250 ಮಿಲಿಯನ್ ಮಕ್ಕಳು, 250 ಮಿಲಿಯನ್ ಶಾಲೆಗಳು-ಇದು ಭಾರತದಲ್ಲಿ ಭವಿಷ್ಯದ ಶಿಕ್ಷಣ

ಟೀಮ್​ ವೈ.ಎಸ್​. ಕನ್ನಡ

250 ಮಿಲಿಯನ್ ಮಕ್ಕಳು, 250 ಮಿಲಿಯನ್ ಶಾಲೆಗಳು-ಇದು ಭಾರತದಲ್ಲಿ ಭವಿಷ್ಯದ ಶಿಕ್ಷಣ

Thursday January 14, 2016,

4 min Read

20ನೇ ಶತಮಾನದ ಮಹಾನ್ ವಾಸ್ತುಶಿಲ್ಪಿ, ಸಾಹಿತಿ ರಿಚರ್ಡ್ ಬಕ್‍ಮಿನಿಸ್ಟರ್ ಫುಲ್ಲರ್, 1961ರ ಏಪ್ರಿಲ್‍ನಲ್ಲಿ, ಅಮೆರಿಕದ ಮಿಡ್‍ವೆಸ್ಟ್​​ನಲ್ಲಿ ಕಾರ್ಯಕ್ರಮವೊಂದನ್ನು ಉದ್ದೇಶಿಸಿ ಭಾಷಣ ಮಾಡಿದ್ರು. `ಎಜುಕೇಷನ್ ಆಟೋಮೇಷನ್: ಫ್ರೀಯಿಂಗ್ ದಿ ಸ್ಕಾಲರ್ ಟು ರಿಟರ್ನ್ ಟು ಹಿಸ್ ಸ್ಟಡೀಸ್' ಎಂಬ ವಿಷಯದ ಮೇಲೆ ಮಾತನಾಡಿದ್ರು. ಈ ಉಪನ್ಯಾಸ ಭವಿಷ್ಯದ ಶಿಕ್ಷಣದ ಮೂಲ ಪ್ರತಿಪಾದನೆಗಳಲ್ಲಿ ಒಂದಾಗಿತ್ತು. ಅವರ ಉಪನ್ಯಾಸದ ಕೆಲ ಸಾಲುಗಳು ಇಲ್ಲಿವೆ.

``ಪ್ರತಿಯೊಬ್ಬರು ಸ್ವಯಂ ಪ್ರೇರಿತವಾಗಿ ತಮ್ಮಲ್ಲಿ ತಾವು ಶಿಸ್ತು ಅಳವಡಿಸಿಕೊಳ್ಳುವುದೇ ಶಿಕ್ಷಣ. ಪ್ರತಿಯೊಬ್ಬರಲ್ಲೂ ಅವರದ್ದೇ ಆದ ಪ್ರತ್ಯೇಕ ವರ್ಣತಂತುಗಳಿರುತ್ತವೆ. ಪ್ರತ್ಯೇಕ ಮಾದರಿಯನ್ನು ಹೊಂದಿರುತ್ತಾರೆ. ಇಬ್ಬರು ವ್ಯಕ್ತಿಗಳು ಒಂದೇ ಸಮಯದಲ್ಲಿ ಅದೇ ಹಸಿವನ್ನು ಹೊಂದಿರುವುದು ಅಸಾಧ್ಯ. ಅದ್ಯಾಕೆ ಅನ್ನೋದಕ್ಕೆ ಕಾರಣಗಳಿಲ್ಲ. ವೆನೆಜುವೆಲಾದಲ್ಲಿ ಕ್ರಾಂತಿಯಂತಹ ಸುದ್ದಿ ಇಲ್ಲದೇ ಇದ್ರೆ, ಒಂದೇ ವೇಳೆಗೆ ಎಲ್ಲರಿಗೂ ಅದರ ಬಗ್ಗೆ ಆಸಕ್ತಿ ಮೂಡುವುದು ಸಾಧ್ಯವಿಲ್ಲ. ನಮ್ಮದೇ ಆದ ಸಮಯದಲ್ಲಿ ವೆನೆಜುವೆಲಾದ ಭೌಗೋಳಿಕತೆಯ ಬಗ್ಗೆ ನಾವೆಲ್ಲರೂ ಆಸಕ್ತಿ ತೋರಿಸುತ್ತೇವೆ, ಆದ್ರೆ ಎಲ್ಲರೂ ಒಂದೇ ಸಮಯದಲ್ಲಲ್ಲ. ಅದರಂತೆ ಏಕಕಾಲಿಕ ಪಠ್ಯಕ್ರಮ ಹಳತಾಗಿ ಹೋಗಿರುತ್ತದೆ. ನಾವು 2 ರೀತಿಯಲ್ಲಿ ಎಲ್ಲಾ ಮಾಹಿತಿ ಕೂಡಲೇ ದೊರೆಯುವಂತೆ ಮಾಡಬೇಕು''

