ಕ್ಯಾಬ್ ಬುಕ್ಕಿಂಗ್ ಹಾಗೂ ಮೊಬೈಲ್‍ರೀಚಾರ್ಜಿಂಗ್ ಸರಳೀಕರಿಸಿದ ಚಾಟ್‍ಬೋಟ್‍ Niki.ai

ಟೀಮ್​​ ವೈ.ಎಸ್​​. ಕನ್ನಡ

0

ಜನರ ಉತ್ಪಾದಕತೆ ಮತ್ತು ಉತ್ತಮ ಸಮಯ ಪಾಲನೆಗೆ ಇಂದು ಹಲವಾರು ಕೃತಕ ಜ್ಞಾನದ ಚಾಟ್‍ಬೋಟ್‍ಗಳು ಮತ್ತು ಖಾಸಗೀ ಸಹಾಯಕರು ಇದೆ. ಹಲವು ಸೇವೆಗಳಿಗೆ ಮತ್ತು ಬೇಕಾದ ವಸ್ತುಗಳಿಗೆವಿವಿಧ ಬಗೆಯ ಇ- ಕಾಮರ್ಸ್ ವೇದಿಕೆಗಳು ಮತ್ತು ಅವುಗಳ ಮೊಬೈಲ್ ಆ್ಯಪ್‍ಗಳ ಉಪಯೋಗ ಮತ್ತು ಬಳಕೆ ಜನರಿಗೆ ಕಷ್ಟ ತಂದೊಡ್ಡಿದೆ. ಇದನ್ನು ಹೋಗಲಾಡಿಸಲು ನಿಕಿ.ಎಐ (Niki.ai) ಹುಟ್ಟಿಕೊಂಡಿತು.ಇದನ್ನು ಯುವರ್ ಸ್ಟೋರಿ ಯಟೆಕ್ ಸ್ಪಾರ್ಕ್ 2015ರಲ್ಲಿ ಅನಾವರಣ ಮಾಡಲಾಯಿತು. ಮತ್ತು ಇದು ಟೆಕ್30 ಕಂಪನಿಯಾಗಿದೆ.

Niki.ai ಏನಿದು?

ಕೃತಕಜ್ಞಾನ ಮತ್ತು ಸಹಜ ಭಾಷಾ ಪ್ರೊಗ್ರಾಮಿಂಗ್ ಸಹಾಯದಿಂದ ಚಾಟ್‍ಬೋಟ್‍ನಿಕಿ.ಎಐ(Niki.ai) ನಲ್ಲಿ ಸಂವಹನ ಮಾಡಬಹುದು. ಅವಶ್ಯಕ ಸೇವೆ ಮತ್ತು ವಸ್ತುಗಳ ಸಂದರ್ಭಕ್ಕೆ ಅನುಗುಣವಾಗಿ ಮನುಷ್ಯನ ಭಾಷೆಯನ್ನು ಈ ಆ್ಯಪ್ ಅರ್ಥಮಾಡಿಕೊಳ್ಳುತ್ತದೆ. ಸಧ್ಯಕ್ಕೆ ಬಳಕೆದಾರರು ಅವಶ್ಯಕತೆ ಇದ್ದುದನ್ನು ಹುಡುಕಿ, ಖಚಿತಪಡಿಸಿಕೊಂಡು ನಂತ್ರ ಕ್ಯಾಬ್ ಮತ್ತು ಮೊಬೈಲ್ ರೀಚಾರ್ಜ್‍ಗಳಿಗೆ ಹಣ ಪಾವತಿ ಮಾಡಬಹುದು.

ಐಐಟಿ ಖರಗ್‍ಪುರ್‍ನ ನಾಲ್ವರು ವಿದ್ಯಾರ್ಥಿಗಳಾದ ಸಚಿನ್‍ಜೈಸ್ವಾಲ್, ಕೇಶವ್ ಪ್ರವಾಸಿ, ನಿತಿನ್ ಬಾಬೆಲ್ ಮತ್ತು ಶಿಶಿರ್ ಮೋದಿ 2015ರ ಏಪ್ರಿಲ್‍ನಲ್ಲಿನಿಕಿ.ಎಐ(Niki.ai) ಅನ್ನು ಕಂಡುಹಿಡಿದರು. ನಾಲ್ವರ ತಂಡ ಈಗ 16ಕ್ಕೆ ಏರಿದೆ.ಜುಲೈ 2015ಕ್ಕೆ ಬೆಂಗಳೂರಿಗೆ ಬರೋ ಮುನ್ನ ತಂಡ ಉದಯ್‍ಪುರ್‍ನಲ್ಲಿ ಕೆಲ ಸಮಯ ಇದ್ದರು.

