ಗಂಗ್ನಂ ಸ್ಟೈಲ್ ಆಯ್ತು ಈಗ ಡ್ಯಾಡಿ ಸ್ಟೈಲ್ 

ಆರಾಭಿ ಭಟ್ಟಾಚಾರ್ಯ

0

ಎಸ್, ಪಿ.ಎಸ್.ವೈ ಮತ್ತೆ ಬಂದಿದ್ದಾನೆ. ಪಿ ಎಸ್ ವೈ ಅಂದ್ರೆ ಎಲ್ಲರಿಗೂ ಥಟ್ ಅಂತ ನೆನಪಿಗೆ ಬರೋಲ್ಲ ಆದ್ರೆ ಗಂಗ್ನಂ ಸ್ಟೈಲ್ ಅಂದ್ರೆ ಎಲ್ಲರಿಗೂ ಗೊತ್ತಾಗುತ್ತೆ…ಹೌದು ಈ ಗಂಗ್ನಂ ಸ್ಟೈಲ್ ನ ಹರಿಕಾರನೇ ಪಿ ಎಸ್ ವೈ…ಒಂದು ವಿಡಿಯೋ ಸಾಂಗ್ ಅನ್ನ ಇಷ್ಟರ ಮಟ್ಟಿಗೆ ಫೇಮಸ್ ಮಾಡಬಹುದು ಅಂತ ಇಡೀ ಪ್ರಪಂಚಕ್ಕೆ ತಿಳಿಸಿಕೊಟ್ಟ ಪಿ ಎಸ್ ವೈ ಮತ್ತೆ ತಮ್ಮ ತಂಡದೊಂದಿಗೆ ಯೂಟ್ಯೂಬ್ ಗೆ ಲಗ್ಗೆ ಇಟ್ಟಿದ್ದಾನೆ.. …ಕಳೆದ ಬಾರಿ ಕೊರಿಯಾದ ಸ್ಟೈಲ್ ಅನ್ನ ಡಿಫ್ರೆಂಟಾಗಿ ಪ್ರಪಂಚದ ಜನರಿಗೆ ಪರಿಚಯಿಸಿ ಎಲ್ಲರೂ ಅವನಂತೆ ಕುಣಿಯುವಂತೆ ಮಾಡಿದ ಪಿ ಎಸ್ ವೈ ಈ ಬಾರಿ ಡ್ಯಾಡಿಯನ್ನ ಜನರಿಗೆ ಪರಿಚಯಿಸ್ತಿದ್ದಾರೆ…2012ರಲ್ಲಿ ಬಿಡುಗಡೆಯಾಗಿದ್ದ ಗಂಗ್ನಂ ಸ್ಟೈಲ್ ಯೂಟ್ಯೂಬ್ ನಲ್ಲಿ 3 ಸಾವಿರ ಬಿಲಿಯನ್ ಲೈಕ್ ಗಿಟ್ಟಿಸಿಕೊಂಡಿತ್ತು…ಇದ್ರ ಜೊತೆಗೆ ಗಿನ್ನಿಸ್ ವರ್ಲ್ಡ್​​ ರೆಕಾರ್ಡ್ ಕೂಡ ಗಿಟ್ಟಿಸಿಕೊಂಡಿದ್ದು..

 30 ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ತಯಾರಾದ ಹಾಡುಗಳ ಪೈಕಿಯಲ್ಲಿ ಹಿಟ್ ಮ್ಯೂಸಿಕ್ ಲಿಸ್ಟ್ ನಲ್ಲಿ ಗಂಗ್ನಂ ಸ್ಟೈಲ್ ನಂಬರ್ 1 ಸ್ಥಾನ ಗಿಟಿಸಿಕೊಂಡಿದ್ದ ಹಾಡು..ಅದಷ್ಟೆ ಅಲ್ಲದೆ ಅಮೆರಿಕಾದ ಅಧ್ಯಕ್ಷರಾದ ಬರಾಕ್ ಓಬಾಮ ಅವ್ರೇ ಮೆಚ್ಚುಗೆ ಸೂಚಿಸಿದ ಸಾಂಗ್ ಅದು..ಪಿ ಎಸ್ ವೈ ಸೌಥ್ ಕೊರಿಯಾದ ಗಾಯಕ,ಗೀತರಚನಾಕಾರ ಹಾಗೂ ರ್ಯಾಪರ್ ಮತ್ತು ಸ್ಟೇಜ್ ಪರ್ಫಾಮರ್ ಈಗಾಗ್ಲೆ ಆರು ವಿಡಿಯೋ ಸಾಂಗ್ ರಿಲೀಸ್ ಮಾಡಿರೋ ಪಿ ಎಸ್ ವೈ ಹಾಡುಗಳ ಲಿಸ್ಟ್ ನಲ್ಲಿ ಹಿಟ್ ಆಗಿರೋದು ಒಂದು ಸಾಂಗ್ ಮಾತ್ರ ಅದು ಗಂಗ್ನಂ ಸ್ಟೈಲ್ ..ಮೂರು ವರ್ಷದ ಬಳಿಕ ಮತ್ತೆ ಯೂಟ್ಯೂಬ್ ನಲ್ಲಿ ಎಂಟ್ರಿಕೊಟ್ಟಿರೋ ಪಿ ಎಸ್ ವೈ ಮತ್ತದೆ ಹಿಟ್ ಕೊಡೋ ನಿರೀಕ್ಷೆಯಲ್ಲಿದ್ದಾರೆ

