ಹಿರಿ ಜೀವಗಳಿಗೆ ಜೀವತುಂಬುತ್ತಿದೆ ‘ದಿ ಸಿಲ್ವರ್ ಸರ್ಫರ್ಸ್​ ಕ್ಲಬ್’..!

ಟೀಮ್​​ ವೈ.ಎಸ್. ಕನ್ನಡ

ಹಿರಿ ಜೀವಗಳಿಗೆ ಜೀವತುಂಬುತ್ತಿದೆ ‘ದಿ ಸಿಲ್ವರ್ ಸರ್ಫರ್ಸ್​ ಕ್ಲಬ್’..!

Friday November 27, 2015,

3 min Read

ನಾವು ಯಾವಾಗ ಮುದುಕರಾಗುತ್ತೇವೆ... ನಗುವಿಗೆ ಯಾವಾಗ ಗುಡ್ ಬೈ ಹೇಳುತ್ತೇವೆಯೋ ಆವಾಗ..!

ಇದು ಇತ್ತೀಚಿನ ದಿನಗಳಲ್ಲಿ ನಮ್ಮ ಸುತ್ತ ಮುತ್ತ ನಡೆಯುತ್ತಿರುವ ವಿದ್ಯಮಾನ.

ನಮಗೆಲ್ಲರಿಗೆ ತಿಳಿದಿರುವಂತೆ ನಮ್ಮ ಸುತ್ತ ಮುತ್ತ ಇರುವ ನಮ್ಮವರು ಬಹು ಬೇಗ ಮುದುಕರಾಗುತ್ತಾರೆ. ಸರ್ಕಾರ ಮತ್ತು ಸ್ವಯಂ ಸೇವಾ ಸಂಸ್ಥೆಗಳು ಅವರ ಕಲ್ಯಾಣಕ್ಕೆ ಶ್ರಮಿಸುತ್ತಿದ್ದರೂ ಅದು ಸಾಕಾಗುತ್ತಿಲ್ಲ.. ಸಮಸ್ಯೆಯ ವಿಶ್ಲೇಷಣೆ ನಡೆಯುತ್ತಿದೆಯೇ ಹೊರತು ನಿಜವಾದ ಸಾಂತ್ವನ ಈ ಸಮುದಾಯಕ್ಕೆ ದೊರೆಯುತ್ತಿಲ್ಲ. ಅವರ ಭಾವನೆಗಳನ್ನು ಅರ್ಥಮಾಡಿಕೊಳ್ಳುವ, ಅವರಿಗೆ ನಿಜವಾದ ಸಾಂತ್ವನ ಹೇಳುವ ಮನಸ್ಸು ಕಂಡು ಬರುತ್ತಿಲ್ಲ. ಆದರೆ ಈ ಎಲ್ಲ ಪ್ರಶ್ನೆಗಳಿಗೆ ಇದೀಗ ಉತ್ತರ ದೊರೆತಿದೆ. ದಿ ಸಿಲ್ವರ್ ಸರ್ಫರ್ಸ್​ ಕ್ಲಬ್- The Silver Surfers Club ಜನ್ಮ ತಳೆದಿದೆ. ಈ ಪ್ರಶ್ನೆ ಎಲ್ಲರ ಮನಸ್ಸಿನಲ್ಲಿ ಮೂಡಿದ್ದರೂ ಯಾರೂ ಕೂಡ ಉತ್ತರ ಕಂಡು ಹಿಡಿಯುವ ಪ್ರಯತ್ನ ನಡೆಸಿರಲಿಲ್ಲ.. ಆದರೆ ಬೆಂಗಳೂರಿನ ದೀಪ್ತಿ ವರ್ಮಾ ನರೇನ್ ತಮ್ಮ ಕನಸಿಗೆ ರೂಪ ಕೊಟ್ಟಿದ್ದಾರೆ. ದಿ ಸಿಲ್ವರ್ ಸರ್ಫರ್ಸ್​ ಕ್ಲಬ್ ಅವರ ಕನಸಿನ ಕೂಸು.

