ಮತ್ತಷ್ಟು ವಿಸ್ತರಿಸಿದ ಚಾರ್ಕೋಲ್ ಬಿರಿಯಾನಿ ಘಮ - 150,000 ಡಾಲರ್ ಬಂಡವಾಳ ತೆಕ್ಕೆಗೆ

ಟೀಮ್ ವೈ.ಎಸ್.ಕನ್ನಡ 

ಮತ್ತಷ್ಟು ವಿಸ್ತರಿಸಿದ ಚಾರ್ಕೋಲ್ ಬಿರಿಯಾನಿ ಘಮ - 150,000 ಡಾಲರ್ ಬಂಡವಾಳ ತೆಕ್ಕೆಗೆ

Saturday February 27, 2016,

2 min Read

ತ್ವರಿತ ಸೇವೆಗೆ ಹೆಸರಾಗಿರುವ ಚಾರ್ಕೋಲ್ ಬಿರಿಯಾನಿ ರೆಸ್ಟೋರೆಂಟ್ ಮತ್ತಷ್ಟು ಬಂಡವಾಳ ಗಿಟ್ಟಿಸಿಕೊಂಡಿದೆ. 150,000 ಡಾಲರ್ ನಿಧಿ ಸಂಗ್ರಹಿಸುವಲ್ಲಿ ಸಫಲವಾಗಿದೆ. ಲಯನ್ ವೆಂಚರ್ಸ್, ಎಚ್ಎನ್ಐನ ವರುಣ ಡ್ಯಾ, ಕವರ್​ಫೊಕ್ಸ್​ನ ಸಿಇಓ, ಕವರ್​ಫೊಕ್ಸ್​ ಸಿಟಿಓ ದೇವೇಂದ್ರ ರಾಣೆ, ಲಯನ್ ವೆಂಚರ್ಸ್​ನ ಅನುರಾಗ್ ಮಲ್ಹೋತ್ರಾ, ಕೃಷ್ಣಕಾಂತ್ ಠಾಕೂರ್, ಮೊಹಮದ್ ಭೋಲ್, ಮಿಖೈಲ್ ಸಹಾನಿ ಮತ್ತು ಗೌತಮ್ ಸಿಂಗ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ರು. ಕಳೆದ ವರ್ಷ ಸಪ್ಟೆಂಬರ್​ನಲ್ಲೇ ಮುಂಬೈನಲ್ಲಿ ಸೀಡ್ ಫಂಡಿಂಗ್ ಪ್ರಕ್ರಿಯೆ ಶುರುವಾಗಿತ್ತು.

image


ಈ ಹೂಡಿಕೆ ಮೂಲಕ ಉದ್ಯಮವನ್ನು ಇನ್ನಷ್ಟು ವಿಸ್ತರಿಸಲು ಚಾರ್ಕೋಲ್ ಬಿರಿಯಾನಿ ಮುಂದಾಗಿದೆ. ತಂತ್ರಜ್ಞಾನ ಅಭಿವೃದ್ಧಿಪಡಿಸಲು ಯೋಜನೆ ಹಾಕಿಕೊಂಡಿದೆ. ಬೆಂಗಳೂರು, ಪುಣೆ ಸೇರಿದಂತೆ ವಿವಿಧೆಡೆ ರೆಸ್ಟೋರೆಂಟ್ಗಳನ್ನು ಉನ್ನತೀಕರಿಸುವುದು ಚಾರ್ಕೋಲ್ ಬಿರಿಯಾನಿ ಸಂಸ್ಥೆಯ ಉದ್ದೇಶ. ಪ್ಯಾನ್ ಇಂಡಿಯಾ ಬ್ರಾಂಡ್ ಆಗಿ ಪರಿವರ್ತನೆ ಹೊಂದುವ ಜೊತೆಗೆ ಇನ್ನಷ್ಟು ಉತ್ಪನ್ನಗಳನ್ನು ಪರಿಚಯಿಸಲು ಮುಂದಾಗಿದೆ.

