ಆರೇ ತಿಂಗಳಲ್ಲಿ ಮುಗಿದು ಹೋಯಿತು ಸೇತುವೆ ನಿರ್ಮಾಣ..!

ಟೀಮ್​ ವೈ.ಎಸ್. ಕನ್ನಡ

ಆರೇ ತಿಂಗಳಲ್ಲಿ ಮುಗಿದು ಹೋಯಿತು ಸೇತುವೆ ನಿರ್ಮಾಣ..!

Tuesday June 06, 2017,

2 min Read

ಭಾರತದಲ್ಲಿ ನದಿಗಳಿಗೆ ಸೇತುವೆ ಕಟ್ಟುವುದು ಅಂದ್ರೆ ಅದು ವರ್ಷಗಳ ತನಕ ನಡೆಯುವ ಕೆಲಸ. ಗುತ್ತಿಗೆದಾರರಿಂದ ಹಿಡಿದು, ಪರಿಸರವಾದಿಗಳ ತನಕ ಎಲ್ಲರೂ ಕೂಡ ಸೇತುವೆಯ ಅವಶ್ಯಕತೆಯನ್ನು ಮನಗಾಣುವ ಹೊತ್ತಿಗೆ ವರ್ಷಗಳು ಕಳೆದು ಹೋಗಿರುತ್ತವೆ. ಆದ್ರೆ ಆರೇ ಆರು ತಿಂಗಳುಗಳಲ್ಲಿ ಸೇತುವೆ ಕಟ್ಟಿಸಿ, ಮನಸ್ಸಿದ್ದರೆ ಮಾರ್ಗ ಅನ್ನುವ ಗಾದೆಯನ್ನು ಮತ್ತೆ ನೆನಪಾಗುವಂತೆ ಮಾಡಿದ್ದಾರೆ, ಕೇಂದ್ರ ಸಚಿವ ನಿತಿನ್ ಗಡ್ಕರಿ.

image


ಮಹಾರಾಷ್ಟ್ರದ ಮಲಾಡ್​ನಲ್ಲಿ ಸಾವಿತ್ರಿ ಮತ್ತು ಕಾಲ್ ನದಿಗೆ ಅಡ್ಡಲಾಗಿ 1928ರಲ್ಲಿ ಸೇತುವೆ ನಿರ್ಮಿಸಲಾಗಿತ್ತು. ಸುಮಾರು 5.90 ಮೀಟರ್ ಅಗಲ ಮತ್ತು 184 ಮೀಟರ್ ಉದ್ದವಿದ್ದ ಈ ಸೇತುವೆ ಹಲವು ವರ್ಷಗಳಿಂದ ತನ್ನ ಗಟ್ಟಿತನವನ್ನು ಕಳೆದುಕೊಂಡಿತ್ತು. ಪ್ರತೀಬಾರಿ ಮಳೆಗಾಲ ಬಂದಾಗಲೂ ಸೇತುವೆ ಕುಸಿಯುವ ಭೀತಿ ಇತ್ತು. 2016ರ ಆಗಸ್ಟ್ 2ರಂದು ಈ ಸೇತುವೆ ಭಾರಿ ಮಳೆಯಿಂದಾಗಿ ಕುಸಿದು ಬಿತ್ತು. ಜನರ ಸಂಪರ್ಕಕೊಂಡಿ ಕಳಚಿ ಬಿದ್ದಿತ್ತು. ತಕ್ಷಣ ಕಾರ್ಯಚರಣೆಯನ್ನು ಕೈಗೆತ್ತಿಕೊಂಡ ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಆರು ತಿಂಗಳ ಒಳಗೆ ಹೊಸ ಸೇತುವೆ ನಿರ್ಮಿಸಿಕೊಡುವ ಚಾಲೆಂಜ್ ಅನ್ನು ಸ್ವೀಕರಿಸಿದರು.

ಇದನ್ನು ಓದಿ: ಕಾರ್ಪೋರೇಟ್​ ಕೆಲಸ ಬಿಟ್ಟ ಮಹಿಳೆ- ಪ್ಲಾಸ್ಟಿಕ್​ ವಿರೋಧಿ ಆಂದೋಲನ ಮಾಡುತ್ತಿರುವ "ಬೆಳ್ಳಿ ಕಿರಣ"

ಸಚಿವರ ಮಾತು ಅಂದ್ರೆ ಮಾತಾಗಿತ್ತು. ಅಷ್ಟೇ ಅಲ್ಲ 35.77 ಕೋಟಿ ವೆಚ್ಚದಲ್ಲಿ ಹೊಸ ಸೇತುವೆ ನಿರ್ಮಾಣವಾಗಿದೆ. ಮಾನ್ಸೂನ್ ಆರಂಭವಾಗುವ 165 ದಿನ ಮೊದಲೇ ಸೇತುವೆ ಸಾರ್ವಜನಿಕರ ಬಳಕೆಗೆ ಮಕ್ತವಾಗಿದ್ದು ಎಲ್ಲರಿಗೂ ಅಚ್ಚರಿ ಹುಟ್ಟುವಂತೆ ಮಾಡಿದೆ.

