ಏನಾದ್ರೂ ಮಾಡಿ, ಆನ್‍ಲೈನ್ ಪ್ರಕಾಶಕರಾಗ್ಬೇಡಿ..!

ಭಾರತಿ ಭಟ್​​​

0

ನಾಲ್ಕು ವರ್ಷಗಳ ಹಿಂದೆ `ಲೈಟ್‍ಹೌಸ್ ಇನ್‍ಸೈಟ್ಸ್'ನ ಸಂಸ್ಥಾಪಕ ಪ್ರಶಾಂತ್ ನಾಯ್ಡು ಅವರಿಗೆ ಏಷ್ಯಾದ ಟೆಕ್ ಪ್ರಕಾಶಕರೊಬ್ರು ಸಲಹೆ ಕೊಟ್ಟಿದ್ರು. ನೀವು ಏನನ್ನಾದ್ರೂ ಮಾಡಿ ಆದ್ರೆ ಆನ್‍ಲೈನ್ ಪ್ರಕಾಶನದ ತಂಟೆಗೆ ಹೋಗಲೇಬೇಡಿ ಅಂತ. ಅವರೇನು ಪ್ರಶಾಂತ್ ನಾಯ್ಡುರನ್ನು ತಡೆದಿರ್ಲಿಲ್ಲ. ಆದ್ರೆ ಆನ್‍ಲೈನ್ ಪ್ರಕಾಶನದಲ್ಲಿರೋ ರಿಸ್ಕ್​​​ಗಳ ಬಗ್ಗೆ ಎಚ್ಚರಿಕೆ ನೀಡಿದ್ರು. ಈಗ ನಾಲ್ಕು ವರ್ಷಗಳ ನಂತರ ಪ್ರಶಾಂತ್ ನಾಯ್ಡು ಅದೇ ಮಾತುಗಳನ್ನು ಪುನರುಚ್ಛರಿಸಿದ್ದಾರೆ. ಆನ್‍ಲೈನ್ ಪಬ್ಲಿಶಿಂಗ್‍ಗೆ ಕೈಹಾಕುವ ಮುನ್ನ 10 ಬಾರಿ ಯೋಚಿಸಿ. ಆನ್‍ಲೈನ್‍ನಲ್ಲಿ ಬಳಕೆದಾರರ ಗಮನ ಕಡಿಮೆಯಾಗ್ತಿರೋದ್ರಿಂದ ಸಾಂಪ್ರದಾಯಿಕ ಪ್ರಕಾಶನದ ಕೆಲಸ ಈಗ ನಿಜಕ್ಕೂ ಸವಾಲಾಗಿದೆ. ಸದ್ಯದಲ್ಲೇ ಪ್ರಶಾಂತ್ ಅವರ `ಲೈಟ್‍ಹೌಸ್ ಇನ್‍ಸೈಟ್ಸ್' ಐದು ವರ್ಷ ಪೂರೈಸಲಿದೆ. ಈ ಅವಧಿಯಲ್ಲಿ ಪ್ರಶಾಂತ್ ಎದುರಿಸಿದ ಸವಾಲುಗಳು ಒಂದೆರಡಲ್ಲ. ಆದ್ರೆ ನಿರ್ದಿಷ್ಟ ಗುರಿ ಮತ್ತು ಕಠಿಣ ಪರಿಶ್ರಮದಿಂದಾಗಿ ಅಸ್ತಿತ್ವ ಉಳಿಸಿಕೊಂಡಿದ್ದೇವೆ ಎನ್ನುತ್ತಾರೆ ಅವರು. ಆನ್‍ಲೈನ್ ಪಬ್ಲಿಷರ್ ಎದುರಿಸುವ ಸವಾಲುಗಳು ಕೆಳಕಂಡಂತಿವೆ.

