ಬೇಟೆಗೂ ಸೈ ..ಪ್ರೀತಿಗೂಜೈ ..ನಾನು ಮುಧೋಳ

ಪೂರ್ವಿಕಾ

ಬೇಟೆಗೂ ಸೈ ..ಪ್ರೀತಿಗೂಜೈ ..ನಾನು ಮುಧೋಳ

Friday December 11, 2015,

2 min Read

ನಾಯಿಗಳು ಅಂದ್ರೆ ಯಾರಿಗೆ ಇಷ್ಟವಿರೋದಿಲ್ಲ ಹೇಳಿ..? ಶ್ವಾನಗಳು ಅಂದ್ರೆ ಪ್ರೀತಿಗೆ ಮತ್ತು ನಿಯತ್ತಿಗೆ ಇನ್ನೊಂದು ಹೆಸರು. ಈಗಿನ ದಿನಗಳಲ್ಲಿ ಮಕ್ಕಳಿಗೂ ಮುದ್ದಿನ ಶ್ವಾನಗಳಿಗೂ ಅದ್ಯಾವುದೇ ವ್ಯತ್ಯಾಸಗಳಿಲ್ಲ. ಅಷ್ಟರ ಮಟ್ಟಿಗೆ ಮನುಷ್ಯರು ನಾಯಿಗಳನ್ನ ಪ್ರೀತಿಸೋದಕ್ಕೆ ಶುರು ಮಾಡಿದ್ದಾರೆ. ಭೂಮಿ ಮೇಲಿನ ಅತ್ಯಂತ ವಿಶ್ವಾಸಯುಕ್ತ ಪ್ರಾಣಿ ಅಂದ್ರೆ ಅದು ನಾಯಿ ಮಾತ್ರ.

image


ನಾಯಿಗಳಲ್ಲಿ ಸಾಕಷ್ಟು ತಳಿಗಳಿದ್ದು ಮನೆಗಳಲ್ಲಿ ಸಾಕಲು,ಮುದ್ದು ಮಾಡಲು,ಸೇನೆಯಲ್ಲಿ ಕೆಲಸ ಮಾಡಲು ಹೀಗೆ ಆಯಾ ಸ್ಥಳಕ್ಕೆ ಹೊಂದಿಕೆಯಾಗೋ ರೀತಿಯಲ್ಲಿ ನಾಯಿಗಳು ಹೊಂದಿಕೆಯಾಗುತ್ತೆ. ಇನ್ನೂ ಕೆಣಕಿದ್ರು ಪಕ್ಕನೆ ಹಿಡಿಯುವ,ಎಷ್ಟೇ ದೂರವಿದ್ರೂ ಕ್ಷಣ ಮಾತ್ರದಲ್ಲಿ ಬೇಟೆ ಆಡಿ ಹಿಡಿಯೋ ಸಾಮರ್ಥ್ಯ ಹೊಂದಿರೋ ಏಕೈಕ ಶ್ವಾನ ಮುಧೋಳ. ಅದು ನಮ್ಮದೇ ನೆಲದ ತಳಿ ಅನ್ನೋದು ಹೆಮ್ಮೆಯ ವಿಚಾರ.

