ನಿಮ್ಮ ಜೀವನದ ಕಠಿಣ ಸಮಸ್ಯೆಗೆ AdviceAdda.com ನಲ್ಲಿ ಸಿಗುತ್ತೆ ತಜ್ಞರಿಂದ ಪರಿಹಾರ

ಟೀಮ್​ ವೈ.ಎಸ್​. ಕನ್ನಡ

0

ನಮ್ಮ ದೇಶದಲ್ಲಿ ಪ್ರತಿ ವರ್ಷ ಸುಮಾರು 2 ಲಕ್ಷ ಜನ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ನಾವಿರುವ ಸಮಾಜದಲ್ಲಿ 10ರಲ್ಲಿ ಇಬ್ಬರು ಖಿನ್ನತೆಯಿಂದ ಬಳಲುತ್ತಾರೆ. ಖಿನ್ನತೆ ಹಾಗೂ ಒತ್ತಡಕ್ಕೆ ಒಳಗಾದ ಜನರಿಗೆ ಸರಿಯಾದ ಸಲಹೆ ನೀಡಿ,ಅವರ ಒತ್ತಡವನ್ನು ಕಡಿಮೆ ಮಾಡುವ ಕೆಲಸವನ್ನು ತಜ್ಞರು ಮಾಡ್ತಿದ್ದಾರೆ. ಇದನ್ನು ಅನೇಕರು ವ್ಯಾಪಾರವಾಗಿ ಮಾಡಿಕೊಂಡಿದ್ದಾರೆ. ಕಚೇರಿಗೆ ಹೋಗಿ ಸಲಹೆ ಪಡೆಯುವ ಕಾಲ ಹೋಗಿದೆ. ಇದು ಆನ್​ಲೈನ್ ಯುಗ. ಮನೆಯಲ್ಲಿಯೇ ಕುಳಿತು ಎಲ್ಲವನ್ನೂ ಪಡೆಯುವ ಕಾಲ. ಅವರಿಗಾಗಿಯೇ ಶುರುವಾಗಿದೆ AdviceAdda.com.

ಇದನ್ನು ಓದಿ: ಒಂದೇ ರಾತ್ರಿ ಊರಿಗೆ ಊರೇ ಮಾಯ..!

