ಸಾಂಪ್ರದಾಯಿಕ ದೋಸೆ ತಿನ್ನಲು ಇಲ್ಲಿ ಬೇಟಿ ನೀಡಿ

ಟೀಮ್​ ವೈ.ಎಸ್​. ಕನ್ನಡ

ಸಾಂಪ್ರದಾಯಿಕ ದೋಸೆ ತಿನ್ನಲು ಇಲ್ಲಿ ಬೇಟಿ ನೀಡಿ

Monday July 03, 2017,

2 min Read

ಸೌತ್ ಇಂಡಿಯಾ ಅಂದರೆ, ರುಚಿಯಾದ ಊಟ, ಬೆಳಗ್ಗಿನ ತಿಂಡಿ ಅಂದ ತಕ್ಷಣ ಇಡ್ಲಿ ಅಥವಾ ದೋಸೆ ಥಟ್ ಅಂತ ನೆನಪಿಗೆ ಬಂದೇ ಬರುತ್ತದೆ. ಗರಿಗರಿಯಾದ ರುಚಿಯಾದ ದೋಸೆ ಯಾರಿಗಿಷ್ಟ ಇಲ್ಲಾ ಹೇಳಿ...? ಅದರಲ್ಲೂ ಬೆಂಗಳೂರಿನ ರಸ್ತೆ ರಸ್ತೆಯಲ್ಲೂ ರುಚಿಕರವಾದ ದೋಸೆ ಸವಿಯೋದಕ್ಕೆ ಸಿಗುತ್ತದೆ. ಬೆಂಗಳೂರಿಗೆ ಬಂದ ಬ್ಯಾಚುಲರ್​​ಗಳಿಗೆ ಈ ದೊಸೆ ಕಾರ್ನರ್ ಗಳು ಒಂದರ್ಥದಲ್ಲಿ ಮಲತಾಯಿಗಳಂತೆ ಅವ್ರನ್ನ ಸಾಕುವುದು ಪಕ್ಕಾ. ಬೆಂಗಳೂರಿನಲ್ಲಿ ಸಾಕಷ್ಟು ಫೇಮಸ್ ಆಗಿರುವ ದೋಸೆ ಕಾರ್ನರ್​​ಗಳಿವೆ. ಆದ್ರೆ ನೀವು ಸಾಂಪ್ರದಾಯಿಕ ಮತ್ತು ಪರಂಪರೆಯನ್ನ ನೆನಪು ಮಾಡಿಕೊಳ್ಳಬೇಕು ಅಂತಿದ್ರೆ ಈ ದೋಸೆ ಸ್ಟಾಲ್​ಗೆ ಬಂದು ದೋಸೆ ಸವಿಯಲೇ ಬೇಕು. 

image


ದೋಸೆ ವಿತ್ ಚಿತ್ರನ್ನ ಸ್ಟಫ್..!

ಸಾಮಾನ್ಯವಾಗಿ ಮಸಾಲೆ ದೋಸೆ, ಸೆಟ್ ದೋಸೆ, ಪ್ಲೈನ್ ದೋಸೆ, ಖಾಲಿ ದೋಸೆ, ರಾಗಿ ದೋಸೆ ,ರವೆ ದೋಸೆ, ಹೀಗೆ ದೋಸೆಯಲ್ಲಿ ಒಂದಲ್ಲಾ ಎರಡಲ್ಲಾ ನಾನಾ ವೆರೈಟಿ ದೋಸೆಗಳಿವೆ. ಆದ್ರೆ ಚಿತ್ರನ್ನ ಸ್ಟಫ್ ದೊಸೆ ಟೇಸ್ಟ್ ಮಾಡ್ಬೇಕು ಅಂದ್ರೆ ನೀವು ಶಿವಾಜಿನಗರಕ್ಕೆ ಒಮ್ಮೆ ಬೇಟಿ ನೀಡಲೇ ಬೇಕು. ನಾರ್ಮಲ್ ದೋಸೆ ಒಳಗೆ ಚಿತ್ರಾನ್ನ ತುಂಬಿ ನಿಮ್ಮ ಕೈಗೆ ಇಡುತ್ತಾರೆ. ಒಮ್ಮೆ ಟೇಸ್ಟ್ ಮಾಡಿದವರು ಮತ್ತೊಮ್ಮೆ ತಿನ್ನದೆ ಇರಲಾರದಂತಹ ರುಚಿ ಇದರಲ್ಲಿ ಅಡಗಿದೆ..!

45ವರ್ಷಗಳ ರುಚಿಗೆ ಫೇಮಸ್​​​..!

