ಜವಾನನಾಗಿದ್ದವನು ಈಗ ಲಕ್ಷಾಧಿಪತಿ- ಶ್ಯಾಮ್ ನಿಷ್ಠೆಗೆ ಒಲಿದ ಬಹುಮಾನ

ಟೀಮ್​ ವೈ.ಎಸ್​. ಕನ್ನಡ

ಜವಾನನಾಗಿದ್ದವನು ಈಗ ಲಕ್ಷಾಧಿಪತಿ- ಶ್ಯಾಮ್ ನಿಷ್ಠೆಗೆ ಒಲಿದ ಬಹುಮಾನ

Thursday February 23, 2017,

2 min Read

ಇವತ್ತಿನ ಜಗತ್ತಿನಲ್ಲಿ ಮನುಷ್ಯತ್ವ ಮತ್ತು ನಿಷ್ಠೆಯನ್ನು ಕಾಣುವುದು ಸುಲಭದ ಮಾತಲ್ಲ. ಆದ್ರೆ ನಿಷ್ಠೆ ತೋರಿಸಿದವರಿಗೆ ಗೌರವ ಸಿಕ್ಕೇ ಸಿಗುತ್ತದೆ. ಇದು ಕೂಡ ಅಂತಹದ್ದೇ ಒಂದು ಕಥೆ. 2010ರಲ್ಲಿ ಸ್ಟಾರ್ಟ್ ಅಪ್ ಒಂದರಲ್ಲಿ ಜವಾನನಾಗಿ ಕೆಲಸಕ್ಕಿದ್ದವರು ಇವತ್ತು ಲಕ್ಷಾಧಿಪತಿ ಆದ ಕಥೆ ಇದು.

2010ರ ಸಮಯ ಅದು. ಶ್ಯಾಮ್​ಕುಮಾರ್, ಹಿರಿಯ ಬ್ಯಾಂಕ್ ಉದ್ಯೋಗಿ ಬಳಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ತನ್ನ ಸಹೋದರನ ಬಳಿಕ ಕೆಲಸ ಹುಡುಕಿಕೊಡು ಅಂತ ಸಹಾಯ ಕೇಳಿದ್ರು. ಸಹೋದರ ತನ್ನ ಒಡೆಯನ ಬಳಿ ಈ ವಿಷಯವನ್ನು ಹೇಳಿದ್ರು. ಹಿರಿಯ ಬ್ಯಾಂಕ್ ಉದ್ಯೋಗಿ ಆಗಿದ್ದ ಅವರು, ಸಿಟ್ರಸ್ ಪೇ ಪೇಮೆಂಟ್ ಗೇಟ್ ವೇ ಸಂಸ್ಥಾಪಕ ಜಿತೇಂದ್ರ ಗುಪ್ತಾ ಬಳಿ ಶ್ಯಾಮ್ ಕುಮಾರ್​ಗೆ ಕೆಲಸ ಕೊಡಿಸಿದ್ರು.

image


ಶ್ಯಾಮ್ ಕುಮಾರ್ ಕೆಲಸ ಪಡೆದ ದಿನಗಳಲ್ಲಿ ಭಾರತದಲ್ಲಿ ಇ-ಕಾಮರ್ಸ್ ಆಗಷ್ಟೇ ಚಿಗುರೊಡೆಯುತ್ತಿತ್ತು. ಜಿತೇಂದ್ರ ಕುಮಾರ್ ತನ್ನ ಕಂಪನಿಯನ್ನು ಬೆಳೆಸಲು ಹೋರಾಟ ಮಾಡುತ್ತಿದ್ದರು. ಜಿತೇಂದ್ರ ಕುಮಾರ್ ಶ್ಯಾಮ್ ಕುಮಾರ್ ರನ್ನು 8000 ರೂಪಾಯಿಗಳಿಗೆ ಸಿಟ್ರಸ್ ಪೇ ಕಂನಪನಿಯಲ್ಲಿ ಜವಾನನನ್ನಾಗಿ ನೇಮಿಸಿಕೊಂಡ್ರು.

