ಬೆಂಗಳೂರಿನಲ್ಲಿ ನಿಮನ್ನು ಸ್ವಾಗತಿಸುತ್ತಿದೆ ಹೋಲಿ ಕೌ..!

ಟೀಮ್​​ ವೈ.ಎಸ್​​.ಕನ್ನಡ

0

ಬಾಯಿ ಚಪ್ಪರಿಸುವ ತಿಂಡಿ ಅಂದರೆ ಯಾರಿಗೆ ತಾನೇ ಬೇಡ. ಅದರಲ್ಲೂ ಹೋಟೆಲ್​​ನಲ್ಲಿ ಕುಳಿತಾಗ ಯಾವಾಗ ಶುಚಿ ರುಚಿಯಾದ ತಿಂಡಿ ಬಂದು ತಟ್ಟೆಗೆ ಬೀಳುತ್ತದೆ ಎಂದು ಕಾಯುವವರೇ ಜಾಸ್ತಿ. ಇದೇ ಮನಸ್ಸು ಮತ್ತು ಅಭಿರುಚಿ ಹೊಂದಿದವರು ಸಂದೀಪ್ ಶ್ರೀನಿವಾಸ್ ನಾಯಕ್ ಮತ್ತು ತಶ್ವಿನ್ ಮುಕತೀರ್. ಇವರ ಕನಸಿನ ಕೂಸೇ ಹೋಲಿ ಕೌ. 2010ರಲ್ಲಿ ಆತಿಥ್ಯ ಸೇವೆಗೆ ಚಾಲನೆ ದೊರೆಯಿತು. ಜನಪ್ರಿಯ ಮೂರು ಬ್ರಾಂಡ್ ಗಳು ಇವರ ಹೆಗ್ಗಳಿಕೆ. ಪ್ಲಾನ್ ಬಿ, ಮದರ್ ಕ್ಲಕರ್ಸ್ ಬಾರ್ ಮತ್ತು ಒನ್ ನೈಟ್ ಇನ್ ಬ್ಯಾಂಕಾಂಕ್. ಜೊತೆಗೆ ಬೆಂಗಳೂರು ಮತ್ತು ಚೆನ್ನೈನಲ್ಲಿ ಐದು ಬಾರ್ ಗಳು .

ಸಂದೀಪ್ ಮತ್ತು ತಶ್ವೀನ್ ಮುಕತೀರ್- ಒಂದು ಪರಿಚಯ

ಸಂದೀಪ್ ಆರಂಭದಲ್ಲಿ ಹಲವು ಚೈನೀಸ್ ಹೋಟೆಲ್ ಗಳನ್ನು ಪ್ರಾಂಚೈಸಿ ಆಧಾರದಲ್ಲಿ ನಡೆಸುತ್ತಿದ್ದರು. ಯಾಕೋ ಅವರಿಗೆ ಇದು ಅವರಿಗೆ ಆಕರ್ಷಣೆ ಅಂತ ಅನಿಸಲಿಲ್ಲ. ತಮ್ಮ ಕಲ್ಪನೆಗೆ ಅನುಗುಣವಾಗಿ ತಮ್ಮ ಅಭಿರುಚಿಗೆ ಸರಿ ಹೊಂದುವ ಮತ್ತು ತಾವೇ ಎಲ್ಲವನ್ನು ನಿರ್ಧರಿಸಬಹುದಾದ ಒಂದು ಸಂಸ್ಥೆಯ ಕನಸು ಕಂಡರು.. ಅದನ್ನು ಬೆಳೆಸಿದರು.. ಹೀಗೆ ಕನಸು ರೆಕ್ಕೆ ಮೂಡುತ್ತಿರುವಾಗ ಜೊತೆಯಾದವರು ತಶ್ವಿನ್.

ಬೆಂಗಳೂರಿನಲ್ಲಿ ಜನ್ಮತಳೆಯಿತು ಮೊದಲ ಉದ್ಯಮ

2010ರಲ್ಲಿ ಬೆಂಗಳೂರಿನಲ್ಲಿ ಜನ್ಮ ತಳೆಯಿತು ಮೊದಲ ಉದ್ಯಮ. ಕಾಸಲ್ ಸ್ಟ್ರೀಟ್ ನಲ್ಲಿ ಇದರ ಆರಂಭ. ಇಲ್ಲಿ ಕನಸುಗಳು ಹೆಮ್ಮರವಾದವು. 1200 ಚದರಡಿ ವ್ಯಾಪ್ತಿ. 58 ಮಂದಿ ಕುಳಿತುಕೊಳ್ಳುವ ಸಾಮರ್ಥ್ಯ.. ಹೀಗೆ ಉದ್ಯಮ ಲೋಕದಲ್ಲಿ ಮೊದಲ ಹೆಜ್ಜೆ ಮೂಡಿತು...

