2016 - 'ಉದ್ಯಮಿಗಳ ದಶಕ'ದ ಆರಂಭ..!

ಟೀಮ್​ ವೈ.ಎಸ್​.

0

ಭಾರತದ ಪ್ರತಿ ಜಿಲ್ಲೆಯಲ್ಲೂ ಸಾಹಸೋದ್ಯಮ ಆರಂಭವಾಗಬೇಕು, ''ಸ್ಟಾರ್ಟ್ ಅಪ್ ಇಂಡಿಯಾ, ಸ್ಟ್ಯಾಂಡ್ ಅಪ್ ಇಂಡಿಯಾ'', ಇದು ಪ್ರಧಾನಿ ನರೇಂದ್ರ ಮೋದಿ ಯುವ ಭಾರತೀಯರಿಗೆ ಪ್ರೋತ್ಸಾಹ ತುಂಬಿದ ಪರಿ. ಪ್ರಧಾನಿಯೇ ಪ್ರೇರಣೆಯಾದಾಗ ಪ್ರತಿಯೊಬ್ಬ ಭಾರತೀಯರೂ ಇದನ್ನು ಗಂಭೀರವಾಗಿ ಪರಿಗಣಿಸಿ ಅಖಾಡಕ್ಕೆ ಇಳಿಯಲೇಬೇಕು. ಜನವರಿ 16ರಂದು 'ಸ್ಟಾರ್ಟ್ಅಪ್ ಇಂಡಿಯಾ, ಸ್ಟ್ಯಾಂಡ್ಅಪ್ ಇಂಡಿಯಾ'ದ ಬ್ಲೂಪ್ರಿಂಟ್ ಕೂಡ ಬಿಡುಗಡೆಯಾಗಲಿದೆ. ಭಾರತದಲ್ಲಿ ಉದ್ಯಮವನ್ನು ಇನ್ನಷ್ಟು ಸರಳವಾಗಿ ಮುನ್ನಡೆಸುವ ಜವಾಬ್ಧಾರಿಯನ್ನು ಹೊತ್ತಿರುವ ಕೇಂದ್ರ ಸರ್ಕಾರ ಅದಕ್ಕಾಗಿ ನೀಲನಕ್ಷೆಯನ್ನು ಸಿದ್ಧಮಾಡಿದೆ.

