ಸಾವಿಗೆ ಸವಾಲೊಡ್ಡಿ ಗೆದ್ದ ಲಿಝಿ - ವಿಧವೆ, ಎಚ್‍ಐವಿ ಪೀಡಿತೆಯ ಸಾರ್ಥಕ ಬದುಕು

ಟೀಮ್​ ವೈ.ಎಸ್​. ಕನ್ನಡ

ಸಾವಿಗೆ ಸವಾಲೊಡ್ಡಿ ಗೆದ್ದ ಲಿಝಿ - ವಿಧವೆ, ಎಚ್‍ಐವಿ ಪೀಡಿತೆಯ ಸಾರ್ಥಕ ಬದುಕು

Sunday February 28, 2016,

3 min Read

ಆಕೆ ಮುದ್ದು ಮಗುವಿನ ತಾಯಿಯಾದ ಸಂತಸದಲ್ಲಿದ್ಲು. ಆದ್ರೆ ತನ್ನ ಜೀವನದಲ್ಲಿ ಭಯಂಕರ ಬಿರುಗಾಳಿ ಬೀಸಲಿದೆ ಅನ್ನೋದು ಅವಳಿಗೆ ತಿಳಿದಿರಲಿಲ್ಲ. ಮಗುವಿನ ಆಗಮನದ ಬೆನ್ನಲ್ಲೇ ಪತಿಯ ಮರಣದ ಸುದ್ದಿ ಬರಸಿಡಿಲಿನಂತೆ ಬಂದೆರಗಿತ್ತು. ವಿಧವೆ ಎಂಬ ಪಟ್ಟದ ಜೊತೆಗೆ ವಿಶ್ವವನ್ನೇ ಬೆಚ್ಚಿಬೀಳಿಸಿದ ಮಹಾಮಾರಿ ಏಡ್ಸ್ ಅವಳನ್ನ ಆವರಿಸಿಕೊಂಡುಬಿಟ್ಟಿತ್ತು. ಇಷ್ಟೆಲ್ಲ ಆಘಾತಗಳು ಒಂದರ ಹಿಂದೊಂದರಂತೆ ಬಂದ್ರೂ ಅವಳೇನೂ ಹತಾಶಳಾಗಲಿಲ್ಲ. ದಿಕ್ಕೆಟ್ಟು ಕೂರಲಿಲ್ಲ. ಹಾಗಿದ್ರೆ ಆಕೆ ಏನು ಮಾಡಿದ್ಲು? ಬದುಕಿನಲ್ಲಿ ಎದುರಾದ ಸಂಕಷ್ಟಗಳ ವಿರುದ್ಧ ಹೇಗೆ ಹೋರಾಡಿದ್ಲು ಅಂತಾ ನಾವ್ ಹೇಳ್ತೀವಿ ಕೇಳಿ.

``ಹತ್ತು ವರ್ಷಗಳ ಹಿಂದೆ, ನಾನು ತಾಯಿಯಾಗಿದ್ದೆ, ಒಬ್ಬ ವಿಧವೆಯೂ ಆದೆ. ಎಚ್‍ಐವಿ ಪಾಸಿಟಿವ್ ಎಂಬ ಮಹಾಮಾರಿ ಕೂಡ ನನ್ನನ್ನು ಆವರಿಸಿತ್ತು. ಕೇವಲ 18 ತಿಂಗಳುಗಳ ಅವಧಿಯಲ್ಲಿ ನನ್ನ ಬದುಕು ಬುಡಮೇಲಾಗಿತ್ತು''. 