ಭೂಮಿತಿ ರೇಖೆಯ ಗುಮ್ಮಟದ ಹಿಂದಿರುವ ವ್ಯಕ್ತಿ ಫುಲ್ಲರ್ ಎಂದೇ ನಾವೆಲ್ಲ ನೆನಪಿಸಿಕೊಳ್ಳುತ್ತೇವೆ. ಇದೇ ಕಾರಣಕ್ಕೆ ಅವರು ಫುಲ್ಲೇರಿನ್ನಂತಿರುವ ಇಂಗಾಲದ ಕಣದಲ್ಲಿ ಅಜರಾಮರರಾಗಿ ಉಳಿದಿದ್ದಾರೆ. ಶಿಕ್ಷಣದ ಬಗ್ಗೆ ಒಳನೋಟವುಳ್ಳ ಚಿಂತಕರೆಂದು ಕೂಡ ಅವರನ್ನು ಕರೆಯಲಾಗುತ್ತದೆ. 50 ವರ್ಷಗಳಿಂದ ನಾವು ಅವರ ಭಾಷಣದ ಸಾರದ ಹಾದಿಯಲ್ಲೇ ನಡೆದು ಬಂದಿದ್ದೇವೆ. ಭಾರತದ ಮಿಲಿಯನ್‍ಗಟ್ಟಲೆ ವಿದ್ಯಾರ್ಥಿಗಳಿಗಾಗಿ ಫುಲ್ಲರ್ ಅವರ ವರ್ಣತಂತುವಿನ ವೈಯಕ್ತಿಕ ಶಿಕ್ಷಣದ ಕನಸನ್ನು ನನಸಾಗಿಸುವ ಪ್ರಯತ್ನ ನಡೆಯುತ್ತಲೇ ಇದೆ.

image


ಸಂದರ್ಭಕ್ಕೆ ತಕ್ಕಂತೆ ಹೊಂದಾಣಿಕೆ

ಭಾರತದಲ್ಲಿ ಸುಮಾರು 250 ಮಿಲಿಯನ್ ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ. ಜಗತ್ತಿನಲ್ಲಿ ಅತಿ ಹೆಚ್ಚು ನೋಂದಣಿ ಹೊಂದಿರುವ ರಾಷ್ಟ್ರ ನಮ್ಮದು. ಭಾರತದ 1.5 ಮಿಲಿಯನ್ ಶಾಲೆಗಳು ಅಂದ್ರೆ ಶೇ.25ರಷ್ಟು ಖಾಸಗಿ ಒಡೆತನದಲ್ಲಿದೆ. ಆದ್ರೆ ಅವುಗಳಲ್ಲಿ ಮಕ್ಕಳ ನೋಂದಣಿ ಪ್ರಮಾಣ ಶೇ.40ರಷ್ಟು ಮಾತ್ರವಿದೆ. ಆದ್ರೂ ಭಾರತದಲ್ಲಿ ಶಿಕ್ಷಣ ವ್ಯವಸ್ಥೆ ನಿರೀಕ್ಷಿತ ಪ್ರಮಾಣದಲ್ಲಿ ಸುಧಾರಿಸಿಲ್ಲ. ಶಿಕ್ಷಣ ಹಕ್ಕು ಕಾಯ್ದೆ ಮೂಲಕ ಸರ್ಕಾರ ಕೂಡ ಸುಶಿಕ್ಷಿತ ಭಾರತ ನಿರ್ಮಾಣಕ್ಕೆ ಕಸರತ್ತು ಮಾಡುತ್ತಿದೆ.

ಡಿಸ್‍ಕನೆಕ್ಟ್ ಆಗಿರುವ ಗೇರ್‍ಗಳು...