ಒಂದೇ ದಿನದಲ್ಲಿ ರೀಚ್ ಆಯ್ತು 6 ಬಿಲಿಯನ್ ಜನಕ್ಕೆ

ಗಂಗ್ನಂ ಸ್ಟೈಲ್ ನಂತ್ರ ಪಿ ಎಸ್ ವೈ ರಿಲೀಸ್ ಮಾಡಿರೋ ಡ್ಯಾಡಿ ಸಾಂಗ್ ಅನ್ನ ಒಂದೇ ದಿನದಲ್ಲಿ 6 ಮಿಲಿಯನ್ ಜನರು ವೀಕ್ಷಣೆ ಮಾಡಿದ್ದಾರೆ..ಈ ಬಾರಿ ಡ್ಯಾಡಿ ಸ್ಟೈಲ್ ಅನ್ನ ಪರಿಚಯ ಮಾಡ್ತಿರೋ ಪಿ ಎಸ್ ವೈ ಅದೇ ಡಿಫ್ರೆಂಟ್ ಸ್ಟೈಲ್ ,ಕಲರ್ ಫುಲ್ ಕಾಸ್ಟ್ಯೂಮ್ ಹಾಗೂ ಬ್ಯಾಡ್ ಸ್ಟೆಪ್‍ಗಳನ್ನ ಬಂಡವಾಳವನ್ನಾಗಿ ಮಾಡಿಕೊಂಡಿದ್ದಾರೆ.. ಪಿ ಎಸ್ ವೈ ಈ ಬಾರಿ ಪ್ರೇಕ್ಷಕರನ್ನ ಎಷ್ಟರ ಮಟ್ಟಿಗೆ ಸೆಳಿತಾರೆ ಅನ್ನೋದು ಸದ್ಯದ ಕುತೂಹಲವಾಗಿದೆ.. ಹೇ ವೇರ್ ಡಿಡ್ ಯು ಗೆಟ್ ಡಟ್ ಬಾಡಿ ಅಂತ ಸ್ಟಾರ್ಟ್ ಆಗುವ ಈ ಹಾಡಿನಲ್ಲಿ ಪಿ ಎಸ್ ವೈ ಎರಡು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ..37 ವರ್ಷದ ಪಿ ಎಸ್ ವೈ ಪೂರ್ತಿ ಹೆಸರು ಪಾರ್ಕ್ ಜೇ ಸ್ಯಾಂಗ್ ಎರಡು ವಿಭಿನ್ನ ಪಾತ್ರದಲ್ಲಿ ಕಾಣಿಸ್ಕೊಂಡಿರೋ ಪಿ ಎಸ್ ವೈ ಬೇಬಿ ಹಾಗೂ ಓಲ್ಡ್ ಮ್ಯಾನ್ ಲುಕ್ ನಲ್ಲಿ ಆಕ್ಟ್ ಮಾಡಿದ್ದಾರೆ…ಎರಡು ಕ್ಯಾರೆಕ್ಟರ್ ಅನ್ನೂ ಸಮರ್ಥವಾಗಿ ನಿಭಾಯಿಸಿದ್ದಾರೆ…ಎಲ್ಲಿಯೂ ತನ್ನ ಸಾಮರ್ಥ್ಯವನ್ನು ಬಿಟ್ಟು ಕೊಡದೇ ನಟಿಸಿರೋ ಪಿ ಎಸ್ ವೈ ಈಗಾಗ್ಲೆ ಪ್ರೇಕ್ಷಕರನ್ನ ಸೆಳೆಯೋದ್ರ ಜೊತೆಗೆ ಅವ್ರ ಅಭಿಮಾನಿಗಳಿಗಾಗಿ ಹೊಸ ಸಿಗ್ನೇಚರ್ ಸ್ಟೇಪ್ಸ್ ಗಳನ್ನ ತಂದಿದ್ದಾರೆ.