ಮಗು ಯಾರದ್ದೋ...! ಎದೆಹಾಲು ನೀಡುವವರು ಇನ್ಯಾರೋ..!

ಟೀಮ್​ ವೈ.ಎಸ್​. ಕನ್ನಡ

ಮಗು ಯಾರದ್ದೋ...! ಎದೆಹಾಲು ನೀಡುವವರು ಇನ್ಯಾರೋ..!

Thursday May 25, 2017,

2 min Read

ಅಮ್ಮನ ಎದೆಹಾಲು ಅಮೃತಕ್ಕೆ ಸಮ. ಎದೆಹಾಲಿನಲ್ಲಿರುವ ಶಕ್ತಿ ಇನ್ಯಾವುದರಲ್ಲೂ ಇಲ್ಲ. ಆದ್ರೆ ಇತ್ತೀಚಿನ ದಿನಗಳಲ್ಲಿ ಎದೆಹಾಲು ಉಣಿಸುವ ಅಮ್ಮಂದಿರ ಸಂಖ್ಯೆ ಕಡಿಮೆ ಆಗುತ್ತಿದೆ. ಇದಕ್ಕೆ ಸ್ಟೈಲ್​​ ಕಾನ್ಸೆಪ್ಟ್​ನಿಂದ ಹಿಡಿದು ಹಲವು ಕಾರಣಗಳು ಇವೆ. UNICEF ವರದಿ ಪ್ರಕಾರ ಹುಟ್ಟಿದ ಒಂದು ಗಂಟೆಯೊಳಗೆ ಮಗುವಿಗೆ ಎದಎಹಾಲು ಉಣಿಸುವ ಅಮ್ಮಂದಿರ ಸಂಖ್ಯೆ ಕೇವಲ ಶೇಕಡಾ 25ರಷ್ಟು ಮಾತ್ರ ಇದೆ. ಇಷ್ಟು ಮಾತ್ರ ಅಲ್ಲ, 6 ತಿಂಗಳ ತನಕ ಎದೆಹಾಲು ಉಣಿಸುವ ತಾಯಂದಿರ ಸಂಖ್ಯೆ ಕೂಡ ಕಡಿಮೆ ಆಗುತ್ತಿದೆ. ಎದೆಹಾಲಿನ ಮಹತ್ವ ಎಲ್ಲಾ ಸ್ತ್ರೀಯರಿಗೆ ಮತ್ತು ಅಮ್ಮಂದಿರಿಗೆ ಗೊತ್ತಿದೆ. ಆದ್ರೆ ಬ್ಯೂಟಿಯನ್ನು ಕಾಪಾಡಿಕೊಳ್ಳುವ ಸಲುವಾಗಿ ಮತ್ತು ಇತರೆ ಕಾರಣಗಳಿಂದಾಗಿ ಮಗುವಿಗೆ ಎದೆಹಾಲು ಉಣಿಸಲು ಹಿಂದೇಟು ಹಾಕುತ್ತಿದ್ದಾರೆ.

image


ಎದೆಹಾಲು ಇಲ್ಲ ಅನ್ನುವ ಕಾರಣಕ್ಕೆ ಮಕ್ಕಳನ್ನು ಉಪವಾಸ ಹಾಕಲು ಸಾಧ್ಯವಿಲ್ಲ. ಅಷ್ಟೇ ಅಲ್ಲ ಎದೆಹಾಲನ್ನು ಕಡೆಗಣಿಸಲು ಕೂಡ ಅಸಾಧ್ಯ. ಈ ಎಲ್ಲಾ ಕಾರಣಗಳಿಂದಾಗಿ ಮಿಲ್ಕ್ ಬ್ಯಾಂಕ್ ಆರಂಭವಾಗಿತ್ತು. ಭಾರತದಲ್ಲಿ ಮಿಲ್ಕ್ ಬ್ಯಾಂಕ್ ಆರಂಭವಾಗಿದ್ದು 1989ರಲ್ಲಿ. ಸುಮಾರು 2 ದಶಕಗಳ ಕಾಲ ಇಡೀ ದೇಶದಲ್ಲಿ ಒಂದೇ ಒಂದು ಎದೆ ಹಾಲು ಬ್ಯಾಂಕ್ ಇತ್ತು. ಆದ್ರೆ ಇತ್ತೀಚಿನ ದಿನಗಳಲ್ಲಿ ಇವುಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕಳೆದ ವರ್ಷದ ವರದಿ ಪ್ರಕಾರ ಭಾರತದಲ್ಲಿ ಸುಮಾರು 22 ಮಿಲ್ಕ್ ಬ್ಯಾಂಕ್​ಗಳು ಮಾತ್ರ ಇದ್ದವು. ಅಚ್ಚರಿ ಅಂದ್ರೆ ಭಾರತಕ್ಕಿಂತ 5 ಪಟ್ಟು ಕಡಿಮೆ ಜನಸಂಖ್ಯೆ ಹೊಂದಿರುವ ಬ್ರೆಜಿಲ್​ನಂತಹ ರಾಷ್ಟ್ರಗಳಲ್ಲಿ ಸುಮಾರು 200ಕ್ಕೂ ಅಧಿಕ ಮಿಲ್ಕ್ ಬ್ಯಾಂಕ್​ಗಳಿವೆ.

