ಕ್ರಿಸ್​​ಮಸ್​​ಗಾಗಿ ರೆಡಿಯಾಗಿದೆ ಸ್ಪೆಷಲ್​ ಚಾಕಲೆಟ್​​​​

ವಿಸ್ಮಯ

ಕ್ರಿಸ್​​ಮಸ್​​ಗಾಗಿ ರೆಡಿಯಾಗಿದೆ ಸ್ಪೆಷಲ್​ ಚಾಕಲೆಟ್​​​​

Wednesday December 23, 2015,

2 min Read

ಡಿಸೆಂಬರ್ ತಿಂಗಳು ಬಂತೆಂದರೆ ಕ್ರೈಸ್ತ ಬಾಂಧವರಿಗೆ ಎಲ್ಲಿಲ್ಲದ ಉತ್ಸಾಹ, ಖುಷಿ. ಕ್ರಿಸ್ ಮಸ್ ಹಬ್ಬ ಬರುತ್ತಿದ್ದಂತೇ ವಿಧವಿಧ ಕೇಕ್‍ಗಳು ಮತ್ತು ಚಾಕಲೇಟ್ ತಯಾರಿಕೆಯ ಭರಾಟೆ ಜೋರಾಗಿ ಇರುತ್ತೆ. ಇನ್ನು ಸಿಲಿಕಾನ್ ಸಿಟಿ ಬೆಂಗಳೂರು ಕ್ರಿಸ್‍ಮಸ್ ಹಬ್ಬಕ್ಕೆ ರೆಡಿಯಾಗುತ್ತಿದೆ. ಜೊತೆಗೆ ಹಬ್ಬಕ್ಕೆ ಉಡುಗೂರೆ ನೀಡಲು ವೆರೈಟಿ ವೆರೈಟಿ ಚಾಕಲೇಟ್‍ಗಳ ತಯಾರಿ ಭರ್ಜರಿಯಾಗಿ ನಡೆಯುತ್ತಿದೆ. ಕ್ರಿಸ್‍ಮಸ್‍ನ ಚಾಕಲೇಟ್ ಮೇಕಿಂಗ್ ಎಲ್ಲರನ್ನು ಆಕರ್ಷಿಸುತ್ತಿದೆ.

image


ಒಂದೆಡೆ ಬಣ್ಣ ಬಣ್ಣದ ರ್ಯಾಪರ್‍(Wraper)ನಲ್ಲಿ ಸುತ್ತಿಟ್ಟಿರೋ ಬಗೆ ಬಗೆಯ ಚಾಕಲೇಟ್‍ಗಳು, ಇನ್ನೊಂದೆಡೆ ಚಾಕಲೇಟ್‍ನಲ್ಲಿ ಅರುಳುತ್ತಿರೋ ಸಂತಾ ಕ್ಲಾಸ್. ಇದು ಉದ್ಯಮನಗರಿ ಬೆಂಗಳೂರು ಕ್ರಿಸ್ ಮಸ್ ಹಬ್ಬಕ್ಕೆ ರೆಡಿಯಾಗುತ್ತಿರೋ ಪರಿ. ಹೌದು ಕ್ರಿಸ್‍ಮಸ್ ಹಬ್ಬದ ಪ್ರಯುಕ್ತ ರಾಜಧಾನಿಯಲ್ಲಿ ಬಗೆ ಬಗೆಯ ಚಾಕಲೇಟ್‍ಗಳು ಮಾರುಕಟ್ಟೆಗೆ ಲಗೆಯಿಟ್ಟಿವೆ. ಆದ್ರಲ್ಲೂ ಚಾಕಲೇಟಿನಿಂದಲೇ ತಯಾರಿಸಿದ ವಿವಿಧ ಸಂತಾಕ್ಲಾಸ್ ಚಾಕಲೇಟ್‍ಗಳು ಗ್ರಾಹಕರ ಮನಸೋರೆ ಮಾಡುವಂತಿದೆ.

