ನೀವು ಆನ್‍ಲೈನ್ ಶಾಪಿಂಗ್ ಪ್ರಿಯರಾ? ಒಮ್ಮೆ Explorate.inಗೆ ವಿಸಿಟ್ ಮಾಡಿ..

ಟೀಮ್ ವೈಎಸ್​ ಕನ್ನಡ

ನೀವು ಆನ್‍ಲೈನ್ ಶಾಪಿಂಗ್ ಪ್ರಿಯರಾ?  
				ಒಮ್ಮೆ Explorate.inಗೆ ವಿಸಿಟ್ ಮಾಡಿ..

Thursday March 24, 2016,

4 min Read

ಚಾಂಟೆಲ್ಲೆ ಮಿನೇಜಸ್ ತಮ್ಮ ಪ್ರತಿನಿತ್ಯದ ಆಲೋಚನೆ ಮತ್ತು ವೀಕ್ಷಣೆಗಳನ್ನೆಲ್ಲ ಡೈರಿಯಲ್ಲಿ ಬರೆದಿಡಬಹುದು. ಈಗ ಅವರು ಎಕ್ಸ್​​ಪ್ಲೋರೇಟ್ ಡಾಟ್ ಇನ್ ಸಹ ಸಂಸ್ಥಾಪಕಿ ಹಾಗೂ ಕಂಟೆಂಟ್ ಮ್ಯಾನೇಜರ್. ಎಕ್ಸ್​​ಪ್ಲೋರೇಟ್ ಡಾಟ್ ಇನ್, ಗ್ರಾಹಕರಿಗೆ ಬುದ್ಧಿವಂತಿಕೆಯ ಖರೀದಿ ಮಾಡಲು ನೆರವಾಗುತ್ತಿದೆ. ಚಾಂಟೆಲ್ಲೆ ಅವರೇ ಸಂಸ್ಥೆಯ ಲೆಕ್ಕಾಚಾರದ ಚುಕ್ಕಾಣಿ ಹಿಡಿದಿದ್ದಾರೆ. ಈಗ ಆನ್‍ಲೈನ್‍ನಲ್ಲಿ ನೂರಾರು ವೆಬ್‍ಸೈಟ್‍ಗಳಿವೆ. ಅವುಗಳಲ್ಲಿ ಬೆಸ್ಟ್ ಪ್ರಾಡಕ್ಟ್ ಆಯ್ಕೆ ಮಾಡಿಕೊಳ್ಳೋದು ಗ್ರಾಹಕರಿಗೆ ನಿಜಕ್ಕೂ ಸವಾಲು. ಈ ಕೆಲಸವನ್ನು ಎಕ್ಸ್​​ಪ್ಲೋರೇಟ್ ಡಾಟ್ ಇನ್ ಇನ್ನಷ್ಟು ಸುಲಭ ಮಾಡಿದೆ. 22ರ ಹರೆಯದ ಚಾಂಟೆಲ್ಲೆ ತಮ್ಮ ಸ್ನೇಹಿತರ ಜೊತೆಗೂಡಿ 6 ತಿಂಗಳ ಹಿಂದೆ `ಎಕ್ಸ್​​ಪ್ಲೋರೇಟ್ ಡಾಟ್ ಇನ್' ಅನ್ನು ಹುಟ್ಟುಹಾಕಿದ್ದಾರೆ.

