ಟಿನಿಓಲ್ ಸಂಸ್ಥೆಯ ಬಗ್ಗೆ ಮತ್ತೊಂದು ಸಂಸ್ಥೆಯ ಸಂಸ್ಥಾಪಕರ ದೃಷ್ಟಿಕೋನ

ಟೀಮ್​​ ವೈ.ಎಸ್​​.

ಟಿನಿಓಲ್ ಸಂಸ್ಥೆಯ ಬಗ್ಗೆ ಮತ್ತೊಂದು ಸಂಸ್ಥೆಯ ಸಂಸ್ಥಾಪಕರ ದೃಷ್ಟಿಕೋನ

Tuesday November 10, 2015,

3 min Read

ಘರ್‌ಪೇ ಸಂಸ್ಥೆಯ ಸಿಇಓ ಮತ್ತು ಸಹಸಂಸ್ಥಾಪಕರಾಗಿದ್ದವರು ಅಭಿಷೇಕ್. 2011ರಲ್ಲಿ ಆರಂಭವಾದ ಘರ್‌ಪೇ ಸಂಸ್ಥೆ ಕ್ಯಾಶ್ ಆನ್ ಡೆಲಿವರಿ ಸಂಸ್ಥೆಯಾಗಿತ್ತು. ಪ್ರಸ್ತುತ ಅಭಿಷೇಕ್‌ ಅವರು ಡೆಲ್ಲಿವರಿ ಎಂಬ ಸಂಸ್ಥೆಯ ಮಾಲೀಕರಾಗಿದ್ದಾರೆ. ಅಲ್ಲದೇ ಅಭಿಷೇಕ್ ಅವರು ಪ್ರಸ್ತುತ ಅಧಿಸೂಚನೆಗಳ ಗೊಂದಲಗಳನ್ನು ನಿವಾರಿಸಲು ಹೆಚ್‌ಟಿಟಿಪಿ://ಯೂಸ್‌ಫಿಲ್ಟರ್.ಕಾಮ್(http://usefilter.com) ಅನ್ನು ಆರಂಭಿಸುತ್ತಿದ್ದಾರೆ. ಟಿನಿಓಲ್ ಸಂಸ್ಥೆಯ ಉದ್ಯಮದ ವಿಧಾನವನ್ನು ಕಟುವಾಗಿ ಖಂಡಿಸಿರುವ ಅಭಿಷೇಕ್, ಆ ಸಂಸ್ಥೆಯ ಕುರಿತು ತಮ್ಮ ದೃಷ್ಟಿಕೋನವನ್ನು ಜನರ ಮುಂದಿಟ್ಟಿದ್ದಾರೆ. ಹಾಗಾದರೆ ಟಿನಿಓಲ್ ಸಂಸ್ಥೆಯ ಬಗ್ಗೆ ಅಭಿಷೇಕ್‌ ಏನು ಹೇಳುತ್ತಾರೆ? ಅವರ ಮಾತುಗಳಲ್ಲೇ ಕೇಳೋಣ. ಓವರ್‌ ಟು ಅಭಿಷೇಕ್

ಟಿನಿ ಓಲ್ ಸಂಸ್ಥೆಯ ಬಿಕ್ಕಟ್ಟಿನ ಬಗ್ಗೆ ಹಲವರ ಅಭಿಪ್ರಾಯಗಳನ್ನು ನಾನು ಗಮನಿಸುತ್ತಾ ಬಂದಿದ್ದೇನೆ. ಟಿನಿಓಲ್ ಸಂಸ್ಥೆಗಾಗಿ ಹೂಡಿಕೆಯಾಗಿರುವ ದೊಡ್ಡ ಮಟ್ಟದ ಹಣದ ಬಗ್ಗೆ ಕೆಲವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಸಂಸ್ಥಾಪಕರಿಗೆ ಹೂಡಿಕೆ ಮಾಡಲ್ಪಟ್ಟ ಹಣ ವಾಪಸ್ ಬರುವ ನಿರೀಕ್ಷೆ ಇದೆ ಎಂಬ ಮಾತುಗಳೂ ಕೇಳಿಬರುತ್ತಿವೆ. ಇನ್ನು ಕೆಲವರು ಸಂಸ್ಥಾಪಕರು ಸಮರ್ಪಕವಾಗಿ ಕೆಲಸ ಮಾಡುತ್ತಿದ್ದಾರೆಂದು ಮತ್ತು ಅವರ ಕೆಲ ತಪ್ಪುಗಳನ್ನು ಕ್ಷಮಿಸಬಹುದೆಂದು ಹೇಳುವವರೂ ಇದ್ದಾರೆ. ಇನ್ನೂ ಕೆಲವರು ಉದ್ಯಮವೊಂದನ್ನು ಆರಂಭಿಸುವಲ್ಲಿ ಇರುವ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವಲ್ಲಿ ವಿಫಲರಾಗಿರುವ ಸಂಸ್ಥೆಯ ನೌಕರರನ್ನು ದೂಷಿಸುವುದರಲ್ಲಿ ನಿರತರಾಗಿದ್ದಾರೆ.

