'ಮೆಡಿಡೈಲಿ'ಗೆ ಜನ್ಮ ನೀಡಿದ ಮರಾಠಿ ಹಬ್ಬ..!

ಟೀಮ್​ ವೈ.ಎಸ್​. ಕನ್ನಡ

'ಮೆಡಿಡೈಲಿ'ಗೆ ಜನ್ಮ ನೀಡಿದ ಮರಾಠಿ ಹಬ್ಬ..!

Saturday April 02, 2016,

3 min Read

ಅಕ್ಷಯ್ ಹರ್ತಾಳ್ಕರ್ ಹಾಗೂ ಮನೀಶ್ ದಷ್ಪುತ್ರೆ ಇಂದೋರ್‍ನಲ್ಲಿ ನಡೆದ ಅದ್ಧೂರಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳದೇ ಇದ್ದಿದ್ರೆ ಅವರ ಇ-ಹೆಲ್ತ್‍ಕೇರ್ ವೇದಿಕೆ `ಮೆಡಿಡೈಲಿ' 1700ಕ್ಕೂ ಹೆಚ್ಚು ಜನರ ಗಮನ ಸೆಳೆಯಲು ಸಾಧ್ಯವಾಗುತ್ತಲೇ ಇರಲಿಲ್ಲ. ಅದೊಂದು ಮರಾಠಿ ಹಬ್ಬ, ಇಂದೋರ್‍ನ ಮರಾಠಿ ಸೋಶಿಯಲ್ ಗ್ರೂಪ್ ಜಾತ್ರೆಯನ್ನು ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ವೈದ್ಯರ ಜೊತೆ ಸೇರಿ `ಮೆಡಿಡೈಲಿ' ಕ್ಯೂ&ಎ ಸೌಲಭ್ಯವನ್ನು ಒದಗಿಸಿತ್ತು. ಸಾರ್ವಜನಿಕರಿಗೆ ಆರೋಗ್ಯ ಸಮಸ್ಯೆಗಳು ಎದುರಾದಲ್ಲಿ ಸಲಹೆ, ಸೂಚನೆ ಪಡೆಯಲು ತಜ್ಞ ಸಲಹೆಗಾರರನ್ನು ಕೂಡ ನೇಮಕ ಮಾಡಲಾಗಿತ್ತು.

"ನಮ್ಮ ಬ್ಲೂಟೂತ್ ಸರ್ವರ್ ಮೂಲಕ 200ಕ್ಕೂ ಹೆಚ್ಚು ಮಂದಿ ಅಪ್ಲಿಕೇಶನ್ ಅನ್ನು ಇನ್‍ಸ್ಟಾಲ್ ಮಾಡಿಕೊಂಡಿದ್ದಾರೆ. ಬಳಕೆದಾರರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಇನ್ನಷ್ಟು ನಗರಗಳಲ್ಲಿ ನಮ್ಮ ಸೇವೆಯನ್ನು ವಿಸ್ತರಿಸಲು ಪ್ರೇರಣೆಯಾಗಿದೆ''                    
                - ಅಕ್ಷಯ್

`ಮೆಡಿಡೈಲಿ' ಆರೋಗ್ಯ ಸೇವೆ ನೀಡುವ ಆನ್‍ಲೈನ್ ಮಾರುಕಟ್ಟೆ. 2015ರ ನವೆಂಬರ್‍ನಲ್ಲಿ ಇದನ್ನು ಆರಂಭಿಸಲಾಗಿದೆ. ಡಯಾಗ್ನೋಸ್ಟಿಕ್ಸ್, ಹೆಲ್ತ್‍ಕೇರ್ ಪ್ಯಾಕೇಜ್‍ಗಳು ಹಾಗೂ ತುರ್ತು ಸೇವೆ ಸೇರಿದಂತೆ ವಿವಿಧ ಬಗೆಯ ಉತ್ತಮ ಆರೋಗ್ಯ ಸೇವೆಗಳನ್ನು `ಮೆಡಿಡೈಲಿ' ಒದಗಿಸುತ್ತಿದೆ.