ಚಾಂಟೆಲ್ಲೆ 2 ವರ್ಷಗಳ ಹಿಂದಷ್ಟೆ ಮುಂಬೈನ ಸೇಂಟ್ ಕ್ಸೇವಿಯರ್ ಕಾಲೇಜಿನಲ್ಲಿ ಪದವಿ ಮುಗಿಸಿದ್ದಾರೆ. ತಾವು ಫ್ಯಾಷನ್ ಲೋಕದ ಜೊತೆ ಅನುಬಂಧ ಹೊಂದಬಹುದು ಅನ್ನೋ ಸುಳಿವು ಕೂಡ ಅವರಿಗಿರಲಿಲ್ಲ. ಆದ್ರೆ ಅದೃಷ್ಟದಾಟ ಬೇರೆಯೇ ಇತ್ತು, ಪರಿಣಾಮ ಎಕ್ಸ್​​ಪ್ಲೋರೇಟ್ ಜನ್ಮ ತಾಳಿತ್ತು. ಎಕ್ಸ್​​ಪ್ಲೋರೇಟ್ ತಂಡದ ಸದಸ್ಯರು ಅದ್ಭುತ ಬ್ಯುಸಿನೆಸ್ ಕಲ್ಪನೆಯೊಂದಿಗೆ ಎನ್‍ಆರ್‍ಐಗಳ ಬಳಿ ಹೋದ್ರು. ಮೊದಲ ಸುತ್ತಿನ ಫಂಡಿಂಗ್‍ನಲ್ಲಿ ಬಂಡವಾಳ ಗಿಟ್ಟಿಸಿಕೊಳ್ಳಲು ಸಫಲರಾದ್ರು. ವಿಶೇಷ ಅಂದ್ರೆ ಕೋರ್ ಟೀಮ್‍ನ ಐವರು ಸದಸ್ಯರು ದೇಶದ ವಿವಿಧ ಭಾಗಗಳಿಂದ ಬಂದವರು. ಹಾಗಾಗಿ ಅವರ ದೃಷ್ಟಿ ಕೋನದಲ್ಲೂ ವೈವಿಧ್ಯತೆಯಿದೆ. ಯುವ ಮನಸ್ಸುಗಳ ಈ ತಂಡ ಸಾಮಾಜಿಕ ಜಾಲತಾಣವನ್ನು ಸಂಸ್ಥೆಯ ಯಶಸ್ಸಿಗಾಗಿ ಬಳಸಿಕೊಳ್ಳಲು ನಿರ್ಧರಿಸಿದೆ.

image


ಈಗಾಗ್ಲೇ ಕಿಕ್ಕಿರಿದ ವಲಯದಲ್ಲಿ ದೊಡ್ಡಮಟ್ಟದ ಪ್ರೇಕ್ಷಕರನ್ನು ತಲುಪುವುದು ಎಕ್ಸ್​​ಪ್ಲೋರೇಟ್ ಮುಂದಿರುವ ಬಹುದೊಡ್ಡ ಸವಾಲು. ಇದರ ಜೊತೆಗೆ ಸಮುದಾಯ ರಚನೆ ಮತ್ತು ಬಳಕೆದಾರರ ನಿಶ್ಚಿತಾರ್ಥ ಕೂಡ ಅತ್ಯಂತ ಅವಶ್ಯಕ. `