ತಜ್ಞರ ಸಲಹೆಯನ್ನು ಆನ್​ಲೈನ್ ನಲ್ಲಿ ನೀಡುವ ವೆಬ್ ಸೈಟ್ AdviceAdda.com. ಇದು ದೇಶದ ಮೊದಲ ಆನ್​ಲೈನ್ ಎಕ್ಸ್ ಪರ್ಟ್ ಅಡೈಸ್ ವೆಬ್ ಸೈಟ್ ಆಗಿದೆ. ಒಂದೇ ವೇದಿಕೆಯಲ್ಲಿ ನೀವು ಎಲ್ಲ ತರಹದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. 20ಕ್ಕೂ ಹೆಚ್ಚು ಬಗೆಯ ತಜ್ಞರಿಂದ ನೀವು ಇಲ್ಲಿ ಸಲಹೆ ಪಡೆಯಬಹುದಾಗಿದೆ. ಇಲ್ಲಿ ಕೇವಲ ವೈಯಕ್ತಿಕ ವೈದ್ಯರು ( ಶಸ್ತ್ರ ಚಿಕಿತ್ಸಕ,ಸ್ಕಿನ್ ಎಕ್ಸ್ ಪರ್ಟ್, ದಂತವೈದ್ಯ ) ಮಾತ್ರವಲ್ಲ ವೃತ್ತಿ ಸಲಹೆಗಾರ, ವಕೀಲ,ಮನೋವಿಜ್ಞಾನಿ,ಹಣಕಾಸು ಸಲಹೆಗಾರ,ಕೌನ್ಸಿಲರ್, ಫಿಟ್ನೆಸ್ ತಜ್ಞ ಸೇರಿದಂತೆ ಎಲ್ಲ ರೀತಿಯ ತಜ್ಞರು ಸಲಹೆ ನೀಡುತ್ತಾರೆ. ನಿಮ್ಮ ಜೀವನದಲ್ಲಿ ಯಾವುದೇ ಸಮಸ್ಯೆ ಇರಲಿ, ಯಾವುದೇ ಒತ್ತಡವಿರಲಿ, AdviceAdda.com ಸಂಪರ್ಕಿಸಿದರೆ ನಿಮ್ಮ ಸಮಸ್ಯೆಗೆ ಪರಿಹಾರ ಸಿಗಲಿದೆ. ಅದು ಉಚಿತವಾಗಿ. ನಿಮ್ಮ ಗುರುತನ್ನು ಕೂಡ ಇಲ್ಲಿ ಹೇಳುವ ಅಗತ್ಯವಿಲ್ಲ. ಅಲ್ಪ ಸಂಪನ್ಮೂಲದಲ್ಲಿ ಆರಂಭವಾದ ಈ ವೆಬ್ ಸೈಟ್ ಮೂಲಕ 18 ತಿಂಗಳಲ್ಲಿ 15 ಲಕ್ಷ ಜನರು ಸಲಹೆ ಪಡೆದಿದ್ದಾರೆ. ಬ್ರೇಕ್ ಅಪ್, ಮಾದಕ ವ್ಯಸನಿ,ಅನವಶ್ಯಕ ಗರ್ಭ, ಖಿನ್ನತೆ, ಆತ್ಮಹತ್ಯೆಗೆ ಯತ್ನ ಸೇರಿದಂತೆ ಅನೇಕ ಸಮಸ್ಯೆಗಳಿಂದ ಬಳಲುತ್ತಿದ್ದವರು ಇದರಲ್ಲಿ ಸಲಹೆ ಪಡೆದು ಈಗ ಹೊಸ ಬಾಳು ಶುರುಮಾಡಿದ್ದಾರೆ.

AdviceAdda.com ಆರಂಭ

ಪತ್ರಿಕೋದ್ಯಮದಲ್ಲಿ 13 ವರ್ಷ ಸೇವೆ ಸಲ್ಲಿಸಿರುವ ವಿವೇಕ್ ಸತ್ಯ ಮಿತ್ರಂ ಜುಲೈ 2014ರಲ್ಲಿ AdviceAdda.com ಆರಂಭಿಸಿದ್ರು. ಸಹರಾ, ಪಿಟಿಐ,ಸ್ಟಾರ್ ನ್ಯೂಸ್,ಇಂಡಿಯಾ ನ್ಯೂಸ್, ಜನತಾ ಟಿವಿ, ಎನ್​ಡಬ್ಲ್ಯುಎಸ್​​ಜಿಯಾ ನ್ಯೂಸ್ ಸಂಸ್ಥೆಗಳಲ್ಲಿ ವರದಿಗಾರರಾಗಿ, ಎಡಿಟರ್ ಆಗಿ, ಚಾನೆಲ್ ಹೆಡ್ ಆಗಿ ವಿವೇಕ್ ಸತ್ಯ ಅನುಭವ ಹೊಂದಿದ್ದಾರೆ. AdviceAdda.com ಐಡಿಯಾ ಹೇಗೆ ಮತ್ತು ಏಕೆ ಬಂತು ಎನ್ನುವ ಬಗ್ಗೆ ವಿವೇಕ್ ಹೇಗೆ ಹೇಳ್ತಾರೆ.