ಖಾಸಗಿ ವಲಯದಲ್ಲಾಗಿರಲಿ ಅಥವಾ ಸರ್ಕಾರಿ ಶಾಲೆಗಳಲ್ಲಾಗ್ಲಿ ಸದ್ಯ ಭಾರತದ ಶೈಕ್ಷಣಿಕ ವ್ಯವಸ್ಥೆ ಸಂಪರ್ಕವನ್ನೇ ಕಡಿದುಕೊಂಡ ಗೇರ್‍ಗಳಂತಾಗಿದೆ.

*ಪಠ್ಯಪುಸ್ತಕಗಳು ತರಗತಿಯ ಸತ್ಯಗಳಿಂದ ಹೊರತಾಗಿವೆ. ವಿಷಯಗಳು ಹೆಚ್ಚು ಸಕಾಲಿಕ ಮತ್ತು ಸಾಂದರ್ಭಿಕವಾಗಿಲ್ಲ.

*ಶಿಕ್ಷಣ ಶಾಸ್ತ್ರ ಮತ್ತು ಶಿಕ್ಷಕ ಸುಧಾರಣೆ ಉಪಕ್ರಮಗಳೆರಡೂ ಬೋಧಕರ ಬೋಧನಾ ಸಾಮಥ್ರ್ಯಕ್ಕೆ ಅನುಗುಣವಾಗಿಲ್ಲ ಮತ್ತು ಮಕ್ಕಳ ಕಲಿಕಾ ಸಾಮಥ್ರ್ಯಕ್ಕೆ ತಕ್ಕಂತಿಲ್ಲ.

image


*ಬಹುತೇಕ ಸ್ಮಾರ್ಟ್-ಕ್ಲಾಸ್ ತಂತ್ರಜ್ಞಾನಗಳು ಮಾರ್ಕೆಟಿಂಗ್ ಅಸ್ತ್ರಗಳಂತೆ ಕೆಲಸ ಮಾಡಿವೆಯೇ ಹೊರತು ಮಕ್ಕಳ ಕಲಿಕಾ ಸಾಮಥ್ರ್ಯವನ್ನು ಸುಧಾರಿಸಿಲ್ಲ.

*ತರಗತಿ ನಂತರದ ಚಟುವಟಿಕೆಗಳು ಹಾಗೂ ಟ್ಯೂಷನ್ ಅನ್ನು ಶಿಕ್ಷಣಕ್ಕೆ ಪೂರಕವಾದುವೆಂದು ಪರಿಗಣಿಸಲಾಗಿತ್ತು. ಈಗ ಅವು ಶಾಲಾ ವ್ಯವಸ್ಥೆಗೆ ಸಮಾನಾಂತರವಾಗಿ ಬದಲಾಗಿವೆ. ಎಲ್ಲ ವಿದ್ಯಾರ್ಥಿಗಳು ಓದಿನಲ್ಲಿ ಮುಂದಿರಬೇಕು ಎಂಬುದನ್ನು ಖಾತರಿಪಡಿಸಲು ಬಹುತೇಕ ಶಾಲೆಗಳು ವಿಫಲವಾಗಿವೆ.

ಇವೆಲ್ಲದರ ಪರಿಣಾಮ ವಿದ್ಯಾರ್ಥಿಗಳಿಗೆ ಉಸಿರುಗಟ್ಟಿಸುವಂತಹ ಅನುಭವ ಮೂಡಿಸುತ್ತಿದೆ ಮತ್ತು ಕಳಪೆ ಕಲಿಕಾ ಫಲಿತಾಂಶಗಳಿಗೆ ಕಾರಣವಾಗುತ್ತಿದೆ. ಕಲಿಕೆಯ ನಕಲು ಹಾಗೂ ತಂತ್ರಜ್ಞಾನದ ಮೇಲಿನ ಹೂಡಿಕೆಯಿಂದ ಹಣ ವ್ಯರ್ಥವಾಗಿ ಪೋಲಾಗುತ್ತಿದೆ. ಜೊತೆಗೆ ಪ್ರತಿಯೊಬ್ಬ ವಿದ್ಯಾರ್ಥಿ ಹೇಗೆ ಕಲಿಯುತ್ತಿದ್ದಾನೆ ಎಂಬುದರ ಬಗ್ಗೆ ಗಮನವಿಡಲು ಸಾಧ್ಯವಾಗುತ್ತಿಲ್ಲ. ಇರುವ ಜ್ಞಾನವನ್ನು ಬಳಸಿಕೊಂಡು ಡಿಸ್‍ಕನೆಕ್ಟ್ ಆಗಿರುವ ಗೇರ್‍ಗಳನ್ನು ಸರಿಪಡಿಸುವ ಕಾರ್ಯ ಆಗುತ್ತಿಲ್ಲ.

