ಅಂಧಕಾರದಲ್ಲಿದ್ದ ಗ್ರಾಮಗಳಲ್ಲಿ ಹೊಸಬೆಳಕು-ಸೌರಶಕ್ತಿ ಮೂಲಕ ಭರವಸೆ ಮೂಡಿಸಿದ ಮಹಿಳೆ

ಟೀಮ್​​ ವೈ.ಎಸ್​​.ಕನ್ನಡ

0

ಕೆಲ ವರ್ಷಗಳ ಹಿಂದೆ ತಾಂಜೇನಿಯಾದ ಮಹಿಳೆಯೊಬ್ಬರಿಗೆ ವಿನೂತನ ಹೂಡಿಕೆಯ ಉಪಾಯ ಹೊಳೆದಿತ್ತು. ಸುಮಾರು ಒಂದು ಚದರ ಮೀಟರ್ ಗಾತ್ರದ ಸೌರ ಫಲಕವನ್ನು ಕೊಂಡುಕೊಂಡ ಆಕೆ, ಜನರಿಗೆ ಮೊಬೈಲ್ ಚಾರ್ಜ್ ಮಾಡಿಕೊಡಲು ಆರಂಭಿಸಿದ್ರು. ಅದಕ್ಕೆ ಬದಲಾಗಿ ಅವರಿಂದ ಸ್ವಲ್ಪ ಹಣವನ್ನೂ ಪಡೆಯುತ್ತಿದ್ರು. ಅವರ ಸರಳ ಜೀವನಕ್ಕೆ ಇದೇ ಆಧಾರವಾಗಿತ್ತು. ಆಕೆ ಯಾರು ಗೊತ್ತಾ? `ಸಿಂಪಾ ನೆಟ್‍ವರ್ಕ್ಸ್​​ 'ನ ಸಹ ಸಂಸ್ಥಾಪಕಿ ಪಾಲ್ ನೀಧಮ್. ಸೌರ ಶಕ್ತಿ ಮಾರಾಟ ಕೇವಲ ಲಾಭದಾಯಕ ಮಾತ್ರವಲ್ಲ, ಉಚಿತವೂ ಹೌದು ಅನ್ನೋದನ್ನು ಪಾಲ್ ನೀಧಮ್ ಅರ್ಥಮಾಡಿಕೊಂಡಿದ್ರು. ಇನ್ನು ಗ್ರಾಮಸ್ಥರು ಸೌರ ಫಲಕ ಕೊಂಡುಕೊಳ್ಳುವುದಕ್ಕಿಂತ ಹೆಚ್ಚಾಗಿ ಸೌರ ಶಕ್ತಿ ಪಡೆಯುವುದರಲ್ಲೇ ಹೆಚ್ಚು ಆಸಕ್ತರಾಗಿದ್ರು. ಯಾಕಂದ್ರೆ ಆ ಗ್ರಾಮದಲ್ಲಿ ವಿದ್ಯುತ್ ವ್ಯವಸ್ಥೆ ಇರಲಿಲ್ಲ. ಸೋಲಾರ್ ಪ್ಯಾನಲ್ ಖರೀದಿಸೋಣ ಅಂದ್ರೆ ಗ್ರಾಮಸ್ಥರಿಗೆ ಬಡತನ ಅಡ್ಡಿಯಾಗಿತ್ತು.

ಹೀಗೆ ಸೋಲಾರ್ ಉದ್ಯಮಕ್ಕೆ ಅಡಿಗಲ್ಲು ಹಾಕಿದ ಪೌಲ್, ನಿಧಾನವಾಗಿ ಸಿಂಪಾ ನೆಟ್‍ವಕ್ರ್ಸ್‍ಗೆ ಉದ್ಯಮ ಮಾದರಿಯೊಂದನ್ನು ಸಿದ್ಧಮಾಡಿದ್ರು. ಈಗ ಪಾಲ್ ಅವರ ಸಿಂಪಾ ನೆಟ್‍ವಕ್ರ್ಸ್‍ನಲ್ಲಿ 270 ಮಂದಿ ಕೆಲಸ ಮಾಡ್ತಿದ್ದಾರೆ. ಗ್ರಾಮೀಣ ಭಾಗದ 350ಕ್ಕೂ ಹೆಚ್ಚು ವ್ಯಾಪಾರಿಗಳು ಸಾಥ್ ನೀಡ್ತಿದ್ದಾರೆ. ಸದ್ಯ ಸಿಂಪಾ ನೆಟ್‍ವಕ್ರ್ಸ್ 9000 ಗ್ರಾಹಕರನ್ನು ಹೊಂದಿದೆ. 2 ಮಿಲಿಯನ್ ಶುದ್ಧ ಇಂಧನ ದಿನಗಳನ್ನು ಮಾರಾಟ ಮಾಡ್ತಿದೆ. ಜೊತೆಗೆ ಸುಮಾರು 120 ಮೆಟ್ರಿಕ್ ಟನ್‍ನಷ್ಟು ಇಂಗಾಲದ ಡೈ ಆಕ್ಸೈಡ್ ಹೊರಸೂಸುವಿಕೆಯನ್ನು ತಡೆಯುತ್ತಿದೆ. 100 ಮೆಗಾವ್ಯಾಟ್‍ನಷ್ಟು ಶುದ್ಧ ಇಂಧನವನ್ನು ಉತ್ಪಾದಿಸುತ್ತಿದೆ. ಇದರಿಂದ ಸುಮಾರು 45,000 ಮಂದಿ ಪ್ರಯೋಜನ ಪಡೆದಿದ್ದಾರೆ.

