ಮದುವೆ ಫೋಟೋಗ್ರಫಿ ಎಂದರೆ ನೆನಪಾಗೋದೇ ಮೊನಿಷಾ ಅಜ್​ಗಾಂವ್ಕರ್

ಟೀಮ್​ ವೈ.ಎಸ್​​.

ಮದುವೆ ಫೋಟೋಗ್ರಫಿ ಎಂದರೆ ನೆನಪಾಗೋದೇ ಮೊನಿಷಾ ಅಜ್​ಗಾಂವ್ಕರ್

Sunday November 08, 2015,

3 min Read

“ನಾನು ಕಾಲೇಜಿನಲ್ಲಿದ್ದಾಗ ನನ್ನ ಬಳಿ ನೋಕಿಯಾ 6600 ಫೋನ್ ಇತ್ತು. ಅದರ ಕ್ಯಾಮೆರಾ ಮೂಲಕ ಫೋಟೋ ತೆಗೆಯುವುದು ನನ್ನ ಹವ್ಯಾಸವಾಗಿತ್ತು. ಇದಾದ ಬಳಿಕ ನಾನು ಫೋಟೋಗ್ರಫಿ ಬಗ್ಗೆ ಹೆಚ್ಚು ಕಲಿತುಕೊಳ್ಳಲು ಜೆಜೆ ಕಾಲೇಜು ಸೇರಿಕೊಂಡೆ,” ಎನ್ನುತ್ತಾರೆ ಮೊನಿಷಾ ಅಜ್​ಗಾಂವ್​ಕರ್. ಇವು ದಿ ಫೋಟೋ ಡೈರಿಯ ಸಂಸ್ಥಾಪಕರು ಮತ್ತು ನಿರ್ದೇಶಕರ ಮೊದಲ ಮಾತು. ಮೊನಿಷಾ ಅವರು ಮುಂಬೈ ಮೂಲದ ಛಾಯಾಚಿತ್ರಗ್ರಾಹಕರು. ಫೋಟೋಗ್ರಫಿಯ ಎಲ್ಲಾ ವಿಭಾಗಗಳಲ್ಲೂ ಅವರು ಪರಿಣತಿ ಪಡೆದಿದ್ದಾರೆ.

ಜೆಜೆ ಕಾಲೇಜಿನಲ್ಲಿ ಫೋಟೋಗ್ರಫಿ ಅರೆ ಕಾಲಿಕ ವಿಷಯವಾಗಿದ್ದರಿಂದ ಹೆಚ್ಚು ಕಲಿಯಲಾಗಲಿಲ್ಲ ಎನ್ನುತ್ತಾರೆ ಮೋನಿಷಾ.

image


“ಶಾಲೆಗಳು ಮತ್ತು ಕಾಲೇಜುಗಳು ಕಲಿಯುವ ಶ್ರೇಷ್ಠ ಮಾಧ್ಯಮಗಳಾಗಿವೆ. ಆದರೆ, ಕೆಲವು ಪ್ರಾಕ್ಟಿಕಲ್ ಅನುಭವಗಳು ನಮ್ಮನ್ನು ಹೆಚ್ಚು ವೃತ್ತಿಪರರನ್ನಾಗಿ ಬೆಳೆಸುತ್ತವೆ. ನೀವು ಯಾವುದೇ ಕೆಲಸ ಆರಂಭಿಸುವಾಗ, ನಿಮಗೆ ಅದರ ಬಗ್ಗೆ ಸ್ವಲ್ಪ ಮಾಹಿತಿಯಷ್ಟೇ ಇರುತ್ತದೆ. ನಿಮಗೆ ಬೇಕಾಗುವ ಕೌಶಲ್ಯಗಳು, ಬೇಕಾಗುವ ಜನರು, ಸಂಪರ್ಕ ಎಲ್ಲವೂ ನೀವು ಕೆಲಸಕ್ಕೆ ಇಳಿದ ಬಳಿಕವಷ್ಟೇ ಸಿಗುತ್ತವೆ. ನಾನು ನನ್ನ ಕೆಲಸವನ್ನು ಪ್ರತಿನಿತ್ಯವೂ ಕಲಿಯುತ್ತಿದ್ದೇನೆ.” ಎನ್ನುತ್ತಾರೆ ಮೊನಿಷಾ. ಹೊಸ ಆ್ಯಂಗಲ್ ಮತ್ತು ಭಿನ್ನ ಲೈಟಿಂಗ್​​ನಿಂದ ಮತ್ತಷ್ಟು ಒಳ್ಳೆಯ ಫೋಟೋ ತೆಗೆಯಬಹುದಿತ್ತು ಎಂದು ಪ್ರತಿದಿನವೂ ವಿಮರ್ಷೆ ಮಾಡಿಕೊಳ್ಳುತ್ತಾರೆ.

