ಹೆಣ್ ಮಕ್ಳೇ  ಸ್ಟ್ರಾಂಗು ಗುರು -ನಾವೆಲ್ಲಾ ಒಂದೇ... 

ಆರಾಭಿ ಭಟ್ಟಾಚಾರ್ಯ

0

ಹೆಣ್ ಮಕ್ಳು ಸ್ಟ್ರಾಂಗು ಅನ್ನೋದು ಈಗಾಗ್ಲೆ ಎಲ್ಲರಿಗೂ ಗೋತ್ತಿರೋ ವಿಚಾರ..ಆದ್ರೆ ಈ ವಿಚಾರ ಈಗ ಯಾಕ್ ಹೇಳ್ತಿದೀವಿ ಅಂದ್ರೆ ಸ್ಯಾಂಡಲ್​ವುಡ್ ಸ್ಟಾರ್ ಪತ್ನಿಯರೆಲ್ಲ ನಾವೆಲ್ಲಾ ಸ್ಟ್ರಾಂಗು ಅನ್ನೋದನ್ನ ಪ್ರೂವ್ ಮಾಡೋದ್ರ ಜೊತೆಗೆ ನಾವೆಲ್ಲಾ ಒಂದೇ ಅಂತಿದ್ದಾರೆ..ಸ್ಟಾರ್ ಪತ್ನಿಯರು ಅಂದ್ರೆ ಸುಮ್ಮೆ ಅಲ್ಲಾ ಅವ್ರಿಗೂ ಸಾಕಷ್ಟು ಕೆಲಸಗಳಿರುತ್ತೆ…ಸ್ಟಾರ್ ಪತ್ನಿಯರು ಸ್ಟಾರ್ ಗಳನ್ನ ನೋಡಿಕೊಳ್ಳೊದ್ರ ಜೊತೆಗೆ ಅವ್ರ ಅಭಿಮಾನಿಗಳು ಹಾಗೂ ಮಕ್ಕಳು ಮನೆ ಅಂತ ಸದಾ ಬ್ಯೂಸಿ ಇರ್ತಾರೆ…ಇಷ್ಟೆಲ್ಲಾ ಬ್ಯೂಸಿ ಇರೋ ಈ ಸ್ಟಾರ್ ಪತ್ನಿಯರು ತಮಗೆ ಇಂಟ್ರೆಸ್ಟ್ ಇರೋ ಕ್ಷೇತ್ರದಲ್ಲಿ ಉದ್ದಿಮೆ ಕೂಡ ಮಾಡುತ್ತಿದ್ದಾರೆ…ಇದ್ರ ಮದ್ಯೆ ಸ್ಟಾರ್ ಪತ್ನಿಯರೆಲ್ಲಾ ಒಗ್ಗಟ್ಟಿನಲ್ಲಿದ್ದೇವೆ ಅಂತ ಈ ವಿಶ್ವ ಮಹಿಳಾ ದಿನಕ್ಕೆ ಒಂದೆಡೆ ಸೇರಿ ಹೆಣ್ ಮಕ್ಳು ಸ್ಟ್ರಾಂಗು ಗುರು ಅಂತ ಕೂಗಿ ಹೇಳಿದ್ದಾರೆ….

ಒಂದೆಡೆ ಸೇರಿದ್ರು ಸ್ಟಾರ್ ಪತ್ನಿಯರು

ಸಾಮಾನ್ಯವಾಗಿ ಸ್ಟಾರ್ಸ್ ಗಳು ಅಂದ್ರೆ ಒಂದೇ ಕಡೆ ಎಲ್ಲರೂ ಸೇರೋದಿಲ್ಲ. ಒಬ್ಬರನ್ನ ಕಂಡರೆ ಮತ್ತೊಬ್ಬರಿಗೆ ಆಗೋಲ್ಲ ..ಇದೇ ತರ ಸಾಕಷ್ಟು ಸುದ್ದಿಗಳು ಇರುತ್ತೆ…ಆದ್ರೆ ಈ ವಿಶ್ವ ಮಹಿಳಾ ದಿನಕ್ಕೆ ಕನ್ನಡ ಚಿತ್ರರಂಗದ ಸ್ಟಾರ್ ಪತ್ನಿಯರೆಲ್ಲಾ ಸೇರಿ ನಾವೆಲ್ಲಾ ಒಂದೇ ಅಂದಿದ್ದಾರೆ…ವಿಶ್ವ ಮಹಿಳಾ ದಿನಾಚರಣೆ ಸ್ಪೆಷಲ್ ಆಗಿ ನಟ ಗೋಲ್ಡನ್ ಸ್ಟಾರ್ ಮನೆಯಲ್ಲಿ ಗಣೇಶ್ ಪತ್ನಿ ಶಿಲ್ಪ ಗಣೇಶ್ ಆಯೋಜನೆ ಮಾಡಿದ್ದ ಚಿಕ್ಕದೊಂದು ಪಾರ್ಟಿಯಲ್ಲಿ ಸ್ಯಾಂಡವ್​ವುಡ್​​ ನಟರ ಪತ್ನಿಯರಲ್ಲ ಒಂದೆಡೆ ಸೇರಿದ್ದಾರೆ..

