ಬಾಹ್ಯಾಕಾಶದ ಮೇಲೆ ಹೆಜ್ಜೆಯಿಡಲಿದ್ದಾಳೆ ಗಗನಯಾತ್ರಿ: ಶವ್ನಾ ಪಾಂಡ್ಯಾ ಭಾರತದ ಹೆಮ್ಮೆಯ ಪುತ್ರಿ

ಟೀಮ್ ವೈ.ಎಸ್.ಕನ್ನಡ 

ಬಾಹ್ಯಾಕಾಶದ ಮೇಲೆ ಹೆಜ್ಜೆಯಿಡಲಿದ್ದಾಳೆ ಗಗನಯಾತ್ರಿ: ಶವ್ನಾ ಪಾಂಡ್ಯಾ ಭಾರತದ ಹೆಮ್ಮೆಯ ಪುತ್ರಿ

Thursday February 09, 2017,

2 min Read

ಕಲ್ಪನಾ ಚಾವ್ಲಾ ಮತ್ತು ಸುನೀತಾ ವಿಲಿಯಮ್ಸ್ ಭಾರತಕ್ಕೆ ಹೆಮ್ಮೆ ತಂದ ಗಗನಯಾತ್ರಿಗಳು. ಭಾರತದ ಹೆಮ್ಮೆಯ ಪುತ್ರಿಯರ ಸಾಲಿಗೆ ಈಗ ಡಾ.ಶವ್ನಾ ಪಾಂಡ್ಯ ಕೂಡ ಸೇರ್ಪಡೆಯಾಗಿದ್ದಾರೆ. ಇಂಡೋ-ಕೆನಡಿಯನ್ ಆಗಿರೋ ಶವ್ನಾ ಸದ್ಯದಲ್ಲೇ ಬಾಹ್ಯಾಕಾಶದ ಮೇಲೆ ತಮ್ಮ ಹೆಜ್ಜೆ ಗುರುತು ಮೂಡಿಸಲಿದ್ದಾರೆ.

image


32 ವರ್ಷದ ಡಾ.ಶವ್ನಾ ಪಾಂಡ್ಯ ಅವರಿಗೆ ಪ್ರತಿಭೆ ಅನ್ನೋದು ದೇವರ ವರವಾಗಿ ಬಂದಿದೆ. ಇವರೊಬ್ಬ ಪ್ರತಿಭಾವಂತ ಲೇಖಕಿ, ಜನರಲ್ ಫಿಸಿಶಿಯನ್, ನ್ಯೂರೋ ಸರ್ಜನ್. ಜೊತೆಗೆ ಒಪೆರಾ ಗಾಯಕಿ, ಅಂತರಾಷ್ಟ್ರೀಯ ಟೇಕ್ವಾಂಡೋ ಚಾಂಪಿಯನ್ ಕೂಡ. ಇವಿಷ್ಟೇ ಅಲ್ಲ ಶವ್ನಾ, ನ್ಯಾಶನಲ್ ಏರೋನಾಟಿಕ್ಸ್ ಸ್ಪೇಸ್ ಅಡ್ಮಿನಿಸ್ಟ್ರೇಶನ್ ಅಂದ್ರೆ ‘ನಾಸಾ’ದ ಗಗನಯಾತ್ರಿ.

ಸಿಟಿಜನ್ ಸೈನ್ಸ್ ಅಸ್ಟ್ರೋನಟ್ ಪ್ರೋಗ್ರಾಮ್​ಗಾಗಿ 3200 ಅಭ್ಯರ್ಥಿಗಳ ಪೈಕಿ ಆಯ್ಕೆಯಾದ ಇಬ್ಬರು ಗಗನಯಾತ್ರಿಗಳಲ್ಲಿ ಶವ್ನಾ ಪಾಂಡ್ಯ ಕೂಡ ಒಬ್ಬರು. 2018ರಲ್ಲಿ ನಾಸಾದ ಉಳಿದ 8 ಗಗನಯಾತ್ರಿಗ ಜೊತೆ ಶವ್ನಾ ಪಾಂಡ್ಯ ಕೂಡ ಬಾಹ್ಯಾಕಾಶಯಾನ ಕೈಗೊಳ್ಳಲಿದ್ದಾರೆ. ನೇವಿ ಸೀನ್​ನ ಮೌಯಿ ಥಾಯ್ ಅವರಿಂದ ಶವ್ನಾ ತರಬೇತಿ ಕೂಡ ಪಡೆದುಕೊಂಡಿದ್ದಾರೆ. ಮೌಯಿ ಥಾಯ್, ಥೈಲ್ಯಾಂಡ್ ಮೂಲದವರು. ವೃತ್ತಿಪರ ಕಾಳಗ ಕ್ರಿಡೆಗಳಲ್ಲಿ ನುರಿತಿದ್ದಾರೆ. ಬಾಹ್ಯಾಕಾಶ ಯಾನದ ಕನಸು ನನಸಾಗುತ್ತಿರುವ ಬಗ್ಗೆ ಖುದ್ದು ಶವ್ನಾ ಪಾಂಡ್ಯಾ ಮಾತನಾಡಿದ್ದಾರೆ. ''ಚಿಕ್ಕವಳಿದ್ದಾಗಿನಿಂದ್ಲೂ ನನಗೆ ಬಾಹ್ಯಾಕಾಶದ ಬಗ್ಗೆ ಬಹಳ ಒಲವಿತ್ತು. ನಕ್ಷತ್ರಗಳೆಂದ್ರೆ ಬಲು ಪ್ರೀತಿ. ಹಾಗಾಗಿ ಬಾಹ್ಯಾಕಾಶ ಯಾನ ನನ್ನ ಬಹುದೊಡ್ಡ ಕನಸು, ಅದೀಗ ನನಸಾಗುತ್ತಿದೆ'' ಅಂತಾ ಹೇಳಿದ್ದಾರೆ.

