ಬೆಂಗಳೂರು ಗಾಲ್ಫ್​​ ಪವರ್​​ ಹೌಸ್​​​..!

ಎನ್​​.ಎಸ್​. ರವಿ

0

ಅಭಿವೃದ್ದಿಯ ಹೆಸರು ಬಂದಾಗ ಅಲ್ಲಿ ಬೆಂಗಳೂರಿನ ಹೆಸರು ಬರಲೇ ಬೇಕು. ಯಾಕಂದ್ರೆ ಈ ಸಿಲಿಕಾನ್ ಸಿಟಿ ಎಲ್ಲಾ ರೀತಿಯಲ್ಲೂ ಪ್ರಗತಿ ಪಥದಲ್ಲಿ ಸಾಗುತ್ತಿದೆ. ಇಷ್ಟು ದಿನ ಐಟಿಬಿಟಿಗೆ ಖ್ಯಾತಿಯಾಗಿದ್ದ ಬೆಂಗಳೂರು ಸದ್ಯ ಶ್ರೀಮಂತರ ಆಟ, ಗಾಲ್ಫ್​​​ನ ತವರೂರು ಆಗಿದೆ. ದೇಶದ ಅನೇಕ ವೃತ್ತಿಪರ ಆಟಗಾರರಿಗೆ, ಈ ಹಂತಕ್ಕೆ ಬೆಳೆಯಲು ಉದ್ಯಾನನಗರಿ ಕಾರಣವಾಗಿದೆ.

ಬೆಂಗಳೂರು ಯಾವುದೇ ಒಂದು ಆಟಕ್ಕೆ ಸೀಮಿತವಾಗಿಲ್ಲ. ಇಲ್ಲಿ ಎಲ್ಲ ಕ್ರೀಡೆಗೂ ಸಖತ್ ಪ್ರೋತ್ಸಾಹವಿದೆ. ಏನಾದ್ರು ಸಾಧಿಸಬೇಕು ಎಂಬ ಛಲವಿರುವವರಿಗೆ ಬೆಂಗಳೂರಿನಲ್ಲಿ ಎಲ್ಲ ರೀತಿಯ ತರಬೇತಿ ಮತ್ತು ಪೂರಕವಾದ ವಾತಾವರಣ ಸಿಗುತ್ತದೆ. ಹಾಗಾಗಿ ಇಂದು ಈ ನಗರ ಸ್ಪೋರ್ಟ್ಸ್ ಹಬ್ ಆಗಿ ಬದಲಾಗಿದೆ.

ಇಂದು ದೇಶದಲ್ಲಿ ಯಾವುದೇ ಲೀಗ್ ಆರಂಭವಾಗಲಿ ಅಲ್ಲಿ ಬೆಂಗಳೂರು ಆಧಾರಿತ ತಂಡವೊಂದು ಇರುತ್ತದೆ. ಬೆಂಗಳೂರು ಆಧಾರಿತ ತಂಡವೊಂದನ್ನು ಖರೀದಿಸಲು ಫ್ರಾಂಚೈಸಿಗಳು ನಾ ಮುಂದು, ತಾ ಮುಂದು ಎಂದು ಮುನ್ನುಗ್ಗುತ್ತಾರೆ. ಯಾಕಂದ್ರೆ ಬೆಂಗಳೂರಿನ ಅಭಿಮಾನಿಗಳು ಕೂಡ ತಮ್ಮ ಫ್ರಾಂಚೈಸಿಗಳನ್ನು ಅಷ್ಟು ಪ್ರೀತಿಯಿಂದ ಚಿಯರ್ ಮಾಡ್ತಾರೆ, ಸಪೊರ್ಟ್ ಮಾಡ್ತಾರೆ.

ಇದುವರೆಗೂ ಕೇವಲ ಕ್ರಿಕೆಟ್, ಹಾಕಿ, ಫುಟ್ಬಾಲ್, ಟೆನಿಸ್, ಕಬಡ್ಡಿ, ಬ್ಯಾಡ್ಮಿಂಟನ್, ಸ್ನೂಕರ್ ಎಲ್ಲದರಲ್ಲಿಯೂ ಬೆಂಗಳೂರು ಅಗ್ರಸ್ಥಾನದಲ್ಲಿದೆ. ಟ್ರ್ಯಾಕ್ ಎಂಡ್ ಫೀಲ್ಡ್ ಮತ್ತು ಅಥ್ಲೆಟಿಕ್ಸ್​ನಲ್ಲೂ ರಾಜ್ಯದ ರಾಜಧಾನಿ ಮುಂಚೂಣಿಯಲ್ಲಿದೆ.