`ಇತ್ತೀಚೆಗಷ್ಟೆ ನಾವು ಟ್ವಿಟ್ಟರ್‍ನಲ್ಲಿ `ಲೇಡಿಸ್ ಫಸ್ಟ್' ಎಂಬ ಕ್ಯಾಂಪೇನ್ ಮಾಡಿದ್ದೇವೆ. ಎಲ್ಲರಿಗೂ ಮಾದರಿಯಾಗಬಲ್ಲ ಮಹಿಳೆಯರು, ಪ್ರತಿನಿತ್ಯದ ಪ್ರಯೋಗ, ತಮಾಷೆ ಸಂದರ್ಭಗಳು, ಮಹಿಳೆಯರು ಎದುರಿಸಬಹುದಾದ ವಿಲಕ್ಷಣತೆ ಇವೆಲ್ಲದರ ಬಗ್ಗೆ ಗಮನಹರಿಸಿದ್ದೆವು, ಈ ಕ್ಯಾಂಪೇನ್‍ಗೆ ಸಾರ್ವಜನಿಕರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ನನ್ನ ವಿಚಾರವನ್ನೇ ತೆಗೆದುಕೊಂಡ್ರೆ ನಾನು ಯಾವಾಗಲೂ ಸಾಮೂಹಿಕವಾದ ಮಹಿಳಾ ಧ್ವನಿಗೆ ಮೈಕ್ರೋಫೋನ್ ನೀಡಲು ಪ್ರಯತ್ನಿಸುತ್ತೇನೆ. ನನ್ನ ಅನುಭವದ ಪ್ರಕಾರ ಸ್ಟಾರ್ಟ್‍ಅಪ್ ಕಮ್ಯೂನಿಟಿಯಲ್ಲಿ ಮಹಿಳೆಯರಿಗೆ ಹುಲ್ಲುಹಾಸಿನ ಸ್ವಾಗತವೇನೂ ಸಿಗುತ್ತಿಲ್ಲ. ಅಲ್ಲಿ ಐಐಟಿ ಪದವೀಧರರು ಮತ್ತು ವ್ಯಾಪಾರೀ ಮನಸ್ಸಿನವರದ್ದೇ ದರ್ಬಾರ್. ಈ ವ್ಯವಸ್ಥೆ ವಿರುದ್ಧ ಹೋರಾಡಲು ದಿಟ್ಟ ಹೆಜ್ಜೆ ಇಟ್ಟಿರುವ ಮಹಿಳೆಯರನ್ನು ಬೆಂಬಲಿಸುವುದು ನಿಜಕ್ಕೂ ನನ್ನ ಪಾಲಿಗೆ ತೃಪ್ತಿಕರವಾದ ಸಂಗತಿ'' 
               - ಚಾಂಟೆಲ್ಲೆ.

ಫ್ಯಾಷನ್ ಜಗತ್ತಿನಲ್ಲಿ ಆಸಕ್ತಿ...

ಆರಂಭದಿಂದ್ಲೂ ಫ್ಯಾಷನ್ ದುನಿಯಾ ಬಗ್ಗೆ ಚಾಂಟೆಲ್ಲೆ ಅವರಿಗೆ ಎಲ್ಲಿಲ್ಲದ ಆಸಕ್ತಿ. ಅವರ ತಾಯಿ, ಬಂಧುಗಳು, ಸ್ನೇಹಿತೆಯರೆಲ್ಲ ಲೇಟೆಸ್ಟ್ ಟ್ರೆಂಡ್‍ಗೆ ತಕ್ಕಂತೆ ಅಪ್‍ಡೇಟ್ ಆಗಿರುತ್ತಿದ್ರು. ವಿಭಿನ್ನ ಸಂಸ್ಕೃತಿ ಹಾಗೂ ಫ್ಯಾಷನ್ ಬಗ್ಗೆ ತಿಳಿದುಕೊಳ್ಳಲು ಚಾಂಟೆಲ್ಲೆ ಹಲವು ರಾಷ್ಟ್ರಗಳನ್ನು ಸುತ್ತಿ ಬಂದಿದ್ದಾರೆ. ಚಾಂಟೆಲ್ಲೆ ತಮ್ಮನ್ನು ತಾವು ಅಭಿವ್ಯಕ್ತಿಗೊಳಿಸಲು ಇಷ್ಟಪಡುತ್ತಾರೆ, ಬರವಣಿಗೆ ಅವರ ನೆಚ್ಚಿನ ಹವ್ಯಾಸ. ತಮ್ಮ ಅವಲೋಕನಗಳನ್ನೆಲ್ಲ ಅವರು ಬರವಣಿಗೆ ಮೂಲಕ ಬಿಚ್ಚಿಟ್ಟಿದ್ದಾರೆ. ಕೆಲವು ಸ್ನೇಹಿತರು ಅವರ ಡೈರಿಯನ್ನು ಎರವಲು ಪಡೆದು ಪುಸ್ತಕದಂತೆ ಓದಿದ್ದಾರಂತೆ. ಶಾಲೆ ಹಾಗೂ ಕಾಲೇಜು ದಿನಗಳಲ್ಲಿ ಕೂಡ ಎಲ್ಲವನ್ನೂ ಅವರು ದಿನಚರಿಯಲ್ಲಿ ಬರೆದಿಡುತ್ತಿದ್ರು. ದಿನಚರಿ ಬರೆಯುವ ಹವ್ಯಾಸವೇ ಮುಂದೊಂದು ದಿನ ಬರವಣಿಗೆಯಾಗಿ ಬದಲಾಯ್ತು. ಎಕ್ಸ್​​ಪ್ಲೋರೇಟ್ ಸ್ಥಾಪನೆಗೂ ಪ್ರೇರಣೆಯಾಯ್ತು.