ಭಾರತದಲ್ಲಿ ಉದ್ಯಮಿಗಳ ದಶಕ ನಿರ್ಮಾಣದ ಗುರಿಯನ್ನು ಹೊತ್ತು ಹೊಸ ವರ್ಷ ಬಂದಿದೆ. ಭಾರತದಲ್ಲಿರುವ ಈ ಉಲ್ಲಾಸದ ವಾತಾವರಣಕ್ಕೆ ಇನ್ನಷ್ಟು ಪುಷ್ಠಿ ಕೊಟ್ಟವರು ಇನ್ಫೋಸಿಸ್​ನ ಸಹ ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ. ''ಉದ್ಯಮಿಗಳನ್ನು ಅದೃಷ್ಟ ಅರಸಿ ಬಂದಿದೆ, ಹಾಗಾಗಿ ಇದು ಉದ್ಯಮಗಳ ದಶಕವಾಗಲಿದೆ'' ಅಂತಾ ನಾರಾಯಣಮೂರ್ತಿ ಭವಿಷ್ಯ ನುಡಿದಿದ್ದಾರೆ. ಪ್ರತಿ 6 ತಿಂಗಳಿಗೊಮ್ಮೆ ಬಿಡುಗಡೆಯಾಗುವ ವಿಶ್ವಬ್ಯಾಂಕ್​ನ 'ಜಾಗತಿಕ ಆರ್ಥಿಕ ನಿರೀಕ್ಷಣಾ ವರದಿ'ಯ ಪ್ರಕಾರ ಭಾರತ ವಿಶ್ವದ ಆರ್ಥಿಕ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ. 2016-17ರ ಆರ್ಥಿಕ ವರ್ಷದಲ್ಲಿ ಚೀನಾಕ್ಕಿಂತಲೂ ಅಧಿಕ ಅಂದ್ರೆ ಶೇ. 7.8ರಷ್ಟು ಬೆಳವಣಿಗೆ ಕಾಣಲಿದೆ. ಹೊಸ ವರ್ಷದಲ್ಲಿ ಇಂತಹ ಶುಭ ಸುದ್ದಿ ಸಿಕ್ಕಿರೋದ್ರಿಂದ ಭಾರತದ ಔದ್ಯಮಿಕ ಪರಿಸರ ಇನ್ನಷ್ಟು ಉಲ್ಲಾಸಮಯವಾಗೋದ್ರಲ್ಲಿ ಅನುಮಾನವೇ ಇಲ್ಲ. 'ಯುವರ್​ಸ್ಟೋರಿ' ಸಂಶೋಧನಾ ವರದಿ ಪ್ರಕಾರ, 2015ರಲ್ಲಿ ಭಾರತೀಯ ಉದ್ಯಮಗಳಲ್ಲಿ 9 ಬಿಲಿಯನ್ ಡಾಲರ್ ಹೂಡಿಕೆ ಮಾಡಲಾಗಿದೆ. ಈ ಮೊತ್ತ ಕಳೆದ 5 ವರ್ಷಗಳ ಹೂಡಿಕೆಯ ಶೇ.50ರಷ್ಟು. ಹಾಗಾಗಿ ಉದ್ಯಮ ಕ್ಷೇತ್ರವೆಂಬ ರಣರಂಗ ಪ್ರವೇಶಕ್ಕೆ ಇದು ಸಕಾಲ. ಆದ್ರೆ ಇದೊಂದು ಸುದೀರ್ಘ ಪಯಣ ಅನ್ನೋದನ್ನು ನಾವು ಮರೆಯಬಾರದು.

ಭಾರತದ ಕೆಲವು ಯುನಿಕಾರ್ನ್ಗಳನ್ನು ಭಾರತೀಯ ಉದ್ಯಮವೆಂದು ಕರೆಯುವುದು ಅಸಾಧ್ಯ, ಯಾಕಂದ್ರೆ ಅವು ಅಮೆರಿಕ ಅಥವಾ ಸಿಂಗಾಪುರದಲ್ಲಿ ನೋಂದಣಿಯಾಗಿವೆ. ಔದ್ಯಮಿಕ ಕ್ಷೇತ್ರದಲ್ಲಿ ಸಿಂಗಾಪುರ ನಂಬರ್ 1 ಎನಿಸಿಕೊಂಡಿದ್ರೆ, ಭಾರತ 142ನೇ ಸ್ಥಾನದಲ್ಲಿದೆ. 'ಸ್ಟಾರ್ಟ್ಅಪ್ ಇಂಡಿಯಾ, ಸ್ಟ್ಯಾಂಡ್ಅಪ್ ಇಂಡಿಯಾ'ದಿಂದ ಉದ್ಯಮಿಗಳಿಗೆ ಇರುವ ನಿರೀಕ್ಷೆಗಳೇನು ಅನ್ನೋ ಬಗ್ಗೆ ಇತ್ತೀಚೆಗಷ್ಟೆ 'ಯುವರ್​ಸ್ಟೋರಿ' ಸಮೀಕ್ಷೆ ನಡೆಸಿತ್ತು. ಉದ್ಯಮಗಳಿಗೆ ವಿಧಿಸಿರುವ ನಿಬಂಧನೆಗಳ ಸರಳೀಕರಣ ಹಾಗೂ ಅಸ್ತಿತ್ವದಲ್ಲಿರುವ ತೆರಿಗೆ ಕಾನೂನುಗಳಲ್ಲಿ ಸಡಿಲಿಕೆ ಆಗಬಹುದೆಂಬ ನಿರೀಕ್ಷೆ ಎಲ್ಲರಲ್ಲೂ ಇದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತೆರಿಗೆ ವಿಧಿಸುವುದರಿಂದ ಉದ್ಯಮಗಳಿಗೆ ವ್ಯವಹಾರ ಮಾಡುವುದು ಅಷ್ಟು ಸುಲಭವಲ್ಲ. ಹೂಡಿಕೆಗೆ ಬೆಂಬಲ, ಆಪ್ತ ಸಲಹೆ, ಸಂಪನ್ಮೂಲಗಳ ಮೇಲಿನ ನಿರ್ಬಂಧ ಸಡಿಲಿಕೆಯ ನಿರೀಕ್ಷೆ ಕೂಡ ಹೆಚ್ಚಿದೆ.