image


ದಿ ಸಿಲ್ವರ್ ಸರ್ಫರ್ಸ್​ ಕ್ಲಬ್.. ಹುಟ್ಟು, ಬೆಳವಣಿಗೆ

2014ರ ಆಗಸ್ಚ್ ತಿಂಗಳಲ್ಲಿ ದೀಪ್ತಿ ಅವರ ಕನಸು ಸಾಕಾರಗೊಂಡಿತು. ದಿ ಸಿಲ್ವರ್ ಸರ್ಫರ್ಸ್​ ಕ್ಲಬ್ ಅಸ್ತಿತ್ವಕ್ಕೆ ಬಂತು. ಹೆಚ್ಚು ಪ್ರಾಯವಾಗಿರದ ಅಂದರೆ ಹಿರಿ ಜೀವನ ಎಂಬ ಪಟ್ಟ ಅಲಂಕರಿಸಿದ ಹಲವು ಮಂದಿ ಇದನ್ನು ಸ್ವಾಗತಿಸಿದರು. ಬಹಳ ಬೇಗನೆ ಬೆಂಗಳೂರಿನಲ್ಲಿ ಆರಂಭಗೊಂಡ ಈ ಸಂಸ್ಥೆ ಭಾರತದ ಇತರ ನಗರಗಳಿಗೂ ತನ್ನ ವ್ಯಾಪ್ತಿ ವಿಸ್ತರಿಸಿತು. 55 ಪ್ಲಸ್ ವಯೋಮಾನದವರನ್ನೇ ಗುರಿಯಾಗಿರಿಸಿಕೊಂಡು ಚಟುವಟಿಕೆಗಳನ್ನು ನಡೆಸಲಾಯಿತು. ಈ ತಂಡದ ಸದಸ್ಯರಲ್ಲಿ ಆತ್ಮ ವಿಶ್ವಾಸ ಮೂಡಿಸುವ ಸಂಕಲ್ಪ-ದೀಕ್ಷೆ ಕೈಗೊಳ್ಳಲಾಯಿತು.

ದಿ ಸಿಲ್ವರ್ ಸರ್ಫರ್ಸ್​ ಕ್ಲಬ್ ಸಂಕ್ಷಿಪ್ತವಾಗಿ ಹೇಳುವುದಾದರೆ ಟಿಎಸ್ಎಸ್​ಸಿ ಹುಟ್ಟಿನ ಬಗ್ಗೆ ದೀಪ್ತಿ ಈ ರೀತಿ ಹೇಳುತ್ತಾರೆ. ನಮ್ಮಗೆ ಚೆನ್ನಾಗಿ ಗೊತ್ತಿದೆ. ಬೆಳ್ಳಿ ಕೂದಲು ಅನುಭವಕ್ಕೆ ಇನ್ನೊಂದು ಹೆಸರಾಗಿದೆ. ಅವರಲ್ಲಿರುವ ಅನುಭವದ ಬುತ್ತಿ ಅಗಾಧ. ಅನರ್ಘ್ಯ. ಇದು ಎಲ್ಲರಿಗೂ ತಿಳಿದಿದೆ. ಅದನ್ನು ಗುರುತಿಸಿ ಅವರನ್ನು ಅಭಿನಂದಿಸುವ ಕೆಲಸ ಮಾಡುತ್ತಿದ್ದೇವೆ. ಅವರ ಉತ್ಪನ್ನಗಳಿಗೆ ಆನ್ ಲೈನ್ ಮೂಲಕ ಬಳಕೆದಾರರನ್ನು ಪತ್ತೆ ಹಚ್ಚುತ್ತೇವೆ. ಇದರಿಂದ ಹಿರಿ ಚೇತನಗಳನ್ನು ವರ್ತಮಾನದೊಂದಿಗೆ ಬೆಸೆಯುವ ಕೆಲಸ ಮಾಡಲಾಗುತ್ತದೆ. ಇದರ ಜೊತೆ ಜೊತೆಗೆ ಯುವ ಜನಾಂಗ , ಹಿರಿಯರ ಕುರಿತಾದ ಪರಿಕಲ್ಪನೆಯನ್ನು ಬದಲಾಯಿಸುವ ಪ್ರಯತ್ನ ಕೂಡ ಮಾಡುತ್ತಿದ್ದೇವೆ ಎನ್ನುತ್ತಾರೆ ದೀಪ್ತಿ.