ಒಗ್ಗೂಡಿಸುವಿಕೆ...

ಮೌಲ್ಯಮಾಪನ ಔಪಚಾರಿಕ ಶಿಕ್ಷಣದ ಕೇಂದ್ರಬಿಂದು ಎನಿಸಿಕೊಂಡಿದೆ. ವಸ್ತುನಿಷ್ಠವಾಗಿ ವಿದ್ಯಾರ್ಥಿಗಳ ಕಲಿಕೆಯ ಅಂತರ ಮತ್ತು ಬೋಧಕರ ಸಾಮಥ್ರ್ಯವನ್ನು ಅರ್ಥಮಾಡಿಕೊಳ್ಳಲು ಅವುಗಳನ್ನು ಬಳಸುವ ಸಂದರ್ಭಲ್ಲಿ ಅತ್ಯಲ್ಪ ಹೊಸತನವನ್ನು ತರಲಾಗುತ್ತಿದೆ. ಶಾಲೆಗಳಲ್ಲಿ ಮೂಲಸೌಕರ್ಯ ಮತ್ತು ವಿಷಯ ವಸ್ತುಗಳನ್ನು ಸರಿಯಾಗಿ ಪ್ರಸ್ತುತಪಡಿಸಲು ಪರೀಕ್ಷೆಗಳಲ್ಲಿ ಹೊಸತನ ತರಬೇಕಿದೆ. ಪ್ರತಿ ಮಗುವಿನ ಕಲಿಕೆಯ ಬಗ್ಗೆ ಪ್ರತ್ಯೇಕ ಅಂಕಿ ಅಂಶಗಳನ್ನು ಸಿದ್ಧಪಡಿಸಬೇಕು. ಇದೇ ದೃಷ್ಟಿಕೋನವನ್ನಿಟ್ಟುಕೊಂಡು 2013ರಲ್ಲಿ ನವೀನ್ ಮಂಡಾವ ಹಾಗೂ ವರುಣ್ ಕುಮಾರ್ `ಎಕ್ಸಾಮ್‍ಚೆಕ್' ಅನ್ನು ಆರಂಭಿಸಿದ್ದಾರೆ. ಸಂಪೂರ್ಣ ಡಿಜಿಟಲ್‍ಮಯವಾಗಿರುವ ಕಲಿಕಾ ಪರಿಸರದಲ್ಲಿ ತಂತ್ರಜ್ಞಾನ ವೇದಿಕೆ ಘಾತಕ ಪ್ರಮಾಣವನ್ನು ಸಾಧಿಸಬಲ್ಲದು ಎಂಬ ವಿಶ್ವಾಸ ಅವರಿಗಿತ್ತು. ಡಿಜಿಟಲ್ ಜಗತ್ತು ಹಾಗೂ ಪೆನ್-ಪೇಪರ್, ಪುಸ್ತಕವನ್ನೊಳಗೊಂದ ಆಫ್‍ಲೈನ್ ವ್ಯವಸ್ಥೆಗೂ ಹೊಂದಿಕೆಯಾಗುವಂತಹ ಉದ್ಯಮ ಮಾದರಿಯನ್ನು ತಯಾರಿಸುವುದು ಅವರಿಗೆ ಸವಾಲಾಗಿ ಪರಿಣಮಿಸಿತ್ತು. ಜಗತ್ತಿನ ಅತಿದೊಡ್ಡ ಶಾಲಾ ಪರಿಸರ ಎನಿಸಿಕೊಂಡಿರುವ ಭಾರತದಲ್ಲಿ ವಿದ್ಯಾರ್ಥಿಗಳನ್ನು ತಲುಪಲು ಆಫ್‍ಲೈನ್ ವ್ಯವಸ್ಥೆಯನ್ನೇ ನೆಚ್ಚಿಕೊಳ್ಳಬೇಕಾದಂತಹ ಪರಿಸ್ಥಿತಿ ಇದೆ. ಮುಂದಿನ 10 ವರ್ಷಗಳಲ್ಲಿ ಬಹುತೇಕ ಎಲ್ಲಾ ಶಾಲೆಗಳು ಡಿಜಿಟಲ್‍ಮಯವಾಗುವುದ ಅಸಾಧ್ಯ.

