ಜೇಟ್ಲಿ ಬಜೆಟ್​ನಲ್ಲಿ ಏನಿತ್ತು...? ಯಾರು ಏನು ಹೇಳಿದ್ರು..?

ಟೀಮ್​​ ವೈ.ಎಸ್​. ಕನ್ನಡ

ಜೇಟ್ಲಿ ಬಜೆಟ್​ನಲ್ಲಿ ಏನಿತ್ತು...? ಯಾರು ಏನು ಹೇಳಿದ್ರು..?

Thursday February 02, 2017,

2 min Read

ಮಹತ್ವದ ಕೇಂದ್ರ ಸರಕಾರದ ಬಜೆಟ್ ಮಂಡನೆಯಾಗಿದೆ. ಅರುಣ್ ಜೇಟ್ಲಿಯ ಬಜೆಟ್ ಬಗ್ಗೆ ಪ್ರತಿಪಕ್ಷಗಳು ಟೀಕೆ ಮಾಡಿದ್ರೆ, ಮೋದಿ ಸರಕಾರ ಮತ್ತು ಆಡಳಿತ ಪಕ್ಷಗಳು ಎಂದಿನಂತೆ ಸೂಪರ್ ಬಜೆಟ್ ಅಂತ ಕೊಂಡಾಡಿವೆ. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಈ ಬಾರಿಯ ಬಜೆಟ್ ರಾಜ್ಯಕ್ಕೆ ಕೊಟ್ಟಿರುವುದು ಅಷ್ಟಕಷ್ಟೆ. ಹಿಂದುಳಿದವರನ್ನು ತನ್ನತ್ತ ಸೆಳೆದುಕೊಳ್ಳುವ ಯತ್ನ ಬಜೆಟ್​​ನಲ್ಲಿ ನಡೆದಿದೆ. ಜೇಟ್ಲಿ ಬಜೆಟ್​ನ ಹೈಲೈಟ್​ಗಳು ಹೀಗಿವೆ.

image


  ಗೃಹ ಸಾಲದಲ್ಲಿ ಗಣನೀಯ ಇಳಿಕೆ

➡ ಕೃಷಿ ಸಾಲ 10 ಲಕ್ಷ ಕೋಟಿಗೆ ಏರಿಕೆ

➡ ಬೆಳೆ ವಿಮೆ 5500 ಕೋಟಿಯಿಂದ 13242 ಕೋಟಿಗೆ ಏರಿಕೆ

➡ ಗ್ರಾಮೀಣಾಭಿವೃದ್ದಿ, ಕೃಷಿ ಇಲಾಖೆಗೆ 1.87 ಲಕ್ಷ ಕೋಟಿ

➡ ರೈಲ್ವೆ ಇಲಾಖೆಗೆ 131 ಲಕ್ಷ ಕೋಟಿ

➡ ಮಹಿಳಾ ಶಕ್ತಿ ಕೇಂದ್ರಗಳ ಸ್ಥಾಪನೆ, 500 ಕೋಟಿ

➡ ಪಾರದಶ೯ಕ ಆಡಳಿತಕ್ಕೆ ಡಿಜಿಟೆಲ್ ವ್ಯವಸ್ಥೆ

➡ ದೇಶದ 7 ಸಾವಿರ ರೈಲ್ವೆ ನಿಲ್ದಾಣಗಳಿಗೆ ಸೋಲಾರ್ ವ್ಯವಸ್ತೆ

➡ 2020 ರ ವೇಳೆಯಲ್ಲಿ ಮಾನವ ರಹಿತ ರೈಲ್ವೆ ಕ್ರಾಸಿಂಗ್​ಗಳ ನಿಮಾ೯ಣ

➡ ಎಸ್ಸಿ, ಎಸ್ಟಿ ಗಳಿಗೆ ಅನುದಾನ ಹೆಚ್ಚಳ

➡ ರೈತರಿಗೆ "ಮಣ್ಣು ಆರೋಗ್ಯ ಕಾಡ್೯" ವಿತರಣೆ

➡ 2018 ರವೊಳಗೆ ಎಲ್ಲಾ ಗ್ರಾಮಗಳಿಗೆ ವಿದ್ಯುತ್ ಸಂಪಕ೯

➡ ರಾಷ್ಟ್ರೀಯ ಹೆದ್ದಾರಿ ನಿಮಾ೯ಣಕ್ಕೆ 64 ಸಾವಿರ ಕೋಟಿ

➡ 2020 ರ ವೇಳೆಗೆ ಎಲ್ಲಾ ರೈಲುಗಳಲ್ಲಿ "ಬಯೋ ಟಾಯ್ಲೆಟ್"

