ಆಫ್ಟರ್​​ಟೇಸ್ಟ್​​​ನಿಂದ ರಿಯಲ್​​​ ಲೈಫ್​ಗೆ ಫೋಕಸ್​​​- ಶಾಲಿನಿ ದತ್ತಾ ಮಾಡಿದ ಮ್ಯಾಜಿಕ್​​​

ಟೀಮ್​ ವೈ.ಎಸ್​​.

ಆಫ್ಟರ್​​ಟೇಸ್ಟ್​​​ನಿಂದ ರಿಯಲ್​​​ ಲೈಫ್​ಗೆ ಫೋಕಸ್​​​- ಶಾಲಿನಿ ದತ್ತಾ ಮಾಡಿದ ಮ್ಯಾಜಿಕ್​​​

Tuesday October 06, 2015,

5 min Read

ಭಾರತದಲ್ಲಿ ಜನಸಂಖ್ಯಾ ಸ್ಫೋಟ ಎರಡು ಬಗೆಯ ಜೀವನ ಶೈಲಿಯನ್ನು ಸೃಷ್ಟಿಸಿದೆ. ಒಂದು ಕಡೆ ವಿದ್ಯಾವಂತರು ಉತ್ತಮ ಸ್ಥಿತಿಯಲ್ಲಿ ಸಮಾಜದ ಮುಖ್ಯವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದರೇ, ಇನ್ನೊಂದು ಕಡೆ ಅಸಂಖ್ಯಾತ ಕೊಳಗೆರಿಯ ಮಕ್ಕಳು ತಮ್ಮ ಜೀವನ ನಿರ್ವಹಣೆಗಾಗಿ ಟ್ರಾಫಿಕ್​​ಗಳಲ್ಲಿ ಭಿಕ್ಷೆ ಬೇಡುತ್ತಿದ್ದಾರೆ.ಟೀ ಸ್ಟಾಲ್​​ಗಳಲ್ಲಿ ಅಥವಾ ಇನ್ಯಾವುದೋ ರೆಸ್ಟೋರೆಂಟ್​​ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಅತ್ಯಂತ ಕೆಳಗಿನ ವರ್ಗಕ್ಕೆ ಮುಖ್ಯವಾಹಿನಿಯತ್ತ ಹರಿದು ಬಂದು ಆರ್ಥಿಕತೆ ಸುಧಾರಿಸಿಕೊಳ್ಳುವ ಯಾವುದೇ ಅವಕಾಶಗಳಿಲ್ಲ. ಈ ವಿಚಾರ ಮನಗಂಡು ತಮ್ಮ ಪ್ರಯತ್ನ ಜಾರಿಗೊಳಿಸಿದವರೇ ಶಾಲಿನಿ ದತ್ತಾ.

image


ಶಾಲಿನ ದತ್ತಾರಿಗೆ ಆಗಾಗ ಕಾಡುತ್ತಿದ್ದ ಪ್ರಶ್ನೆ ಭಾರತದಲ್ಲಿ ವಿದ್ಯಾವಂತರಿಂದ ಸಾಧ್ಯವಾಗುತ್ತಿರುವ ಬದಲಾವಣೆ ಹಾಗೂ ಕ್ಲಿಷ್ಟಕರ ಸ್ಥಿತಿಯಲ್ಲಿರುವ ಕಡಿಮೆ ಆದಾಯದ ಜನರ ಆರ್ಥಿಕ ಪ್ರಗತಿಯ ನಡುವಿನ ವ್ಯತ್ಯಾಸ. ಶಾಲಿನ ದತ್ತಾ ಆರಂಭಿಸಿದ ಆಫ್ಟರ್​​ ಟೇಸ್ಟ್​​, ಸಣ್ಣ ಪುಟ್ಟ ಪಟ್ಟಣಗಳ ಕಡಿಮೆ ತಲಾ ಆದಾಯದ ಅದೆಷ್ಟೋ ಕುಟುಂಬಗಳ ಮಹಿಳೆಯರಿಗೆ ಉದ್ಯೋಗ ಅವಕಾಶ ಸೃಷ್ಟಿಸಿದೆ. ಆರ್ಟ್ ಹಾಗೂ ಕ್ರಾಫ್ಟ್ ವಿಭಾಗದಲ್ಲಿ ಅವರ ಸಂಸ್ಥೆ, ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ತರಬೇತಿ ನೀಡಿ ಕೆಲಸ ನೀಡುತ್ತಿದೆ.