image


ನೌಕರರು ಮಾಡಿದ ಸಮಸ್ಯೆಗಳನ್ನು ನಾನು ಕ್ಷಮಿಸುತ್ತೇನೆ ಎಂದು ನಾನು ಹೇಳುತ್ತಿಲ್ಲ. ಆದರೆ ನನಗೆ ಟಿನಿಓಲ್ ಸಂಸ್ಥೆಗಾಗಿ ಹೂಡಿಕೆಯಾಗಿರುವ ದೊಡ್ಡ ಮಟ್ಟದ ಹಣದ ಬಗ್ಗೆ ಮತ್ತು ಹೂಡಿಕೆ ಮಾಡಲ್ಪಟ್ಟ ಹಣ ವಾಪಸ್ ಬರುವ ನಿರೀಕ್ಷೆಯ ಬಗ್ಗೆ ನನಗೆ ಅನುಮಾನವಿದೆ. ಟಿನಿಓಲ್ ಸಂಸ್ಥೆಯ ಸಿಇಓ ಬ್ಲಾಗ್ ಒಂದರಲ್ಲಿ ಬರೆದುಕೊಂಡಿರವುದು ಒರಟು ಮತ್ತು ಸ್ವಾರ್ಥಪೂರಿತವಾಗಿರುವುದು ನಿಜಕ್ಕೂ ಆಶ್ಚರ್ಯಕರ. ದೊಡ್ಡ ಕನಸಿನತ್ತ ಸಾಗಲು ಕೆಲವೊಂದು ಕಠಿಣ ಹೆಜ್ಜೆಗಳು(‘Some difficult steps towards the big dream’) ಎಂಬುದು ಲೇಖನದ ಶೀರ್ಷಿಕೆಯಾಗಿದ್ದು, ಸಂಸ್ಥೆಯ ಸಿಇಓ ಪಾಲಿಗೆ ಅವರ ಉದ್ಯಮಯಾನದಲ್ಲಿ ನೌಕರರು ಕೊಳ್ಳಲ್ಪಡುವ ಹಾಗೂ ಮಾರುವ ವಸ್ತುಗಳು ಮಾತ್ರ. ಸದ್ಯದ ಪರಿಸ್ಥಿತಿಯಲ್ಲಿ ತಮ್ಮ ಬ್ರಾಂಡ್‌ಗೆ ಮೆರುಗು ನೀಡುವುದು ನಮ್ಮ ಪ್ರಯತ್ನ, ಪ್ರಸ್ತುತ ಸಂಪನ್ಮೂಲಗಳನ್ನು ಬಳಸಿಕೊಂಡು ಮತ್ತು ಗಟ್ಟಿಯಾದ,ದೃಢವಾದ ಹಿನ್ನೆಲೆಯುಳ್ಳ ಬಿಸಿನೆಸ್ ಮ್ಯಾನೇಜ್‌ಮೆಂಟ್ ವಾತಾವರಣವನ್ನು ಸೃಷ್ಟಿಸುವುದರತ್ತ ನಮ್ಮ ಗುರಿಯಾಗಿದೆ ಎಂದಿದ್ದಾರೆ ಟಿನಿಓಲ್ ಸಂಸ್ಥೆಯ ಸಿಇಓ.

