ಹೆಚ್ ಐವಿ ಪೀಡಿತರಿಗೆ ಮದುವೆ ಭಾಗ್ಯ _ ಸಂಗಾತಿ ಹುಡುಕಾಟಕ್ಕೆ ವೇದಿಕೆ `ಪಾಸಿಟಿವ್ ಶಾದಿ’

ಟೀಮ್​ ವೈ.ಎಸ್​. ಕನ್ನಡ

ಹೆಚ್ ಐವಿ ಪೀಡಿತರಿಗೆ ಮದುವೆ ಭಾಗ್ಯ _ ಸಂಗಾತಿ ಹುಡುಕಾಟಕ್ಕೆ ವೇದಿಕೆ `ಪಾಸಿಟಿವ್ ಶಾದಿ’

Monday February 15, 2016,

3 min Read

ವಿಶ್ವದ ಅತಿ ಹೆಚ್ಚು ಹೆಚ್ ಐವಿ ಪೀಡಿತರ ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. ನಮ್ಮ ದೇಶದಲ್ಲಿ 15ರಿಂದ 20 ಲಕ್ಷ ಜನ ಏಡ್ಸ್ ನಿಂದ ಬಳಲುತ್ತಿದ್ದಾರೆ. 2011-2014ರ ನಡುವೆ 50 ಸಾವಿರ ಮಂದಿ ಏಡ್ಸ್ ನಿಂದ ಸಾವನ್ನಪ್ಪಿದ್ದಾರೆ. ಈ ರೋಗ ಎಷ್ಟು ಅಪಾಯಕಾರಿ ಎಂಬುದನ್ನು ಹೇಳೋದು ಅಸಾಧ್ಯ. ಹೆಚ್ ಐವಿ ಬಂದವರು ಈ ಸಮಾಜದಲ್ಲಿ ಸತ್ತಂತೆ. ಜೀವನ ನಡೆಸುವುದಿರಲಿ, ವಂಶಾಭಿವೃದ್ಧಿ ಮಾಡುವುದಾಗಲಿ ಅಸಾಧ್ಯ ಎಂದು ಭಾವಿಸಲಾಗಿದೆ. ಹೆಚ್ ಐ ವಿ ಪೀಡಿತರಿಗೂ ಆಸೆಗಳಿರುತ್ತವೆ. ಅವರು ಬದುಕಲು ಇಚ್ಛಿಸುತ್ತಾರೆ. ಮದುವೆಯಾಗಲು ಬಯಸುತ್ತಾರೆ ಎಂಬುದರ ಬಗ್ಗೆ ಯಾರೂ ಯೋಚಿಸುವುದಿಲ್ಲ. ನಮ್ಮ ಸಮಾಜದಲ್ಲಿ ಹೆಚ್ ಐವಿ ಪೀಡಿತರಿಗೆ ಸಂಗಾತಿಯನ್ನು ಹುಡುಕುವುದು ಕಷ್ಟದ ಕೆಲಸ. ನನಗೆ ಹೆಚ್ ಐವಿ ಇದೆ. ಹೆಚ್ ಐವಿ ಪೀಡಿತ ಸಂಗಾತಿ ಬೇಕು ಎಂದು ಬಹಿರಂಗವಾಗಿ ಹೇಳುವುದು ಕಷ್ಟದ ಕೆಲಸ. ಹೆಚ್ ಐವಿ ಪೀಡಿತರ ಈ ಸಮಸ್ಯೆ ಬಗೆಹರಿಸಲು ಮುಂದಾದವರು ಮಹಾರಾಷ್ಟ್ರದ ಆರ್ ಟಿ ಓ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಅನಿಲ್ ವಾಲಿವ್. ಅವರು ಒಂದು ವೇದಿಕೆ ಮೂಲಕ ಹೆಚ್ ಐವಿ ಪೀಡಿತರನ್ನು ಒಂದುಗೂಡಿಸಿದ್ರು. ಈ ವೇದಿಕೆ ಮೂಲಕ ಪೀಡಿತರು ಮುಕ್ತವಾಗಿ ಮಾತುಕತೆ ನಡೆಸಬಹುದು. ಮದುವೆ ಕೂಡ ಮಾಡಿಕೊಳ್ಳಬಹುದು. ಅನಿಲ್ ಅದಕ್ಕಾಗಿಯೇ `ಪಾಸಿಟಿವ್ ಶಾದಿ’ ಹೆಸರಿನ ವೆಬ್ಸೈಟ್ ಆರಂಭಿಸಿದ್ದಾರೆ. ಇದರ ಮೂಲಕ ಸಾವಿರಾರು ಹೆಚ್ ಐ ವಿ ಪೀಡಿತರಿಗೆ ಮದುವೆ ಮಾಡಿಸಿದ್ದಾರೆ.

