ಭಾರತದಲ್ಲಿ ವಿನೂತನ ಯೋಜನೆಗಳು ಆಕರ್ಷಕವೇ..? - ಕಳಾರಿ ಕ್ಯಾಪಿಟಲ್​ ಎಂಡಿ ಕುಮಾರ್​ ಶಿರಾಲಗಿ ಏನಂತಾರೆ..?

ಟೀಮ್​​ ವೈ.ಎಸ್​. ಕನ್ನಡ

0

ಮಾಹಿತಿ ತಂತ್ರಜ್ಞಾನ ಆಧಾರಿತ ಕ್ಷೇತ್ರದಲ್ಲಿ ಕೂಡಾ ಏಕರೂಪದ ಬೆಳವಣಿಗೆ ಸಾಮಾನ್ಯವಾಗಿ ಕಂಡು ಬರುತ್ತಿಲ್ಲ. ಕೆಲವು ಕ್ಷೇತ್ರಗಳು ಅಭೂತಪೂರ್ವ ಬೆಳವಣಿಗೆ ದಾಖಲಿಸಿದರೆ, ಇನ್ನು ಕೆಲವು ನಿರೀಕ್ಷಿತ ಪ್ರಗತಿ ಸಾಧಿಸಿಲ್ಲ. ವರ್ಷದ ಸಾಧನೆ ಅವಲೋಕಿಸಿದರೆ ಇದು ಸ್ಪಷ್ಟವಾಗುತ್ತದೆ. ಮೊಬೈಲ್, ಆರೋಗ್ಯ ಕ್ಷೇತ್ರ ಮತ್ತು ಶಿಕ್ಷಣ ಏರು ಮುಖದ ಬೆಳವಣಿಗೆ ಸೂಚಕವಾಗಿದ್ದರೆ, ಈ ಕಾಮರ್ಸ್ ಕ್ಷೇತ್ರ ಸುಭದ್ರಗೊಳ್ಳುತ್ತಿದೆ. ಆದರೆ ಎರಡೂ ಕ್ಷೇತ್ರಗಳಿಗೆ ಬಂಡವಾಳದ ಹರಿವು ಕೂಡ ಅತ್ಯಗತ್ಯವಾಗಿದೆ.

ಕಳಾರಿ ಕ್ಯಾಪಿಟಲ್ ಸಂಸ್ಥೆಯ ಕುಮಾರ್ ಶಿರಾಲಗಿ ಈ ಬೆಳವಣಿಗೆಯನ್ನು ತದೇಕ ಚಿತ್ತದಿಂದ ಗಮನಿಸುವವರಲ್ಲಿ ಒಬ್ಬರಾಗಿದ್ದಾರೆ. ಆದರೆ ಕುಮಾರ್ ಅವರಿಗೆ ಇದು ಹೊಸತಾಗಿರಲ್ಲಿಲ್ಲ. ಅವರು ತಮ್ಮ ಬದುಕಿನುದ್ದಕ್ಕೂ ವೃತ್ತಿಪರ ಜೀವನದಲ್ಲಿ ಇಂತಹ ಹಲವು ಸವಾಲುಗಳನ್ನು ಎದುರಿಸಿ ಬಂದಿದ್ದರು. ಅದು ಅವರ ಜೀವನದ ಅವಿಭಾಜ್ಯ ಅಂಗವಾಗಿತ್ತು. ಇಂಟೆಲ್ ಕ್ಯಾಪಿಟಲ್​​ನಲ್ಲಿನ ಅವರ ಅನುಭವ ಮತ್ತು ಹೊಸದಾಗಿ ಸೇರ್ಪಡೆಗೊಳಿಸಿದ ಹಲವು ಸಂಸ್ಥೆಗಳು ಅವರಿಗೆ ಅನುಭವದ ಬುತ್ತಿಯನ್ನೇ ನೀಡಿದ್ದವು. ಮುಂದೆ ಕಳಾರಿ ಕ್ಯಾಪಿಟಲ್ ಜೊತೆ ಕೈ ಜೋಡಿಸಿದಾಗ ನಾಯಕತ್ವದ ಜೊತೆ ಜೊತೆಗೆ 160 ಮಿಲಿಯನ್ ಡಾಲರ್ ಹೂಡಿಕೆಯನ್ನು ಜೊತೆಗೆ ತಂದರು.