ಶವ್ನಾ, ಅಲ್ಬೆರ್ಟಾ ವಿಶ್ವವಿದ್ಯಾನಿಲಯದಲ್ಲಿ ಪದವಿ ಪಡೆದಿದ್ದಾರೆ. ನ್ಯೂರೋಸೈನ್ಸ್ ನಲ್ಲಿ ಬಿಎಸ್ ಸಿ ಮಾಡುತ್ತಿದ್ದಾರೆ. ಬಾಹ್ಯಾಕಾಶ ವಿಜ್ಞಾನ ವಿಷಯದಲ್ಲಿ ಫ್ರಾನ್ಸ್ ನ ಅಂತರಾಷ್ಟ್ರೀಯ ಬಾಹ್ಯಾಕಾಶ ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರೋ ಅವರು ಯೂನಿವರ್ಸಿಟಿ ಆಫ್ ಅಲ್ಬೆರ್ಟಾದಲ್ಲಿ ವೈದ್ಯಕೀಯ ಎಂಡಿ ಮಾಡಿದ್ದಾರೆ. ಫ್ರೆಂಚ್, ರಷ್ಯನ್ ಮತ್ತು ಸ್ಪ್ಯಾನಿಶ್ ಭಾಷೆಗಳಲ್ಲಿ ಶವ್ನಾ ಚೆನ್ನಾಗಿ ಮಾತನಾಡಬಲ್ಲರು. ನಿಮ್ಮ ಆಸಕ್ತಿ ಮತ್ತು ಬದ್ಧತೆಗಳಿಗೆ ಆದ್ಯತೆ ನೀಡಿದ್ರೆ ಏನನ್ನು ಬೇಕಾದ್ರೂ ಸಾಧಿಸಬಹುದು ಅನ್ನೋದು ಅವರ ಅನುಭವದ ಮಾತು.

ಶವ್ನಾ ಪಾಂಡ್ಯ ಮೂಲತಃ ಮುಂಬೈನವರು. ಅವರ ಕುಟುಂಬಸ್ಥರು ಮುಂಬೈನಲ್ಲಿದ್ದಾರೆ, ಹಾಗಾಗಿ ವಾಣಿಜ್ಯ ನಗರಿಗೆ ಭೇಟಿ ಕೊಟ್ಟಿದ್ದ ಶವ್ನಾ ಅಲ್ಲಿನ ಆಸ್ಪತ್ರೆಗಳಿಗೆ ಭೇಟಿ ನೀಡಿ ಪ್ರೇರಣಾತ್ಮಕ ಭಾಷಣ ಮಾಡಿದ್ದಾರೆ. ವೈದ್ಯರು ಮತ್ತು ಪ್ರಾಕ್ಟೀಸ್ ಮಾಡ್ತಾ ಇರೋ ವಿದ್ಯಾರ್ಥಿಗಳೊಂದಿಗೆ ಸಂಭಾಷಣೆ ನಡೆಸಿದ್ದಾರೆ. ‘ನಾನು ಲೀಲಾವತಿ ಬಾಯಿ ಪೋದರ್ ಹೈಸ್ಕೂಲ್ ವಿದ್ಯಾರ್ಥಿಯನ್ನು ಭೇಟಿ ಮಾಡಿದ್ದೆ. ಆ ಮಕ್ಕಳು ನನಗೆ ಕೇಳಿದ ಪ್ರಶ್ನೆಗಳು ನಿಜಕ್ಕೂ ಅದ್ಭುತ. ಶೂನ್ಯ ಗುರುತ್ವದಿಂದ ಬಾಹ್ಯಾಕಾಶದವರೆಗೆ ಎಲ್ಲದರ ಬಗೆಗೂ ಅವರು ಸವಾಲು ಕೇಳಿದ್ರು. ವಿದ್ಯಾರ್ಥಿಗಳು, ವೈದ್ಯಕೀಯ ವಿದ್ಯಾರ್ಥಿಗಳು ಎಲ್ಲರಲ್ಲೂ ಸಾಧಿಸುವ ಹಂಬಲವಿದೆ. ಆದ್ರೆ ವಿಜ್ಞಾನ ಜಗತ್ತಿನ ಪ್ರತಿಯೊಂದು ಬೆಳವಣಿಗೆಗಳೂ ಅವರನ್ನು ತಲುಪುವಂತಾಗಬೇಕು. ಸದಾ ಹೊಸದೇನನ್ನಾದ್ರೂ ಸಾಧಿಸುವ ಹಂಬಲ ಎಲ್ಲರಲ್ಲೂ ಇರಬೇಕು’’ ಅನ್ನೋದು ಶವ್ನಾ ಪಾಂಡ್ಯಾ ಅವರ ಮನದಾಳದ ಮಾತು. 

ಅಣ್ಣಾವ್ರ ‘ಯೋಗಾ’ಯೋಗ..!

ಮಕ್ಕಳಿಗಾಗಿ ಬಂತು ಬ್ಯೂಟಿ ಪಾರ್ಲರ್​- ಮೇಕ್​ಓವರ್​ ಜೊತೆಗೆ ಮಸ್ತಿ ಗ್ಯಾರೆಂಟಿ..!