ಎಕ್ಸ್​​ಪ್ಲೋರೇಟ್ ಹೇಗೆ ವಿಭಿನ್ನ?

ಇತರರಿಗೆ ಬುದ್ಧಿವಂತಿಕೆಯ ಖರೀದಿ ಮಾಡಲು ಸಹಾಯವಾಗುವಂತೆ ಗ್ರಾಹಕರ ಅನುಭವಗಳನ್ನು ಬಳಸಿಕೊಂಡು ಎಕ್ಸ್​​ಪ್ಲೋರೇಟ್ ಅನ್ನು ರಚಿಸಲಾಗಿದೆ. ಬೀಟಾ ಹಂತದಲ್ಲಿ ಆರಂಭವಾದ ಕಂಪನಿ ಆನ್‍ಲೈನ್ ಮತ್ತು ಆಫ್‍ಲೈನ್ ಶಾಪಿಂಗ್ ಬಗ್ಗೆ ಗ್ರಾಹಕರ ಅಭಿಪ್ರಾಯಗಳನ್ನು ಸಂಗ್ರಹಿಸಿದೆ. ಆನ್‍ಲೈನ್ ಶಾಪಿಂಗ್ ಅತ್ಯುತ್ತಮ ವಲಯ ಆದ್ರೆ ಅದಕ್ಕೆ ಉತ್ಪನ್ನ ಶೋಧಿಸುವ ಎಂಜಿನ್ ಬೇಕು ಎಂಬುದನ್ನು ಅರ್ಥಮಾಡಿಕೊಂಡ ಚಾಂಟೆಲ್ಲೆ ಎಕ್ಸ್‍ಪ್ಲೋರೇಟ್ ಅನ್ನು ಆರಂಭಿಸಿದ್ರು.

