ಅಂದು ಕಾರ್ಮಿಕ ಇಂದು ಮಾಲೀಕ- ಸಾಮಾನ್ಯನ ಅಸಮಾನ್ಯ ಸಾಧನೆ..!

ಪೂರ್ವಿಕಾ

ಅಂದು ಕಾರ್ಮಿಕ ಇಂದು ಮಾಲೀಕ- ಸಾಮಾನ್ಯನ ಅಸಮಾನ್ಯ ಸಾಧನೆ..!

Friday January 15, 2016,

2 min Read

ಪ್ರತಿ ಫಂಕ್ಷನ್,ಪಾರ್ಟಿ,ಮದುವೆ ಏನೇ ಇರಲಿ ಅಲ್ಲಿ ಕೇಕ್ ಇರಲೇ ಬೇಕು. ಇಂತಹ ಕಾರ್ಯಕ್ರಮಗಳಲ್ಲಿ ಕೇಕ್ ಇದ್ರೆನೇ ಸಮಾರಂಭ ಪೂರ್ತಿ ಆಗೋದು ಅನ್ಸುತ್ತೆ. ಅಂತ ಪರಿಸ್ಥಿತಿಯಲ್ಲಿ ನಾವು ಜೀವಿಸುತ್ತಿದ್ದೇವೆ. ಇನ್ನೂ ಖಾಲಿ ಬ್ರೇಡ್ ಕೇಕ್ ಎಲ್ಲಾ ಓಲ್ಡ್ ಸ್ಟೈಲ್ ಈಗ ಏನಿದ್ರು ಪೇಸ್ಟ್ರೀ ಜಮಾನ. ಅದ್ರಲ್ಲೂ ಸಾಕಷ್ಟು ವೆರೈಟಿ ಗಳು ಲಭ್ಯವಿದ್ದು ಪೇಸ್ಟ್ರಿ ಅಂದ್ರೆ ಈಗಿನವ್ರಿಗಂತು ಪಂಚಪ್ರಾಣ. ಟೇಸ್ಟಿ ಪ್ರೇಸ್ಟಿ ಮಾಡುತ್ತಿದ್ದ ಈತ ಇಂದು ಅದೇ ಪೇಸ್ಟ್ರಿಯಿಂದ ಒಳ್ಳೆ ಉದ್ಯಮಿಯಾಗಿ ಬೆಳೆದು ನಿಂತಿದ್ದಾರೆ..!

image


ನೌಕರ ಮಾಲೀಕ ಆದ ಕಥೆಯಿದು

ಮಾಸ್ಟರ್ ಶೆಫ್ ಆಂಥೋನಿ ಸುಮಾರು 20 ವರ್ಷದಿಂದ ಬೇಕರಿಯಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತಿದ್ರು. ಇವ್ರ ಕೈ ರುಚಿ ತಿಂದ ಪ್ರತಿಯೊಬ್ಬರು ಹೇಳುತ್ತಿದ್ದ ಮಾತು ಒಂದೇ ಇಷ್ಟು ಚೆನ್ನಾಗಿ ಕೇಕ್ ಮಾಡ್ತಿರಾ ನೀವೇ ಯಾಕೆ ಒಂದು ಕೇಕ್ ಶಾಪ್ ಓಪನ್ ಮಾಡ್ಬಾರ್ದು ಅಂತ. ಅದಷ್ಟೆ ಅಲ್ಲದೆ ಆಂಥೋನಿ ಅವ್ರ ಕೈ ರುಚಿಯಲ್ಲಿ ತಯಾರಾಗೋ ಕೇಕ್ ಅನ್ನ ಟೇಸ್ಟ್ ಮಾಡೋದಕ್ಕೆ ಸಾಕಷ್ಟು ದೂರದಿಂದ ಜನರು ಹುಡುಕಿಕೊಂಡು ಬರ್ತಿದ್ರು. ಇನ್ನೆಷ್ಟು ದಿನ ಬೇರೆಯವ್ರ ಕೈಕೆಳಗೆ ಕೆಲಸ ಮಾಡೋದು ಅಂತ ಇದರ ಬಗ್ಗೆ ಯೋಚನೆ ಮಾಡಿದ ಆಂಥೋನಿ ತಮ್ಮದೇಯಾದ ಹೊಸ ಕೇಕ್ ಬೇಕರಿಯನ್ನ ಪ್ರಾರಂಭ ಮಾಡಲು ನಿರ್ಧಾರ ಮಾಡಿದ್ರು ಅದರ ಹೆಸರೇ ಅಮ್ಮಾಸ್. ಅಮ್ಮಾಸ್ ಸದ್ಯ ಬೆಂಗಳೂರಿನಲ್ಲಿ ಹೆಚ್ಚು ಪ್ರಖ್ಯಾತಿ ಹಾಗೂ ಜನರ ವಿಶ್ವಾಸ ಪಡೆದಿರುವ ಪೇಸ್ಟ್ರೀ ಶಾಪ್.

