ಹಾರ್ಡ್‍ವೇರ್ ಮತ್ತು ತಂತ್ರಜ್ಞಾನ ಬೆರೆತ ` Bfonics': ಸಂಕಷ್ಟಕ್ಕೆ ಸಿಲುಕಿರುವ ವ್ಯಾಪಾರಿಗಳಿಗೆ ವರದಾನ

ಟೀಮ್​​ ವೈ.ಎಸ್​​. ಕನ್ನಡ

ಹಾರ್ಡ್‍ವೇರ್ ಮತ್ತು ತಂತ್ರಜ್ಞಾನ ಬೆರೆತ ` Bfonics':
ಸಂಕಷ್ಟಕ್ಕೆ ಸಿಲುಕಿರುವ ವ್ಯಾಪಾರಿಗಳಿಗೆ ವರದಾನ

Sunday December 06, 2015,

3 min Read

ಇಟ್ಟಿಗೆ ಮತ್ತು ಗಾರೆ ಮಳಿಗೆಗಳಿಗೆಲ್ಲ ಈಗ ಸಂಕಷ್ಟದ ಕಾಲ. ದಿನೇ ದಿನೇ ಆನ್‍ಲೈನ್ ಮಾರಾಟ ಭರಾಟೆ ಹೆಚ್ತಾ ಇರೋದ್ರಿಂದ ಮಳಿಗೆಗಳಿಗೆ ಒತ್ತಡ ಶುರುವಾಗಿದೆ. ಗ್ರಾಹಕರು ತುಂಬಾ ಸುಲಭವಾಗಿ ಆನ್‍ಲೈನ್ ಡೀಲ್‍ಗಳು ಹಾಗೂ ಮಾರಾಟದತ್ತ ಆಕರ್ಷಿತರಾಗ್ತಿದ್ದಾರೆ. ಆಫ್‍ಲೈನ್ ಮಳಿಗೆಗಳು ಗ್ರಾಹಕರನ್ನು ಸೆಳೆಯುವಲ್ಲಿ ವಿಫಲವಾಗ್ತಾ ಇವೆ. ಗ್ರಾಹಕರನ್ನು ಅಂಗಡಿಗಳತ್ತ ಸೆಳೆಯಲು ಅಪಾರ ಹಣ ಹೂಡಿಕೆ ಮಾಡುತ್ತಿದ್ದರೂ, ಅವರಿಂದ ಉತ್ತಮ ಮೌಲ್ಯ ಪಡೆಯಲು ಬ್ರಾಂಡ್‍ಗಳು ಯಶಸ್ವಿಯಾಗುತ್ತಿಲ್ಲ.

image


ಈ ಸಮಸ್ಯೆಗೆ `Bfonics’ಪರಿಹಾರ ಹುಡುಕಿದೆ. ಮಿತವ್ಯಯದ ಹೊಸ ಉಪಕರಣಗಳನ್ನು ಒದಗಿಸಿದರೆ, ನೈಜ ಸಮಯ ಹಾಗೂ ಮಳಿಗೆಯ ಲಭ್ಯತೆಗೆ ಸಂಬಂಧಿಸಿದ ಸಂದೇಶಗಳನ್ನು ಗ್ರಾಹಕರಿಗೆ ತಲುಪಿಸಬಹುದು. ಇದರಿಂದ ಪರಿಸ್ಥಿತಿ ಬದಲಾಗುತ್ತದೆ ಅನ್ನೋ ವಿಶ್ವಾಸ `Bfonics’ಗಿದೆ. ಮಳಿಗೆಯ ಒಳಗಿದ್ದಾಗಲೂ ಬಹುತೇಕ ಎಲ್ಲ ಗ್ರಾಹಕರು ಸ್ಮಾರ್ಟ್ ಫೋನ್ ಬಳಸುತ್ತಾರೆ. ಅವರದ್ದೇ ಸ್ಮಾರ್ಟ್ ಫೋನ್ ಮೂಲಕ ಗ್ರಾಹಕರು ಅಂಗಡಿಯೊಳಗೆ ನಿರತರಾಗಿರುವಂತೆ ಮಾಡಿದರೆ ಮಾರಾಟ ಹೆಚ್ಚಾಗಲಿದೆ. ಮಳಿಗೆಯ ಮಾಲಿಕರು ಹೂಡಿಕೆಗೆ ಪ್ರತಿಯಾಗಿ ಹೆಚ್ಚು ಪ್ರತಿಫಲವನ್ನೂ ಪಡೆಯಬಹುದು ಅನ್ನೋದು ಇವರ ಲೆಕ್ಕಾಚಾರ.

