ಸಾವಯವ ಉತ್ಪನ್ನಗಳ ಖರೀದಿಗೆ ಇಲ್ಲಿದೆ 10 ಬೆಸ್ಟ್ ಸಂಸ್ಥೆಗಳ ಪರಿಚಯ

ಟೀಮ್​​ ವೈ.ಎಸ್​​.

ಸಾವಯವ ಉತ್ಪನ್ನಗಳ ಖರೀದಿಗೆ ಇಲ್ಲಿದೆ 10 ಬೆಸ್ಟ್ ಸಂಸ್ಥೆಗಳ ಪರಿಚಯ

Tuesday November 10, 2015,

4 min Read

ಸೂಪರ್ ಮಾರ್ಕೆಟ್​​ಗೆ ತೆರಳುವ ಗ್ರಾಹಕರು ತಮ್ಮ ಬಾಸ್ಕೆಟ್​​ನಲ್ಲಿರುವ ಸಾದಾ ಹಣ್ಣಿಗಿಂತ ಒಂದಷ್ಟು ಹಣ ಹೆಚ್ಚು ನೀಡಿ ಸಾವಯವ ಕೃಷಿಯಲ್ಲಿ ಬೆಳೆದ ಹಣ್ಣುಗಳನ್ನು ಖರೀದಿಸುವುದು ಅವರ ಆರೋಗ್ಯಕ್ಕೆ ಅತ್ಯುತ್ತಮ ವಿಧಾನ. ಸಾವಯವ ಉತ್ಪನ್ನಗಳ ಬಳಕೆ ಗ್ರಾಹಕರು ತೆಗೆದುಕೊಳ್ಳುವ ಆರೋಗ್ಯಕಾರಿ ನಿರ್ಧಾರ. ರಾಸಾಯನಿಕ ವಸ್ತುಗಳನ್ನು ವಾತಾವರಣದಿಂದ ದೂರವಿಟ್ಟಷ್ಟೂ ಆರೋಗ್ಯ ಉತ್ತಮವಾಗುತ್ತದೆ ಇದರಿಂದ ಪರಿಸರ ನಾಶವೂ ತಪ್ಪುತ್ತದೆ. ಈ ವಾದವನ್ನು ನೀವು ಒಪ್ಪುತ್ತೀರಾದರೇ, ನಿಮಗೆ ಸಾವಯವ ಉತ್ಪನ್ನಗಳ ಖರೀದಿಯಲ್ಲಿ ಆಸಕ್ತಿಯಿದೆ ಎಂದಾದರೆ, ನಿಮಗಾಗಿ ಇಲ್ಲಿ 10 ವಿವಿಧ ಆರ್ಗ್ಯಾನಿಕ್ ಉತ್ಪನ್ನಗಳನ್ನು ಇ-ಕಾಮರ್ಸ್ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿರುವ ಸಂಸ್ಥೆಗಳ ಪರಿಚಯವಿದೆ.

image


1. ಆರ್ಗ್ಯಾನಿಕ್ ಶಾಪ್

ಸಾವಯವ, ಸ್ವಾಭಾವಿಕ ಹಾಗೂ ಬಯೋ ಗೊಬ್ಬರಗಳ ಮೂಲಕ ಉತ್ಪಾದಿಸಿದ ಉತ್ಪನ್ನಗಳಿಗೆ ಆನ್​ಲೈನ್ ಮಾರುಕಟ್ಟೆ ಮೂಲಕ ಭಾರತದ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ತಲುಪುತ್ತಿವೆ. ಇಂತಹ ಸಂಸ್ಥೆಗಳಿಗೆ ನೆರವು ನೀಡುವ ಯೋಜನೆಯೇ ದಿ ಆರ್ಗ್ಯಾನಿಕ್ ಶಾಪ್. ಮನುಜ್ ತೆರಪಂಥಿ ಸ್ಥಾಪಿಸಿದ ಸಂಸ್ಥೆಯಿದು. ಇದರ ಮೂಲಕ ಇ-ಕಾಮರ್ಸ್ ಸಂಸ್ಥೆಯಲ್ಲಿ ಕೇವಲ ಭಾರತೀಯ ಮಾರುಕಟ್ಟೆಯಲ್ಲಿ ಮಾತ್ರವಲ್ಲ ಯುರೋಪಿಯನ್ ಮಾರುಕಟ್ಟೆಯಲ್ಲೂ ಸಾವಯವ ಕೃಷಿಯ ಹಾಗೂ ಸಹಜ ಸ್ವಾಭಾವಿಕ ಗೊಬ್ಬರದ ಉತ್ಪನ್ನಗಳ ಪೂರೈಕೆಯಿದೆ.