ಕಳೆದ ಐದು ವರ್ಷದಲ್ಲಿ ಬೆಂಗಳೂರು ಗಾಲ್ಫ್​​ನಲ್ಲೂ ತನ್ನದೆಯಾದ ಹೆಸರನ್ನು ಮಾಡಿದೆ. ಈಗಾಗಲೇ ಏಷ್ಯಾದ ನಂಬರ್-2 ಶ್ರೇಯಾಂಕಿತ ಆಟಗಾರ ಅನಿರ್ಬನ್ ಲಹಿರಿ, ಭಾರತದ ಉದಯೋನ್ಮುಖ ಗಾಲ್ಫರ್​​ ಚಿಕ್ಕರಂಗಪ್ಪ ಮತ್ತು ಮಹಿಳೆ ವಿಭಾಗದ ನಂಬರ್​​ವನ್​​ ಆಟಗಾರ್ತಿ ಶರ್ಮಿಳಾ ನಿಕೊಲೆಟ್ ಕೂಡ ಬೆಂಗಳೂರಿನವರು. ಇಷ್ಟಲ್ಲದೆ ಇನ್ನೂ ಅನೇಕ ಹುಡುಗ-ಹುಡಗಿಯರು ಈ ಹಾದಿಯಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಕೆಲ ವರ್ಷಗಳ ಹಿಂದೆ ದೆಹಲಿ, ಚಂಡೀಗಡ್ ಮತ್ತು ಮುಂಬೈಗೆ ಸೀಮಿತವಾಗಿದ್ದ ಗಾಲ್ಫ್ ಇದ್ದಕ್ಕಿದಂತೆ ಬೆಂಗಳೂರಿಗೆ ಶಿಫ್ಟ್ ಆದಂತಾಗಿದೆ. ಭಾರತದಲ್ಲಿ ಸದ್ಯ ಮಿಂಚುತ್ತಿರುವ ಬಹುತೇಕ ಗಾಲ್ಫ್ ಆಟಗಾರರು ಬೆಂಗಳೂರಿನವರೇ. ಆದರಿಂದ ಈಗ ಗಾಲ್ಫ್ ಕೇವಲ ಪ್ರತಿಷ್ಠಯ ಆಟ ಅಥವಾ ಟೈಂ ಪಾಸ್​ಗಾಗಿ ಆಡುವ ಆಟವಾಗಿ ಉಳಿದಿಲ್ಲ. ಅದು ಈಗ ಭವಿಷ್ಯವನ್ನು ರೂಪಿಸಿಕೊಳ್ಳಲ್ಲು, ಹಣ ಸಂಪಾದಿಸುವ ಮಾರ್ಗವಾಗಿದೆ..

ಬೆಂಗಳೂರಿನಿಂದ ಸ್ಟಾರ್ ಆಟಗಾರರು ಬಂದಿರುವುದು ಅನೇಕರಿಗೆ ಈ ಕ್ರೀಡೆಯತ್ತ ಆಕರ್ಷಿತರಾಗಲು ಕಾರಣವಾಗಿಲ್ಲ. ಈ ಆಟದಲ್ಲಿ ಮಿಂಚುತ್ತಿರುವ ಯಶೋಗಾಥೆ ಕೂಡ ಗಾಲ್ಫ್á ಆಡುವಂತೆ ಅನೇಕರನ್ನು ಕೈಬೀಸಿ ಕರೆಯುತ್ತಿದೆ. ಬೇರೆ ಗೇಮ್ನಲ್ಲಿರುವ ಆಟಗಾರರಿಗೂ ಇವರು ಸ್ಪೂರ್ತಿಯಾಗಿದ್ದಾರೆ. ಚಿಕ್ಕರಂಗಪ್ಪ ಮತ್ತು ಅನಿರಬನ್ ಲಹಿರಿ ಕೂಡ ಇಂತಹದೇ ಸನ್ನಿವೇಶದಿಂದ ಬಂದವರು. ಗಾಲ್ಫ್ನ ಇಷ್ಟಪಟ್ಟು ಕಷ್ಟಪಟ್ಟಿ ಆಡಿ ಇಂದು ಭಾರತದ ಸ್ಟಾರ್ ಆಟಗಾರರಾಗಿದ್ದಾರೆ..