image


ಅನಿಲ್ ಮಹಾರಾಷ್ಟ್ರ ಆರ್.ಟಿ.ಓ ವಿಭಾಗದಲ್ಲಿ ಆರ್.ಟಿ.ಓ.ಸಹಾಯಕರಾಗಿದ್ದು ಪುಣೆಯ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅಮರಾವತಿ, ಲಾತೂರ್, ಸೊಲ್ಲಾಪುರದಲ್ಲಿ ಅನಿಲ್ ಕೆಲಸ ಮಾಡಿದ್ದಾರೆ. www.yourstory.com ಜೊತೆ ಮಾತನಾಡಿದ ಅನಿಲ್

ನಾನು ಅಮರಾವತಿಯಲ್ಲಿ ಕೆಲಸ ಮಾಡುತ್ತಿದ್ದಾಗ ಲಾರಿ ಚಾಲಕರಿಗೆ ರಸ್ತೆ ಸುರಕ್ಷತೆ ಬಗ್ಗೆ ಮಾಹಿತಿ ನೀಡುತ್ತಿದ್ದೆ. ಲಾರಿ ಚಾಲಕರು ಪ್ರತಿ ಮೂರು ವರ್ಷಗಳಿಗೊಮ್ಮೆ ತಮ್ಮ ಲೈನೆನ್ಸ್ ನವೀಕರಿಸಲು ಕಾರ್ಯಾಗಾರಕ್ಕೆ ಬರಬೇಕಾಗಿತ್ತು. ಆಗ ಅವರ ಜೊತೆ ರಸ್ತೆ ಸುರಕ್ಷತೆ ಬಗ್ಗೆ ಮಾತುಕತೆ ನಡೆಸುತ್ತಿದ್ದೆ ಹಾಗೂ ಉಪನ್ಯಾಸ ನೀಡುತ್ತಿದ್ದೆ.ಲಾತೂರ್ ಜಿಲ್ಲೆಗೆ ವರ್ಗವಾದ ನಂತರ ಲಾರಿ ಚಾಲಕರಿಗೆ ರಸ್ತೆ ಸುರಕ್ಷತೆಯ ಜೊತೆಗೆ ಹೆಚ್ ಐವಿ ಬಗ್ಗೆಯೂ ಮಾಹಿತಿ ನೀಡಲು ಶುರುಮಾಡಿದೆ.

ಇದಕ್ಕೊಂದು ಮುಖ್ಯ ಕಾರಣವಿತ್ತು. ಅನಿಲ್ ಅವರ ಸ್ನೇಹಿತರೊಬ್ಬರಿಗೆ ಹೆಚ್ ಐವಿ ಕಾಣಿಸಿಕೊಂಡಿತ್ತು. ಅವರ ಕುಟುಂಬವೆಲ್ಲ ಆಗ ಚೆಲ್ಲಾಪಿಲ್ಲಿಯಾಗಿತ್ತು. ಇದನ್ನು ಬಹಳ ಹತ್ತಿರದಿಂದ ನೋಡಿದ್ದರು ಅನಿಲ್. ಹಾಗಾಗಿ ಹೆಚ್ ಐವಿ ಪರಿಣಾಮದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಶುರುಮಾಡಿದರು. ಸರ್ಕಾರಿ ಆಸ್ಪತ್ರೆಯ ಸಹಾಯದಿಂದ ಲಾರಿ ಚಾಲಕರಿಗೆ ಕೌನ್ಸಲಿಂಗ್ ನೀಡುವುದಕ್ಕೆ ಆರಂಭಿಸಿದರು.

ಹೆಚ್ ಐವಿ ಸೋಂಕು ಮದುವೆಗೆ ಪ್ರಮುಖ ಅಡಚಣೆ ಎಂಬುದನ್ನು ಸ್ನೇಹಿತರು ಹಾಗೂ ಉಳಿದವರಿಂದ ಅನಿಲ್ ಮನಗಂಡರು. ಮನೆಯಲ್ಲಿ ಒಂದೇ ಮಕ್ಕಳಿರ್ತಾರೆ. ಅವರಿಗೆ ಮದುವೆ ಮಾಡಲು ತಂದೆ ತಾಯಿ ಬಯಸ್ತಾರೆ. ಹೆಚ್ ಐವಿ ಇದೆ ಎಂದು ಬಹಿರಂಗವಾಗಿ ಹೇಳಲು ಮುಜುಗರಪಡುವುದರಿಂದ ಹೆಚ್ ಐವಿ ಸೋಂಕಿತರಿಗೆ ತಮ್ಮ ಮದುವೆ ಮುರಿದುಕೊಳ್ಳುವುದು ಬಹಳ ಕಷ್ಟವಾಗುತ್ತದೆ. ಕೆಲವರು ಪರಿಶ್ರಮಪಟ್ಟು ಮದುವೆ ಮುರಿದುಕೊಂಡರೆ ಮತ್ತೆ ಕೆಲವರು ಬಡ,ಅನಕ್ಷರಸ್ಥ ಸಂಗಾತಿಯ ಕೈ ಹಿಡಿತಾರೆ. ನಂತರ ಸಂಗಾತಿ ಏಡ್ಸ್ ನಿಂದ ಬಳಲುತ್ತಾರೆ. ಈ ಬಗ್ಗೆ ಅನಿಲ್ ಹೇಳ್ತಾರೆ,