ಎಕ್ಸ್​​ಪ್ಲೋರೇಟ್ ಪಯಣ ತೃಪ್ತಿದಾಯಕವಾಗಿದೆ ಎನ್ನುತ್ತಾರೆ ಚಾಂಟೆಲ್ಲೆ. 6 ತಿಂಗಳ ಅವಧಿಯಲ್ಲಿ ಶೇ.70ರಷ್ಟು ರಿಟರ್ನಿಂಗ್ ಗ್ರಾಹಕರನ್ನು ಸಂಸ್ಥೆ ಸಂಪಾದಿಸಿದೆ. ಕೆಲ ಗ್ರಾಹಕರು ಈ ವೇದಿಕೆಯಲ್ಲಿ ಸುಮಾರು 4 ಗಂಟೆಗಳನ್ನು ವ್ಯಯಿಸುತ್ತಿದ್ದಾರೆ. ಸದ್ಯ ಎಕ್ಸ್‍ಪ್ಲೋರೇಟ್‍ಗೆ 20,000 ಬಳಕೆದಾರರಿದ್ದು, 1,80,000 ಅನನ್ಯ ಪುಟ ವೀಕ್ಷಣೆಗಳಿವೆ. ಬಳಕೆದಾರರೇ ಸೂಚಿಸಿದ 50,000 ಉತ್ಪನ್ನಗಳನ್ನು ಕೂಡ ಹೊಂದಿದೆ. ಶಾಪಿಂಗ್ ಅನ್ನು ಇನ್ನಷ್ಟು ಚತುರತೆಯಿಂದ ಕೂಡಿರುವಂತೆ ಮಾಡುವುದು ಹಾಗೂ ಸಾಮಾಜಿಕ ವ್ಯವಹಾರವನ್ನಾಗಿ ಬದಲಾಯಿಸುವುದು ಎಕ್ಸ್​​ಪ್ಲೋರೇಟ್‍ನ ಮೂಲ ಸಿದ್ಧಾಂತ. ಬೇರೆ ಬೇರೆ ವೆಬ್‍ಸೈಟ್‍ಗಳಲ್ಲಿ ಗಂಟೆಗಟ್ಟಲೆ ಸಮಯ ವ್ಯಯಿಸುವ ಬದಲು ಉತ್ತಮ ಉತ್ಪನ್ನಗಳನ್ನು ಶೀಘ್ರವಾಗಿ ಹುಡುಕಲು ಎಕ್ಸ್‍ಪ್ಲೋರೇಟ್ ಶಿಫಾರಸು ಮಾಡುತ್ತದೆ. ಅತ್ಯುತ್ತಮ ವೆಬ್‍ಸೈಟ್‍ಗಳ ಬೆಸ್ಟ್ ಉತ್ಪನ್ನಗಳು ಒಂದೇ ಕಡೆ ಸಿಗುತ್ತವೆ. ಇದರಿಂದ ಆಧುನಿಕ, ವೃತ್ತಿಪರ ಮಹಿಳೆಯರ ಸಮಯ ಉಳಿತಾಯವಾಗುತ್ತದೆ. ಇದು ಬಳಕೆದಾರರೇ ರಚಿಸಿದ ವಿಷಯವಾದರೂ ಅಭಿರುಚಿ, ಆದ್ಯತೆ ಮತ್ತು ಗುಣಮಟ್ಟದ ಬಗ್ಗೆ ಶಿಫಾರಸುಗಳಲ್ಲಿ ಖಚಿತತೆ ಇರುತ್ತದೆ.

ಎಕ್ಸ್​​ಪ್ಲೋರೇಟ್ V/S ಬಿಗ್ ಪ್ಲೇಯರ್ಸ್

ಫ್ಲಿಪ್‍ಕಾರ್ಟ್, ಅಮೇಝಾನ್, ಕೂವ್ಸ್, ಜಬಾಂಗ್‍ನಂತಹ ಇ-ಕಾಮರ್ಸ್ ವೇದಿಕೆಗಳಿಗಿಂದ ಎಕ್ಸ್​​ಪ್ಲೋರೇಟ್ ವಿಭಿನ್ನ, ಯಾಕಂದ್ರೆ ಅವು ಸಾಮಾಜಿಕ ವಾಣಿಜ್ಯ ವೇದಿಕೆಗಳು. ಇ-ಕಾಮರ್ಸ್ ಮಾರುಕಟ್ಟೆ ದಟ್ಟಣೆಯಲ್ಲಿ ಆವಿಷ್ಕಾರ ಎಂಜಿನ್‍ಗಳೇ ಪ್ರಮುಖ. Roposo ಮತ್ತು Woopler ಎಕ್ಸ್​​ಪ್ಲೋರೇಟ್‍ನ ಪ್ರಮುಖ ಪ್ರತಿಸ್ಪರ್ಧಿಗಳು. ಎಕ್ಸ್‍ಪ್ಲೋರೇಟ್ ಗ್ರಾಹಕರಿಗೆ ಉತ್ಪನ್ನಗಳನ್ನು ಶಿಫಾರಸು ಮಾಡುವುದಿಲ್ಲ, ಬಳಕೆದಾರರು ಮಾಡುತ್ತಾರೆ.