ಬಹುಶಃ ಟಿನಿಓಲ್ ಸಂಸ್ಥೆಯ ಸಿಇಓ ಯುವಕನಾಗಿರಬೇಕು. ಆದರೆ ಉದ್ಯಮದಲ್ಲಿ ಆತ ತನ್ನ ಬುದ್ಧಿವಂತಿಕೆಯನ್ನು ಸ್ವಲ್ಪ ಬಳಸುವ ಅಗತ್ಯವಿದೆ. ಆದರೆ ಸಿಇಓ ಬ್ಲಾಗ್‌ನಲ್ಲಿ ಬರೆದಿರುವ ಲೇಖನದಲ್ಲಿ ಯಾವುದೇ ಕ್ಷಮೆಕೋರಿಕೆಯ ವಾಕ್ಯಗಳು ನನಗೆ ಕಂಡುಬಂದಿಲ್ಲ. ಅಲ್ಲದೇ ದೀಪಾವಳಿ ಹಬ್ಬಕ್ಕೆ ಮೊದಲೇ ಕೆಲಸ ಕಳೆದುಕೊಂಡ ನೌಕರರ ಬಗ್ಗೆ ಅವರಿಗೆ ಅನುಕಂಪವೂ ಇಲ್ಲ. ಜನರು ಹಾಗೂ ಕೆಲಸದ ಬಗ್ಗೆ ಯಾವುದೇ ಮಾತುಗಳಿಲ್ಲ. ತೊಂದರೆಗೀಡಾಗಿರುವ ನೌಕರರ ಬಗ್ಗೆಯಂತೂ ಶಬ್ದವೇ ಇಲ್ಲ.

ಒಂದು ಹೊಸ ಉದ್ಯಮದ ಸಿಇಓ ಆಗಿ ಕಾರ್ಯನಿರ್ವಹಿಸುವುದು ಸುಲಭದ ಕೆಲಸವಲ್ಲ. ಆದರೆ ನಿಮ್ಮ ಉದ್ಯಮದ ಕನಸು ನನಸಾಗಬೇಕೆಂದರೆ ನಿಮ್ಮ ತಂಡದ ಕಠಿಣಪರಿಶ್ರಮದ ಅಗತ್ಯತೆಯನ್ನು ಮರೆಯಬಾರದು. ನನಗೆ ಈ ಉದ್ಯಮದ ಬಗ್ಗೆ ನನ್ನದೇ ಆದ ದೃಷ್ಟಿಕೋನವಿದೆ. ಏಕೆಂದರೆ ಘರ್‌ಪೇ ಸಂಸ್ಥೆಯನ್ನು ನಡೆಸುತ್ತಿದ್ದಾಗ ನಾನೂ ಸಹ ಇಂಥದ್ದೇ ಪರಿಸ್ಥಿತಿಯನ್ನು ಎದುರಿಸಿದ್ದೆ.

