ಕ್ಯಾನ್ಸರ್ ಪೀಡಿತರ ಸಹಾಯಕ್ಕಾಗಿ ಮುಂಬೈ ಲೋಕನ್ ಟ್ರೈನ್ ನಲ್ಲಿ ಭಿಕ್ಷೆ

ಟೀಮ್​ ವೈ.ಎಸ್​. ಕನ್ನಡ

0

ಸಂತೋಷ ಹಂಚಿಕೊಳ್ಳುವಂತಹದ್ದು. ನೋವು ಹಾಗಲ್ಲ. ಬೇರೆಯವರ ನೋವಿನಲ್ಲಿ ಬಾಗಿಯಾಗಿ ಅವರ ಮೊಗದಲ್ಲಿ ನಗು ಮೂಡಿಸುವುದು ಸಾಮಾನ್ಯ ಕೆಲಸವಲ್ಲ. ದುಃಖದಲ್ಲಿರುವವರ ಮೊಗದಲ್ಲಿ ಸಂತೋಷ ನೋಡಿ ತೃಪ್ತಿ ಪಡುವವರು ನಮ್ಮಲ್ಲಿದ್ದಾರೆ. ಬೇರೆಯವರ ಬಾಳಲ್ಲಿ ಖುಷಿ ನೋಡುವವರ ಪಟ್ಟಿಯಲ್ಲಿ ಸೌರಭ್ ನಿಂಬಕರ್ ಕೂಡ ಒಬ್ಬರು. ಮುಂಬೈನ ದೊಂಬಿವಾಲಿಯಲ್ಲಿ ನೆಲೆಸಿರುವ ಸೌರಭ್ ನಿಂಬಕರ್, ಅಂಬರನಾಥ್ ದಿಂದ ದಾದರ್ ಗೆ ಸಂಚರಿಸುವ ಟ್ರೈನ್ ನಲ್ಲಿ ಗಿಟಾರ್ ಹಿಡಿದು ಪ್ರಯಾಣ ಬೆಳೆಸ್ತಾರೆ. ರೈಲಿನಲ್ಲಿ ಪ್ರಯಾಣಿಕರಿಗೆ ಇಷ್ಟವಾಗುವ ಹಾಡನ್ನು ಹಾಡ್ತಾರೆ. ಪ್ರಯಾಣಕರು ಸೌರಭ್ ಗೆ ಹಣ ನೀಡ್ತಾರೆ. ಇದನ್ನು ಸೌರಭ್ ಬಡ ಕ್ಯಾನ್ಸರ್ ರೋಗಿಗಳಿಗೆ ನೀಡ್ತಾರೆ.

ಇದನ್ನು ಓದಿ

ಬಣ್ಣಗಳೇ ಭಾವವಾದಾಗ.....

ಜನರಿಗೆ ಮನರಂಜನೆ ನೀಡುವುದು ಬಾಲ್ಯದಿಂದ ಬಂದ ಹವ್ಯಾಸ

23 ವರ್ಷದ ಸೌರಭ್ ಹೇಳ್ತಾರೆ` ಬಾಲ್ಯದಿಂದಲೂ ಜನರಿಗೆ ಮನರಂಜನೆ ನೀಡುವುದು ನನಗೆ ಖುಷಿ ಕೊಡುವ ಸಂಗತಿಯಾಗಿತ್ತು. ಕಾಲೇಜಿನ ದಿನಗಳಲ್ಲಿ ನಾನು ಹಾಗೂ ನನ್ನ ಸ್ನೇಹಿತರು ಲೋಕಲ್ ಟ್ರೈನ್ ನಲ್ಲಿ ಗಿಟಾರ್ ಬಾರಿಸುತ್ತ ಹಾಡು ಹಾಡ್ತಾ ಇದ್ವಿ. ಪ್ರಯಾಣಿಕರು ಕೂಡ ಒಮ್ಮೊಮ್ಮೆ ನಮ್ಮ ಜೊತೆ ಹಾಡು ಹಾಡ್ತಾ ಇದ್ದರು’. ಸೌರಭ್ ಬಯೋಟೆಕ್ ನಲ್ಲಿ ಪದವಿ ಹಾಗೂ ಜೈವಿಕ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.ಪ್ರಸ್ತುತ ಔಷಧಿ ಕಂಪನಿಯೊಂದರಲ್ಲಿ ಕೆಲಸ ಮಾಡ್ತಿದ್ದಾರೆ. ಅನೇಕ ತಿಂಗಳುಗಳಿಂದ ಈ ಸೇವೆಯಲ್ಲಿ ನಿರತರಾಗಿದ್ದು, ವಾರದಲ್ಲಿ ಮೂರು ದಿನ ರೈಲಿನಲ್ಲಿ ಪ್ರಯಾಣಿಕರಿಗೆ ಮನರಂಜನೆ ನೀಡುವ ಕೆಲಸ ಮಾಡ್ತಾರೆ.