ನೆರೆಹೊರೆಯವರಿಂದ ಹುಟ್ಟಿದ ಪರಿಕಲ್ಪನೆ

ಇಂದೋರ್‍ನಲ್ಲಿ ಹುಟ್ಟಿ ಬೆಳೆದ ಅಕ್ಷಯ್ ಹಾಗೂ ಮನೀಶ್ ನೆರೆಹೊರೆಯವರು. ಒಮ್ಮೆ ತಮ್ಮ ಪೋಷಕರ ಆರೋಗ್ಯಕ್ಕೆ ಸಂಬಂಧಪಟ್ಟಂತೆ ಇಬ್ಬರೂ ಮಾತನಾಡುತ್ತ ಕುಳಿತಿದ್ರು. ಆಗಲೇ ಹೊಸ ಬ್ಯುಸಿನೆಸ್ ಐಡಿಯಾ ಅವರಿಗೆ ಹೊಳೆದಿತ್ತು. ಅಕ್ಷಯ್ ಹಾಗೂ ಮನೀಶ್ ಆರೋಗ್ಯ ಕ್ಷೇತ್ರದ ಸ್ಥಿತಿಗತಿಗಳ ಬಗ್ಗೆ ಸಂಪೂರ್ಣ ಅಧ್ಯಯನ ನಡೆಸಿದ್ರು. ಸಾಮಾನ್ಯ ವೈದ್ಯಕೀಯ ತಪಾಸಣೆ ಮತ್ತು ಅಗತ್ಯ ಆರೋಗ್ಯ ಸೇವೆಗಳಿಗಾಗಿ ಜಗಳ ಮುಕ್ತ ವೇದಿಕೆಯೊಂದನ್ನು ಸ್ಥಾಪಿಸಲು ನಿರ್ಧರಿಸಿದ್ರು.

image


``ನಾವು ಅನುಕೂಲಕರ, ಪಾರದರ್ಶಕ ಮತ್ತು ವಿಶ್ವಾಸಾರ್ಹ ಆರೋಗ್ಯ ಸೇವೆಗಳನ್ನು ಒದಗಿಸುತ್ತೇವೆ. ಅತ್ಯಂತ ಸರಳವಾಗಿ ಬಳಸಬಹುದಾದ ಮೊಬೈಲ್ ಆ್ಯಪ್ ಹಾಗೂ ವೆಬ್‍ಸೈಟ್ ಮೂಲಕ ಸಾರ್ವಜನಿಕರು ಆರೋಗ್ಯ ಸೇವೆಗಳನ್ನು ಪಡೆದುಕೊಳ್ಳಬಹುದು'' ಎನ್ನುತ್ತಾರೆ ಮನೀಶ್.

ಅಕ್ಷಯ್‍ಗೆ ಉದ್ಯಮ ಲೋಕ ಹೊಸದೇನೂ ಅಲ್ಲ. ಅಮರಾವತಿ ವಿಶ್ವವಿದ್ಯಾನಿಲಯದಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿರೋ 42ರ ಹರೆಯದ ಅವರು ಈ ಹಿಂದೆ ಕೂಡ ಸ್ಟಾರ್ಟ್‍ಅಪ್ ಒಂದನ್ನು ಮುನ್ನಡೆಸಿದ್ದಾರೆ. ಸವಾಲುಗಳನ್ನು ಹೇಗೆ ಎದುರಿಸಬೇಕೆಂಬುದು ಅವರಿಗೆ ಗೊತ್ತು. `ಮೆಡಿಡೈಲಿ' ಆರಂಭಿಸುವ ಮುನ್ನ ಮನೀಶ್ ಂï Airtel T/A Celtel Zambia PLC ಯಲ್ಲಿ ಹಣಕಾಸು ನಿರ್ದೇಶಕರಾಗಿದ್ದರು. ಅಷ್ಟೇ ಅಲ್ಲ Warid Telecom Uganda Limited, Bharti Airtel Limited, GE Capital International Services, Bridgestone ಜೊತೆಗೂ ಅವರು ಕೆಲಸ ಮಾಡಿದ್ದಾರೆ.

