ಮನೆ ಕೆಲಸಗಳನ್ನು ಮಾಡಿ ಮುಗಿಸುವ ಮಿತ್ರನ ಬಗ್ಗೆ ನಿಮಗೆಷ್ಟು ಗೊತ್ತು..?

ಟೀಮ್​ ವೈ.ಎಸ್​.ಕನ್ನಡ

ಮನೆ ಕೆಲಸಗಳನ್ನು ಮಾಡಿ ಮುಗಿಸುವ ಮಿತ್ರನ ಬಗ್ಗೆ ನಿಮಗೆಷ್ಟು ಗೊತ್ತು..?

Wednesday May 18, 2016,

2 min Read

ಬೆಂಗಳೂರು ಮೆಟ್ರೋ ಪಾಲಿಟನ್ ಸಿಟಿಯಾಗಿ ಬೆಳೆದು ನಿಂತಿದೆ. ಜನಸಂಖ್ಯೆಯೂ ಸಾಕಷ್ಟು ಬೆಳೆದಿದ್ದು ಎಲ್ಲರಿಗೂ ಉತ್ತಮ ಜೀವನ ನಡೆಸುವ ಕಾತರ ಧಾವಂತ ಇದ್ದೇ ಇದೆ. ಅಷ್ಟೇ ಅಲ್ಲದೇ ಇಲ್ಲಿಗೆ ಸಾಕಷ್ಟು ಮಂದಿ ಹೊರಗಿನಿಂದ ಬಂದು ದುಡಿಯುತ್ತಿದ್ದಾರೆ. ಎಲ್ಲರಿಗೂ ಸಮಯದ ಅಭಾವ, ಹಾಗಾಗಿ ಅವರ ಮನೆ ಕೆಲಸವನ್ನು ಸರಿಯಾಗಿ ಮಾಡಲಾಗುತ್ತಿಲ್ಲ. ಅಂತವರಿಗಾಗಿಯೇ ಬೆಂಗಳೂರಿನಲ್ಲೊಂದು ಸ್ಟಾರ್ಟ್ಅಪ್ ಹುಟ್ಟಿಕೊಂಡಿದೆ ಅದೇ ’ಒನ್ ಟೈಮ್ ಜಾಬ್ಸ್’.

image


ಬೆಂಗಳೂರಿನಂತಹ ನಗರಗಳ ಜೀವನ ಶೈಲಿಯನ್ನೇ ಆಧರಿಸಿ ಆರಂಭಿಸಿರುವ ಈ ಒನ್ ಟೈಮ್ ಜಾಬ್ಸ್ ಡಾಟ್ ಕಾಂ ಎಂಬ ಸಂಸ್ಥೆಯು ನಗರದ ಜನಗೆಗೆ ತಕ್ಷಣಕ್ಕೆ ಬೇಕಿರುವ ಎಲ್ಲಾ ರೀತಿಯ ಸೌಲಭ್ಯವನ್ನು ಒದಗಿಸುವ ಇರಾದೆ ಹೊಂದಿದೆ. ಗೃಹಕೃತ್ಯ ಕಾರ್ಯಗಳಲ್ಲಿ ಏರುಪೇರಾದಾಗ ಅದನ್ನು ಸರಿಪಡಿಸಲು ತನ್ನದೇ ಆದ ಜಾಲವನ್ನು ಈ ಸಂಸ್ಥೆ ಹೊಂದಿದೆ. 

2012ರಲ್ಲಿ ಪ್ರಶಾಂತ್ ರೈ ಎಂಬುವವರಿಗೆ ಸ್ಥಾಪನೆಯಾದ ಈ ಒನ್ ಟೈಮ್ ಜಾಬ್ಸ್ ಗ್ರಾಹಕರು ಬಯಸುವ ೧೦ ರೀತಿಯ ಕೆಲಸಗಳನ್ನು ಸಮಯಕ್ಕೆ ತಕ್ಕಂತೆ ಒದಗಿಸುತ್ತಾ ಬಂದಿದೆ.