“ನಾವು ಹೊಸ ದಾಖಲೆ ನಿರ್ಮಾಣ ಮಾಡಿದ್ದೇವೆ. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನಾವಿಸ್ ಮತ್ತು ನಾನು ಸೇತುವೆಯನ್ನು ಸಾರ್ವಜನಿಕರ ಬಳಕೆಗೆ ಮುಕ್ತ ಮಾಡಿದ್ದೇವೆ. ಹೊಸ ತಂತ್ರಜ್ಞಾನದ ಮೂಲಕ ಮೂಲಭೂತ ಸೌಕರ್ಯಗಳನ್ನು ಹೆಚ್ಚು ವೇಗವಾಗಿ ಮಾಡಬೇಕು ಅನ್ನುವ ಉದ್ದೇಶ ನಮ್ಮದಾಗಿದೆ. ”
- ನಿತಿನ್ ಗಡ್ಕರಿ, ಕೇಂದ್ರ ಸಚಿವರು

ಅಂದಹಾಗೇ ಸೇತುವೆ ಕುಸಿದು ಮೂರೇ ವಾರಗಳಲ್ಲಿ ಮಹಾರಾಷ್ಟ್ರ ರಾಜ್ಯ ಪಿಡಬ್ಲ್ಯುಡಿ, ಬ್ಲೂ ಪ್ರಿಂಟ್ ಮತ್ತು ಖರ್ಚುವೆಚ್ಚದ ಬಗ್ಗೆ ವರದಿ ಕೊಟ್ಟಿತ್ತು. ಕೇಂದ್ರ ಸಚಿವಾಲಯ ಸೆಪ್ಟಂಬರ್​ನಲ್ಲಿ ಹೊಸ ಸೇತುವೆಯ ಪ್ರಾಜೆಕ್ಟ್​ಗೆ ಅನುಮೋದನೆ ನೀಡಿತ್ತು. ಡಿಸೆಂಬರ್ 15ರ ಒಳಗೆ ಸೇತುವೆ ನಿರ್ಮಿಸಲು ಬೇಕಾಗಿದ್ದ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿತ್ತು.

ಸಾವಿತ್ರಿ ಮತ್ತು ಕಾಲ್ ನದಿಗೆ ಅಡ್ಡಲಾಗಿ ಕಟ್ಟಿರುವ ಹೊಸ ಸೇತುವೆ ಸುಮಾರು 16 ಮೀಟರ್ ಅಗಲ ಮತ್ತು 239 ಮೀಟರ್ ಉದ್ದವನ್ನು ಹೊಂದಿದೆ. ಅಷ್ಟೇ ಅಲ್ಲ ನವೀನ ರೀತಿಯ ಲೈಟಿಂಗ್ ವ್ಯವಸ್ಥೆಯಿಂದಾಗಿ ಸೇತುವೆ ಕಂಗೊಳಿಸುತ್ತಿದೆ. ನೆರೆ, ವಿಕೋಪವನ್ನು ತಿಳಿಸುವ ತಂತ್ರಜ್ಞಾನವನ್ನು ಕೂಡ ಈ ಸೇತುವೆಯಲ್ಲಿದೆ. ಪಾದಾಚಾರಿ ಮಾರ್ಗ ಮತ್ತು ಅತ್ಯಂತ ಶ್ರೇಷ್ಟ ತಂತ್ರಜ್ಞಾನದೊಂದಿಗೆ ಈ ಸೇತುವೆ ನಿರ್ಮಾಣ ಮಾಡಲಾಗಿದೆ. ಒಟ್ಟಿನಲ್ಲಿ ಮನಸ್ಸಿದ್ದರೆ ಮಾರ್ಗ ವಿದೆ ಅನ್ನುವುದಕ್ಕೆ ಈ ಸೇತುವೆ ನಿರ್ಮಾಣವೇ ಸಾಕ್ಷಿ ಅನ್ನುವುದರಲ್ಲಿ ಎರಡು ಮಾತಿಲ್ಲ. 

ಇದನ್ನು ಓದಿ:

1. 9ನೇ ತರಗತಿಗೆ ಶಾಲೆ ಬಿಟ್ಟ ಪೋರ : 13 ವರ್ಷಕ್ಕೆ ಉದ್ಯಮಿಯಾದ ಧೀರ 

2. ಸ್ಮಾರ್ಟ್​ಫೋನ್​ ಬಳಕೆ ಸ್ಮಾರ್ಟ್​ ಆಗಿರಲಿ- ಮಕ್ಕಳ ಆರೋಗ್ಯದ ಬಗ್ಗೆ ಗಮನ ಕೂಡ ಇರಲಿ

3. ಸ್ಮಾರ್ಟ್​ಶಿಫ್ಟ್​​ನಲ್ಲಿದೆ ಭವಿಷ್ಯದ ಕನಸು- ಉದ್ಯಮಿ ಮತ್ತು ಟ್ರಕ್ ಮಾಲೀಕರ ನಡುವಿನ ಸಂಬಂಧಕ್ಕೆ ಹೊಚ ಟಚ್..!