ಕಾಲೇಜು ದಿನಗಳಲ್ಲಿ ಸೌರಭ್ ಗಿಟಾರ್ ಬಗ್ಗೆ ಅಲ್ಪಸ್ವಲ್ಪ ತಿಳಿದಿದ್ದರು. ಹಾಡಿನ ಬಗ್ಗೆ ಅವರಿಗಿದ್ದ ಪ್ರೀತಿ ಅವರು ಸಂಗೀತದ ಗುರುವನ್ನು ಅರಸಿ ಹೋಗುವಂತೆ ಮಾಡಿತ್ತು. ಆದರೆ ಅವರ ಧ್ವನಿ ಹೇಳುವಷ್ಟು ಉತ್ತಮವಾಗಿರದ ಕಾರಣ ವೇದಿಕೆಯ ಮೇಲೆ ಹಾಡಲು ಅವಕಾಶ ಸಿಗಲಿಲ್ಲ. 2013ರರಲ್ಲಿ ಸೌರಭ್ ತಾಯಿಗೆ ಕ್ಯಾನ್ಸರ್ ಕಾಣಿಸಿಕೊಂಡಿದ್ದರಿಂದ ಕಿಂಗ್ ಎಡ್ವರ್ಡ್ ಮೆಮೋರಿಯಲ್ ಆಸ್ಪತ್ರೆಗೆ ದಾಖಲಿಸಲಾಯ್ತು. `ತನ್ನ ತಾಯಿ ಆಸ್ಪತ್ರೆಯಲ್ಲಿದ್ದಾಗ ನಾನು ಒಂದು ದಿನ ಗಿಟಾರ್ ಹಿಡಿದು ಅಲ್ಲಿಗೆ ಹೋದೆ. ಅಲ್ಲಿ ಗಿಟಾರ್ ಜೊತೆ ಹಾಡಲು ಶುರುಮಾಡಿದೆ. ಅಲ್ಲಿದ್ದ ರೋಗಿಗಳು ಹಾಗೂ ಅವರ ಸಂಬಂಧಿಕರಿಗೆ ಶಾಂತಿ ಸಿಗ್ತು. ಇದೇ ನನಗೆ ಪ್ರೇರಣೆಯಾಯ್ತು. ಆಗಾಗ ಅಲ್ಲಿಗೆ ಹೋಗಿ ಗಿಟಾರ್ ನುಡಿಸ್ತಾ ಇದ್ದೆ. ಈ ಬಗ್ಗೆ ನನ್ನ ತಾಯಿಗೆ ಹೇಳಿದಾಗ ಅವರು ಸಂತೋಷಪಟ್ಟಿದ್ದರು.’’

ಹೊಸ ಟ್ವಿಸ್ಟ್

ಆಸ್ಪತ್ರೆಗೆ ದಾಖಲಿಸಿ ಒಂದು ವರ್ಷದ ಬಳಿಕ ಅವರ ತಾಯಿ ಸಾವನ್ನಪ್ಪಿದ್ರು. ಆ ನಂತರ ಸೌರಭ್ ಆಸ್ಪತ್ರೆಗೆ ಹೋಗುವುದನ್ನು ಬಿಟ್ಟು ಬಿಟ್ಟರು. ಆದ್ರೆ ಕ್ಯಾನ್ಸರ್ ರೋಗಿಗಳು ಹಾಗೂ ಅವರ ಸಂಬಂಧಿಕರ ಸಮಸ್ಯೆಗಳ ನೋವು ಗೊತ್ತಾಗಿತ್ತು.