image


ಇದುವರೆಗೆ `ಎಕ್ಸಾಮ್‍ಚೆಕ್'ನ ಐಮ್ಯಾಕ್ಸ್ ವೇದಿಕೆ ಶಾಲೆಯ ಮೌಲ್ಯಮಾಪನದಿಂದ ಸಂಗ್ರಹಿಸಲಾದ ಅಂಕಿ ಅಂಶಗಳಿಂದ ಸುಮಾರು 100000ಕ್ಕೂ ಅಧಿಕ ಮಕ್ಕಳ ವೈಯಕ್ತಿಕ ವಿಷಯಗಳನ್ನು ನೀಡಿದೆ. 50,000ಕ್ಕಿಂತಲೂ ಕಡಿಮೆ ಜನಸಂಖ್ಯೆ ಇರುವ ಪ್ರದೇಶಗಳಲ್ಲಿ ಕೂಡ `ಎಕ್ಸಾಮ್‍ಚೆಕ್' ಕಾರ್ಯನಿರ್ವಹಿಸುತ್ತಿದೆ. 20 ಡಾಲರ್‍ಗಿಂತಲೂ ಕಡಿಮೆ ಶುಲ್ಕ ಪಡೆಯುವ ಶಾಲೆಗಳ ವಿದ್ಯಾರ್ಥಿಗಳಿಗೆ ಕೂಡ ನೆರವಾಗುತ್ತಿದೆ. ಖಾಸಗಿ ಕೆ-12 ಶಾಲೆಗಳ ಆಂತರಿಕ ಮೌಲ್ಯಮಾಪನದ ಮೇಲೆ `ಐಮ್ಯಾಕ್ಸ್' ನಿಯಂತ್ರಣ ಸಾಧಿಸುತ್ತದೆ. ಎಲ್ಲಾ ಪರೀಕ್ಷೆಗಳನ್ನು ವಿನ್ಯಾಸಗೊಳಿಸಿ ಮೌಲ್ಯಮಾಪನ ಮಾಡುವುದರಿಂದ ಹಿಡಿದು ವಿದ್ಯಾರ್ಥಿಗಳ ವೈಯಕ್ತಿಕ ರಿಪೋರ್ಟ್ ಕಾರ್ಡ್ ಅನ್ನು ಸಿದ್ಧಗೊಳಿಸುತ್ತದೆ. ಈ ವರದಿ ವಿದ್ಯಾರ್ಥಿಗಳ ಕಲಿಕೆಯ ಅಂತರದ ಬಗ್ಗೆ ಮಾಹಿತಿ ಒದಗಿಸುತ್ತದೆ. ವಿದ್ಯಾರ್ಥಿಗಳ ಕಲಿಕೆಯ ಬಗೆಗಿನ ಮಾಹಿತಿ ಪಡೆದು `ಐಮ್ಯಾಕ್ಸ್' ಅವರಿಗೆ ಪಠ್ಯಪುಸ್ತಕಗಳು, ವರ್ಕ್‍ಬುಕ್ಸ್ ಹಾಗೂ ಡಿಜಿಟಲ್ ಕಲಿಕೆಯ ಅಸ್ತ್ರಗಳನ್ನು ಒದಗಿಸುತ್ತದೆ. ಅವರ ಆಸಕ್ತಿಗೆ ತಕ್ಕಂತೆ ಕಲಿಕಾ ವಸ್ತುಗಳನ್ನು ಒದಗಿಸುವುದು ವಿಶೇಷ. `ಬ್ಲೂಮ್ಸ್ ಟ್ಯಾಕ್ಸೊಮೊನಿ'ಯಂತಹ ಸಂಸ್ಥೆಗಳು ವಾಡಿಕೆಯ ಶಾಲಾ ಪರೀಕ್ಷೆಗಳನ್ನು, ವಿದ್ಯಾರ್ಥಿಗಳ ಆಸಕ್ತಿ ಮತ್ತು ಸಾಮಥ್ರ್ಯದ ದತ್ತಾಂಶ ಒದಗಿಸುವ ಮಾಧ್ಯಮಗಳಾಗಿ ಬದಲಾಯಿಸುತ್ತಿವೆ. ಅದನ್ನು ಲರ್ನಿಂಗ್ ಜೆನೊಮ್ ಎಂದೇ ಕರೆಯಬಹುದು. ಇಂತಹ ಲರ್ನಿಂಗ್ ಜೆನೊಮ್, ಶಾಲೆಗಳಲ್ಲಿ ಸಂಪರ್ಕ ಕಡಿದುಕೊಂಡಿರುವ ಕಲಿಕೆಯ ಗೇರ್‍ಗಳನ್ನು ಸರಿಮಾಡಬಲ್ಲದು.

