"ಬಾಲೆ"ಇದು ವುಮೆನ್ ಹುಡ್ ಸೆಲೆಬ್ರೇಷನ್

ಟೀಮ್​ ವೈ.ಎಸ್​. ಕನ್ನಡ

2

ವುಮೆನ್ ಹುಡ್ ಸೆಲೆಬ್ರೇಟ್ ಮಾಡೋದು ಎಲ್ಲಾ ಮಹಿಳೆಯರಿಗೂ ಫೇವರಿಟ್. ಅದಕ್ಕಾಗಿಯೇ ಅಂತರಾಷ್ಟ್ರೀಯ ವುಮನ್ಸ್ ಡೇ ಕೂಡ ಸೆಲಬ್ರೇಟ್ ಮಾಡ್ತಿವಿ. ಇನ್ನು ಕಲಾ ಲೋಕದಲ್ಲಿರುವವರು ವಿಭಿನ್ನವಾಗಿ ವುಮೆನ್ ಹುಡ್ ಸೆಲೆಬ್ರೇಟ್ ಮಾಡ್ತಾರೆ. ಅದರಲ್ಲೂ ಮಹಿಳೆಯ ಜೀವನದ ಸಾರ್ಥಕತೆಯನ್ನು ಸಾರುವ ಬಾಲೆ ನೃತ್ಯ ಸದ್ಯ ಯೂಟ್ಯೂಬ್​ನಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ.

ಡ್ಯಾನ್ಸ್ ಅದೊಂದು ಹಿಡನ್ ಸೋಲ್. ಎಲ್ಲ ನೋವುಗಳನ್ನು ಹೀಲ್ ಮಾಡುವ ಒಂದು ಥೆರಪಿ. ಅದರಲ್ಲೂ ಇವತ್ತಿನ ಮಹಿಳೆಯರ ಎಷ್ಟೋ ಮಾನಸಿಕ ನೋವುಗಳಿಗೆ ಸಮಧಾನ ಹೇಳುವ ಈ ಬಾಲೆ ನೃತ್ಯ ಹೀಲಿಂಗ್ ಪವರ್​ನಂತೆ ಕೆಲಸ ಮಾಡಿದೆ.  

ಇದನ್ನು ಓದಿ: ಆಡುವ ವಯಸ್ಸಿನಲ್ಲಿ ಉದ್ಯಮದ ಕನಸು- 13ನೇ ವರ್ಷದಲ್ಲೇ ಸಿಇಒ ಆಗಿ ದಾಖಲೆ ಬರೆದ ಯುವ ಉದ್ಯಮಿ

ವರ್ಲ್ಡ್ ಮ್ಯೂಸಿಕ್ ಫೆಸ್ಟಿವಲ್ ಫೌಂಡೇಷನ್​ನ ಫೌಂಡರ್ ಡೈರೆಕ್ಟರ್ ಮತ್ತು ಬ್ಯಾಲೆ ನೃತ್ಯದ ಸಾಹಿತ್ಯ ಮತ್ತು ಕೋರಿಯೋಗ್ರಫಿ ಮಾಡಿರುವ ಶೃತಿ ನಂಬೂದರಿ ಇವರ ಪ್ರಯತ್ನ ಎಲ್ಲರಿಂದಲೂ ಮೆಚ್ಚುಗೆ ಗಳಿಸಿದೆ. ಸುದೀಪ್ ಪಲ್ನಾಡ್ ಧ್ವನಿ ಹಾಂಟಿಂಗ್ ಫೀಲ್ ನೀಡುತ್ತೆ. ಇನ್ನು ಹೆಣ್ಣಿನ ಗುಣಗಳನ್ನು ಬೇರೆಯದೇ ರೀತಿಯಲ್ಲಿ ವರ್ಣಿಸಿ ಆಕೆಗೆ ಸಲ್ಲಿರುವ ಗೌರವ ಎಲ್ಲರಿಂದಲೂ ಶಹಬ್ಬಾಸ್ ಪಡೆಯುತ್ತಿದೆ. ಬೇರೆ ಬೇರೆ ನೃತ್ಯ ಪಟುಗಳು ಈ ವಿಡಿಯೋದಲ್ಲಿ ಕಾಣಿಸಿಕೊಂಡಿರುವ ರೀತಿಯೇ ಹೆಚ್ಚು ಅಟ್ರ್ಯಾಕ್ಟೀವ್ ಎನಿಸುತ್ತೆ. ಪ್ರತಿಯೊಬ್ಬರ ಉಡುಗೆ ತೊಡುಗೆಗಳು ಎಂದಿನಂತೆ ಇಲ್ಲದೇ ವಿಶೇಷವಾಗಿದೆ. ಇನ್ನು ಭಾವಾಭಿನಯ ಕೂಡ ಫ್ರೆಶ್ ಫಿಲ್ ಕೊಡುತ್ತೆ.