``ಸ್ಟಾರ್ಟ್ ಅಪ್ ಬಗ್ಗೆ ಈಗ ಕ್ರೇಝ್​ ಇದೆ. ಆದ್ರೆ AdviceAdda.com ಆರಂಭಿಸುವಾಗ ಯಾವುದೇ ಕ್ರೇಝ್​ ಇರಲಿಲ್ಲ. ಬದಲಾಗಿ ಅವಶ್ಯಕತೆ ಇತ್ತು. ಭಾರತದಲ್ಲಿಯೇ ಯಾಕೆ ಹೆಚ್ಚು ಆತ್ಮಹತ್ಯೆಗಳಾಗ್ತಾ ಇವೆ ಎನ್ನುವುದರ ಬಗ್ಗೆ ನಾನು ಆಲೋಚನೆ ಮಾಡಿದೆ. ಆಗ ಒಂದು ವಿಷಯ ತಿಳಿಯಿತು. ನಮ್ಮ ಸಮಾಜದಲ್ಲಿ ಜನರು ತಮ್ಮ ವೈಯಕ್ತಿಕ ವಿಚಾರಗಳನ್ನು ಹಂಚಿಕೊಂಡು ಅದಕ್ಕೆ ಪರಿಹಾರಕಂಡುಕೊಳ್ಳಲು ಪ್ರಯತ್ನ ಮಾಡುವುದಿಲ್ಲ. ಹಾಗಾಗಿ ತಂತ್ರಜ್ಞಾನದ ಮೂಲಕ ಜನರನ್ನು ತಜ್ಞರ ಬಳಿ ಕರೆದೊಯ್ದು ಅವರ ಸಮಸ್ಯೆಗೆ ಯಾಕೆ ಪರಿಹಾರ ನೀಡಬಾರದೆಂದು ನಾನು ಯೋಚನೆ ಮಾಡಿದೆ. ಜನರು ತಮ್ಮ ಗುರುತನ್ನು ಬಹಿರಂಗವಾಗಿ ಹೇಳಿಕೊಳ್ಳಲು ಇಷ್ಟಪಡುವುದಿಲ್ಲ ಎಂಬುದು ನನಗೆ ಗೊತ್ತಿತ್ತು. ಹಾಗಾಗಿ ಗುರುತು ಹೇಳದೆ ಸಲಹೆ ಪಡೆಯುವ ವೇದಿಕೆ ಸಿದ್ಧಪಡಿಸಿದೆ.’’

AdviceAdda.com ನ ಸಹ ಸಂಸ್ಥಾಪಕಿ ಹಾಗೂ ಸಿಒಒ ಪ್ರಿಯಾಂಕ ತಿವಾರಿ AdviceAdda.com ಬಗ್ಗೆ ಯುವರ್ ಸ್ಟೋರಿ ಜೊತೆ ಮಾತನಾಡಿದ್ದಾರೆ.

``ನಮಗೆ AdviceAdda.com ಆರಂಭಿಸುವುದು ಹಾಗೂ ಈ ಹಂತಕ್ಕೆ ತಂದು ನಿಲ್ಲಿಸುವುದು ಸುಲಭ ಕೆಲಸವಾಗಿರಲಿಲ್ಲ. ದೇಶದಲ್ಲಿ ಇದು ಮೊದಲ ಪ್ರಯತ್ನವಾಗಿತ್ತು. ಇಲ್ಲಿಯವರೆಗೆ ಯಾರೂ ಈ ಪ್ರಯತ್ನಕ್ಕೆ ಕೈ ಹಾಕಿರಲಿಲ್ಲ. ಒಂದೇ ವೇದಿಕೆಯಲ್ಲಿ ವಿವಿಧ ಕ್ಷೇತ್ರದ ತಜ್ಞರನ್ನು ಒಂದುಗೂಡಿಸುವುದು ಸವಾಲಾಗಿತ್ತು. ನಿಮ್ಮ ಸಮಸ್ಯೆಯನ್ನು ನಿರ್ಲಕ್ಷಿಸದೇ ಈ ವೇದಿಕೆಗೆ ಬಂದು ಪರಿಹಾರ ಕಂಡುಕೊಳ್ಳಿ ಎಂದು ಜನರನ್ನು ಪ್ರೇರೇಪಿಸುವುದು ಎರಡನೇ ದೊಡ್ಡ ಕೆಲಸವಾಗಿತ್ತು. ನಿಮಗೆ ಆಶ್ಚರ್ಯವಾಗಬಹುದು ಯಾವುದೇ ಪ್ರಚಾರವಿಲ್ಲದೆ ಮೂರು ತಿಂಗಳಲ್ಲಿ 20 ಸಾವಿರಕ್ಕೂ ಹೆಚ್ಚು ಮಂದಿ AdviceAdda.comನಲ್ಲಿ ಸಲಹೆ ಪಡೆಯಲು ಶುರುಮಾಡಿದರು. ದಿನ ಕಳೆದಂತೆ ಈ ಸಂಖ್ಯೆ ಲಕ್ಷಕ್ಕೆ ಬಂದು ನಿಂತಿತು.’’