ಗಾತ್ರಕ್ಕಿಂತ ಗುಣಮಟ್ಟಕ್ಕೆ ಹೆಚ್ಚು ಆದ್ಯತೆ

ಆನ್ ಬೋರ್ಡಿಂಗ್ ಡಯಾಗ್ನೋಸ್ಟಿಕ್ ಕೇಂದ್ರಗಳಲ್ಲಿ ಮೆಡಿಡೈಲಿ ಕಟ್ಟುನಿಟ್ಟಾದ ಪ್ರಕ್ರಿಯೆಗಳನ್ನು ಅನುಸರಿಸುತ್ತದೆ. ಡಯಾಗ್ನೋಸ್ಟಿಕ್ಸ್ ಕೇಂದ್ರದ ಸಿಬ್ಬಂದಿಯನ್ನು ಭೇಟಿ ಮಾಡಿ ಅವರಿಗೆ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಟ್ರಯಲ್ ರನ್ ಬಳಿಕವಷ್ಟೆ ಅವರನ್ನು ಆನ್ ಬೋರ್ಡ್ ಮಾಡಲಾಗುತ್ತದೆ. ಮೆಡಿಡೈಲಿ ಆ್ಯಪ್ ಮೂಲಕ 100 National Accreditation Board for Testing and Calibration ಗಳ ಪೈಕಿ ಯಾವುದಾದರೊಂದು ಕೇಂದ್ರದಲ್ಲಿ ಆರೋಗ್ಯ ಸೇವೆಯನ್ನು ಪಡೆದುಕೊಳ್ಳಬಹುದು. ಬೆಂಗಳೂರು ಮತ್ತು ಇಂದೋರ್‍ನಲ್ಲಿರುವ ರೋಗ ಪತ್ತೆ ಕೇಂದ್ರಗಳಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬಹುದು. 2500 ಬಗೆಯ ಟೆಸ್ಟ್ ಹಾಗೂ ಆರೋಗ್ಯ ಪರೀಕ್ಷೆ ಪ್ಯಾಕೇಜ್‍ಗಳು ಬಳಕೆದಾರರಿಗೆ ಲಭ್ಯವಿವೆ. ಡಯಾಗ್ನೋಸ್ಟಿಕ್ ಟೆಸ್ಟ್‍ಗಾಗಿ ಎಂಡಿ ಪ್ಯಾಥೊಲೊಜಿಸ್ಟ್‍ಗಳ ತಂಡವನ್ನೇ ನೇಮಕ ಮಾಡಿಕೊಳ್ಳಲಾಗಿದೆ. ಇದುವರೆಗೆ ಮೆಡಿಡೈಲಿ ಆ್ಯಂಡ್ರಾಯ್ಡ್ ಆ್ಯಪ್‍ನ್ನು 3000ಕ್ಕೂ ಹೆಚ್ಚು ಮಂದಿ ಇನ್‍ಸ್ಟಾಲ್ ಮಾಡಿಕೊಂಡಿದ್ದಾರೆ.

ಇದನ್ನು ಓದಿ: ಮಧುಮೇಹ ರೋಗಿಗಳ ಆಶಾಕಿರಣ ಸ್ಮಾರ್ಟ್ ಸಾಕ್ಸ್..!

ರಿಯಾಯಿತಿಗಳು, ಡೆಲಿವರಿ ಸಮಯ ಇವುಗಳ ಆಧಾರದ ಮೇಲೆ ಡಯಾಗ್ನೋಸ್ಟಿಕ್ ಕೇಂದ್ರಗಳು, ಪ್ಯಾಥೊಲೊಜಿ ಲ್ಯಾಬ್‍ಗಳು ಮತ್ತು ಹೋಮ್ ಕೇರ್ ಸರ್ವೀಸ್ ಪ್ರೊವೈಡರ್‍ಗಳ ಪಟ್ಟಿಯಲ್ಲಿ ಆಫರ್‍ಗಳನ್ನು ಬಳಕೆದಾರರು ಹೋಲಿಕೆ ಮಾಡಿ ನೋಡಬಹುದು.

