ಚಪಾತಿ ಮಾರ ಹೊರಟವಳು ಕ್ಲೌಡ್​ ಟೆಕ್​ ಕಂಪನಿ ಹುಟ್ಟುಹಾಕಿದಳು..!

ಟೀಮ್​ ವೈ.ಎಸ್​. ಕನ್ನಡ

2

ಮದುವೆಯಾಗಿ ದಶಕವೇ ಕಳೆದ ಮೇಲೆ ಏನು ಮಾಡೋದು? ಮಕ್ಕಳ ಲಾಲನೆ ಪಾಲನೆಯಲ್ಲಿ ಸಮಯ ಕಳೆಯೋದಾ ಅಥವಾ ಕಾರ್ಪೊರೇಟ್ ವೃತ್ತಿ ಮುಂದುವರಿಸೋದಾ? ಕೆಲವರು ದೇವರನ್ನು ಕಂಡುಕೊಂಡ್ರೆ, ಇನ್ನು ಕೆಲವರಲ್ಲಿ ಜೀವನ ಮತ್ತು ವ್ಯಕ್ತಿತ್ವವನ್ನೇ ವರ್ಣಿಸುವಂತಹ ಪುಟ್ಟ ಪುಟ್ಟ ಕನಸುಗಳಿರುತ್ತವೆ. ವಿನೋದಿನಿ ರಾಜು ಕೂಡ 10 ವರ್ಷಗಳ ಕಾಲ ಕಾರ್ಪೊರೇಟ್ ಕ್ಷೇತ್ರದಲ್ಲಿದ್ದವರು. ಕ್ಲೌಡ್ ತಂತ್ರಜ್ಞಾನದಲ್ಲಿ ಪರಿಣಿತರಾಗಿದ್ದ ವಿನೋದಿನಿ ನೆಟ್‍ವರ್ಕ್ ಪ್ರೋಟೋಕಾಲ್ ಟೆಸ್ಟಿಂಗ್ ಮಾಡುತ್ತಿದ್ರು. ಖಾಸಗಿ ಅಥವಾ ಸಾರ್ವಜನಿಕ ಕ್ಲೌಡ್‍ನಲ್ಲಿ ಕಾರ್ಪೊರೇಟ್ ಮಾಹಿತಿ ಸಂಗ್ರಹದ ಬಗ್ಗೆ ತಂತ್ರಜ್ಞರ ನಡುವೆ ಜಾಗತಿಕ ಮಟ್ಟದಲ್ಲಿ ಚರ್ಚೆಯಾಗುತ್ತಿತ್ತು. ಸಂಗ್ರಹ ಮತ್ತು ಕಂಪ್ಯೂಟ್ ಬೆಲೆಗಳಲ್ಲಿನ ಕುಸಿತದಿಂದಾಗಿ ಗ್ರಾಹಕ ಕ್ರಾಂತಿಯೇ ಆಗಿತ್ತು. ಇದಕ್ಕೆ ಪ್ರತಿಯಾಗಿ ಮಾಹಿತಿ ಪ್ರಸರಣ ಉದ್ಯಮಗಳಲ್ಲಿ ಬದಲಾವಣೆಯಾಗಿದೆ. ಕ್ಲೌಡ್ ಸೇವೆಗಳ ನಿಯೋಜನೆ ಮತ್ತು ಆಟೋಮೇಶನ್ ಮೂಲಕ ಕಾರ್ಯಾಚರಣೆಗೆ ತಜ್ಞರ ಅಗತ್ಯವಿದೆ ಅನ್ನೋದು ವಿನೋದಿನಿ ಅವರಿಗೆ ಅರ್ಥವಾಗಿತ್ತು. ಈ ನಿಟ್ಟಿನಲ್ಲಿ ಮುಂದಡಿ ಇಟ್ಟ ವಿನೋದಿನಿ 2011ರಲ್ಲಿ `ಬ್ಲೂಮೆರಿಕ್' ಅನ್ನು ಆರಂಭಿಸಿದ್ರು.