ಏಳು ತಿಂಗಳ ಕಾಲ ಬೀಟಾ ವರ್ಷನ್‍ನಲ್ಲಿದ್ದ ನಿಕಿ.ಎಐ ಅನ್ನು ಕೆಲವೇ ಮಂದಿ ಬಳಕೆದಾರರ ಜತೆಗಿನ ಸಂವಹನದಿಂದ ಆಪ್‍ನ ಅಭಿವೃದ್ಧಿ ಮತ್ತು ಗುಣ ಹೆಚ್ಚಿಸಿದರು ತಂಡದ ಸದಸ್ಯರು. ಸಧ್ಯಕ್ಕೆ ಈ ಆಪ್ ಓಲಾ ಮತ್ತು ಉಬರ್‍ಕ್ಯಾಬ್ ಸೇವೆಗಳ ಎಲ್ಲಾ ಅಗತ್ಯ ಬುಕ್ಕಿಂಗ್‍ಗಳನ್ನು ಪೂರೈಸುತ್ತಿದೆ. ಪ್ರತಿಯೊಬ್ಬರ ಅಗತ್ಯತೆ ಮತ್ತು ಅನುಭವಗಳನ್ನು ಅರ್ಥಮಾಡಿಕೊಳ್ಳಲು ಬ್ಯಾಕ್‍ಎಂಡ್‍ನಲ್ಲಿ ಕಠಿಣಕ್ರಮಗಳನ್ನು ಅನುಸರಿಸಲಾಗುತ್ತಿದೆ.

ಸಧ್ಯದ ಕತೆ..

ತಂತ್ರಜ್ಞಾನ ವೇದಿಕೆಯಡಿ ನಿಕಿ.ಎಐ ಅನ್ನು ಸರಳ ಮತ್ತು ಮೌಲ್ಯಯುತ ತತ್ವದಡಿ ಅಭಿವೃದ್ಧಿಪಡಿಸಲಾಗಿದೆ. ಗ್ರಾಹಕರ ಬಳಕೆಗೆ ಸುಲಭವಾಗಿದ್ದು ವಸ್ತುವಾಗಿ ಮೌಲ್ಯಯುತವಾಗಿದೆ. ಇಂತಹ ವಸ್ತುವಿನ ಆವಿಷ್ಕಾರದ ಪ್ರೇರಣೆ ಬಗ್ಗೆ ಮಾತನಾಡುವಾಗ ಸಚಿನ್ ಹೇಳೋದು ಹೀಗೆ, “ಕಡಿಮೆ ಮೊಬೈಲ್‍ ಮೆಮೊರಿ ಹಾಗೂ ನಿಧಾನಗತಿ ಇಂಟರ್‍ನೆಟ್ ವೇಗದಿಂದ ಹಲವಾರುಗ್ರಾಹಕರು ಹೆಚ್ಚಿನ ಆಪ್‍ಗಳನ್ನು ಇಟ್ಟುಕೊಳ್ಳಲು ಸಾಧ್ಯವಿಲ್ಲ. ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಅನುಕೂಲ ಮತ್ತು ಹೆಚ್ಚಿನ ವೈಯಕ್ತಿಕ ಸಲಹೆಗಳಿಗಾಗಿ ಹಲವು ಆಪ್‍ಗಳ ಬಳಕೆಯನ್ನು ಕಡಿಮೆಮಾಡಬೇಕಿತ್ತು. ಇದಕ್ಕೆ ಉತ್ತರವಾಗಿ ಸಿಕ್ಕಿದ್ದು ಆನ್‍ಲೈನ್ ಬೇಡಿಕೆಯನ್ನು ಸರಳೀಕರಿಸುವ ಚಾಟ್‍ಬೋಟ್”.