ತಂಡದ ಪಾತ್ರ

ತನ್ನ ಕಾರ್ಯಾಚರಣೆಗಾಗಿ ಮೆಡಿಡೈಲಿ 30 ಸದಸ್ಯರ ತಂಡವನ್ನು ಒಳಗೊಂಡಿದೆ. ಲ್ಯಾಬ್‍ಗಳು, ಪೂರೈಕೆದಾರರ ಸ್ವಾಧೀನ, ಡಿಜಿಟಲ್ ಮಾರ್ಕೆಟಿಂಗ್, ತಂತ್ರಜ್ಞಾನ, ಈವೆಂಟ್ ಮ್ಯಾನೇಜ್‍ಮೆಂಟ್ ಹಾಗೂ ಹಣಕಾಸು ನಿರ್ವಹಣೆ ಎಲ್ಲವನ್ನೂ ಅವರು ನಿಭಾಯಿಸುತ್ತಾರೆ. ಬೆಂಗಳೂರು ಹಾಗೂ ಇಂದೋರ್‍ನಲ್ಲಿ ಡಯಾಗ್ನೋಸ್ಟಿಕ್ ಟೆಸ್ಟ್ ಮತ್ತು ಹೆಲ್ತ್‍ಕೇರ್ ಪ್ಯಾಕೇಜ್‍ಗಾಗಿ ಮೆಡಿಡೈಲಿ ಆ್ಯಪ್‍ಗೆ 7-8 ಆರ್ಡರ್‍ಗಳು ಬರುತ್ತಿವೆ. 2 ತಿಂಗಳಲ್ಲಿ 500ಕ್ಕೂ ಹೆಚ್ಚು ಸರ್ವೀಸ್ ರಿಕ್ವೆಸ್ಟ್‍ಗಳನ್ನು ಮೆಡಿಡೈಲಿ ಪೂರೈಸಿದೆ. 41 ಕಾರ್ಪೊರೇಟ್ಸ್ ಜೊತೆಗೆ ಕಾರ್ಯನಿರ್ವಹಿಸುತ್ತಿದೆ. ಪ್ರತಿ ವಹಿವಾಟಿಗೆ ಶೇ.5-8ರಷ್ಟು ಕಮಿಷನ್ ಸಿಗುತ್ತಿದೆ. ಮೆಡಿಡೈಲಿ ಏಂಜೆಲ್ ಹೂಡಿಕೆದಾರರಿಂದ 100000 ಡಾಲರ್ ಬಂಡವಾಳ ಗಿಟ್ಟಿಸಿಕೊಂಡಿದೆ.

ಸೇವೆ ವಿಸ್ತರಣೆ

ಸದ್ಯ ಬೆಂಗಳೂರು ಮತ್ತು ಇಂದೋರ್‍ನಲ್ಲಿ ಮೆಡಿಡೈಲಿ ಸೇವೆ ಲಭ್ಯವಿದೆ. ಮುಂದಿನ 6 ತಿಂಗಳುಗಳಲ್ಲಿ 10-15 ನಗರಗಳಿಗೆ ಆರೋಗ್ಯ ಸೇವೆ ವಿಸ್ತರಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಮನೆಯಲ್ಲಿ ಸೇವೆ, ಆಂಬ್ಯುಲೆನ್ಸ್, ಡಾಕ್ಟರ್ ಕನ್ಸಲ್ಟೆನ್ಸಿ, ಅಪಾಯಿಂಟ್‍ಮೆಂಟ್ ಹೀಗೆ ಸಂಪೂರ್ಣ ಆರೋಗ್ಯ ಸೇವೆಯನ್ನು ಒದಗಿಸುವ ಮೂಲಕ ಭವಿಷ್ಯದಲ್ಲಿ ಬಳಕೆದಾರರ ಆರೋಗ್ಯ ಅವಶ್ಯಕತೆಗಳನ್ನು ಪೂರೈಸಲು ಮೆಡಿಡೈಲಿ ಮುಂದಾಗಿದೆ. ಅಷ್ಟೇ ಅಲ್ಲ ಮಧುಮೇಹಕ್ಕೆ ಸಂಬಂಧಪಟ್ಟ ಉತ್ಪನ್ನಗಳನ್ನು ರೋಗಿಗಳ ಮನೆಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡುತ್ತಿದೆ. ನ್ಯಾಶನಲ್ ಹೆಲ್ತ್ ಗ್ರೂಪ್ ಜೊತೆ ಕೈಜೋಡಿಸುವ ಮೂಲಕ ಲಾಭ ರಹಿತ ಆರೋಗ್ಯ ಸೇವೆ ನೀಡುವ ಉದ್ದೇಶ ಅಕ್ಷಯ್ ಅವರಿಗಿದೆ.