image


ಹೆಚ್ ಐವಿ ರೋಗಿಗಳು ಭೇಟಿಯಾಗಲು ಹಾಗೂ ಹೆಚ್ ಐವಿ ಸೋಂಕಿಲ್ಲದವರನ್ನು ರಕ್ಷಿಸುವ ನಿಟ್ಟಿನಲ್ಲಿ ಒಂದು ವೇದಿಕೆ ಆರಂಭಿಸಲು ಚಿಂತಿಸಿದೆ. ಇದರ ನಂತರ 2007ರಲ್ಲಿ ಪಾಸಿಟಿವ್ ಶಾದಿ ಹೆಸರಿನ ಒಂದು ವೆಬ್ ಸೈಟ್ ಶುರುಮಾಡಿದೆ.

ಈ ವೆಬ್ಸೈಟ್ ಮೂಲಕ ಮಹಿಳೆ ಅಥವಾ ಪುರುಷ ಹೆಚ್ ಐವಿ ಸೋಂಕಿತರು ತಮ್ಮ ಮದುವೆಗಾಗಿ ಸಂಗಾತಿಯನ್ನು ಹುಡುಕಿಕೊಳ್ಳಬಹುದಾಗಿದೆ. ವೆಬ್ಸೈಟ್ ನಲ್ಲಿ ತಮ್ಮ ಬಗ್ಗೆ ಮಾಹಿತಿ ಹಾಕಬಹುದು. ಇನ್ನೊಬ್ಬರು ಹಾಕಿರುವ ಮಾಹಿತಿ ಇಷ್ಟವಾದ್ರೆ ಅವರನ್ನು ಭೇಟಿ ಕೂಡ ಆಗಬಹುದು. ಈ ವೆಬ್ಸೈಟ್ನಲ್ಲಿ ಯಾವುದೇ ಹೆಚ್ ಐವಿ ಪೀಡಿತ ವ್ಯಕ್ತಿ ತನ್ನ ಬಗ್ಗೆ ಮಾಹಿತಿಯನ್ನು ಉಚಿತವಾಗಿ ಹಾಕಬಹುದು. ಮದುವೆ ನಂತರ ಈ ಮಾಹಿತಿಯನ್ನು ವೆಬ್ಸೈಟ್ ನಿಂದ ತೆಗೆಯಬೇಕು. ವೆಬ್ಸೈಟ್ ಆರಂಭದಲ್ಲಿ ಹೆಚ್ ಐವಿ ಪೀಡಿತರು ಇದನ್ನು ಸ್ವೀಕರಿಸ್ತಾರಾ ಎಂಬ ಅನುಮಾನ ಅನಿಲ್ ಅವರನ್ನು ಕಾಡಿತ್ತು. ಆದ್ರೆ ಪೀಡಿತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯ್ತು. ಅಂದಾಜು 1 ಸಾವಿರ ಜನರು ಈ ವೆಬ್ಸೈಟ್ ಮೂಲಕ ಮದುವೆಯಾಗಿದ್ದಾರೆ. ವೆಬ್ಸೈಟ್ ಬಗ್ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗ್ತಾ ಇದೆ. ಮದುವೆಯಾದ ದಂಪತಿ ಕೇವಲ ಫೋನ್ ನಲ್ಲಿ ಧನ್ಯವಾದ ಹೇಳುವುದೊಂದೇ ಅಲ್ಲ, ದೆಹಲಿ,ಬೆಂಗಳೂರು ಸೇರಿದಂತೆ ದೂರದೂರುಗಳಿಂದ ಪುಣೆಗೆ ಬಂದು ಅನಿಲ್ ಅವರಿಗೆ ಧನ್ಯವಾದ ಹೇಳ್ತಾರೆ. ಅವರಿಗೆ ಹುಟ್ಟಿದ ಮಕ್ಕಳು ಆರೋಗ್ಯಕರವಾಗಿವೆ ಎನ್ನುತ್ತಾರೆ ಅನಿಲ್.