'ಕವರ್​ಫೊಕ್ಸ್​'ನ ವರುಣ್ ಅವರ ಪ್ರಕಾರ QSR ಸೆಗ್ಮೆಂಟ್ನಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಆಹಾರ ಸ್ಥಿರತೆ ಕಾಯ್ದುಕೊಳ್ಳುವುದು ನಿಜಕ್ಕೂ ಕಠಿಣ. ಆದ್ರೆ ಚಾರ್ಕೋಲ್ ಬಿರಿಯಾನಿ ಇದನ್ನು ಸಾಧಿಸಿ ತೋರಿಸಿದೆ. ''ಅಷ್ಟೇ ಅಲ್ಲ ಚಾರ್ಕೋಲ್ ಬಿರಿಯಾನಿಯಲ್ಲಿ ಆಂತರಿಕ ತಂತ್ರಜ್ಞಾನವನ್ನು ಸಕ್ರಿಯಗೊಳಿಸಿದ್ದು, ಇಲ್ಲಿ ಸ್ಟ್ರಾಂಗ್ ಉತ್ಪನ್ನಗಳಿವೆ'' ಎನ್ನುತ್ತಾರೆ ವರುಣ್. ಪ್ರಮಾಣ ಮತ್ತು ಸ್ಥಿರತೆಗೆ ಸಂಬಂಧಿಸಿದ ವಿಚಾರದಲ್ಲಿ ಎದುರಾಗುತ್ತಿದ್ದ ಪ್ರತಿಯೊಂದು ಸಮಸ್ಯೆಗಳಿಗೂ ಸಿಬ್ಬಂದಿ ಪರಿಹಾರ ಹುಡುಕಿದ್ದಾರೆ. ಜೊತೆಗೆ ಗ್ರಾಹಕ ಸೇವೆಯ ಬಗ್ಗೆ ಮತ್ತಷ್ಟು ಗಮನಹರಿಸಿದ್ದಾರೆ ಅನ್ನೋದು ಚಾರ್ಕೋಲ್ ಬಿರಿಯಾನಿಯ ಹೂಡಿಕೆದಾರ ಹಾಗೂ ಹಿರಿಯ ವಕೀಲ ಅಮಿತ್ ತಾಂಬ್ರೆ ಅವರ ಅಭಿಪ್ರಾಯ.

ಇದನ್ನೂ ಓದಿ...

....ಯಾಕೆಂದ್ರೆ ಇದು Free Kaa Maal ..?

ಚಾರ್ಕೋಲ್ ಬಿರಿಯಾನಿ ತಂಡದ ಪ್ರಮುಖ ಸದಸ್ಯರೆಂದ್ರೆ ರೋಹಿತ್ ಮೆಹ್ರೋತ್ರಾ, ರೋಹನ್ ಮೆಹ್ರೋತ್ರಾ ಹಾಗೂ ಅರೀಜ್ ಪಟೇಲ್. ಕಂಪನಿ, ಆರಂಭದಿಂದ ಇದುವರೆಗೆ ದೈನಂದಿನ ಸರಾಸರಿ ಪ್ರಮಾಣವನ್ನು ನೋಡಿದ್ರೆ 15 ಪಟ್ಟು ಬೆಳವಣಿಗೆ ಕಂಡಿದೆ. ಈವರೆಗೆ ಸುಮಾರು 30,000 ಗ್ರಾಹಕರಿಗೆ ಸೇವೆಯನ್ನು ಒದಗಿಸಿದೆ. ಈ ಪೈಕಿ ಶೇ.30ರಷ್ಟು ರಿಪೀಟ್ ಗ್ರಾಹಕರು ಕೂಡ ಇರುವುದು ವಿಶೇಷ.

'ಯುವರ್​ಸ್ಟೋರಿ' ಮಾಹಿತಿ...

OSR ಮಾದರಿ ವಿಭಿನ್ನವಾದ ಆಹಾರ ಪೂರೈಕೆ ವಿಧಾನವನ್ನು ಹೊಂದಿದೆ. ಇಲ್ಲಿ ಅತ್ಯಂತ ವೇಗವಾದ ಸೇವೆಯನ್ನು ಕಾಣಬಹುದು. ಬಹುತೇಕ ಎಲ್ಲಾ ಕಂಪನಿಗಳು ಡಾಮಿನೋಸ್ ಫಿಝ್ಝಾವನ್ನು ಹಿಂದಿಕ್ಕಲು ತಂತ್ರ ರೂಪಿಸುತ್ತಿವೆ. ಡಾಮಿನೋಸ್, ಆರ್ಡರ್ ಮಾಡಿ ಕೇವಲ ಅರ್ಧಗಂಟೆಯಲ್ಲಿ ಗ್ರಾಹಕರ ಮನೆ ಬಾಗಿಲಿಗೆ ಪಿಝ್ಝಾ ತಲುಪಿಸುತ್ತೆ. ಇದಕ್ಕಿಂತ್ಲೂ ವೇಗವಾದ ಸೇವೆ ನೀಡಿ ಡಾಮಿನೋಸ್ಗೆ ಟಕ್ಕರ್ ಕೊಡಲು ವಿವಿಧ ಕಂಪನಿಗಳು ರಣತಂತ್ರ ಮಾಡ್ತಾನೇ ಇವೆ. ಆದ್ರೆ ಫುಡ್​ಟೆಕ್​ಮತ್ತು ಫುಡ್ ಡೆಲಿವರಿ ಕ್ಷೇತ್ರದಲ್ಲಿ ಹೂಡಿಕೆ ಕಡಿಮೆಯಾಗ್ತಿದೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ. ಚಾರ್ಕೋಲ್ ಬಿರಿಯಾನಿ ಹೊರತುಪಡಿಸಿ ಕಳೆದ 2 ತಿಂಗಳುಗಳಲ್ಲಿ ಮೂರು ಹೂಡಿಕೆಗಳಿಗೆ ಆಹಾರ ಕ್ಷೇತ್ರ ಸಾಕ್ಷಿಯಾಗಿದೆ. ಫ್ರೆಶ್​ಮೆನು, WIMI , ಬಿ9 ಬಿವರೇಜಸ್, ಮತ್ತು ಸ್ವಿಗ್ಗಿ ಬಂಡವಾಳ ಗಿಟ್ಟಿಸಿಕೊಂಡಿವೆ.

