ಸತ್ತು ಬದುಕಿದವಳು ಇಂದು 29 ಬಾಲ್ಯ ವಿವಾಹವನ್ನು ರದ್ದುಗೊಳಿಸಿದ್ದಾರೆ

ಟೀಮ್​ ವೈ.ಎಸ್​. ಕನ್ನಡ

ಸತ್ತು ಬದುಕಿದವಳು ಇಂದು 29 ಬಾಲ್ಯ ವಿವಾಹವನ್ನು ರದ್ದುಗೊಳಿಸಿದ್ದಾರೆ

Sunday December 20, 2015,

3 min Read

ಅಂದು ಹುಟ್ಟಿದ ಕೂಡಲೇ ಯಾರಿಗೆ ವಿಷ ಹಾಕಿ ಸಾಯಿಸಲು ಮುಂದಾಗಿದ್ರೋ, ಇಂದು ಅದೇ ಹುಡುಗಿ ಸಾಮಾಜಿಕ ಪಿಡುಗು ಬಾಲ್ಯ ವಿವಾಹದ ಸರ್ವನಾಶ ಮಾಡುವ ಪ್ರಯತ್ನದಲ್ಲಿದ್ದಾರೆ. ಅವರು ಜನ್ಮಿಸಿದ ವೇಳೆ ಅವರನ್ನು ಸಾಯಿಸಲು ವಿಷ ನೀಡಲಾಗಿತ್ತು. ಇಂದು ಬಾಲ್ಯ ವಿವಾಹಕ್ಕೆ ಬಲಿಯಾದ ಮಕ್ಕಳಿಗೆ ಅವರ ಬದುಕನ್ನು ಬದುಕುವ ಅಧಿಕಾರ ಒದಗಿಸಿಕೊಡುತ್ತಿದ್ದಾರೆ. ರಾಜಸ್ಥಾನದ ಜೋಧಪುರದಲ್ಲಿರುವ 28 ವರ್ಷದ ಕೃತಿ, ಬಾಲ್ಯ ವಿವಾಹ ಮುಕ್ತ ರಾಜಸ್ತಾನಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಬಾಲ್ಯ ವಿವಾಹವನ್ನು ಕಾನೂನಾತ್ಮಕ ಅಸಿಂಧುಗೊಳಿಸಿ ಯಶಸ್ವಿಯಾದ ಭಾರತದ ಮೊದಲ ಮಹಿಳೆ ಕೃತಿ. ಅವರ ಈ ಸಾಧನೆ ‘ಲಿಮ್ಕಾ ಬುಕ್ ಆಫ್ ರೆಕಾರ್ಡ್’ನಲ್ಲೂ ದಾಖಲೆ ಬರೆದಿದೆ. ಇಷ್ಟೇ ಅಲ್ಲದೆ ಕೇಂದ್ರ ಶಿಕ್ಷಣ ಬೋರ್ಡ್​ನ ಪಠ್ಯ ಕ್ರಮದಲ್ಲೂ ಇವರನ್ನು ಸೇರಿಸಲಾಗಿದೆ.