ಇದು ಲಿಝಿ ಜೊರ್ಡನ್ ಬಿಚ್ಚಿಟ್ಟ ಅತ್ಯಂತ ಘೋರವಾದ ಕಹಿ ನೆನಪುಗಳ ಬುತ್ತಿ. ಫ್ಯಾಷನ್ ದುನಿಯಾದಲ್ಲಿ ಕೆಲಸ ಮಾಡ್ತಾ ಇದ್ದ ಲಿಝಿ ಲಂಡನ್ ಬಿಟ್ಟು, ಲಿಂಕನ್‍ಶೈರ್ ಎಂಬ ಗ್ರಾಮಕ್ಕೆ ಮರಳಿದ್ರು. ತಮ್ಮ ಜೀವನದಲ್ಲಿ ಎದುರಾದ ಸಂಕಷ್ಟಗಳನ್ನೆಲ್ಲ ಧೈರ್ಯವಾಗಿ ಎದುರಿಸಲು ದೃಢ ಸಂಕಲ್ಪ ಮಾಡಿದ ಅವರು ಉದ್ಯಮ ಲೋಕಕ್ಕೆ ಎಂಟ್ರಿ ಕೊಟ್ರು. ಲಿಝಿ `ಥಿಂಕ್2ಸ್ಪೀಕ್' ಎಂಬ ಕಂಪನಿಯೊಂದನ್ನು ಆರಂಭಿಸಿದ್ರು. ಯುವ ಜನತೆ ಮತ್ತು ಶಾಲೆಗಳಲ್ಲಿನ ಕಠಿಣ ಸಂಭಾಷಣೆಗಳನ್ನು ನಿಭಾಯಿಸಲು ಥಿಂಕ್2ಸ್ಪೀಕ್ ನೆರವಾಗುತ್ತಿದೆ.

image


ಲಿಝಿ ಅವರಿಗೆ ಮಾರ್ಕೆಟಿಂಗ್ ವಿಭಾಗದಲ್ಲಿ ಸುಮಾರು 15 ವರ್ಷಗಳ ಅನುಭವವಿದೆ. ಆಭರಣಗಳ ಬಗ್ಗೆ ಕೂಡ ಅವರಿಗೆ ಚೆನ್ನಾಗಿ ತಿಳಿದಿದೆ. ಸದ್ಯ ಲಿಝಿ ಎರಡು ಉದ್ಯಮವನ್ನು ಮುನ್ನಡೆಸುತ್ತಿದ್ದಾರೆ, ಒಂದು `ಯೆಲ್ಲೋ ಸ್ಟೋರಿ' ಹೆಸರಿನ ಮಾರ್ಕೆಟಿಂಗ್ ಏಜೆನ್ಸಿ, ಅಲ್ಲಿ ಫ್ರೀಲಾನ್ಸರ್‍ಗಳ ತಂಡ ಪ್ರಾಜೆಕ್ಟ್​​ಗಳನ್ನು ನಿರ್ವಹಿಸುತ್ತೆ. ಇನ್ನೊಂದು ಸಂಸ್ಥೆ `ಥಿಂಕ್2ಸ್ಪೀಕ್'.

``ನನ್ನ ಮಗು ಶಾಲೆಗೆ ಹೋಗಲು ಆರಂಭಿಸಿದಾಗ ಆಕೆಗೆ ಸಹಾಯ ಮಾಡಲು ಯಾವುದೇ ಟ್ರೈನಿಂಗ್ ಸೆಂಟರ್‍ಗಳು ಇರಲಿಲ್ಲ. ತಂದೆಯಿಲ್ಲದ ಮಗುವಿಗೆ ಇನ್ನಷ್ಟು ಪ್ರೋತ್ಸಾಹ, ಬೆಂಬಲದ ಅಗತ್ಯವಿತ್ತು. ಆಗ ನಾನು ನನ್ನ ಆತ್ಮೀಯ ಸ್ನೇಹಿತೆ ನಯೋಮಿ ವಾಟ್‍ಕಿನ್ಸ್ ಅವರೊಂದಿಗೆ ಈ ವಿಷಯ ಚರ್ಚಿಸಿದೆ. ವೃತ್ತಿಪರರ ಜೊತೆ ಸೂಕ್ಷ್ಮ ವಿಚಾರಗಳನ್ನು ಚರ್ಚಿಸುವಾಗ ಯುವ ಜನತೆ ಸಾಮಾನ್ಯವಾಗಿ ಎದುರಿಸುವ ಅಹಿತಕರ ಮೌನದ ಬಗ್ಗೆ ಏನನ್ನಾದ್ರೂ ಮಾಡಬೇಕೆಂದು ನಿರ್ಧರಿಸಿದೆವು. `ಥಿಂಕ್2ಸ್ಪೀಕ್' ಸಂಸ್ಥೆಯನ್ನು ಆರಂಭಿಸುವ ಮುನ್ನ ಸುಮಾರು ಒಂದು ವರ್ಷ ನಾವು ಯೋಜನೆ ರೂಪಿಸಿದ್ದೆವು'' ಎನ್ನುತ್ತಾರೆ ಲಿಝಿ.