image


ಅಮ್ಮಾಸ್ ಅಮ್ಮ ಮಾಡಿ ಕೇಕ್ ..!

ಪೇಸ್ಟ್ರೀ ಇಷ್ಟ ಪಡೋ ಜನರ ಟೇಸ್ಟ್ ಅನ್ನ ತಿಳಿದುಕೊಂಡು ಶೆಫ್ ಆಂಥೋನಿ ಅಮ್ಮಾಸ್ ಅನ್ನೋ ಪೇಸ್ಟ್ರೀ ಶಾಪ್ ಅನ್ನ ಓಪನ್ ಮಾಡಿದ್ರು. ಆರಂಭದಲ್ಲಿ ಒಂದು ಔಟ್ಲೆಟ್ ನಿಂದ ಇಂದು 23 ಅಮ್ಮಾಸ್ ಪೇಸ್ಟ್ರೀ ಶಾಪ್ ಅನ್ನ ಓಪನ್ ಮಾಡಲು ಸಾಧ್ಯವಾಗಿದೆ. 50 ಕ್ಕೂ ಹೆಚ್ಚು ಕೆಲಸಗಾರರು ಅಮ್ಮಾಸ್ ನಲ್ಲಿ ಕೆಲಸ ಮಾಡುತ್ತಿದ್ದು ನುರಿತ ಬೇಕರ್ಸ್​ನಿಂದ ಇಲ್ಲಿ ಕೇಕ್ ತಯಾರಾಗುತ್ತೆ. ಪ್ರೀತಿ ತುಂಬಿದ ಸಿಹಿಯಾದ ಕೇಕ್ ತಯಾರಿಸಿ ಗ್ರಾಹಕರಿಗೆ ನೀಡೋದು ಅಮ್ಮಾಸ್​​ ಉದ್ದೇಶ. 2003ರಲ್ಲಿ ಮೊದಲ ಅಮ್ಮಾಸ್ ಪೇಸ್ಟ್ರಿ ಅನ್ನ ಓಪನ್ ಮಾಡಿದ ಆಂಥೋನಿ ಇಲ್ಲಿಯ ತನಕ ತಮ್ಮ ಕೈರುಚಿಯನ್ನ ಬೆಂಗಳೂರಿನ ಮೂಲೆ ಮೂಲೆಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗ್ರಾಹಕರ ಬೇಡಿಕೆಯಂತೆ,ಅಗತ್ಯಕ್ಕೆ ತಕ್ಕಂತ ಕೇಕ್ ಗಳನ್ನ ನೀಡುತ್ತಾ ಗ್ರಾಹಕರ ಖುಷಿಯಾಲ್ಲಿ ತಾವು ಪಾಲುದಾರರಾಗಿದ್ದಾರೆ.