2. ನ್ಯಾಚುರಲಿ ಯುವರ್ಸ್

ಫೆಬ್ರವರಿ 2010ರಲ್ಲಿ ಪ್ರಿಯಾ ಪ್ರಕಾಶ್ ಹಾಗೂ ವಿನೋದ್ ಕುಮಾರ್ ಸ್ಥಾಪಿಸಿದ ಸಂಸ್ಥೆಯಿದು. ಒಂದೇ ಸ್ಥಳದಲ್ಲಿ ಹಲವು ಬಗೆಯ ಅತ್ಯುತ್ತಮ ಗುಣಮಟ್ಟದ ಹಾಗೂ ಸ್ವಾಭಾವಿಕ ಮಾದರಿಯ ಉತ್ಪನ್ನಗಳನ್ನು ಗ್ರಾಹಕರಿಗೆ ಒದಗಿಸುವುದು ಈ ಸಂಸ್ಥೆಯ ಉದ್ದೇಶ. ಈ ಪ್ರಾರಂಭಿಕ ಸಂಸ್ಥೆ ಇ-ಕಾಮರ್ಸ್ ವೇದಿಕೆಯ ಮೂಲಕ ನೂರು ವರ್ತಕರಿಗೆ ಸಾವಯವ ಹಾಗೂ ಪರಿಶುದ್ಧ ಅಕ್ಕಿ, ಎಣ್ಣೆ, ಪ್ಯಾಕೇಜ್ಡ್ ಪೊಂಗಲ್ ಹಾಗೂ ಕೀರುಗಳೂ ಸೇರಿದಂತೆ ಹಲವು ಉತ್ಪನ್ನಗಳನ್ನು ಒದಗಿಸುತ್ತಿದೆ.

ನ್ಯಾಚುರಲಿ ಯುವರ್ಸ್ ಸಂಸ್ಥೆ ಭಾರತದಾದ್ಯಂತ ಹಲವು ಪ್ರದೇಶಗಲ ರೈತರನ್ನೇ ಪಾರ್ಟ್​ನರ್​​ಗಳಾಗಿ ಹೊಂದಿದೆ. ರೈತರಿಂದ ಉತ್ಪನ್ನಗಳನ್ನು ನೇರವಾಗಿ ಖರೀದಿಸಿ, ತನ್ನ ಬ್ರಾಂಡ್ ಅಡಿಯಲ್ಲಿ ಮಾರುತ್ತಿದೆ.