ಚಿತ್ರನ್ನ ದೋಸೆಯಂತಲೇ ಫೇಮಸ್ ಆಗಿರುವ ಈ ದೋಸೆ ಕಾರ್ನರ್​​ ಬೆಂಗಳೂರಿನ ಬಹುತೇಕರಿಗೆ ಚಿರಪರಿಚಿತ. ಶಿವಾಜಿನಗರದ ಜ್ಯೂವೆಲರಿ ಶಾಪ್ ಸ್ಟ್ರೀಟ್ ನಲ್ಲಿ ಈ ದೋಸೆ ಕಾರ್ನರ್, ಚಿತ್ರಾನ್ನ ದೋಸೆ ಅಂತಾನೆ ಫೇಮಸ್ ಆಗಿದೆ.1975ರಿಂದ ಇಲ್ಲಿ ದೋಸೆ ಮಾರಾಟ ಮಾಡುತ್ತಿದ್ದು ಆಗಿನಿಂದಲೂ ಬೆಂಗಳೂರಿನ ಜನರು ಆಗಿನಿಂದಲೂ ದೋಸೆ ರುಚಿಯನ್ನ ಸವಿಯುತ್ತಲೇ ಬಂದಿದ್ದಾರೆ.

image


" ಬೆಂಗಳೂರಿನಲ್ಲಿ ಅದೆಷ್ಟೋ ದೋಸೆ ಕಾರ್ನರ್​ಗಳಲ್ಲಿ ನಾನು ದೋಸೆ ತಿಂದಿದ್ದೇನೆ. ಆದರೆ ಇಲ್ಲಿರುವ ರುಚಿ ಬೇರೆ ಎಲ್ಲೂ ಸಿಗುವುದಿಲ್ಲ. ಚಿತ್ರಾನ್ನ ಸ್ಟಫ್​ ದೋಸೆ ಇಲ್ಲಿಯ ಸ್ಪೆಷಲ್​. ಬೆಂಗಳೂರಿನಲ್ಲಿ ಇದು ಇಲ್ಲಿ ಮಾತ್ರ ಸಿಗುತ್ತದೆ. ವಾರಕ್ಕೊಮ್ಮೆಯಾದರೂ ಈ ದೋಸೆ ಸ್ಟಾಲ್​ಗಳಿಗೆ ಬೇಟಿ ನೀಡಿ ದೋಸೆ ತಿನ್ನುವ ಆಸೆಯನ್ನು ತಣಿಸಿಕೊಳ್ಳುತ್ತೇನೆ "
- ಹರ್ಷಿತಾ, ದೋಸೆ ಕಾರ್ನರ್​ ಗ್ರಾಹಕಿ

ಮನೆಯಲ್ಲೇ ಮಾಡಿದ ಶುದ್ದ ಬೆಣ್ಣೆ ಮತ್ತು ದೋಸೆ ಹಿಟ್ಟಿನಿಂದ ಇಲ್ಲಿ ದೋಸೆ ತಯಾರಾಗುತ್ತವೆ. ನವೀನ್ ಈ ಅಂಗಡಿಯನ್ನ ನಡೆಸುತ್ತಿದ್ದು ಇವ್ರ ಜೊತೆಯಲ್ಲಿ ತಂದೆ ಹಾಗೂ ಅಣ್ಣ ಕೂಡ ಸಾಥ್ ನಿಡ್ತಾರೆ. ಕೇವಲ ನಾಲ್ಕು ಗಂಟೆಯಷ್ಟೇ ಓಪನ್ ಇರೋ ಈ ದೋಸೆಗೆ ಭರ್ಜರಿ ಡಿಮ್ಯಾಂಡ್ ಇದೆ. ಸಂಜೆ ನಾಲ್ಕರಿಂದ 8ರ ವರೆಗೆ ಮಾತ್ರ ಈ ದೋಸೆ ಕಾರ್ನಾರ್ ಓಪನ್ ಇರುತ್ತದೆ. ಸುಮಾರು 600ಕ್ಕೂ ಹೆಚ್ಚು ದೋಸೆಯನ್ನ ಈ ನಾಲ್ಕು ಗಂಟೆಯಲ್ಲಿ ಮಾರಾಟ ಮಾಡಲಾಗುತ್ತದೆ. ಕಡಿಮೆ ಹಣ ರುಚಿಕರ ತಿಂಡಿ ಅನ್ನೋಹಾಗೆ 40ರೂಪಾಯಿ ಒಳಗೆ ದೊಸೆಯ ಬೆಲೆ ಇದ್ದು ತುಂಬಾ ರುಸಿಯಾಗಿರುತ್ತೆ ಅನ್ನೋದು ಇಲ್ಲಿಯ ಜನರ ಮಾತು.

ಇದನ್ನು ಓದಿ:

1. ಗ್ರಾಮೀಣ ಕ್ರೀಡಾಪಟುಗಳ ಜೀವನ ರೂಪಿಸುವ ಸಿದ್ಧಾರ್ಥ್- ಒಂದೂವರೆ ಲಕ್ಷ ಪ್ರತಿಭೆಗಳ ಬದಕು ಕಟ್ಟಿಕೊಡುವ ಸ್ಟೈರ್ಸ್

2. ತೆಂಗಿನ ಕೊಯ್ಲಿನ ಚಿಂತೆ ಬಿಟ್ಟುಬಿಡಿ- ಅಪ್ಪಚ್ಚನ್​ ಅನ್ವೇಷಣೆಯ ಬಗ್ಗೆ ತಿಳಿದುಕೊಳ್ಳಿ

3. ಡಿಸೈನರ್ "ಬೋಟಿಕ್ " ! ಮಹಿತಾ ಪ್ರಸಾದ್ ಡಿಸೈನ್ಸ್