ಗ್ರಾಮೀಣ ಮತ್ತು ಅರೆ ಗ್ರಾಮೀಣ ಪ್ರದೇಶಗಳ ಗ್ರಾಹಕರಿಗೆ ಸಿಂಪಾ ನೆಟ್‍ವಕ್ರ್ಸ್ ತನ್ನ ಉತ್ಪನ್ನಗಳನ್ನು ಮಾರಾಟ ಮಾಡ್ತಾ ಇಲ್ಲ. ಬದಲಾಗಿ ಆ ಉತ್ಪನ್ನಗಳ ಸೇವೆಯನ್ನೇ ಮಾರಾಟ ಮಾಡ್ತಿದೆ. ಗ್ರಾಹಕರು ತಮ್ಮ ಮನೆಯಲ್ಲಿ ಸೌರಶಕ್ತಿ ಅಳವಡಿಸಿಕೊಳ್ಳಲು ಸ್ವಲ್ಪ ಹಣವನ್ನು ಪಾವತಿ ಮಾಡಬೇಕು. ನಂತರ ಪ್ರತಿದಿನ ಅದನ್ನು ಎಷ್ಟು ಬಳಸ್ತಾರೋ ಅದರ ವೆಚ್ಚವನ್ನು ಮಾತ್ರ ಪಾವತಿಸಬೇಕು. ಹಣ ಪಾವತಿಗೆ ರೀಚಾರ್ಜ್ ಮತ್ತು ಟಾಪ್ ಅಪ್ ಕ್ರೆಡಿಟ್ ಕಾರ್ಡ್‍ಗಳನ್ನು ಗ್ರಾಹಕರು ಬಳಸಿಕೊಳ್ಳಬಹುದು. 18 ತಿಂಗಳ ಒಪ್ಪಂದ ಮುಗಿದ ನಂತರ ಸೋಲಾರ್ ಸಿಸ್ಟಮ್‍ನ ಮಾಲೀಕತ್ವ ಗ್ರಾಹಕರಿಗೆ ಸಿಗಲಿದೆ. ಬಳಿಕ ಅವರು ಉಚಿತವಾಗಿ ಸೌರಶಕ್ತಿಯನ್ನು ಬಳಸಬಹುದು.

ಸಿಂಪಾ ವೇದಿಕೆ ಗ್ರಾಹಕರ ಪಾಲಿಗೆ ಹೊಸ ಅನುಭವ. ಕಡಿಮೆ ಮೊತ್ತ ಪಾವತಿಗೆ ಹೆಚ್ಚು ವೆಚ್ಚವಾಗುವುದಿಲ್ಲ. ಹಣವಿಲ್ಲದ ಗ್ರಾಹಕರು ಕೂಡ ಈ ಸೇವೆಯನ್ನು ಪಡೆಯಬಹುದು. ಸಿಂಪಾ ಶಕ್ತಿಯ ಕರೆನ್ಸಿಯನ್ನು ಯಾರ್ಯಾರು ಬಳಸುತ್ತಿದ್ದಾರೆ ಅನ್ನೋದನ್ನು ಪರಿಶೀಲಿಸಲಾಗುತ್ತೆ. ಗ್ರಾಹಕರಿಗೆ ಹಣ ಪಾವತಿಸಲು ಸುಲಭವಾಗುವಂತೆ ಸಾಲದ ಎಣಿಕೆಯ ಮಾದರಿಗಳನ್ನು ಕೂಡ ಅಭಿವೃದ್ಧಿಪಡಿಸಲಾಗಿದೆ. ಸಿಂಪಾ ನೆಟ್‍ವಕ್ರ್ಸ್‍ನ ಕಾರ್ಯವೈಖರಿ ಕೆಳಕಂಡಂತಿದೆ,

