ಖಾದಿ ಬಟ್ಟೆಗಳಿಗೆ ಈಗ ಎಲ್ಲಿಲ್ಲದ ಡಿಮ್ಯಾಂಡ್: ಯಶಸ್ಸಿನತ್ತ ಖಾದಿ ಮಂಡಳಿ

ವಿಸ್ಮಯ

ಖಾದಿ ಬಟ್ಟೆಗಳಿಗೆ ಈಗ ಎಲ್ಲಿಲ್ಲದ ಡಿಮ್ಯಾಂಡ್: ಯಶಸ್ಸಿನತ್ತ ಖಾದಿ ಮಂಡಳಿ

Sunday March 20, 2016,

2 min Read

ಪಾಶ್ಚಾತ್ಯ ಸಂಸ್ಕ್ರತಿಯನ್ನೇ ಮೈಗೂಡಿಸಿಕೊಂಡಿರೋ ನಮ್ಮ ಸಿಲಿಕಾನ್ ಸಿಟಿ ಮಂದಿ, ತಾವು ಮಾತಾನಾಡುವ ಭಾಷೆಯಿಂದ ಹಿಡಿದು ತಾವು ತೊಡುವ ಬಟ್ಟೆವರೆಗೂ ಬೇರೆ ದೇಶದ ಸಂಸ್ಕೃತಿಯನ್ನೆ ಅನುಕರಣೆ ಮಾಡ್ತಾರೆ. ಇನ್ನು ಖಾದಿ ಬಟ್ಟೆ ಕೇವಲ ವಯಸ್ಸಾದ ಅಜ್ಜ- ಅಜ್ಜಿಗೆ ಅನ್ನೋ ಮನೋಭಾವ ಇತ್ತು. ಖಾದಿ ಬಟ್ಟೆ ಅಂದ್ರೆ ಅದೆಷ್ಟೋ ಹುಡುಗ- ಹುಡುಗಿಯರು ಮೂಗು ಮುರಿತಾನೂ ಇದ್ರು. ಆದ್ರೆ ಈಗ ಕಾಲ ಬದಲಾಗಿದೆ. ಖಾದಿಯಲ್ಲೇ ವೆರೈಟಿ ವೆರೈಟಿ ಡ್ರೆಸ್‍ಗಳು ಬಂದಿರೋದ್ರಿಂದ ಹುಡುಗ ಹುಡುಗಿಯರ ಮನಸ್ಸನ್ನು ಸೆಳೆಯುತ್ತಿದೆ.

image


ಇದೆಲ್ಲ ಬೇಸಿಗೆ ಕಾಲ ಎಫೆಕ್ಟ್. ಬೇಸಿಗೆ ಕಾಲ ಶುರುವಾಗ್ತಿದ್ದಂತೆ ಖಾದಿ ಉಡುಪುಗಳಿಗೆ ಈಗ ಎಲ್ಲಿಲ್ಲದ ಬೇಡಿಕೆ ಹೆಚ್ಚಿದೆ.. ದಿನದಿಂದ ದಿನಕ್ಕೆ ಬೇಸಿಗೆ ತೀವ್ರತೆ ಹೆಚ್ಚಾಗ್ತಿದೆ. ಬಿಸಿಲ ತಾಪಮಾನಕ್ಕೆ ಜನ ಈಗ ಖಾದಿಯತ್ತ ಹೆಜ್ಜೆ ಹಾಕುತ್ತಿದ್ದಾರೆ.ಜನ್ರ ಅಭಿರುಚಿಗೆ ತಕ್ಕಂತೆ ಖಾದಿ ವಸ್ತ್ರಗಳನ್ನು ಪರಿಚಯಿಸಲಾಗಿದೆ. ಖಾದಿಯಲ್ಲೇ ವೆರೈಟಿ ವೆರೈಟಿ ಡ್ರೆಸ್‍ಗಳು ಬಂದಿರೋದ್ರಿಂದ ಹುಡುಗ ಹುಡುಗಿಯರ ಮನಸ್ಸನ್ನು ಸೆಳೆಯುತ್ತಿದೆ. ಜೊತೆ ಜೊತೆಗೆ ಒಳ್ಳೆಯ ಆಫರ್ ಗಳನ್ನು ನೀಡಲಾಗ್ತಿದೆ. ಬೆಲೆ ದುಬಾರಿಯಾದರೂ ಖಾದಿ ಬಟ್ಟೆಗಳ ಖರೀದಿ ಮಾತ್ರ ಜೋರಾಗಿಯೇ ಇದೆ.