ಇನ್ನು ಜಟಕಗಾಡಿಯಲ್ಲಿ ಕೂತಿರೋವಂತಹ ಸಂತಾ, ಉಡುಗೋರೆಯ ಮೂಟೆ ಹೊತ್ತ ಸಂತಾ, ಬಾತುಕೋಳಿ, ನಾಯಿಮರಿಯ ಆಕಾರದ ಚಾಕಲೇಟ್‍ಗಳ ತಯಾರಿ ಜೋರಾಗಿ ನಡೆಯುತಿದೆ. ಇನ್ನು ಬೆಂಗಳೂರಿನಲ್ಲಿ ತಯಾರು ಆಗುತ್ತಿರೋ ಕ್ರಿಸ್‍ಮಸ್ ಚಾಕಲೇಟ್‍ಗಳು ಮುಂಬೈ, ರಾಜಸ್ಥಾನ, ಗುಜರಾತ್, ಹಿಮಾಚಲಪ್ರದೇಶ, ಕಾಶ್ಮೀರಗಳಿಗೂ ರವಾನಿಸಲಾಗುತ್ತಿದೆ. ಅಲ್ಲೇಲ್ಲಾ ಕ್ರಿಸ್‍ಮಸ್ ಚಾಕಲೇಟ್‍ಗಳಿಗೆ ಬೇಡಿಕೆ ಹೆಚ್ಚಾಗಿದೆ ಅಂತಾರೆ ಚಾಕಲೇಟ್ ಜಂಕ್ಷನ್‍ನ ಅನುಪಮಾ.

image


ಈಗಾಗಲೇ ಸುಮಾರು ಸಾವಿರಾಕ್ಕೂ ಹೆಚ್ಚು ಚಾಕಲೇಟ್‍ಗಳ ತಯಾರಿ ಮಾಡುತ್ತಿರೋ ಅನುಪಮಾ. ಬೆಂಗಳೂರಿನಲ್ಲಿ ಕ್ರಿಸ್ ಮಸ್ ಹಬ್ಬದ ಹಿನ್ನೆಲೆಯಲ್ಲಿ ವಿವಿಧ ಬಗೆಯ ಸಂತಾ ಚಾಕಲೇಟ್‍ಗಳಿಗೆ ಬೇಡಿಕೆ ಹೆಚ್ಚಾಗಿದೆ ಅಂತಾರೆ. ಇನ್ನು ವಿಶೇಷವೆಂದ್ರೆ ಚಾಕಲೇಟ್‍ನಲ್ಲಿಯೇ ಗ್ರಾಹಕರ ಫೋಟೋವನ್ನ ರೆಡಿ ಮಾಡಿಕೊಡಲಾಗುತ್ತೆ. ಹೀಗಾಗಿ ತಮ್ಮ ಪ್ರೀತಿ ಪಾತ್ರರ ಫೋಟೋ ಫ್ರೆಮ್ ಚಾಕಲೇಟ್ ರೆಡಿ ಮಾಡಿಸೊಕ್ಕೆ ಗ್ರಾಹಕರು ಮುಗಿಬೀಳ್ತಿದ್ದಾರೆ.

image


ಮಾರುಕಟ್ಟೆಯಲ್ಲಿ ಕ್ರಿಸ್‍ಮಸ್ ಚಾಕಲೇಟ್‍ಗಳ ಬೆಲೆ ಕೂಡ ಸಾಧರಣವಾಗಿದ್ದು. ಎಲ್ಲರ ಕೈಗೆ ಸಿಗುವಂತಿದೆ. ಸಂತಾ ಚಾಕಲೇಟ್‍ಗಳ ಆರಂಭದ ಬೆಲೆ 15 ರೂಪಾಯಿ ಇದ್ದು, ಗಾತ್ರಕ್ಕೆ ತಕ್ಕಂತೆ ಬೆಲೆಗಳನ್ನು ನಿಗದಿ ಮಾಡಲಾಗಿದೆ. ಬೇರೆ ಬೇರೆ ಹಣ್ಣಿನ ಫೇವರ್‍ನ ಚಾಕಲೇಟ್‍ಗಳು ಇರೋದ್ರಿಂದ ಜನರು ಕೊಂಡುಕೊಳ್ಳಲು ಮುಂದಾಗ್ತಿದ್ದಾರೆ.

ಹಬ್ಬ ಯಾವುದೇ ಇರಲಿ ಜನರಿಗೆ ಹೊಸ ಬಗೆಯ ರುಚಿ ಸವಿಯಲು ಇಷ್ಟ ಪಡತ್ತಾರೆ. ಹೀಗಾಗಿಯೇ ಚಿಕ್ಕವರು-ದೊಡ್ಡವರು ಎನ್ನದೇ ಚಾಕಲೇಟ್‍ಗಳನ್ನು ಕೊಂಡು ಕೊಳ್ಳುತ್ತಿದ್ದಾರೆ. ಒಂದಕ್ಕಿಂತ ಒಂದು ಅಂದದ ಚಾಕಲೇಟ್‍ಗಳು ಹಾಗೂ ಕೇಕ್‍ಗಳು ಮಾರುಕಟ್ಟೆಯ ಅಂದವನ್ನು ಮತ್ತಷ್ಟು ಹೆಚ್ಚಿಸುತ್ತಿವೆ.