ಮೊದಲ ಹೆಜ್ಜೆ:

ತಮ್ಮ ಎಂಜಿನಿಯರಿಂಗ್ ಮುಗಿಸಿದ ಬಳಿಕ ಶಾಲಿನಿ ಸಾಫ್ಟ್​​ವೇರ್ ಸಂಸ್ಥೆಯೊಂದರಲ್ಲಿ ತಮ್ಮ ವೃತ್ತಿ ಜೀವನ ಆರಂಭಿಸಿದರು. ಸುಮಾರು 6 ವರ್ಷಗಳ ಕಾಲ ಅಲ್ಲಿ ಕೆಲಸ ಮಾಡಿದ ಶಾಲಿನಿ ತಮ್ಮ ವೃತ್ತಿ ಬದುಕನ್ನೇ ಪ್ರಶ್ನಿಸಿಕೊಳ್ಳತೊಡಗಿದರು. ಈ ಯೋಚನೆ ಅವರ ನಿಲುವನ್ನು ಬದಲಾಯಿಸಿ, ಸಮಾಜಮುಖಿ ಕೆಲಸಗಳಿಗೆ ಪ್ರೇರಣೆ ನೀಡಿತು. ಸುಮಾರು 2 ವರ್ಷಗಳ ಕಾಲ ಶಾಲಾ ಕೇಂದ್ರಗಳಲ್ಲಿ ಮಕ್ಕಳಿಗೆ ಕಲಿಸುವ ಸ್ವಯಂಸೇವಕಿಯಾಗಿ ಕೆಲಸ ನಿರ್ವಹಿಸಿದರು. ಈ ಅವಧಿಯಲ್ಲಿ ಅವರಿಗಾದ ಅತ್ಯುತ್ತಮ ಅನುಭವವೇ ಅವರ ಮುಂದಿನ ಯೋಜನೆಯನ್ನು ನಿರ್ಧಾರಿಸಲು ನೆರವಾಯಿತು.

ಟೀಚ್ ಫರ್ ಇಂಡಿಯಾ ಅಭಿಯಾನದಲ್ಲಿ ಮುಂಬೈನ ಪಶ್ಚಿಮ ಮಾಲಾಡ್​​ನ ಮಾಲ್ವಾನಿಯಲ್ಲಿ ವಾಸಿಸುವ ಅತಿ ಕಡಿಮೆ ಆದಾಯದ ಕುಟುಂಬಗಳ ಸುಮಾರು 80 ಮಕ್ಕಳಿಗೆ ಪ್ರಾಥಮಿಕ ಕಲಿಕೆ ಹೇಳಿಕೊಟ್ಟಿದ್ದು ಅವರ ಜೀವನದ ಮಹತ್ವದ ಮಜಲು.

image


ಅಲ್ಲಿನ ಮಕ್ಕಳನ್ನು ನಿತ್ಯವೂ ಶಾಲೆಗೆ ಕರೆತರುವುದು ಸುಲಭದ ವಿಚಾರವಾಗಿರಲಿಲ್ಲ. ಆದರೆ ಒಂದು ದಿನ ಚಿಕ್ಕ ಹುಡುಗಿ ತನ್ನ ಪ್ರಾಂತ್ಯದಲ್ಲಾಗುತ್ತಿದ್ದ ಹಿಂಸಾಚಾರದಿಂದ ಭೀತಿಗೊಂಡು ಶಾಲೆಗೆ ಬಂದಿದ್ದಳು. ಅವಳಿಗೆ ಆಗ ಶಾಲೆ ಸುಭದ್ರ ಸ್ಥಳ ಅನ್ನಿಸಿತ್ತು. ಇದೇ ರೀತಿ ಅಲ್ಲಿನ ಅನೇಕ ಮಕ್ಕಳು ನಿತ್ಯವೂ ಶಾಲೆಗೆ ಬರತೊಡಗಿದಾಗ ಅವರ ದಾರಿ ಸುಗಮವಾಗುವತ್ತ ಸಾಗಿತ್ತು.