image


ಇಲ್ಲಿ ಸಿಗುತ್ತೆ ನಿಮಗೆ ಬೇಕಾದ ಟೇಸ್ಟ್

ಇನ್ನೂ ಅಮ್ಮಾಸ್ ನಲ್ಲಿ ನಿಮಗೆ ಬೇಕಾದ ಫ್ಲೇವರ್ ನಲ್ಲಿ ಕೇಕ್ ಗಳು ಲಭ್ಯವಿದ್ದು ಮಾಂಸಹಾರಿಗಳಿಗಷ್ಟೇ ಅಲ್ಲದೆ ಸಸ್ಯಹಾರಿಗಳಿಗೂ ಅಮ್ಮಾಸ್ ನಲ್ಲಿ ಪೇಸ್ಟ್ರಿಗಳು ಲಭ್ಯವಿದೆ. ಸುಮಾರು 25ಕ್ಕೂ ಹೆಚ್ಚು ವೆರೈಟಿ ಟೇಸ್ಟೀ ಪೇಸ್ಟ್ರಿ ಅಮ್ಮಾಸ್ ನಲ್ಲಿ ಸಿಗುತ್ತೆ. ಇನ್ನು ಡಿಸೈನ್ಸ್ ವಿಚಾರದಲ್ಲೂ ಅಮ್ಮಾಸ್ ದಿ ಬೆಸ್ಟ್ ಆಗಿದೆ. ನೀವು ಆಯ್ಕೆ ಮಾಡಿಕೊಳ್ಳೊ ರೀತಿಯಲ್ಲಿ ಕೇಕ್ ತಯಾರು ಮಾಡಿಕೊಡುತ್ತಾರೆ. ಕಿಲೋಗ್ರಾಂ ಲೆಕ್ಕದಲ್ಲಿ ಕೇಕ್ ಮಾತ್ರವಲ್ಲದೆ ಸಿಂಗಲ್ ಪೀಸ್ ಲೆಕ್ಕದಲ್ಲೂ ಕೇಕ್ ಅನ್ನ ಟೇಸ್ಟ್ ಮಾಡಬಹುದು. 40 ರೂಪಾಯಿ ಆರಂಭದಲ್ಲಿ ಪೇಸ್ಟ್ರಿ ಪೀಸ್ ಅಮ್ಮಾಸ್ ನಲ್ಲಿ ಲಭ್ಯವಿದೆ. ಇದ್ರ ಜೊತೆಗೆ ಅಮ್ಮಾಸ್ ಪೇಸ್ಟ್ರೀನಲ್ಲಿ ಸ್ಪೆಷಲ್ ಚಾಕೋಲೆಟ್​​ಗಳು ಕೂಡ ಲಭ್ಯವಿದೆ. ಬರ್ತ್​ಡೇ ,ಪಾರ್ಟಿಗೆ ಗಿಫ್ಟ್ ನೀಡೋದಕ್ಕಾಗಿಯೇ ಚಾಕಲೇಟ್​ಗಳು ಸಿಗುತ್ತವೆ. ಕೈರುಚಿಯನ್ನೇ ಬಂಡವಾಳವನ್ನಾಗಿಸಿ ಕೊಂಡಿರೋ ಆಂಥೋನಿ 27 ಔಟ್ಲೆಟ್ ನಲ್ಲೂ ಒಂದೇ ರೀತಿಯ ರುಚಿಯನ್ನ ಜನರಿಗೆ ನೀಡುತ್ತಿದ್ದಾರೆ. ಎಲ್ಲ್ಲಾಕಡೆಗಳಲ್ಲೂ ಪೇಸ್ಟ್ರೀಗೆ ಒಳ್ಳೆ ರೆಸ್ಪಾನ್ಸ್ ಸಿಕ್ತಿದ್ದು ಮುಂದಿನ ದಿನಗಳಲ್ಲಿ ಅಮ್ಮಾಸ್ ಪೇಸ್ಟ್ರಿಯ ರುಚಿಯನ್ನ ಹೊರರಾಜ್ಯಕ್ಕೂ ನೀಡೋದಕ್ಕೆ ಮುಂದಾಗಿದ್ದಾರೆ.