ಗ್ರಾಹಕರ ಬಳಕೆಯ ಪ್ರಕರಣಗಳ ಬಗ್ಗೆ ಮಾತನಾಡಿದಾಗ ಸಚಿನ್ ಹೇಳಿದ್ದು, “ಗ್ರಾಹಕರು ತಮಗೆ ಬೇಕಾದ ಕ್ಯಾಬ್‍ಅನ್ನು ಹುಡುಕಬಹುದು, ಬ್ರಾಂಡ್ ಮತ್ತು ಕ್ಯಾಬ್ ವಿಧಗಳ ಮಧ್ಯೆ ಹೋಲಿಕೆ ಮಾಡಿ ನೋಡಬಹುದು ಅಥವಾ ನಿರ್ಧಾರವನ್ನು ನಿಕಿಗೆ ಬಿಡಬಹುದು. ಉದಾಹರಣೆಗೆಹತ್ತಿರದ ಮತ್ತು ಅಗ್ಗದ ಕ್ಯಾಬ್ ಬೇಕೆಂದು ಹೇಳಿದರೆ ನಿಕಿ ಅದನ್ನು ನಿಮಗೆ ಹುಡುಕಿಕೊಡುತ್ತದೆ. ಗ್ರಾಹಕರು ತಮ್ಮಸವಾರಿಯ ಬಗ್ಗೆ ಮಾಹಿತಿ ಪಡೆಯುವುದರ ಜತೆಗೆ ಡ್ರೈವರ್ ಮಾಹಿತಿ ಹಾಗೂ ಆಪ್ ಮೂಲಕವೇ ಸಂಚಾರವನ್ನುರದ್ದು ಮಾಡಬಹುದು”.

ಜಸ್ಟ್​​​​ ವರೀಚಾರ್ಜ್‍ ಇಟ್‍ ಸಹಯೋಗದೊಂದಿಗೆನಿಕಿ.ಎಐ ಮೊಬೈಲ್‍ ರಿಚಾರ್ಜಿಂಗ್‍ನಲ್ಲೂ ಸಹಾಯ ಮಾಡುತ್ತದೆ. ಗ್ರಾಹಕರು ತಮ್ಮಅಗತ್ಯದ ರೀಚಾರ್ಜ್ ಮೊತ್ತವನ್ನು ನಮೂದು ಮಾಡಿದರೆ ಸಾಕು ಅಥವಾ ಅವರ ಅಗತ್ಯತೆಗೆ ಅನುಗುಣವಾಗಿ ನಿಕಿ.ಎಐಗೇ ಸಹಾಯಕ್ಕಾಗಿ ಕೇಳಬಹುದು. “ನೀವು 3ಜಿ ಡಾಟಾ ಪ್ಯಾಕ್ ಹುಡುಕಾಟದಲ್ಲಿದ್ದರೆ ನಿಮ್ಮಅಗತ್ಯತೆಗೆ ಅನುಗುಣವಾಗಿ ನಿಕಿ ನಿಮಗೆ ಅತ್ಯುತ್ತಮ ಯೋಜನೆಯನ್ನುಶಿಫಾರಸ್ಸು ಮಾಡುತ್ತದೆ. ಇಂತಹ ಸಮಯದಲ್ಲಿ ನೀವು ರೋಮಿಂಗ್‍ನಲ್ಲಿದ್ದೀರಾ ಎಂದೂ ಪರಿಶೀಲಿಸಿ ಅದಕ್ಕೆ ತಕ್ಕ ಯೋಜನೆ ಅನ್ನು ಹುಡುಕಿಕೊಡುತ್ತದೆ”ಎಂದು ಹೇಳ್ತಾರೆ ಸಚಿನ್.