ಶ್ಯಾಮ್ ಕುಮಾರ್ ಬಡ ಕುಟುಂಬದಿಂದ ಬಂದವರಾಗಿದ್ದರು. ತಂದೆಯ ಅನಾರೋಗ್ಯದ ಕಾರಣದಿಂದಾಗಿ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿ ಕೆಲಸಕ್ಕೆ ಸೇರಿಕೊಳ್ಳಬೇಕಾಗಿತು. ಸಿಟ್ರಸ್ ಪೇ ಸೇರಿಕೊಳ್ಳುವ ತನಕ ಶ್ಯಾಮ್ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಜಿತೇಂದ್ರ ಕುಮಾರ್ ಹಲವು ಬಾರಿ ಶ್ಯಾಮ್ ಕುಮಾರ್​ಗೆ ಎಂಪ್ಲಾಯಿ ಸ್ಟಾಕ್ ಓನರ್ ಶಿಪ್ ಪ್ಲಾನ್ (ESOP) ಬಗ್ಗೆ ವಿವರಿಸಿದ್ದರು. ಆದ್ರೆ ಅದರ ತಲೆಬುಡ ಶ್ಯಾಮ್​ಗೆ ಅರ್ಥವಾಗಿರಲಿಲ್ಲ. ESOP ಅಂದ್ರೆ ಈಕ್ವಿಟಿ ಬೇಸ್ಡ್ ಕಾಂಪನ್ಸೇಷನ್ ಪ್ಲಾನ್ ಅನ್ನುವುದು ಶ್ಯಾಮ್​ಗೆ ಅರ್ಥವಾಗಿರಲಿಲ್ಲ.

ಶ್ಯಾಮ್ ಮುಂಬೈನ ಮಲಾಡ್ ವಲಯದ 10*10 ಚದರಡಿ ಅಳತೆಯ ಚಿಕ್ಕ ಕೊಠಡಿಯಲ್ಲಿ ವಾಸವಾಗಿದ್ದರು. ಸ್ಲಂನಲ್ಲಿದ್ದ ಈ ಪುಟ್ಟ ಮನೆಯಲ್ಲೇ ಶ್ಯಾಮ್ ಕುಟುಂಬದ 10 ಜನರು ವಾಸವಿದ್ದರು. ಒಟ್ಟಾರೆಯಾಗಿ 100 ಸ್ಕ್ವೇರ್ ಫೀಟ್ ಸುತ್ತಳತೆ ಹೊಂದಿದ್ದ ಆ ಮನೆಯಲ್ಲಿ ಮಲಗಲು ಕೂಡ ಹೆಚ್ಚು ಜಾಗವಿರಲಿಲ್ಲ. ಶ್ಯಾಮ್ ಸಾಂತಕ್ರೂಝ್​​ನಲ್ಲಿದ್ದ ಆಫೀಸ್​​ನಲ್ಲಿ ಏಕಾಂಗಿಯಾಗಿ ಹೆಚ್ಚು ಕಾಲ ಕಳೆಯುತ್ತಿದ್ದರು. ಅಷ್ಟೇ ಅಲ್ಲ ಕಂಪನಿಯ ಬಗ್ಗೆ ಮತ್ತು ಅದರ ಉದ್ಯಮದ ಬಗ್ಗೆ ಯೋಚನೆಗಳನ್ನು ಮಾಡುತ್ತಿದ್ದರು.

ಸಮಯ ಕಳೆದಂತೆ ಸಿಟ್ರಸ್ ಪೇ ಹಲವು ಸೀರೀಸ್​​ಗಳಲ್ಲಿ ಫಂಡಿಂಗ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಯಿತು. ಸಿಕ್ವೋಯಾ ಕ್ಯಾಪಿಟಲ್, ಆಸೆಂಟ್ ಕ್ಯಾಪಿಟಲ್, ಇ-ಕಾಂಟೆಕ್ಸ್ಟ್ ಏಷಿಯಾ ಮತ್ತು ಬಿನೊಸ್ ಏಷ್ಯಾದಿಂದ ಬಂಡವಾಳ ಪಡೆದುಕೊಂಡಿತು. ಅಷ್ಟೇ ಅಲ್ಲಾ ಸಿಟ್ರಸ್, ಇಂಡಿಗೋ, ಗೋ ಏರ್ ಮತ್ತು ಅಮೇಜ್ಹಾನ್​ನಂತಹ ದೊಡ್ಡ ಗ್ರಾಹಕರನ್ನು ಪಡೆದುಕೊಂಡಿತು. 2016ರಲ್ಲಿ ಪೇ ಯೂ(PayU) ಸಿಟ್ರಸ್ ಪೇಯನ್ನು 130 ಮಿಲಿಯನ್ ಅಮೆರಿಕನ್ ಡಾಲರ್​ಗಳ ಮೊತ್ತಕ್ಕೆ ಸ್ವಾಧೀನ ಪಡಿಸಿಕೊಂಡಿತು. ಶ್ಯಾಮ್​ ಬದುಕಿನಲ್ಲಿ ಅತೀ ದೊಡ್ಡ ಡೀಲ್​ ಆಗಿ ಕಾಣಿಸಿಕೊಂಡಿತ್ತು. ಯಾಕಂದ್ರೆ ಶ್ಯಾಮ್ ಕಂಪನಿಯಲ್ಲಿ ತನಗೆ ಗೊತ್ತೇ ಇಲ್ಲದೆ, ಕೆಲಸ ಮಾಡುತ್ತಿದ್ದ ಸಮಯದಲ್ಲಿ ತನ್ನ ಶ್ರಮದಿಂದಾಗಿ ಅಲ್ಲೇ ಉಳಿದುಕೊಂಡಿದ್ದ ಷೇರು, 50 ಲಕ್ಷ ರೂಪಾಯಿ ಬೆಲೆ ಪಡೆದುಕೊಂಡಿತ್ತು..! ತನ್ನ ಬ್ಯಾಂಕ್ ಖಾತೆಗೆ ಈ ಹಣ ಬೀಳುವ ತನಕ ಶ್ಯಾಮ್ ಕುಟುಂಬ ಇದನ್ನು ನಂಬಿಯೇ ಇರಲಿಲ್ಲ.