➡ ಸಾರಿಗೆ ಕ್ಷೇತ್ರಕ್ಕೆ 2.41 ಲಕ್ಷ ಕೋಟಿ

➡ 1.5 ಲಕ್ಷ ಆರೋಗ್ಯ ಕೇಂದ್ರಗಳು ಮೇಲ್ಜೆ೯ಗೆ

➡ ರಾಜಸ್ತಾನ, ಓಡಿಶಾದಲ್ಲಿ ತೈಲ ಸಂಗ್ರಹ ಘಟಕ

➡ ಜೀವ ರಕ್ಷಕ ಔಷದಗಳ ಬೆಲೆ ಇಳಿಕೆ

➡ PMY ಯೋಜನೆಗೆ 28 ಸಾವಿರ ಕೋಟಿ

➡ ಯುವಕರಿಗೆ ಮಾರುಕಟ್ಟೆ ವ್ಯವಹಾರಿಕ ತರಬೇತಿ

➡ ಕಾಲೇಜುಗಳಿಗೆ UNI ಸ್ವಾಯುತ್ತತೆ

➡ ವೈದ್ಯಕೀಯ ಕ್ಷೇತ್ರದಲ್ಲಿ 25 ಸಾವಿರ ಸೀಟುಗಳ ಹೆಚ್ಚಳ

➡ ಇ ಟಿಕೆಟ್ ಬುಕ್ ಮಾಡಿದ್ರೆ ಸವಿ೯ಸ್ ಚಾಜ್೯ ಇಲ್ಲ

➡ 50 ಸಾವಿರ ಗ್ರಾ ಪಂ ಅಭಿವೃದ್ದಿಗೆ ಮನ್ನಣೆ

➡ ಮುದ್ರಾ ಯೋಜನೆಗೆ 2.44 ಲಕ್ಷ ಕೋಟಿ

➡ ಗಭೀ೯ಣಿಯರಿಗೆ 6 ಸಾವಿರ ರೂಪಾಯಿ

➡ ಏಲೇಕ್ಟ್ರಾನಿಕ್ ಉತ್ದಾದಕರಿಗೆ 746 ಕೋಟಿ

➡ 14 ಲಕ್ಷ ಅಂಗನವಾಡಿಗಳ ಸ್ತಾಪನೆ

➡ ಗುಜ್ರಾತ್, ಜಾಖ೯ಂಡ್ನಲ್ಲಿ AIIMS ಸ್ಥಾಪನೆ

➡ ಗ್ರಾಮ ಉಪನಗರಗಳಲ್ಲಿ ಡಿಜಿಟೆಲ್ ವ್ಯವಸ್ತೆ ಜಾರಿ

➡ ಅಂಚೆ ಕಚೇರಿಗಳಲ್ಲಿ ಪಾಸ್ಪೋಟ್೯ ನೀಡುವ ವ್ಯವಸ್ಥೆ ಜಾರಿ

➡ ಗ್ರಾ ಪಂ ಗಳಿಗೆ "ಬ್ರಾಡ್ ಬಾಂಡ್" ಸವಿ೯ಸ್

➡ 3500 ಕಿಮೀ ಹೊಸ ರೈಲ್ವೆ ಮಾಗ೯

➡ ಪರಿಶಿಷ್ಟ ಜಾತಿಗೆ 53 ಸಾವಿರ ಕೋಟಿ ಹೆಚ್ಚಳ .

ಬಜೆಟ್ ಮಂಡನೆಯಾಗುತ್ತಿದ್ದಂತೆಯೇ ಪ್ರತಿಪಕ್ಷಗಳು ಟೀಕೆ ಮಾಡಿವೆ. ರೈಲ್ವೇ ಬಜೆಟ್ನ್ನು ಸೇರಿಸಿಕೊಂಡೇ ಮಂಡನೆಯಾಗಿದ್ದ ಬಜೆಟ್ನಲ್ಲಿ ಏನೂ ಕೂ ಇಲ್ಲ ಅನ್ನುವುದು ಪ್ರತಿಪಕ್ಷಗಳ ವಾದ, ಆದ್ರೆ ಆದಾಯ ತೆರಿಗೆ ಸ್ಲಾಬ್ಗಳನ್ನು ಏರಿಸಿದ್ದು ಸಂಬಳ ಪಡೆಯುವವರ ಮುಖದಲ್ಲಿ ಚಿಕ್ಕ ಸಂತಸ ಮೂಡಿಸಿರುವುದು ಸುಳ್ಳಲ್ಲ.

ಇದನ್ನು ಓದಿ:

1. ಸ್ಟಾರ್ಟ್​ಅಪ್ ಬಗ್ಗೆ ಕನಸು ಏಕೆ..? ಉದ್ಯಮದ ಯಶಸ್ಸಿಗೆ ಇಲ್ಲಿದೆ ಟಿಪ್ಸ್​..!​

2. 10,000 ಸಾಲದಿಂದ ಕೋಟ್ಯಾಧಿಪತಿಯಾದ ದಿಲೀಪ್​ ಶಾಂಘ್ವಿ ಕಥೆ..!

3. ಅಡುಗೆ ಬರಲ್ಲ ಅನ್ನುವ ಟೆನ್ಷನ್​ ಬಿಟ್ಟುಬಿಡಿ- ಆ್ಯಪ್ ಡೌನ್​ಲೋಡಿ ಮಾಡಿ ಅಡುಗೆ ಕಲಿಯಿರಿ..!