ಪ್ಲಾನ್ ಬಿ. ಅಂದರೇನು..?

ಬಳಿಕ ಬಂದದ್ದು ಪ್ಲಾನ್ ಬಿ. ಇದು ಅಮೆರಿಕನ್ ಮಾದರಿಯ ಅನುಕರಣೆ.. ನಿರ್ದಿಷ್ಟ ವರ್ಗದ ಬೇಡಿಕೆಗಳಿಗೆ ಆದ್ಯತೆ ಎಂಬ ಪರಿಕಲ್ಪನೆ. ಕೋಳಿಯ ರೆಕ್ಕೆ ಮಾಂಸ, ರಿಬ್ಸ್ ಹೀಗೆ ವಿವಿಧ ರೀತಿಯ ತಿಂಡಿ. ಒಳಗಡೆ ಇಟ್ಟಿಗೆ ಹಾಗೂ ಇನ್ನಿತರ ಪರಿಸರ ಸ್ನೇಹಿ ವಸ್ತುಗಳ ಒಳಾಂಗಣ. ಹೆಚ್ಚಿನ ಪ್ರಮಾಣದಲ್ಲಿ ತಿಂಡಿ ತಿನಿಸು.. ಜೊತೆಗೆ ಬೇಕಾಗುವಷ್ಟು ಮದ್ಯ ಪೂರೈಕೆ ಎಂಬ ಟ್ರೆಂಡ್ ಪ್ಲಾನ್ ಬಿ ಜೊತೆ ಹಾಸು ಹೊಕ್ಕಾಯಿತು. ಪ್ಲಾನ್ ಬಿ ಬಳಿಕ ನೆಲೆ ಕಂಡದ್ದೇ ಮದರ್ ಕ್ಲಕರ್ಸ್. ಅದೂ ಇಂದಿರಾ ನಗರದಲ್ಲಿ .. 2015ರ ಆರಂಭದಲ್ಲಿ ಪ್ಲಾನ್ ಬಿ ಚೆನ್ನೈನಲ್ಲಿ ಆರಂಭವಾಯಿತು.. ಬಳಿಕ ಬೆಂಗಳೂರಿನಲ್ಲಿ ಥಾಯ್ ಪುಡ್ ಬೇಡಿಕೆ ಯತ್ತ ಗಮನ ಹರಿಸಲಾಯಿತು. ಇದರ ಫಲವಾಗಿ ಆರಂಭವಾದದ್ದೇ ಒನ್ ನೈಟ್ ಇನ್ ಬ್ಯಾಂಕಾಂಕ್.. ಇದು ಥಾಯ್ ಪುಡ್ ಪ್ರೇಮಿಗಳ ಮನ ಗೆದ್ದಿತ್ತು.

ತಶ್ವಿನ್ ಮಾತು - ಮನದಾಳ

ನಾವು ಇಷ್ಟೊಂದು ಯಶಸ್ಸು ಕಾಣಬಹುದು ಎಂದು ನಿರೀಕ್ಷಿಸಿರಲಿಲ್ಲ.. ಎಲ್ಲವೂ ವಿಸ್ಮಯ ಎಂಬಂತೆ ಅನಿಸುತ್ತಿದೆ ಎಂದು ವಿನಮ್ರದಿಂದ ನುಡಿಯುತ್ತಾರೆ ತಶ್ವಿನ್.. ಆರಂಭದಲ್ಲಿ ಒಂದೇ ಕಡೆ ಬಿಯರ್ ಮತ್ತು ಒಳ್ಳೆಯ ಆಹಾರ ಕೊಡೋಣ ಎಂದಷ್ಟೇ ನಮ್ಮ ಪ್ಲಾನ್ ಆಗಿತ್ತು. ಯಾವಾಗ ಇದಕ್ಕೆ ಅಭೂತಪೂರ್ವ ಮೆಚ್ಚುಗೆ ವ್ಯಕ್ತವಾಯಿತೋ ಪೂರ್ಣ ಪ್ರಮಾಣದ ಬಾರ್ ಮತ್ತು ಹೋಟೆಲ್ ಉದ್ಯಮದತ್ತ ಮುಖ ಮಾಡಿದೆವು ಎನ್ನುತ್ತಾರೆ ತಶ್ವಿನ್.