image


ಮುಧೋಳ ಬಾಗಲಕೋಟೆಯ ಬಳಿ ಇರೋ ಊರು. ಅಲ್ಲಿಯ ತಳಿಯ ನಾಯಿಗಳು ದೇಶದಲ್ಲಿ ಪ್ರಖ್ಯಾತಿ ಪಡೆದಿವೆ. ಮುಧೋಳ ನಾಯಿ ಅಂದ್ರೆ ಎಲ್ಲರ ಮುಖದಲ್ಲಿ ಆಶ್ಚರ್ಯ ಹಾಗೂ ಒಂದು ಸಣ್ಣ ಭಯ ಕಾಣಿಸಿಕೊಳ್ಳುತ್ತೆ. ಯಾಕಂದ್ರೆ ಆ ನಾಯಿಯ ಕರಾಮತ್ತೆ ಅಂತಹದ್ದು. ನೋಡಲು ಸಣ್ಣಗೆ ಎತ್ತರವಾಗಿ ಕಾಣೋ ಮುಧೋಳ ಬೇಟೆ ನಾಯಿ ಎಂದೇ ಪ್ರಸಿದ್ದಿ ಪಡೆದಿದೆ. ಒಮ್ಮೆ ವಾಸನೆ ಹಿಡಿದು ಓಡಿದ್ರೆ ಆಯ್ತು ಎಂತಹವರನ್ನು ಮೀರಿಸಿ ಬೇಟೆ ಆಡೋ ಶಕ್ತಿಯುಕ್ತ ಶ್ವಾನ ಅದು. ಇನ್ನು ಇವುಗಳನ್ನ ಸಾಕೋದು ತುಂಬಾನೇ ಕಷ್ಟ ಅನ್ನೋ ಮಾತುಎಲ್ಲರಲ್ಲೂ ಇದೆ. ಆದ್ರೆ ಬೆಂಗಳೂರಿನಲ್ಲಿ ಲಕ್ಷ್ಮಣ್‍ ಅನ್ನೋ ವ್ಯಕ್ತಿ ಕಳೆದ ಹತ್ತು ವರ್ಷಗಳಿಂದ ಮುಧೋಳ ನಾಯಿಗಳನ್ನ ಸಾಕಿದ್ದಾರೆ. ಈ ಮೂಲಕ ಮುಧೋಳನ್ನ ಸಾಕೋದು ತುಂಬಾ ಸುಲಭ ಅನ್ನೋದನ್ನ ಪ್ರೂವ್ ಮಾಡಿದ್ದಾರೆ.

image


ಚಿಕ್ಕದಿನಿಂದಲೇ ಶ್ವಾನ ಪ್ರಿಯರಾದ ಲಕ್ಷ್ಮಣ್‍ ಒಮ್ಮೆ ಬಾಗಲಕೋಟೆಗೆ ಬೇಟಿ ನೀಡಿದಾಗ ಮುಧೋಳ ನಾಯಿಯನ್ನ ಏಕೆ ಸಾಕಬಾರದು ಅನ್ನೋ ನಿರ್ಧಾರ ಮಾಡಿ ಅಲ್ಲಿಂದ ನಾಯಿ ಮರಿಗಳನ್ನ ತಂದು ಸಾಕಲು ಪ್ರಾರಂಭ ಮಾಡಿದ್ರು. ಒಂದು ಎರಡು ನಾಯಿಗಳಿಂದ ಸುಮಾರು 30 ಕ್ಕೂ ಹೆಚ್ಚು ನಾಯಿಗಳು ಒಟ್ಟಿಗೆ ಸೇರಿಕೊಂಡವು. ಸಾಮಾನ್ಯವಾಗಿ ಮುಧೋಳ ನಾಯಿ ಅಂದ್ರೆ ಮಾಂಸಹಾರಿ ಹೆಚ್ಚು ಊಟ ಮಾಡುತ್ತೆ ,ಹೆಚ್ಚು ಕೋಪ ಮಾಡಿಕೊಳ್ಳುತ್ತೆ. ಸಾಮಾನ್ಯ ನಾಯಿಗಳ ಜೊತೆ ಬೆರೆಯುವ ಹಾಗೇ ಜನರು ಈ ನಾಯಿಗಳ ಜೊತೆ ಇರೋದು ಕಷ್ಟ ಅಂದುಕೊಂಡಿರುತ್ತಾರೆ. ಆದ್ರೆ ಮುಧೋಳ ನಾಯಿಗಳ ಪ್ರೇಮಿ ಲಕ್ಷ್ಮಣ್ ಹೇಳೋದೆ ಬೇರೆ.

ಮುಧೋಳ ಅಂದ ತಕ್ಷಣ ಯಾವುದೇ ಭಯ ಇಟ್ಟುಕೊಳ್ಳೊದು ಬೇಡ. ನಾವು ಯಾವ ರೀತಿ ಸಾಕುತ್ತೇವೋ ಅದೇರೀತಿ ನಾಯಿಗಳು ನಮ್ಮಜೊತೆ ಬೆರೆಯುತ್ತವೆ. ಅದರಲ್ಲು ವಿಶೇಷವಾಗಿ ಮುಧೋಳ ನಾಯಿಗಳು ಅಷ್ಟೋಂದು ಕೋಪಿಷ್ಟಿಗಳಲ್ಲ..ಅದಲ್ಲದೆ ಅವು ಮಾಂಸಹಾರಿ ನಾಯಿಗಳು ಅಂತಾನೇಅಲ್ಲ.. ನಮ್ಮ ಬಳಿ ಇರೋಎಲ್ಲಾ ಮುಧೋಳಗಳು ಹಾಲು ಅನ್ನ ಹಾಕಿ ಸಾಕಲಾಗಿದೆ. ಹಾಲು ಅನ್ನ ತಿಂದೇ ಇವುಗಳು ಆರೋಗ್ಯವಾಗಿದ್ದಾವೆ ಅಂತಾರೆ..