ಉದ್ಯಮಗಳ ತಂತ್ರಜ್ಞಾನದ ಸಂಪೂರ್ಣ ವಾಸ್ತುಶಾಸ್ತ್ರ, ನೌಕರರು ಮತ್ತು ಗ್ರಾಹಕರ ವೈಯಕ್ತಿಕ ಸಾಧನಗಳನ್ನು ಬೆಂಬಲಿಸಲು ತಂತ್ರಜ್ಞಾನ ಬದಲಾಯ್ತು. ಹಾಗಾಗಿ ಕಂಪನಿಯ ಸಿಐಓ ಮಾಹಿತಿ ತಂತ್ರಜ್ಞಾನದ ಹೊಸ ಮೆಕ್ಯಾನಿಕ್‍ಗಳನ್ನು ಮೆಕ್ಯಾನಿಕ್‍ಗಳನ್ನು ನೇಮಕ ಮಾಡಿಕೊಳ್ಳಬೇಕು. ಈ ಸಮಸ್ಯೆಗೆ ಅಭಿವೃದ್ಧಿ ಕಾರ್ಯಾಚರಣೆಯ ಕಂಪನಿ `ಬ್ಲೂಮೆರಿಕ್' ಪರಿಹಾರ ಒದಗಿಸಿದೆ. ಯೋಜನೆಗಿಂತ ಹೆಚ್ಚು ಗ್ರಾಹಕರ ಸಂಚಾರ ದಟ್ಟಣೆಯಿದ್ದಾಗ ಕ್ಲೌಡ್ ತನ್ನದೇ ಭಾರದ ಅಡಿ ಕುಸಿಯದಂತೆ ಬ್ಲೂಮೆರಿಕ್ ನೋಡಿಕೊಳ್ತಿದೆ. ಸಾಫ್ಟ್​ವೇರ್ ಮೂಲಕ ಆಟೋಮೇಶನ್ ಮಾಡಲಾಗುತ್ತೆ. ಏಕಕಾಲದಲ್ಲಿ ನವೀಕರಣ, ಪರೀಕ್ಷೆ ಮತ್ತು ಸಂಪೂರ್ಣ ಮೂಲಸೌಕರ್ಯಗಳನ್ನು ವೇಗವಾಗಿ ಅಳೆಯಬಹುದು. ಆಧುನಿಕ ಕಂಪನಿಯ ಸಂಪೂರ್ಣ ಪ್ರಕ್ರಿಯೆಯ ಉಸ್ತುವಾರಿ ವಹಿಸಿಕೊಳ್ಳುತ್ತದೆ.

``ಉದ್ಯಮಿಯಾಗಲು ನನಗೆ ಮೊದಲಿನಿಂದ್ಲೂ ಆಸಕ್ತಿಯಿತ್ತು, ಯಾಕಂದ್ರೆ ನಿರಂತರವಾಗಿ ನಾನು ಬ್ಯುಸಿನೆಸ್ ಬಗ್ಗೆ ಚರ್ಚಿಸುತ್ತಿದ್ದೆ, ಹೊಸ ಹೊಸ ಐಡಿಯಾಗಳನ್ನು ಹುಟ್ಟುಹಾಕುತ್ತಿದ್ದೆ. ಹಾಗಾಗಿ ಕೆಲಸಕ್ಕೆ ಗುಡ್ ಬೈ ಹೇಳಿ ಕಂಪನಿಯೊಂದನ್ನು ಆರಂಭಿಸಲು ರಾತ್ರೋರಾತ್ರಿ ನಿರ್ಧರಿಸಿದೆ'' ಎನ್ನುತ್ತಾರೆ ವಿನೋದಿನಿ. ಅವರು ಬಾಲ್ಯದ ಶಿಕ್ಷಣ ಹಾಗೂ ಎಂಜಿನಿಯರಿಂಗ್ ಪೂರೈಸಿದ್ದು ತಮಿಳುನಾಡಿನಲ್ಲಿ. ಬೆಂಗಳೂರಿನ ಮಾರತಹಳ್ಳಿಯಲ್ಲಿ ಆನ್‍ಲೈನ್ ವೇದಿಕೆ ಮೂಲಕ ಚಪಾತಿಗಳನ್ನು ಮಾರಾಟ ಮಾಡಲು ಅವರು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ರು. ಆದ್ರೆ ಸಮಯೋಚಿತವಾಗಿ ನಡೆದುಕೊಂಡ ವಿನೋದಿನಿ ಕ್ಲೌಡ್ ಟೆಕ್ ಕಂಪನಿಯೊಂದನ್ನು ಕಟ್ಟಿ ಬೆಳೆಸಿದ್ದಾರೆ.