ಮರೆವಿನ ಗ್ರಾಹಕರಿಗೆ ಸೇವಾ ಅವಧಿ ಮುಕ್ತಾಯಕ್ಕೂ ಮುನ್ನರೀಚಾರ್ಜ್ ಪ್ಯಾಕ್‍ ನವೀಕರಣ ಮಾಡಿಕೊಳ್ಳಲು ನಿಕಿ.ಎಐ ಸೂಚನೆ ನೀಡುತ್ತದೆ.ಈ ಎಲ್ಲಾ ಅಗತ್ಯವನ್ನೂ ಪೂರೈಸಲು ನಿಕಿಇನ್-ಚಾಟ್ ಪೇಮೆಂಟ್‍ ಆಯ್ಕೆಯನ್ನುಪೇಟಿಎಂವಾಲೆಟ್‍ ಮುಖಾಂತರ ಮಾಡುವ ಅವಕಾಶ ಕೊಡುತ್ತದೆ.“ಎಲ್ಲ ವ್ಯವಹಾರವೂ ಆಪ್ ಮುಖಾಂತರ ಆಗುತ್ತದೆ. ಇದಕ್ಕೆಗ್ರಾಹಕರು ಒನ್‍ಟೈಂ ಪಾಸ್‍ ವರ್ಲ್ಡ್​​​​ ಅನ್ನು ಚಾಟ್‍ನಲ್ಲಿ ನಮೂದು ಮಾಡಿದರೆ ಪೇಮೆಂಟ್‍ ಆಗುತ್ತದೆ”ಎನ್ನುತ್ತಾರೆ ಸಚಿನ್.

ಚಾನಲ್ ಪಾರ್ಟ್‍ನರ್‍ಶಿಪ್ ಮಾದರಿಯಲ್ಲಿ ನಡೆಯುತ್ತಿರೋ ಈ ಸ್ಟಾರ್ಟ್‍ಅಪ್‍ ಇದೇ ವೇದಿಕೆಯಲ್ಲಿ ಪ್ರತಿ ವ್ಯವಹಾರಕ್ಕೂಆದಾಯವನ್ನುಗಳಿಸುತ್ತಿದೆ. ಸಂವಹನ ಸರಳಗೊಳಿಸುವುದು ಮತ್ತು ಗ್ರಾಹಕ ಹಾಗೂ ಬ್ರಾಂಡ್ ನಡುವೆ ಅನುಕೂಲ ವಾತಾವರಣ ಸೃಷ್ಟಿಮಾಡುವುದು ನಿಕಿ.ಎಐನ ದೂರದೃಷ್ಟಿ ಯೋಜನೆ. ಇತ್ತೀಚೆಗಷ್ಟೇ ಈ ಸ್ಟಾರ್ಟ್‍ ಅಪ್‍ ಯೂನಿಲೇಜರ್‍ ವೆಂಚರ್ಸ್ ಮೂಲಕ ಹೂಡಿಕೆಯನ್ನು ಪಡೆದುಕೊಂಡಿದೆ. ವಸ್ತುವಿನ ಅಭಿವೃದ್ಧಿ ಮತ್ತುಸೇವಾ ವಿಸ್ತರಣೆ ಬಗ್ಗೆ ಸಧ್ಯ ನಿಕಿ ಗಮನಹರಿಸುತ್ತಿದೆ.

ಯೂನಿಲೇಜರ್ ವೆಂಚರ್ಸ್‍ನ ಸ್ಥಾಪಕ ರೋನಿ ಸ್ಕ್ರ್ಯೂವಾಲಾ ಹೇಳೊದು ಹೀಗೆ, “ಗ್ರಾಹಕಅನುಭವ ಮತ್ತು ಸರಳತೆಗೆ ಹೆಚ್ಚಿನ ಆದ್ಯತೆಕೊಟ್ಟುವಿಶ್ವದಾದ್ಯಂತ ಟೆಕ್ ಫಸ್ಟ್ ಕಂಪನಿಗಳು ಪ್ರಾಬಲ್ಯ ಮೆರೆದಿದೆ. ಇವರು ಗಮನ ಸೆಳೆಯುವಂತಹ ತಂಡವನ್ನು ಹೊಂದಿದ್ದಾರೆ ಹಾಗೂ ಹೊಸತನದ ಕೆಲಸ ಅಂಚಿನಲ್ಲಿದ್ದಾರೆ. ಈ ದೃಷ್ಟಿಕೋನವನ್ನು ಸಾಕಾರಗೊಳಿಸುವಲ್ಲಿ ನಾವು ಬಹಳ ಹತ್ತಿರದಲ್ಲಿದ್ದೇವೆ.