ಯಾವುದೇ ಪ್ರಚಾರ ಮತ್ತು ಮಾರುಕಟ್ಟೆಯಿಲ್ಲದೆ ವೆಬ್ ಸೈಟ್ ಇಷ್ಟು ಜನರನ್ನು ತಲುಪಲು ಏನು ಕಾರಣ ಎಂಬುದನ್ನು ಸಾಮಾಜಿಕ ಮಾಧ್ಯಮ ವಿಭಾಗದ ಮುಖ್ಯಸ್ಥ ದೇವೇಂದ್ರ ಗೋರ್ ಹೇಳಿದ್ದಾರೆ. `` AdviceAdda.com ಹೊಸ ಕಲ್ಪನೆಯಾಗಿತ್ತು. ಇದರ ಅವಶ್ಯಕತೆ ಜನರಿಗಿತ್ತು. ಆರಂಭದಲ್ಲಿ ಯಾರು ನಮ್ಮ ಸೇವೆ ಪಡೆದಿದ್ದಾರೋ ಅವರೇ ತಮ್ಮ ವೆಬ್ ಸೈಟ್ ಬಗ್ಗೆ ಪ್ರಚಾರ ಮಾಡಿದರು. ಆರಂಭದಲ್ಲಿ ನಮ್ಮ ವೆಬ್ ಸೈಟ್ ಮಾತಿನ ಮೂಲಕವೇ ಪ್ರಚಾರವಾಯ್ತು. ಎರಡು ಮೂರು ತಿಂಗಳಲ್ಲಿ ಮಾಧ್ಯಮಗಳಲ್ಲಿ ನಮ್ಮ ವೆಬ್ ಸೈಟ್ ಬಗ್ಗೆ ವರದಿ ಬರಲು ಶುರುವಾಯ್ತು. ಕೆಲ ತಿಂಗಳುಗಳ ನಂತ್ರ ದೇಶ-ವಿದೇಶಿ ಮಾಧ್ಯಮಗಳಲ್ಲಿ ತಮ್ಮ ಬಗ್ಗೆ ಸುದ್ದಿಯಾಯ್ತು. ಅಲ್ಲದೆ ನಮ್ಮ ಸಂಸ್ಥಾಪಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯ್ತು. ನಾವು ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಕೂಡ ಮಾಡಿದ್ದೇವೆ. `ನಾಟ್ ಎ ಹಿಪ್ಪೊಕ್ರೇಟ್ಸ್’ ಫೇಸ್​ಬುಕ್ ನಲ್ಲಿ ವೈರಲ್ ಆಯ್ತು ಹಾಗೂ ಲಕ್ಷಾಂತ ಜನರನ್ನು ತಲುಪುವಲ್ಲಿ ಯಶಸ್ವಿಯಾಯ್ತು.