image


ವರ್ಷ 2011ರಲ್ಲಿ ಬಾಲ್ಯ ವಿವಾಹವನ್ನು ರದ್ದುಗೊಳಿಸುವ ಸಲುವಾಗಿ ‘ಸಾರಥಿ’ ಎಂಬ ಟ್ರಸ್ಟ್ ತೆರೆದಿರುವ ಕೃತಿ ಅವರ ವಿರುದ್ಧ ಹಲವು ಹಲ್ಲೆಗಳಾಗಿವೆ. ಇಷ್ಟಾದ್ರು ಕೃತಿ ಧೃತಿಗೆಡದೆ ತಮ್ಮ ಕೆಲಸದಲ್ಲಿ ಮುಂದುವರೆಯುತ್ತಿದ್ದಾರೆ. ಇದುವರೆಗೂ ಅವರು 850ಕ್ಕಿಂತ ಹೆಚ್ಚು ಬಾಲ್ಯ ವಿವಾಹವನ್ನು ತಡೆದಿದ್ದಾರೆ. ಬಾಲ್ಯ ವಿವಾಹವನ್ನು ತಡೆಯುವಂತಹ ಕೆಲಸವನ್ನು ಸರ್ಕಾರ ಸೇರಿದಂತೆ ಹಲವು ಸಂಘ ಸಂಸ್ಥೆಗಳು ಮಾಡುತ್ತಿವೆ. ಆದರೆ ಬಾಲ್ಯ ವಿವಾಹದಿಂದ ಮಕ್ಕಳನ್ನು ಹೊರತರುವ ಕೆಲಸವನ್ನು ‘ಸಾರಥಿ’ ಟ್ರಸ್ಟ್ ಮಾಡುತ್ತಿದೆ. ಈ ಸಂಸ್ಥೆ ಇಂತಹ ಮಕ್ಕಳ ಸಲುವಾಗಿ ಹಲವು ಕೆಲಸ ಮಾಡುತ್ತಿದೆ. ಬಾಲ್ಯ ವಿವಾಹವನ್ನು ರದ್ದುಗೊಳಿಸುವಂತಹ ಕೆಲಸವನ್ನು ಕೃತಿಯವರು ಮಾತ್ರ ಮಾಡುತ್ತಾರೆ. ಇಷ್ಟಲದ್ದೆ ಮಕ್ಕಳ, ಅವರ ಕುಟುಂಬಸ್ಥರ ಮತ್ತು ಆ ಜಾತಿಯ ಜನರ ಕೌನ್ಸ್ಲಿಂಗ್ ಕೂಡ ಟ್ರಸ್ಟ್ ಮಾಡುತ್ತಿದೆ. ಇದರ ಜೊತೆಗೆ ಸಾಮಾಜಿಕ ದಿಗ್ಭಂದನದಿಂದ ಹೊರಬರಲು ಬಯಸುವ ಮಕ್ಕಳಿಗೆ ಪುನರ್ವಸತಿ ಕಲ್ಪಿಸುವಂತಹ ಕೆಲಸವನ್ನು ಕೂಡ ಈ ಸಂಸ್ಥೆ ಮಾಡುತ್ತಿದೆ. "ಯಾವ ಮಕ್ಕಳ ಬಾಲ್ಯ ವಿವಾಹ ರದ್ದು ಆಗುತ್ತೋ ಅವರಿಗೆ ಸಮಾಜದಲ್ಲಿ ಸಿಗಬೇಕಾದ ಗೌರವ ಸಿಗುವುದಿಲ್ಲ. ಅಂತವರಿಗೆ ಗೌರವ ಸಿಗುವಂತೆ ಮಾಡುವುದು ದೊಡ್ಡ ಜವಾಬ್ದಾರಿ ಎಂತಾರೆ" ಕೃತಿ.

