ಪೂರ್ವಿಕಾ
ಚಿತ್ರರಂಗದಲ್ಲಿ ಎಲ್ಲವೂ ಕಲರ್ ಫುಲ್. ಎಲ್ಲೇ ನೋಡಿದ್ರು ಯಾರನ್ನೇ ನೋಡಿದ್ರೂ ಕಲರ್ ಫುಲ್ ಆಗಿ ಕಾಣಿಸೋದು ಕಾಮನ್. ಅದಕ್ಕೆ ಅದನ್ನ ಕಲರ್ ಫುಲ್ ಜಗತ್ತು ಅಂತ ಕರಿತಾರೆ. ಅಂತ ಜಗತ್ತನ್ನ ಕಲರ್ ಫುಲ್ ಆಗಿಸೋದೇ ಈ ಶಚಿನಾ ಹೆಗ್ಗಾರ್.
ಶಚಿನಾ ಕನ್ನಡಚಿತ್ರರಂಗದಲ್ಲಿನ ಫೇಮಸ್ ಡಿಸೈನರ್ ,ಸಿಂಗರ್ ಹಾಗೂ ಅಸಿಸ್ಟೆಂಟ್ ಡೈರೆಕ್ಟರ್. ಓದಿದ್ದು ಫ್ಯಾಷನ್ ಡಿಸೈನಿಂಗ್ . ವಿದ್ಯಾಭ್ಯಾಸ ಮಾಡೋ ಸಮಯದಲ್ಲೇ ಶಚಿನಾ ಕಲೆಯನ್ನ ಗುರುತಿಸಿದ ಚಿತ್ರರಂಗ ಅವ್ರನ್ನ ಇಂದು ಪೇಮಸ್ ಡಿಸೈನರ್ ಆಗಿ ಚಿತ್ರರಂಗಕ್ಕೆ ಪರಿಚಯಿಸಿದೆ. ಫ್ಯಾಷನ್ ಡಿಸೈನಿಂಗ್ ಕಲಿಕೆಯ ಸೆಕೆಂಡ್ ಇಯರ್ನಲ್ಲೇ ಸಿನಿಮಾಗೆ ಕಾಸ್ಟ್ಯೂಮ್ಸ್ ಡಿಸೈನ್ ಮಾಡಿದ ಶಚಿನಾ ಚಿತ್ರರಂಗಕ್ಕೆ ಬಂದು ಸುಮಾರು 7 ವರ್ಷಗಳೇ ಕಳೆದಿವೆ. ಕನ್ನಡ ಚಿತ್ರರಂಗದಲ್ಲಿ ಹಿಟ್ ಲಿಸ್ಟ್ನಲ್ಲಿರೋ ಮನಸಾರೆ, ಕಡ್ಡಿಪುಡಿ,ಜಂಗ್ಲಿ,ಲೈಫು ಇಷ್ಟೇನೆ,ಪ್ಯಾರ್ಗೆ ಆಗ್ಬಿಟೈತೆ ಹೀಗೆ ಇನ್ನೂ ಅನೇಕ ಸಿನಿಮಾಗಳಲ್ಲಿನ ನಟ-ನಟಿಯರನ್ನ ರಂಗು ರಂಗಾಗಿ ಕಾಣಿಸುವಂತೆ ಮಾಡಿದ್ದು ಇದೇ ಶಚಿನಾ ಹೆಗ್ಗಾರ್
ಚಿತ್ರರಂಗಕ್ಕೆ ಬಂದ ಏಳೇ ವರ್ಷಗಳಲ್ಲಿ 55ಕ್ಕೂ ಹೆಚ್ಚು ಸಿನಿಮಾದಲ್ಲಿ ಕೆಲಸ ಮಾಡಿರೋ ಶಚಿನಾ ಡಿಸೈನ್ ಮಾಡೋದು ಅರ್ಧ ಕೆಲಸವಾದ್ರೆ ಅದನ್ನ ಸ್ಟಾರ್ಸ್ಗಳಿಗೆ ಒಪ್ಪಿಸೋದು ಇನ್ನರ್ಧದ ಕೆಲಸ ಅಂತಾರೆ. ಇನ್ನುಶಚಿನಾ ಚಿತ್ರರಂಗದ ಸ್ಟಾರ್ಸ್ ಗಳಿಗೆ ಕಾಸ್ಟ್ಯೂಮ್ಸ್ ಡಿಸೈನ್ ಮಾಡೋದ್ರ ಜೊತೆಗೆ ಒಳ್ಳೆ ಸಿಂಗರ್ ಕೂಡ ಹೌದು. ಕಡ್ಡಿಪುಡಿ ಸಿನಿಮಾಗಾಗಿ ಹಾಡಿದ ಒಂದೇ ಒಂದು ಹಾಡಿಗೆ ರಾಜ್ಯ ಪ್ರಶಸ್ತಿ ಗಿಟ್ಟಿಸಿಕೊಂಡ ಶಚಿನಾ ಎಷ್ಟು ಒಳ್ಳೆ ಸಿಂಗರ್ ಅನ್ನೋದು ಗೊತ್ತಾಗುತ್ತೆ. ಡಿಸೈನಿಂಗ್ ಹಾಗೂ ಸಿಂಗಿಂಗ್ ಅನ್ನೋದನ್ನ ವೃತ್ತಿಯಾಗಿ ಮಾಡಿಕೊಂಡಿರೋ ಶಚಿನಾ ಹೆಗ್ಗಾರ್ ಕಡ್ಡಿಪುಡಿ ಸಿನಿಮಾಗೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿಯೋ ಕೆಲಸ ಮಾಡಿದ್ದಾರೆ. ಸದ್ಯ ತಮ್ಮದೇ ಹೊಸ ವಿಡಿಯೋ ಆಲ್ಬಮ್ ಅನ್ನ ನಿರ್ದೇಶನ ಮಾಡಿ ಆ್ಯಕ್ಟ್ ಮಾಡಿದ್ರ ಜೊತೆಗೆ ತಾವೇ ಹಾಡನ್ನ ಹಾಡಿದ್ದಾರೆ. ಸದ್ಯದಲ್ಲೇ ಈ ವಿಡಿಯೋ ಆಲ್ಬಮ್ ಅನ್ನ ರಿಲೀಸ್ ಮಾಡೋದ್ರ ತಯಾರಿಯಲ್ಲಿದ್ದಾರೆ ಶಚಿನಾ.
ಶಚಿನಾ ಚಿಕ್ಕ ವಯಸ್ಸಿನಲ್ಲೇ ಫೇಮಸ್ ಡಿಸೈನರ್ ಆಗೋದಕ್ಕೆ ಕಾರಣ ಅವ್ರಲ್ಲಿರೋ ಮಲ್ಟಿ ಟ್ಯಾಲೆಂಟ್. ಕಾಸ್ಟ್ಯೂಮ್ ಡಿಸೈನ್ ಅಂದ್ರೆ ಚಿಕ್ಕ ಕೆಲಸವಲ್ಲ. ಯಾಕಂದ್ರೆ ಚಿತ್ರರಂಗದಲ್ಲಿ ಸಾಕಷ್ಟು ನಟ, ನಟಿಯರು ಇರೋದ್ರಿಂದ ಹಾಗೂ ವರ್ಷದಲ್ಲಿ ಸಾಕಷ್ಟು ಸಿನಿಮಾಗಳು ಜನರ ಮುಂದೆ ಬರುತ್ತವೆ. ಒಂದು ಸಿನಿಮಾದಲ್ಲಿ ಬಳಸೋ ಕಲರ್ ,ಡಿಸೈನ್ಸ್ ಗಳನ್ನ ಮತ್ತೊಂದು ಸಿನಿಮಾಗಳಲ್ಲಿ ಬಳಸುವಂತಿಲ್ಲ. ಅಷ್ಟೇ ಅಲ್ಲದೆ ಬಣ್ಣದಲ್ಲೂ ಕೂಡ ರಿಪಿಟೇಷನ್ಗಳನ್ನ ಮಾಡುವಂತಿಲ್ಲ. ಇನ್ನು ನಾಳೆ ಶೂಟಿಂಗ್ ಇದೆ ಅನ್ನೋ ಸಮಯದಲ್ಲೂ ಅದೆಷ್ಟೋ ಬಾರಿ ಕಾಸ್ಯೂಮ್ಸ್ ರೆಡಿ ಮಾಡಿಕೊಟ್ಟಿರೋ ಉದಾಹರಣೆಗಳಿವೆ.
