ಲಂಚ ಮುಟ್ಟಲ್ಲ, ಭ್ರಷ್ಟಚಾರಕ್ಕೆ ಪ್ರೋತ್ಸಾಹ ನೀಡಲ್ಲ- ಇದು ಕೇರಳದ ಸರಕಾರಿ ಗುಮಾಸ್ತನ ವಿಶಿಷ್ಟ ಹೋರಾಟ

ಟೀಮ್​ ವೈ.ಎಸ್​. ಕನ್ನಡ

ಲಂಚ ಮುಟ್ಟಲ್ಲ, ಭ್ರಷ್ಟಚಾರಕ್ಕೆ ಪ್ರೋತ್ಸಾಹ ನೀಡಲ್ಲ- ಇದು ಕೇರಳದ ಸರಕಾರಿ ಗುಮಾಸ್ತನ ವಿಶಿಷ್ಟ ಹೋರಾಟ

Sunday April 02, 2017,

2 min Read

ಅನಗಡಿಪುರಂ ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿರುವ ಒಂದು ಗ್ರಾಮ. ಮಲಪ್ಪುರಮ್ ಜಿಲ್ಲೆಯ ಅತ್ಯಂತ ದೊಡ್ಡ ಗ್ರಾಮಪಂಚಾಯತ್ ಅನ್ನುವ ಹೆಗ್ಗಳಿಕೆಯೂ ಈ ಗ್ರಾಮಕ್ಕಿದೆ. ಆದ್ರೆ ಇದೆಲ್ಲಕ್ಕಿಂತಲೂ ಮಿಗಿಲಾಗಿ ಈ ಗ್ರಾಮಪಂಚಾಯತ್ ತುಂಬಾ ಮನೆಮಾತಾಗಿರುವುದು, ಗ್ರಾಮ ಪಂಚಾಯತ್​ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕ್ಲರ್ಕ್ ಒಬ್ಬನಿಂದಾಗಿ. ಈ ಗುಮಾಸ್ತ ಕಚೇರಿಗೆ ಬರುವ ಎಲ್ಲರೊಂದಿಗೂ ಆತ್ಮೀಯರಾಗಿ ಮಾತನಾಡುತ್ತಾನೆ. ಅಷ್ಟೇ ಅಲ್ಲ ತನ್ನ ಕೆಲಸದ ಬಗ್ಗೆ ಫೀಡ್ ಬ್ಯಾಕ್ ಪಡೆದುಕೊಳ್ಳುತ್ತಾರೆ. ಹೀಗಾಗಿ ಈ ಕ್ಲರ್ಕ್ ಗ್ರಾಮದ ಎಲ್ಲರಿಗೂ ಆತ್ಮೀಯ.

image


ಗ್ರಾಮಸ್ಥರ ಪ್ರೀತಿಗೆ ಪಾತ್ರರಾಗಿರುವ ಗುಮಾಸ್ತನ ಹೆಸರು ಅಬ್ದುಲ್ ಸಲೀಮ್ ಪಲ್ಯಲ್ತೋಡಿ. 42 ವರ್ಷ ವಯಸ್ಸಿನ ಅಬ್ದುಲ್ ಸಲೀಮ್ ಕಳೆದ ಮೂರು ವರ್ಷಗಳಿಂದ ಈ ಗ್ರಾಮಪಂಚಾಯತ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ ಸರಕಾರಿ ಕೆಲಸವನ್ನು ದೇವರ ಕೆಲಸ ಅನ್ನುವಂತೆ ನಂಬಿಕೊಂಡಿದ್ದಾನೆ. ಯಾರೇ ಕೆಲಸ ಆಗಬೇಕು ಅಂತ ಕಚೇರಿಗೆ ಬಂದ್ರೂ ಅವರ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ ವಾಪಾಸ್ ಕಳುಹಿಸುತ್ತಾನೆ. ಅಚ್ಚರಿ ಅಂದ್ರೆ ಇಲ್ಲಿ ತನಕ ಅಬ್ದುಲ್ ಸಲೀಮ್ ಒಂದು ರೂಪಾಯಿ ಲಂಚವನ್ನು ಮುಟ್ಟಿಲ್ಲ. ಅಷ್ಟೇ ಅಲ್ಲ ತನ್ನ ಟೇಬಲ್ ಮುಂದೆ ಹಣ ನೀಡಬೇಡಿ ಎಂದು ಬೋರ್ಡ್ ಹಾಕಿಕೊಂಡಿದ್ದಾನೆ. ಆ ಬೋರ್ಡ್​ನಲ್ಲಿ ಅಬ್ದುಲ್ ಸಲೀಮ್ ಪಡೆಯುವ ಸಂಬಳದ ವಿವರ ಕೂಡ ಇದೆ. ಭ್ರಷ್ಟಾಚಾರ ವಿರೋಧಿಯಾಗಿ ಅಬ್ದುಲ್ ಸಲೀಮ್ ವಿಭಿನ್ನ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾನೆ.