ಇದನ್ನು ಓದಿ: ಸುಮಧುರ ಕಂಠದ ಮನಸ್ಸಿನಲ್ಲಿದೆ ನೂರಾರು ಕನಸು- ಚಿಕ್ಕ ವಯಸ್ಸಿನಲ್ಲೇ ನೂರಾರು ಮಕ್ಕಳಿಗೆ ಆಸರೆ

ಕಲರ್‍ಫುಲ್ ಶರ್ಟ್‍ಗಳು, ಬಣ್ಣ ಬಣ್ಣದ ಸೀರೆಗಳು, ಕೋಟ್‍ಗಳು, ಖಾದಿ ಪ್ಯಾಂಟ್‍ಗಳು ಗ್ರಾಹಕರನ್ನು ಸೆಳೆಯುತ್ತಿದೆ. ಹೆಂಗೆಳೆಯರನ್ನು ಗುರಿಯಾಗಿಸಿಕೊಂಡು ಖಾದಿ ಬಟ್ಟೆಗಳಿಗೆ ಫ್ಯಾಷನ್ ಟಚ್ ಕೊಟ್ಟು ಹೊಸ ವಿನ್ಯಾಸ, ಕಲರ್ ಕಾಂಬಿನೇಷ್‍ನೊಂದಿಗೆ ಆಕರ್ಷಿಸುತ್ತಿದೆ ಖಾದಿ ತೊಟ್ಟ ಮೇಲೆ ಅದ್ರ ಖದರೇ ಬೇರೆ. ಖಾದಿ ಬಟ್ಟೆಗಿರುವ ಮಹತ್ವವೇ ಅಂತಹದ್ದು ಬಿಡಿ. ಜೊತೆಗೆ ಖಾದಿಬಟ್ಟೆಗಳು ಆರೋಗ್ಯಕ್ಕೆ ಹಿತಕರವಾಗಿರುತ್ತೆ.. ಬೇಸಿಗೆಯಲ್ಲಿ ಯಾವುದೇ ರೀತಿಯ ಅಲರ್ಜಿ, ತುರಿಕೆ ಆಗದಂತೆ ತಡೆಯುವಲ್ಲಿ ಸಹಕಾರಿಯಾಗಿದೆ..ಹಾಗಾಗಿ ಹೆಚ್ಚು ಹೊಂದಿಕೆ ಆಗುವ ಕಾರಣ ಜನ್ರು ಖಾದಿ ಬಟ್ಟೆಗಳಿಗೆ ಮನಸೋತಿದ್ದಾರೆ..

image


ಖಾದಿ ಪ್ರಿಯರು ಏನ್ ಹೇಳ್ತಾರೆ..?

ಮೊದಲೆಲ್ಲ ಖಾದಿ ಬಟ್ಟೆಗಳೆಂದ್ರೆ ಅಷ್ಟಕಷ್ಟೇ ಅನ್ನೋ ಮನೋಭಾವ ಇತ್ತು.. ಆದ್ರೆ ಇದೀಗ ಹಳೆ ಕಾಲಕ್ಕೆ ಗುಡ್ ಬೈ ಹೇಳಿ, ಹೊಸ ಟ್ರೆಂಡ್‍ಗೆ ಜೈ ಎನ್ನಲಾಗ್ತಿದೆ.. ಜನ್ರ ಟೆಸ್ಟ್‍ಗೆ ತಕ್ಕಂತೆ ಖಾದಿಯಲ್ಲೂ ಉಡುಪುಗಳು ಬರುತ್ತಿದೆ. ಹಾಗಾಗಿ ಹೆಚ್ಚು ಇಷ್ಟವಾಗುತ್ತೆ ಅಂತಾರೆ ಭವ್ಯ.. ಬೇಸಿಗೆ ಕಾಲಕ್ಕೆ ಹೇಳಿ ಮಾಡಿಸಿದಂತೆ ಇದೆ. ಇನ್ನು ಮೊದಲೇ ಖಾದಿ ಬಟ್ಟೆಗಳಿಗೆ ಬೆಲೆ ಜಾಸ್ತಿ. ಆದ್ರೂ ಆರೋಗ್ಯದ ದೃಷ್ಟಿಯಿಂದ ಇದು ಹಿತಕರವಾಗಿರುತ್ತೆ ಅಂತಾರೆ ಅವ್ರು..

image


ಲಾಭದತ್ತ ಮುನ್ನಡೆಯುತ್ತಿರುವ ಖಾದಿ ಭಂಡಾರ..?