ಔದ್ಯಮಿಕ ಕ್ಷೇತ್ರದ ಪಾಲಿಗೆ 2015ನೇ ವರ್ಷ ಸಿಹಿ-ಕಹಿಯ ಮಿಶ್ರಣವಾಗಿತ್ತು. ಈ ವರ್ಷ ಉದ್ಯಮ ಪರಿಸರದಲ್ಲಿ ಏನೆಲ್ಲಾ ಆಗಬಹುದು ಅನ್ನೋದು ಸದ್ಯದ ಕುತೂಹಲ. ಈ ಬಗ್ಗೆ ಕೆಲ ಪಂಡಿತರು ನುಡಿದಿರುವ ಭವಿಷ್ಯ ಇಲ್ಲಿದೆ.

ಸರ್ಕಾರದ ಒತ್ತಡ ಪರಿಸರದ ಆರೋಗ್ಯಕ್ಕೆ ಒಳ್ಳೆಯದು...

2025ರ ವೇಳೆಗೆ ಭಾರತೀಯ ಉದ್ಯಮಗಳು ಉದ್ಯೋಗ ಸೃಷ್ಟಿಕರ್ತರಾಗಿ ಹೊರಹೊಮ್ಮಲಿವೆ ಅನ್ನೋ ವಿಶ್ವಾಸ ಭಾರತೀಯ ಉದ್ಯಮ ಕ್ಷೇತ್ರದ ದಿಗ್ಗಜ ಮೋಹನ್ದಾಸ್ ಪೈ ಅವರದ್ದು. 'ಯುವರ್​ ಸ್ಟೋರಿ' ಜೊತೆ ಮಾತನಾಡಿದ ಅವರು, ''ಸದ್ಯ ಭಾರತದಲ್ಲಿ 75 ಬಿಲಿಯನ್ ಡಾಲರ್ ಮೌಲ್ಯದ 18,000 ಉದ್ಯಮಗಳಿದ್ದು, 3.5 ಲಕ್ಷ ಜನರಿಗೆ ಉದ್ಯೋಗ ಕಲ್ಪಿಸಿವೆ. 2025ರ ವೇಳೆಗೆ ಭಾರತದಲ್ಲಿ 500 ಬಿಲಿಯನ್ ಡಾಲರ್ ಮೌಲ್ಯದ ಒಂದು ಲಕ್ಷ ಉದ್ಯಮಗಳು ಸೃಷ್ಟಿಯಾಗಲಿದ್ದು, 3.5 ಮಿಲಿಯನ್ ಡಾಲರ್ ಮಂದಿಗೆ ಉದ್ಯೋಗ ಸೃಷ್ಟಿಯಾಗಲಿದೆ'' ಅಂತಾ ಭವಿಷ್ಯ ನುಡಿದಿದ್ದಾರೆ. ಪ್ರಕ್ರಿಯೆಗಳು, ಪರಿಹಾರ ಮತ್ತು ಒಂದು ಕಂಪನಿಯ ಆರಂಭಕ್ಕೆ ಸಂಬಧಿಸಿದ ಕಟ್ಟುಪಾಡುಗಳನ್ನೊಳಗೊಂಡ 36 ನೈರ್ಮಲ್ಯ ವಸ್ತುಗಳನ್ನು ಸರ್ಕಾರಕ್ಕೆ ಕಳುಹಿಸಿಕೊಡಲಾಗಿದೆ. ಕಾಲೇಜುಗಳು ಹಾಗೂ ವಿಶ್ವವಿದ್ಯಾನಿಲಯಗಳನ್ನು 500 ಇನ್ಕ್ಯುಬೇಟರ್ಗಳನ್ನು ಸ್ಥಾಪಿಸುವಂತೆ ಸಲಹೆ ಕೂಡ ನೀಡಲಾಗಿದೆ ಅಂತಾ ಅವರು ತಿಳಿಸಿದ್ದಾರೆ. ಮೊದಲ 5 ವರ್ಷ ಕಂಪನಿಗಳಿಗೆ ಟ್ಯಾಕ್ಸ್ ಇನ್ಸೆಂಟಿವ್​ಗಳನ್ನು ಕೊಡಬೇಕು ಅನ್ನೋದು ಮೋಹನ್​ದಾಸ್​ ಪೈ ಅವರ ಅಭಿಪ್ರಾಯ. ವಿನಾಯಿತಿ ನೀಡುವುದರಿಂದ ಕಂಪನಿಗಳು ಆರಂಭಿಕ ಹಂತದಲ್ಲಿ ಕಠಿಣ ತೆರಿಗೆ ನೀತಿ ಹಾಗೂ ಹಣ ಗಳಿಸುವ ಬಗ್ಗೆ ತಲೆಕೆಸಿಡಿಕೊಳ್ಳದೆ ವಹಿವಾಟಿನ ಮೇಲೆ ಹೆಚ್ಚು ಗಮನಹರಿಸಬಹುದು ಎನ್ನುತ್ತಾರೆ ಅವರು.