ಭಾರತದಲ್ಲಿ ವಿನೂತನ ಯೋಜನೆಗಳು ಆಕರ್ಷಕವೇ..?, ಹೂಡಿದ ಬಂಡವಾಳಕ್ಕೆ ಸೂಕ್ತ ಪ್ರತಿಫಲ ದೊರೆಯುವುದೇ..? ಯಾವ ಯಾವ ಕ್ಷೇತ್ರದಲ್ಲಿ ಬಂಡವಾಳ ಹೂಡಬಹುದು ಹೀಗೆ ಎಲ್ಲ ಮಾಹಿತಿಗಳ ಆಗರವಾಗಿರುವ ಕುಮಾರ್, ತಮ್ಮ ಮಾಹಿತಿ ಅನುಭವದ ಆಧಾರದಲ್ಲಿ ನಿರ್ಧಾರ ತೆಗೆದುಕೊಳ್ಳುವುದರಲ್ಲಿ ನಿಸ್ಸೀಮರಾಗಿದ್ದರು. ಇದು ಅತ್ಯುನ್ನತ ಪ್ಲಸ್ ಪಾಯಿಂಟ್ ಆಗಿತ್ತು.

ಮೂಲ ಸಿದ್ಧಾಂತಕ್ಕೆ ಒತ್ತು

ಬಂಡವಾಳ ಹೂಡಿಕೆ ವಿಷಯಕ್ಕೆ ಬಂದಾಗ ಕುಮಾರ್ ತಾವು ಬಲವಾಗಿ ನಂಬಿದ್ದ ಸಿದ್ಧಾಂತಕ್ಕೆ ಶರಣಾಗಿದ್ದರು. ಕಳೆದ ಹಲವು ವರ್ಷಗಳ ಅನುಭವದ ಆಧಾರದಲ್ಲಿ ನಿರ್ಧಾರ ಕೈಗೊಂಡಿದ್ದರು. ಮೂರರಿಂದ 5 ಮಿಲಿಯನ್ ಡಾಲರ್ ವ್ಯಾಪ್ತಿ ಬಂಡವಾಳ ಹೂಡಿಕೆ ಆದ್ಯತೆ ವಿಷಯವಾಗಿತ್ತು. ಆರಂಭಿಕ ಹಂತದಲ್ಲಿ ಅತ್ಯುತ್ತಮ ಬೆಳವಣಿಗೆ ಸಾಧ್ಯವಿರುವ ಸಂಸ್ಥೆಗಳನ್ನು ಮಾಹಿತಿ ತಂತ್ರಜ್ಞಾನ, ಮೊಬೈಲ್ ಹೀಗೆ ಗುರುತಿಸಿ ಬಂಡವಾಳ ಹೂಡಲಾಗುತ್ತಿತ್ತು.

ಕಳೆದ 15ರಿಂದ 18 ತಿಂಗಳ ಅವಧಿಯಲ್ಲಿ ಸತತ ಬಂಡವಾಳ ಹೂಡಿಕೆ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಕಳರಿ ಕ್ಯಾಪಿಟಲ್ ಸಂಸ್ಥೆಯ ಪ್ರಗತಿಯ ಸ್ಪಷ್ಟ ಚಿತ್ರಣ ಅನಾವರಣಗೊಳ್ಳಲಿದೆ ಎನ್ನುತ್ತಾರೆ ಕುಮಾರ್. ಆರಂಭಿಕ ಹಂತದಲ್ಲಿ ಹೂಡಿಕೆಯಲ್ಲಿ ನಿರೀಕ್ಷಿತ ಬೆಳವಣಿಗೆ ನಿರೀಕ್ಷಿಸುವುದು ಅಸಾಧ್ಯ. ಇದು ವಾಸ್ತವ. ಆದರೂ ಕಳಾರಿ ಕ್ಯಾಪಿಟಲ್ ಹೂಡಿಕೆ ನಿರ್ಧಾರ ಧನಾತ್ಮಕ ಫಲಿತಾಂಶ ನೀಡಿದೆ ಎನ್ನುತ್ತಾರೆ ಕುಮಾರ್.