ಇದನ್ನು ಓದಿ: ಮತ್ತೆ ಬಂತು ನೊಕಿಯಾ- ಹಳೆಯ ಮಾಡೆಲ್​ಗೆ ಸ್ಮಾರ್ಟ್ ಟಚ್..! 

ಭಾರತದಲ್ಲಿ ಪರಿಸ್ಥಿತಿ ಬದಲಾಗುತ್ತಿದೆ. ನ್ಯಾಚುರಲ್ ಪೇರೆಂಟಿಂಗ್ ಕಮ್ಯೂನಿಟಿಯಂತಹ ನೆಟ್ ವರ್ಕ್ ಗಳ ಮೂಲಕ ಬ್ರೆಸ್ಟ್ ಮಿಲ್ಕ್ ಡೊನೇಷನ್ ಅನ್ನು ಹೆಚ್ಚುಗೊಳಿಸಲಾಗುತ್ತಿದೆ. ಇದು ಎದೆಹಾಲು ದಾನ ಮಾಡುವವರ ಸಂಖ್ಯೆಯನ್ನು ದಿನದಿಂದ ದಿನಕ್ಕೆ ಹೆಚ್ಚಿಸುತ್ತಿದೆ. ಉದಾಹರಣೆಗೆ ಶರಣ್ಯ ಗೋವಿಂದರಾಜುರಂತಹ ಅಮ್ಮಂದಿರು ದಿನವೊಂದಕ್ಕೆ ಸುಮಾರು 500 ಎಂ.ಎಲ್ ನಿಂದ 750 ಎಂ.ಎಲ್ ತನಕ ಎದೆಹಾಲನ್ನು ದಾನ ಮಾಡುತ್ತಿದ್ದಾರೆ. ಈ ಮೂಲಕ ಎದೆಹಾಲಿನ ಪೋಷಣೆ ಇಲ್ಲದ ಮಕ್ಕಳಿಗೆ ನೆರವಾಗುತ್ತಿದ್ದಾರೆ. ಮಕ್ಕಳು ಆರೋಗ್ಯವಂತರಾಗಿರಲು ತಾಯಿಯ ಎದೆಹಾಲು ಅತೀ ಮುಖ್ಯವಾಗಿದೆ.

“ನನ್ನ ಗಂಡ ರಕ್ತದಾನ ಮಾಡುತ್ತಾರೆ. ನಾನು ಎದೆಹಾಲು ದಾನ ಮಾಡುತ್ತಿದ್ದೇನೆ. ಇಬ್ಬರೂ ಕೂಡ ಮನುಕುಲಕ್ಕೆ ಸಹಾಯ ಮಾಡುತ್ತಿದ್ದೇವೆ ಅನ್ನುವ ಖುಷಿ ನಮ್ಮಲ್ಲಿದೆ. ಅಪೌಷ್ಠಿಕತೆಯಿಂದ ಬಳಲುತ್ತಿರುವ ಕೆಲವು ಮಕ್ಕಳು ಕೇವಲ ನನ್ನ ಅಂಗೈಯಷ್ಟು ದೊಡ್ಡದಾಗಿರತ್ತವೆ. ಆದರೆ ಅಂತಹ ಮಕ್ಕಳಿಗೆ ನೆರವು ಸಿಗಬಹುದು ಅನ್ನುವುದು ನನ್ನ ಆಶಯ. ಹೀಗಾಗಿ ನಾನು ಎದೆಹಾಲು ದಾನ ಮಾಡುತ್ತಿದ್ದೇನೆ ”
- ಶರಣ್ಯ ಗೋವಿಂದರಾಜು, ಎದೆಹಾಲು ದಾನಿ