ಕಾನೂನು ಪಂಡಿತರಿಂದ ಸಲಹೆ

ವಾಹನ ಸವಾರರು ಸಂಚರಿಸುವಾಗ ಅಪಘಾತಕ್ಕೀಡಾಗಿ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದರೆ ಕೇಸು ದಾಖಲಾಗುತ್ತದೆ ಎಂದಿಟ್ಟುಕೊಳ್ಳಿ ಆಗ ಏನು ಮಾಡಬೇಕು ಎಂಬ ಆತಂಕ ಎಲ್ಲರನ್ನೂ ಕಾಡುತ್ತದೆ ಅಂತಹ ಸಂದರ್ಭಗಳಲ್ಲಿ ನೀವು ಒನ್ ಟೈಮ್ ಜಾಬ್ ಡಾಟ್ ಕಾಮ್​ಗೆ ಭೇಟಿ ನೀಡಿ ಎನ್​ರೋಲ್ ಮಾಡಿಸಿಕೊಂಡರೆ ಸಾಕು ಅವರೆ ಕಾನೂನು ಸಲಹೆಗಾರರನ್ನು ನೀವಿದ್ದ ಸ್ಥಳಕ್ಕೆ ಕಳುಹಿಸಿ ನಿಮ್ಮ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಸಹಾಯ ಮಾಡುತ್ತಾರೆ.

ಇದನ್ನು ಓದಿ: "ಥಟ್ ಅಂತಾ ಹೇಳಿದ್ದಾರೆ" ಆರತಿ ಎಚ್ ಎನ್ ಅವರಿಗೆ ಈ ಬರಹವನ್ನ ಬಹುಮಾನವನ್ನಾಗಿ ನೀಡಲಾಗ್ತಿದೆ..!

ಅಷ್ಟೇ ಅಲ್ಲದೇ ಕಾರ್ಪೋರೇಟ್ ಕಂಪನಿಗಳು, ಮನೆಗಳು ಎಲ್ಲಿಗೆ ಬೇಕಾದರೂ ಸೆಕ್ಯೂರಿಟಿ ಗಾರ್ಡ್​ಗಳು ಮತ್ತು ಬಾಡಿ ಗಾರ್ಡ್​ಗಳನ್ನು ನೇಮಿಸುವ ಕೆಲಸವನ್ನು ಈ ಒನ್ ಟೈಮ್ ಜಾಬ್ಸ್ ಡಾಟ್ ಕಾಂ ಮಾಡುತ್ತದೆ.

image


ವಿವಿಧ ಸೇವೆಗಳು

ಈ ಸಂಸ್ಥೆಯಿಂದ ಎಲೆಕ್ಟ್ರಿಕಲ್ ಪ್ಲಂಬಿಗ್, ಮನೆಯ ಸ್ವಚ್ಛತೆ, ಮರದಕೆಲಸ, ಮತ್ತು ಪಾರ್ಟಿ ಮತ್ತು ಸಮಾರಂಭಗಳಲ್ಲಿ ಕೆಲಸ ಮಾಡಲು ಜನರನ್ನು ಸಹ ಈ ಸಂಸ್ಥೆ ನೀಡುತ್ತದೆ. ಇತ್ತಿಚಿನ ದಿನಗಳಲ್ಲಿ ಈ ಸಂಸ್ಥೆಗೆ ಸಿವಿಲ್ ಎಂಜಿನಿಯರ್​ಗಳ ಕುರಿತು ಬೇಡಿಕೆ ಹೆಚ್ಚಾಗಿ ಬರುತ್ತಿದ್ದು, ಈ ಮೂಲಕ ಸಂಸ್ಥೆ ವತಿಯಿಂದ ಸಾವಿರ1800 ಮಂದಿಗೆ ಕೆಲಸ ಕೊಟ್ಟಿರುವುದಲ್ಲದೇ ಗ್ರಾಹಕರಿಗೂ ಉತ್ತಮ ಸೇವೆ ನೀಡುತ್ತಿದೆ.