1. ಗ್ರಾಮೀಣ ಭಾಗದ ವ್ಯಾಪಾರಿಗಳು ತಮ್ಮ ಸ್ನೇಹಿತರು, ಅಕ್ಕಪಕ್ಕದವರು ಹಾಗೂ ಸಮುದಾಯದವರ ಜೊತೆ ಮಾರ್ಕೆಟಿಂಗ್ ಮಡ್ತಾರೆ. ಈ ಪ್ರಕ್ರಿಯೆಯಲ್ಲಿ ಜನರ ನಂಬಿಕೆ ಗಳಿಸುವುದು ತುಂಬಾ ಮುಖ್ಯ. ಸುಮಾರು 350 ಏಜೆಂಟ್‍ಗಳಿಗೆ ಸಿಂಪಾ ವತಿಯಿಂದ ತರಬೇತಿ ನೀಡಲಾಗುತ್ತೆ, ಅವರು ತಮ್ಮ ಹಳ್ಳಿಗಳಲ್ಲಿ ಸೋಲಾರ್ ಸಿಸ್ಟಮ್‍ಗಳನ್ನು ಮಾರಾಟ ಮಾಡ್ತಾರೆ.

2. ಸಿಂಪಾ ನೆಟ್‍ವಕ್ರ್ಸ್‍ನ ಕ್ರೆಡಿಟ್ ಅಧಿಕಾರಿಗಳು ಗ್ರಾಹಕರ ಮನವಿಯನ್ನು ಪರಿಶೀಲಿಸ್ತಾರೆ. ಗುರುತಿನ ದಾಖಲೆಗಳನ್ನು ನೋಡಿ, ಬಳಿಕ ಸಿಂಪಾ ಸ್ವಾಮ್ಯದ ಸಾಲ ಎಣಿಕೆ ಮಾದರಿಯಂತೆ ಗ್ರಾಹಕರ ಮನವಿಯನ್ನು ಪುರಸ್ಕರಿಸುತ್ತಾರೆ.

3. ಪ್ರಮಾಣಿತ ಸೋಲಾರ್ ತಂತ್ರಜ್ಞರು ಸೋಲಾರ್ ಸಿಸ್ಟಮ್‍ಗಳನ್ನು ಗ್ರಾಹಕರ ಮನೆಗಳಿಗೆ ಕಳಿಸಿಕೊಡ್ತಾರೆ. ಗ್ರಾಮೀಣ ಪ್ರದೇಶದ ತಂತ್ರಜ್ಞರನ್ನೇ ನೇಮಿಸಿಕೊಂಡು ಅವರಿಗೆ ತರಬೇತಿ ನೀಡಲಾಗುತ್ತಿದೆ. ಪದವೀಧರರಿಗೆ ಸಾಲ ಸೌಲಭ್ಯವನ್ನು ಕೂಡ ಸಿಂಪಾ ಒದಗಿಸುತ್ತಿದೆ. ಅವರು ಟೂಲ್ ಕಿಟ್ ಖರೀದಿಸಿ ಕೆಲಸ ಆರಂಭಿಸ್ತಾರೆ. ಸದ್ಯ ಸಿಂಪಾದಲ್ಲಿ 100 ತಂತ್ರಜ್ಞರಿದ್ದಾರೆ. ಪ್ರತಿಯೊಬ್ಬರಿಗೂ ಕನಿಷ್ಠ ಇನ್‍ಸ್ಟಾಲೇಶನ್ ಹಾಗೂ ಸರ್ವೀಸ್ ಕಾಲ್ ಗ್ಯಾರಂಟಿಯನ್ನು ಕಂಪನಿ ನೀಡುತ್ತದೆ. ಹೊಸದಾಗಿ ಸೇರ್ಪಡೆಯಾದವರಿಗೆ ಸಹಾಯಧನವನ್ನು ಕೂಡ ಕೊಡಲಾಗ್ತಿದೆ.

2010ರಿಂದೀಚೆಗೆ ಸಿಂಪಾ ನೆಟ್‍ವಕ್ರ್ಸ್, ಸೆಲ್ಕೋ ಇಂಡಿಯಾ ಜೊತೆ ಸೇರಿಕೊಂಡು ಕರ್ನಾಟಕದಲ್ಲಿ ತನ್ನ ಉತ್ಪನ್ನಗಳನ್ನು ವಿತರಿಸುತ್ತಿದೆ. 2013ರಲ್ಲಿ ಚೀನಾ ಹಾಗೂ ಬೆಂಗಳೂರಿನ ಇಬ್ಬರು ಪಾಲುದಾರರಿಗೆ ಉತ್ಪಾದನೆಯನ್ನು ಹೊರಗುತ್ತಿಗೆಗೆ ನೀಡಲಾಗಿತ್ತು. ಸದ್ಯ ಉತ್ತರ ಪ್ರದೇಶಕ್ಕೂ ಸಿಂಪಾ ಮಾರುಕಟ್ಟೆ ವಿಸ್ತರಿಸಿದ್ದು, 8 ಜಿಲ್ಲೆಗಳಿಗೆ ಸೌರಶಕ್ತಿಯನ್ನು ಒದಗಿಸುತ್ತಿದೆ.