ಮನೆಯಿಂದಲೇ ಶುರುವಾದ ಕಲ್ಯಾಣ ಕಾರ್ಯ:

ಸಹಾನುಭೂತಿ, ಮೌಲ್ಯಗಳು ಹಾಗೂ ಸೇವೆಯ ಧ್ಯೇಯ ಶಾಲಿನಿಯವರಿಗೆ ಬಾಲ್ಯದಲ್ಲಿಯೇ ಮನವರಿಕೆಯಾಗಿತ್ತು. ತ್ರಿಪುರಾದ ರಾಜಧಾನಿ ಅಗರ್ತಲಾದ ಬಳಿಯ ಸಣ್ಣ ಹಳ್ಳಿಯಲ್ಲಿ ಜನಿಸಿದ ಹಾಗೂ ಜಾರ್ಖಾಂಡ್​​ನ ಚಿಕ್ಕ ಪಟ್ಟಣ ಧನ್ಬಾದ್​​ನಲ್ಲಿ ಮಹತ್ವದ ಬಾಲ್ಯ ಕಳೆದ ಶಾಲಿನಿ ಅಲ್ಲಿನ ಜನರ ಸಂಸ್ಕ್ರತಿ, ಹೊಂದಾಣಿಕೆ, ಮೌಲ್ಯಗಳು ಹಾಗೂ ಪ್ರಕೃತಿಯ ನಡುವೆಯೇ ಬೆಳೆದರು.

ಬಾಲ್ಯದಲ್ಲಿ ಮರಗಳ ಮಧ್ಯೆ ನಡೆದಾಡುತ್ತಿದ್ದ ಕ್ಷಣಗಳು, ಪವರ್ ಕಟ್​​ನ ಕತ್ತಲ ರಾತ್ರಿಗಳಲ್ಲಿ ತಂದೆಯೊಂದಿಗೆ ಮನೆಯ ಮುಂದಿನ ಹುಲ್ಲುಹಾಸಿನ ಮೇಲೆ ಕುಳಿತು ಆಕಾಶ ನೋಡುತ್ತಾ ಮುದ ಪಡುತ್ತಿದ್ದ ನೆನಪುಗಳನ್ನು ಇಂದಿಗೂ ಮೆಲುಕು ಹಾಕುತ್ತಾರೆ ಶಾಲಿನಿ.

image


ಶಾಲಿನಿಯವರ ತಂದೆ ಸರ್ಕಾರಿ ಆಸ್ಪತ್ರೆಯಲ್ಲಿ ಮೂಳೆ ಹಾಗೂ ಕೀಲು ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಹಾಗಾಗಿ ಬಹುತೇಕ ಬಾರಿ ಅವರ ಮನೆಯೇ ಆಸ್ಪತ್ರೆಯಂತಾಗುತ್ತಿತ್ತು. ಅವರ ತಂದೆ ಮೂಳೆ ಮುರಿದುಕೊಂಡುವರಿಗೆ ಚಿಕಿತ್ಸೆ ನೀಡಿದರೆ, ತಾಯಿ ಬಡ ರೋಗಿಗಳಿಗೆ ತಮ್ಮ ಮನೆಯಲ್ಲಿಯೇ ಉಪಚಾರಕ್ಕೆ ನಿಂತುಬಿಡುತ್ತಿದ್ದರು. ಇದು ಬೆಳೆಯುತ್ತಿದ್ದ ಶಾಲಿನಿಯವರ ಮನಸಿನ ಮೇಲೆ ಅಗಾಧವಾದ ಪರಿಣಾಮ ಬೀರಿತ್ತು.