ಸಿಟಿ ಇನ್ಕ್ಯುಬೇಶನ್ ಕಲ್ಪನೆಯನ್ನು ಇನ್ನಷ್ಟು ಪ್ರೋತ್ಸಾಹಿಸುವಂತೆ ಸರ್ಕಾರವನ್ನು ಒತ್ತಾಯಿಸಿರುವುದಾಗಿ `ಹನಿ ಬೀ ನೆಟ್ವರ್ಕ್'ನ ಸಂಸ್ಥಾಪಕ ಪ್ರೊಫೆಸರ್ ಅನಿಲ್.ಕೆ.ಗುಪ್ತಾ ತಿಳಿಸಿದ್ದಾರೆ. ಇದರಿಂದಾಗಿ ಯುವ ಸಂಶೋಧಕರು ದೊಡ್ಡ ದೊಡ್ಡ ನಗರ ಹಾಗೂ ಮೆಟ್ರೋ ಸಿಟಿಗಳಿಗೆ ಸ್ಥಳಾಂತರವಾಗದಂತೆ ತಡೆಯಬಹುದು. ಯುವಕರು ನಗರಗಳಿಗೆ ವಲಸೆ ಹೋಗುವುದು ಹಾಗೂ ಹಿರಿ ಜೀವಗಳು ಹಳ್ಳಿಗಳಲ್ಲೇ ಬದುಕು ಸವೆಸುವುದು ಯಾವ ರಾಷ್ಟ್ರಕ್ಕೂ ಶೋಭೆ ತರುವಂಥದ್ದಲ್ಲ ಅನ್ನೋದು ಅನಿಲ್ ಗುಪ್ತಾ ಅವರ ಅಭಿಪ್ರಾಯ.

ನೇರ ನಡೆಯಲ್ಲಿ ಮಾದಕತೆ...

ನೇರ ಮಾದರಿ ಅನುಸರಿಕೆಯ ಮಹತ್ವವನ್ನು ಉದ್ಯಮಗಳು ಅರ್ಥಮಾಡಿಕೊಳ್ಳುತ್ತಿವೆ. 'India Quotient'ನ ಸಂಸ್ಥಾಪಕ ಆನಂದ್ ಲುನಿಯಾ ಅವರ ಪ್ರಕಾರ, ಸೂಕ್ತ ತಂಡದ ನೇಮಕ ಮತ್ತು ಉತ್ತಮ ವೇತನ ನಿಗದಿ ಬಗ್ಗೆ ಕಂಪನಿಗಳು ಗಂಭೀರ ಚರ್ಚೆ ಆರಂಭಿಸಿವೆ. ಈ ಮೂಲಕ ಕಂಪನಿಗಳು ಉದ್ಯೋಗಿಗಳಲ್ಲಿ ತೃಪ್ತಿ ಮೂಡಿಸಬಹುದು ಜೊತೆಗೆ ಉತ್ತಮ ಆದಾಯವನ್ನೂ ಗಳಿಸಬಹುದು ಎನ್ನುತ್ತಾರೆ ಆನಂದ್.