ಭಾರತದ ಕಾನೂನಿನ ಪ್ರಕಾರ ಯಾವುದೇ ಹುಡುಗ 21 ವರ್ಷದವರೆಗೂ ತನ್ನ ಮದುವೆಯನ್ನು ಬಾಲ್ಯ ವಿವಾಹವೆಂದು ಹೇಳಿ ರದ್ದುಗೊಳಿಸಬಹುದು. ಹುಡಗಿಯಾದವಳು 18 ವರ್ಷದರೆಗೂ ತನ್ನ ವಿವಾಹವನ್ನು ರದ್ದುಗೊಳಿಸಲು ಭಾರತದ ಕಾನೂನು ಅಧಿಕಾರ ನೀಡಿದೆ. ಅದರೆ ಹಲವು ಜನರಿಗೆ ಇದರ ಅರ್ಥ ಇನ್ನೂ ಸರಿಯಾಗಿ ತಿಳಿದಿಲ್ಲ. ವಿವಾದ ರದ್ಧುಗೊಳಿಸುವುದು ಮತ್ತು ವಿಚ್ಚೇಧನ ಎರಡು ಬೇರೆ-ಬೇರೆ ಪದಗಳೆಂದು. ಬಾಲ್ಯ ವಿವಾಹ ರದ್ದುಗೊಳಿಸುವುದೆಂದರೆ. ಹುಡುಗ/ಹುಡುಗಿ ಮದೆವೆಯಾದ ದಿನದಿಂದ, ವಿವಾಹ ರದ್ದುಗೊಳಿಸುವ ದಿನದವರೆಗೂ ಅವನು ಮದುವೆಯಾಗಿರುವುದನ್ನು ಕ್ಯಾನ್ಸಲ್ ಮಾಡುವುದಾಗಿದೆ. ಇದರಿಂದ ಹುಡುಗ ಕುಮಾರನೆಂದಿನಿಸಿಕೊಳ್ಳುತ್ತಾನೆ. ಬಾಲ್ಯ ವಿವಾಹವನ್ನು ಅಸಿಂಧುಗೊಳಿಸುವುದು ಸುಲಭದ ಕೆಲಸವಲ್ಲ. ಹಾಗಾಗಿ ಇಲ್ಲಿ ತಂದೆ-ತಾಯಿಯರ ಮನವೊಲಿಸುವುದು ಅತ್ಯಂತ ಮುಖ್ಯವಾಗುತ್ತದೆ. ಇದರಿಂದ ಬಾಲಕನ ಮೇಲಿನ ಒತ್ತಡ ಸ್ವಲ್ಪ ಕಮ್ಮಿಯಾಗುತ್ತದೆ. ಇದಾದ ನಂತರ ಆಕಡೆ ಇರುವವರಿಗೆ ಮದುವೆಯನ್ನು ರದ್ದುಗೊಳಿಸುವಂತೆ ಮನವೊಲಿಸಲಾಗುತ್ತದೆ. ಆ ಜಾತಿಯ ಜನರನ್ನು ಮನವೊಲಿಸುವುದು ಅತ್ಯಂತ ಕಷ್ಟದ ಕೆಲಸವಾಗುತ್ತದೆ. ಯಾಕಂದ್ರೆ ಇದರಿಂದ ಅವರ ಜಾತಿಯ ಮೀಸೆ ಮಣ್ಣಾಗುತ್ತದೆ ಎಂದು ಅವರು ಭಾವಿಸುತ್ತಾರೆ. ಈ ಕೆಲಸದಲ್ಲಿ ಸಖತ್ ಬೆದರಿಕೆ, ಬೈಗುಳ, ಕೇಳುತ್ತವೆ. ಹಲವು ಸಲ ಹಲ್ಲೆಗಳು ಕೂಡ ಕೃತಿ ಮತ್ತು ಅವರ ತಂಡದವರ ಮೇಲೆ ನಡೆದಿವೆ. "ನನಗೆ ಗೊತ್ತಿರುವ ಪ್ರಕಾರ, ಬೆದರಿಕೆ ಇಲ್ಲದೆ ಬಗೆಹರಿದಂತ ಯಾವುದೇ ಒಂದು ಪ್ರಕರಣವಿಲ್ಲ. ಆದರೆ ಆ ಮಕ್ಕಳನ್ನು ಇಂತಹ ದರಿದ್ರ ಕೆಟ್ಟ ವಾತಾವರಣದಿಂದ ನಾವು ಹೊರಗೆ ತೆಗೆಯಬೇಕು ಹಾಗಾಗಿ ನಾವು ಇದನ್ನ ಮಾಡಲೆಬೇಕು ಎಂತಾರೆ ಕೃತಿ ". ವಿವಾಹ ರದ್ಧುಗೊಳಿಸಲು ಎರಡು ಪಕ್ಷಗಳು ಒಪ್ಪಂದದ ಮೇರೆಗೆ ಇದಕ್ಕೆ ಪರಿಹಾರ ಸಿಕ್ರೆ ಒಳ್ಳೆಯದು. ಇಬ್ಬರು ಒಪ್ಪಿಕೊಂಡರೆ ಬಲುಬೇಗ ವಿವಾಹ ರದ್ದಾಗುತ್ತದೆ. ಇಲ್ಲದೆ ಹೋದಲ್ಲಿ ಈ ಪ್ರಕ್ರೀಯೆ ಹೆಚ್ಚು ಕಾಲ ನಡೆಯುತ್ತದೆ. "ಎರಡು ಕಡೆಯವರು ಒಪ್ಪಿಕೊಂಡರೆ ಬಲು ಬೇಗ ವಿವಾಹವನ್ನು ರದ್ಧುಗೊಳಿಸಬಹುದು. ಇದೇ ವರ್ಷ ಮೂರು ದಿನದಲ್ಲಿ ಒಂದು ವಿವಾಹವನ್ನು ರದ್ದುಗೊಳಿಸಿದ್ದೇನೆ " ಎಂತಾರೆ ಕೃತಿ.