ಕ್ಷೇತ್ರದ ಅವಲೋಕನ ಮತ್ತು ಭವಿಷ್ಯದ ಯೋಜನೆಗಳು

ಕೃತಕ ಜ್ಞಾನದ ಅಪ್ಲಿಕೇಷನ್‍ಗಳು ಮತ್ತು ವೈಯಕ್ತಿಕ ಸಹಾಯಕಗಳಾದ ಸಿರಿ, ಗೂಗಲ್ ನೌ ಮತ್ತು ಕೊರ್ಟಾನಾಗಳು ಉತ್ಪಾದನೆಯತ್ತ ಹೆಚ್ಚಿನ ಗಮನ ಹರಿಸುತ್ತವೆ. ಆದ್ರೆ ನಿಕಿಎಐ, ಯುಎಸ್‍ಪಿ ವಾಣಿಜ್ಯೋದ್ದೇಶದ ಕಡೆ ಲಕ್ಷ್ಯ ಹರಿಸುತ್ತದೆ. ಚಾಟ್‍ಬೋಟ್‍ಗಳಲ್ಲಿ ಅಮೆರಿಕಾ ಮೂಲದ ಮ್ಯಾಜಿಕ್‍ ಎನ್ನುವ 24 ಗಂಟೆ ಎಸ್‍.ಎಂ.ಎಸ್. ಮೂಲದ ಆನ್‍ಡಿಮ್ಯಾಂಡ್ ಸೇವೆ ನೀಡುವ ಸಂಸ್ಥೆಯಿದೆ. ತಂತ್ರಜ್ಞಾನ ದೈತ್ಯ ಫೇಸ್‍ಬುಕ್ ಸಹ ಈ ವಲಯದಲ್ಲಿ ಆಸಕ್ತಿ ತೋರಿದ್ದು ‘ಫೇಸ್‍ಬುಕ್ ಎಂ’ ಅನ್ನೋ ಪ್ರಾಜೆಕ್ಟ್​​​ ಕೈಗೆತ್ತಿಕೊಂಡಿದ್ದು ಮೆಸೆಂಜರ್‍ಆಪ್‍ನಲ್ಲೇ ಇದು ಅಡಕವಾಗಿರೋ ಸೇವೆಯಾಗಿದೆ. 2013 ರಿಂದ 2020ರ ಒಳಗೆ ಇಂತಹ ಇಂಟೆಲಿಜೆಂಟ್ ವರ್ಚುವಲ್ ಅಸಿಸ್ಟೆಂಟ್‍ಗಳ ವಾರ್ಷಿಕ ಜಾಗತಿಕ ಬೇಡಿಕೆ 30% ಎಂದು ಹೆಕ್ಸಾರಿಸರ್ಚ್ ಮುನ್ಸೂಚನೆಕೊಟ್ಟಿದೆ. ಅಂದ್ರೆ ಮುಂದಿನ 5 ವರ್ಷಗಳಲ್ಲಿ ಈ ಮಾರ್ಕೆಟ್‍ನ ಗಾತ್ರ ಮೂರು ಪಟ್ಟುದೊಡ್ಡದಾಗುತ್ತದೆ ಮತ್ತು ಇದರ ಮೊತ್ತ 3 ಬಿಲಿಯನ್‍ಡಾಲರ್ ಮೀರುತ್ತದೆ.