1. ಜಾಹೀರಾತು ಕುರುಡುತನ ಮತ್ತು ಜಾಹೀರಾತು ತಡೆ

ಮನಸ್ಸಿಗೆ ಕಿರಿಕಿರಿ ಹುಟ್ಟಿಸುವಂಥ ಜಾಹೀರಾತುಗಳಿಗೆ ಗ್ರಾಹಕರು ಮರುಳಾಗುವ ಸಂದರ್ಭ ಈಗಿಲ್ಲ. ಇದನ್ನು ಸಮರ್ಥವಾಗಿ ಎದುರಿಸಲು ಭಾರತೀಯ ಪ್ರಕಾಶಕರು ಹೊಸ ಬಗೆಯ ಉದ್ಯೋಗ ಶೋಧಕ್ಕೆ ಅನುಕೂಲವಾಗುವಂಥ ಜಾಹೀರಾತುಗಳ ಮೊರೆ ಹೋಗಿದ್ದಾರೆ. `ಗೂಗಲ್ ಆ್ಯಡ್‍ಸೆನ್ಸ್'ನಿಂದ ಡಾಲರ್ ಸಂಪಾದಿಸುವ ಜಮಾನಾ ಇದಲ್ಲ. ಬಳಕೆದಾರರು ಜಾಹೀರಾತು ಕ್ಲಿಕ್ ಮಾಡಲು ಆಸಕ್ತಿ ಉಳಿಸಿಕೊಂಡಿಲ್ಲ ಅನ್ನೋದು ದೊಡ್ಡ ಪ್ರಕಾಶಕರಿಂದ ಹಿಡಿದು ಸಣ್ಣ ಪುಟ್ಟ ಆ್ಯಡ್ ಏಜೆನ್ಸಿ ನಡೆಸುತ್ತಿರುವವರಿಗೂ ಅರ್ಥವಾಗಿದೆ. ಬಹುತೇಕ ಪ್ರಕಾಶಕರ ಪ್ರಕಾರ ಬಳಕೆದಾರರು ಡಿಜಿಟಲ್ ದುನಿಯಾಕ್ಕೆ ಹೊಂದಿಕೊಂಡಿದ್ದಾರೆ. ಕಿರಿಕಿರಿ ಹುಟ್ಟಿಸುವ ಜಾಹೀರಾತುಗಳತ್ತ ಕಣ್ಣೆತ್ತಿಯೂ ನೋಡುತ್ತಿಲ್ಲ. ಇದು ಪ್ರಕಾಶಕರ ಬೆಳವಣಿಗೆಗೆ ಅಡ್ಡಿಯಾಗಿದೆ.

ಇನ್ನು `ಅಡೋಬ್' ಮತ್ತು `ಫೇರ್‍ಪೇಜ್' ಸಮೀಕ್ಷೆ ಪ್ರಕಾರ ಜಾಹೀರಾತು ತಡೆಯಿಂದ ಈ ವರ್ಷ 22 ಬಿಲಿಯನ್ ಡಾಲರ್ ಆದಾಯ ಖೋತಾ ಆಗಿದೆ. ಕಳೆದ 12 ತಿಂಗಳಲ್ಲಿ ಜಾಹೀರಾತು ತಡೆ ಪ್ರಮಾಣ ಕೂಡ ಶೇಕಡಾ 41ರಷ್ಟು ಹೆಚ್ಚಾಗಿದೆ. ಆ್ಯಪಲ್‍ನ ಐಓಎಸ್-ಐಓಎಸ್ 9 ಕೂಡ ಮೊಬೈಲ್ ಬ್ರೌಸರ್‍ಗಳ ಜಾಹೀರಾತು ತಡೆ ಸಾಮರ್ಥ್ಯ ಹೊಂದಿದೆ. ಈ ಸುದ್ದಿ ಪ್ರಕಾಶಕರ ನಿದ್ದೆಗೆಡಿಸಿರೋದು ಸುಳ್ಳಲ್ಲ. `ಜೆನೆಸಿಸ್ ಮೀಡಿಯಾ'ದ ಸಮೀಕ್ಷೆ ಪ್ರಕಾರ ಶೇಕಡಾ 24ರಷ್ಟು ಬಳಕೆದಾರರು ತಮ್ಮ ಮನೆ ಹಾಗೂ ಕಂಪ್ಯೂಟರ್‍ಗಳಲ್ಲಿ ಜಾಹೀರಾತು ತಡೆ ಸಾಫ್ಟ್​​ವೇರ್ ಅನ್ನು ಅಳವಡಿಸಿಕೊಂಡಿದ್ದಾರೆ. ಶೇಕಡಾ 3ರಷ್ಟು ಜನರು ಮಾತ್ರ ತಮ್ಮ ಮೊಬೈಲ್ ಡಿವೈಸ್‍ಗಳಲ್ಲಿ ಜಾಹೀರಾತು ತಡೆ ತಂತ್ರಜ್ಞಾನ ಅಳವಡಿಸಿಕೊಂಡಿದ್ದಾರೆ. ಜಾಹೀರಾತು ತಡೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು `ಮಿಕ್'ನಂತಹ ಪ್ರಕಾಶಕರು, ಒಪ್ಪಂದದಲ್ಲಿ ಕಡಿತ ಮಾಡಿಕೊಂಡಿವೆ. ಇನ್ನೊಂದೆಡೆ `ವಾಷಿಂಗ್ಟನ್ ಪೋಸ್ಟ್' ಓದುಗರಿಗೆ ಜಾಹೀರಾತು ಬ್ಲಾಕ್ ಮಾಡುವ ಅವಕಾಶ ಕೊಡುವ ಮೂಲಕ ಹೊಸ ಪ್ರಯೋಗಕ್ಕೆ ಕೈಹಾಕಿದೆ. ಸಾಫ್ಟ್​​ವೇರ್​​ ಕಂಪನಿಗಳಿಗೂ ಈ ಸೇವೆಗೆ ಅವಕಾಶ ನೀಡುವ ಬಗ್ಗೆ `ಇಂಟರಾಕ್ಟಿವ್ ಅಡ್ವರ್ಟೈಸಿಂಗ್ ಬ್ಯೂರೊ' ಚಿಂತನೆ ನಡೆಸ್ತಾ ಇದೆ. ಅದೇನೇ ಆದ್ರೂ ಜಾಹೀರಾತು ತಡೆ ಸಮಸ್ಯೆ ಇನ್ನಷ್ಟು ವಿಸ್ತರಿಸಲಿದ್ದು, ಪ್ರಕಾಶಕರ ಮೇಲೆ ಆಕ್ಷೇಪ ಬರುವುದಂತೂ ನಿಶ್ಚಿತ.

