ಹೆದರದೆ ಮುನ್ನುಗ್ಗಿ: ನಿಮ್ಮ ಹಿಂದೆ ನಾವಿದ್ದೇವೆ’ -ಪ್ರಿಯಾಂಕ ಖರ್ಗೆ

ಟೀಂ ವೈ.ಎಸ್.ಡಾಟ್ ಕನ್ನಡ

ಹೆದರದೆ ಮುನ್ನುಗ್ಗಿ: ನಿಮ್ಮ ಹಿಂದೆ ನಾವಿದ್ದೇವೆ’ -ಪ್ರಿಯಾಂಕ ಖರ್ಗೆ

Friday September 30, 2016,

2 min Read

ಯುವರ್ಸ್ಟೋರಿ ಆಯೋಜಿಸುತ್ತಿರುವ ಟೆಕ್ ಸ್ಪಾರ್ಕ್ 2016ರ 7ನೇ ಅವತರಣಿಕೆಗೆ ಬೆಂಗಳೂರಿನಲ್ಲಿ ಅದ್ಧೂರಿ ಚಾಲನೆ ಸಿಕ್ಕಿದೆ. ಐಟಿಬಿಟಿ ಹಾಗೂ ಪ್ರವಾಸೋದ್ಯಮ ಸಚಿವ ಪ್ರಿಯಾಂಕ ಖರ್ಗೆ ಟೆಕ್ ಸ್ಪಾರ್ಕ್ -2016ಕ್ಕೆ ಚಾಲನೆ ನೀಡಿದ್ದಾರೆ. ನಂತ್ರ ಮಾತನಾಡಿದ ಖರ್ಗೆ,ಯುವ ಉದ್ಯೋಗಿಗಳಿಗೆ ಪ್ರೋತ್ಸಾಹ ನೀಡುವ ಮಾತುಗಳನ್ನಾಡಿದ್ದಾರೆ.

ಯುವರ್ ಸ್ಟೋರಿಯ ಸಂಸ್ಥಾಪಕಿ ಶ್ರದ್ಧಾ ಶರ್ಮಾ ಅವರಿಗೆ ಅಭಿನಂಧನೆ ಸಲ್ಲಿಸಿದ ಖರ್ಗೆ ಸತತ 7 ವರ್ಷಗಳ ಕಾಲ ಹೋರಾಡಿದ ಶ್ರದ್ಧಾ ಸಾಧನೆಯನ್ನು ಶ್ಲಾಘಿಸಿದ್ದಾರೆ. ಭಾರತದಲ್ಲೊಂದೇ ಅಲ್ಲ ವಿಶ್ವದಲ್ಲಿಯೇ ಅತಿ ವೇಗದಲ್ಲಿ ಬೆಳೆಯುತ್ತಿರುವ ನಗರಗಳಲ್ಲಿ ಬೆಂಗಳೂರು ಕೂಡ ಒಂದು. ಭಾರತದ ತಂತ್ರಜ್ಞಾನ ಕ್ರಾಂತಿಯಲ್ಲಿ ಬೆಂಗಳೂರು ಮಹತ್ವದ ಪಾತ್ರವಹಿಸಿದೆ. ನಗರದಲ್ಲಿ 4000ಕ್ಕಿಂತಲೂ ಹೆಚ್ಚು ಸ್ಟಾರ್ಟ್ ಅಪ್ ಗಳಿವೆ ಎಂದು ಖರ್ಗೆ ಹೇಳಿದ್ದಾರೆ.

image


ರಾಜ್ಯ ಸರ್ಕಾರದ ಸ್ಟಾರ್ಟ್ ಅಪ್ ಫ್ರೆಂಡ್ಲಿ ಯೋಜನೆಗಳ ವಿವರವನ್ನು ಖರ್ಗೆ ಜನರ ಮುಂದಿಟ್ಟಿದ್ದಾರೆ. ನಮ್ಮ ಆರಂಭಿಕ ಸ್ಟಾರ್ಟ್ ಅಪ್ ಬೂಸ್ಟರ್ ಕಿಟ್ ಉದ್ಯಮ ಆರಂಭಕ್ಕೆ ಹಾಗೂ ಒಳ್ಳೆಯ ಬೆಳವಣಿಗೆಗೆ ಕಾರಣವಾಗುತ್ತದೆ ಎಂದವರು ಭರವಸೆ ನೀಡಿದ್ದಾರೆ.