3. ನ್ಯೂಟ್ರಿಬಕೇಟ್

ಧ್ರುವ್ ಹಾಗೂ ಪ್ರಂಗ್ನಾ ಜಗ್ಗಿ ಸ್ಥಾಪಿಸಿದ ಆರೋಗ್ಯಕಾರಿ ಆಹಾರ ಒದಗಿಸುವ ಸಂಸ್ಥೆಯೇ ನ್ಯೂಟ್ರಿಬಕೇಟ್. ಇದು ಜನರಿಗೆ ಅತ್ಯುತ್ತಮ ಗುಣಮಟ್ಟದ, ಆರೋಗ್ಯಕಾರಿ ಹಾಗೂ ಪೌಷ್ಠಿಕಾಂಶಯುಕ್ತ ಆಹಾರ ಒದಗಿಸುವ ಕೆಲಸ ಮಾಡುತ್ತಿದೆ. ದೈಹಿಕ ಆರೋಗ್ಯಕ್ಕಾಗಿ ಅತ್ಯುತ್ತಮ ದರ್ಜೆಯ ಸಾವಯವ ಹಾಗೂ ಪೌಷ್ಠಿಕ ಆಹಾರ ಅತ್ಯಗತ್ಯ. ಇಂತಹ ಉತ್ಪನ್ನಗಳಿಂದ ಮಾತ್ರ ಸರಳ, ಸುಭದ್ರ ಹಾಗೂ ಪರಿಣಾಮಕಾರಿಯಾದ ಪ್ರಭಾವ ಬೀರುತ್ತದೆ. ಹಾಗಾಗಿ ಹೆಚ್ಚು ಹೆಚ್ಚು ಸಾವಯವ ಕೃಷಿ ಹಾಗೂ ಸಾವಯವ ಬಳಕೆಗೆ ಆದ್ಯತೆ ನೀಡಬೇಕು ಅನ್ನುವುದು ಅವರ ಆಗ್ರಹ.

4. ಐ ಸೇ ಆರ್ಗ್ಯಾನಿಕ್

ಈ ಸಂಸ್ಥೆಯ ಸಂಸ್ಥಾಪಕ ಇಶ್ಮಿತ್ ಕಪೂರ್, ತಮ್ಮ ಪದವಿ ಮುಗಿಸಿದ್ದು ಬ್ರಿಟೀಷ್​​ ಕೊಲಂಬಿಯಾ ವಿಶ್ವವಿದ್ಯಾನಿಲಯದಲ್ಲಿ. ಬಳಿಕ ಉದ್ಯೋಗಶೀಲತೆ ಕಲಿಕೆಯನ್ನು ಕಲಿತಿದ್ದು ಬ್ರೌನ್ ಯುನಿವರ್ಸಿಟಿಯಲ್ಲಿ. ಹಲವಾರು ರೈತ ಸಂಘಗಳೊಂದಿಗೆ ಸಂಪರ್ಕ ಹೊಂದಿರುವ ಈ ಸಂಸ್ಥೆ ಅತ್ಯುತ್ತಮ ಸಂವಹನ ವ್ಯವಸ್ಥೆಯನ್ನು ಹೊಂದಿದೆ. ಜನಗಳು ಹೆಚ್ಚು ಹೆಚ್ಚು ಆರ್ಗ್ಯಾನಿಕ್ ಉತ್ಪನ್ನಗಳನ್ನು ಸೇವಿಸಬೇಕೆಂದರೇ, ರೈತರು ಸಾವಯವ ಉತ್ಪನ್ನಗಳ ಬೆಳೆಯಲು ಗಮನ ಹರಿಸಬೇಕು. ಸಾವಯವ ಉತ್ಪನ್ನಗಳನ್ನು ಖರೀದಿಸಲು ಮುಂದಾಗುವ ಗ್ರಾಹಕರ ಬೇಡಿಕೆಗೆ ತಕ್ಕ ಪೂರೈಕೆ ಸಾವಯವ ಉತ್ಪನ್ನಗಳನ್ನೆ ಬೆಳೆಯುವ ರೈತರು ಮಾಡಬೇಕು. ಈ ನಿಟ್ಟಿನಲ್ಲಿ ರೈತರನ್ನು ಪ್ರೋತ್ಸಾಹಿಸಬೇಕು ಅನ್ನುವ ಬಲವಾದ ನಿಲುವ ಈ ಸಂಸ್ಥೆಯದ್ದು.