ಈ ನೆಟ್​ವರ್ಕ್​ನಲ್ಲಿ ವಹಿದಾ ಸತೀಶ್ ಕುಮಾರ್ ಮತ್ತೊಬ್ಬರು. ಶರಣ್ಯ ಮತ್ತು ವಹೀದಾರಂತಹ ಮಹಿಳೆಯರಿಂದಾಗಿ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ಕಡಿಮೆ ಆಗುತ್ತಿದೆ. ಅಷ್ಟೇ ಅಲ್ಲ ಎದೆಹಾಲು ಸೇವಿಸುವ ಮಕ್ಕಳಲ್ಲಿ ಅನಾರೋಗ್ಯದ ಸಮಸ್ಯೆಯೂ ಕಡಿಮೆ ಆಗಿದೆ. ಎದೆಹಾಲು ಸಂಗ್ರಹಣೆಗೆ ಕೆಲವು ಆಸ್ಪತ್ರೆಗಳು ಕೂಡ ಸಹಾಯ ಮಾಡುತ್ತಿವೆ. ಎದೆಹಾಲು ದಾನ ಮಾಡುವ ಅಮ್ಮಂದಿರ ಜೊತೆ ಕೆಲವು ಒಪ್ಪಂದಗಳನ್ನು ಮಾಡಿಕೊಳ್ಳುತ್ತಿವೆ. ಈ ಮೂಲಕ ಎಲ್ಲಾ ಮಕ್ಕಳಿಗೂ ಎದೆಹಾಲು ಸಿಗುವಂತೆ ಮಾಡುವ ಪ್ರಯತ್ನ ನಡೆಯುತ್ತಿದೆ.

ಎದೆಹಾಲು ಕೇವಲ ಎಳೆಯ ಮಕ್ಕಳ ಹೊಟ್ಟೆ ತುಂಬಿಸುತ್ತಿಲ್ಲ. ಬದಲಾಗಿ ಮಕ್ಕಳಿಗೆ ಅಗತ್ಯವಿರುವ ಪೋಷಕಾಂಶಗಳನ್ನು ನೀಡುತ್ತಿವೆ. ರೋಗ ನಿರೋಧಕ ಶಕ್ತಿಗಳನ್ನು ಕೂಡ ಎದೆಹಾಲು ನೀಡುತ್ತದೆ. ಹುಟ್ಟಿದ ಮಗುವಿನ ಭವಿಷ್ಯವನ್ನು ಕೂಡ ಈ ಎದೆಹಾಲು ನಿರ್ಧಾರ ಮಾಡುತ್ತದೆ ಅನ್ನುವುದು ಸುಳ್ಳಲ್ಲ.

ಇದನ್ನು ಓದಿ:

1. ಆ್ಯಸಿಡ್ ದಾಳಿಗೆ ಒಳಗಾದ ಸಂತ್ರಸ್ಥೆ- 17 ಶಸ್ತ್ರಚಿಕಿತ್ಸೆಗಳ ಬಳಿಕ ಕಂಕಣ ಭಾಗ್ಯ..!

2. ಎಂಟ್ರಿ ಲೆವೆಲ್ ಸ್ಮಾರ್ಟ್​ಫೋನ್​ಗಳಿಗೆ ಹೊಸ ಟಚ್- ಗೂಗಲ್​ನಿಂದ "ಆ್ಯಂಡ್ರಾಯ್ಡ್ ಗೊ" ಬಿಡುಗಡೆ..!

3. ಬಾಂಗ್ಲಾ, ಶ್ರೀಲಂಕಾಕ್ಕಿಂತಲೂ ಭಾರತ ಹಿಂದೆ..!