ಭವಿಷ್ಯದ ಯೋಜನೆ

AdviceAdda.com ಮುಂದಿನ ಯೋಜನೆಗಳ ಬಗ್ಗೆ ವಿವೇಕ್ ಹೇಗೆ ಹೇಳ್ತಾರೆ. ``ನಮ್ಮ ಮೊದಲ ಉದ್ದೇಶ ಇಂಟರ್ ನೆಟ್ ಜೊತೆ ಸಂಪರ್ಕ ಹೊಂದಿರುವ 40 ಕೋಟಿ ಮಂದಿಯನ್ನು ತಲುಪುವುದು. ಪ್ರತಿಯೊಬ್ಬ ಮನುಷ್ಯ ಒಂದಲ್ಲ ಒಂದು ಸಮಸ್ಯೆ ಹಾಗೂ ಒತ್ತಡದಿಂದ ಬಳಲುತ್ತಿದ್ದಾನೆ. AdviceAdda.com ಬಗ್ಗೆ ತಿಳಿದ್ರೆ ಅದರ ಮೂಲಕ ಅವರು ಸಮಸ್ಯೆ ಬಗೆಹರಿಸಿಕೊಳ್ಳಲು ಮುಂದಾಗ್ತಾರೆ. ಇದಕ್ಕಾಗಿ ತಮ್ಮ ತಂಡ,ತಂತ್ರಜ್ಞಾನದ ಜೊತೆಗೆ ಪ್ರಚಾರ ಮಾಡಲು ಫಂಡ್ ಅವಶ್ಯಕತೆ ಇದೆ. ಕೆಲ ವರ್ಷಗಳಲ್ಲಿ ಮಿಲಿಯನ್ ಡಾಲರ್ ಕಂಪನಿ ಆಗಬೇಕೆಂಬ ಪಣ ತೊಟ್ಟಿದ್ದೇವೆ.’’

AdviceAdda.com ಕಂಪನಿ ಕೇವಲ ಒಂದು ಬಗೆಯ ಸೇವೆಯನ್ನು ಮಾತ್ರ ನೀಡ್ತಾ ಇಲ್ಲ. ಸಮಾಜದಲ್ಲಿ ಗುಪ್ತವಾಗಿರುವ ಅನೇಕ ಸಮಸ್ಯೆಗಳಿಗೆ ತಜ್ಞರು ಪರಿಹಾರ ನೀಡುತ್ತಾರೆ. ಹದಿಹರೆಯದ ಸಮಸ್ಯೆ, ಲೈಂಗಿಕ ಸಮಸ್ಯೆ ಸೇರಿದಂತೆ ಅನೇಕ ಪ್ರಶ್ನೆಗಳಿಗೆ ಈ ಸೈಟ್ ನಲ್ಲಿ ಉತ್ತರ ಸಿಗ್ತಾ ಇದೆ. ಅನೇಕ ಸಂಸ್ಥೆಗಳು, ಕಾರ್ಪೊರೇಟ್ ಸಂಸ್ಥೆಗಳು, ಶಾಲೆಗಳು ಮತ್ತು ಕಾಲೇಜುಗಳು AdviceAdda.com ಜೊತೆ ಕೈಜೋಡಿಸಲು ಪ್ರಸ್ತಾವನೆ ಸಲ್ಲಿಸಿವೆಯಂತೆ. AdviceAdda.comಗೆ ಸಲಹೆ ನೀಡಲು ಬಯಸುವರು ಅಥವಾ ಏನಾದ್ರೂ ಹೇಳ ಬಯಸುವವರು editor@adviceadda.com ಗೆ ಮೇಲ್ ಮಾಡುವಂತೆ ಜನರಿಗೆ ವಿವೇಕ್ ವಿನಂತಿ ಮಾಡಿಕೊಂಡಿದ್ದಾರೆ.

ಲೇಖಕರು: ನೀರಜ್ ಸಿಂಗ್

ಅನುವಾದಕರು: ರೂಪಾ ಹೆಗಡೆ 

ಇದನ್ನು ಓದಿ:

1. ವಿ"ಶ್ವಾಸ"ವೇ "ವಿಶ್ವಾಸ್"

2. ಗೋಧಿ ಬ್ಯಾಂಕ್​ನಿಂದ ಬದಲಾಯಿತು ಜೀವನದ ಕಥೆ...

3. "ಬೇಬಿ ಸೆನ್ಸರಿ"ಯಲ್ಲಿದೆ ನಿಮ್ಮ ಮಗುವಿನ ಬೆಳವಣಿಗೆಯ ಸೀಕ್ರೆಟ್​​..!

Related Stories