image


ದಿ ಸಿಲ್ವರ್ ಸರ್ಫರ್ಸ್​ ಕ್ಲಬ್ ಚಟುವಟಿಕೆ

ಹಿರಿಯ ನಾಗರಿಕರ ಕಲ್ಯಾಣವೇ ದಿ ಸಿಲ್ವರ್ ಸರ್ಫರ್ಸ್​ ಕ್ಲಬ್​ನ ಕಾಳಜಿಯಾಗಿದೆ. ಅವರಲ್ಲಿ ಅಡಗಿರುವ ಪ್ರತಿಭೆಯ ಗಣಿಯನ್ನು ಅನಾವರಣಗೊಳಿಸುವುದೇ ಧ್ಯೇಯವಾಗಿದೆ. ಭಾವನಾತ್ಮಕ, ಆರ್ಥಿಕ, ಸಾಂಸ್ಕೃತಿಕ, ಮನೋರಂಜನಾತ್ಮಕ ಮಾರ್ಗಗಳ ಮೂಲಕ ಜೀವನೋತ್ಸಾಹವನ್ನು ಬಡಿದೆಬ್ಬಿಸಲಾಗುತ್ತದೆ.

ಸ್ಫೂರ್ತಿ ತುಂಬಲಾಗುತ್ತಿದೆ ಎನ್ನುತ್ತಾರೆ ದೀಪ್ತಿ

ತಮ್ಮ ಅಭಿರುಚಿಯನ್ನು ಜೀವಂತವಾಗಿರಿಸುವುದು, ತಮ್ಮ ಹವ್ಯಾಸಗಳನ್ನು ಮುಂದುವರಿಸುವುದು ಮತ್ತು ಸಾಮಾಜಿಕ ಜಾಲ ತಾಣಗಳ ಮೂಲಕ ತಮ್ಮ ಉತ್ಪನ್ನಗಳ ಮಾರುಕಟ್ಟೆಗೆ ವೇದಿಕೆ ಕಲ್ಪಿಸುವುದರ ಮೂಲಕ, ಹಿರಿಯ ನಾಗರಿಕರಲ್ಲಿ ಜೀವನ ಪ್ರೇಮ ಹೆಚ್ಚಿಸುತ್ತದೆ. ಧನಾತ್ಮಕ ಚಿಂತನೆ ಪ್ರೇರೇಪಿಸುತ್ತದೆ . ಇದು ದೀಪ್ತಿ ಮನದಾಳದ ಮಾತು. ಶುಲ್ಕವಾಗಿ ಬಂದ ಲಾಭದಲ್ಲಿ ಅತೀ ಕಡಿಮೆ ಹಣವನ್ನು ಸಂಸ್ಥೆ ಹಿಡಿದಿಟ್ಟುಕೊಳ್ಳುತ್ತದೆ.

ಇಷ್ಟಕ್ಕೆ ಮಾತ್ರ ಚಟುವಟಿಕೆ ಸೀಮಿತಗೊಂಡಿಲ್ಲ. ಸದಸ್ಯರಿಗಾಗಿ ಮನೋ ರಂಜನಾ ಕೂಟ, ಪ್ರವಾಸ , ಪರಸ್ಪರ ತಿಳಿಯುವ ವೇದಿಕೆ. ಭೋಜನ ಕೂಟ ಹೀಗೆ ನಾನಾ ವೈವಿಧ್ಯ ಚಟುವಟಿಕೆಗಳ ಮೂಲಕ ಎಲ್ಲರನ್ನು ಬೆಸೆಯುವ ಪ್ರಯತ್ನ ನಡೆಸಲಾಗುತ್ತಿದೆ. ಈಗಾಗಲೇ ಒಂದು ಯಶಸ್ವಿ ಪ್ರವಾಸ ಪೂರ್ಣಗೊಳಿಸಿರುವ ಸಂಸ್ಥೆ, ಹಂಪಿಗೆ ತೆರಳಲು ಸಿದ್ಧ ನಡೆಸಿದೆ. ಒಳ್ಳೆಯ ಕೆಲಸಕ್ಕೆ ಇತರ ಸಂಘ ಸಂಸ್ಥೆಗಳ ಸಹಕಾರ ಒಳ್ಳೆಯ ಆಲೋಚನೆ, ಕೆಲಸಕ್ಕೆ ಒಳ್ಳೆಯ ಮನಸ್ಸು ಸ್ಪಂದಿಸುತ್ತವೆ ಎಂಬುದಕ್ಕೆ ಈ ಬೆಳವಣಿಗೆಯೇ ಸಾಕ್ಷಿ. ಹಲವು ಸಂಘ ಸಂಸ್ಥೆಗಳು ಟಿಎಸ್ಎಸ್​ಸಿ ಜೊತೆ ಕೈ ಜೋಡಿಸಿವೆ. ವೇದಿಕೆ ಒದಗಿಸುವುದು, ರಿಯಾಯಿತಿ ನೀಡುವುದು, ಧ್ವನಿ ವರ್ಧಕಗಳ ನೆರವು ಹೀಗೆ ಪಟ್ಟಿ ಉದ್ದವಿದೆ. ಕೆಲವೇ ಸಂಸ್ಥೆಗಳನ್ನು ಹೆಸರಿಸುತ್ತೇನೆ. ಓಪಸ್, ಫಾವ, ರೋಯಲ್ ಸೇರಿದಂತೆ ಪ್ರತಿಷ್ಠಿತ ಸಂಸ್ಥೆಗಳು ನೆರವು ನೀಡಿವೆ.