ಸೋಲ್​ಫುಲ್ ಮ್ಯೂಸಿಕ್, ಹಾರ್ಟ್ ಮೆಲ್ಟಿಂಗ್ ಲಿರಿಕ್ಸ್ ಜೊತೆಗೆ ಹೃದಯದ ಆಳಕ್ಕಿಳಿಯುವ ಭಾವನೆ ನೃತ್ಯದಲ್ಲಿ ಸೇರಿಕೊಂಡಿದೆ. ಹಾಡಿನ ಒಂದೊಂದು ಸಾಲುಗಳು ಕೂಡ ಹೊಸ ಹೊಸ ಭಾವನೆ ಮೂಡಿಸುತ್ತದೆ. ಸಿನಿಮಾ ನಟಿ, ಕೋಡಿಯಾಟಮ್ ಕಲಾವಿದರು, ಓಡಿಸಿ ಡ್ಯಾನ್ಸ್ ಫಾರ್ಮ್​ಗಳ ಭಾಗವಹಿಸುವಿಕೆ ಇವತ್ತಿನ ಕಾಂಟೆಪರರಿಯ ನೃತ್ಯದ ಫೀಲ್ ನೀಡುತ್ತದೆ.

" ನಾನು ಸಾಹಿತ್ಯಕ್ಕೆ ತಕ್ಕಂತೆ ಡೈರೆಕ್ಟ್ ಮಾಡಲಿಲ್ಲ, ಅದರ ಭಾವನೆ ಹೊರ ಹೊಮ್ಮಲು ಸುಮ್ಮನೇ ಬಿಟ್ಟು ಬಿಟ್ಟೆ . ಅದು ತನ್ನ ತಾನೇ ಚೆನ್ನಾಗಿ ಮೂಡಿ ಬಂತು . ಅದು ಕಂಪ್ಲೀಟ್ ಡಿವೈನ್ ಫೀಲಿಂಗ್"
-  ಶೃತಿ ನಂಬೂದರಿ, ವರ್ಲ್ಡ್ ಮ್ಯೂಸಿಕ್ ಫೆಸ್ಟಿವಲ್ ಫೌಂಡೇಷನ್​ನ ಫೌಂಡರ್ ಡೈರೆಕ್ಟರ್

ಭಾಷೆ ತಿಳಿಯದರವರು ಸಹ ಮೆಚ್ಚುವ ಮತ್ತು ಫೀಲ್ ಮಾಡುವ, ಪ್ರತಿ ಹೆಣ್ಣಿಗೂ ಒಂದು ಫ್ರೀಡಮ್ ಮತ್ತು ಸ್ಟ್ರೆಂಥ್ ನೀಡುವ ಶಕ್ತಿ  ಹಾಡಿಗಿದೆ. ಇನ್ನು ಇದು ಸಂಪೂರ್ಣ ಮಹಿಳೆಯ ಅಭಿವ್ಯಕ್ತಿಯಾದ್ರೂ ಎಲ್ಲೂ ಸಹ ಪುರುಷರನ್ನು ದ್ವೇಷಿಸುವುದಿಲ್ಲ. ಇಲ್ಲಿ ಮದರ್ ಹುಡ್ ಫಿಲಿಂಗ್ ಕೂಡ ಸೇರಿಕೊಂಡಿದೆ. ಹೆಣ್ಣನ್ನು ಕೂಡಿ ಹಾಕುವ ಮೂಲಕ ಅವಳಿಗೆ ರಕ್ಷಣೆ ಕೊಡುವ ಬದಲಿಗೆ, ಅವಳಿಗೆ ಪಯಣಿಸುವ ಸ್ವಾತಂತ್ರ್ಯ ನೀಡಿ ಅನ್ನೋದು ಇಲ್ಲಿ ಅನುಭವಕ್ಕೆ ಬರುತ್ತೆ.