ಸದ್ಯ ಶ್ಯಾಮ್ ಮುಂಬೈನಲ್ಲಿ ಸಿಂಗಲ್​ ಬೆಡ್​​ರೂಮ್​​ ಮನೆಯಲ್ಲಿ ಬಾಡಿಗೆಗೆ ವಾಸವಾಗಿದ್ದಾರೆ. ಹೊಸ ಮನೆ ಕೊಂಡುಕೊಳ್ಳುವ ಕನಸು ಕಾಣ್ತಿದ್ದಾರೆ. ಒಂದೊಳ್ಳೆಯ ಮೊಬೈಲ್ ಫೋನ್ ಖರೀದಿ ಮಾಡಿರುವ ಶ್ಯಾಮ್, ಕುಟಂಬದ ಜೊತೆ ಗೋವಾ ಟ್ರಿಪ್ ಹೋಗುವ ಪ್ಲಾನ್ ಕೂಡ ಮಾಡಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ ಒಂದು ಹೆಲ್ತ್ ಇನ್ಶ್ಯೂರೆನ್ಸ್ ಕೂಡ ಮಾಡಿಸಿಕೊಂಡಿದ್ದಾರೆ.

ಶ್ಯಾಮ್ ಕಥೆ ಹಲವು ಲಕ್ಷಗಳಲ್ಲಿ ಕೇವಲ ಒಂದಾಗಿರಬಹುದು. ಆದ್ರೆ ಭಾರತದ ಸ್ಟಾರ್ಟ್ ಅಪ್ ಇಕೋ ಸಿಸ್ಟಮ್ ಹೇಗೆ ಮತ್ತು ಎಷ್ಟು ವೇಗದಲ್ಲಿ ಬೆಳೆಯುತ್ತಿದೆ ಅನ್ನುವುದಕ್ಕೆ ದೊಡ್ಡ ಉದಾಹರಣೆ.

ಇದನ್ನು ಓದಿ:

1. ರುಚಿ ರುಚಿಯಾಗಿದೆ 'ಹುಡ್ಲಿ'ಯ ಉಪ್ಪಿನ ಕಾಯಿ- ಗ್ರಾಮೀಣ ಮಹಿಳೆಯರಿಗೆ ಉದ್ಯೋಗ ನೀಡಿದ ಯುವಕರಿಗೆ ಜೈ

2. ತೆರೆ ಹಿಂದೆ ಡಾಕ್ಟರ್​...ಸಿನಿಮಾದಲ್ಲಿ ಆ್ಯಕ್ಟರ್​​..!

3. ಖಡಕ್ ನಿರ್ಧಾರ ಮಾಡುವ ಯುವ ಐಎಎಸ್ ಆಫೀಸರ್- ಆಹಾರ ಉತ್ಪನ್ನಗಳ ಬಗ್ಗೆ ಕಾಳಜಿ ಮೂಡಿಸುತ್ತಿರುವ ಫುಡ್ ಸೇಫ್ಟಿ ಕಮಿಷನರ್