ಟಿಎಸ್​ಎಸ್​​ಸಿ ಕಾರ್ಯ ಚಟುವಟಿಕೆ

ಟಿಎಸ್ಎಸ್​​ಸಿ ಸಂಸ್ಥೆಯ ಸದಸ್ಯತ್ವ ಪಡೆಯುವುದು ಬಹಳ ಸುಲಭ. ವಾರ್ಷಿಕ ಒಂದು ಸಾವಿರ ರೂಪಾಯಿ ಪಾವತಿಸಿ, ವಾರ್ಷಿಕ ಸದಸ್ಯತ್ವ ಪಡೆಯಬಹುದು. ಒಂದು ವರ್ಷದಲ್ಲಿ ಸದಸ್ಯರ ಸಂಖ್ಯೆ 100 ತಲುಪಿದೆ. ಫೇಸ್ ಬುಕ್ ನಲ್ಲಿ ಮೂರು ಸಾವಿರಕ್ಕೂ ಹೆಚ್ಚು ಹಿಂಬಾಲಕರು ಇದ್ದಾರೆ. ಇದೀಗ ದೆಹಲಿ, ಮುಂಬೈ. ಚೆನ್ನೈನಲ್ಲಿ ಕೂಡ ಕಾರ್ಯಕ್ಷೇತ್ರ ವಿಸ್ತರಿಸಲು ಚಿಂತನೆ ನಡೆಸಲಾಗಿದೆ. ಈ ಮೂಲಕ ಹೆಚ್ಚಿನ ಜನರಿಗೆ ಸೇವೆ ನೀಡುವ ಗುರಿ ಹೊಂದಲಾಗಿದೆ.

image


ವಿನೂತನ ಪ್ರಯತ್ನಕ್ಕೆ ಸ್ಫೂರ್ತಿ ಯಾರು..?