ವಿರೋದದ ಮಾತುಗಳ ಬರ್ತಾ ಇರುತ್ವೆ. ನೆನಪಿಡಿ ವಿಮಾನ ಕೂಡ ಗಾಳಿಯಲ್ಲಿ ನುಗ್ಗಿ ಮುಂದೆ ಸಾಗುತ್ತೆ. ಹಾಗೆ ವಿರೋಧಿಗಳನ್ನು ಹತ್ತಿಕ್ಕಿ ಮುನ್ನುಗ್ಗಬೇಕೆಂಬ ಸಂದೇಶವನ್ನು ಖರ್ಗೆ ಉತ್ಸಾಹಿ ಯುವಕರಿಗೆ ನೀಡಿದ್ದಾರೆ. ಸ್ಟಾರ್ಟ್ ಅಪ್ ಒತ್ತಡದ ಕೆಲಸ ನಿಜ. ಆದ್ರೆ ಐಟಿಬಿಟಿ ಹಾಗೂ ಪ್ರವಾಸೋದ್ಯಮ ಸಚಿವರು ಒಬ್ಬರೆ ಆಗಿರುವುದರಿಂದ ನಿಮ್ಮ ಒತ್ತಡ ಸ್ವಲ್ಪಮಟ್ಟಿಗೆ ಕಡಿಮೆಯಾಗಲಿದೆ ಎಂದಿದ್ದಾರೆ ಸಚಿವರು.

ಸ್ಟಾರ್ಟ್ ಅಪ್ ವಿಚಾರದಲ್ಲಿ ರಾಜ್ಯ ಸರ್ಕಾರ ಎಂದೂ ಹಿಂದೆ ಬಿದ್ದಿಲ್ಲ. ಎರಡು ವರ್ಷದಲ್ಲಿ ಸ್ಟಾರ್ಟ್ ಅಪ್ ಗೆ ಕರ್ನಾಟಕ 1 ಬಿಲಿಯನ್ ಡಾಲರ್ ತೊಡಗಿಸಿದೆ. ಉಡುಪಿ,ಮಂಗಳೂರಿನಲ್ಲಿಯೂ ಸ್ಟಾರ್ಟ್ ಅಪ್ ಗೆ ಸಾಕಷ್ಟು ಬಂಡವಾಳ ವಿನಿಯೋಗಿಸಲಾಗಿದೆ . ಬೆಂಗಳೂರಿಗೆ ಸಾಕಷ್ಟು ಹೆಸರುಗಳಿವೆ. ವಿಶ್ವ ಮಟ್ಟದಲ್ಲಿ ಬೆಂಗಳೂರು ಹೆಸರು ಮಾಡಿದೆ. ಸದ್ಯ ಬೆಂಗಳೂರನ್ನು ಸ್ಟಾರ್ಟ್ ಅಪ್ ಸಿಟಿ ಎಂದು ಕರೆಯಲಾಗ್ತಿದೆ. ವೇಗವಾಗಿ ಬೆಳೆಯುತ್ತಿರುವ ಕರ್ನಾಟಕದಲ್ಲಿ ರಾಜ್ಯ ಸರ್ಕಾರ ಹೊಸ ಉದ್ಯೋಗಿಗಳ ಕೈ ಹಿಡಿಯಲಿದೆ. ಶ್ರದ್ಧಾ 7 ವರ್ಷಗಳ ಕಾಲ ಕಷ್ಟಪಟ್ಟಿದ್ದಾರೆ. ಆದ್ರೆ ಈಗಿನ ಉದ್ಯೋಗಿಗಳು ಯಶಸ್ಸಿಗಾಗಿ ಅಷ್ಟು ವರ್ಷ ಕಾಯಬೇಕಾಗಿಲ್ಲ ಎಂದು ಖರ್ಗೆ ಸ್ಟಾರ್ಟ್ ಅಪ್ ಗಳ ಬೆನ್ನು ತಟ್ಟಿದ್ದಾರೆ.