ಕ್ಯಾಡಿಬಾಯ್ ಆಗಿದ್ದ ಚಿಕ್ಕರಂಗಪ್ಪ ಟೈಂಪಾಸ್​​ಗಾಗಿ ಗಾಲ್ಫ್ ಆಡುತ್ತಿದ್ದವರ ಉಪಕರಣಗಳನ್ನು ಸಾಗಿಸುವ ಕೆಲಸ ಮಾಡುತ್ತಿದ್ರು. ಆದರೆ ಸಮಯ ಸಿಕ್ಕಾಗೆಲ್ಲ ಅವರು ಗಾಲ್ಫ್ ಅಭ್ಯಾಸ ಮಾಡುತ್ತಿದ್ರು. ಹೊಟ್ಟೆ ಪಾಡಿಗಾಗಿ ಕ್ಯಾಡಿಬಾಯ್ ಆಗಿದ್ದ ಅವರು ಇಂದು ಭಾರತದ ಉದಯೋನ್ಮುಖ ಆಟಗಾರ. ವಿಶ್ವದಾದ್ಯಂತ ಈಗಾಗ್ಲೇ ತಮ್ಮ ಅಮೋಘ ಆಟದಿಂದ ಕೀರ್ತಿ ಪತಾಕೆ ಹಾರಿಸಿದ್ದಾರೆ.

ಮತ್ತೊಂದೆಡೆ ಅನಿರ್ಬನ್ ಲಹಿರಿ ಕಥೆ ಕೂಡ ಅಷ್ಟೇ ರೋಚಕ. ಸಾಮಾನ್ಯ ಮಧ್ಯಮ ವರ್ಗದ ಕುಟುಂಬದಿಂದ ಬಂದ ಅವರಿಗೆ ಜೀವ್ ಮಿಲ್ಕಾ ಸಿಂಗ್ ಪ್ರೇರಣೆಯಾಗಿದ್ರು, ಹಾಗಾಗಿ ಅವರು ಗಾಲ್ಫ್ ಆಡಲು ಶುರು ಮಾಡಿದ್ರು, ಕಷ್ಟವಾದ್ರೂ ತಂದೆ-ತಾಯಿಗಳು ಮಗನಿಗೆ ಆಟವಾಡಲು ಪ್ರೇರಣೆಯಾದ್ರು, ಈಗ ಅನಿರ್ಬನ್ ತಮ್ಮ ಕಾಲಿನ ಮೇಲೆ ತಾವು ನಿಂತುಕೊಂಡಿದ್ದಾರೆ. ಅವರಿಗೆ ಅನೇಕ ಪ್ರಶಸ್ತಿ ಮತ್ತು ನಗದು ಬಹುಮಾನ ಕೂಡ ಬಂದಿವೆ.

"ಉತ್ತಮ ಗಾಲ್ಫರ್ ಆಗಬೇಕಾದ್ರೆ, ಐರೋಪ್ಯ ರಾಷ್ಟ್ರದಲ್ಲಿ ಆಡಬೇಕು. ಅದರಲ್ಲೂ ಅಮೇರಿಕಾದಲ್ಲಿ ಗಾಲ್ಫ್ ಆಡುವವರಿಗೆ ಉತ್ತಮ ಭವಿಷ್ಯವಿದೆ, ಹಾಗಾಗಿ ನಾನು ಅಮೇರಿಕಾಗೆ ಹೋಗಿ ನೆಲೆಸಲು ಮುಂದಾಗಿದ್ದೇನೆ. ಮುಂದಿನ ರೀಯೋ ಒಲಂಪಿಕ್ಸ್​​ನಲ್ಲಿ ನಾನು ಭಾಗವಹಿಸಬೇಕು ಅದಕ್ಕಾಗಿ, ಉತ್ತಮ ಅಭ್ಯಾಸದ ಅವಶ್ಯಕತೆಯಿದೆ. ಅಮೇರಿಕಾದಲ್ಲಿ ಗಾಲ್ಫ್ ಎನ್ನುವುದು ಉತ್ಕೃಷ್ಟ ಹಂತದಲ್ಲಿದೆ. ಪ್ರತಿವಾರ ಅಲ್ಲಿ ಒಂದಲ್ಲ ಒಂದು ಪ್ರತಿಷ್ಠಿತ ಗಾಲ್ಫ್ ಟೂರ್ನಿ ನಡೆಯುತ್ತದೆ. ಏಷ್ಯಾಗೆ ಹೋಲಿಸಿದ್ರೆ. ಅಮೇರಿಕಾದಲ್ಲಿ ನಡೆಯುವ ಟೂರ್ನಿಗಳಲ್ಲಿನ ಗುಣಮಟ್ಟ ಮತ್ತು ಅಲ್ಲಿನ ಆಟಗಾರರ ಗುಣಮಟ್ಟ ಉನ್ನತವಾಗಿದೆ" ಎಂತಾರೆ” ಅನಿರ್ಬನ್.