ಐಬಿಇಎಫ್ ಪ್ರಕಾರ 2015ರಲ್ಲಿ ಭಾರತದಲ್ಲಿ ಹೆಲ್ತ್‍ಕೇರ್ ಮಾರುಕಟ್ಟೆಯ ಮೌಲ್ಯ 100 ಬಿಲಿಯನ್ ಡಾಲರ್‍ನಷ್ಟಿದೆ. 2020ರ ವೇಳೆಗೆ ಇದು 280 ಬಿಲಿಯನ್ ಡಾಲರ್‍ನಷ್ಟಾಗಲಿದೆ. ಕೈಗಾರಿಕಾ ನೀತಿ ಮತ್ತು ಉತ್ತೇಜನಾ ಇಲಾಖೆಯ ಅಂಕಿಅಂಶಗಳ ಪ್ರಕಾರ 2000-15ರ ವರೆಗೆ ಆಸ್ಪತ್ರೆ ಮತ್ತು ಡಯಾಗ್ನೋಸ್ಟಿಕ್ ಕೇಂದ್ರಗಳಲ್ಲಿ ಎಫ್‍ಡಿಐ ಹೂಡಿಕೆ 3.21 ಬಿಲಿಯನ್ ಡಾಲರ್. ಕ್ಷೇಮ ಮಾರುಕಟ್ಟೆ, ಹೋಮ್ ಹೆಲ್ತ್‍ಕೇರ್ ಸರ್ವೀಸ್ ಸೇರಿದಂತೆ ವಿವಿಧ ಸೇವೆ ನೀಡುತ್ತಿರುವ ಪೋರ್ಟಿಯಾ, ಪ್ರಾಕ್ಟೋದಂತಹ ಸಂಸ್ಥೆಗಳಿಗೆ ಹೂಡಿಕೆದಾರರು ಹೆಚ್ಚಿನ ಬಂಡವಾಳ ನೆರವು ನೀಡಿದ್ದಾರೆ.

ಭಾರತದಲ್ಲಿ ಆರೋಗ್ಯ ವಲಯ ಛಿದ್ರವಾಗಿದೆ. ಗುಣಮಟ್ಟದ ಆರೋಗ್ಯ ಸೇವೆ ಸಿಗುತ್ತಿಲ್ಲ. ಈ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಮೆಡಿಡೈಲಿಯನ್ನು ಆರಂಭಿಸಲಾಗಿದೆ. ಛಿದ್ರಗೊಂಡಿರುವ ಆರೋಗ್ಯ ವಲಯವನ್ನು ಒಟ್ಟುಗೂಡಿಸುವ ಉದ್ದೇಶ ಅಕ್ಷಯ್ ಹಾಗೂ ಮನೀಶ್ ಅವರದ್ದು.

ಲೇಖಕರು: ಅಪರಾಜಿತಾ ಚೌಧರಿ

ಅನುವಾದಕರು: ಭಾರತಿ ಭಟ್ 

ಇದನ್ನು ಓದಿ:

1. ರಾಜಸ್ಥಾನಿ ಪುಲ್ಕಾಸ್​​ ಟೇಸ್ಟ್​​ ನೋಡಿ.. ಅಮ್ಮ ಮಗಳ ಕಥೆ ಕೇಳಿ..!

2. ಕೆಲಸಕ್ಕೆ ಗುಡ್‍ಬೈ, ಸ್ಟಾರ್ಟ್‍ಅಪ್‍ಗೆ ಜೈ - ಕಲೆಯನ್ನೇ ನಂಬಿ ಉದ್ಯಮ ಆರಂಭಿಸಿದ ಸಾಹಸಿ

3. ಬಡವರ ಹಸಿವು ನೀಗಿಸೋ ‘ಅನ್ನಕೂಟ’