'ಟ್ಯಾಕ್ಸಿ ಫಾರ್ ಶ್ಯೂರ್'ನ ಸಂಸ್ಥಾಪಕ ಹಾಗೂ ಏಂಜೆಲ್ ಇನ್ವೆಸ್ಟರ್ ಅಪ್ರಮೇಯ ರಾಧಾಕೃಷ್ಣ ಅವರ ಪ್ರಕಾರ ನೇರ ಮಾದರಿಯೇ ಭವಿಷ್ಯದ ಮಾರ್ಗ. ''ಹೂಡಿಕೆಯ ವೇಗದಲ್ಲಿ ಕೊಂಚ ನಿಧಾನವಾಗಬಹುದು, ಆದ್ರೆ ಮೂಲಭೂತವಾಗಿ ಅದು ಹೆಚ್ಚು ವಿವೇಕಯುತವಾದ್ದು ಮತ್ತು ಸರಿಯಾದದ್ದು. ನೇರ ಮಾದರಿ ಇನ್ನಷ್ಟು ಪ್ರಬಲವಾಗಲಿದೆ. ಉದ್ಯಮಗಳು ಸ್ಥಳೀಯ ಭಾಷೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಜನಸಾಮಾನ್ಯರಿಗೆ ಅಗತ್ಯವಾದಂತಹ ಉತ್ಪನ್ನಗಳನ್ನು ತಯಾರಿಸುತ್ತಿವೆ. ವ್ಯಾಪಕ ಭಾರತಕ್ಕೆ ಬೇಕಾದಂತಹ ಉತ್ಪನ್ನಗಳು ಸೃಷ್ಟಿಯಾಗಲಿವೆ'' ಅಂತಾ ಅಪ್ರಮೇಯ ಹೇಳಿದ್ದಾರೆ.

ಜನಸಾಮಾನ್ಯರಿಗಾಗಿ ಬದಲಾವಣೆಯ ಪರಿಣಾಮ ಯಶಸ್ಸಿಗೆ ದಾರಿ...

''ಜನರು ಸರಿಯಾದ ರೀತಿಯಲ್ಲಿ ಡಿಜಿಟಲ್ ತಂತ್ರಜ್ಞಾನ ಬಳಸಿಕೊಳ್ಳುವಂತೆ ಮಾಡಲು ಹತೋಟಿಯ ಅಗತ್ಯವಿದೆ'' ಅನ್ನೋದು 'ಸಹಾ ಫಂಡ್'ನ ಸಂಸ್ಥಾಪಕ ಅಂಕಿತಾ ವಸಿಷ್ಠ ಅವರ ಅಭಿಪ್ರಾಯ. ಗ್ರಾಮೀಣ ಭಾರತದ ಮೇಲೆ ಪರಿಣಾಮ ಬೀರಬಲ್ಲ ಇನ್ನಷ್ಟು ಬದಲಾವಣೆಗಳನ್ನು ಎದುರು ನೋಡುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಬೃಹತ್ ಒಪ್ಪಂದಗಳಾಗ್ತಿರೋದ್ರಿಂದ ಸಿರೀಸ್-ಬಿ, ಮತ್ತು ಸಿ ಫಂಡಿಂಗ್ ನಿಧಾನವಾಗಲಿದೆ. ಹೂಡಿಕೆದಾರರು ಘಟಕ ಅರ್ಥಶಾಸ್ತ್ರದ ಬಗ್ಗೆ ಹೆಚ್ಚು ಗಮನಹರಿಸುತ್ತಿದ್ದಾರೆ. ಕಂಪನಿಗಳು ಜಾಗತಿಕ ಮಟ್ಟದಲ್ಲಿ ವಹಿವಾಟು ವಿಸ್ತರಣೆಗೆ ಮುಂದಾಗಿದ್ದು, ಭಾರತೀಯ ಉದ್ಯಮ ಪರಿಸರದತ್ತ ಕೂಡ ಚಿತ್ತ ಹರಿಸಲಿ ಅನ್ನೋದು ಅಂಕಿತಾರ ಸಲಹೆ. ಇನ್ನು 2016ರಲ್ಲಿ ಸ್ಥಳೀಯ ಭಾಷೆಗಳಿಗೆ ಹೆಚ್ಚು ಮಹತ್ವ ಸಿಗಲಿದೆ ಅಂತಾ 'ಆಸ್ಪದ ಇನ್ವೆಸ್ಟ್​ಮೆಂಟ್ಸ್​​'ನ ಪ್ರಿನ್ಸಿಪಾಲ್ ಸಾಹಿಲ್ ಕಿಣಿ ಹೇಳಿದ್ದಾರೆ.

