ಇಲ್ಲಿ ದುಡ್ಡಿದ್ದರೂ ಕೇಳೋಕೆ ಜನರೇ ಇಲ್ಲ..!

ಟೀಮ್​ ವೈ.ಎಸ್​. ಕನ್ನಡ

ಇಲ್ಲಿ ದುಡ್ಡಿದ್ದರೂ ಕೇಳೋಕೆ ಜನರೇ ಇಲ್ಲ..!

Wednesday March 22, 2017,

2 min Read

ಕೇಂದ್ರ ಸರಕಾರ ಹೆಣ್ಣು ಮಕ್ಕಳ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಆದ್ರೆ ಅವುಗಳ ಪೈಕಿ ಅದೆಷ್ಟು ಯೋಜನೆಗಳು ಪರಿಪೂರ್ಣವಾಗಿ ಉಪಯೋಗವಾಗಿವೆ ಅನ್ನುವ ಬಗ್ಗೆ ಪ್ರಶ್ನೆಗಳಿವೆ. ನರೇಂದ್ರ ಮೋದಿ ನೇತೃತ್ವದ ಸರಕಾರ ಹೆಣ್ಣುಮಕ್ಕಳಿಗಾಗಿ "ಬೇಟಿ ಬಚಾವೋ, ಬೇಟಿ ಪಡಾವೋ" ಯೋಜನೆಯನ್ನು ಜಾರಿಗೆ ತಂದಿದೆ. ಆದ್ರೆ ಈ ಯೋಜನೆಯಡಿಯಲ್ಲಿ ಬರುವ ಅನುದಾನದ ಉಪಯೋಗವಾಗಿದ್ದು ಕೇವಲ ಶೇಕಡಾ 10ರಷ್ಟು ಮಾತ್ರ. ಇನ್ನುಳಿದ ಶೇಕಡಾ 90ರಷ್ಟು ಹಣ ಉಪಯೋಗವಾಗದೆ ಕೊಳೆಯುತ್ತಿದೆ.

image


ಪ್ರಧಾನ ಮಂತ್ರಿಯವರ ನಿಧಿಯಿಂದ ಉಪಯೋಗಕ್ಕೆ ಬರುವ ಈ ಅನುದಾನವನ್ನು ಉಪಯೋಗಿಸಿಕೊಳ್ಳಬೇಕಾಗಿರುವುದು ಅಧಿಕಾರಿಗಳ ಕರ್ತವ್ಯ. ಆದ್ರೆ ಅಧಿಕಾರಿಗಳು ಇದನ್ನು ಸರಿಯಾಗಿ ಉಪಯೋಗಿಸಿಕೊಂಡಿಲ್ಲ. ಹೀಗಾಗಿ ಈ ಯೋಜನೆಯನ್ನು ಸರಿಯಾಗಿ ಅನುಷ್ಠಾನಗೊಳಿಸಲು ಕೇಂದ್ರ ಸರಕಾರ ಮುಂದಾಗಿದೆ.

2016-17ರ ಸಾಲಿನಲ್ಲಿ " ಬೇಟಿ ಬಚಾವೋ, ಬೇಟಿ ಪಡಾವೋ" ಯೋಜನೆಗಾಗಿ ಸುಮಾರು 43 ಕೋಟಿ ರೂಪಾಯಿಗಳನ್ನು ಮೀಸಲಾಗಿಡಲಾಗಿತ್ತು. ಆದ್ರೆ ಇಲ್ಲಿ ತನಕ ಈ ಯೋಜನೆಯ ಅಡಿಯಲ್ಲಿ ಉಪಯೋಗಿಸಿದ್ದು ಕೇವಲ 5 ಕೋಟಿ ರೂಪಾಯಿಗಳನ್ನು ಮಾತ್ರ. ಪಾರ್ಲಿಮೆಂಟರಿ ಸ್ಟ್ಯಾಂಡಿಂಗ್ ಕಮಿಟಿ ಆನ್ ಹ್ಯೂಮನ್ ರಿಸೋರ್ಸ್ ಡೆವಲಪ್​ಮೆಂಟ್ ಈ ಆಘಾತಕಾರಿ ವರಿಯಲ್ಲಿ ನೀಡಿದೆ.