ಇನ್ನು ಇಂಟರ್ನೆಟ್ ಇವತ್ತು ಎಲ್ಲರ ಸ್ವಾತಂತ್ರ್ಯಕ್ಕೆ ಬೆಲೆ ನೀಡಿದೆ. ಪ್ರತಿಯೊಬ್ಬರ ಮಾತಿಗೂ ವಾಯ್ಸ್ ಆಗಿದೆ. ಅದನ್ನು ಸದುಪಯೋಗ ಮಾಡಿಕೊಂಡು ಈ ವಿಡಿಯೋ ಪ್ರಯತ್ನ ಮಾಡಲಾಗಿದೆ. ಈಗಾಗಲೇ ಒಂದು ತಿಂಗಳಲ್ಲೇ 2 ಲಕ್ಷಕ್ಕೂ ಅಧಿಕ ವೀವ್ಸ್ ಹೊಂದಿದ್ದು, ದೇಶದದ ನಾನಾ ಮೂಲೆಯ ವಿಭಿನ್ನ ರೀತಿಯ , ಕ್ಷೇತ್ರದ ಮಹಿಳೆಯರಿಂದ ಪ್ರಶಂಶೆಗೆ ಒಳಗಾಗಿದೆ. ಒಂದು ರೀತಿ ವುಮೆನ್ ರೆವಲ್ಯೂಷನ್ ಅಂತಲೇ ಹೇಳಬಹುದು. ಹೀಗೆ ಬಾಲೆಯಂಥ ಪ್ರಯತ್ನಗಳು ಇನ್ನು ಹೆಚ್ಚುತ್ತಿರಲಿ. ಆ ಮೂಲಕ ಸಾಂಸ್ಕ್ರತಿಕ ಆರ್ಥಿಕ ಸ್ವಾತಂತ್ರ್ಯ ಹೆಣ್ಣು ಮಕ್ಕಳಿಗೆ ದಕ್ಕಲಿ ಅನ್ನೋದು ವಿಡಿಯೋ ನೋಡಿದ ಮೇಲೆ ಮೋಟಿವೇಟ್ ಆಗುತ್ತೆ . ಅಲ್ಲಿಗೆ ಶೃತಿಯವರ ಶ್ರಮ ಸಾರ್ಥಕ ಅಲ್ವಾ.

ಇದನ್ನು ಓದಿ:

1. ಕನ್ನಡಿಗರ ಒಡನಾಡಿ- ಕೃಷಿಕರ ಜೀವನಾಡಿ- ಕೇವಲ ನೆನಪಾಗಿ ಉಳಿಯಲಿದೆ ಮೈಸೂರು ಬ್ಯಾಂಕ್ 

2. ಕ್ರೆಡಿಟ್ ಕಾರ್ಡ್​ಗಿಂತ ಡೆಬಿಟ್ ಕಾರ್ಡ್ ವಾಸಿ- ನೋಟ್ ಬ್ಯಾನ್ ಬಳಿಕ ವ್ಯವಹಾರದಲ್ಲಿ ಡೆಬಿಟ್ ಕಾರ್ಡ್ ಫಸ್ಟ್

3. ನವರಸ ಸಾಧನಗಳ ಪರಿಣಿತ- ಹಿಂದಿ ಚಿತ್ರರಂಗದಲ್ಲಿ ಮಿಂಚುತ್ತಿರುವ ಕನ್ನಡಿಗ

Related Stories