ಮನಃಶಾಂತಿಗೆ ಘನೀಕರಣ ಮತ್ತು ಮಿತವಾದ ಫಂಡಿಂಗ್ ಉತ್ತಮ...

ಬಿ2ಬಿ ಪ್ರತೀಕಾರದೊಂದಿಗೆ ಹಿಂದಿರುಗಬೇಕು ಎನ್ನುತ್ತಾರೆ `ಪ್ರೈಮ್ ವೆಂಚರ್ ಪಾರ್ಟನರ್ಸ್​​'ನ ಮ್ಯಾನೇಜಿಂಗ್ ಪಾರ್ಟನರ್​ ಅಮಿತ್ ಸೋಮಾನಿ. ಅದು ಕಣ್ಗಾವಲಿನಲ್ಲಿದ್ದು, ಕೊಂಚ ಉತ್ತಮ ಅರ್ಥವ್ಯವಸ್ಥೆಯನ್ನೂ ಹೊಂದಿದೆ. ಮೊಬೈಲ್ ಕ್ರಾಂತಿಯಲ್ಲಿ ಇನ್ನಷ್ಟು ಕ್ರಾಂತಿಯಾಗಲಿದ್ದು, ಶೇ.100ರಷ್ಟು ಡಿಜಿಟಲೀಕರಣವೂ ಸಾಧ್ಯ ಅನ್ನೋದು ಅಮಿತ್ ಅವರ ವಿಶ್ವಾಸ. ಇದಕ್ಕೆ ಕಾರಣ ಸ್ಮಾರ್ಟ್​​ಫೋನ್​ಗಳ ಸುಗ್ಗಿ. ಭಾರತದ ಆ್ಯಪ್​ಗಳು ಭವಿಷ್ಯದಲ್ಲಿ ಇನ್ನಷ್ಟು ಪ್ರಗತಿ ಹೊಂದಲಿವೆ ಎಂಬ ನಂಬಿಕೆ ಅವರಿಗಿದೆ.