ನಾವ್ ಯಾರಿಗೂ ಕಡಿಮೆ ಇಲ್ಲಾ..

ಆಕ್ಟಿಂಗ್ -ಪ್ರೋಡಕ್ಷನ್ ನಲ್ಲಿ ಬ್ಯೂಸಿ ಪ್ರಿಯಾಂಕ ಉಪೇಂದ್ರ

ಭಾರತೀಯ ಚಿತ್ರರಂಗದಲ್ಲೇ ವಿಭಿನ್ನ ನಿರ್ದೇಶಕ ಅಂತ ಹೆಸರು ಮಾಡಿರೋ ನಟ,ನಿರ್ದೇಶಕ ಉಪೇಂದ್ರ ಅವ್ರ ಪತ್ನಿ ಪ್ರಿಯಾಂಕ ಕೂಡ ಉಪ್ಪಿಗಿಂತ ಕಡಿಮೆ ಇಲ್ಲ ಅನ್ನೋದನ್ನ ಈಗಾಗ್ಲೆ ಪ್ರೂವ್ ಮಾಡಿದ್ದಾರೆ..ನಟನೆ ಮಾಡೋದ್ರ ಜೊತೆಯಲ್ಲಿ ಸಿನಿಮಾ ನಿರ್ಮಾಣವನ್ನೂ ನೋಡಿಕೊಳ್ತಾರೆ..

ಡಿಸೈನರ್ ಅಶ್ವಿನಿ ಪುನೀತ್ ರಾಜ್​​ಕುಮಾರ್ …!

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವ್ರ ಪತ್ನಿ ಕೂಡ ಅಪ್ಪು ಅಭಿನಯದ ಕೆಲವು ಸಿನಿಮಾಗಳಿಗೆ ಕಾಸ್ಟ್ಯೂಮ್ಸ್ ಡಿಸೈನ್ ಮಾಡಿದ್ದಾರೆ…ಅಷ್ಟೇ ಅಲ್ಲದೆ ಮನೆ ಮಕ್ಕಳು ಮತ್ತು ತಮ್ಮ ಹೋಂ ಬ್ಯಾನರ್ ನ ಕೆಲಸಗಳು ಹಾಗೂ ಬ್ಯೂಸಿನೆಸ್ ನಲ್ಲೂ ಪತಿಗೆ ನೆರವಾಗಿದ್ದಾರೆ….

ಡಿಸೈನರ್ ಕಮ್ ಪ್ರೋಡ್ಯೂಸರ್ ಶಿಲ್ಪ ಗಣೇಶ್

ಗೋಲ್ಡನ್ ಸ್ಟಾರ್ ಪತ್ನಿಯೂ ಕೂಡ ಅಷ್ಟೇ ಸ್ಟಾರ್ ಪತ್ನಿ ಶಿಲ್ಪ ಗಣೇಶ್ ಎರಡು ಮಕ್ಕಳ ತಾಯಿ ಆಗಿದ್ರು ಮನೆ ನೋಡಿಕೊಳ್ಳೋದ್ರ ಜೊತೆಗೆ ಡಿಸೈನರ್ ಕಮ್ ಪ್ರೊಡ್ಯೂಸರ್. ಶಿಲ್ಪಗಣೇಶ್ ಸಿನಿಮಾಗಳಿಗೆ ಕಾಸ್ಟ್ಯೂಮ್ಸ್ ಡಿಸೈನ್ ಮಾಡ್ತಾರೆ . ಅಷ್ಟೇ ಅಲ್ಲದೆ ಗೋಲ್ಡನ್ ಐ ಪ್ರೋಡಕ್ಷನ್ ಕಂಪನಿಯನ್ನ ನೋಡಿಕೊಳ್ಳೊ ಜವಾಬ್ದಾರಿ ಕೂಡ ಇವ್ರ ಮೇಲಿದೆ..

ಫರ್ಫೆಕ್ಟ್ ಮದರ್ ಸೂಪರ್ ವೈಫ್ ರೇಖಾ ಜಗದೀಶ್

ಸೌಂದರ್ಯ ಜಗದೀಶ್ ಅಂದ್ರೆ ಕನ್ನಡ ಸಿನಿಮಾರಂಗಕ್ಕೆ ಹಾಗೂ ಕನ್ ಸ್ಟ್ರಕ್ಷನ್ ಫೀಲ್ಡ್​​ನಲ್ಲಿ ಹೆಚ್ಚು ಚಾಲ್ತಿಯಲ್ಲಿರೋ ಹೆಸರು. ಸೌಂದರ್ಯ ಜಗದೀಶ್ ಅವ್ರ ಪತ್ನಿ ಕೂಡ ಪರ್ಫೆಕ್ಟ್ ಮದರ್ ಸೂಪರ್ ವೈಫ್. ಡಾಕ್ಟರ್ ಓದುತ್ತಿರೋ ಮಗಳು ನಟನಾಗಿರೋ ಮಗನನ್ನ ನೋಡಿಕೊಳ್ಳುದು ಹಾಗೂ ಸಿನಿಮಾ ನಿರ್ಮಾಣದ ಕೆಲಸದಲ್ಲಿ ಭಾಗಿಯಾಗೋದು ಪತಿಯ ಕೆಲಸದಲ್ಲಿ ಸಹಾಯ ಮಾಡೋದು ರೇಖಾ ಅವ್ರ ಕೆಲಸ …