55 ಸಿನಿಮಾಗಳಿಗೂ ಒಬ್ಬರೇ ಕಾಸ್ಟ್ಯೂಮ್ಸ್ ಡಿಸೈನ್ಸ್ ಮಾಡಿರೋ ಶಚಿನಾ ಯಾವುದೇ ಟೀಂ ಇಲ್ಲದೇ ಒಬ್ಬರೇ ಕಷ್ಟ ಪಟ್ಟು ಕೆಲಸ ಮಾಡುತ್ತಾರೆ. ಯಾವುದೇ ಸ್ಟಾರ್ಗಳಿಗಾಗಲಿ ಫಟಾ ಫಟ್ ಅಂತ ಕಾಸ್ಯೂಮ್ಸ್ ರೆಡಿ ಮಾಡಿಕೊಡ್ತಾರೆ. ಇನ್ನು ಚಿತ್ರರಂಗದಲ್ಲಿ ಟಾಪ್ ಸ್ಟಾರ್ ಅಂತ ಫೇಮಸ್ ಆಗಿರೋ ದರ್ಶನ್, ಸುದೀಪ್, ಯಶ್ , ಧನಂಜಯ, ಪುನೀತ್ ರಾಜ್ಕುಮಾರ್,ಶಿವರಾಜ್ಕುಮಾರ್, ಹೀಗೆ ಇನ್ನೂ ಅನೇಕರಿಗೆ ಖಾಯಂ ಡಿಸೈನರ್. ಸ್ಯಾಂಡಲ್ವುಡ್ನ ದೊಡ್ಡ ಡೈರೆಕ್ಟರ್ ಆಗಿರುವ ಸೂರಿ ಹಾಗೂ ಯೋಗರಾಜ್‍ಭಟ್ಟರ ಕ್ಯಾಂಪ್ಗೆ ಶಿಚಿನಾ ಹೆಗ್ಗಾರ್ ಅವ್ರೇ ಡಿಸೈನರ್. ಟಾಪ್ ನಾಯಕಿಯರಾದ ರಾಧಿಕಾ ಪಂಡಿತ್, ಐಂದ್ರಿತಾ ರೇ, ಶೃತಿಹರಿಹರನ್ ಹೀಗೆ ಇನ್ನೂಅನೇಕರಿಗೆ ಶಚಿನಾ ಕಾಸ್ಟ್ಯೂಮ್ ಡಿಸೈನ್ಸ್ ಮಾಡಿದ್ದಾರೆ. ಚಿತ್ರರಂಗದಲ್ಲಿ ಮತ್ತಷ್ಟು ಸಾಧನೆ ಮಾಡಬೇಕು ಅಂತಿದ್ದಾರೆ ಶಚಿನಾ. ಸದ್ಯ ಯಶ್, ಧನಂಜಯ,ಶೃತಿ ಹರಿಹರನ್ ,ನೀತು ಇನ್ನೂಅನೇಕರಿಗೆ ಪರ್ಸ್‍ನಲ್ ಡಿಸೈನರ್ ಕೂಡ ಶಚಿನಾನೇ. ಚಿತ್ರರಂಗದ ಸ್ಟಾರ್ಗಳು ಯಾವುದೇ ಕಾರ್ಯಕ್ರಮಗಳಲ್ಲಿ ಅಥವಾ ಸಿನಿಮಾಗಳಲ್ಲಿ ಕಲರ್ ಫುಲ್ ಆಗಿ ಕಾಣೋದ್ರ ಹಿಂದೆ ಇರೋದು ಶಚಿನಾ ಅವ್ರ ಕ್ರೀಯಾಶೀಲತೆ.
Related Stories
March 14, 2017
March 14, 2017
March 14, 2017
March 14, 2017
Stories by AARABHI BHATTACHARYA