ಲರ್ನಿಂಗ್ ಜೆನೊಮ್ ಒಂದು ರೀತಿಯ ಪರಿಪೂರ್ಣ ಪ್ರಯತ್ನ. ವಿದ್ಯಾರ್ಥಿಗಳ ಕಲಿಕಾ ಅನುಭವಗಳನ್ನು ವ್ಯಾಖ್ಯಾನಿಸುವ ಸರಣಿಗಳಾದ ವಿಷಯ, ಮೌಲ್ಯಮಾಪನ, ತಂತ್ರಜ್ಞಾನ, ಶಿಕ್ಷಣ ಕಲೆ ಎಲ್ಲವನ್ನೂ ಇದು ಒಳಗೊಂಡಿದೆ. ಆರ್ಥಿಕ ಸಮಸ್ಯೆ ಮತ್ತು ಶೈಕ್ಷಣಿಕ ಸಾಮಥ್ರ್ಯಗಳ ಭಿನ್ನಾಭಿಪ್ರಾಯಗಳಿಂದಾಗಿ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗುತ್ತಿಲ್ಲ. ಕೇವಲ ಇಂಟೆಲಿಜೆಂಟ್ ರಿಪೋರ್ಟ್ ಕಾರ್ಡ್‍ಗಳ ತಯಾರಿಕೆ ಮಾಡುವುದು ಮಾತ್ರವಲ್ಲದೆ, ಲರ್ನಿಂಗ್ ಜೆನೋಮ್ ಅನ್ನು ಅರ್ಥಪೂರ್ಣ ಶಿಕ್ಷಕ ಸುಧಾರಣೆ ಉಪಕರಣ ಮತ್ತು ಶಾಲೆಯ ಬಳಿಕದ ಕಲಿಕೆಯ ಅನುಭವಗಳಿಗಾಗಿಯೂ ಬಳಸಿಕೊಳ್ಳಲಾಗುತ್ತದೆ. ವಿರುದ್ಧವಾದ ಕಲ್ಪನೆಯೊಂದಿಗೆ ಕ್ಷಿಪ್ರ ಪ್ರಮಾಣದಲ್ಲಿ ಆಳವಾದ ನಿಶ್ಚಿತಾರ್ಥದಲ್ಲಿ ತೊಡಗುವುದು ಹೇಗೆ ಎಂಬುದೇ ಪ್ರಶ್ನೆ. ಈ ವಿಷಯದಲ್ಲಿ 2 ತತ್ವಗಳು ನೆರವಾಗುತ್ತವೆ.

*ಸಾಮಾನ್ಯವಾಗಿ ಮನುಷ್ಯರು ನಾಟಕೀಯ ವರ್ತನೆಯ ಬದಲಾವಣೆಗೆ ಪ್ರತಿಕೂಲವಾಗಿರುತ್ತಾರೆ. ಹೆಚ್ಹೆಚ್ಚು ಶಾಲೆಗಳನ್ನು ಆರಂಭಿಸಬೇಕೆಂದ್ರೆ ಅದರಲ್ಲಿ ಹೊಸತನವಿರಬೇಕು. ಅಸ್ತಿತ್ವದಲ್ಲಿರುವ ಶೈಕ್ಷಣಿಕ ವ್ಯವಸ್ಥೆಯಲ್ಲಿ ಇನ್ನಷ್ಟು ದಕ್ಷತೆಯನ್ನು ತರಬೇಕು. ಶಿಕ್ಷಣ ಕ್ಷೇತ್ರದಲ್ಲಿರುವ ಉದ್ಯಮಿಗಳ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಮತ್ತು ಶಿಕ್ಷಣ ಕ್ಷೇತ್ರದಲ್ಲಿನ ಬದಲಾವಣೆ ಬಗ್ಗೆ ಶಿಕ್ಷಕರು ಆತಂಕ ಪಡದಂತೆ ಕಾರ್ಯಕ್ರಮಗಳನ್ನು ರೂಪಿಸಲು ಹೆಚ್ಚಿನ ಸಮಯ ಮೀಸಲಾಗಿಡಬೇಕು. ಇದನ್ನು `ಎಕ್ಸಾಮ್‍ಚೆಕ್' ಯಾವರೀತಿ ಯಶಸ್ವಿಯಾಗಿ ಮಾಡಿದೆ ಅನ್ನೋದನ್ನು ನವೀನ್ ವಿವರಿಸಿದ್ದಾರೆ.