ಶೂಟಿಂಗ್ ಮಾಡುವುದಾಗಲೀ, ಫೋಟೋ ತೆಗೆಯುವುದಾಗಲೀ ಅವರಿಗೆ ಯಾವುದೇ ವ್ಯತ್ಯಾಸವಿಲ್ಲ. ಅವರು ಬ್ಲೂ ಫ್ರಾಗ್ ಕಾರ್ಯಕ್ರಮವನ್ನೇ ಮೊದಲು ಚಿತ್ರೀಕರಿಸಿದ್ದು. ಸಂಗೀತವು ನನ್ನಲ್ಲಿರುವ ಉತ್ಸಾಹವನ್ನು ಇಮ್ಮಡಿಗೊಳಿಸುತ್ತದೆ ಎನ್ನುತ್ತಾರೆ ಮೊನಿಷಾ.

ಮಾಹಿಂನ ಡಿಜೆ ರುಪಾರೆಲ್ ಕಾಲೇಜಿನಲ್ಲಿ ಮನಶಾಸ್ತ್ರ ವಿಭಾಗದಲ್ಲಿ ಪದವಿ ಪಡೆಯುತ್ತಿದ್ದಾಗ ಆಕಸ್ಮಾತ್ತಾಗಿ ಫೋಟೋಗ್ರಫಿಯತ್ತ ಮನಸ್ಸು ಹೊರಳಿಸಿದ್ದರು. ಆಗ ಅವರಿಗೆ ಮನಶಾಸ್ತ್ರದ ಮೇಲೆ ಆಸಕ್ತಿ ಕಡಿಮೆಯಾಯಿತು. ಕೊನೆಗೆ ಅದನ್ನು ಪೂರ್ಣಗೊಳಿಸದೆ ಅರ್ಧಕ್ಕೆ ಕೈಬಿಟ್ಟರು. ಒಂದಿಡೀ ವರ್ಷವನ್ನು ಮನೆಯಲ್ಲೇ ಕೆಲಸವಿಲ್ಲದೆ ಕಳೆದರು. ಆದರೆ ಬದುಕಿನ ಪರ್ಯಾಯ ದಾರಿಗಳತ್ತ ಯೋಚನೆ ಮಾಡುತ್ತಿದ್ದರು. ಹೀಗೆ ಫೋಟೋಗ್ರಫಿಯತ್ತ ಮೊನಿಷಾ ವಾಲಿದರು.

“ನನಗೆ ಆ ಹುಡುಗಿಯ ಬಗ್ಗೆ ಆಸಕ್ತಿ ಇತ್ತು. ಆಕೆ ಸಂಗೀತ ಕಾರ್ಯಕ್ರಮಗಳಿಗೆ ಹೋಗುತ್ತಿದ್ದರು. ಅವರನ್ನು ಓಲೈಸಿಕೊಳ್ಳಲು, ನಾನು ನನ್ನ ಕ್ಯಾಮೆರಾ ಜೊತೆ ಕಾರ್ಯಕ್ರಮಗಳಿಗೆ ಹೋಗುತ್ತಿದ್ದೆ. ಆಗ ನನಗೆ ಫೋಟೋಗ್ರಫಿಯೇ ಮುಖ್ಯ ಎನ್ನಿಸಿತು. ಆ ಬಳಿಕ ನಾನು ರೋಲಿಂಗ್ ಸ್ಟೋನ್ಸ್, ಪೇಜ್ -3 ಪಾರ್ಟಿಗಳನ್ನು ಸೆರೆಹಿಡಿಯಲು ಆರಂಭಿಸಿದೆ, ನನ್ನ ಗೆಳೆಯ/ಗೆಳತಿಯರ ಮದುವೆಗಳಲ್ಲಿ ಫೋಟೋಗ್ರಫಿ ಮಾಡುತ್ತಾ ವೆಡ್ಡಿಂಗ್ ಫೋಟೋಗ್ರಫಿ ಕಲಿತುಕೊಂಡೆ. ಕ್ಯಾಥೋಲಿಕ್ ಗೆಳೆಯರ ಮದುವೆಗೆ ಆಲ್ಬಂ ಮಾಡಿದ ಬಳಿಕ ದಿ ಫೋಟೋ ಡೈರಿ ಶುರುವಾಯಿತು” ಎಂದು ವಿವರಿಸುತ್ತಾರೆ ಮೋನಿಷಾ.