image


ಇನ್ನೂ ಲಕ್ಷ್ಮಣ್‍ಅವ್ರ ಬಳಿ ಇರೋ ಮುಧೋಳಗಳು ಬೇಟೆ ನಾಯಿಗಳಂತೆಯೇ ಇವೆ. ಇವು ಬೇಟೆಗೂ ಸೈ ಪ್ರೀತಿಗೂ ಸೈ ಅನ್ನೋದ್ರ ಸಂಕೇತ. ಈ ಶ್ವಾನಗಳನ್ನ ಸಾಕೋದ್ರಜೊತೆಗೆ ಲಕ್ಷ್ಮಣ್ ನಾಯಿಗಳನ್ನ ವ್ಯಾಪಾರ ಮಾಡುತ್ತಾರೆ. 8 ಸಾವಿರದಿಂದ ಮುಧೋಳ ನಾಯಿ ಮರಿಗಳು ಲಭ್ಯವಾಗುತ್ತೆ..ಕೇವಲ ಬೇಟೆಗಷ್ಟೆಅಲ್ಲದೆ ಮನೆಯಲ್ಲಿ ಸಾಕೋದಕ್ಕೂ ಮುಧೋಳು ಹೇಳಿ ಮಾಡಿಸಿದ ಹಾಗಿವೆ.

ಹಲವು ಬಾರಿ ಸ್ಪರ್ಧೆಗಳಿಗೆ ಬೇಟಿ ನೀಡಿರೋ ಲಕ್ಷ್ಮಣ್‍ಅಂಡ್‍ಟೀಂ ಸಾಕಷ್ಟು ಪ್ರಶಸ್ತಿಗಳನ್ನೂ ಗೆದ್ದುತಂದಿದ್ದಾರೆ .ಇನ್ನೂಇತ್ತೀಚಿಗಷ್ಟೆ ಮುಧೋಳ ನಾಯಿಯನ್ನ ಸೇನೆಗೆ ಸೇರ್ಪಡೆ ಮಾಡೋ ವಿಷಯ ಚರ್ಚೆಯಾಗುತ್ತಿದೆ. ಇದರಿಂದ ಖುಷಿಗೊಂಡಿರೋ ಲಕ್ಷ್ಮಣ್‍ ಇದೊಂದು ಸಂತಸದ ವಿಚಾರ ಅಂತಾರೆ. ನಿಜ ಎಂದರೆ ಈ ಕೆಲಸ ಯಾವತ್ತಿಗೋ ಆಗಬೇಕಿತ್ತಂತೆ ..ಯಾಕಂದ್ರೆ ಮುಧೋಳ ಈಗಾಗ್ಲೆ ಸೇನೆಯಲ್ಲಿರೋ ವಿಶೇಷ ತಳಿಯ ನಾಯಿಗಳನ್ನ ಮೀರಿಸೋಚಾಕಚಕ್ಯತೆ ಹಾಗೂ ಸಾಮರ್ಥ್ಯ ಹೊಂದಿರೋ ಶ್ವಾನ. ತಮ್ಮದೇ ಭೂಮಿಯಲ್ಲಿ ಹುಟ್ಟಿ ಬೆಳೆದ ನಮ್ಮ ಶ್ವಾನಗಳಿಗೆ ಈಗ ವಿಶ್ವವಿಖ್ಯಾತಿ ಕೊಡಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ರಾಷ್ಟ್ರೀಯ ಪಶು ಸಂಗೋಪನಾ ಇಲಾಖೆ ಮುಧೋಳ ನಾಯಿಯನ್ನ ಸೇನೆಗೆ ಸೇರಿಸಿಕೊಳ್ಳೊದಕ್ಕೆ ನಿರ್ಧಾರ ಮಾಡಿದೆ. ಎಲ್ಲವೂ ಅಂದು ಕೊಂಡಂತಾದರೆ ಆದಷ್ಟು ಬೇಗೆ ಮುಧೋಳ ತಳಿಯ ನಾಯಿಗಳನ್ನ ಸೇನೆಯಲ್ಲಿ ನೋಡಬಹುದು.