ನಾನು ಬಿಟ್ಸ್ ಪಿಲಾನಿಯಲ್ಲಿ ಅಧ್ಯಯನ ಮುಗಿಸಿದ ಬಳಿಕ ಅಂದರೆ 2011ರಲ್ಲಿ ಘರ್‌ಪೇ ಎಂಬ ಕ್ಯಾಶ್ ಆನ್ ಡೆಲಿವರಿ ಸಂಸ್ಥೆಯನ್ನು ಆರಂಭಿಸಿದೆವು. ವಿಭಿನ್ನ ಮಾದರಿಯ 100 ಮಂದಿಯನ್ನು ಬೆಳೆಸಿದೆವು, ನಾವೂ ಬೆಳೆದೆವು. ಸೀನಿಯರ್ ಮ್ಯಾನೇಜ್‌ಮೆಂಟ್ ತಂಡದಲ್ಲಿ 22 ರಿಂದ 24 ವರ್ಷದವರೇ ಹೆಚ್ಚಿದ್ದರು. ಸಂಸ್ಥೆಯ ಆರ್ಥಿಕ ಸ್ಥಿತಿ ಕಠೋರವಾಗಿದ್ದ ಸಂದರ್ಭದಲ್ಲಿ ಸಂಸ್ಥಾಪಕರು ಮತ್ತು ಸಂಶೋಧಕ ತಂಡದ ಸದಸ್ಯರು ಅನೇಕ ತಿಂಗಳ ಕಾಲ ಸಂಬಳವೇ ಇಲ್ಲದೇ ಕಾರ್ಯನಿರ್ವಹಿಸಿದ್ದರು. ಆರ್ಥಿಕ ವ್ಯವಸ್ಥೆಗೆ ಸರಿಯಾದ ಯೋಜನೆಯನ್ನು ರೂಪಿಸದಿದ್ದದ್ದು ನಮ್ಮ ತಪ್ಪಾಗಿತ್ತು. ಹೀಗಾಗಿ ಸಮಸ್ಯೆಯನ್ನು ನಾವು ಎದುರಿಸಲೇಬೇಕಾಗಿತ್ತು. ಆದರೆ ಉಳಿದ ನೌಕರರಿಗೆ ಸಮಯಕ್ಕೆ ಸರಿಯಾಗಿ ಸಂಬಳವನ್ನು ಪಾವತಿಸಲಾಗುತ್ತಿತ್ತು. ಏಕೆಂದರೆ ಅವರಿಗೆ ಅವರದ್ದೇ ಆದ ಕುಟುಂಬಗಳು ಮತ್ತು ಸಾಲಗಳು ಇದ್ದವು. ಕೆಲವೇ ದಿನಗಳಲ್ಲಿ ಸಮಸ್ಯೆ ಬಗೆಹರಿಯಿತು.

ಎರಡೂವರೆ ವರ್ಷಗಳ ಕಾಲ ಸಂಬಳ ಪಾವತಿಸುವಲ್ಲಿ ಎಂದೂ ವಿಳಂಬ ಮಾಡಲಿಲ್ಲ. ಈ ಬಗ್ಗೆ ನಮಗೆ ಹೆಮ್ಮೆ ಇದೆ. ನಮ್ಮ ನೌಕರರನ್ನು ನಾವು ನಂಬಿದ್ದೆವು, ನೌಕರರು ನಮ್ಮನ್ನು ನಂಬಿದ್ದರು. ಹೀಗಾಗಿ ಘರ್‌ಪೇ ಸಂಸ್ಥೆಯಲ್ಲಿ ಕೆಲಸ ಮಾಡಿದ್ದು ಒಂದು ಅದ್ಭುತ, ಅನಿರ್ವಚನೀಯ ಅನುಭವ ನೀಡಿದೆ.

ಉದ್ಯಮದಲ್ಲಿ ಬೆಳೆಯಲು ಏನು ಮಾಡಬೇಕು ಎಂಬುದರ ಕುರಿತು ನಾವು ಸದಾ ಚಿಂತಿಸುತ್ತಿದ್ದೆವು. ನಾವು ಬಸ್‌ಗಳು ಹಾಗೂ ರೈಲುಗಳಲ್ಲಿ ಪ್ರಯಾಣ ಮಾಡುತ್ತಿದ್ದೆವು ಮತ್ತು ಸ್ನೇಹಿತರ ಜೊತೆ ಉಳಿಯಬೇಕಾದ ಸಂದರ್ಭಗಳಲ್ಲಿ ಹೊಟೇಲ್‌ಗಳ ಕಡೆ ನೋಡುತ್ತಲೂ ಇರಲಿಲ್ಲ. 2011, 2013ರಲ್ಲಿ ನಾವು ಉದ್ಯಮಕ್ಕಾಗಿ ಮೊದಲ ಹಂತದ ಹೂಡಿಕೆಯನ್ನು ಪಡೆಯಲು ಒಂದು ಉತ್ತಮ ಮಾದರಿಯ ಮಾರ್ಗವನ್ನು ಹಾಕಿಕೊಂಡು ಕಾರ್ಯನಿರ್ವಹಿಸಿದೆವು.