5. ದಿ ಆರ್ಗ್ಯಾನಿಕ್.ಲೈಫ್

ಆರ್ಗ್ಯಾನಿಕ್.ಲೈಫ್ ಸಂಸ್ಥೆಯ ಸಂಸ್ಥಾಪಕರು ಮಲ್ಲೇಶ್ ತಿಗಲಿ. ಇದೊಂದು ಆನ್ಲೈನ್ ಮಾರುಕಟ್ಟೆಯಾಗಿದ್ದು, ಸಾವಯವ ಉತ್ಪನ್ನಗಳನ್ನು ಮಾರಾಟ ಮಾಡುವ ಜೊತೆಗೆ ಸಾವಯವ ಉತ್ಪನ್ನಗಳ ಮಾರಾಟದ ಕ್ರಮವನ್ನೂ ಪ್ರೋತ್ಸಾಹಿಸುತ್ತಿದೆ. ಸುಮಾರು 100 ಬೇರೆ ಬೇರೆ ವರ್ಗಗಳ ಸುಮಾರು 1500 ಸಾವಯವ ಉತ್ಪನ್ನಗಳ ಮಾರಾಟ ವ್ಯವಸ್ಥೆ ಇದರಲ್ಲಿದೆ. ಇದು ಅತ್ಯುತ್ತಮ ದರ್ಜೆಯ ಸಾವಯ ಉತ್ಪನ್ನಗಳನ್ನು ಕೂಲಂಕೂಷವಾಗಿ ಪರೀಕ್ಷಿಸಿಯೇ ಗ್ರಾಹಕರಿಗೆ ತಲುಪಿಸುತ್ತಿದೆ.

6. ಫಾರ್ಮ್2ಕಿಚನ್:

ಫೆಬ್ರವರಿ 2011ರಲ್ಲಿ ಸ್ಥಾಪಿಸಲ್ಪಟ್ಟ ಈ ಸಂಸ್ಥೆಯ ಮಾಲಕಿ ಸೀಮಾ ಧೋಲಿ. ರೈತರ ಮಾರುಕಟ್ಟೆಯಿಂದ ಪ್ರತಿನಿತ್ಯ ಖರೀದಿಸುವ ತಾಜಾ ಹಾಗೂ ಸಾವಯವ ಹಣ್ಣು, ತರಕಾರಿಗಳನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ಕೆಲಸ ಈ ಸಂಸ್ಥೆ ಮಾಡುತ್ತಿದೆ. ನೇರವಾಗಿ ರೈತರ ಮಾರುಕಟ್ಟೆಯಿಂದ ಕೊಳ್ಳುವುದರಿಂದ ಇಲ್ಲಿ ದಳ್ಳಾಳಿ ಹಾಗೂ ಮಧ್ಯವರ್ತಿಗಳನ್ನು ನಿವಾರಿಸಿದಂತಾಗಿದೆ. ಯಾವುದೇ ಗ್ರಾಹಕರು ಇಲ್ಲಿ ಆರ್ಡರ್ ಮಾಡಿದರೆ ಅವರ ಮನೆಗೆ ಸ್ವಚ್ಛ, ಶುದ್ಧ ಹಾಗೂ ತಾಜಾ ಉತ್ಪನ್ನಗಳು ಬಂದು ಸೇರುತ್ತವೆ.

7. ಹೆಲ್ಪ್ಅಸ್​​ಗ್ರೀನ್

ಕಾನ್ಪುರದಲ್ಲಿರುವ ಹೆಲ್ಪ್ಅಸ್​​ಗ್ರೀನ್ ಸಂಸ್ಥೆಯನ್ನು ಸ್ಥಾಪಿಸಿದವರು ಅಂಕಿತ್ ಅಗರ್ವಾಲ್ ಹಾಗೂ ಕರಣ್ ರಸ್ತೋಗಿ. ಧಾರ್ಮಿಕ ಸ್ಥಳಗಳಲ್ಲಿ ಹಾಗೂ ಇನ್ನಿತರೇ ಮುಖ್ಯ ದೇವಾಲಯಗಳಲ್ಲಿ ಅನುಪಯುಕ್ತವಾಗಿ ಬಿಸಾಡುವ ಹೂವುಗಳನ್ನು ಮರುಬಳಕೆ ಮಾಡಿ ಗೊಬ್ಬರದಂತೆ ಉಪಯೋಗಿಸಬಹುದು ಅನ್ನುವುದನ್ನು ಈ ಸಂಸ್ಥೆ ತೋರಿಸಿಕೊಟ್ಟಿದೆ. ಹೀಗೆ ಹೂವಿನ ತ್ಯಾಜ್ಯದಿಂದ ಉಂಟಾದ ಗೊಬ್ಬರದಿಂದ ಸಾವಯವ ಉತ್ಪನ್ನ ಬೆಳೆಯಬಹುದು ಎನ್ನುವುದನ್ನೂ ಈ ಸಂಸ್ಥೆ ಪ್ರಾಯೋಗಿಕವಾಗಿ ನಿರೂಪಿಸಿದೆ.