ಎಲ್ಲೇ ಇದ್ರೂ ಜನರು ಅವರ ಸ್ಮಾರ್ಟ್‍ಫೋನ್ ಅನ್ನು ಕೊಂಡಿಯಂತೆ ಜೊತೆಗಿಟ್ಟುಕೊಂಡಿರ್ತಾರೆ. ಇದ್ರಿಂದ ಸಾಂಪ್ರದಾಯಿಕ ಜಾಹೀರಾತು ವಿಧಾನಗಳಾದ ಮುದ್ರಣ ಮಾಧ್ಯಮ, ಹೊರಾಂಗಣ ಜಾಹೀರಾತುಗಳ ಮೂಲಕ ಗ್ರಾಹಕರನ್ನು ಸೆಳೆಯುವುದು ಕಷ್ಟ ಎನ್ನುತ್ತಾರೆ`Bfonics’ನ ಸಂಸ್ಥಾಪಕ ಹಾಗೂ ಸಿಇಓ ಉನ್ನಿ ಪೆರೋಥ್. ಹಾಗಾಗಿ ಮೊಬೈಲ್ ತಂತ್ರಜ್ಞಾನದ ಮೂಲಕ ನೋಟಿಫಿಕೇಷನ್ ಕಳಿಸಿ ಗ್ರಾಹಕರು ಅಂಗಡಿಯಲ್ಲಿ ಹೆಚ್ಚು ಸಮಯ ವ್ಯಯಿಸುವಂತೆ ಮಾಡುವುದು ಹೆಚ್ಚು ಉಚಿತ ಎಂದು ಉನ್ನಿ ಪೆರೋಥ್ ಅಭಿಪ್ರಾಯಪಟ್ಟಿದ್ದಾರೆ.

ಈ ವರ್ಷ `ಯುವರ್‍ಸ್ಟೋರಿ' ಆಯೋಜಿಸಿದ್ದ `ಟೆಕ್ ಸ್ಪಾರ್ಕ್ಸ್​​​'ನ 30 ಟೆಕ್ ಸ್ಟಾರ್ಟ್‍ಅಪ್‍ಗಳ ಪೈಕಿ `Bfonics’ ಕೂಡ ಒಂದು. ಇದು ಉನ್ನಿ, ರೋನಿ ಮ್ಯಾಥ್ಯೂ, ಬಿನೊಯ್ ಮ್ಯಾಥ್ಯೂ ಮತ್ತು ಅರುಣ್ ರಾಜ್ ಅವರ ಕನಸಿನ ಕೂಸು. ಉನ್ನಿ ಅವರೊಬ್ಬ ಸರಣಿ ವಾಣಿಜ್ಯೋದ್ಯಮಿ, ಇದಕ್ಕೂ ಮೊದಲು `ಯುವರ್ ಸೀಡರ್' ಮತ್ತು `ಸೆಂಟ್ರಿಕಾ ಗ್ಲೋಬಲ್' ಸೇರಿದಂತೆ ಹಲವು ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ್ದಾರೆ. ರೋಮಿ ದಶಕಗಳ ಕಾಲ ಎಂಎನ್‍ಸಿ ಕಂಪನಿಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. `ಸ್ಪೆಕ್ಟ್ರಮ್ ಇನ್ಫೋಟೆಕ್', `ಸುಶುಸ್ ಟೆಕ್ನಾಲಜೀಸ್', `ಹೆವ್ಲೆಟ್ ಪ್ಯಾಕಾರ್ಡ್'ನಂತಹ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಅರುಣ್ ಹಾಗೂ ಬಿನೊಯ್ ಕೂಡ ಸರಣಿ ವಾಣಿಜ್ಯೋದ್ಯಮಿಗಳು, `ಎನ್‍ಫೋನಿಕ್ಸ್'ನ ಸಹ ಸಂಸ್ಥಾಪಕರು. ಬಿನೊಯ್ ಮಾಹಿತಿ ತಂತ್ರಜ್ಞಾನ ವಲಯದಲ್ಲಿ 10 ವರ್ಷ ಕೆಲಸ ಮಾಡಿದ್ದಾರೆ. ಅವರು ಪ್ರವಾಸ, ಬ್ಯಾಂಕಿಂಗ್ ಹಾಗೂ ಸಂಗ್ರಹ ಡೊಮೇನ್‍ಗಳ ತಂತ್ರಜ್ಞಾನ ತಜ್ಞರಾಗಿದ್ದರು.