2. ಮೊಬೈಲ್ ಆದಾಯಕ್ಕೆ ಹೆಣಗಾಟ

ಮನರಂಜನೆಯಿಂದ ಮಾಹಿತಿವರೆಗೆ ಈಗ ಮೊದಲು ಸಿಗುವುದೇ ಮೊಬೈಲ್. ಭಾರತದ ಇಂಟರ್ನೆಟ್ ಟ್ರಾಫಿಕ್‍ನಲ್ಲಿ ಶೇಕಡಾ 65ರಷ್ಟು ಪಾಲು ಬೊಬೈಲ್‍ನಿಂದಾಗಿದೆ. ಟೈರ್ 2, ಟೈರ್ 3 ನಗರಗಳಲ್ಲಿ ಇಂಟರ್ನೆಟ್ ಬಳಕೆದಾರರನ್ನು ಸೆಳೆಯುತ್ತಿರುವ ಪ್ರಮುಖ ಅಸ್ತ್ರ ಮೊಬೈಲ್. ಲ್ಯಾಪ್‍ಟಾಪ್, ಡೆಸ್ಕ್​​ಟಾಪ್ ಮೂಲಕ ವೆಬ್‍ಸೈಟ್ ಶೇರಿಂಗ್ ಪ್ರಮಾಣ ಶೇಕಡಾ 66ರಷ್ಟಿದ್ರೆ ಮೊಬೈಲ್ ಮೂಲಕ ಶೇಕಡಾ 33ರಷ್ಟಿದೆ. ವೆಬ್ ಶೇಕಡಾ 6ರಷ್ಟು ಕುಸಿತ ಕಂಡ್ರೆ, ಮೊಬೈಲ್ ವರ್ಷದಿಂದ ವರ್ಷಕ್ಕೆ ಶೇಕಡಾ 17ರಷ್ಟು ಪ್ರಗತಿ ಹೊಂದುತ್ತಿದೆ. ವೆಬ್‍ಸೈಟ್‍ಗಳನ್ನು ಕೂಡ ಮೊಬೈಲ್ ಸ್ನೇಹಿಯನ್ನಾಗಿ ಮಾಡಲು ಗೂಗಲ್ ಕಸರತ್ತು ಮಾಡ್ತಾ ಇದೆ. ಅಂತರ್ಜಾಲದಲ್ಲಿ ನೀವು ಏನನ್ನೇ ಸೃಷ್ಟಿಸಿದ್ರೂ ಅದು ಮೊಬೈಲ್ ಸ್ನೇಹಿಯಲ್ಲ ಎಂದಾದ್ರೆ ಅದಕ್ಕೆ ಭವಿಷ್ಯವಿಲ್ಲ ಎಂದೇ ಅರ್ಥ. ಐದು ಇಂಚು ಉದ್ದದ ಮೊಬೈಲ್ ಸ್ಕ್ರೀನ್‍ನಿಂದ ಪ್ರಕಾಶಕರಿಗೆ ಡೆಸ್ಕ್​​​ ಟಾಪ್‍ಗಿಂತಲೂ ಹೆಚ್ಚು ಸಮಸ್ಯೆಯಾಗಿದೆ. ಆದ್ರೂ ಮೊಬೈಲ್ ಆದಾಯದಲ್ಲಿ ಶೇಕಡಾ 10ರಷ್ಟು ಕಡಿಮೆಯಾಗಿದೆ. `ನ್ಯೂಯಾರ್ಕ್ ಟೈಮ್ಸ್'ನಲ್ಲಿ ಸ್ಮಾರ್ಟ್ ಫೋನ್ ಮತ್ತು ಟ್ಯಾಬ್ಲೆಟ್ ಡಿವೈಸ್‍ಗಳಿಂದ ಕೇವಲ ಶೇಕಡಾ 15ರಷ್ಟು ಆದಾಯ ಬಂದಿದೆ. `ನ್ಯೂ ಕಾಪ್ರ್ಸ್ ಡೌ ಜೋನ್ಸ್ & ಕೋ, `ದಿ ವಾಲ್ ಸ್ಟ್ರೀಟ್ ಜರ್ನಲ್' ಕಥೆ ಕೂಡ ಇದೇ. ಮೊಬೈಲ್‍ನಲ್ಲೂ ಅದೇ ಜಾಹೀರಾತು ತಂತ್ರ ಅಳವಡಿಸ್ತಾ ಇರೋದ್ರಿಂದ ಇದಕ್ಕೆಲ್ಲಾ ಹೊಣೆ ಪ್ರಕಾಶಕರೇ ಎನ್ನಲಾಗ್ತಿದೆ.