“ ಸರಕಾರ ನನಗೆ ಪ್ರತಿದಿನಕ್ಕೆ 811 ರೂಪಾಯಿ ನೀಡುತ್ತದೆ. ನಾನು ಪ್ರತೀ ತಿಂಗಳು 24,340 ರೂಪಾಯಿಯನ್ನು ನಿಮ್ಮ ಸೇವೆ ಮಾಡಲು ಪಡೆಯುತ್ತೇವೆ. ನಿಮಗೆ ನನ್ನ ಕೆಲಸದ ಬಗ್ಗೆ ತೃಪ್ತಿ ಇಲ್ಲವಾದಲ್ಲಿ ದಯವಿಟ್ಟು ನನಗೆ ತಿಳಿಸಿ ”
- ಅಬ್ದುಲ್ ಸಲೀಮ್, ಗ್ರಾಮಪಂಚಾಯತ್ ಗುಮಾಸ್ತ,

ಅಬ್ದಲ್ ಸಲೀಮ್ ಕೆಲಸ ಮಾಡುವ ಗ್ರಾಮಪಂಚಾಯತ್​ನಲ್ಲಿ ಒಟ್ಟು 17 ಜನರು ಕೆಲಸ ಮಾಡುತ್ತಿದ್ದಾರೆ. ಗ್ರಾಮಪಂಚಾಯತ್​ಗೆ ಬರುವ ಪ್ರತಿಯೊಬ್ಬರನ್ನೂ ಅಬ್ದುಲ್ ಸಲೀಮ್ ಮಾತನಾಡಿಸುತ್ತಾರೆ. ಅಷ್ಟೇ ಅಲ್ಲ ಅವರು ಬೇರೆ ಬೇರೆ ಕೆಲಸಗಳಿಗಾಗಿ ಪಂಚಾಯತ್ ಕಚೇರಿಗೆ ಬಂದಿದ್ದರೂ ಅವರ ಕೆಲಸಗಳಿಗೆ ಸಹಾಯ ಮಾಡಿ ಸಮಧಾನ ಪಟ್ಟುಕೊಳ್ಳುತ್ತಾರೆ.

“ ಸರಕಾರಿ ಕೆಲಸದಲ್ಲಿ ಸೇವೆಯೇ ಅತೀ ದೊಡ್ಡ ಕೆಲಸ. ಜನರು ಬೇರೆ ಬೇರೆ ಕೆಲಸಗಳಿಗಾಗಿ ಕಚೇರಿಗೆ ಬರುತ್ತಾರೆ. ಆದ್ರೆ ಅವರು ಬರಿಗೈಯಲ್ಲಿ ಹಿಂದಿರುಗಬಾರದು. ಅವರು ತೃಪ್ತಿ ಪಟ್ಟುಕೊಂಡು ವಾಪಾಸ್ ಹೋಗಬೇಕು ”
- ಅಬ್ದುಲ್ ಸಲೀಮ್, ಗ್ರಾಮಪಂಚಾಯತ್ ಗುಮಾಸ್ತ,