ಮಹಿಳೆಯರಿಗೆ ರಕ್ಷಣೆ ಪಾಠ

ಈ ಸಂಸ್ಥೆ ವತಿಯಿಂದ ಮನೆಕೆಲವಷ್ಟೇ ಅಲ್ಲದೆ ಬದಲಾಗುತ್ತಿರುವ ಕಾಲಮಾನಕ್ಕೆ ತಕ್ಕಂತೆ ಮಹಿಳೆಯರಿಗ ಪ್ರಾಧಾನ್ಯತೆ ಮತ್ತು ಸುರಕ್ಷತೆ ಒದಗಿಸಲು ಆತ್ಮ ರಕ್ಷಣಾ ತಂತ್ರಗಳನ್ನು ಹೇಳಿಕೊಡುತ್ತದೆ. ದುರುಳರಿಂದ ತೊಂದರೆಯಾದಾಗ ಹೇಗೆ ತಮ್ಮ ನ್ನು ತಾವು ರಕ್ಷಿಸಿಕೊಳ್ಳಬೇಕು ಎಂಬುದನ್ನು ಸಂಸ್ಥೆ ವತಿಯಿಂದ ನೇಮಕವಾಗುವ ನುರಿತ ಸಾಹಸ ಪಟುಗಳು ಹೇಳಿಕೊಡುತ್ತಾರೆ.

ಎಲ್ಲೆಲ್ಲಿ ಸೇವೆ..?

ಈ ಸಂಸ್ಥೆ ಈಗಾಗಲೇ ಬೆಂಗಳೂರು, ಪುಣೆ, ಮುಂಬೈ, ಗುರುಗ್ರಾಮಗಳಲ್ಲಿ ತನ್ನ ಶಾಖೆಗಳನ್ನು ಹೊಂದಿದೆ. ಪ್ರತಿ ದಿನ ೫೦ ರಿಂದ ೮೦ ಮಂದಿ ಈ ಸಂಸ್ಥೆಯನ್ನು ಸಂಪರ್ಕಿಸಿ ತಮ್ಮ ಮನೆಕೆಲಸಕ್ಕೆ ಬೇಕಾದ ಅಗತ್ಯಗಳನ್ನು ಪೂರೈಸಿಕೊಳ್ಳಲು ಬೇಡಿಕೆ ಇಡುತ್ತಾರೆ. ಮುಂದಿನ ದಿನಗಳಲ್ಲಿ ನೂರು ನಗರಗಳಿಗೆ ತಮ್ಮ ಸೇವೆಯನ್ನು ವಿಸ್ತರಿಸುವ ಉದ್ದೇಶ ಪ್ರಶಾಂತ್ ರೈ ಅವರದ್ದು, ಸಾವಿರ ಕೋಟಿ ವಹಿವಾಟು ಜೊತೆಗೆ ಒಂದು ಲಕ್ಷ ಗ್ರಾಹಕ್ರನ್ನು ಹೊಂದು ಬಯಕೆ ಇವರಿಗಿದೆ. ಒಟ್ಟಿನಲ್ಲಿ ಬೆಂಗಳೂರಿನಂತಹ ನಗರಕ್ಕೆ ಒನ್ ಟೈಮ್ ಜಾಬ್ಸ್​ನ ಅಗತ್ಯ ಸಾಕಷ್ಟಿದೆ.

ಇದನ್ನು ಓದಿ:

1. ಜೇಬಲ್ಲಿ ದುಡ್ಡಿಲ್ಲ...ಮೊಬೈಲ್​ನಲ್ಲಿ ಕರೆನ್ಸಿ ಇಲ್ಲ.. ಡೋಂಟ್​ವರಿ ಉಚಿತವಾಗಿ ವೈ-ಫೈ ಬಳಸಿಕೊಳ್ಳಿ

2. ಟ್ರೇಲರ್​ನಲ್ಲೇ ಅಡಗಿದೆ ಎಲ್ಲಾ ರಹಸ್ಯಗಳು..

3. ಅಂದು 150 ರೂಪಾಯಿ ಸಂಬಳ, ಇಂದು 150 ಕೋಟಿ ರೂಪಾಯಿ ವಹಿವಾಟು ನಡೆಸುವ ಚಾಣಕ್ಯ..!