3. ಪಾವತಿಸಿದ ವಿಷಯಕ್ಕೆ ಹೆಣಗಾಟ

2009ರಲ್ಲಿ `ದಿ ವಾಲ್ ಸ್ಟ್ರೀಟ್ ಜರ್ನಲ್'ನ ಜಿಎಫ್‍ಕೆ ರಿಸರ್ಚ್, ಇಂಟರ್ನೆಟ್ ವಿಷಯಗಳೆಲ್ಲ ಉಚಿತ ಮತ್ತು ಜಾಹೀರಾತು ರಹಿತವಾಗಿರಬೇಕೆಂದು ಸೂಚಿಸಿತ್ತು. ಆನ್‍ಲೈನ್ ಕಂಟೆಂಟ್‍ಗೆ ಹಣ ಪಾವತಿಸುತ್ತಿರೋದಾಗಿ ಶೇಕಡಾ 12ರಷ್ಟು ಮಂದಿ ಹೇಳಿದ್ರೆ, ಅಮೆರಿಕದ ಶೇಕಡಾ 11ರಷ್ಟು ಗ್ರಾಹಕರು ಆನ್‍ಲೈನ್ ಸುದ್ದಿಗಳಿಗೆ ಹಣ ಪಾವತಿಸುತ್ತಿದ್ದಾರೆಂದು ರಾಯ್ಟರ್ಸ್ ವರದಿ ಮಾಡಿತ್ತು. ವಿಶ್ವದಾದ್ಯಂತ ಈ ಪ್ರಮಾಣ ಶೇಕಡಾ 10ರಷ್ಟು ಮಾತ್ರವಿದೆ. ಭಾರತದಲ್ಲೂ ಪರಿಸ್ಥಿತಿ ವಿಭಿನ್ನವಾಗಿಲ್ಲ.