*ಕಾರ್ಯನಿರ್ವಹಣೆಯಲ್ಲಿನ ಸಂಕೀರ್ಣತೆಯನ್ನು ಕಡಿಮೆ ಮಾಡಲು ವಿನ್ಯಾಸ, ಪ್ರಮಾಣ, ಆಟೋಮೇಟ್ ಸೈಕಲ್ ಮತ್ತು ಪೈಲಟ್‍ಗಳ ಅತಿ ವೇಗದ ಅಳವಡಿಕೆ ಅತ್ಯಂತ ಅವಶ್ಯಕ. ಈ ಕಾರ್ಯ ವಿತರಕ ಮಾದರಿ ಮಾರಾಟದಿಂದ ನೇರ ಮಾರಾಟದತ್ತ ಬದಲಾದಂತೆ.

ಅಧ್ಯಯನಕ್ಕೆ ಮರಳಲು ಅವಕಾಶ...

ರಿಚರ್ಡ್ ಅವರ ಪರಿಕಲ್ಪನೆಯನ್ನು ಇದುವರೆಗೂ ನಾವು ಅರ್ಥಮಾಡಿಕೊಂಡಿಲ್ಲ. ರಿಚರ್ಡ್ ಅವರ ಪರಿಕಲ್ಪನೆಯಾದ ಏಕಕಾಲಿಕ ಪಠ್ಯಕ್ರಮ ಬಳಕೆಯಲ್ಲಿಲ್ಲದಂತೆ, ಊಹಾ ವೈಯಕ್ತಿಕ ಕಲಿಕೆ ಮುಂದಿನ ಹತ್ತು ಭಾರತದ ಪ್ರತಿ ಮಗುವೂ ಶಾಲೆಗೆ ಹೋಗಬೇಕೆನ್ನುವ ವಾಸ್ತವವನ್ನು ನನಸು ಮಾಡಲಿದೆ. ವೈಯಕ್ತಿಕ ಡಿಜಿಟಲ್ ಸಾಧನಗಳು ಮತ್ತು ಮಾಹಿತಿ ವಿಜ್ಞಾನದಲ್ಲಿನ ಕ್ಷಿಪ್ರ ಬೆಳವಣಿಗಳಿಗೆ ಧನ್ಯವಾದ ಹೇಳಲೇಬೇಕು. 250 ಮಿಲಿಯನ್ ವಿದ್ಯಾರ್ಥಿಗಳು, ಪ್ರತ್ಯೇಕವಾಗಿ 250 ಮಿಲಿಯನ್ ತರಗತಿಗಳಲ್ಲಿ ಎಲ್ಲಾ ಸಮಯದಲ್ಲೂ, ಎಲ್ಲಾ ಕಡೆಗೂ ಕಲಿಯುತ್ತಾರೆ ಅಂತಾದ್ರೆ, ಲರ್ನಿಂಗ್ ಜೆನೋಮ್ ಬಗ್ಗೆ ತರಬೇತಿ ಪಡೆಯುತ್ತಾರೆ ಅಂದ್ರೆ ಅದು ನಿಜಕ್ಕೂ ಮಕ್ಕಳ ಮೊಗದಲ್ಲಿ ನಗು ಮೂಡಿಸಬಲ್ಲದು.

ಲೇಖಕರು: ಕಾರ್ತಿಕ್​ ಶ್ರೀವತ್ಸ

ಅನುವಾದಕರು: ಭಾರತಿ ಭಟ್​​