``ಒಂದು ಕಂಡೆ ಉದ್ಯಮವನ್ನು ಸಂಭಾಳಿಸೋದು, ಇನ್ನೊಂದ್ಕಡೆ ಏಡ್ಸ್ ವಿರುದ್ಧ ಹೋರಾಟ ಇವೆರಡೂ ಸುಲಭವೇನಲ್ಲ. ಆದ್ರೆ ಸಿಕ್ಕ ಅವಕಾಶಗಳನ್ನೆಲ್ಲ ಉಪಯೋಗಿಸಿಕೊಂಡು ನಾನು ಪ್ರಯತ್ನ ಮುಂದುವರಿಸಿದ್ದೇನೆ. ಜೀವನದ ನೈಸರ್ಗಿಕ ನೆಟ್‍ವರ್ಕ್‍ಗಳಲ್ಲಿ ನಾನೂ ಒಬ್ಬಳು. ಪ್ರತಿ ದಿನ ನನ್ನ ಸಂಸ್ಥೆ ಥಿಂಕ್2ಸ್ಪೀಕ್‍ಗೆ ಮಾರ್ಕೆಟಿಂಗ್ ಅವಕಾಶಗಳನ್ನು ಹೆಚ್ಚಿಸಲು ಶ್ರಮಪಡುತ್ತೇನೆ. ಇನ್ನು ನನ್ನ ಮಗನಿಗೆ ನಾನೊಬ್ಬಳೇ ಪೋಷಕಿ, ಹಾಗಾಗಿ ಅವನ ಸಂಪೂರ್ಣ ಜವಾಬ್ಧಾರಿ ನನ್ನದು. ಅವನೊಂದಿಗೆ ಕೂಡ ಆದಷ್ಟು ಸಮಯ ಕಳೆಯಲು ಪ್ರಯತ್ನಿಸುತ್ತೇನೆ. ಬೆಳಗಿನ ಉಪಹಾರವನ್ನು ಜೊತೆಗೇ ಕುಳಿತು ಮಾಡುತ್ತೇವೆ'' ಎನ್ನುವ ಲಿಝಿ ತಮ್ಮ ದೈನಂದಿನ ದಿನಚರಿಯ ಬಗ್ಗೆ ವಿವರಿಸ್ತಾರೆ.

ಇದನ್ನು ಓದಿ:

ನೀವಿದ್ದಲ್ಲಿಗೆ ಅಮ್ಮನ ಕೈತುತ್ತು, ಇದು ಮೈಸೂರಿನ ಟೆಕ್ಕಿಗಳ ಕರಾಮತ್ತು

``ನನ್ನ ಕೆಲಸದಿಂದ ಯಾರಿಗಾದ್ರೂ ಕೊಂಚ ಪ್ರಯೋಜನವಾಗುತ್ತಿದೆ ಅನ್ನೋ ಸಮಾಧಾನವೇ ನನ್ನ ಪಾಲಿಗೆ ಅತಿ ದೊಡ್ಡ ಪ್ರಶಸ್ತಿ, ಅದು ಮಾರ್ಕೆಟಿಂಗ್ ಕ್ಲೈಂಟ್‍ಗೆ ನಮ್ಮ ಕ್ಯಾಂಪೇನ್‍ನಿಂದ ಹೊಸ ಒಪ್ಪಂದದ ಲಭಿಸುವಿಕೆ ಇರಬಹುದು, ಅಥವಾ ತರಗತಿಯಲ್ಲಿ ಮಗು ಮೊಟ್ಟ ಮೊದಲ ಬಾರಿಗೆ ಆತ್ಮವಿಶ್ವಾಸದಿಂದ ಮಾತನಾಡುವುದೇ ಇರಬಹುದು. ಇ ಪ್ರಕ್ರಿಯೆಯಲ್ಲಿ ಇರುವ ದೊಡ್ಡ ತಲೆನೋವು ಅಂದ್ರೆ ಅರ್ಹ ವ್ಯಕ್ತಿಗೆ ಸಹಾಯ ಮಾಡುವುದು ಮತ್ತು ಹಣ ಸುರಕ್ಷಿತಗೊಳಿಸುವುದು. ಯಾಕಂದ್ರೆ ಬಿಡ್ಡಿಂಗ್‍ಗಳಲ್ಲಿ ಪೇಪರ್‍ವರ್ಕ್ ಹೆಚ್ಚಾಗಿರುತ್ತೆ. ಸ್ಥಿತಿಸ್ಥಾಪಕತ್ವ ನನಗೆ ಸ್ಪೂರ್ತಿ. ಕೇವಲ ಬದುಕುವುದು ಮಾತ್ರವಲ್ಲ, ಅಭಿವೃದ್ಧಿಯನ್ನು ಆಯ್ಕೆ ಮಾಡಿಕೊಳ್ಳಬೇಕು, ಅದು ನಮಗೆ ಸ್ಪೂರ್ತಿಯಾಗುತ್ತದೆ. ಥಿಂಕ್2ಸ್ಪೀಕ್ ಜೊತೆ ಕಾರ್ಯನಿರ್ವಹಿಸುವ ಪ್ರತಿಯೊಬ್ಬರಲ್ಲೂ ನಾನಿದನ್ನು ಕಾಣುತ್ತೇನೆ'' ಅನ್ನೋದು ಲಿಝಿ ಅವರ ಸಮಾಧಾನದ ನುಡಿ.