4. ಸ್ಥಳೀಯ ಜಾಹೀರಾತಿನೊಂದಿಗೆ ಸವಾಲು

ಡಿಜಿಟಲ್ ಮಾಧ್ಯಮದಲ್ಲಿ ಸ್ಥಳೀಯ ಅನ್ನೋದು ಹಾಟ್ ಟಾಪಿಕ್. ಇದನ್ನು ಜಾಹೀರಾತುದಾರರು ಮತ್ತು ಪ್ರಕಾಶಕರು ಗಮನದಲ್ಲಿರಿಸಿಕೊಂಡಿದ್ದಾರೆ. ಅತ್ಯಂತ ಕಡಿಮೆ ಅಡ್ಡಿಪಡಿಸುವ ಅನುಭವ ನೀಡೋ ಜಾಹೀರಾತು ಕೊಡಲು ಪ್ರಯತ್ನಪಡ್ತಿದ್ದಾರೆ. ಬಿಐ ಇಂಟೆಲಿಜೆನ್ಸ್ ಪ್ರಕಾರ ಸ್ಥಳೀಯ ಜಾಹೀರಾತುಗಳ ಮೇಲಿನ ಹೂಡಿಕೆ ಈ ವರ್ಷ 7.9 ಬಿಲಿಯನ್ ಡಾಲರ್ ತಲುಪಲಿದೆ. 2018ರ ವೇಳೆಗೆ ಈ ಮೊತ್ತ 21 ಬಿಲಿಯನ್ ಡಾಲರ್‍ನಷ್ಟಾಗಲಿದೆ. 2014ರಲ್ಲಿ ಟೈಮ್ಸ್ 18 ಮಿಲಿಯನ್ ಡಾಲರ್ ಮೊತ್ತದ ಸ್ಥಳೀಯ ಜಾಹೀರಾತನ್ನು ಮಾರಾಟ ಮಾಡಿ ಡಿಜಿಟಲ್ ಜಾಹೀರಾತಿನಲ್ಲಿ 182.2 ಮಿಲಿಯನ್ ಆದಾಯ ಗಳಿಸಿದೆ. ಆದ್ರೆ ಇದರಲ್ಲೂ ಹತ್ತಾರು ಸವಾಲುಗಳಿವೆ. ಬಳಕೆದಾರರ ಅನುಭವ ಮತ್ತು ಸಂಪಾದಕೀಯ ಸಮಗ್ರತೆಯನ್ನು ಕಾಪಾಡಿಕೊಂಡು ಆದಾಯ ಗಳಿಕೆ ಸುಲಭವಲ್ಲ. ಸ್ಥಳೀಯ ಜಾಹೀರಾತು ಓದುಗರ ದಿಕ್ಕುತಪ್ಪಿಸುತ್ತಿದೆ ಎಂಬ ಆರೋಪವೂ ಇದೆ. `ತಬೂಲಾ'ದ ಸಿಇಓ ಆ್ಯಡಮ್ ಸಿಂಗ್ಲೋಡಾರ ಪ್ರಕಾರ ವಿಸ್ತ್ರತವಲ್ಲದ ಮಾರುಕಟ್ಟೆ ಕೂಡ ಒಂದು ಸಮಸ್ಯೆ.

5. ಹೊಸ ಪ್ರಕಾಶಕರಾದ ಸಾಮಾಜಿಕ ಜಾಲ

ಸಾಮಾಜಿಕ ಜಾಲತಾಣಗಳೇ ಈಗ ಹೊಸ ಪ್ರಕಾಶಕರಿದ್ದಂತೆ. ಶೇಕಡಾ 41ರಷ್ಟು ಮಂದಿ ಫೇಸ್‍ಬುಕ್‍ನಿಂದ ಸುದ್ದಿ ಪಡೆದ್ರೆ, ಇನ್ನು ಕೆಲವರು ಟ್ವಿಟ್ಟರ್ ಮೊರೆಹೋಗಿದ್ದಾರೆ. `ರಾಯ್ಟರ್ಸ್ ಡಿಜಿಟಲ್ ನ್ಯೂಸ್ ರಿಪೋರ್ಟ್' ಪ್ರಕಾರ ಸ್ಪೇನ್ ಮತ್ತು ಬ್ರೆಜಿಲ್‍ನಲ್ಲಿ ವಾಟ್ಸ್ಆ್ಯಪ್ ಪ್ರಮುಖ ಸುದ್ದಿ ಮೂಲ. ಇಟಲಿ, ಜರ್ಮನಿಯಲ್ಲೂ ಸಾಮಾಜಿಕ ಜಾಲತಾಣ ಬಳಕೆದಾರರ ಸಂಖ್ಯೆ ಹೆಚ್ಚಿದೆ. ಲಿಂಕ್‍ಡೆನ್, ಫೇಸ್‍ಬುಕ್, ಗೂಗಲ್, ಟ್ವಿಟ್ಟರ್ ಜೊತೆಗೆ ಬಳಕೆದಾರರು ಅತಿ ಹೆಚ್ಚು ಸಮಯ ಕಳೆಯುತ್ತಿರುವುದರಿಂದ ಅವು ಪ್ರಕಾಶಕರಂತಾಗಿವೆ. ಫೇಸ್‍ಬುಕ್‍ನಲ್ಲಿ ಪ್ರಕಾಶಕರಿಗೆ ಅತಿ ವೇಗವಾಗಿ ಲೇಖನ ಬರೆಯಲು ಸಾಧ್ಯವಾಗುವಂತಹ ಇನ್‍ಸ್ಟಂಟ್ ಆರ್ಟಿಕಲ್ಸ್ ಎಂಬ ಉತ್ಪನ್ನವನ್ನು ಬಿಡುಗಡೆ ಮಾಡಿದೆ. ಫೇಸ್‍ಬುಕ್ ದಿನವೊಂದಕ್ಕೆ ಒಂದು ಬಿಲಿಯನ್‍ಗೂ ಅಧಿಕ ಬಳಕೆದಾರರನ್ನು ಸಂಪಾದಿಸುತ್ತಿದೆ. ಹಾಗಾಗಿ ಪ್ರಕಾಶಕರು ಕೂಡ ಫೇಸ್‍ಬುಕ್ ಜೊತೆ ಒಪ್ಪಂದ ಮಾಡಿಕೊಳ್ಳಲು ತುದಿಗಾಲಲ್ಲಿದ್ದಾರೆ.