ಶಿಕ್ಷಣದ ಮೂಲಕ ಮಾತ್ರ ಬದಲಾವಣೆ ಸಾಧ್ಯ:

ತಾಯಿ ಉತ್ತಮ ಸ್ಥಿತಿಯಲ್ಲಿದ್ದಾಗ ಅಥವಾ ಉತ್ತಮ ಮೌಲ್ಯಗಳನ್ನು ಹೊಂದಿದ್ದಾಗ ಮಾತ್ರ ಮಕ್ಕಳು ತಾಯಿಯನ್ನು ಅನುಕರಿಸುತ್ತವೆ ಅನ್ನುವ ಸಂಗತಿ ಶಾಲಿನಿಗೆ ಸ್ಪಷ್ಟವಾಗಿತ್ತು.

ಪ್ರತಿಯೊಬ್ಬ ತಾಯಿಯೂ ಶಿಕ್ಷಣದ ಮಹತ್ವ ಅರಿತಿರುತ್ತಾರೆ. ತಮ್ಮ ಮಗ ಅಥವಾ ಮಗಳು ಉತ್ತಮ ವಿದ್ಯಾಭ್ಯಾಸ ಹೊಂದಬೇಕು ಅನ್ನುವುದು ಪ್ರತಿಯೊಬ್ಬ ಪೋಷಕರ ಕನಸಾಗಿರುತ್ತದೆ. ಉತ್ತಮ ಶಿಕ್ಷಣ ಸಿಕ್ಕಾಗ ಮಾತ್ರ ಉತ್ತಮ ಅವಕಾಶಗಳ ಲಭಿಸುತ್ತವೆ. ಆದರೆ ತಮ್ಮ ಮೂಲಭೂತ ಅವಶ್ಯಕತೆಗಳನ್ನೇ ಪೂರೈಸಿಕೊಳ್ಳಲು ಸಾಧ್ಯವಾಗದ ತಾಯಿಯರು ತಮ್ಮ ಮಕ್ಕಳಿಗೆ ಅಗತ್ಯವಿರುವ ಶಿಕ್ಷಣವನ್ನು ಹೇಗೆ ನೀಡುತ್ತಾರೆ. ಹಾಗಾಗಿ ಶಾಲಿನಿ ಅಂತಹ ಇಬ್ಬರು ಮಹಿಳೆಯರ ಜೊತೆಗೂಡಿ ಆಫ್ಟರ್​​ಟೇಸ್ಟ್ ಸಂಸ್ಥೆ ಆರಂಭಿಸಿದರು.

image


ಶಾಲಿನಿಯವರು ಕಲಾವಿದರಲ್ಲ ಅಥವಾ ಆರ್ಟ್ ಹಾಗೂ ಕ್ರಾಫ್ಟ್ ಕುರಿತು ಅವರಿಗೆ ಅಂತಹ ಯಾವುದೇ ವಿಶೇಷ ಪರಿಣಿತಿಯೂ ಇರಲಿಲ್ಲ. ಆದರೆ ಶಾಲಿನಿಗೆ ಕಲೆಯ ಬಗ್ಗೆ ಆಸಕ್ತಿಯಿತ್ತು ಹಾಗೂ ಕಲೆಯನ್ನು, ಅದರ ಹಿಂದಿನ ಸೃಜನಶೀಲತೆಯನ್ನು ಅವರು ಪ್ರೀತಿಸುತ್ತಿದ್ದರು. ಇಬ್ಬರು ಆರ್ಥಿಕವಾಗಿ ಹಿಂದುಳಿದ ಮಹಿಳೆಯರನ್ನು ಜೊತೆಯಲ್ಲಿಟ್ಟುಕೊಂಡ ಶಾಲಿನಿಗೆ ಈ ಕಲಾತ್ಮಕ ಉತ್ಪನ್ನಗಳನ್ನು ಉತ್ಪಾದಿಸುವ ಆಲೋಚನೆ ಹುಟ್ಟಿಕೊಂಡಿತು. 2 ವರ್ಷಗಳ ಕಾಲ ಹಿಂದುಳಿದ ಮಕ್ಕಳಿಗೆ ಬೋಧಿಸಿದ್ದ ಅನುಭವದ ಜೊತೆ ಶಾಲಿನಿ ಹಿಂದುಳಿದ ಸಮುದಾಯದ ಜನರೊಂದಿಗೆ ಆತ್ಮೀಯವಾಗಿ ಸಂಪರ್ಕಿಸುವ ಹಾಗೂ ವ್ಯವಹರಿಸುವ ಬಗೆಯನ್ನು ಕಲಿತಿದ್ದು.