ಚಿಲ್ಲರೆ ವ್ಯಾಪಾರಿಗಳು ಎದುರಿಸ್ತಾ ಇರೋ ಸವಾಲುಗಳನ್ನು ಅರಿತ ನಮ್ಮ ತಂಡ ನಿಜಾವಧಿಯ ಗ್ರಾಹಕ ನಿಶ್ಚಿತಾರ್ಥ ರಚಿಸಲು ಸಂಕೇತ ಆಧಾರಿತ ತಂತ್ರಜ್ಞಾನ ವೇದಿಕೆಯೊಂದನ್ನು ನಿರ್ಮಿಸಿದೆ ಎನ್ನುತ್ತಾರೆ ರೋಮಿ. ಆರಂಭದಲ್ಲಿ ಈ ತಂಡ `BLE'ಹೆಸರಲ್ಲಿ ವೇದಿಕೆಯೊಂದನ್ನು ಆರಂಬಿಸಿತ್ತು, ಬಳಿಕ ಹಾರ್ಡ್‍ವೇರ್ ಕಡೆಗೆ ಜಂಪ್ ಮಾಡಿದೆ. `ಬಿಎಲ್‍ಇ' (ಬ್ಲೂಟೂತ್ ಲೋ ಎನರ್ಜಿ)ಯ ಪಾತ್ರವನ್ನು ಅರ್ಥಮಾಡಿಕೊಂಡ ತಂಡ ಸಂಕೇತ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿತ್ತು. ಆದ್ರೆ ಏಷ್ಯನ್ ಮಾರುಕಟ್ಟೆಯಲ್ಲಿ ಬಹುತೇಕ ಗ್ರಾಹಕರು ಅವರ ಸ್ಮಾರ್ಟ್‍ಫೋನ್‍ನ ಬ್ಲೂಟೂತ್ ಆನ್ ಮಾಡುವುದೇ ಇಲ್ಲ, ಆದ್ರೆ ಫ್ರೀ ಇಂಟರ್ನೆಟ್ ಹುಡುಕಾಟದಲ್ಲಿ ಯಾವಾಗ್ಲೂ ವೈಫೈ ಆನ್ ಮಾಡಿಟ್ಟುಕೊಂಡಿರ್ತಾರೆ. ಇದೇ ಕಾರಣಕ್ಕೆ ಈ ತಂಡ ಮೊದಲ ವೈಫೈ ಸಂಕೇತವನ್ನು ಅಭಿವೃದ್ಧಿಪಡಿಸಿದೆ. ಬ್ಲೂಟೂತ್ ಹಾಗೂ ವೈಫೈ ಎರಡರಲ್ಲೂ ಇದು ಕಾರ್ಯನಿರ್ವಹಿಸಬಲ್ಲದು.

image


ಇಟ್ಟಿಗೆ ಮತ್ತು ಗಾರೆ ವ್ಯಾಪಾರಿಗಳಿಗೆ ಇದು ಹೇಗೆ ನೆರವಾಗುತ್ತದೆ?

ಸರಿಯಾದ ಸಮಯದಲ್ಲಿ ಸೂಕ್ತ ಮಾಹಿತಿ ನೀಡುವ ವೇದಿಕೆ ಇದು ಎನ್ನುತ್ತಾರೆ ಉನ್ನಿ. ಇಟ್ಟಿಗೆ ಮತ್ತು ಗಾರೆ ಮಳಿಗೆಗಳು, ಹಾಗೂ ಚಿಲ್ಲರೆ ವ್ಯಾಪಾರಿಗಳಿಗೆ ತಮ್ಮ ಅಂಗಡಿಗಳಲ್ಲಿ ಗ್ರಾಹಕರು ಎಂಗೇಜ್ ಆಗಿರುವಂತೆ ಮಾಡಲು ಇದು ಸಹಾಯ ಮಾಡುತ್ತದೆ. `ಬೀಕಾನ್' ವೈಫೈ ಆಧಾರಿತ ಸೇವೆ, ಸಾಮೀಪ್ಯ ಮಾರ್ಕೆಟಿಂಗ್ ವೇದಿಕೆ. ಗ್ರಾಹಕರು ಹಾಗೂ ಅಂಗಡಿ ಮಾಲೀಕರಿಬ್ಬರಿಗೂ ಅನುಕೂಲಕರ.

ವ್ಯಾಪಾರಿಗಳಿಗೆ ಹೊಂದಿಕೆಯಾಗುವಂತಹ ಮಾದರಿಯನ್ನು`Bfonics’ ಕಲ್ಪಿಸಿಕೊಟ್ಟಿದೆ. ಈ ಮೂಲಕ ಆದಾಯ ಸಂಗ್ರಹಕ್ಕೂ ಮಾರ್ಗಗಳನ್ನು ತೆರೆದಿದೆ. ಮಳಿಗೆ ಮಾಲೀಕರು ಮತ್ತು ವ್ಯಾಪಾರಿಗಳು `Bfonics’ನ ಸಂಕೇತಗಳಿಗೆ ಪ್ರತಿ ತಿಂಗಳು ಚಂದಾದಾರರಾಗಬೇಕು. ಈ ಶುಲ್ಕ ವಸೂಲಿ ಮೂಲಕ `Bfonics’ ಆದಾಯ ಗಳಿಸುತ್ತಿದೆ. ಉದ್ಯಮ ಮಾರಾಟ ಹಾಗೂ ಜಾಹೀರಾತುಗಳು ಕೂಡ ಸಂಸ್ಥೆಯ ಆದಾಯದ ಮೂಲಗಳು.