8. ಜಾಯ್​​ ಬೈ ನೇಚರ್

2013ರಲ್ಲಿ ಐಐಟಿ ಹಾಗೂ ಐಐಎಂನಲ್ಲಿ ಪದವಿ ಪಡೆದ ಶೈಲೇಶ್ ಮೆಹ್ತಾ ಹಾಗೂ ರಾಹುಲ್ ಕುಮಾರ್ ಎನ್ನುವ ಸಹೋದರರು ಪ್ರಾರಂಭಿಸಿದ ಸಂಸ್ಥೆಯಿದು. ಜಾಯ್​​ ಬೈನೇಚರ್ ಸಂಸ್ಥೆ ಸುಮಾರು 50 ಬೇರೆ ಬೇರೆ ಬ್ರಾಂಡ್​​ಗಳ ಅಡಿಯಲ್ಲಿ 10 ಸಾವಿರಕ್ಕೂ ಅಧಿಕ ಉತ್ಪನ್ನಗಳನ್ನು ಮಾರುಕಟ್ಟೆಗೆ ಪೂರೈಸುತ್ತಿದೆ. ವೈಯಕ್ತಿಕ ಕಾಳಜಿ, ಆಹಾರ ಹಾಗೂ ಪುಸ್ತಕಗಳೂ ಸೇರಿದಂತೆ 8 ವಿವಿಧ ಬಗೆಯ ಸೇವೆಗಳೂ ಈ ಸಂಸ್ಥೆಯಿಂದ ಲಭ್ಯವಿದೆ. ಈ ಸಂಸ್ಥೆಯೊಂದಿಗೆ ಸುಮಾರು 300 ವರ್ತಕರು ಡೀಲ್ ಮಾಡುತ್ತಿದ್ದು, ಸೂಕ್ತ ಮಾದರಿಯಲ್ಲಿ ವ್ಯವಹರಿಸುತ್ತಿದ್ದಾರೆ. ಲೈವ್ ಚಾಟ್ ಮೂಲಕ ಜನತೆಯೊಂದಿಗೆ ನೇರವಾಗಿ ಮಾತನಾಡುವ ಸಂಸ್ಥೆಯ ಪರಿಣಿತರು, ಅನಾರೋಗ್ಯ ಸಮಸ್ಯೆ ಹಾಗೂ ಆರೋಗ್ಯಕಾರಿ ಆಹಾರದ ಬಗ್ಗೆ ಸಲಹೆ ಸೂಚನೆ ನೀಡುತ್ತಿದ್ದಾರೆ.