ಆ ಇಬ್ಬರು ಮಹಿಳೆಯರಲ್ಲಿ ಒಬ್ಬರಾದ ಫಾತಿಮ ಚಿಕ್ಕ ವಯಸ್ಸಿನಲ್ಲಿಯೇ ತಮ್ಮ ತಂದೆ ತಾಯಿಯರನ್ನು ಕಳೆದುಕೊಂಡು ಚಿಕ್ಕಮ್ಮನ ಆಶ್ರಯದಲ್ಲಿ ಬೆಳೆದಿದ್ದವರು. 4 ಮಕ್ಕಳ ತಾಯಿಯೂ ಆಗಿರುವ ಫಾತಿಮಾಗೆ ಆರ್ಥಿಕವಾಗಿ ಯಾವುದೇ ಬಲವಿರಲಿಲ್ಲ. ಸಂಸ್ಥೆಯ ಜೊತೆ ಗುರುತಿಸಿಕೊಂಡಿರುವ ಫಾತಿಮಾ ಈಗ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ಹಿಂದೆ ಹೆಂಡತಿ ಕೆಲಸ ಮಾಡುವುದನ್ನೇ ವಿರೋಧಿಸುತ್ತಿದ್ದ ಆಕೆಯ ಪತಿಯೂ ಈಗ ಅವರಿಗೆ ಸಹಾಯ ಮಾಡುತ್ತಿದ್ದಾರೆ ಅಂದಿದ್ದಾರೆ ಶಾಲಿನಿ.

ಉತ್ತರಪ್ರದೇಶದ ಹಳ್ಳಿಯೊಂದರಲ್ಲಿ ಜನಿಸಿದ ಕಮರುನ್ನೀಸಾ ಕಲಿಕೆಯ ಆಸಕ್ತಿ ಹೊಂದಿರುವ ಹಾಗೂ ಶಿಕ್ಷಣದ ಮಹತ್ವ ಅರಿತಿರುವ ಮಹಿಳೆ. ಆದರೆ ಶಾಲೆಯಲ್ಲಿ ಕಲಿಯುವ ಯಾವುದೇ ಅವಕಾಶ ಅವರ ಮುಂದಿರಲಿಲ್ಲ. ಮದುವೆಯಾದ ಬಳಿಕ ಮುಂಬೈಗೆ ಬಂದಿಳಿದ ಅವರು ತಮ್ಮ ಸಮುದಾಯದಲ್ಲಿರಬಹುದಾದ ನಿಯಮಿತ ಅವಕಾಶವನ್ನೇ ಉಪಯೋಗಿಸಿಕೊಂಡು ಕಲಿಯಲು ಮುಂದಾದರು. ಮೂವರು ಹೆಣ್ಣುಮ ಕ್ಕಳು ಹಾಗೂ ಒಬ್ಬ ಮಗನನ್ನು ಹೊಂದಿರುವ ಆಕೆ ತನ್ನ ಮಗನಷ್ಟೇ ಶಿಕ್ಷಣ ಪಡೆದುಕೊಳ್ಳುವ ಸಮಾನ ಹಕ್ಕು ತನ್ನ ಮೂವರು ಹೆಣ್ಣು ಮಕ್ಕಳಿಗೂ ಇದೆ ಅಂತ ಪ್ರತಿಪಾದಿಸಿದ್ದರು. ಕುಟುಂಬದ ಸದಸ್ಯರು ಹಾಗೂ ಅಕ್ಕನ ವಿರೋಧದ ಮಧ್ಯೆಯೂ ಆಕೆ ತನ್ನ ಪ್ರಾಥಮಿಕ ವಿದ್ಯಾಭ್ಯಾಸ ಮುಂದುವರೆಸಿದರು.

