿಳಿ ಹೇಳಬಲ್ಲ ಶಕ್ತಿ ಕೂಡ ಈ ಕೆಲಸ ಬಯಸುವ ವ್ಯಕ್ತಿಗಳಿಗೆ ಇರಬೇಕಾಗುತ್ತದೆ. ತೆರಿಗೆ, ರಿಯಲ್ ಎಸ್ಟೇಟ್ ಸೇರಿದಂತೆ ಹಲವು ವಿಭಾಗಗಳಲ್ಲಿ ಜ್ಞಾನ ಹೊಂದಿರುವ ವ್ಯಕ್ತಿಗಳು ಈ ಕೆಲಸದಲ್ಲಿ ಯಶಸ್ಸು ಪಡೆಯುವುದು ಖಚಿತ.

 ಸರಾಸರಿ ಕೆಲಸದ ಸಮಯ (ವಾರಕ್ಕೆ): 53.4 ಗಂಟೆಗಳು

 ಸರಾಸರಿ ಸಂಭಾವನೆ (ವಾರ್ಷಿಕ): 528012 ರೂಪಾಯಿ

ವಿಮಾ ಗಣಕಕಾರ

ರಿಸ್ಕ್ ಮ್ಯಾನೇಜ್​ಮೆಂಟ್ ಇವರ ಮೊದಲ ಕೆಲಸ. ಕಂಪನಿಗಳ ನಷ್ಟವನ್ನು ಕಡಿಮೆಗೊಳಿಸಿ, ಉತ್ತಮ ಭವಿಷ್ಯ ಕಟ್ಟಲು ನೆರವು ನೀಡಬಲ್ಲ ಐಡಿಯಾಗಳನ್ನು ಕೊಡುವುದು ಇವರ ಮುಖ್ಯ ಕೆಲಸ. ಆರ್ಥಿಕ ವಿಚಾರದಲ್ಲಿ ಇವರು ಕಂಪನಿಯ ಬೆನ್ನೆಲುವು ಅನ್ನೋದರಲ್ಲಿ ಡೌಟೇ ಇಲ್ಲ.

 ಸರಾಸರಿ ಕೆಲಸದ ಸಮಯ (ವಾರಕ್ಕೆ): 42.8 ಗಂಟೆಗಳು

 ಸರಾಸರಿ ಸಂಭಾವನೆ (ವಾರ್ಷಿಕ): 977943ರೂಪಾಯಿ

ಅರ್ಥಶಾಸ್ತ್ರಜ್ಞರು

ಅರ್ಥಶಾಸ್ತ್ರಜ್ಞರು ಹಲವರು ವಿಷಯಗಳ ಬಗ್ಗೆ ಜ್ಞಾನವನ್ನು ಹೊಂದಿರುತ್ತಾರೆ. ದೇಶದ ಆರ್ಥಿಕ ನೀತಿಯಿಂದ ಹಿಡಿದು ಅಂತರಾಷ್ಟ್ರೀಯ ಹೂಡಿಕೆ, ಮುಂದಿನ ಬೆಳವಣಿಗೆಗಳ ಬಗ್ಗೆ ವಿಶೇಷ ಜ್ಞಾನವನ್ನು ಸಂಪಾದಿಸಿರಬೇಕಾಗುತ್ತದೆ. ಅರ್ಥಶಾಸ್ತ್ರಜ್ಞರ ಕೆಲಸಕ್ಕೆ ಈಗ ವಿಶ್ವದೆಲ್ಲೆಡೆ ಹೆಚ್ಚಿನ ಬೇಡಿಕೆ ಇದೆ.

 ಸರಾಸರಿ ಕೆಲಸದ ಸಮಯ (ವಾರಕ್ಕೆ): 44. 2 ಗಂಟೆಗಳು

 ಸರಾಸರಿ ಸಂಭಾವನೆ (ವಾರ್ಷಿಕ): 615, 336 ರೂಪಾಯಿ

ವಿಮಾನ ಪೈಲಟ್ ಮತ್ತು ವಿಮಾನ ಎಂಜಿನಿಯರ್

ಈ ಕೆಲಸ ಅತ್ಯಂತ ದೊಡ್ಡ ಕೆಲಸವೇ. ಪೈಲಟ್ ಕೆಲಸ ಈ ಕೆಲಸಕ್ಕೆ ಹೆಚ್ಚುಏಕಾಗ್ರತೆ ಬೇಕಾಗುತ್ತದೆ.

 ಸರಾಸರಿ ಕೆಲಸದ ಸಮಯ (ವಾರಕ್ಕೆ):55. 1ಗಂಟೆಗಳು

 ಸರಾಸರಿ ಸಂಭಾವನೆ (ವಾರ್ಷಿಕ): 1,213,564 ರೂಪಾಯಿ

ಹೀಗೆ ಆಸಕ್ತಿ ಇದ್ದರೆ ಮತ್ತು ಅರ್ಹತೆ ಇದ್ದರೆ ಇವತ್ತು ಯಾವ ಕೆಲವನ್ನು ಬೇಕಾದರೂ ಮಾಡಬಹುದು. ನಿಮಗೆ ಯಾವ ಕೆಲಸ ಇಷ್ಟವೋ ಅದನ್ನು ಮಾಡಿ. ಸಂಬಳ ಮತ್ತು ಮಾನಸಿಕ ನೆಮ್ಮದಿ ಎಲ್ಲದಕ್ಕಿಂತ ಮುಖ್ಯ ಅನ್ನುವುದನ್ನು ಮರೆಯುವ ಹಾಗಿಲ್ಲ.

ಇದನ್ನು ಓದಿ:

1. ಬೆಂಗಳೂರಿಗೆ ಸ್ಟೀಲ್ ಫ್ಲೈ ಓವರ್ ಕನಸು- ಪರ, ವಿರೋಧಗಳ ನಡುವೆ ನಡೆಯುತ್ತಿದೆ ಲೆಕ್ಕಾಚಾರದ ಚರ್ಚೆ..!

2. ಅಮ್ಮನದ್ದೇ ಕೈರುಚಿ- ಅನಾರೋಗ್ಯದ ಬಗ್ಗೆಯೂ ಬೇಡ ಭೀತಿ

3. "ಹೆಮ್ಮೆಯ ಕನ್ನಡಿಗ"ರು ಇಂದು ಎಂದು ಎಂದೆಂದೂ- ಎಲ್ಲೆಡೆ ಪಸರಿಸಲಿ ಕನ್ನಡ ನುಡಿ

Related Stories