image


ಒಂದು ವೇಳೆ ಮಕ್ಕಳು ಸಹಾಯ ಕೇಳಿ ಇವರ ಬಳಿ ಬಂದರೆ, ಕೃತಿ ಅವರ ತಂಡ ಎರಡು ಕಡೆಯಿಂದ ಕೆಲಸ ಮಾಡಲು ಆರಂಭಿಸುತ್ತದೆ. ಒಂದೆಡೆ ವಿವಾಹವನ್ನು ಅಸಿಂಧುಗೊಳಿಸಲು ಹೋರಾಡುವ ಈ ತಂಡ ಆ ಮಕ್ಕಳಿಗೆ ಪುನರ್ವಸತಿ ಕೂಡ ಕಲ್ಪಿಸುತ್ತದೆ. ಮಕ್ಕಳ ಮೂಲಭೂತ ಸೌಲಭ್ಯವಹಿಸುವತ್ತ ಟ್ರಸ್ಟ್ ಗಮನವಹಿಸುತ್ತಿತ್ತು. ಮಕ್ಕಳ ವ್ಯಾಸಾಂಗ, ಇತರೆ ಕೌಶಲ್ಯ ತರಬೇತಿಯನ್ನು ನೀಡುತ್ತದೆ. ಕೃತಿ ಅವರು ಏಪ್ರಿಲ್ 2012ರಿಂದ ಇಲ್ಲಿಯ ತನಕ 29 ಬಾಲ್ಯ ವಿವಾಹವನ್ನು ರದ್ಧುಗೊಳಿಸಿದ್ದಾರೆ. ಕೃತಿ ಅವರ ಪರಿಶ್ರಮದ ಫಲವಾಗಿಯೇ ಇಂದು ದೇಶದಲ್ಲಿ ಭಾರತ ಅತಿ ಹೆಚ್ಚು ಬಾಲ್ಯ ವಿವಾಹವನ್ನು ರದ್ದುಗೊಳಿಸಿಕೊಂಡ ಸಂಸ್ಥೆ ಎಂಬ ಕೀರ್ತಿಗೆ ಪಾತ್ರವಾಗಿದೆ. ಬಾಲ್ಯ ವಿವಾಹವನ್ನು ರದ್ಧುಗೊಳಿಸಿಕೊಳ್ಳುವ ಸಲುವಾಗಿ ‘ಸಾರಥಿ’ ಟ್ರಸ್ಟ್ ಶಾಲೆ, ಅಂಗನವಾಡಿ, ಕಾಲೇಜುಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಶಿಬಿರಗಳನ್ನು ಏರ್ಪಡಿಸುತ್ತದೆ. ಇಲ್ಲಿ ಕೇವಲ ಬಾಲ್ಯ ವಿವಾಹದಿಂದಾಗುವ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಲಾಗುವುದಿಲ್ಲ. ಅಂತಹ ಪ್ರಕರಣಗಳು ಕಂಡರೆ ಮಾಹಿತಿ ನೀಡುವಂತೆ ಅವರಿಗೆ ಎಚ್ಚರಗೊಳಿಸಲಾಗುತ್ತದೆ. ಇದರ ಜೊತೆಗೆ ಒಂದು ಸಹಾಯವಾಣಿಯನ್ನು ಈ ಸಂಸ್ಥೆ ನಡೆಸುತ್ತದೆ. ಇಲ್ಲೂ ಕರೆ ಮಾಡಿ, ಸಮಸ್ಯೆ ಹೇಳಬಹುದು. ಜೊತೆಗೆ ಮಾಧ್ಯಮಗಳಿಂದ ತಿಳಿದ್ರೂ ಅಂತಹ ಕಡೆ ಹೋಗಿ ಬಾಲ್ಯ ವಿವಾಹವನ್ನು ತಡೆಯುತ್ತದೆ ಸಾರಥಿ ಟ್ರಸ್ಟ್.