`ದಿ ಗೋಲ್ಡನ್ ಟ್ಯಾಪ್ : ದಿ ಇನ್​ಸೈಡ್​ ಸ್ಟೋರಿ ಆಫ್ ಹೈಪರ್ ಫಂಡೆಡ್ ಇಂಡಿಯನ್ ಸ್ಟಾರ್ಟ್ಅಪ್ಸ್'ನ ಲೇಖಕ ಹಾಗೂ ಉದ್ಯಮಿ ಕಶ್ಯಪ್ ಮಾತನಾಡಿ, ಇ-ಕಾಮರ್ಸ್ ಸಂಬಂಧಿತ ಹೂಡಿಕೆಗಳಿಗೆ ಭಾರತ ಜಾಗತಿಕ ಮಟ್ಟದಲ್ಲಿ ಆಸಕ್ತಿದಾಯಕ ಕ್ಷೇತ್ರವಾಗಲಿದೆ ಎಂದು ಅಭಿಪ್ರಾಯಪಟ್ಟರು. ಆದ್ರೆ ಹೂಡಿಕೆಯನ್ನು ಅಳತೆ ಮಾಡುವ ಪರಿಪಾಠ ಹೆಚ್ಚಲಿದೆ, ಹೊಸತನ ಹಾಗೂ ಬದಲಾವಣೆಗೆ ಒತ್ತು ನೀಡುವ ಉದ್ಯಮಗಳು ಯಶಸ್ವಿಯಾಗಲಿವೆ ಎನ್ನುತ್ತಾರೆ ಅವರು. ಎರವಲು ಪಡೆದ ನಂಬಿಕೆಗಳಿಗಿಂತ ಹೆಚ್ಚಾಗಿ ನಮ್ಮ ಬಗ್ಗೆ ಯೋಚಿಸುವತ್ತ ಹೆಚ್ಚು ಗಮನಹರಿಸಬೇಕು ಅನ್ನೋದು ಅವರ ಸಲಹೆ.

2016 ನಿಜಕ್ಕೂ ಒಂದೊಳ್ಳೆ ವರ್ಷವಾಗಲಿದೆ ಅಂತಾ 'ನಾರ್ವೆಸ್ಟ್ ವೆಂಚರ್ ಪಾರ್ಟ್​ನರ್ಸ್'ನ ಪ್ರಿನ್ಸಿಪಾಲ್ ಸಮರ್ ಜುನೇಜಾ ಭವಿಷ್ಯ ನುಡಿದಿದ್ದಾರೆ. ''ಇದು ಕೇವಲ ಆರಂಭವಷ್ಟೆ, ಹಲವಾರು ಉದ್ಯಮಗಳು ನಿಧಿಯನ್ನು ಹೆಚ್ಚಿಸಿಕೊಳ್ಳಲಿವೆ, ಸಿರೀಸ್-ಸಿ ಫಂಡಿಂಗ್ ಕೊಂಚ ಕಠಿಣವಾಗಬಹುದು'' ಎನ್ನುತ್ತಾರೆ ಅವರು.

ಎಚ್ಚರಿಕೆಯ ಒಂದು ಪದ...

ಶೇ.10ರಷ್ಟು ಹೊಸ ಕಂಪನಿಗಳು ಮಾತ್ರ ಯಶಸ್ವಿಯಾಗಲಿವೆ, ಬಹುಪಾಲು ಸಂಸ್ಥೆಗಳು ವಿಫಲವಾಗಲಿವೆ ಅನ್ನೋದು ಮೋಹನ್​ದಾಸ್​ ಪೈ ಅವರ ಎಚ್ಚರಿಕೆಯ ನುಡಿ. ಜಿಗುಟುತನ, ದೂರ ದೃಷ್ಟಿಕೋನ, ತಂಡವನ್ನು ಮುನ್ನಡೆಸುವ ಚತುರತೆಯುಳ್ಳವರು ಮಾತ್ರ ಜಯಶಾಲಿಯಾಗುತ್ತಾರೆ. ಉದ್ಯಮ ಸಂಸ್ಕೃತಿಯಿಂದ ನಾವೇನಾದ್ರೂ ಪಾಠ ಕಲಿತಿದ್ದೇವೆ ಅಂತಾದ್ರೆ ನಿಜಕ್ಕೂ ಅದು ಸೋಲಲ್ಲ, ಹಾಗಾಗಿ ಬಿದ್ದರೂ ಧೂಳು ಒರೆಸಿಕೊಂಡು ಮುನ್ನಡೆಯಿರಿ ಅಂತಾ ಮೋಹನ್​ದಾಸ್​ ಪೈ ಉದ್ಯಮಿಗಳನ್ನು ಹುರಿದುಂಬಿಸ್ತಾರೆ.

ಲೇಖಕರು : ದೀಪ್ತಿ ನಾಯರ್​
ಅನುವಾದ : ಭಾರತಿ ಭಟ್

Related Stories

Stories by YourStory Kannada