`ಯುವರ್‍ಸ್ಟೋರಿ' ಮಾಹಿತಿ

ಸಂಕೇತ ಹಾಗೂ ವೈಫೈ ಮೇಲೆ ಸ್ಥಳ ಆಧಾರಿತ ಮಾರುಕಟ್ಟೆ ಗಮನವಿರಿಸಿದೆ. ಆದ್ರೆ ಸಾಮೀಪ್ಯ ಮಾರ್ಕೆಟಿಂಗ್ ಜಗತ್ತಿನಾದ್ಯಂತ ಬಹುಕೋಟಿ ಮೌಲ್ಯದ ಮಾರುಕಟ್ಟೆ ಅವಕಾಶಗಳನ್ನು ಕಲ್ಪಿಸಿದೆ. ಸಂಕೇತ ಆಧಾರಿತ ತಂತ್ರಜ್ಞಾನ ಮುಂದಿನ 5 ವರ್ಷಗಳಲ್ಲಿ 10 ಪಟ್ಟು ಪ್ರಗತಿ ಕಾಣಲಿದೆ. `ಜುನಿಪರ್ ರಿಸರ್ಚ್' ವರದಿ ಪ್ರಕಾರ ಅಮೆರಿಕದಲ್ಲಿ ಸಂದರ್ಭ ಮತ್ತು ಸ್ಥಳ ಸೇವೆ ಮಾರುಕಟ್ಟೆ 2019ರ ವೇಳೆಗೆ 43.3 ಬಿಲಿಯನ್ ಡಾಲರ್ ಆದಾಯ ಗಳಿಸಲಿದೆ. 2014ರಲ್ಲಿ ಆದಾಯ ಕೇವಲ 12.2 ಬಿಲಿಯನ್ ಡಾಲರ್ ಇತ್ತು.

`Bfonics’ ಅಮೆರಿಕ ಮೂಲದ `ಸ್ವಿರ್ಲ್' ಮತ್ತು `ಇನ್ ಮಾರ್ಕೆಟ್' ಜೊತೆ ಪೈಪೋಟಿಗಿಳಿದಿದೆ. ಈ ತಂತ್ರಜ್ಞಾನ ಎಲ್ಲರಿಗೂ ಹೊಸದು, ಪ್ರತಿಸ್ಪರ್ಧಿಗಳು ಕೂಡ ಈ ಆಟ ಹಾಗೂ ಕಲಿಕೆಗೆ ಹೊಸಬರೇ. ವೈಫೈ ಸಂಕೇತಗಳ ಮೂಲಕ `Bfonics’ ಸಾಮೀಪ್ಯ ಆಧಾರಿತ ಮಾರ್ಕೆಟಿಂಗ್‍ನಲ್ಲಿ ಮಹತ್ವದ ಪಾತ್ರ ವಹಿಸಲಿದೆ.

ಇನ್ನು ಹಾರ್ಡ್‍ವೇರ್ ವಿಭಾಗಕ್ಕೆ ಬಂದ್ರೆ `ಎಸ್ಟಿಮೇಟ್', `ಕಾಂಟ್ಯಾಕ್ಟ್', `ಗಿಂಬಲ್' ಸಂಸ್ಥೆಗಳಿಂದ `Bfonics’ ’ ಪೈಪೋಟಿ ಎದುರಿಸುತ್ತಿದೆ. ವಿವಿಧ ಖಂಡಗಳಲ್ಲಿ`Bfonics’ ನ ತಂಡಗಳು ಕಾರ್ಯನಿರ್ವಹಿಸುತ್ತಿವೆ. ಜಾಗತಿಕ ಮಾರುಕಟ್ಟೆ ಹಾಗೂ ಭಾರತದ ಪಾಲಿಗೆ ಸಾಮೀಪ್ಯ ಮಾರ್ಕೆಟಿಂಗ್ ಅತಿ ದೊಡ್ಡ ಅವಕಾಶ. ಉತ್ಪನ್ನ ಹಾಗೂ ತಂತ್ರಜ್ಞಾನದ ಮಧ್ಯೆ `Bfonics’ ಸಮತೋಲನ ಕಾಯ್ದುಕೊಂಡಿದೆ ಎಂದೆನಿಸುತ್ತಿದೆ.

ಲೇಖಕರು: ಜೈ ವರ್ಧನ್​​​

ಅನುವಾದಕರು: ಭಾರತಿ ಭಟ್​​​​​