ಉದ್ಯಮಿ ಆಗುವುದು ಸುಲಭದ ಮಾತಲ್ಲ. ಉದ್ಯಮಿ ಆಗುವ ಬಗ್ಗೆ ಕನಸು ಕಾಣಬಹುದು. ಆದ್ರೆ ಆ ಕನಸನ್ನು ನನಸು ಮಾಡಿಕೊಳ್ಳೋದಿಕ್ಕೆ ದಾರಿಗಳನ್ನು ಹುಡುಕಬೇಕು. ಯುವರ್ ಸ್ಟೋರಿ ನಿಮ್ಮ ಉದ್ಯಮಕ್ಕೆ ಹೊಸ ಸ್ಪರ್ಶ ನೀಡಬಲ್ಲಂತಹ ಅವಕಾಶವನ್ನು ನೀಡುತ್ತಿದೆ. ನಿಮ್ಮ ಉದ್ಯಮದ ಬೆಳವಣಿಗೆಗೆ ಹೊಸ ದಾರಿಯನ್ನು ತೋರಿಸಲು ಕೂಡ ಸಜ್ಜಾಗಿದೆ.

ಏಳನೇ ವರ್ಷದ ಸಂಭ್ರಮದಲ್ಲಿರುವ “ಟೆಕ್ಸ್ಪಾರ್ಕ್” ಭಾರತದ ಉದ್ದಗಲಕ್ಕೂ ಸದ್ದು ಮಾಡಿದೆ. ಉದ್ಯಮ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲನ್ನು ಕೂಡ ನೆಟ್ಟಿದೆ. ಈಗಾಗಲೇ ಟೆಕ್ಸ್ಪಾರ್ಕ್ ಹೈದ್ರಬಾದ್, ಇಂಧೋರ್, ಕೊಲ್ಕತ್ತಾ, ಮುಂಬೈ, ಪುಣೆ, ಜೈಪುರ, ಚಂಡೀಗಢ, ದೆಹಲಿ, ಚೆನ್ನೈ ಮತ್ತು ಅಹ್ಮದಾಬಾದ್ಗಳಲ್ಲಿ ಅಭೂತಪೂರ್ವ ಯಶಸ್ಸು ಕಂಡಿದೆ. “ಟೆಕ್ಸ್ಪಾರ್ಕ್- 2016”ರ ಗ್ರಾಂಡ್ ಫಿನಾಲೆ ಬೆಂಗಳೂರಿನಲ್ಲಿ ನಡೆಯುತ್ತಿದೆ.

2ದಿನಗಳ ಕಾಲ ನಡೆಯುವ “ಟೆಕ್ಸ್ಪಾರ್ಕ್- 2016”ನಲ್ಲಿ 3000ಕ್ಕೂ ಅಧಿಕ ಉದ್ಯಮಿಗಳು, ಸ್ಟಾರ್ಟ್ಅಪ್ಗಳ ಮಾಲೀಕರು ಭಾಗವಹಿಸಲಿದ್ದಾರೆ. ಅವರ ಯಶಸ್ಸಿನ ಕಥೆ ಹಾಗೂ ಅಭಿವೃದ್ಧಿಯ ನಡೆಯನ್ನು ಕೂಡ ಹೇಳಿಕೊಳ್ಳಲಿದ್ದಾರೆ. ಅವರ ಜೊತೆ ಮಾತನಾಡುವುದಕ್ಕೆ ಮುಕ್ತ ಅವಕಾಶವೂ ಸಿಗಲಿದೆ. ನಿಮ್ಮ ಕನಸಿನ ಸ್ಟಾರ್ಟ್ಅಪ್, ಉದ್ದಿಮೆಗಳನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ಇದು ಅವಕಾಶ ನೀಡಬಹುದು.