ಚಿಕ್ಕಂದಿನಿಂದಲೂ ಹಿರಿಯರ ಬಗ್ಗೆ ವಿಶೇಷ ಪ್ರೀತಿ, ಮಮತೆ ಬೆಳೆಸಿಕೊಂಡಿದ್ದ ದೀಪ್ತಿಗೆ ಹೊಸ ಕನಸಿಗೆ ತಮ್ಮ ಅತ್ತೆಯೇ ಸ್ಫೂರ್ತಿಯ ಚಿಲುಮೆ. ಅತ್ಯುತ್ತಮ ಪಾಕ ಪ್ರವೀಣೆಯಾಗಿರುವ ದೀಪ್ತಿ ಅತ್ತೆ ಶೋಭಾ ನರೇನ್, ಇವರ ಬೆನ್ನೆಲುಬು. ದೀಪ್ತಿ, ತಮ್ಮ ಅತ್ತೆ ಶೋಭಾ ನರೇನ್ ಅವರ ಉತ್ಪನ್ನಗಳನ್ನು ಆನ್ ಲೈನ್ ಮೂಲಕ ಪ್ರಚುರ ಪಡಿಸಿದರು. ಇದಕ್ಕೆ ಪತ್ರಿಕೆಯಲ್ಲಿ ಪ್ರಕಟವಾಗ ಲೇಖನವೇ ಸ್ಫೂರ್ತಿ ನೀಡಿತ್ತು. ಈ ಪ್ರಯತ್ನಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ದೊರೆತ ಹಿನ್ನೆಲೆಯಲ್ಲಿ ಕನಸಿಗೆ ರೂಪ ಕೊಡಲು ದೀಪ್ತಿ ನಿರ್ಧರಿಸಿದರು. ಈ ಆನ್ ಲೈನ್ ಮಾರಾಟಕ್ಕೆ ನಾನಿ ಎಂದು ಹೆಸರಿಟ್ಟ ದೀಪ್ತಿ, 60 ರ ಹರೆಯದಲ್ಲೂ ಹಿರಿಯ ನಾಗರಿಕರೊಬ್ಬರು ಹೇಗೆ ಸಮಾಜಕ್ಕೆ ಉಪಯುಕ್ತ ಕೊಡುಗೆ ನೀಡಬಲ್ಲರು ಎಂಬುದನ್ನು ಸಾಧಿಸಿ ತೋರಿಸಿದರು. ಆನ್ ಲೈನ್ ಮೂಲಕ ಉತ್ಪನ್ನಗಳ ಮಾರಾಟ ನಿರೀಕ್ಷೆ ಮೀರಿ ಬೆಳೆದಾಗ ದೀಪ್ತಿ ಅವರೇ ಅಚ್ಚರಿ ಪಟ್ಟರು. ಹಿರಿಯ ನಾಗರಿಕರು ಪ್ರತಿಭಾಶಾಲಿಗಳು. ಅವರಿಗೆ ಬೇಕಾಗಿರುವುದು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಸಹಾಯ ಎಂಬ ಮನವರಿಕೆ ದೀಪ್ತಿ ಅವರಿಗಾಯಿತು. ಈ ನಿಟ್ಟಿನಲ್ಲಿ ಟಿಎಸ್ಎಎಸ್​ಸಿ ಸಂಸ್ಥೆಯ ಕನಸು ಕಟ್ಟಿದರು.

ದೀಪ್ತಿ ಅವರ ದಿಟ್ಟ ಹೆಜ್ಜೆ

ಹಿರಿಯ ಚೇತನಗಳ ಮೇಲೆ ಅಂದರೆ ಹಿರಿಯ ನಾಗರಿಕರ ಮೇಲೆ ದೀಪ್ತಿ ಇರಿಸಿದ್ದ ವಿಶ್ವಾಸವನ್ನು ಅವರು ಹುಸಿಗೊಳಿಸಲಿಲ್ಲ. ಹವ್ಯಾಸಗಳು, ಅಭಿರುಚಿಗಳು, ಮನೋರಂಜನೆ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಹಿರಿಯ ನಾಗರಿಕರನ್ನು ಸೇರ್ಪಡೆಗೊಳಿಸುವ ಮೂಲಕ ಅವರ ಕಲಾಭಿರುಚಿಯನ್ನು ಪೋಷಿಸಲಾಯಿತು.

ಸಾಂತ್ವನದ ಜೊತೆಗೆ ಸ್ನೇಹ ಹಸ್ತ ಚಾಚುವ ಮೂಲಕ ನಿಮ್ಮೊಂದಿಗೆ ನಾವಿದ್ದೇವೆ.. ಮುನ್ನಡೆಯಿರಿ ಎಂಬ ಸಂದೇಶ ರವಾನಿಸಲಾಯಿತು. ಈ ನಂಬಿಕೆಯನ್ನು ಹಿರಿಯ ನಾಗರಿಕರು ಇವತ್ತಿಗೂ ಹುಸಿಗೊಳಿಸಿಲ್ಲ. ಇತ್ತೀಚೆಗೆ ಯು ಬಿ ಸಿಟಿಯಲ್ಲಿ ನಡೆದ ಕಾರ್ಯಕ್ರಮ ಎಲ್ಲರನ್ನು ಅಚ್ಚರಿಗೊಳಿಸಿತು. ಸ್ವಲ್ಪ ಪ್ರೋತ್ಸಾಹ ಇದ್ದರೆ ಜೀವನೋತ್ಸಾಹ ಎಂದಿಗೂ ಬತ್ತದು ಎಂಬುದನ್ನು ಹಿರಿಯ ನಾಗರಿಕರು ಜಗತ್ತಿಗೆ ಸಾರಿ ಸಾರಿ ಹೇಳಿದರು.

ಲೇಖಕರು: ಸೌಮಿತ್ರಾ ಕೆ ಚಟರ್ಜಿ

ಅನುವಾದಕರು: ಎಸ್​​.ಡಿ.

    Share on
    close