" ವಿವಿಧ ಅಭಿರುಚಿಯುಳ್ಳ ಬಗೆಬಗೆಯ ಬಳಕೆದಾರರು ಇಲ್ಲಿದ್ದಾರೆ. ಕ್ರೌಡ್‍ಸೋರ್ಸಿಂಗ್ ಮೂಲಕ ಅವರನ್ನೆಲ್ಲ ಒಗ್ಗೂಡಿಸುವುದು ನಮ್ಮ ಉದ್ದೇಶ. ಶ್ರೀಮಂತರು ಕೂಡ ಬೀದಿಬದಿ ಮಾರುಕಟ್ಟೆಯಲ್ಲಿ ಬ್ರಾಂಡೆಡ್ ಅಲ್ಲದ ವಸ್ತುಗಳನ್ನು ಕೊಳ್ಳಲು ಹಿಂದೇಟು ಹಾಕುವುದಿಲ್ಲ. ಆದ್ರೆ ಆನ್‍ಲೈನ್ ಶಾಪಿಂಗ್‍ನಲ್ಲಿ ಡೆಲಿವರಿ, ಸರ್ವೀಸ್ ಇವುಗಳ ಮೇಲೆ ವಿಶ್ವಾಸವಿಡುವುದು ಪ್ರಮುಖ ವಿಚಾರ. ಹಾಗಾಗಿ ನಾವು ಅದಕ್ಕೊಂದು ಸಾಮಾಜಿಕ ಪುರಾವೆ ಒದಗಿಸುತ್ತೇವೆ'' 
                 - ಚಾಂಟೆಲ್ಲೆ.

ಇ-ಕಾಮರ್ಸ್‍ಗೆ ಅಗತ್ಯವಾದ ಶಾಪಿಂಗ್ ಅಸ್ತ್ರವೊಂದನ್ನು ಅಭಿವೃದ್ಧಿಪಡಿಸುವುದು ಮತ್ತು ಬಳಕೆದಾರರ ಶಿಫಾರಸಿನ ಮೂಲಕ ಸಾಮಾಜಿಕ ಪುರಾವೆ ಒದಗಿಸುವುದೇ ಎಕ್ಸ್‍ಪ್ಲೋರೇಟ್ ಡಾಟ್ ಇನ್‍ನ ಗುರಿ. ಮಾರುಕಟ್ಟೆ ಗಾತ್ರ ಮತ್ತು ಮುನ್ನೋಟಗಳನ್ನು ನೋಡ್ತ ಇದ್ರೆ 2017ರ ವೇಳೆಗೆ ಉಡುಪು ಉದ್ಯಮದ ಮೌಲ್ಯ 100 ಬಿಲಿಯನ್ ಡಾಲರ್‍ನಷ್ಟಾಗಲಿದೆ ಅನ್ನೋದು ಎಕ್ಸ್‍ಪ್ಲೋರೇಟ್‍ನ ಅಂದಾಜು. ಇದರಲ್ಲಿ 18 ಬಿಲಿಯನ್ ಡಾಲರ್ ಮೌಲ್ಯದೊಂದಿಗೆ ಇ-ಕಾಮರ್ಸ್ ಕ್ಷೇತ್ರ ಶೇ.18ರಷ್ಟು ಪಾಲನ್ನು ತನ್ನದಾಗಿಸಿಕೊಳ್ಳಲಿದೆ. ಮುಂದಿನ ದಿನಗಳಲ್ಲಿ ಆ್ಯಪ್ ಒಂದನ್ನು ಕೂಡ ಅಭಿವೃದ್ಧಿಪಡಿಸಲು ಎಕ್ಸ್‍ಪ್ಲೋರೇಟ್ ಯೋಜನೆ ಹಾಕಿಕೊಂಡಿದೆ.

image


ವೇದಿಕೆ ಹೇಗೆ ಕಾರ್ಯನಿರ್ವಹಿಸುತ್ತದೆ?