ಈ ಕಾಮರ್ಸ್ ಒಂದು ಚಿತ್ರಣ

ಈ ಕಾರ್ಮಸ್ ಅಭಿವೃದ್ಧಿ ಬಗ್ಗೆ ಕುಮಾರ್ ಅಧಿಕಾರಯುತವಾಗಿ ಮಾತನಾಡುತ್ತಾರೆ. ಕೆಲವರು ಈ ಕಾರ್ಮಸ್ ಸಂಸ್ಥೆಗಳು ಸುಭದ್ರತೆಯತ್ತ ಹೊರಳುತ್ತಿವೆ ಎಂಬ ಮಾತು ಹೇಳುತ್ತಿದ್ದರೆ, ಕುಮಾರ್ ತಮ್ಮದೇ ದೃಷ್ಟಿಕೋನ ಹೊಂದಿದ್ದಾರೆ. ಅವರು ಈ ರೀತಿ ಹೇಳುತ್ತಾರೆ.

ಎರಡು ರೀತಿಯ ಈ ಕಾಮರ್ಸ್ ವ್ಯವಹಾರ ಇದೆ. ಸಮಾನಾಂತರ ಮತ್ತು ನೇರ. ಕೆಲವು ಸಂಸ್ಥೆಗಳು ಸಮಾನಾಂತರ ರೇಖೆ ಸೂಚಿಸುವ ರೀತಿ ಬೆಳವಣಿಗೆ ದಾಖಲಿಸಿವೆ. ಈ ಸಂದರ್ಭದಲ್ಲಿ ಒಂದು ಮಾತು ಗಮನಿಸಬೇಕು. ಮಾರುಕಟ್ಟೆಯಲ್ಲಿ ಸುಭದ್ರ ಸ್ಥಿತಿ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದ್ದರೂ, ನಿಧಿ ಸಂಚಯನ ಮತ್ತು ಯಶಸ್ಸಿನ ಮಾನದಂಡ ಸೀಮಿತವಾಗಿದೆ. ಮುಂದಿನ ದಿನಗಳಲ್ಲಿ ಕೂಡ ಇದೇ ಸಂಸ್ಥೆಗಳಿಗೆ ಹಾದಿ ದುರ್ಗಮವಾಗಿದೆ.

ತಮ್ಮ ಸಂಸ್ಥೆ ಕಳಾರಿ ಕ್ಯಾಪಿಟಲ್ ಬಗ್ಗೆ ಮಾತನಾಡಿದ ಕುಮಾರ್, ನೇರ ರೇಖೆ ಅಥವಾ ವರ್ಟಿಕಲ್ ರೀತಿಯಲ್ಲಿ ಗುರುತಿಸುವ ಈ ಕಾಮರ್ಸ್ ಸಂಸ್ಥೆಗಳತ್ತ ಒಲವು ಹೊಂದಿರುವುದನ್ನು ಬಹಿರಂಗಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ಕ್ಷೇತ್ರದಲ್ಲಿ ಗಮನಾರ್ಹ ಪ್ರಗತಿ ಸಾಧಿಸುವ ಮುನ್ಸೂಚನೆಯನ್ನು ಕುಮಾರ್ ನೀಡಿದ್ದಾರೆ.

ದೂರ ಸಂಪರ್ಕ ಕ್ಷೇತ್ರದಲ್ಲಿನ ಬೆಳವಣಿಗೆ ಬಗ್ಗೆ ಕುಮಾರ್ ತಮ್ಮದೇ ಆದ ರೀತಿಯ ವಿಶ್ಲೇಷಣೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಆಪ್ ಮತ್ತು ಮೊಬೈಲ್ ಸರ್ವಿಸ್ ಕ್ಷೇತ್ರದಲ್ಲಿ ವಿಶಾಲವಾದ ಅವಕಾಶಗಳಿವೆ. ಬೆಳವಣಿಗೆಗೆ ಉಜ್ವಲ ಭವಿಷ್ಯ ಇದೆ. ಮೊಬೈಲ್ ಫೋನ್ ಗಳ ಬೇಡಿಕೆ ಅವಲೋಕಿಸಿದರೆ ಇದು ಸ್ಪಷ್ಟವಾಗುತ್ತದೆ. ಬಳಕೆದಾರರ ಬೇಡಿಕೆ ಹೆಚ್ಚಿದೆ ಎಂದು ಹೇಳಬಹುದು. ಆದರೆ ಈ ವಲಯದಲ್ಲಿ ವಿಶ್ವಾಸಾರ್ಹವಾದ ಆದಾಯ ಮೂಲವನ್ನು ಸೃಷ್ಟಿಸುವುದೇ ಪ್ರಮುಖ ಸವಾಲಾಗಿದೆ ಎಂದು ಕುಮಾರ್ ಅಭಿಪ್ರಾಯಪಡುತ್ತಾರೆ.