ಭಾರತೀಯ ಗ್ರಾಹಕರು ಅದರಲ್ಲೂ ಮೆಟ್ರೋ ಸಿಟಿಗಳಲ್ಲಿರುವ ಜನರು, ಹೋಟೆಲ್, ರೆಸ್ಟೋರೆಂಟ್ಗಳ ತಿನಿಸುಗಳಿಗೆ ಹೆಚ್ಚು ಮಾರುಹೋಗುತ್ತಿದ್ದಾರೆ. ಹೋಟೆಲ್ ತಿನಿಸು ಪ್ರಿಯರ ಸಂಖ್ಯೆ ಜಾಸ್ತಿಯಾಗುತ್ತಿದೆ. ಇದ್ರಿಂದಾಗಿ ಫುಡ್ ಟೆಕ್ ಸ್ಟಾರ್ಟ್ಅಪ್ಗಳ ಸಂಖ್ಯೆ ಕೂಡ ಜಾಸ್ತಿಯಾಗ್ತಿದೆ. ಮನೆಯಲ್ಲೇ ತಯಾರಿಸಿದ ರುಚಿಕರ ತಿನಿಸುಗಳನ್ನು ಮನೆ ಬಾಗಿಲಿಗೆ ಡೆಲಿವರಿ ಮಾಡ್ತಾರೆ ಅಂದ್ರೆ ಆ ಅವಕಾಶವನ್ನು ಯಾರು ಬಿಡ್ತಾರೆ ಹೇಳಿ? ಕೇವಲ ರೆಸ್ಟೋರೆಂಟ್ ಡೆಲಿವರಿ ಮಾತ್ರವಲ್ಲ ರೆಡಿ ಟು ಕುಕ್ ಸಾಮಾಗ್ರಿಗಳು ಕೂಡ ದೊರೆಯುತ್ತಿವೆ.

ಆದ್ರೆ 2015ರ ದ್ವಿತೀಯಾರ್ಧ ಇಂಡಸ್ಟ್ರಿಗೆ ಒಂದಷ್ಟು ಪಾಠ ಕಲಿಸಿದೆ. ಟಿನಿಔಲ್ ತನ್ನ ಕಾರ್ಯಾಚರಣೆಯನ್ನು ಕಡಿಮೆ ಮಾಡಿದ್ದು, ಸ್ಪೂನ್​ಜಾಯ್​ ಸೇರಿದಂತೆ ಇನ್ನೂ ಕೆಲವು ಕಂಪನಿಗಳು ನಷ್ಟದಿಂದ ಕಂಗಾಲಾಗಿ ಬಾಗಿಲು ಮುಚ್ಚುತ್ತಿವೆ. ಹಾಗಾಗಿ ಕಡಿಮೆ ಬೆಂಕಿಯಲ್ಲೂ ನಿರಂತರ ಬೆಳವಣಿಗೆ ಸಾಧಿಸಬಹುದು ಅನ್ನೋದನ್ನೂ ಉದ್ಯಮಗಳು ಸಾಬೀತುಪಡಿಸಬೇಕಿದೆ. 

ಲೇಖಕರು: ಸಿಂಧು ಕಶ್ಯಪ್ 

ಅನುವಾದಕರು: ಭಾರತಿ ಭಟ್ 

ಇದನ್ನೂ ಓದಿ...

ಬಿಯರ್ ಕುಡಿದು ಬೋರ್ ಆಗಿದ್ರೆ ಬಿಯರ್ ಕೇಕ್ ತಿನ್ನಿ.. 

ಏನನ್ನೂ ಮಾಡದೇ ಒಂದೇ ದಿನದಲ್ಲಿ 6 ಕೋಟಿ ಗಳಿಸೋದು ಹೇಗೆ?