ಕಂಪನಿ ಆರಂಭಿಸುವ ತೀರ್ಮಾನದ ಹಿಂದಿರುವ ಲಾಜಿಕ್ ಮಾತ್ರ ಸರಳವಾದದ್ದು. ವೆಬ್, ಮೊಬೈಲ್, ಕಾಮರ್ಸ್ ಮತ್ತು ಸೇವೆಗಳಿಗೆ ಸುದೀರ್ಘ ಭವಿಷ್ಯವಿದೆ. ಕ್ಲೌಡ್ ತಂತ್ರಜ್ಞಾನದ ಹೊಸ ಜಗತ್ತನ್ನು ಅರ್ಥಮಾಡಿಕೊಳ್ಳಬಲ್ಲ ಎಂಜಿನಿಯರ್‍ಗಳೊಂದಿಗೆ ಕಾರ್ಯನಿರ್ವಹಿಸಲು ಸಹಜವಾಗಿಯೇ ಎಲ್ಲರೂ ಮುಂದಾಗುತ್ತಾರೆ. ಇಬ್ಬರು ಎಂಜಿನಿಯರ್‍ಗಳನ್ನು ನೇಮಕ ಮಾಡಿಕೊಂಡು ವಿನೋದಿನಿ ಕೆಲಸ ಶುರು ಮಾಡಿದ್ರು, ಈಗ ಅವರ ಸಂಸ್ಥೆಯ 25 ಎಂಜಿನಿಯರ್‍ಗಳ ತಂಡ ಅಮೆರಿಕದ ಇಂಟರ್ನೆಟ್ ಕಂಪನಿಗಳಿಗಾಗಿ ಕ್ಲೌಡ್ ತಂತ್ರಜ್ಞಾನದ ಮೇಲೆ ಕಾರ್ಯನಿರ್ವಹಿಸುತ್ತಿದೆ.

ಮಾರುಕಟ್ಟೆ ಗಾತ್ರ ಮತ್ತು ಅವಕಾಶ

* ಜಗತ್ತಿನಲ್ಲಿ ಸುಮಾರು 1.5 ಲಕ್ಷಕ್ಕೂ ಅಧಿಕ ಇ-ಕಾಮರ್ಸ್ ವೆಬ್‍ಸೈಟ್‍ಗಳಿವೆ. ಪ್ರತಿ ಬಾರಿ ಮಾರಾಟ ಪ್ರಕ್ರಿಯೆ ಸಂದರ್ಭದಲ್ಲಿ ಇ-ಕಾಮರ್ಸ್ ಕಂಪನಿಗಳು ಗ್ರಾಹಕರ ದಟ್ಟಣೆಯನ್ನು ನಿರ್ವಹಿಸಬೇಕಾಗುತ್ತದೆ. ಶಾಪಿಂಗ್ ಪ್ರಕ್ರಿಯೆಯ ಲೋಡ್‍ನ್ನು ತಡೆದುಕೊಳ್ಳಲು ಸರ್ವರ್‍ಗಳಿಗೆ ಸಾಧ್ಯವಾಗದೇ ಇದ್ದಲ್ಲಿ ದೋಷ ಕಾಣಿಸಿಕೊಳ್ಳುತ್ತೆ. ಆಗ ಆ್ಯಪ್ ಅಥವಾ ವೆಬ್‍ಸೈಟ್ ಮೇಲೆ ಗ್ರಾಹಕರು ಇಟ್ಟಿದ್ದ ನಂಬಿಕೆಯನ್ನು ಶಾಶ್ವತವಾಗಿ ಕಳೆದುಕೊಳ್ಳುವ ಸಾಧ್ಯತೆಯಿರುತ್ತದೆ.