ಅಂದಹಾಗೇ, ಈ ಸೇವಾಮನೋಭಾವ ಇರುವ ಸಲೀಮ್ ಶೇಕಡಾ 40ರಷ್ಟು ವಿಕಲಚೇತನ ಅನ್ನುವುದು ಮತ್ತಷ್ಟು ಆಶ್ಚರ್ಯ ಹುಟ್ಟಿಸುತ್ತದೆ. ಪೊಲಿಯೋದಿಂದಾಗಿ ಅಂಗವೈಕಲ್ಯವನ್ನು ಸಲೀಮ್ ಪಡೆದುಕೊಂಡಿದ್ದಾರೆ. ಆದ್ರೆ ಸಲೀಮ್ ಮಾತ್ರ ಇಲ್ಲಿ ತನಕ ಯಾರ ನೆರವನ್ನೂ ಪಡೆದಿಲ್ಲ. ಆಫೀಸ್​ಗೆ ಹೋಗುವುದರಿಂದ ಹಿಡಿದು ಎಲ್ಲಾ ಕೆಲಸಗಳನ್ನು ತಾನೇ ನಿಭಾಯಿಸಿಕೊಳ್ಳುತ್ತಿದ್ದಾರೆ. ಸಲೀಮ್ ಮಾಡುವ ಕೆಲಸಗಳು ಅವರ ಕಚೇರಿಯಲ್ಲಿ ಕೆಲಸ ಮಾಡುವ ಹಲವರಿಗೆ ಮಾದರಿ ಆಗಿದ್ದಾರೆ.

ಇದನ್ನು ಓದಿ: ನಿಮ್ಮ ಸ್ಟಾರ್ಟ್​ಅಪ್​ ಗೆಲುವಿಗೆ ಇವಿಷ್ಟೇ ಮೂಲ ಕಾರಣ..!

ಎರಡು ದಶಕಗಳ ಹಿಂದೆ ಭಾರತ ವಿಶ್ವದಲ್ಲೇ ಇರುವ ಪೋಲಿಯೋ ಪೀಡಿತರ ಪೈಕಿ ಅರ್ಧದಷ್ಟನ್ನು ಹೊಂದಿತ್ತು. ಆದ್ರೆ ಕಳೆದ 4 ವರ್ಷಗಳಿಂದ ಭಾರತದಲ್ಲಿ ಒಂದೇ ಒಂದು ಪೋಲಿಯೋ ಕೇಸ್ ಕೂಡ ದಾಖಲಾಗಿಲ್ಲ ಅನ್ನುವುದು ಗಮನಾರ್ಹ. ಕಳೆದ ಮಾರ್ಚ್​ನಲ್ಲಿ ಭಾರತವನ್ನು ಪೋಲಿಯೋ ಮುಕ್ತ ರಾಷ್ಟ್ರ ಎಂದು ಘೋಷಿಸಲಾಗಿತ್ತು. ಪ್ರತೀ ವರ್ಷ ಸುಮಾರು 23 ಲಕ್ಷಕ್ಕೂ ಅಧಿಕ ಸ್ವಯಂ ಸೇವಕರು ಸರಕಾರ ನೀಡುವ ಪೋಲಿಯೋ ಡ್ರಾಪ್​ಗಳನ್ನು ಮಕ್ಕಳಿಗೆ ಹಾಕುವಲ್ಲಿ ಶ್ರಮಪಡುತ್ತಿದ್ದಾರೆ. ಒಟ್ಟಿನಲ್ಲಿ ಮಾನವೀಯತೆಯ ಇತಿಹಾಸದಲ್ಲಿ ಭಾರತ ಪೋಲಿಯೋವನ್ನು ದೂರಕ್ಕೆ ಓಡಿಸಿದ ಕಥೆ ನಿಜಕ್ಕೂ ಅವರ್ಣನೀಯ.

ಇದನ್ನು ಓದಿ:

1. ಆಡುವ ವಯಸ್ಸಿನಲ್ಲಿ ಉದ್ಯಮದ ಕನಸು- 13ನೇ ವರ್ಷದಲ್ಲೇ ಸಿಇಒ ಆಗಿ ದಾಖಲೆ ಬರೆದ ಯುವ ಉದ್ಯಮಿ

2. ಆಟದಲ್ಲಿ ಸೂಪರ್- ವ್ಯಕ್ತಿತ್ವದಲ್ಲಿ ಚಿನ್ನ- ಇದು ರಾಹುಲ್ ದ್ರಾವಿಡ್ ನಿಜಜೀವನದ ಕಥೆ

3. ಸಿನಿಮಾರಂಗದಲ್ಲಿ ಮೂವರು ಸಹೋದರರ ಸಾಹಸ- ಇದು ಖಾಸನೀಸ್​ ಕುಟುಂಬದ ಖಾಸ್​ಬಾತ್​​