ವಿನೂತನ ಯೋಜನೆಗಳಿಗೆ ಅಂದರೆ ಸ್ಟಾರ್ಟ್ ಅಪ್​​ ಯೋಜನೆಗಳಿಗೆ ಹಣ ಹೂಡುವ ಸಂದರ್ಭದಲ್ಲಿ ಹೆಚ್ಚಿನ ಪಾತ್ರ ವಹಿಸಬೇಕಾದ ಅಗತ್ಯ ಇದೆ. ಪ್ರತಿಯೊಂದರಲ್ಲೂ ಶಾಮೀಲಾಗಿರಬೇಕು. ಕೆಲವೊಂದು ವಿಷಯಗಳಲ್ಲಿ ಉದ್ಯಮಿಗಳು ಸಮಗ್ರ ಮಾಹಿತಿ ಹೊಂದಿರಬಹುದು. ಕೆಲವು ಕ್ಷೇತ್ರಗಳಲ್ಲಿ ಪರಿಣತಿ ಪಡೆದಿರಬಹುದು. ಇದೇ ವೇಳೆ ಅಜ್ಞಾನ ಅಥವಾ ತಿಳುವಳಿಕೆಯ ಕೊರತೆಯೂ ಇರಬಹುದು. ಈ ಸಂದರ್ಭದಲ್ಲಿ ಲೋಪ ದೋಷ ಸರಿಪಡಿಸಿ, ಗುಣಮಟ್ಟ ಹೆಚ್ಚಳಕ್ಕೆ ಗಮನ ಹರಿಸಬೇಕಾಗಿದೆ.

ಈ ಸಂದರ್ಭದಲ್ಲಿ ಹೂಡಿಕೆದಾರನಾಗಿ ತಮ್ಮ ಪಾತ್ರ ಎಷ್ಟು ಪ್ರಾಮುಖ್ಯತೆ ಪಡೆದಿದೆ ಎಂಬುದನ್ನು ಕುಮಾರ್ ಈ ರೀತಿ ವಿವರಿಸುತ್ತಾರೆ. ವೃತ್ತಿಪರರನ್ನು ನೇಮಕ ಮಾಡುವುದು, ಸಂಭಾವ್ಯ ಗ್ರಾಹಕನಿಗೆ ಪರಿಚಯಾತ್ಮಕ ಮಾಹಿತಿ ನೀಡುವುದು ಮತ್ತು ಸಂಸ್ಥೆಯೊಳಗಡೆ ತೆಗೆದುಕೊಳ್ಳಬೇಕಾದ ರಚನಾತ್ಮಕ ಕ್ರಮಗಳ ಸೂಚನೆ ನೀಡುವುದು ಕೂಡ ಇದರಲ್ಲಿ ಸೇರಿದೆ ಎನ್ನುತ್ತಾರೆ ಕುಮಾರ್.

ಯಾವ ಸಂಸ್ಥೆಗಳಲ್ಲಿ ಹೂಡಿಕೆ..?

ಯಾವ ಯಾವ ಸಂಸ್ಥೆಗಳಲ್ಲಿ ಕಳಾರಿ ಕ್ಯಾಪಿಟಲ್ ಹೂಡಿಕೆ ಮಾಡುತ್ತದೆ ಎಂಬುದನ್ನು ಕುಮಾರ್ ಈ ರೀತಿ ಹೇಳುತ್ತಾರೆ. ಅತ್ಯಂತ ಸುದೀರ್ಘವಾದ ಅಂದರೆ ಪುಟಗಟ್ಟಲೆ ಮಾಹಿತಿ ನೀಡುವ ಕಾಗದ ಪತ್ರಗಳೇ ಬೇಕಾಗಿಲ್ಲ. ಸಂಕ್ಷಿಪ್ತವಾಗಿ ಮೂರು ಪುಟಗಳಲ್ಲಿ ಒಂದು ಸಂಸ್ಥೆಯ ಬಗ್ಗೆ ಮಾಹಿತಿ ಇದ್ದರೆ ಅದು ಕೂಡ ಪರ್ಯಾಪ್ತ ಎನ್ನುತ್ತಾರೆ ಕುಮಾರ್. ಯಾಕೆಂದರೆ ಯಾವ ಪ್ರಕ್ರಿಯೆ ಕೂಡ ಬೋರ್ ಹೊಡೆಸಬಾರದು. ಅತ್ಯಂತ ಸುದೀರ್ಘ ಸಮಯ ತೆಗೆದುಕೊಳ್ಳಬಾರದು.. ಇದು ಕುಮಾರ್ ಅನಿಸಿಕೆ.