image


ಇಷ್ಟೆಲ್ಲಾ ಒಳ್ಳೆಯ ಕೆಲಸ ಮಾಡುವ ಕೃತಿ ಬಾಲ್ಯ ಮಾತ್ರ ಅತ್ಯಂತ ಕೆಟ್ಟದಾಗಿತ್ತು. ಅವರ ತಂದೆ ವೈದ್ಯರಾಗಿದ್ರು. ಕೃತಿ ಜನ್ಮಿಸುವ ಮೊದಲೇ ಅವರ ತಾಯಿಯಿಂದ ತಂದೆ ದೂರವಾಗಿದ್ರು. ಹಾಗಾಗಿ ಕೃತಿ ತಾಯಿಯ ಕಡೆಯವರಿಗೆ ಕೃತಿ ಹುಟ್ಟುವುದು ಬೇಕಾಗಿರಲಿಲ್ಲ. ಹಾಗಾಗಿ ಅವರ ತಾಯಿಗೆ ಇನ್ನೊಂದು ವಿವಾಹ ಆಗುವ ಸಲಹೆ ನೀಡಿದ್ರು. ಕೃತಿ ಜನಿಸಿದ ವೇಳೆ ಅವರಿಗೆ ವಿಷ ಹಾಕಲಾಗಿತ್ತಂತೆ ಹಾಗಾಗಿ ಮಧ್ಯದಲ್ಲೇ ಅವರ ಶಿಕ್ಷಣ ನಿಂತು ಹೋಯ್ತು. ಈಗ ಕೃತಿ ‘ಬಾಲ್ಯ ಸಂರಕ್ಷಣ ಮತ್ತು ಸುರಕ್ಷತೆ’ ಎಂಬ ವಿಷಯದ ಮೇಲೆ ಪಿಎಚ್​ಡಿ ಮಾಡುತ್ತಿದ್ದಾರೆ. ಜೊತೆಗೆ ಬಾಲ್ಯ ವಿವಾಹದ ವಿರುದ್ಧ ಅವರ ಕೆಲಸವನ್ನು ನೋಡಿ ಅವರಿಗೆ ಅನೇಕ ರಾಷ್ಟ್ರೀಯ-ಅಂತಾರಾಷ್ಟ್ರೀಯ ಪ್ರಶಸ್ತಿಗಳು ಬಂದಿವೆ. ಸದ್ಯ ಲಂಡನ್ ಸರ್ಕಾರ ಮತ್ತು ಥಾಮ್ಸನ್ ರಾಯಿಟರ್ಸ್ ಫೌಂಡೇಶನ್​ನಿಂದ ಫೆಲೋಶಿಪ್ ನೀಡಲಾಗಿದೆ. ಸಮಾಜದಲ್ಲಿ ಬಾಲ್ಯ ವಿವಾಹವೆಂಬ ಪಿಡುಗನ್ನು ತೊಲಗಿಸುವುದು ಕೃತಿ ಗುರಿಯಾಗಿದೆ. ಬಾಲ್ಯ ವಿವಾಹ ಎಂಬ ಪಿಡುಗು ಒಂದಾನೊಂದು ಕಾಲದಲ್ಲಿತ್ತು ಎಂದು ಮಕ್ಕಳು ಪಠ್ಯಕ್ರಮದಲ್ಲಿ ಓದುವಂತಾಗಬೇಕು ಎಂಬುದು ಅವರ ಆಶಯವಾಗಿದೆ.


ಲೇಖಕರು: ಹರೀಶ್ ಬಿಶ್ತ್

ಅನುವಾದಕರು: ಎನ್.ಎಸ್.ರವಿ