ಸೌರಭ್ ಹೇಳ್ತಾರೆ ` ನಮ್ಮ ಸಮಾಜದಲ್ಲಿ ಅನೇಕ ಕಡೆ ಬಡವ ಹಾಗೂ ಶ್ರೀಮಂತ ಎಂದು ಬೇಧ ಮಾಡ್ತಾರೆ. ದುರಾದೃಷ್ಟ ಅಂದ್ರೆ ಕ್ಯಾನ್ಸರ್ ರೋಗಿಗಳ ಬಿಲ್ ವಿಚಾರದಲ್ಲಿ ಮಾತ್ರ ಯಾವುದೇ ರಿಯಾಯಿತಿ ಇಲ್ಲ. ಆಸ್ಪತ್ರೆಯ ಬಿಲ್ ವಿಷಯದಿಂದಾಗಿ ಬಡವರ ಬದುಕು ನರಕವಾಗುತ್ತಿದೆ. ಅದಾಗ್ಯೂ ಅನೇಕ ಸಂಘಟನೆಗಳು ಕ್ಯಾನ್ಸರ್ ರೋಗಿಗಳ ಚಿಕಿತ್ಸೆಗೆ ಆರ್ಥಿಕ ಸಹಾಯ ಮಾಡುತ್ತಿವೆ. ಆದರೆ ಕುಟುಂಬಸ್ಥರಿಗೆ ಇತರ ಖರ್ಚುಗಳಿರುತ್ತವೆ. ಕ್ಯಾನ್ಸರ್ ಚಿಕಿತ್ಸೆಗೆ ಸುಮಾರು ಮೂರರಿಂದ ನಾಲ್ಕು ಲಕ್ಷ ಬೇಕು. ಕುಟುಂಬಸ್ಥರ ಜೊತೆಯಲ್ಲಿ ಇರುವುದರಿಂದ ಖರ್ಚು ಎರಡರಿಂದ ಮೂರು ಲಕ್ಷ ಜಾಸ್ತಿಯಾಗುತ್ತದೆ.ಈ ಕುಟುಂಬದವರಿಗೆ ಯಾರು ಸಹಾಯ ಮಾಡ್ತಾರೆ ಎಂಬುದೇ ದೊಡ್ಡ ಪ್ರಶ್ನೆ.’

ಉತ್ತಮ ಉಡುಪು, ಗಿಟಾರ್ ಜೊತೆ ಭಿಕ್ಷೆ

ಸೌರಭ್ ಬಡ ಕ್ಯಾನ್ಸರ್ ರೋಗಿಗಳಿಗೆ ಸಹಾಯ ಮಾಡಲು ನಿರ್ಧರಿಸಿದರು. ಕಾಲೇಜಿಗೆ ಹೋಗುವಾಗ ಮಾಡುತ್ತಿದ್ದ ಹಾಗೆ ಲೋಕಲ್ ಟ್ರೈನ್ ನಲ್ಲಿ ಹಾಡಲು ಮುಂದಾದರು. ಜೊತೆಗೆ ಪ್ರಯಾಣಿಕರಿಂದ ಹಣ ಕೇಳುವ ಬಗ್ಗೆ ಯೋಚಿಸಿದ್ರು. ಆದ್ರೆ ಅವರಿಗೆ ಅನೇಕ ಪ್ರಶ್ನೆಗಳು ಹುಟ್ಟಿಕೊಂಡವು. ಜನರು ನನ್ನನ್ನು ನಂಬುತ್ತಾರಾ? ಅವರ ವಿಶ್ವಾಸ ಹೇಗೆ ಗಳಿಸಲಿ ಎನ್ನುವ ಬಗ್ಗೆ ಚಿಂತಿಸಿದ್ರು. ನಂತರ ಒಂದು ಎನ್ ಜಿಓ ಜೊತೆ ಸೇರಿಕೊಂಡ ಸೌರಭ್, ಲೋಕಲ್ ಟ್ರೈನ್ ನಲ್ಲಿ ಜನರನ್ನು ಮನರಂಜಿಸಲು ಶುರುಮಾಡಿದರು.

ಕ್ರಮೇಣ ಸೌರಭ್ ಗೆ ಸಾಮಾನ್ಯ ಜನರಿಂದ ಬೆಂಬಲ ಸಿಗ್ತಾ ಬಂತು. ಕೆಲವರು ಅವರಿಗೆ ಇಷ್ಟವಾದ ಹಾಡನ್ನು ಹಾಡುವಂತೆ ಕೇಳ್ತಾ ಇದ್ದರು. ಕೆಲ ಪ್ರಯಾಣಿಕರಿಗೆ ಉತ್ತಮ ಬಟ್ಟೆ ಧರಿಸಿ, ಗಿಟಾರ್ ಬಾರಿಸುವ ಬಿಕಾರಿಯಂತೆ ಸೌರಭ್. ಹೆಚ್ಚಿನ ಜನರಿಗೆ ಸೌರಭ್ ಇಷ್ಟವಾಗ್ತಾರಂತೆ. ಕೆಲ ಪ್ರಯಾಣಿಕರು ಹಾಡು ನಿಲ್ಲಿಸುವಂತೆ ಸೌರಭ್ ಗೆ ಹೇಳಿದ್ರೆ ಸಹ ಪ್ರಯಾಣಿಕರು ಅವರ ಬಾಯಿ ಮುಚ್ಚಿಸಿ ಹಾಡುವಂತೆ ಹೇಳ್ತಾರಂತೆ.