ಇದುವರೆಗೂ ಕೇವಲ ಕ್ರಿಕೆಟರ್, ಟೆನಿಸ್ , ಬ್ಯಾಡ್ಮಿಂಟನ್ ಆಟಗಾರರನ್ನು ರಾಯಭಾರಿಯಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದ ಕಾರ್ಪೋರೇಟ್ ಕಂಪನಿಗಳು ಈಗ ಗಾಲ್ಫ್ ಆಟಗಾರರನ್ನು ಸಹಿ ಮಾಡಿಸಿಕೊಳ್ಳುತ್ತಿವೆ. ಸ್ಥಳೀಯ ಬ್ರ್ಯಾಂಡ್​ಗಳು ಮತ್ತು ಸ್ಪೋರ್ಟ್ಸ್ ಉಡುಪು ತಯಾರಿಕ ಕಂಪನಿಗಳು ಎಲ್ಲಾ ರೀತಿಯ ಸವಲತ್ತುಗಳನ್ನು ನೀಡುತ್ತಿವೆ. ಮೊನ್ನಯಷ್ಟೇ `ಹಿಂದೂಜಾ ಗ್ರೂಪ್ ಆಫ್ ಕಂಪನಿ’ ಅನಿರ್ಬನ್ ಲಹಿರಿ ಅವರನ್ನು ರಾಯಭಾರಿಯಾಗಿ ಆಯ್ಕೆ ಮಾಡಿಕೊಂಡಿದೆ. ಹಲವು ಕಂಪನಿಗಳು ಕೂಡ ಈಗ ಅನೇಕ ಗಾಲ್ಫರ್​​ಗಳನ್ನು ಒಪ್ಪಂದಕ್ಕೆ ಸಹಿ ಮಾಡಿಕೊಳ್ಳುತ್ತಿವೆ. ಹಾಗಾಗಿ ಗಾಲ್ಫ್ ಈಗ ಕೇವಲ ಆಟವಾಗಿ ಉಳಿದಿಲ್ಲ. ಇದು ಭವಿಷ್ಯ ರೂಪಿಸಿಕೊಳ್ಳುವ ಹೊಸ ವಿದಾನವಾಗಿದೆ.

ಬೆಂಗಳೂರು ಎಲ್ಲ ರೀತಿಯಿಂದಲೂ ಕ್ರೀಡಾಪಟುಗಳಿಗೆ, ಕ್ರೀಡಾ ಬೆಳವಣಿಗೆಗೆ ಪೂರಕವಾಗಿರುವ ನಗರವಾಗಿದೆ. ಹಾಗಾಗಿಯೇ ಜೆಎಸ್​ಡಬ್ಲ್ಯೂ ಒಂದು ಫುಟ್ಬಾಲ್ ತಂಡ ಮತ್ತು ಒಂದು ರೆಸ್ಲಿಂಗ್ ತಂಡದ ಮಾಲಿಕತ್ವವನ್ನು ಹೊಂದಿದೆ. ವಿಜಯ್ ಮಲ್ಯ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಕ್ರಿಕೆಟ್ ತಂಡದ ಮಾಲಿಕತ್ವ ಹೊಂದಿದ್ದಾರೆ. ಕಾಸ್ಮಿಕ್ ಕಂಪನಿ ಮಾಲಿಕ ಉದಯ್ ಸಿಂಗ್ ವಾಲಾ ಬೆಂಗಳೂರು ಬುಲ್ಸ್ ತಂಡವೊಂದಿದ್ದಾರೆ. ಇನ್ನೂ ಹಾಕಿ ಲೀಗ್ ಮತ್ತು ಬ್ಯಾಡ್ಮಿಂಟನ್ ಲೀಗ್​​ನಲ್ಲೂ ಬೆಂಗಳೂರು ಮೂಲದ ತಂಡಗಳಿವೆ. ಬೇರೆ ನಗರ ಆಧಾರಿತ ಫ್ರಾಂಚೈಸಿಗಳಿಗೆ ಹೋಲಿಸಿದ್ರೆ, ಬೆಂಗಳೂರಿನ ತಂಡಗಳಿಗೆ ಹೆಚ್ಚಿನ ಅಭಿಮಾನಿಗಳಿರಿವುದು ವಿಶೇಷ.