* ಸರ್ವರ್ ಡೌನ್ ಆದ ಸಮಯದಲ್ಲಿ ಕಂಪನಿಗಳು ಭಾರೀ ನಷ್ಟ ಅನುಭವಿಸಬೇಕಾಗುತ್ತದೆ. ಪ್ರತಿ ಘಂಟೆಗೆ ಅಂದಾಜು 140,000 ಡಾಲರ್ ನಷ್ಟ ಸಂಭವಿಸುತ್ತದೆ. ಅಷ್ಟೇ ಅಲ್ಲ ಸರ್ವರ್ ಡೌನ್‍ನಿಂದ ಗ್ರಾಹಕರನ್ನು ಕೂಡ ಕಳೆದುಕೊಳ್ಳಬೇಕಾಗುತ್ತದೆ, ಅದರರ್ಥ ಆದಾಯ ಸಂಪೂರ್ಣ ಕುಸಿದು ಹೋಗುತ್ತದೆ.

* ಗಾರ್ಟ್‍ನರ್ ವರದಿಯ ಪ್ರಕಾರ 2014ರಲ್ಲಿ 1.9 ಬಿಲಿಯನ್ ಡಾಲರ್‍ನಷ್ಟಿದ್ದ DevOp

ಮಾರುಕಟ್ಟೆ ಗಾತ್ರ 2015ರಲ್ಲಿ 2.3 ಬಿಲಿಯನ್ ಡಾಲರ್‍ಗೆ ತಲುಪಿದೆ. 2016ರ ಅಂತ್ಯದ ವೇಳೆಗೆ DevOp ವಿಶ್ವದ 2000 ಅತಿದೊಡ್ಡ ಕ್ಲೌಡ್ ಪೂರೈಕೆದಾರ ಕಂಪನಿಗಳಿಗೆ ಶೇ.25ರಷ್ಟು ಉದ್ಯೋಗಿಗಳನ್ನು ಮುಖ್ಯವಾಹಿನಿಗೆ ತರಲು ನೆರವಾಗಲಿದೆ.

ಉದ್ಯಮ ಮಾದರಿ

ಬ್ಲೂಮೆರಿಕ್ ಉದ್ಯಮ ಮಾದರಿ ಪ್ರಾಜೆಕ್ಟ್ ಮತ್ತು ಸಮಯ ಮಾದರಿಯನ್ನು ಆಧರಿಸಿದೆ. ಒಂದು ಮಿಲಿಯನ್ ಡಾಲರ್‍ಗೂ ಅಧಿಕ ಆದಾಯ ಗಳಿಸಲು ಬ್ಲೂಮೆರಿಕ್ ದೊಡ್ಡ ಕಂಪನಿಗಳ ದೀರ್ಘಾವಧಿ ಒಪ್ಪಂದಗಳನ್ನು ಭದ್ರಪಡಿಸಿಕೊಳ್ಳುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸುತ್ತಿದೆ. ವಿಶೇಷ ಅಂದ್ರೆ ಯಾರಿಂದಲೂ ಬಂಡವಾಳ ಪಡೆಯದೆ ಬ್ಲೂಮೆರಿಕ್ ಲಾಭ ಗಳಿಸುವಲ್ಲಿ ಸಫಲವಾಗಿದೆ. ವಿನೋದಿನಿ ಸುಮಾರು 20,000 ಡಾಲರ್ ಹಣವನ್ನು ಹೂಡಿಕೆ ಮಾಡಿದ್ದರು, ಈಗ ಬ್ಲೂಮೆರಿಕ್ ಕೋಟ್ಯಂತರ ರೂಪಾಯಿ ಬೆಲೆಬಾಳುತ್ತದೆ. 2013ರಲ್ಲಿ ಬ್ಲೂಮೆರಿಕ್‍ನ ಪ್ರತಿಸ್ಪರ್ಧಿ `ಐಡಿಯಾ ಡಿವೈಸ್' 4 ಮಿಲಿಯನ್ ಡಾಲರ್ ಬಂಡವಾಳ ಗಿಟ್ಟಿಸಿಕೊಂಡಿದೆ. 8ಕೆಪಿಸಿ, ರೆಲವೆನ್ಸ್ ಲ್ಯಾಬ್ಸ್ ಕೂಡ ಬ್ಲೂಮೆರಿಕ್‍ಗೆ ಪೈಪೋಟಿ ಒಡ್ಡುತ್ತಿವೆ.