ವೆಬ್ಸೈಟ್ ಖರ್ಚನ್ನು ಸಂಪೂರ್ಣವಾಗಿ ಅನಿಲ್ ನೋಡಿಕೊಳ್ಳುತ್ತಾರೆ. ಪಾಸಿಟಿವ್ ಶಾದಿ ವೆಬ್ಸೈಟ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದರಿಂದ ಅನಿಲ್ ಪಾಸಿಟಿವ್ ಶಾದಿ ಸಂಸ್ಥೆಯನ್ನು ಆರಂಭಿಸಿದ್ದಾರೆ. ಸಂಸ್ಥೆ ಹೆಚ್ ಐವಿ ಪೀಡಿತರು ಮುಖಾಮುಖಿಯಾಗಲು ನೆರವಾಗ್ತಾ ಇದೆ. ಅನಿಲ್ ಪುಣೆ, ಮುಂಬೈ, ಸಾಂಗ್ಲಿ, ಸೋಲಾಪುರ್ ನಗರಗಳಲ್ಲಿ ಸಮ್ಮೇಳನಗಳನ್ನು ನಡೆಸ್ತಾರೆ. ಅಲ್ಲಿ ಮುಖಾಮುಖಿಯಾಗುವ ಹೆಚ್ ಐವಿ ಪೀಡಿತರು ಮದುವೆ ಬಗ್ಗೆ ಮಾತನಾಡಿಕೊಳ್ಳುತ್ತಾರೆ. ಈವರೆಗೆ 20 ಸಮ್ಮೇಳನಗಳು ನಡೆದಿವೆ. ಕೆಲ ಸಮ್ಮೇಳನಗಳಲ್ಲಿ ಒಂದುವರೆ ಸಾವಿರಕ್ಕೂ ಹೆಚ್ಚು ಹೆಚ್ ಐವಿ ಪೀಡಿತರು ಪಾಲ್ಗೊಂಡಿದ್ದಾರೆ.

ಅನಿಲ್ ಎಷ್ಟು ಪ್ರಾಮಾಣಿಕತೆಯಿಂದ ಸರ್ಕಾರಿ ಕೆಲಸ ಮಾಡ್ತಾರೋ ಅಷ್ಟೇ ಸಾಮಾಜ ಸೇವೆಯನ್ನು ಗಂಭಿರವಾಗಿ ತೆಗೆದುಕೊಂಡಿದ್ದಾರೆ. ವೆಬ್ಸೈಟ್ ಮೂಲಕ ಕೆಲವೇ ಗಂಟೆಗಳಲ್ಲಿ ಮದುವೆಯಾಗುವವರಿದ್ದಾರೆ. ಆದ್ರೆ ಅವರ ಸಂಸಾರ ಸುಖಕರವಾಗಿದೆ. ಹೆಚ್ ಐವಿ ಪೀಡಿತ ಅನಾಥಮಕ್ಕಳು ಅನಿಲ್ ಮುಂದಿನ ಗುರಿ. ಅವರಿಗೆ ರಕ್ಷಣೆ ನೀಡುವ ನಿಟ್ಟಿನಲ್ಲಿ ಕೆಲಸ ಆರಂಭಿಸಿದ್ದಾರೆ. ಮಕ್ಕಳ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಹೆಚ್ ಐವಿ ಪೀಡಿತ ಅನಾಥ ಮಕ್ಕಳನನ್ನು ಸಾಮಾನ್ಯ ಜನರು ದತ್ತು ಪಡೆಯಲಿ ಇಲ್ಲ ಅವರ ಖರ್ಚಿನ ಜವಾಬ್ದಾರಿಯನ್ನು ಜನರು ಹೊತ್ತುಕೊಳ್ಳಲಿ ಎಂಬ ಆಶಯ ಅನಿಲ್ ಅವರದ್ದು.

ಲೇಖಕರು: ಹರೀಶ್ ಬಿಸ್ತ್

ಅನುವಾದಕರು: ರೂಪಾ ಹೆಗಡೆ

ಇದನ್ನು ಓದಿ

ದೂರಾದ ಪ್ರೇಮಿಗಳಿಗೂ ಬಂತು, 30 ಡೇ ರಿಲೇಷನ್‍ಶಿಪ್ ಆ್ಯಪ್..!

ಎರಡು ಬಾರಿ ಕ್ಯಾನ್ಸರ್ ಗೆದ್ದ ಗಟ್ಟಿಗಿತ್ತಿ ನೀಲಂ ಕುಮಾರ್

ಝಿರೋದಿಂದ ಕೋಟಿವರೆಗೆ.. ಇದು ವಿದ್ಯಾರ್ಥಿಗಳ ‘ಟೆಸ್ಟಮೆಂಟ್ ’ಸ್ಟೋರಿ..!