ಬೆಂಗಳೂರು ಬುಲ್ಸ್ ಕಬಡ್ಡಿ ತಂಡದ ಮಾಲಿಕ ಉದಯ್​​ಸಿಂಗ್ ವಾಲಾ ಹೇಳುವಂತೆ ಇಡೀ ಪ್ರೋ- ಕಬಡ್ಡಿ ಲೀಗ್​​ನಲ್ಲಿ ಹೆಚ್ಚು ಟಿಆರ್​​ಪಿ ಬಂದಿದ್ದು, ಒಳ್ಳೆಯ ಅಭೀಮಾನಿಗಳು ಕಾಣಿಸಿಕೊಂಡಿದ್ದು, ಬೆಂಗಳೂರಿನಲ್ಲಿ ಮಾತ್ರ. ಫೇಸ್​​ಬುಕ್​​​, ಫ್ಯಾನ್ ಫಾಲೋವರ್ಸ್, ಎಲ್ಲಾ ಸಾಮಾಜಿಕ ಜಾಲ ತಾಣದಲ್ಲೂ ಬುಲ್ಸ್​​ಗೆ ಹೆಚ್ಚಿನ ಅಭಿಮಾನಿಗಳಿದ್ದಾರೆ. ಜೆಎಸ್​​ಡಬ್ಲ್ಯೂಅವರ ಬೆಂಗಳೂರು ಎಫ್​​ಸಿ ತಂಡಕ್ಕೂ ಹೆಚ್ಚಿನ ಅಭಿಮಾನಿಗಳಿದ್ದಾರೆ. ಹಾಗಾಗಿ ಬೆಂಗಳೂರು, ಬೆಂಗಳೂರಿಗರು ಎಲ್ಲ ಕ್ರೀಡೆಗಳಿಗೂ ಹೆಚ್ಚಿ ಪ್ರೋತ್ಸಾಹ ನೀಡುತ್ತಾರೆ.

ಗಾಲ್ಫರ್​​ಗಳಿಗೂ ಈಗ ಉತ್ತಮ ತರಬೇತಿ ಸಿಗುತ್ತಿದೆ. ಜೊತೆಗೆ ಹಲವು ಪ್ರತಿಷ್ಠಿತ ಕಂಪನಿಗಳು ಸಹ ಟೂರ್ನಿ ಆಯೋಜಿಸುತ್ತಿವೆ. ಬಹುರಾಷ್ಟ್ರೀಯ ಕಂಪನಿಗಳು ಆಟಗಾರರಿಗೆ ಪ್ರಾಯೋಜಕತ್ವ ನೀಡುತ್ತಿವೆ. ಜೊತೆಗೆ ಟೂರ್ನಿಗಳನ್ನು ಆಯೋಜಿಸುತ್ತಿವೆ, ಬೆಂಗಳೂರಿನಲ್ಲಿ ಆಡುವ ಗಾಲ್ಫರ್​​ಗಳಿಗೆ ಬೆಂಗಳೂರು ಮೂಲದ ಕಂಪನಿಗಳು ಸಹಾಯಕ್ಕೆ ಬರುತ್ತಿವೆ. ಇಲ್ಲೇ ಅನೇಕ ಪ್ರತಿಷ್ಠಿತ ಟೂರ್ನಿಗಳು ನಡೆಯುತ್ತಿರುವಯದರಿಂದ, ಗಾಲ್ಫರ್​​ಗಳ ಆಟಗಾರರ ಬೆಳವಣಿಗೆಗೆ ಬೆಂಗಳೂರು ಎಂಬ ಹೆಸರು ಸಹಾಯವಾಗುತ್ತಿದೆ. ಹಾಗಾಗಿ ಬೆಂಗಳೂರು ಗಾಲ್ಫ್​​ ಹಬ್ ಆಗಿ ಬೆಳೆಯುತ್ತಿದೆ.