ಆಕ್ಟಿಂಗ್ ನಲ್ಲೂ ಸೈ ನ್ಯಾಯ ಕೊಡಿಸಲು ಜೈ

ಮಾಳವಿಕ ಅವಿನಾಶ್ ಪ್ರತಿ ಮನೆ ಮನೆಯಲ್ಲೂ ಚಿರಪರಿಚಿತ ಇರೋ ಹೆಸರು..ಗಂಡನಿಗೆ ತಕ್ಕ ಹೆಂಡತಿ ಆಗಿರೋ ಮಾಳವಿಕ ಅವಿನಾಶ್ ಕೇವಲ ತೆರೆ ಮೇಲೆ ಮಾತ್ರವಲ್ಲ ಅನ್ಯಾಯ ಕಂಡರೆ ರೆಬಲ್ ಆಗಿ ಡೈರೆಕ್ಟ್ ಹಿಟ್ ಕೊಡಲು ಸದಾ ಸಿದ್ದರಿರ್ತಾರೆ…ವೃತ್ತಿಯಲ್ಲಿ ವಕೀಲರಾಗಿರೋ ಮಾಳವಿಕ ಸಾಮಾಜಿಕ ಕಾರ್ಯದಲ್ಲೂ ಗುರುತಿಸಿಕೊಂಡಿರೋದು ವಿಶೇಷ

ನಾವು ಕೂಡ ಬ್ಯೂಸಿ

ಇನ್ನೂ ಸಂಗೀತ ಗುರುರಾಜ್ ಅಮ್ಮನಂತೆ ಸಿಂಗರ್ ಆಗಿದ್ದು ಸಾಕಷ್ಟು ಕಾರ್ಯಕ್ರಮಗಳನ್ನ ನೆಡೆಸಿಕೊಟ್ಟು ರಾಜ್ಯದ ಜನರಲ್ಲಿ ಗುರುತಿಸಿಕೊಂಡಿದ್ದಾರೆ…ಇವ್ರಂತೆಯೇ ಸಂಗೀತ ನಿರ್ದೇಶಕ ಗುರುಕಿರಣ್ ಅವ್ರ ಪತ್ನಿ ಪಲ್ಲವಿ ಗುರುಕಿರಣ್ ಕೂಡ ತನ್ನ ಪತಿಯ ಕೆಲಸದಲ್ಲಿ ನೆರವಾಗಿರೋದ್ರ ಜೊತೆಗೆ ಸಾಕಷ್ಟು ಬ್ಯೂಸಿನೆಸ್ ಗಳನ್ನ ಮೆಂಟೇನ್ ಮಾಡುತ್ತಾರೆ.

ಕಾಲಬದಲಾದಂತೆ ಎಲ್ಲವೂ ಬದಲಾಗುತ್ತೆ ಅನ್ನೋದು ನೂರಕ್ಕೆ ನೂರರಷ್ಟೆ ಸತ್ಯ..ಕಾಲಕ್ಕೆ ತಕ್ಕಂತೆ ಇವ್ರೇಲ್ಲರು ಒಂದೆಡೆ ಸೇರಿ ನಾವು ಸ್ಟ್ರಾಂಗು ಅಂತಿದ್ದಾರೆ..ಇವ್ರಿಗಿಂತ ವಯಸ್ಸಿನಲ್ಲಿ ಚಿಕ್ಕವರಿರೋ ಚಿತ್ರರಂಗದಲ್ಲಿ ದೊಡ್ಡ ಸಾಧನೆ ಮಾಡಲು ಹೊರಟಿರೋ ನಟಿಯರಿಗೆ ಇವರೆಲ್ಲರೂ ಸಾಥ್​​ ನೀಡುತ್ತಿದ್ದಾರೆ. ನಟಿಯರಾದ ಅಮೂಲ್ಯ, ಐಂದ್ರಿತಾ ರೇ, ನಬಾ ನಟೇಶ್ ,ಇನ್ನೂ ಅನೇಕರನ್ನು ತಮ್ಮೊಟ್ಟಿಗೆ ಸೇರಿಸಿಕೊಂಡು ಚಿತ್ರರಂಗ ಮಾತ್ರವಲ್ಲ ಚಿತ್ರರಂಗದ ಸೊಸೆಯರು ಕೂಡ ಒಂದೇ ಅನ್ನೋದನ್ನ ಸಾರಿ ಹೇಳಿದ್ದಾರೆ. ಒಟ್ಟಾರೆ ವಿಶ್ವ ಮಹಿಳಾ ದಿನಾಚರಣೆಗೆ ಇದೊಂದು ವಿಶೇಷ ಹಾಗೂ ವಿಭಿನ್ನ ಮತ್ತು ಆರೋಗ್ಯಕರ ಬೆಳವಣಿಗೆ.

Related Stories

Stories by YourStory Kannada