ಇಷ್ಟುದಿನ ಖಾದಿ ಭಂಡಾರ ಸರಿಯಾದ ಉತ್ಪಾದನೆ ಇಲ್ಲದೇ ನಷ್ಟದಲ್ಲಿಯಿತ್ತು. ಇದಕ್ಕೆ ಕಾರಣ ಹಳೆ ಕಾಲದ ಟ್ರೆಂಡ್ ಇದ್ದ ಕಾರಣ ಜನ್ರು ಹೆಚ್ಚು ಆಕರ್ಷಿತರಾಗುತ್ತಿರಲಿಲ್ಲ.. ಈ ನಿಟ್ಟಿನಲ್ಲಿ ಜನಕ್ಕೆ ಇಷ್ಟವಾಗುವಂತೆ ಹೊಸ ಶೈಲಿಯಲ್ಲಿ ತರಲಾಗಿದೆ ಅಂತಾರೆ ಖಾದಿ ಮಂಡಳಿ ಸದಸ್ಯ. ಹೀಗಾಗಿ ಈ ಖಾದಿ ಬಟ್ಟೆಗಳಿಗೆ ಬೇಡಿಕೆ ಶುರುವಾಗಿದೆ.. ಲಾಭದತ್ತ ಮುನ್ನೆಡೆಯುತ್ತಿದೆ.. ಕಳೆದ ವರ್ಷದಿಂದ ಜನ್ರು ಖಾದಿ ಬಟ್ಟೆಗಳತ್ತ ಹೆಚ್ಚು ಆಕರ್ಷಿತ್ತಾರಾಗುತ್ತಿದ್ದಾರೆ.

ಖಾದಿ ಉಡುಪುಗಳು ಹೊಸ ಹವಾ ಕ್ರಿಯೇಟ್ ಮಾಡಿದೆ.. ಚಳಿಗಾಲದಲ್ಲಿ ಬೆಚ್ಚಗೆ ಇಡುವ..ಬೇಸಿಗೆಯಲ್ಲಿ ತಂಪಾಗಿಸುವ ಖಾದಿ ವಸ್ತ್ರವನ್ನು ಬಹುತೇಕ ಮಂದಿ ಇಷ್ಟಪಡುತ್ತಿದ್ದಾರೆ. ಕಳೆದ ಬಾರಿಗೆ ಹೋಲಿಸಿದ್ರೆ ಈ ಬಾರಿ ದುಪ್ಪಟ್ಟು ಬಿಸಿಲ ಧಗೆ ಹೆಚ್ಚಾಗಿರುವುದರಿಂದ ಖಾದಿ ವಸ್ತ್ರಕ್ಕೆ ಬೇಡಿಕೆ ಹೆಚ್ಚಾಗಿದೆ. ಜೊತೆಗೆ ಮಾರಾಟ ಕೂಡ ಭರ್ಜರಿಯಾಗಿ ನಡ್ತಿದೆ.. ಒಟ್ಟಾರೆ ಒಂದೇ ವರ್ಗಕ್ಕೆಂದು ಸೀಮಿತವಾಗಿದ್ದ ಖಾದಿ. ಈಗ ಎಲ್ಲ ವರ್ಗದವರಿಗಾಗಿ ಎನ್ನುವಂತಾಗಿದೆ. 

ಇದನ್ನು ಓದಿ

1. ಬರದ ನಾಡು ಶಿರಾದಲ್ಲಿ ಪಾಯ ತೋಡಿದರೂ ನೀರು!

2. ನಿಮ್ಮ ಬ್ಯುಟಿಫುಲ್ ಲುಕ್ ಗಾಗಿ ಡೆಸ್ರಿಂಗ್ ಸೆನ್ಸ್ ಹೀಗಿದ್ದರೆ ಚೆನ್ನ.. !

3. ಏನಾದರು ದಾಖಲೆ ಮಾಡಬೇಕು... ಜಗತ್ತೇ ತಿರುಗಿ ನೋಡಬೇಕು..!