ಸವಾಲುಗಳು:

ಪ್ರಾಥಮಿಕ ಹಾಗೂ ಅತಿ ಮುಖ್ಯ ಸವಾಲೆಂದರೆ ಮಹಿಳೆಯರು ಸ್ವ ಆಸಕ್ತಿಯಿಂದ ಮುಂದೆ ಬಂದು ಒಬ್ಬರನ್ನೊಬ್ಬರು ನಂಬುವ ಮೂಲಕ ಒಟ್ಟಾಗಬೇಕು. ಒಂದರ್ಥದಲ್ಲಿ ಇದು ಆಫ್ಟರ್​​ಟೇಸ್ಟ್​​ನ ಯಶಸ್ಸಿನ ಹಿಂದಿನ ಶಕ್ತಿಯೂ ಹೌದು. ಒಟ್ಟಾಗಿ ಸೇರಿವ ಮಹಿಳೆಯ ತಮ್ಮ ಬದುಕಿನ ಕಥೆಗಳನ್ನು ಒಬ್ಬರಿಗೊಬ್ಬರು ಹಂಚಿಕೊಳ್ಳುವ ಮೂಲಕ ಒಬ್ಬರಿಗೊಬ್ಬರು ನೆರವಾಗುತ್ತಿದ್ದಾರೆ.

ಮೊದಲು ಇಬ್ಬರು ಮಹಿಳೆಯರು ಸಂಸ್ಥೆಯನ್ನು ಸೇರಿ, ಕಲೆತು, ಕಲಾತ್ಮಕ ವಸ್ತುಗಳನ್ನು ಸಿದ್ಧಪಡಿಸಿ ಆರ್ಥಿಕ ಸ್ವಾವಲಂಬಿಗಳಾದ ಕಾರಣ ಈಗೀಗ ಮತ್ತಷ್ಟು ಮಹಿಳೆಯರು ಸಂಸ್ಥೆಯತ್ತ ನಂಬಿಕೆ ಇಟ್ಟುಕೊಂಡು ಬರುತ್ತಿದ್ದಾರೆ.

ಈ ಮಹಿಳೆಯರು ಕಲಾತ್ಮಕ ಪೇಪರ್ ಉತ್ಪನ್ನಗಳು, ಕೈನಲ್ಲಿ ಸಿದ್ಧಪಡಿಸಿದ ಕಲಾತ್ಮಕ ಆರ್ಟ್ ವಸ್ತುಗಳು, ಮುಂತಾದ ಹ್ಯಾಂಡಿಕ್ರಾಫ್ಟ್​​ಗಳನ್ನು ತಯಾರಿಸುತ್ತಿದ್ದಾರೆ. ನಿಧಾನವಾಗಿ ಈ ಆರ್ಟ್ ವಸ್ತುಗಳಿಗೆ ಮಾರುಕಟ್ಟೆಯಲ್ಲಿ ಸೂಕ್ತ ಬೇಡಿಕೆಯೂ ಲಭ್ಯವಾಗುತ್ತಿದೆ. ಮುಂಬರುವ ದಿನಗಳಲ್ಲಿ ಇದರ ವಿಸ್ತರಣೆ ತಮ್ಮ ಪಾಲಿಗೆ ಅತಿ ದೊಡ್ಡ ಸವಾಲು ಸೃಷ್ಟಿಸುವ ಸಾಧ್ಯತೆ ಇದೆ ಅಂತಾರೆ ಶಾಲಿನ ದತ್ತಾ.