ಬಂಡವಾಳ ಹೂಡಿಕೆಯಲ್ಲಿ ಇರುವ ನಿರ್ಬಂಧ ಮತ್ತು ಅಡಚಣೆ ಕುರಿತಂತೆ ಕೂಡ ಕುಮಾರ್ ಮುಕ್ತ ಮನಸ್ಸಿನಿಂದ ಮಾತನಾಡಿದ್ದಾರೆ. ಬೆಳವಣಿಗೆ ಸೂಚಿಸುವ ಸಂಸ್ಥೆಗಳಲ್ಲಿ ಮೂರರಿಂದ 5 ಮಿಲಿಯನ್ ಡಾಲರ್ ಹೂಡಿಕೆಗೆ ಮುಂದಾಗುತ್ತೇವೆ. ಇದೇ ಸಂದರ್ಭದಲ್ಲಿ ಉತ್ಪನ್ನ, ವಾಣಿಜ್ಯ ವ್ಯವಹಾರದ ರೀತಿ ರಿವಾಜು ಮತ್ತು ಮಾರುಕಟ್ಟೆ ಪ್ರವೇಶ ಕೂಡ ಗಮನಾರ್ಹವಾಗಿದೆ.

ಕಳಾರಿ ಕ್ಯಾಪಿಟಲ್ ಯಾವ ಸಂಸ್ಥೆಯಲ್ಲಿ ಹೂಡಿಕೆ ಮಾಡುತ್ತದೆಯೋ ಆ ಸಂಸ್ಥೆಯ ತಂಡದ ಬಗ್ಗೆ ಕೂಡ ಗಮನ ಹರಿಸುತ್ತದೆ. ಯಾಕೆಂದರೆ ಸಂಸ್ಥೆಯೊಂದರ ಯಶಸ್ಸು ಆ ಸಂಸ್ಥೆಯ ನಾಯಕತ್ವನ್ನು ಅವಲಂಬಿಸಿದೆ. ನಾಯಕತ್ವ ಚೆನ್ನಾಗಿದ್ದರೆ ಎಲ್ಲವೂ ಸುಲಲಿತವಾಗಿರುತ್ತದೆ.

ಕೊನೆಯದಾಗಿ ಉದ್ಯಮಶೀಲತೆ ಬಗ್ಗೆ ಕುಮಾರ್ ಮಾತನಾಡುತ್ತಾರೆ. ಇದು ಅತ್ಯಂತ ನಿರ್ಣಾಯಕ ಎಂದು ಕುಮಾರ್ ಹೇಳುತ್ತಾರೆ. ತಾವೇನು ಮಾಡುತ್ತಿದ್ದೇವೆ ಎಂಬ ಬಗ್ಗೆ ಸ್ಪಷ್ಟ ನಿಲುವು ಅವರಿಗೆ ಇರಬೇಕು. ಏನು ಮಾಡಲಿಕ್ಕೆ ಹೊರಟಿದ್ದೇವೆ ಎಂಬುದನ್ನು ಒಂದು ಕಾಗದದ ಮೇಲೆ ಮೊದಲು ಬರೆಯಿರಿ. ಅದು ಎಷ್ಟು ಕಾರ್ಯ ಸಾಧ್ಯ ಎಂಬುದು ಅರಿವಿಗೆ ಬರುತ್ತದೆ. ಇದಲ್ಲದೆ ಇದು ಇತರರನ್ನು ಹೇಗೆ ರೋಮಾಂಚನಕಾರಿಯಾಗಿ ಮಾಡಬಹುದು ಎಂಬುದು ಆಗ ಸ್ಪಷ್ಟವಾಗುತ್ತದೆ.. ಇದು ಕುಮಾರ್ ಉದ್ಯಮಶೀಲರಿಗೆ ಹೇಳುವ ಕಿವಿಮಾತು.

ಅನುವಾದಕರು: ಎಸ್​.ಡಿ.

Related Stories

Stories by YourStory Kannada