ಇಂದು ಉದ್ಯಮದ ಆವರಣ ಚಿಕ್ಕದಿದೆ ಮತ್ತು ಹೂಡಿಕೆಯ ಪ್ರಮಾಣ ಜಾಸ್ತಿ ಇದೆ. ಇದರರ್ಥ ಆರ್ಥಿಕ ಯೋಜನೆಯನ್ನು ನಿರ್ಲಕ್ಷಿಸಿ ಒಂದು ಉತ್ತಮ ಉದ್ಯಮವನ್ನು ನಡೆಸಬಹುದೆಂದಲ್ಲ. ಆರ್ಥಿಕ ಯೋಜನೆ ಯಾವುದೇ ಉದ್ಯಮದ ಅಡಿಪಾಯ.

ಆದರೆ ಅಂತಿಮವಾಗಿ ನಾವು ಘರ್‌ಪೇ ಸಂಸ್ಥೆಯನ್ನು ಮಾರಾಟ ಮಾಡಬೇಕಾಯಿತು. ಏಕೆಂದರೆ ನಮ್ಮ ಸಂಸ್ಥೆ ಬೆಳೆಯುತ್ತಿತ್ತು, ಆದರೆ ನಮ್ಮೊಂದಿಗೆ ಹೂಡಿಕೆದಾರರು ಸರಿಯಾಗಿ ಸಹಕರಿಸಲಿಲ್ಲ. ಆದರೆ ಘರ್‌ಪೇ ಸಂಸ್ಥೆಯ ಯಾವೊಬ್ಬ ಉದ್ಯೋಗಿಯೂ ಘರ್‌ಪೇ ಸಂಸ್ಥೆ ತಮ್ಮನ್ನು ಸರಿಯಾಗಿ ನೋಡಿಕೊಳ್ಳಲಿಲ್ಲ ಎಂದಾಗಲಿ ಅಥವಾ ಸಂಸ್ಥೆಗೆ ಹರಿದುಬಂದ ಹೂಡಿಕೆಯನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ ಎಂದಾಗಲಿ ಹೇಳಲಿಲ್ಲ.

ಹೀಗಾಗಿ ನಾನು ಟಿನಿಓಲ್ ಸಂಸ್ಥೆಯ ಸಿಇಓ ಬಗ್ಗೆ ಮತ್ತು ಸಂಸ್ಥೆಯ ಸಂಸ್ಥಾಪಕ ತಂಡದವರ ಬಗ್ಗೆ ಕಟುವಾಗಿ ವಿಮರ್ಶಿಸುತ್ತಲೇ, ಕೈಗೆ ಬಂದ ಅವಕಾಶವನ್ನು ಬಿಟ್ಟುಕೊಟ್ಟ ಟಿನಿಓಲ್ ಸಂಸ್ಥೆಯ ಸಂಸ್ಥಾಪಕರ ಬಗ್ಗೆ ಅನುಕಂಪ ವ್ಯಕ್ತಪಡಿಸುತ್ತೇನೆ. ಟಿನಿಓಲ್ ಸಂಸ್ಥೆಯ ಸಂಸ್ಥಾಪಕರುಗಳು ವ್ಯರ್ಥವಾಗಿ 200ಕ್ಕೂ ಹೆಚ್ಚು ಜನರ ಹಾಗೂ ಅವರ ಕುಟುಂಬವನ್ನು ಇನ್ನಿಲ್ಲದ ಸಂಕಟಕ್ಕೆ ತಳ್ಳಿದ್ದಾರೆ. ಆದರೆ ಅದಕ್ಕಾಗಿ ಅವರಿಗೆ ಯಾವ ಪಶ್ಚಾತ್ತಾಪವೂ ಇಲ್ಲವಾಗಿದೆ. ಗ್ರಾಹಕರು ಹಾಗೂ ತಮ್ಮ ನೌಕರರ ದೃಷ್ಟಿಯಲ್ಲಿ ಟಿನಿಓಲ್ ಸಂಸ್ಥೆ ಸರಿಪಡಿಸಲಾರದಷ್ಟು ಹಾಳಾಗಿಹೋಗಿದೆ. ಅಲ್ಲಿಗೆ ಕನಸೊಂದು ಕೊನೆಯಾಗಿದೆ.