ಥಿಂಕ್2ಸ್ಪೀಕ್ ಮೂಲಕ ಸಾಮಾಜಿಕ ಕಳಕಳಿ ಮೆರೆಯುತ್ತಿರುವ ಲಿಝಿ, ಹೆಸರಾಂತ ಎಚ್‍ಐವಿ ಕಾರ್ಯಕರ್ತ ಮಾರ್ಕ್ ಕಿಂಗ್ ಪಟ್ಟಿ ಮಾಡಿದ 2016 ವರ್ಷದ 16 ಎಚ್‍ಐವಿ ವಕೀಲರ ಪೈಕಿ ಸ್ಥಾನ ಪಡೆದಿದ್ದಾರೆ.

 ``ಈ ಮೂಲಕ ನಮ್ಮ ಕನಸು ನನಸಾಗಿದೆ, ನಾವು ಕೇವಲ ಎಚ್‍ಐವಿ ಮತ್ತು ಲೈಂಗಿಕ ಆರೋಗ್ಯದ ಬಗ್ಗೆ ಮಾತ್ರ ಜಾಗೃತಿ ಮೂಡಿಸುತ್ತಿಲ್ಲ. ನಷ್ಟ, ದೇಶೀಯ ನಿಂದನೆ, ಮತ್ತು ಮಾನಸಿಕ ಆರೋಗ್ಯ ಕೂಡ ನಾವು ಗಮನಹರಿಸಲೇಬೇಕಾದ ಕ್ಷೇತ್ರಗಳು'' ಅನ್ನೋದು ಲಿಝಿ ಅವರ ಅಭಿಪ್ರಾಯ.

 ಅದೇನೇ ಆದ್ರೂ ಏಡ್ಸ್‍ನಂತಹ ಭಯಾನಕ ರೋಗ ತಮ್ಮನ ಆವರಿಸಿಕೊಂಡ್ರೂ ಎದೆಗುಂದದೆ, ಒಬ್ಬ ಯಶಸ್ವಿ ಉದ್ಯಮಿ ಎನಿಸಿಕೊಂಡಿರುವ ಲಿಝಿ ಅವರ ಸಾಹಸವನ್ನು ಮೆಚ್ಚಲೇಬೇಕು. 

ಇದನ್ನು ಓದಿ

1. ಬಿಯರ್ ಕುಡಿದು ಬೋರ್ ಆಗಿದ್ರೆ ಬಿಯರ್ ಕೇಕ್ ತಿನ್ನಿ..

2. ಐಐಎಸ್‍ಸಿ ವಿಜ್ಞಾನಿಗಳು ಆವಿಷ್ಕರಿಸಿದ ಸೌರ ಕುಕ್ಕರ್ ಭವಿಷ್ಯದಲ್ಲಿ ಮಧ್ಯಮವರ್ಗದ ಗೃಹಿಣಿಯರ ಕೈಗುಟುಕುವ ಬೆಲೆಯಲ್ಲಿ ದೊರೆಯಬಹುದೇ?

3. ಮನೆ ಹುಡುಕಲು ಬಂತು ಮೊಬೈಲ್ ಆ್ಯಪ್!!!