ಭಾರತದಲ್ಲಿ ಇವರಿಗೆ ಸ್ಥಳೀಯ ಮಟ್ಟದಲ್ಲಿ ವ್ಯಾಪಾರಿಗಳೊಂದಿಗೆ ಸಂಬಂಧವಿದೆ ಮತ್ತು ಟ್ವಿಟರ್‍ನ ಸಹ ಸಂಸ್ಥಾಪಕ ಬಿಜ್ ಸ್ಟೋನ್ ಹಾಗೂ ಇನ್ಪೋಸಿಸ್ ಸಹ ಸಂಸ್ಥಾಪಕ ಕ್ರಿಸ್‍ಗೋಪಾಲಕೃಷ್ಣನ್‍ ಅವರ ಬೆಂಬಲವಿದೆ. ವೈಯಕ್ತಿಕ ಸಹಾಯಕ ಆಪ್‍ಗಳಾದ ಸಿಕ್ಯುಯಾ ಕ್ಯಾಪಿಟಲ್ ಬೆಂಬಲಿತ ಹೆಲ್ಫ್​​​ ಚಾಟ್‍ ಇದೇ ವಲಯದಲ್ಲಿತ್ತು. ಆದ್ರೆ ಇತ್ತೀಚೆಗಷ್ಟೇ ತಮ್ಮ ವಹಿವಾಟನ್ನುಚಿಕ್ಕದು ಮಾಡಿಕೊಂಡರು. ಮೇಲಿನ ಆಟಗಾರರು ನೈಜ ವಿಶ್ವದ ಮತ್ತು ಕೃತಕ ಜ್ಞಾನದ ಸಹಾಯವನ್ನು ಪಡೆದುಕೊಂಡ್ರೆ, ನಿಕಿ.ಎಐ ಮನುಷ್ಯ ಬೆಂಬಲಿತವಲ್ಲದಸಂಪೂರ್ಣ ಸ್ವಯಂಚಾಲಿತವಾಗಿದೆ.

ಮುಂದಿನ ದಿನಗಳಲ್ಲಿ ನಿಕಿ.ಎಐ ಧ್ವನಿ ಆಧಾರಿತ ಮತ್ತು ವೆಬ್ ಮತ್ತು ಸ್ಟಾರ್ಟ್ ಫೋನ್ ಸೇರಿದಂತೆ ಎಲ್ಲಾ ಆನ್‍ಲೈನ್ ವೇದಿಕೆಯನ್ನುಅತಿ ಹತ್ತಿರದಿಂದ ಒಟ್ಟುಗೂಡಿಸಲಿದೆ. ಮುಂದಿನ ಕೆಲ ತಿಂಗಳಲ್ಲಿ ತಮ್ಮ ಸೇವೆಯನ್ನು ಅಭಿವೃದ್ಧಿಪಡಿಸಲಿದ್ದು ಬಸ್ ಬುಕ್ಕಿಂಗ್ ಹಾಗೂ ಇತರೆ ಸೇವೆಗಳನ್ನು ಅದಕ್ಕೆಸೇರಿಸಲಿದ್ದಾರೆ. ಈ ತಂಡದ ಪ್ರಮುಖಗುರಿತಮ್ಮ ಸೇವೆಯ ಸ್ಥಿರತೆ ಕಾಪಾಡಿಕೊಳ್ಳುವುದು.

ಯುವರ್ ಸ್ಟೋರಿಯ ತೀರ್ಪು

ನಿಕಿ,ಎಐ ಅತ್ಯುತ್ತಮವಾಗಿ ವಿನ್ಯಾಸ ಮಾಡಲ್ಪಟ್ಟಿದ್ದು ನಿಜವಾದ ಸಮಸ್ಯೆಗೆ ಪರಿಹಾರ ಹುಡುಕಲಿದೆ. ಈ ಮೊಬೈಲ್‍ಆಪ್‍ನ ಬಳಕೆ ಸರಳವಾಗಿದ್ದು, ಇದರಗ್ರಾಹಕರ ಇಂಟರ್​ಫೇಸ್ ಹೊಸತನದಿಂದ ಕೂಡಿದೆ. ಬೇಡದ ವಿಷಯಗಳನ್ನು ಅನವಶ್ಯಕವಾಗಿ ತುರುಕದೇ ಆ್ಯಪ್‍ ತನ್ನ ಮಾತನ್ನು ಉಳಿಸಿಕೊಂಡಿದೆ. 2ಜಿ ಇಂಟರ್‍ನೆಟ್ ವೇಗಕ್ಕೂ ಸಹ ಹೊಂದಿಕೊಂಡು ಕೆಲಸ ಮಾಡುವುದು ಈ ಆ್ಯಪ್‍ನ ಹೆಗ್ಗಳಿಕೆ.

ಲೇಖಕರು: ಹರ್ಷಿತ್​​ ಮಲ್ಯ
ಅನುವಾದಕರು: ಆರ್‍.ಪಿ.

Related Stories