2014ರಲ್ಲಿ ಸಿಂಪಾದ ಜನಪ್ರಿಯ ಉತ್ಪನ್ನ `ಟರ್ಬೋ'ವನ್ನು ಬಿಡುಗಡೆ ಮಾಡಲಾಯ್ತು. ಮಾರಾಟ ವಿಭಾಗದಲ್ಲಿ ಶೇಕಡಾ 90 ರಷ್ಟು ಪಾಲನ್ನು ಟರ್ಬೋ ಹೊಂದಿದೆ. ಇನ್ನು ಸೋಲಾರ್ ಹೋಮ್ ಸಿಸ್ಟಮ್ 40 ವ್ಯಾಟ್‍ನ ಪ್ಯಾನಲ್, 3 ಲೈಟ್, ಒಂದು ಫ್ಯಾನ್, 2 ಮೊಬೈಲ್ ಚಾರ್ಜಿಂಗ್ ಪಾಯಿಂಟ್‍ಗಳನ್ನು ಹೊಂದಿರುತ್ತದೆ. ಇದು 12 ಗಂಟೆಗಳ ಕಾಲ ಕಾರ್ಯನಿರ್ವಹಿಸಲಿದೆ. ಇದಷ್ಟೇ ಅಲ್ಲ, ಗ್ರಾಹಕರಿಗಾಗಿ ವಿನೂತನ `ಫ್ಲೆಕ್ಸಿ' ಯೋಜನೆಯೊಂದನ್ನು ಸಿಂಪಾ ತಂದಿದೆ. ಇದರಂತೆ ಒಪ್ಪಂದ ಮಾಡಿಕೊಂಡು 6 ತಿಂಗಳ ಬಳಿಕ ಗ್ರಾಹಕರು ಸೋಲಾರ್ ಸಿಸ್ಟಮ್ ಅನ್ನು ಖರೀದಿಸಲು ಅವಕಾಶವಿದೆ.

ಪೂರೈಕೆದಾರರು ಒಮ್ಮೊಮ್ಮೆ ವಿಳಂಬ ಧೋರಣೆ ಅನುಸರಿಸುವುದರಿಂದ ಅವರೊಡನೆ ಉತ್ತಮ ಬಾಂಧವ್ಯ ಬೆಳೆಸಲು ಪಾಲ್ ಕ್ರಮ ಕೈಗೊಳ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಗ್ರಾಹಕರನ್ನು ಹುಡುಕುವುದಕ್ಕಿಂತ, ಅಲ್ಲಿನ ಏಜೆಂಟ್‍ಗಳಿಗೇ ತರಬೇತಿ ನೀಡುವುದು ಸುಲಭ ಎನ್ನುತ್ತಾರೆ ಅವರು. 2014ರ ಡಿಸೆಂಬರ್‍ನಲ್ಲಿ ಸಿಂಪಾ ನೆಟ್‍ವಕ್ರ್ಸ್ 4 ಮಿಲಿಯನ್ ಡಾಲರ್ ವಾಣಿಜ್ಯ ಸಾಲವನ್ನು ಪಡೆದಿದೆ. ಮನೆಗಳಿಗೆ ಸೋಲಾರ್ ಸಿಸ್ಟಮ್‍ಗಳನ್ನು ಬಾಡಿಗೆಗೂ ಕೊಡಲಾಗುತ್ತೆ. ಇದರಿಂದ ಸಿಂಪಾ ನೆಟ್‍ವಕ್ರ್ಸ್‍ಗೆ ಉತ್ತಮ ಆದಾಯ ಬರ್ತಿದೆ. ಇನ್ನಷ್ಟು ಬಂಡವಾಳ ಸಿಕ್ಕಿದರೆ ಸಂಸ್ಥೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ಕನಸು ಪಾಲ್ ಅವರದ್ದು. 2019ರ ವೇಳೆಗೆ ಒಂದು ಮಿಲಿಯನ್ ಗ್ರಾಹಕರಿಗೆ ಸೋಲಾರ್ ಸಿಸ್ಟಮ್ ಒದಗಿಸುವ ಯೋಜನೆಯನ್ನು ಪಾಲ್ ಹಾಕಿಕೊಂಡಿದ್ದಾರೆ.

ಲೇಖಕರು: ಫ್ರಾನ್ಸೊಸ್ಕೋ ಫೆರಾರೊ
ಅನುವಾದಕರು: ಭಾರತಿ ಭಟ್​​


Related Stories