ಸಂಗೀತದ ಬಗ್ಗೆ ಅಪಾರ ಆಸಕ್ತಿ ಹೊಂದಿರುವ ಮೊನಿಷಾ, ಸಂಗೀತ ಕಾರ್ಯಕ್ರಮಗಳಲ್ಲಿ ಚಿತ್ರೀಕರಣ ಮಾಡುತ್ತಾರೆ. ಹೀಗಾಗಿ ಪ್ರತಿದಿನವೂ ಹೊಸ ಹೊಸ ಕಲಾವಿದರ ಪರಿಚಯವಾಗುತ್ತಿದೆ. ಸಂಗೀತದ ಬಗ್ಗೆ ಅವರ ಅನುಭವಗಳ ದರ್ಶನವಾಗುತ್ತಿದೆ. ಮೋನಿಷಾಗೆ ಫೋಟೋಗ್ರಫಿ ಹೊಸ ಔನ್ನತ್ಯವನ್ನು ಕೊಟ್ಟಿದೆ.

image


ಹಲವು ಕಾರ್ಯಕ್ರಮಗಳನ್ನು ಚಿತ್ರೀಕರಿಸಿದ್ದರೂ ಎನ್​ಹೆಚ್7 ಇವರ ಅಚ್ಚುಮೆಚ್ಚಿನ ಚಿತ್ರೀಕರಣವಾಗಿತ್ತು. ಇತ್ತೀಚೆಗಷ್ಟೇ ದೆಹಲಿಯಲ್ಲಿ ಟೆನ್ ಹೆಡ್ಸ್ ಫೆಸ್ಟಿವಲ್ ಚಿತ್ರೀಕರಿಸಿದ್ದರು.

ಕಲಿಕೆಯ ಹಾದಿ

ಒಬ್ಬ ಫೋಟೋಗ್ರಾಫರ್ ಆಗಿ, ಮೊನಿಷಾ ಯಾವುದೇ ವಿಷಯವನ್ನು ಅನುಭವಿಸಿಯೇ ಫೋಟೋ ತೆಗೆದಾಗ ಮಾತ್ರ ಅತ್ಯುತ್ತಮವಾದ್ದು ಸೆರೆಯಾಗುತ್ತದೆ ಎಂಬುದನ್ನು ಕಲಿತುಕೊಂಡಿದ್ದಾರೆ. ಫೋಟೋ ತೆಗೆಯುವ ಸಂದರ್ಭದಲ್ಲಿ ನೀವು ಅದರಲ್ಲೇ ಪೂರ್ತಿಯಾಗಿ ಮುಳುಗಬೇಕು ಎನ್ನುತ್ತಾರೆ ಅವರು. ಮುಖ್ಯವಾಗಿ ಟ್ರೆಂಡ್​​ಗಳು ಆಗಿಂದಾಗ್ಗೆ ಬದಲಾಗುತ್ತಿರುತ್ತವೆ. ಹೀಗಾಗಿ ನೀವು ಪ್ರತಿಕ್ಷಣವೂ ಕಲಿಯುತ್ತಲೇ ಇರಬೇಕು ಎನ್ನುತ್ತಾರೆ ಮೋನಿಷಾ.

“ಮುಖ್ಯವಾಗಿ ಮದುವೆಗಳಲ್ಲಿ, ಜನರು ಕೆಲವು ಸಂದರ್ಭಗಳು ತಮ್ಮ ಜೀವನದಲ್ಲಿ ಅತ್ಯಮೂಲ್ಯವಾಗಿರಲಿವೆ ಎಂಬುದನ್ನು ಗಣನೆಗೆ ತೆಗೆದುಕೊಂಡಿರುವುದಿಲ್ಲ. ಹೀಗಾಗಿ, ನಾನು ಈ ಬಗ್ಗೆ ಹೆಚ್ಚು ಜವಬ್ದಾರಿಯಿಂದ ಇರುತ್ತೇನೆ. ಅವರ ಅಮೂಲ್ಯ ಕ್ಷಣಗಳನ್ನು ಫೋಟೋ ಮೂಲಕ ಜೀವನ ಪರ್ಯಂತ ಕಾಪಾಡಲು ನೆರವಾಗುತ್ತೇನೆ,” ಎನ್ನುತ್ತಾರೆ ಮೊನಿಷಾ.