``ಅಡಚಣೆ ಮಾಹಿತಿ ತಂತ್ರಜ್ಞಾನ ಜಗತ್ತಿಗೆ ಅತ್ಯಗತ್ಯ. ಕ್ಲೌಡ್ ಅಳವಡಿಕೆಯ ಬ್ಯುಸಿನೆಸ್ ಪಾಶ್ಚಾತ್ಯ ಮಾರುಕಟ್ಟೆಗಳಲ್ಲಿ ವೇಗವಾಗಿ ನಡೆಯುತ್ತಿದೆ'' ಅನ್ನೋದು ಗ್ರೇಹೌಂಡ್ ರಿಸರ್ಚ್‍ನ ಸಿಇಓ ಸಂಚಿತ್ ವೀರ್ ಗೋಗಿಯಾ ಅವರ ಅಭಿಪ್ರಾಯ. ಗಾರ್ಟ್‍ನರ್ ವರದಿ ಪ್ರಕಾರ 2015ರಲ್ಲಿ 1.9 ಬಿಲಿಯನ್ ಮೊಬೈಲ್‍ಗಳು ಸಾಗಣೆಯಾಗಿವೆ. ಜಗತ್ತಿನಾದ್ಯಂತ 2.4 ಬಿಲಿಯನ್ ಡಿವೈಸ್‍ಗಳು ಮಾರಾಟವಾಗಿವೆ. ಡಿವೈಸ್‍ಗಳ ಮೂಲಕ ಗ್ರಾಹಕರ ಖರೀದಿ ಕೂಡ ಹೆಚ್ಚಲಿದೆ. ಹಾಗಾಗಿ ಆevಔಠಿ ಸ್ಟಾರ್ಟ್‍ಅಪ್‍ಗಳು ಸ್ಪಷ್ಟ ಬದಲಾವಣೆ ತರುವುದರಲ್ಲಿ ಅನುಮಾನವೇ ಇಲ್ಲ. ಕುಬೇರ್‍ನೆಟ್ಸ್ ಮತ್ತು ಡೊಕರ್ಸ್‍ನಲ್ಲಿ ವೇದಿಕೆ ನಿರ್ಮಾಣಕ್ಕೆ ಬ್ಲೂಮೆರಿಕ್ ಮುಂದಾಗಿದೆ. ಇವೆರಡೂ ಮುಕ್ತ ವೇದಿಕೆಗಳು. ಈ ಅವಕಾಶ ಸ್ಪಷ್ಟವಾಗಿ ಅಂತರಾಷ್ಟ್ರೀಯ ಗ್ರಾಹಕರ ಸಂಖ್ಯೆಯನ್ನು ಅವಲಂಬಿಸಿದೆ.  

ಇದನ್ನು ಓದಿ:

1. ಚೆಕ್​ಇನ್ ಕೌಂಟರ್​ಗಳಲ್ಲಿ ಕಾಯಬೇಕಿಲ್ಲ : ಜಸ್ಟ್ ಫಿಂಗರ್ ಪ್ರಿಂಟ್ ಕೊಟ್ಟು ವಿಮಾನ ಏರುವ ಅವಕಾಶ..

2. ಎಲ್ಲಾ ಕಡೆ ಸಿಗುತ್ತೆ "ಅಮ್ಮ"ನ ಕೈ ಅಡುಗೆ ರುಚಿ..!

3. ಓದಿನ ಪ್ರತಿಫಲ ದಂತವೈದ್ಯೆ- ಮನಸ್ಸು ಮಾಡಿರುವುದು ಸಾಮಾಜಿಕ ಕೆಲಸಕ್ಕೆ..!

Related Stories