9. ಇನ್ನರ್ ಬೀಯಿಂಗ್ ವೆಲ್ನೆಸ್

ಇನ್ನರ್ ಬೀಯಿಂಗ್ ವೆಲ್ನೆಸ್ ಉತ್ತಮ ಆಹಾರ ಸಂಶೋಧನಾ ಸಂಸ್ಥೆ. ಇದು ಫ್ಲೋರ್ಸ್, ಫ್ಲೇಕ್ಸ್, ನೂಡಲ್ಸ್, ವರ್ಮಿಸೆಲ್ಲಿ, ಪಾಸ್ತಾ, ಬ್ರೆಡ್ ಮುಂತಾದ ಆಹಾರದ ಉತ್ಪನ್ನಗಳನ್ನು ತಯಾರಿಸಿ ಗ್ರಾಹಕರಿಗೆ ಪೂರೈಸುತ್ತಿದೆ. ಇವು ಗ್ಲೂಟೇನ್ ರಹಿತವಾಗಿದ್ದು, ಕಡಿಮೆ ಕ್ಯಾಲೋರಿ ಹಾಗೂ ಅಧಿಕ ಕೊಲೆಸ್ಟ್ರಾಲ್​​ಗಳಿಂದ ಉಂಟಾಗುವ ತೊಂದರೆಗಳಿಂದ ನಿವಾರಣೆ ಒದಗಿಸುತ್ತದೆ. ಸೌಂದರ್ಯ, ಆರೋಗ್ಯ ಹಾಗೂ ಪೌಷ್ಟಿಕಅಂಶಗಳನ್ನು ಗಮನದಲ್ಲಿಟ್ಟುಕೊಂಡು ಇನ್ನರ್ ಬೀಯಿಂಗ್ ವೆಲ್​​ನೆಸ್ ಸಂಸ್ಥೆ ಆರೋಗ್ಯಕಾರಿ ಸಂಶೋಧಿತ ಉತ್ಪನ್ನಗಳನ್ನು ಸಿದ್ಧಪಡಿಸುತ್ತದೆ.

10. ಲೀವಿಂಗ್ ಗ್ರೀನ್ ಆರ್ಗ್ಯಾನಿಕ್ಸ್

ಪ್ರತೀಕ್ ತಿವಾರಿ ಹುಟ್ಟುಹಾಕಿದ ಸಂಸ್ಥೆಯಿದು. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಫಾರಿನ್ ಟ್ರೇಡ್​​ನಲ್ಲಿ ಎಂಬಿಎ ಪದವಿ ಪಡೆದ ಹಾಗೂ ವೃತ್ತಿಪರ ಕೃಷಿ ಎಂಜಿನಿಯರ್ ಆಗಿದ್ದವರು ಪ್ರತೀಕ್. ಲೀವಿಂಗ್ ಗ್ರೀನ್ ಆರ್ಗ್ಯಾನಿಕ್ಸ್ ಸಂಸ್ಥೆಯ ಅತಿ ಮುಖ್ಯ ಕೆಲಸ ಪ್ರತೀ ಮನೆಯ ಚಾವಣಿಗಳನ್ನು ಸಾವಯವ ಕೃಷಿ ಕ್ಷೇತ್ರವನ್ನಾಗಿಸುವುದು. ಇದಕ್ಕಾಗಿ ಅದು ಟೆರೆಸ್ ಗಾರ್ಡನ್​​ಗಳನ್ನು ನಿರ್ಮಿಸುತ್ತಿದ್ದು, ಅಲ್ಲಿ ತಾಜಾ ಸಾವಯವ ತರಕಾರಿ ಬೆಳೆಯಲು ಪ್ರೋತ್ಸಾಹ ಹಾಗೂ ಮಾರ್ಗದರ್ಶನ ನೀಡುತ್ತಿದೆ.

ರಾಸಾಯನಿಕ ರಸಗೊಬ್ಬರ ಹಾಗೂ ಕೀಟನಾಶಕಗಳನ್ನು ಬಳಸದೆ ಸಹಜ ಕೃಷಿಯಲ್ಲಿ ಬೆಲೆದ ಸಾವಯವ ಉತ್ಪನ್ನಗಳನ್ನು ಬೆಳೆಯುವುದು ರೈತರಿಗೂ ಒಳ್ಳೆಯದು, ಅದನ್ನು ಸೇವಿಸುವ ಗ್ರಾಹಕರಿಗೂ ಒಳ್ಳೆಯದು ಹಾಗೂ ಇದರಿಂದ ಪರಿಸರದ ವಾತಾವರಣಕ್ಕೂ ಒಳ್ಳೆಯದು. ಹಾಗಾಗಿ ಇತ್ತೀಚೆಗಿನ ಮಾರುಕಟ್ಟೆಯಲ್ಲಿ ಗ್ರಾಹಕರು ಹೆಚ್ಚು ಹೆಚ್ಚು ಸಾವಯವ ಉತ್ಪನ್ನಗಳ ಬಳಕೆಯತ್ತ ಮನಸ್ಸು ಮಾಡುತ್ತಿದ್ದಾರೆ.