image


ಅದೇ ರೀತಿ ಅಮಿತಾಬ್ ಬಚ್ಚನ್ ಜೊತೆ ವಾಝಿರ್ ಚಿತ್ರದ ಚಿತ್ರೀಕರಣ ನಡೆಸಿದ ಅನುಭವವನ್ನೂ ಅವರು ಹಂಚಿಕೊಳ್ಳುತ್ತಾರೆ. “ಇದು ಅತ್ಯುತ್ಕೃಷ್ಟ ಅನುಭವ. ದಂತಕತೆಯೊಬ್ಬರನ್ನು ಚಿತ್ರಿಸುವುದೆಂದರೆ ಅದು ಜೀವಮಾನದ ಅನುಭವ. ಯಾವುದೇ ಕ್ಷೇತ್ರದಲ್ಲಾಗಲೀ, ಪ್ರತಿಯೊಬ್ಬ ವ್ಯಕ್ತಿಯ ಅನುಭವವೇ ಅವರನ್ನು ಪರ್ಫೆಕ್ಟ್ ಮನುಷ್ಯನನ್ನಾಗಿಸುತ್ತದೆ ಎಂಬುದನ್ನು ನಾನು ಬಿಗ್ ಬಿಯವರಿಂದ ಕಲಿತೆ,” ಎನ್ನುತ್ತಾರೆ ಮೋನಿಷಾ.

ಫೋಟೋ ಡೈರಿಯ ವಿಸ್ತರಣೆ ಯೋಜನೆಗಳು

ಮೋನಿಷಾ ಅವರು ಮದುವೆ, ಸಂಗೀತ ಕಾರ್ಯಕ್ರಮ ಮತ್ತು ಫ್ಯಾಷನ್ ಫೋಟೋಗ್ರಫಿಯಲ್ಲಿ ಪರಿಣತರು. ದಿ ಫೋಟೋ ಡೈರಿಯು ಮದುವೆ ಫೋಟೋಗ್ರಫಿಗೆ ಸಂಬಂಧಿಸಿದ ಒನ್ ಸ್ಟಾಪ್ ಮಳಿಗೆಯಾಗಿದೆ. ಮದುವೆ ಪೂರ್ವ ಚಿತ್ರೀಕರಣ, ಮೂವಿ, ವೆಡ್ಡಿಂಗ್ ಮೂವಿ ಮತ್ತು ವೆಡ್ಡಿಂಗ್ ಫೋಟೋಗ್ರಫಿ ಸೇರಿದಂತೆ ಹಲವು ವಿಭಾಗಗಳಲ್ಲಿ ಇವರು ವೈವಿಧ್ಯಮಯ ಕೈಚಳಕ ಹೊಂದಿದ್ದಾರೆ. ಮತ್ತಷ್ಟು ಮದುವೆ ಫೋಟೋಗ್ರಫಿ ಮಾಡಲು ಅವರು ಉತ್ಸುಕರಾಗಿದ್ದಾರೆ. ಈ ಕ್ಷೇತ್ರದಲ್ಲಿ ಕ್ರಿಯೇಟಿವಿಟಿಗೆ ಬಹುದೊಡ್ಡ ಉತ್ತೇಜನವಿದೆ ಎನ್ನುತ್ತಾರೆ ಮೋನಿಷಾ.

ತಮ್ಮ ಉದ್ಯಮವನ್ನು ವಿಸ್ತರಿಸಲು ಹೊಸ ಹೊಸ ಅವಕಾಶಗಳನ್ನು, ಹೊಸಹೊಸ ಮಾರುಕಟ್ಟೆಗಳನ್ನೂ ಮೋನಿಷಾ ಹುಡುಕುತ್ತಿದ್ದಾರೆ. ಅಮೆರಿಕಾ ಅಥವಾ ಕೆನಡಾದಲ್ಲಿ ಮುಂದಿನ ವರ್ಷ ದಿ ಫೋಟೋ ಡೈರಿಯ ಕೇಂದ್ರಗಳನ್ನು ಸ್ಥಾಪಿಸಲು ಯೋಚನೆ ನಡೆದಿದ್ದು, ಮೋನಿಷಾ ಅಂತಾರಾಷ್ಟ್ರೀಯ ಛಾಯಾಗ್ರಾಹಕರಾಗುವ ಸಿದ್ಧತೆಯಲ್ಲಿದ್ದಾರೆ.