ನಿರಂತರ ಮಾರ್ಗದರ್ಶನ:

ಆರಂಭಿಕ ಹಂತದಲ್ಲಿ ಸಂಸ್ಥೆಯ ಆಶಯಗಳ ಬಗ್ಗೆ ನನಗೇ ಸಂದೇಹಗಳಿದ್ದವು. ಆದರೆ ಪ್ರತೀ ಬಾರಿಯೂ ನನ್ನ ಸಂದೇಹಗಳನ್ನು ನಾನೇ ನಿವಾರಿಸಿಕೊಂಡೆ. ಸಾಮರ್ಥ್ಯ ಹಾಗೂ ಧೈರ್ಯ ಎರಡರ ಬಲದಿಂದ ಬದಲಾವಣೆ ಸಾಧ್ಯವಾಗುತ್ತದೆ ಅನ್ನುವ ಸಿದ್ಧಾಂತವನ್ನು ಸಮರ್ಥಿಸಿಕೊಳ್ಳುತ್ತಾ ಸಾಗಿದೆ. ಒಬ್ಬಳು ತಾಯಿಯಾಗಿ, ಮಗಳಾಗಿ, ಹೆಂಡತಿಯಾಗಿ ಅಥವಾ ಮನೆಯೊಂದರ ಆರ್ಥಿಕ ನಿರ್ವಹಣೆಯ ಮುಖ್ಯ ವ್ಯಕ್ತಿಯಾಗಿ ಹೆಣ್ಣಿಗಿರಬೇಕಾದ ಜವಬ್ದಾರಿಗಳನ್ನು ವ್ಯಾಖ್ಯಾನಿಸತೊಡಗಿದೆ. ನನ್ನ ಈ ಪ್ರಯತ್ನಕ್ಕೆ ನನ್ನ ಕುಟುಂಬದಿಂದ ಬೇಷರತ್ ನೆರವು, ಬೆಂಬಲ ಹಾಗೂ ನಿರಂತರ ಹಾರೈಕೆ ಲಭಿಸಿತು. ನನ್ನ ಆತ್ಮೀಯ ಸ್ನಹಿತರ ವಲಯದಿಂದ ಹಾಗೂ ಕೆಲವು ಮಾರ್ಗದರ್ಶಕರಿಂದಲೂ ಉತ್ತಮ ಸಲಹೆ ಸೂಚನೆಗಳು ಸಿಕ್ಕಿತು. ಇದರಿಂದ ನನ್ನ ಮೇಲಿನ ನಂಬಿಕೆ ಹಾಗೂ ನನ್ನ ಸಾಮರ್ಥ್ಯಗಳ ಅರಿವು ನನಗಾಗಿದ್ದು ಈ ಸಾಧನೆಯ ಮಾರ್ಗಸೂಚಿ ಅಂದಿದ್ದಾರೆ ಶಾಲಿನಿ.

ಅತಿ ಮುಖ್ಯವಾದ ಹಾಗೂ ಅಮೂಲ್ಯವಾದ ಸಂದರ್ಭ:

ಕಳೆದ ಒಂದು ವರ್ಷದಲ್ಲಿ ಗುಜರಾತ್​ನ ಗ್ರಾಮೀಣ ಭಾಗದ 2 ಹಳ್ಳಿಗಳಲ್ಲಿ ಸುಮಾರು 80 ಮಹಿಳೆಯರಿಗೆ ತರಬೇತಿ ನೀಡಲಾಗಿತ್ತು. ಆ ಹಳ್ಳಿಯಿಂದ ಮರಳಿ ಹೊರಟಾಗ ಅಲ್ಲೊಬ್ಬರು ಮಹಿಳೆ ಹೇಳಿದ ಮಾತು ಶಾಲಿನಿಯವರನ್ನು ನಿಜಕ್ಕೂ ಉತ್ತೇಜಿಸುವಂತದ್ದಾಗಿತ್ತು. ಶಾಲೆಯ ಮೆಟ್ಟಿಲನ್ನೇ ತುಳಿಯದ ಹಾಗೂ ಮುಖ್ಯವಾಹಿನಿಯಿಂದ ದೂರವೆ ಉಳಿದಿದ್ದ ಆ ಮಹಿಳೆಯರು ತಾವು ಜೀವನದಲ್ಲಿ ಇಂತದ್ದೇನಾದರೂ ಮಾಡುತ್ತೇವೆ ಎಂದು ಕನಸಿನಲ್ಲಿಯೂ ಭಾವಿಸಿರಲಿಲ್ಲ. ವಿಶೇಷ ತರಬೇತಿ ಹಾಗೂ ಪರಿಣಿತಿ ಪಡೆದ ತಮಗೆ ಹೆಮ್ಮೆ ಎನಿಸುತ್ತದೆ. ಈ ತರಬೇತಿಯ ನಂತರ ಜೀವನದಲ್ಲಿ ತಮಗೆ ಧೈರ್ಯ ಹಾಗೂ ಉತ್ಸಾಹ ಮೂಡುತ್ತಿದೆ. ಇಂತಹ ಕೆಲಸಗಳಿಗೆ ಮತ್ತಷ್ಟು ಹಿಂದುಳಿದ ಸಮುದಾಯಗಳ ಮಹಿಳೆಯರನ್ನು ಕರೆತಂದು ಸೇರಿಸುತ್ತೇವೆ. ಜೊತೆಗೆ ತಮ್ಮ ಮಕ್ಕಳನ್ನು ಶಾಲೆಗೆ ಕಳಿಸಲೇಬೇಕು ಅನ್ನುವ ನಿರ್ಧಾರ ದೃಢವಾಗುತ್ತಿದೆ ಅಂದಿದ್ದರು. ಈ ಘಟನೆ ಶಾಲಿನಿಯವರನ್ನು ಸಾಕಷ್ಟು ಪ್ರಭಾವಿತಗೊಳಿಸಿದೆಯಂತೆ.

ಪ್ರವೃತ್ತಿಯೇ ಬದುಕಿನ ಮಾರ್ಗ ಬದಲಾಯಿಸಿತು:

ಆಫ್ಟರ್​ಟೇಸ್ಟ್​​ನಲ್ಲಿ ಮಾರಾಟ ಮಾಡಲಾಗುತ್ತಿರುವ ವಸ್ತುಗಳಿಗೆ ಸಾಕಷ್ಟು ಪ್ರಾಧಾನ್ಯತೆ ಹಾಗೂ ಉತ್ತೇಜನ ಲಭಿಸುತ್ತಿದೆ. ಶಾಲಿನಿಯವರ ಪತಿ ಅವರ ಈ ಸಮಾಜಮುಖಿ ಅಭಿವೃದ್ಧಿಪರ ಕೆಲಸಕ್ಕೆ ಬೆಂಗಾವಲಾಗಿ ನಿಂತು ಸಹಕರಿಸುತ್ತಿದ್ದಾರೆ. ಜೊತೆಗೆ ಶಾಲಿನಿಯವರ ಸಿದ್ಧಾಂತ, ಮೌಲ್ಯ ಹಾಗೂ ಸೇವಾ ಮನೋಭಾವನೆಗಳನ್ನೂ ಗೌರವಿಸುತ್ತಿದ್ದಾರೆ.

ನಿಮ್ಮ ಹವ್ಯಾಸ ಹಾಗೂ ಪ್ರವೃತ್ತಿಯೇ ನಿಮ್ಮ ನೆಚ್ಚಿನ ವೃತ್ತಿಯಾದಲ್ಲಿ ಖಾಸಗಿ ಬದುಕು ಹಾಗೂ ವೃತ್ತಿ ಬದುಕಿನ ಮಧ್ಯದ ವ್ಯತ್ಯಾಸ ಇನ್ನಿಲ್ಲವಾಗುತ್ತದೆ. ಬದುಕನ್ನು ಪ್ರೀತಿಸುವ ಜೊತೆ ಮಾಡುವ ವೃತ್ತಿಯನ್ನೂ ಪ್ರೀತಿಸಲು ಆರಂಭಿಸುತ್ತೀರಿ. ಈಗ ಅದೇ ಅನುಭವ ತಮಗಾಗಿದೆ ಎಂದು ಅಭಿಮಾನ ಪೂರ್ವಕವಾಗಿ ಶಾಲಿನಿ ಹೇಳಿಕೊಳ್ಳುತ್ತಾರೆ.