ಇದನ್ನು ಓದಿ: ಗಾನ ನೃತ್ಯದ "ಆರಾಧನ" ಅಪರ್ಣಾ 

2015-16ರ ವರ್ಷದಲ್ಲೂ ಈ ಅನುದಾನವನ್ನು ಸರಿಯಾಗಿ ಉಪಯೋಗಿಸಿಕೊಂಡಿಲ್ಲ. 59.37 ಕೋಟಿ ರೂಪಾಯಿಗಳ ಪೈಕಿ " ಬೇಟಿ ಬಚಾವೋ ಬೇಟಿ ಪಡಾವೋ" ಕಾರ್ಯಕ್ಕೆ ಉಪಯೋಗವಾಗಿದ್ದು ಶೇಕಡಾ 10ಕ್ಕಿಂತ ಕಡಿಮೆ. ಈ ನಡುವೆ ನಿರ್ಭಯ ಸ್ಕೀಮ್ ಯೋಜನೆಯ ಅಡಿಯಲ್ಲಿ ಬರುವ ಅನುದಾನವನ್ನು ಕೂಡ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸರಿಯಾಗಿ ಬಳಸಿಕೊಂಡಿಲ್ಲ. ಹೀಗಾಗಿ ಕೇಂದ್ರ ಸರಕಾರದ ಹಲವು ಯೋಜನೆಗಳು ಅಧಿಕಾರಿಗಳ ನಿರ್ಲಕ್ಷ್ಯತನದಿಂದ ನೆನೆಗುದಿಗೆ ಬಿದ್ದಂತಾಗಿದೆ. ಈ ಯೋಜನೆಯಡಿಯಲ್ಲಿ ಕೇಂದ್ರ ಸರಕಾರ 75 ಕೋಟಿಗಳನ್ನು ಮೀಸಲಿಟ್ಟಿತ್ತು. ಆದ್ರೆ ಈ ಪೈಕಿ ಉಪಯೋಗವಾಗಿದ್ದು ಕೇವಲ 18 ಕೋಟಿ ರೂಪಾಯಿ ಮಾತ್ರ. ಹೀಗಾಗಿ ಅನುದಾನವನ್ನು ಉಪಯೋಗಿಸಿಕೊಳ್ಳದ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಲು ಕೇಂದ್ರ ಸರಕಾರ ಪ್ಲಾನ್ ಮಾಡಿಕೊಳ್ಳುತ್ತಿದೆ.

" ಬೇಟಿ ಬಚಾವೋ, ಬೇಟಿ ಪಡಾವೋ" ಮೂಲಕ ಕೇಂದ್ರ ಸರಕಾರ ಹೆಣ್ಣುಮಕ್ಕಳ ಸಂಖ್ಯೆಯ ಅಭಿವೃದ್ಧಿಗೆ ಗಮನಕೊಡುತ್ತಿದೆ. ಅಷ್ಟೇ ಅಲ್ಲ ಕಡಿಮೆ ಇರುವ ಹೆಣ್ಣುಮಕ್ಕಳ ಶೈಕ್ಷಣಿಕ ರೇಟ್ ಅನ್ನು ಹೆಚ್ಚು ಮಾಡಲು ಶ್ರಮಿಸುತ್ತಿದೆ. ಭಾರತದ ಸುಮಾರು 161 ಜಿಲ್ಲೆಗಳಲ್ಲಿ "ಬೇಟಿ ಬಚಾವೋ ಬೇಟಿ ಪಡಾವೋ" ಆಂದೋಲನ ಜೋರಾಗಿ ನಡೆಯುತ್ತಿದೆ. 

ಇದನ್ನು ಓದಿ: 

1. ಮಹಿಳೆಯರೇ ಎಚ್ಚರ..! ಸ್ತನ ಕ್ಯಾನ್ಸರ್​ ಮಹಾಮಾರಿಯಾಗುತ್ತಿದೆ..!

2. ಕಷ್ಟಕ್ಕೆ ಅಂಜಲಿಲ್ಲ- ಅಮಾನದ ಬಗ್ಗೆ ಚಿಂತೆ ಮಾಡಲಿಲ್ಲ- ಇದು ಶನ್ನೋ ಬೇಗಂರ ಸ್ಫೂರ್ತಿಯ ಕಥೆ

3. ಹಸಿದವರ ಹೊಟ್ಟೆ ತುಂಬಿಸಲು ನೆರವು ಕೇಳಿದ ಆಸ್ಕರ್ ವಿಜೇತ ನಟಿ