ಇನ್ನು ಟ್ವಿಟ್ಟರ್ ವಿಚಾರಕ್ಕೆ ಬಂದ್ರೆ ಡಿಸೆಂಬರ್‍ನಲ್ಲಿ ಬಿಬಿಸಿ ಅತಿ ಹೆಚ್ಚು ಟ್ವೀಟ್ ಪಡೆದ ಸೈಟ್. ಬಿಬಿಸಿಗೆ 3.8 ಮಿಲಿಯನ್ ಟ್ವೀಟ್‍ಗಳು ಬಂದಿವೆ. `ಇವೊಲ್ವ್' ಮೀಡಿಯಾದ ಅಧ್ಯಕ್ಷ ಬ್ರಿಯಾನ್ ಫಿಟ್‍ಗೆರಾಲ್ಡ್ ಅವರ ಪ್ರಕಾರ ಈ ಬೆಳವಣಿಗೆ ಅತ್ಯಂತ ಅಪಾಯಕಾರಿ. ಅವರ ವೇದಿಕೆಯಲ್ಲಿ ನಿಮ್ಮ ವಿಷಯ ಪ್ರಸ್ತುತಿಗೆ ಅವಕಾಶ ಕೊಡುತ್ತಾರೆ, ಪ್ರೇಕ್ಷಕರನ್ನು ಸೆಳೆಯುತ್ತಾರೆ ಅನ್ನೋದು ನಿಜ. ಆದ್ರೆ ಕೊನೆಯಲ್ಲಿ ನಿಮ್ಮ ವಿಷಯದ ನಿಷ್ಠೆ ಅವರ ಪಾಲಾಗುತ್ತೆ ಅನ್ನೋದು ಬ್ರಿಯಾನ್ ಆತಂಕ.

ಇನ್ನು ಯೂಟ್ಯೂಬ್‍ನಿಂದ ಜನರನ್ನು ವಿಚಲಿತರಾಗಿಸೋದಂತೂ ಅಸಾಧ್ಯವಾದ ಮಾತು. ಫೇಸ್‍ಬುಕ್‍ನಲ್ಲೇ ವಿಷಯ ಪ್ರಕಟಿಸಿದ್ರೆ ಪ್ರಕಾಶಕರನ್ನು ಯಾರು ಅವಲಂಬಿಸ್ತಾರೆ ಹೇಳಿ? ಹಾಗಾಗಿ ಪ್ರಕಾಶಕರದ್ದು ಕಲ್ಲು ಮುಳ್ಳಿನ ಹಾದಿ. ಅದಕ್ಕಾಗಿಯೇ ಪ್ರಶಾಂತ್ ನಾಯ್ಡು ಹೇಳ್ತಾರೆ ಏನಾದ್ರೂ ಮಾಡಿ, ಪ್ರಕಾಶಕರಾಗ್ಬೇಡಿ.

Related Stories