ವಿವಿಧ ವೆಬ್‍ಸೈಟ್‍ಗಳ ಉತ್ಪನ್ನಗಳನ್ನು ಒಂದೇ ವೇದಿಕೆಯಲ್ಲಿ ಖರೀದಿಸಬಹುದು. ಉತ್ಪನ್ನಗಳು ನಿಜವಾದ ಬಳಕೆದಾರರಿಂದ ವ್ಯವಸ್ಥೆಗೊಳಿಸಲ್ಪಟ್ಟಿರುತ್ತವೆ. ವಿವಿಧ ವಿಭಾಗಗಳಾಗಿ ವೆಬ್‍ಸೈಟ್ ಅನ್ನು ವಿಂಗಡಿಸಲಾಗುತ್ತೆ - ಉಡುಪು, ಎಕ್ಸೆಸ್ಸರಿಸ್, ಸೌಂದರ್ಯ ಉತ್ಪನ್ನಗಳು ಮತ್ತು ಚಮತ್ಕಾರಿ. ಇದನ್ನು ಪುನಃ ಪ್ರವೃತ್ತಿ, ವಿಧಾನ, ಸಂದರ್ಭದ ಆಧಾರದ ಮೇಲೆ ವಿಂಗಡಿಸಲಾಗುತ್ತದೆ. ತಂತ್ರಜ್ಞಾನವನ್ನು ಬಳಸಿಕೊಂಡು ಎಕ್ಸ್‍ಪ್ಲೋರೇಟ್ ತಂಡ ಆನ್‍ಲೈನ್ ಶಾಪಿಂಗ್ ಅನುಭವವನ್ನು ಪುನರಾವರ್ತಿಸಲು ಬಯಸುತ್ತದೆ. ಅದು ಪ್ರಮಾಣೀಕರಣಗೊಳ್ಳುತ್ತಿದ್ದಂತೆ ಸಂಸ್ಥೆ ಹೊಸ ಎತ್ತರಕ್ಕೆ ಬೆಳೆದಿದೆ, ಮುಂದಿನ ಸುತ್ತಿನ ಫಂಡಿಂಗ್ ಅನ್ನು ಎದುರು ನೋಡುತ್ತಿದೆ.

ಕೆಲಸ, ಸಂಗೀತ ಚಾಂಟೆಲ್ಲೆ ಅವರಿಗೆ ಪ್ರೇರಣೆ. ಇತ್ತೀಚೆಗಷ್ಟೆ ಅವರು ಕೋಕ್ ಸ್ಟುಡಿಯೋ ಹಾಗೂ ಎಂಟಿವಿ ಕಾರ್ಯಕ್ರಮಗಳನ್ನು ಭಾಗವಹಿಸಿದ್ದಾರೆ. ಚಾಂಟೆಲ್ಲೆ ಆಹಾರ ಪ್ರಿಯರು ಜೊತೆಗೆ ಪ್ರಯಾಣ ಅವರಿಗಿಷ್ಟ. ನೃತ್ಯದ ಬಗೆಗೂ ಅತಿಯಾದ ಆಸಕ್ತಿ ಇದೆ. ಯಾವಾಗಲೂ ಕೆಲಸ ಮಾಡುತ್ತ ಹೊಸ ಹೊಸ ವಿಷಯಗಳನ್ನು ಕಲಿಯುತ್ತ ಆರಾಮ ವಲಯದಿಂದ ಹೊರಗಿರಲು ಬಯಸುವ ಉತ್ಸಾಹಿ ಚಾಂಟೆಲ್ಲೆ ಮಿನೇಜಸ್.

ಲೇಖಕರು: ಸಸ್ವತಿ ಮುಖರ್ಜಿ

ಅನುವಾದಕರು: ಭಾರತಿ ಭಟ್