ಕೆಲವು ದಿನ 800-1000ವರೆಗೂ ದಾನ ಸಿಗುತ್ತಂತೆ. ಪ್ರಯಾಣಿಕರು 10ರಿಂದ 500 ರೂಪಾಯಿಯವರೆಗೂ ಹಣ ನೀಡ್ತಾರಂತೆ. ಇದು ಕ್ಯಾನ್ಸರ್ ಪೀಡಿತರ ಕುಟುಂಬಕ್ಕೆ ತಲುಪುತ್ತದೆ. ಸೌರಭ್ ಲೋಕಲ್ ಟ್ರೈನ್ ನೋಡಿ ಹತ್ತುತ್ತಾರೆ. ಪ್ರಯಾಣಿಕರ ಸಂಖ್ಯೆ ಜಾಸ್ತಿ ಇದ್ದಲ್ಲಿ ಅವರಿಗೆ ಗಿಟಾರ್ ಬಾರಿಸಲು ತೊಂದರೆಯಾಗುತ್ತದೆ. ಹಾಗಾಗಿ ಪ್ರಯಾಣಿಕರ ಸಂಖ್ಯೆ ಜಾಸ್ತಿ ಇರುವ ಟ್ರೈನ್ ನಲ್ಲಿ ಪ್ರಯಾಣ ಮಾಡುವುದಿಲ್ಲವಂತೆ. ಹಾಗೇ ಕಡಿಮೆ ಪ್ರಯಾಣಿಕರಿರುವ ಟ್ರೈನ್ ನಲ್ಲ ಕೂಡ ಪ್ರಯಾಣ ಮಾಡುವುದಿಲ್ಲ.

ಒಗ್ಗಟ್ಟಿನಲ್ಲಿ ಬಲ ಇದೆ

`ಎಲ್ಲರಲ್ಲೂ ಒಂದೊಂದು ಪ್ರತಿಭೆ ಇರುತ್ತದೆ. ನನಗೆ ಸಂಗೀತದ ಬಗ್ಗೆ ಅಷ್ಟಾಗಿ ಜ್ಞಾನವಿಲ್ಲ. ಆದರೆ ಅದರ ಪ್ರಯೋಗವೇ ನನ್ನ ಗುರುತಾಗಿದೆ. ಜನರು ತಮ್ಮದೇ ಐಡಿಯಾದೊಂದಿಗೆ ಮುಂದೆ ಬಂದ್ರೆ ಏನಾಗಬಹುದು ಯೋಚಿಸಿ? ನನ್ನ ಪ್ರಕಾರ ಸಮಾಜಕ್ಕಾಗಿ ಕೆಲಸ ಮಾಡುತ್ತಿರುವ ಸಂಸ್ಥೆಗೆ ಜನರು ತಮ್ಮ ಆದಾಯದ ಒಂದು ಭಾಗವನ್ನುನೀಡಬೇಕು. ಇದನ್ನು ಕಾರ್ಯಗತಗೊಳಿಸುವುದು ಕಷ್ಟ. ಆದರೆ ಅಸಾಧ್ಯವಲ್ಲ. ಸೌರಭ್ ಕೆಲಸಕ್ಕೆ ಜನರು ಬೆಂಬಲ ನೀಡ್ತಾ ಇದ್ದಾರೆ. ಕೆಲವೊಂದು ಸಲಹೆಗಳನ್ನು ನೀಡ್ತಾರೆ. ಜನರ ಸಹಾಯಕ್ಕಾಗಿ ಬ್ಯಾಂಡ್ ಶುರುಮಾಡುವಂತೆ ಕೆಲವರು ಸಲಹೆ ನೀಡಿದ್ದಾರೆ. ಆದರೆ ನಾನು ವ್ಯಕ್ತಿಯ ಶಕ್ತಿಯನ್ನು ತಿಳಿಯಲು ಬಯಸುತ್ತೇನೆ. ನನ್ನ ಕೆಲಸ ನೋಡಿ ತಾವು ಏನಾದರೂ ಮಾಡಬಹುದೆಂದು ಜನರು ಯೋಚಿಸುತ್ತಿದ್ದಾರೆ’ ಎನ್ನುತ್ತಾರೆ ಸೌರಭ್.

ಲೇಖಕರು: ಅನ್ಮೋಲ್
ಅನುವಾದಕರು: ರೂಪಾ ಹೆಗಡೆ

ಇದನ್ನು ಓದಿ

ನನಸಾಯ್ತು ಕನಸು...ಬ್ಲಾಗ್‍ನಿಂದ ಬ್ಯುಸಿನೆಸ್‍ವರೆಗೆ..!

ಫುಡ್ ಪ್ರಿಯರ ಹಾಟ್‍ಸ್ಪಾಟ್ ‘ಟಕ್ ಶಾಪ್’

ಬೈಂಡ್ ಬೈಂಡ್.ಕಾಂ ದೇಸಿ ರುಚಿಗೆ ಒನ್‍ಟಚ್ ಸಲ್ಯೂಷನ್

Related Stories