ತಮ್ಮ ಆರಂಭದ ದಿನಗಳನ್ನು ಮೆಲುಕು ಹಾಕಿರುವ ತಶ್ವಿನ್ , ಆರು ತಿಂಗಳ ಕಾಲ ಜನಮೆಚ್ಚುಗೆ ಗಳಿಸಲು ಪರದಾಡಬೇಕಾಯಿತು ಎನ್ನುತ್ತಿದ್ದಾರೆ. ಬಳಿಕ ಚಿತ್ರಣ ಬದಲಾಯಿತು 80 ಲಕ್ಷ ರೂಪಾಯಿ ಬಂಡವಾಳ ಹೂಡಲಾಗಿತ್ತು. ಆರಂಭದ ಪ್ರಯತ್ನಕ್ಕೆ ಇದು ಭಾರೀ ಮೊತ್ತವಾಗಿತ್ತು.. ಆದರೂ ಉತ್ಸಾಹ ಕುಗ್ಗಿರಲಿಲ್ಲ.. ಆತ್ಮ ವಿಶ್ವಾಸ ಕಳೆಗುಂದಿರಲಿಲ್ಲ ಎನ್ನುತ್ತಾರೆ ತಶ್ವಿನ್. ಗ್ಯಾಸ್ಟ್ರೋ ಪಬ್ ಅಥವಾ ಡೈವ್ ಬಾರ್ ಕಲ್ಪನೆ ಬೆಂಗಳೂರಿನ ಮಟ್ಟಿಗೆ ಹೊಸ ಪರಿಚಯವಾಗಿತ್ತು ಎನ್ನುತ್ತಾರೆ ಸಂದೀಪ್. ಒಂದು ಸಂಸ್ಥೆಯೊಂದಿಗೆ ಆರಂಭವಾದ ಆತಿಥ್ಯ ಸೇವೆ ಇದೀಗ ಹೆಮ್ಮರವಾಗಿ ಬೆಳೆದು ನಿಂತಿದೆ.

ಕೌ ಹಾಸ್ಪಿಟಾಲಿಟಿ ಐದು ಶಾಖೆಗಳನ್ನು ಹೊಂದಿದೆ. ವ್ಯವಹಾರದಲ್ಲಿ ಕೂಡ ಶೇಕಡಾ 400ರಷ್ಟು ಹೆಚ್ಚಳವಾಗಿದೆ. 200ಕ್ಕೂ ಹೆಚ್ಚು ಸಿಬ್ಬಂದಿ ಹೊಂದಿರುವ ಸಂಸ್ಥೆ, ಒಂದೇ ಕಡೆ ಆಹಾರ ಸಿದ್ಧಪಡಿಸುವ ಸಾಮರ್ಥ್ಯವನ್ನು ಕೂಡ ಮೈಗೂಡಿಸಿಕೊಂಡಿದೆ.

ಮುಂದಿನ ಪ್ಲಾನ್ ಏನು..?

ಇನ್ನಿತರರಿಗೆ ಪ್ರಾಂಚೈಸಿ ಕೊಟ್ಟು ವ್ಯವಹಾರ ನಡೆಸುತ್ತಿಲ್ಲ. ಬದಲಾಗಿ ನೇರ ವ್ಯವಹಾರ ಮತ್ತು ನೇರ ಮುಖಾಮುಖಿ ಸಂಸ್ಥೆಯ ಧೇಯ್ಯ ವಾಕ್ಯ ಎನ್ನುತ್ತಾರೆ ಸಂದೀಪ್.. ಕಳೆದ ಆರ್ಥಿಕ ವರ್ಷದಲ್ಲಿ 10 ಕೋಟಿ ರೂಪಾಯಿ ಆದಾಯ ಗಳಿಸಿದ್ದ ಹೋಲಿ ಕೌ ಸಂಸ್ಥೆ ಈ ಬಾರಿ 20 ಕೋಟಿ ರೂಪಾಯಿ ಆದಾಯದ ನಿರೀಕ್ಷೆಯಲ್ಲಿದೆ. ಇದರ ಜೊತೆ ಜೊತೆಗೆ ವಿಸ್ತರಣೆಗೆ ಕೂಡ ಮನಸ್ಸು ಮಾಡಿದೆ. ಹೈದರಾಬಾದ್ ಮತ್ತು ಟೈರ್ 1 ನಗರಗಳಲ್ಲಿ ಉದ್ಯಮ ಆರಂಭಿಸುವ ಪ್ಲಾನ್ ಸಿದ್ಧವಾಗುತ್ತಿದೆ.

ಲೇಖಕರು: ಅಪರಾಜಿತ ಚೌಧರಿ
ಅನುವಾದಕರು: ಎಸ್.​​ಡಿ.

Related Stories